Friday 1 November 2019

ಅತಿರೇಕದ ದೃಷ್ಟಿಕೋನಗಳು extreme views

ಅತಿರೇಕದ ದೃಷ್ಟಿಕೋನಗಳು:

ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿರುವಾಗ ಬ್ರಾಹ್ಮಣನೊಬ್ಬನು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಗಳನ್ನು ವಿನಿಮಯ ಮಾಡಿಕೊಂಡ ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸುತ್ತಾನೆ:
"ಭಗವಾನ್ ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆಯೇ?"
"ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ."
"ಹಾಗಾದರೆ ಭಗವಾನ್ ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು ಅನುಭವಿಸುವವನು ಬೇರೆಯೇ?"
"ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ."
" ಓ ಬ್ರಾಹ್ಮಣ, ತಥಾಗತರು ಅತಿರೇಕಗಳನ್ನು ಮೀರಿದ್ದಾರೆ, ಅತಿರೇಕಗಳು ಮೀರಿದ ಸತ್ಯದ ಮಧ್ಯಮ ಮಾರ್ಗವನ್ನು ಬೋಧಿಸುತ್ತೇನೆ. ನಿನಗೆ ಇದು ಪೂರ್ಣವಾಗಿ ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸು" ಎಂದು ಪಟಿಚ್ಚಸಮುಪ್ಪಾದ ಬೋಧಿಸಿದರು.:
"ಅಜ್ಞಾನದಿಂದ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ.
 ಸಂಖಾರಗಳಿಂದ ವಿಞ್ಞಾನ (ಅರಿವು) ಉಂಟಾಗುತ್ತದೆ. ವಿಞ್ಞಾನದಿಂದ ನಾಮರೂಪಗಳು (ಮನಸ್ಸು ಮತ್ತು ದೇಹ) ಉಂಟಾಗುತ್ತದೆ.
 ನಾಮರೂಪದಿಂದ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ.
ಆರು ಇಂದ್ರೀಯ ಆಧಾರಗಳಿಂದ ಸ್ಪರ್ಶ ಉಂಟಾಗುತ್ತದೆ,
ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ.
ವೇದನೆಗಳಿಂದ ತನ್ಹಾ ಉಂಟಾಗುತ್ತದೆ,
ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ,
ಅಂಟುವಿಕೆಯಿಂದ ಭವ ಉಂಟಾಗುತ್ತದೆ.
ಭವದಿಂದ ಜನ್ಮ ಉಂಟಾಗುತ್ತದೆ.
 ಜನ್ಮದಿಂದ ದುಃಖರಾಶಿ ಉಂಟಾಗುತ್ತದೆ."

"ಆದರೆ ಅಜ್ಞಾನದ ನಿರೋಧದಿಂದ ಸಂಖಾರಗಳ ನಿರೋಧವಾಗುತ್ತದೆ,
ಸಂಖಾರಗಳ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ,
ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ.
ನಾಮರೂಪದ ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ,
 ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ,
ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ,
 ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ,
ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ,
 ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ,
ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ,
ಜನ್ಮದ ನಿರೋಧದಿಂದ ದುಃಖರಾಶಿಯ ನಿರೋಧವಾಗುತ್ತದೆ."

ಇದನ್ನು ಆಲಿಸಿದ ಬ್ರಾಹ್ಮಣ ಅನುಮೋದನೆ ಮಾಡಿ ತ್ರಿರತ್ನಗಳಿಗೆ ಶರಣಾದನು.


( ಅನುವಾದಕನ ವ್ಯಾಖ್ಯಾನ: ಅಂದರೆ ಮನಸ್ಸು ಒಂದೇ ಅಲ್ಲ . ಹೇಗೆ ಶರೀರವು ಹಲವಾರು ಅಂಗಗಳಿಂದ ಕೂಡಿದೆಯೋ ಹಾಗೆಯೇ ಮನಸ್ಸು ಸಹಾ ಹಲವಾರು ಅಂಗಗಳಿಂದ ಕೂಡಿದೆ. ಇಲ್ಲಿ ಕರ್ಮ ಮಾಡುವುದಕ್ಕೆ ಪ್ರೇರಣೆ ಬಾಹ್ಯದ ವಿಷಯ ಅಥವಾ ಅಂತರಿಕ ವಿಷಯವಾಗಿದೆ .ಅಂದರೆ ಆರು ಇಂದ್ರಿಯಗಳ ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ. ವೇದನೆಗಳಿಂದ ಇಚ್ಚೆ ಉಂಟಾಗುತ್ತದೆ. ಅದು ಕರ್ಮಕ್ಕೆ ಬೀಜವಿದ್ದಂತೆ ಅದೇ ಕರ್ಮದ ಆರಂಭ. ಕರ್ಮದ ಪ್ರೇರಕ . ಕರ್ಮಕ್ಕೆ ಆಜ್ಞಾಕಾರಕ. ಸಾಧಾರಣ ಭಾಷೆಯಲ್ಲಿ ಹೇಳುವುದಾದರೆ ಕರ್ಮ ಮಾಡುವವನು. ಈ ಇಚ್ಚೆಯಿಂದ ತನ್ಹಾ ಉಂಟಾಗುತ್ತದೆ........  ಇನ್ನು ಆ ಕರ್ಮಕ್ಕೆ ವಿಪಾಕ ಅಥವಾ ಫಲ ಸಿಕ್ಕಿತು ಎಂದು ಭಾವಿಸಿದರೇ ಉದಾಹರಣೆಗೆ ಆತನಿಗೆ ಮುಂದಿನ ಜನ್ಮದಲ್ಲಿ ಭಯಾನಕ ರೋಗ ಬಂದಿತು. ಕ್ಷಣ ಕ್ಷಣಕ್ಕೂ ನರಳುವಿಕೆ ಉಂಟಾಯಿತು ಎಂದು ಭಾವಿಸೋಣ. ಆಗ ಇಲ್ಲಿ ಶರೀರವಿದೆ. ಶರೀರಕ್ಕೇ ಅಪ್ರಿಯ ವೇದನೆಗಳು ಸಂಪಕರ್ಿಸುತ್ತಿದೆ. ಇಲ್ಲಿ ವೇದನೆಗಳೇ ಸಾಧಾರಣ ಭಾಷೆಯಲ್ಲಿ ಹೇಳುವ ಅನುಭವಿಸುವವನು. ಈಗ ಕರ್ಮ ಮಾಡಿದವನೇ ಅನುಭವಿಸುವವನಾದರೇ ಒಂದೇ ವ್ಯಕ್ತಿ(ಆತ್ಮ) ಅಥವಾ ಅಂಗವಿರಬೇಕಾಗಿತ್ತು. ಅದು ವಸ್ತುಸ್ತಿತಿಯ ಪ್ರಕಾರ ಸಾಧ್ಯವಿಲ್ಲ. ಹಾಗೆಯೇ ಬೇರೆ ಬೇರೆ ಎಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೇ ಒಂದೇ ಪ್ರವಾಹವಿದೆ. ಅದರೇ ಅಲೆಗಳು ಮಾತ್ರ ಬೇರೆ ಬೇರೆ. ಹೀಗಾಗಿ ಸತ್ಯನಿಷ್ಟರು ಅವೆರಡೂ ಹೇಳಿಕೆಗಳನ್ನು ಅತಿರೇಕವೆಂದು ಅರಿಯುತ್ತಾರೆ. ಸಾಧಾರಣ ಜನರು ಪೂರ್ಣ ಸತ್ಯನಿಷ್ಟರಲ್ಲದ ಕಾರಣ " ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆ." ಎಂದು ಅಥವಾ "ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು ಅನುಭವಿಸುವವನು ಬೇರೆ" ಎಂದು ನಿರ್ಧರಿಸುತ್ತಾರೆ . ಅದರೆ ಸತ್ಯವನ್ನು ಪರಮ ಸೂಕ್ಷ ಹಂತದಲ್ಲಿಯೂ ವೀಕ್ಷಿಸಿದಂತಹ ತಥಾಗತರಾಗಲಿ ಅಥವಾ ಅವರ ಶ್ರéೇಷ್ಟ ಧಮ್ಮವರಿತ ಅವರ ಶಿಷ್ಯರಾಗಲಿ ಅಂತಹ ಭ್ರಮೆಯಲ್ಲಿ ಬೀಳುವುದಿಲ್ಲ.)


No comments:

Post a Comment