Saturday 4 July 2020

ಆಷಾಡ ಪೂರ್ಣಮಿಯ 5 ವೈಶಿಷ್ಟತೆಗಳು The Significance of July Fullmoon day

ಆಷಾಡ ಪೂರ್ಣಮಿಯ 5 ವೈಶಿಷ್ಟತೆಗಳು






ಬುದ್ದ ಪುರ್ಣಮಿಯ ನಂತರ ಆಷಾಡ ಹುಣ್ಣಿಮೆಗೆ ಮಾತ್ರ ಇಷ್ಟು ವೈಶಿಷ್ಟತೆಗಳು ಹಾಗೂ ಮಹತ್ವತೆ ಇವೆ. ಶ್ರೀಲಂಕದಲ್ಲಿ ಆಷಾಡವನ್ನು ಎಸಾಲ ಎನ್ನುತ್ತಾರೆ. ಈ ಹುಣ್ಣಿಮಿಯನ್ನು "ಧಮ್ಮ ಹುಣ್ಣಿಮೆ" ಅಥವಾ "ಧಮ್ಮ ದಿನ" ಎಂದು ಕರೆಯುತ್ತಾರೆ. ಈಗ ಆ 5 ವೈಶಿಷ್ಟತೆಗಳನ್ನು ಅರಿಯೋಣ.

1. ಈ ದಿನದಂದೆ ಬೋಧಿಸತ್ವರು ತಮ್ಮ ತಾಯಿಯಾದ ಮಾಯಾದೇವಿಯ ಗರ್ಭವನ್ನು ಪ್ರವೇಶಿಸಿದ್ದರು. ಆಗ ಅವರ ಮಾತೆಗೆ ಈ ರೀತಿಯ ಸ್ವಪ್ನವು ಬಿತ್ತು. ನಾಲ್ಕು ರಕ್ಷಣಾ ದೇವತೆಗಳು ದಿವ್ಯವಾದ ಮಂಚದಲ್ಲಿ ಮಾಯಾದೇವಿಯವರನ್ನು ಹೊತ್ತುಕೊಂಡು ಹಿಮಾಲಯದ ಸುಂದರವಾದ ಪ್ರಕೃತಿಯ ಬಳಿಗೆ ಕರೆದೊಯುವುದು. ಆಗ ಅವರ ಅಲ್ಲಿ ಶ್ವೇತ ಆನೆಯ ಮರಿಯೊಂದು ಕಮಲವನ್ನು ಹಿಡಿದು ಮಾಯಾ ದೇವಿಯವರ ಆ ಮಂಚವನ್ನು ಮೂರು ಬಾರಿ ಪ್ರದಕ್ಷಿಸಿ ನಂತರ ಅವರ ಹೊಟ್ಟೆಯನ್ನು ಬಲಭಾಗದಿಂದ ಪ್ರವೇಶಿಸುವ ಅಧ್ಭುತ ಸ್ವಪ್ನವು ಬಿದ್ದಿತ್ತು. ತಕ್ಷಣ ಮಾಯಾದೇವಿಯವರು ಎಚ್ಚೆತ್ತರು. ನಂತರ ಈ ವಿಷಯವನ್ನು ರಾಜ ಶುದ್ಧೊಧನರವರಿಗೆ ನುಡಿದರು. ಇಬ್ಬರಿಗೂ ಸಹಾ ಇದು ಶುಭಸ್ವಪ್ನವೆಂದು ಅರಿವಾಯಿತು. ನಂತರ ಇದು ಅವರ ವಿವಾಹದ 20 ವರ್ಷಗಳ ನಂತರ ಜನಿಸಲಿರುವ ಮಹಾಪುರುಷ ಮಗುವಿನ ಕುರಿತದ್ದೆ ಎಂದು ಅರ್ಥವಾಗಿ ಇಡೀ ಅರಮನೆಗೆ  ಆನಂದದ ವಾತಾವರಣವನ್ನು ತಂದಿತು.


2. ಈ ದಿನದಂದೆ ಬೋಧಿಸತ್ವರು ಮಹಾಭಿನಿಶ್ಕ್ರಮಣವನ್ನು ಮಾಡಿದರು. ಜೀವನದ ಅನಿತ್ಯವನ್ನು ಅರಿಯುವಂತಹ ಮುದಿತನ, ರೋಗ, ಮರಣವನ್ನು ವೀಕ್ಷಿಸಿದ ನಂತರ ಅವರು ಸಮಣನನ್ನು ನೋಡಿ ಸತ್ಯ ಅನ್ವೇಷಿಸುವ ಪ್ರಬಲ ಇಚ್ಚೆಯು ಉಂಟಾಗಿ, ತಮ್ಮ 29ನೇಯ ವಯಸ್ಸಿನಲ್ಲಿ ಗೃಹತ್ಯಾಗ ಮಾಡುವ ಧೃಡನಿದರ್ಾರವನ್ನು ಈ ದಿನದಂದೆ ಮಾಡುತ್ತಾರೆ. ನಂತರ ಹುಟ್ಟಿದ ಮಗುವನ್ನು ಸಹಾ ನೋಡದೆ, ಅಶ್ವ ಕಂಥಕ ಹಾಗೂ ಸಾರಥಿ ಹಾಗೂ ಗೆಳೆಯನಾದ ಚೆನ್ನನ ಸಹಾಯದಿಂದ ಮಹಾ ಅಭಿನಿಷ್ಕಕ್ರಮಣವನ್ನು ಮಾಡುತ್ತಾರೆ.

3. ಈ ದಿನದಂದೆ ಅವರು ತಮ್ಮ ಮೊದಲನೆಯ ಬೋದನೆಯಾದ ಧಮ್ಮಚಕ್ಕಪವತ್ತನವನ್ನು ಪಂಚವಗರ್ೀಯ ಭಕ್ಕುಗಳಾದ ಕೊಂಡನ್ನ, ವಪ್ಪ, ಭದ್ಧಿಯಾ, ಮಹಾನಾಮ, ಮತ್ತು ಅಸ್ಸಜೀಯವರಿಗೆ ಬೋಧಿಸುತ್ತಾರೆ. ಈ ಬೋದನೆಯಲ್ಲಿ ಅತೀರೇಕಗಳಾದ ಇಂದ್ರಿಯ ಬೋಗ ಹಾಗೂ ದೇಹದಂಡನೆಯ ನಿರರ್ಥಕತೆ ತಿಳಿಸಿ, ನಾಲ್ಕು ಆರ್ಯಸತ್ಯಗಳನ್ನು ಹಾಗೂ ಆರ್ಯ ಆಷ್ಟಾಂಗ ಮಾರ್ಗವನ್ನು ಬೋಧಿಸುತ್ತಾರೆ. ಇದನ್ನು ಆಲಿಸಿದಂತಹ ಅವರಲ್ಲಿ ಕೊಂಡನ್ನರವರು ಮೋದಲಿಗೆ ಸೋತಪನ್ನರಾಗುತ್ತಾರೆ. ನಂತರ ಇತರರು ಆಗುತ್ತಾರೆ. ನಂತರದ ಎರಡನೆಯ ಆನತ್ತ ಲಕ್ಖಣ ಸುತ್ತವನ್ನು ಆಲಿಸಿ ಎಲ್ಲರೂ ಅರಹಂತರಾಗುತ್ತಾರೆ. ಹೀಗೆ ಧಮ್ಮ ಚಕ್ರವನ್ನು ಚಾಲನೆ ಮಾಡಿದಂತಹ ಮಹೊನ್ನತ ದಿನವು ಇದಾಗಿದೆ. ಇದರಿಂದಾಗಿ ಎಲ್ಲರಿಗೂ ಜೀವನವನ್ನು ಹೇಗೆ ಉದಾತ್ತವಾಗಿ ಜೀವಿಸಬೇಕು, ಮನಸ್ಸನ್ನು ಹೇಗೆ ಅರಿಯಬೇಕು ಹಾಗೂ ಗೆಲ್ಲಬೇಕು, ಶ್ರೇಷ್ಟ ಸಮಾಧಿಯನ್ನು ಹೇಗೇ ಪಡೆಯಬೇಕು ಮತ್ತು ದೇವರು ಹಾಗೂ ಆತ್ಮಗಳ ಮಿಥ್ಯತೆಗಳಿಲ್ಲದೆ ನಿಬ್ಬಾಣವನ್ನು ಹೇಗೆ ಪ್ರಾಪ್ತಿ ಮಾಡಬೇಕೆಂದು ಲೋಕಕ್ಕೆ ತಿಳಿಸಿಕೊಟ್ಟರು.

4. ಈ ದಿನದಂದೆ ಯಮಕ ಪತಿಹಾರಿಯಾ ಎಂಬ ಅತೀಂದ್ರಿಯಾ ಮಾನಸಾಶಕ್ತಿಯನ್ನು ಪ್ರದಶಿಸಿ ಸಂಶಯಸ್ತ ಜನರಲ್ಲಿ ಶ್ರದ್ಧಯನ್ನುಂಟು ಮಾಡಿ  ಬೋದನೆಯನ್ನು ಮಾಡಿದ್ದರು.

5. ಅವರ ತಾಯಿಯಾದ ಮಹಾಮಾಯಾದೇವಿಯವರು ಬೋಧಿಸತ್ವರು ಹುಟ್ಟಿದ 7ನೇಯ ದಿನವೇ ಮರಣಿಸಿ ನಂತರ ತುಸಿತಾ ದೇವಲೋಕದಲ್ಲಿ ಪುರುಷದೇವನಾಗಿ ಉಗಮಿಸಿದ್ದರು. ಹೀಗೆ ಅಲ್ಲಿರುವಂತಹ ಮಾತೃದಿವ್ಯರಾಜನಿಗೆ ಹಾಗೂ ಪುಣ್ಯಾಚಾರಣೆಯಿಂದಾಗಿ ದೇವದೇವತೆಗಳಾಗಿರುವ ದಿವ್ಯಜೀವಿಗಳಿಗೆ ಪ್ರಥಮ ಬಾರಿ ಅಭಿಧಮ್ಮವನ್ನು ಬೋಧನೆಯನ್ನು ಈ ದಿನವೇ ಮಾಡಿದ್ದರು.

ಹೀಗೆ ನಮಗೆಲ್ಲಾ ಈ ಶುಭದಿನವೂ ಅತ್ಯಮೂಲ್ಯವಾಗಿದೆ. ಬೌದ್ಧದೇಶಗಳಲ್ಲಿ ಈ ದಿನ ಮಾಂಸ ಆಹಾರ ಹಾಗೂ ಮಧ್ಯಪಾನ ನಿಶೇಧವಿರುತ್ತದೆ. ಹಾಗೂ ಎಲ್ಲರೂ ಪಂಚಶೀಲ ಅಷ್ಟಾಂಗ ಸೀಲಗಳ ಪಾಲನೆ, ದಾನ, ಹಾಗೂ ಧ್ಯಾನಗಳಲ್ಲಿ ತೊಡಗುತ್ತಾರೆ. ನಾವೆಲ್ಲರೂ ಹಾಗೆಯೇ ಆಚರಿಸಿ ಧನ್ಯರಾಗೊಣ. ಈ ದಿವ್ಯದಿನದ ಮಹೊನ್ನತೆಯ ಸ್ಮೃತಿಯನ್ನು ಮಾಡೋಣ.