Thursday 27 May 2021

ಸಮ್ಮಸಂಬೋಧಿಪ್ರಾಪ್ತಿಯ ನಂತರದ 7 ವಾರಗಳು. 7 weeks after the enlightenment

   ಸಮ್ಮಸಂಬೋಧಿಪ್ರಾಪ್ತಿಯ ನಂತರದ 7 ವಾರಗಳು

 ಮೊದಲನೇಯ ವಾರ ಬೋಧಿವೃಕ್ಷದ ಕೆಳಗೆ ಪಲ್ಲಂಕ ಸಪ್ತಾಹ



 ಈ ಪ್ರಥಮ ವಾರವನ್ನು ಭಗವಾನರು ಬೋಧಿವೃಕ್ಷದ ಕೆಳಗೆ ಅಪರಾಜಿತ ಸಿಂಹಾಸನದ ಮೇಲೆ ಸಮ್ಮಸಂಬೋಧಿ ಪ್ರಾಪ್ತಿ, ಅರಹತ ಸುಖವಾದ ನಿಬ್ಬಾಣದ ವಿಮುಕ್ತಿ ಸುಖವನ್ನು ಅನುಭವಿಸುತ್ತ ಪರಮಶಾಂತತೆಯನ್ನು ಅನುಭವಿಸಿದರು. ಹಾಗೂ ಪಟಿಚ್ಚ ಸಮುಪ್ಪಾದವನ್ನು ವಿಶ್ಲೇಷಣಾತ್ಮಕವಾಗಿ ಅರಿತರು. ಈಗ ವಿವರವಾಗಿ..

ಭಗವಾನರು ಬೋಧಿಪ್ರಾಪ್ತಿಯ ನಂತರ ಹೀಗೆ ಯೋಚಿಸಿದರು : ಈ ಅಪಾರಜಿತ ಸಿಂಹಾಸನಕ್ಕಾಗಿ ನಾನು 4 ಅಸಂಕ್ಯೇಯ ಹಾಗೂ ಒಂದು ಲಕ್ಷ ಕಲ್ಪಗಳವರೆವಿಗೆ ಸಂಸಾರದಲ್ಲಿ ಸುತ್ತಾಡಬೇಕಾಯಿತು ಹಾಗೂ ಪರಿಶ್ರಮ ಪಡಬೇಕಾಯಿತು. ದಶ ಪಾರಮಿಗಳನ್ನು 3 ಹಂತಗಳಲ್ಲಿ ಪರಿಪೂರ್ಣಗೋಳಿಸಬೇಕಾಯಿತು.. ಈ ಅಪರಾಜಿತ ಗದ್ದುಗೆಗಾಗಿ ನಾನು ಅನೇಕ ಬಾರಿ ಶಿರವನ್ನು, ಹೃದಯವನ್ನು, ಚಕ್ಷುಗಳನ್ನು ಅನೇಕ ಬಾರಿ ನೀಡಬೇಕಾಯಿತು. ಈ ಅಪಾರಜೀತಕ್ಕಾಗಿ ನಾನು ವೆಸ್ಸಂತರನಾಗಿದ್ದಾಗ ನನ್ನ ಪುತ್ರ ಜಾಲಿ ಹಾಗೂ ಮಗಳು ಕಣ್ಹಜಿನ ಮತ್ತು ಮಡದಿಯಾದ ಮಾದ್ರಿಯನ್ನು ಸಹಾ ದಾನ ಮಾಡಬೇಕಾಯಿತು. ಈ ಅಪಾರಜಿತಕ್ಕಾಗಿ ನಾನು ಐದು ವಿಧದ ಮಾರರನ್ನು ಜಯಿಸಿದ್ದೇನೆ. ಇದು ಪರಮ ಮಂಗಳಕರವೂ ಹಾಗೂ ಪರಮಭವ್ಯವು ಆದಂತಹ ಪ್ರಜ್ಞಾಸನವಾಗಿದೆ. ಇದರಿಂದ ನಾನು ಬೋಧಿಸತ್ವನಾಗಿ ಮಾಡಿದ್ದಂತಹ ಎಲ್ಲಾ ಬಯಕೆಗಳು, ಸಮ್ಮಸಂಬೋಧಿಯು ಪ್ರಾಪ್ತವಾಗಿದೆ. ಈ ಗದ್ದುಗೆಯ ಮೇಲೆ ಅರಿಯಬಹುದಾದಂತಹ ಸರ್ವವನ್ನು ಅರಿಯದೇ ನಾನು ಮೇಲೆ ಏಳುವುದಿಲ್ಲ.


ಹೀಗೆಯೇ ನಂತರ ಅವರು ಅದೇ ಆಸನದಲ್ಲಿ ಪಟಿಚ್ಚಸಮುಪ್ಪಾದದ ಅನುಲೋಮ ಕ್ರಮವಾದ ಸರಣಿಯನ್ನು ವಿಶ್ಲೇಷಿಸಿದರು. 

ಇದರಿಂದ, ಇನ್ನೊಂದು ಉದಯಿಸುತ್ತದೆ. ಇದರ ಉದಯದಿಂದ ಇದು ಉದಯಿಸುತ್ತದೆ. ಹೇಗೆಂದರೆ : ಅವಿದ್ಯೆ(ಅಜ್ಞಾನ)ಯಿಂದ ಸಂಖಾರಗಳು (ಮನೋ ನಿಮರ್ಿತಿಗಳು) ಉದಯಿಸುತ್ತದೆ.

ಸಂಖಾರಗಳಿಂದ ವಿನ್ಯಾನವು ಉದಯಿಸುತ್ತದೆ.

ವಿನ್ಯಾನದಿಂದ ನಾಮರೂಪಗಳು ಉದಯಿಸುತ್ತದೆ.

ನಾಮರೂಪಗಳಿಂದ 6 ಇಂದ್ರೀಯಾಧಾರಗಳು ಉದಯಿಸುತ್ತದೆ.

6 ಇಂದ್ರೀಯಾಧಾರಗಳಿಂದ ಸ್ಪರ್ಶವು ಉದಯಿಸುತ್ತದೆ.

ಸ್ಪರ್ಶಗಳಿಂದ ವೇದನೆಗಳು ಉದಯಿಸುತ್ತದೆ.

ವೇದನೆಯಿಂದ ತನ್ಹಾವು ಉದಯಿಸುತ್ತದೆ.

ತನ್ಹಾದಿಂದ ಉಪಾದಾನ ಉದಯಿಸುತ್ತದೆ.

ಉಪಾದಾನದಿಂದ ಭವವು ಉದಯಿಸುತ್ತದೆ.

ಭವದಿಂದ ಜನ್ಮ ಉದಯಿಸುತ್ತದೆ.

ಜನ್ಮದಿಂದ ಜರಾಮರಣ ಒಟ್ಟಾರೆ ದುಃಖರಾಶಿಯು ಉದಯಿಸುವುದು.

ಹೀಗೆ ನುಡಿದ ನಂತರ ಭಗವಾನರು ಉದಾನವೊಂದನ್ನು ನುಡಿದರು. 

ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವರೋ, ಆಗ ಅವರು ಕಾರಣ ಮತ್ತು ಪರಿಣಾಮಗಳ ಸ್ವರೂಪವನ್ನು ಅರಿಯುವರು. ಆಗ ಎಲ್ಲಾ ಸಂದೇಹಗಳು ನಿವಾರಣೆಯಾಗುವುವು. 

ನಂತರ ಭಗವಾನರು ಹಾಗೆಯೇ ಕಾರಣ ಮತ್ತು ಪರಿಣಾಮದ ಸರಪಳಿಯನ್ನು ಪರೋಕ್ಷವಾಗಿ ವಿಶ್ಲೇಷಿಸಿದರು. 

ಆ ಸ್ಥಿತಿಯು ಇಲ್ಲದಿದ್ದರೆ, ಈ ಸ್ಥಿತಿಯು ಉಂಟಾಗುವುದಿಲ್ಲ. ಆ ಸ್ಥಿತಿಗಳ ಉದಯಿಸುವಿಕೆಯ ನಿರೋಧದಿಂದ ಈ ಸ್ಥಿತಿಯು ನಿರೋಧವು ಆಗುತ್ತದೆ.

ಹೇಗೆಂದರೆ ಅವಿದ್ಯೆಯ (ಅಜ್ಞಾನ)ದ ಪೂರ್ಣ ನಾಶದಿಂದ ಮತ್ತು ನಿರೋಧದಿಂದ ಸಂಖಾರವು ನಿರೋಧವಾಗುತ್ತದೆ.

ಸಂಖಾರಗಳ ನಿರೋಧದಿಂದ ವಿನ್ಯಾನದ ನಿರೋಧವಾಗುತ್ತದೆ. (ನಿಲುಗಡೆ/ಅಂತ್ಯ)

ವಿನ್ಯಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. 

ನಾಮರೂಪದ ನಿರೋಧದಿಂದ 6 ಇಂದ್ರೀಯಗಳ ನಿರೋಧವಾಗುತ್ತದೆ. 

6 ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ. 

ಸ್ಪರ್ಶಗಳ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ. 

ವೇದನೆಗಳ ನಿರೋಧದಿಂದ ತನ್ಹಾ ನಿರೋಧವಾಗುತ್ತದೆ. 

ತನ್ಹಾದ ನಿರೋಧದಿಂದ ಉಪದಾನದ ನಿರೋಧವಾಗುತ್ತದೆ. 

ಉಪದಾನದ ನಿರೋಧದಿಂದ ಭವದ ನಿರೋಧವಾಗುತ್ತದೆ. 

ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ.

ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಭಗವಾನರು ಇನ್ನೊಂದು ಉದಾನವನ್ನು ನುಡಿದರು. 

ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ವಿಶ್ಲೇಷಿಸುವರೋ ಆಗ ಅವರು ಕಾರಣಗಳ ನಿರೋಧವನ್ನು ಅರಿಯುತ್ತಾರೆ, ಆಗ ಅವರ ಎಲ್ಲಾ ಸಂದೇಹಗಳು ದೂರವಾಗುತ್ತದೆ. 

ಹೀಗೆಯೇ ಭಗವಾನರು ಪಟಿಚ್ಚ ಸಮುಪ್ಪಾದ ಅನುಲೋಮ ಕ್ರಮ ಹಾಗು ಪ್ರತಿಲೋಮ ಕ್ರಮದಿಂದ ಒಟ್ಟಾಗಿ ಅರಿತರು. ನಂತರ ಉದಾನವೊಂದನ್ನು ಹಾಡಿದರು. 

ಯಾವಾಗ ಪರಿಶ್ರಮ ಜ್ಞಾನಿ ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವನೋ ಆತನು ಮಾರನ ಸೈನ್ಯವನ್ನು ಕತ್ತಲೆಯನ್ನು ದೂರೀಕರಿಸುವ ಸೂರ್ಯನಂತೆ ಚದುರಿಸಿಬಿಡುವನು. ಎಂದು ನುಡಿದರು.

ಈ ರೀತಿಯಾಗಿ ಜ್ಞಾನ ಗಳಿಸಿದ ಅವರು ಎಲ್ಲರ ಆಸ್ತಿತ್ವಕ್ಕೆ ಕಾರಣವಾಗುವ, ಎಲ್ಲರೂ ನಂಬುವ ಹಾಗೆ ಯಾವ ದೇವರನ್ನು (ಸೃಷ್ಟಿಕರ್ತ, ಪಾಲನಕರ್ತ, ನಾಶಕರ್ತ) ಕಾಣಲಿಲ್ಲ. ಯಾವ ಆತ್ಮನನ್ನು ಅವರು ಕಾಣಲಿಲ್ಲ. ಪರರು ಸಮಾಧಿ ಸ್ಥಿತಿಗಳಿಗೆ ದೇವರೆಂದು ಮತ್ತು ಆತ್ಮವೆಂದು ಕರೆಯುತ್ತಾರೆ ಎಂದು ತಿಳಿದರು. ಹೀಗೆ ಬೋಧಿಪ್ರಾಪ್ತಿಯ ದ್ವಿತೀಯ ದಿನದಂದು ಪಟಿಚ್ಚ ಸಮುಪ್ಪಾದ ಸ್ಪಷ್ಟವಾಗಿ ಅರಿತ ನಂತರ ಅವರು ಉಳಿದ ಮೂರನೇಯ, ನಾಲ್ಕನೇಯ, ಐದನೇಯ , ಆರನೇಯ ಹಾಗೂ ಏಳನೇಯ ದಿನದಂದು ಅರಹತ್ವದ ಆನಂದದಲ್ಲಿ ತಲ್ಲಿನರಾದರು.

     ಎರಡನೆಯ ವಾರ ಅನಿಮಿಶ ಸಪ್ತಾಹ (ಬೋಧಿವೃಕ್ಷದ ಕಸಿಣಾ ಧ್ಯಾನ)



ದ್ವಿತೀಯ ವಾರವನ್ನು ಅವರು ಕೃತಜ್ಞತಾಪೂರ್ವಕವಾಗಿ ಬೋಧಿವೃಕ್ಷವನ್ನು ವೀಕ್ಷಸುತ್ತಾ ಧ್ಯಾನ ಮಾಡಿದರು. ಅದಕ್ಕೆ ಮುಂಚೆ ಭಗವಾನರಿಗೆ ಸಾದಾರಣ ದೇವತೆಗಳ ಹಾಗೂ ಬ್ರಹ್ಮರ  ಗೊಂದಲ ಗಮನಕ್ಕೆ ಬಂದಿತು.  ಅದು ಎನೆಂದರೆ ಭಗವಾನರು ಸಮ್ಮಸಂಬೋಧಿಯನ್ನು ಪಡೆದಿದ್ದಾರೋ ಅಥವಾ ಇಲ್ಲವೂ ಎಂಬ ಸಂಶಯವನ್ನು ಅವರಲ್ಲಿ ನಿವಾರಿಸಬೇಕಿತ್ತು. ಹೀಗಾಗಿ ಭಗವಾನರು ತಮ್ಮ ಋದ್ಧಿಶಕ್ತಿಯಿಂದ ಆಕಾಶದಲ್ಲಿ ಪ್ರಥಮ ಬಾರಿಗೆ ಯಮಕ ಪಟಿಹಾರಿಯ ಅಧ್ಭುತ ಪವಾಡವನ್ನು ಪ್ರದರ್ಶಸಿದರು, ಅಂದರೆ ಏಕ ಕಾಲದಲ್ಲಿಯೇ ಅಗ್ನಿ ಹಾಗೂ ಜಲವನ್ನು ದೇಹದಿಂದ ಹೊರ ಹೊಮ್ಮಿಸುವುದು, ನಂತರ ಅವರು ಬೋಧಿವೃಕ್ಷದ ಈಶಾನ್ಯ ದಿಕ್ಕಿಗೆ ನಿಂತು ಬೋಧಿವೃಕ್ಷದ ಅಪರಾಜಿತ ಪಲ್ಲಂಗ(ಸಿಂಹಾಸನ) ಅಂದರೆ ಅವರು ದ್ಯಾನಿಸಿದ ಸ್ಥಳವನ್ನು ಒಟ್ಟಾರೆ ಅನಿಮಿಶವಾಗಿ ಅಂದರೆ ರೆಪ್ಪೆ ಮುಚ್ಚದೆ ವೀಕ್ಷಿಸತೊಡಗಿದರು ಏಕೆಂದರೆ ಅವರ ಬೋಧಿಪ್ರಾಪ್ತಿಯ ವೇಳೆಯಲ್ಲಿ ನೆರಳಾಗಿ ಆಶ್ರಯವಾಗಿ ಅದು ಸಹಾಯ ಮಾಡಿತ್ತು.  ನಾನು ನಿಜಕ್ಕೂ ಈ ಅಪರಾಜಿತ ಸಿಂಹಾಸನದ ಮೇಲೆಯೇ ಸವರ್ೋನ್ನತ ಸರ್ವಜ್ಞತೆಯನ್ನು ಪ್ರಾಪ್ತಿ ಮಾಡಿದೇನೆ. ಎಂದು ನೋಡಲು ಆರಂಬಿಸಿದರು. ಹೀಗೆ ಬುದ್ಧಭಗವಾನರ ಮೂದಲ ಬೋದನೆಯೇ ಕೃತಜ್ಞತೆ ಎಂದು ಮೌನವಾಗಿಯೇ ಬೋಧಿಸಿದ್ದಾರೆ. ಆ ವೃಕ್ಷಕ್ಕೇ ಅವರ ಜೀವಂತ ಕಾಲದಲ್ಲೇ ಗೌರವ ದೊರೆತ್ತಿತ್ತು, ಹಾಗೂ ಅದು ಇರುವವರೆಗೂ ಅದು ಗೌರವ ಪಡೆಯುತ್ತಲೇ ಇರುವುದು. ಹೀಗೆ ಬೋಧಿ ವಂದನೆ ಮೌಡ್ಯವಲ್ಲ ಬದಲಾಗಿ ಕೃತಜ್ಞತಾಪೂರ್ವಕ ಗೌರವಯುತ ವಂದನೆ. ಈ ಸ್ಥಳಕ್ಕೆ ಅನಿಮಿಶ ಚೇತೀಯ ಎಂದು ಕರೆಯುತ್ತಾರೆ. 

  ಮೂರನೆಯ ವಾರ ಸ್ವರ್ಣರತ್ನ ಸೇತುವೆಯಲ್ಲಿ ಚಂಕಮ ಸಪ್ತಾಹ





  ದೇವತೆಗಳು ಅಪರಾಜಿತ ಸಿಂಹಾಸನ ಹಾಗೂ ಅನಿಮಿಶ ಚೇತೀಯಗಳ ನಡುವೆ ರತ್ನಭರಿತಸ್ವರ್ಣ ಸೇತುವೆಯನ್ನು ಆಕಾಶದಲ್ಲೇ ನಿಮರ್ಿಸಿದರು. ಭಗವಾನರು ಅದರ ಮೇಲೆ ಪ್ರತ್ಯಕ್ಷರಾಗಿ ನಡಿಗೆಯ ಧ್ಯಾನವನ್ನು ವಾರದ ಕಾಲ ಮಾಡಿದರು. ಆ ಸಮಯದಲ್ಲಿ ಅವರು ಫಲ ಸಮಾಪತ್ತಿಯ ವಿಶ್ಲೇಶಣೆ ಮಾಡಿದರು. ಆಗ ದೇವತೆಗಳಲ್ಲಿ ಸಂಶಯವು ಪೂರ್ಣವಾಗಿ ನಿವಾರಣೆಯಾಯಿತು.

      ನಾಲ್ಕನೇಯ ವಾರ ರತನ ಘರ್ ಸಪ್ತಾಹ (ರತ್ನ ಘರ್(ಕೋಠಡಿಯಲ್ಲಿ)ನಲ್ಲಿ ಧ್ಯಾನ)






  ಚತುರ್ಥವಾರದಂದು ದೇವತೆಗಳು ಹಾಗೂ ಬ್ರಹ್ಮರು ರತ್ನಗಳ ಸುಂರರವಾದ ಕೋಠಡಿಯೊಂದನ್ನು ನಿಮರ್ಿಸಿದರು. ಅದು ಬೋಧಿವೃಕ್ಷದ ವಾಯುವ್ಯದಿಕ್ಕಿನತ್ತ ಇತ್ತು. ನಂತರ ಅದರೊಳಗೆ ಭಗವಾನರು ಪ್ರವೇಶಿಸಿ ಧ್ಯಾನದಲ್ಲಿ ಕುಳಿತರು. ಅಲ್ಲಿ ಅವರು ಮೋದಲು ವಿನಯ ಪಿಟಕದ ಅಂದರೇ ಶೀಲದ ಕುರಿತು ವಿಶ್ಲೇಷಣೆ ಮಾಡಿದರು, ನಂತರ ಸುತ್ತ ಪಿಟಕದ ಕುರಿತು ಆಂದರೇ ಸಮಾಧಿಯ ಕುರಿತು ವಿಶ್ಲೇಷಣೆ ಮಾಡಿದರು, ನಂತರ ಅಭಿಧಮ್ಮದ ಕುರಿತು ಅಂದರೆ ಪ್ರಜ್ಞಾದ ಕುರಿತು ಧ್ಯಾನ ಮಾಡಲು ತೊಡಗಿದರು. ಅವರು ಹಾಗೇ ಅವರು ರೂಪ, ಚಿತ್ತ, ಚೇತಸಿಕಾ ಹಾಗೂ ನಿಬ್ಬಾಣದ ಬಗ್ಗೆ ವಿಶ್ಲೇಶಣೆ ಆರಂಭಿಸಿದರು. ಮೋದಲ ಆರು ಅಭಿದಮ್ಮದ ವಿಷಯಗಳ ಕುರಿತು ಧ್ಯಾನಿಸಿದ ನಂತರ ಇವುಗಳ ನಡುವೆ ಇರುವಂತಹ ಸಂಬಂಧಗಳ ಬಗ್ಗೆ (ಪಟ್ಠಾನ)ಆಳ ಧ್ಯಾನದಲ್ಲಿ ತೋಡಗಿರುವಾಗ ಅವರ ಶರೀರದಿಂದ 6 ಬಗೆಯ ಪ್ರಭಾಯುತ ಬೃಹತ್ ಕಿರಣಗಳು ಹೊರ ಹೊಮ್ಮಿತು. ಅವೆಂದರೆ ನೀಲಿ, ಹಳದಿ, ಕೆಂಪು, ಬಿಳಿ, ಕಿತ್ತಳೆ, ಹಾಗೂ ಇವುಗಳ ಮಿಶ್ರಿತ ವರ್ಣ. ಈ ಕಿರಣಗಳು ಮೋದಲು ಒಂದು ಮನೆಯಷ್ಟು ದೊಡ್ಡದಾಗಿ ನಂತರ ಬೃಹತ್ ಪರ್ವತದಷ್ಟು ವಿಸ್ತಾರವಾದವು. ಅವರ ತಲೆಯಿಂದ ಹೋರಟಂತಹ ನೀಲಿ ಪ್ರಾಬಲ್ಯಯುಳ್ಳ ಪ್ರಭಾಸಾರವು ಮೇಲಿನ ಆರು ಸುಗತಿ ಹಾಗೂ 20 ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಕೇಶ ಹಾಗೂ ಕಣ್ಣುಗಳಿಂದ ನೀಲಿ ಪ್ರಭೇಯು ಪ್ರಬಲ್ಯವಾಗಿಯು, ಚರ್ಮದಿಂದ ಚಿನ್ನದ ಸುವರ್ಣ ವರ್ಣವು ಪ್ರಾಬಲ್ಯವಾಗಿಯು, ಹಲ್ಲು ಹಾಗೂ ಮೂಳೆಗಳಲ್ಲಿ ಬಿಳಿ ವರ್ಣವು ಪ್ರಾಬಲ್ಯವಾಗಿಯು, ರಕ್ತ ಹಾಗೂ ಮಾಂಸದಲ್ಲಿ ಕೆಂಪು ವರ್ಣ ಪ್ರಬಾಲ್ಯವಾಗಿಯು, ನಂತರ ಈ ಎಲ್ಲಾ ವರ್ಣಗಳು ಮಿಶ್ರಿತವಾಗಿ ಈ ಕಿರಣಗಳು ಆ ರತ್ನಘರನಲ್ಲಿ ಪ್ರತಿಫಲಿಸಿ ಅಧ್ಭುತವಾದ ವರ್ಣಗಳ ಹಾಗೂ ಬೆಳಕಿನ ಭವ್ಯ ವೈಭವವನ್ನು ಸೃಷ್ಡಿ ಮಾಡಿತು.. ಅವರ ದೇಹದ ಮುಂಬಾಗದಿಂದ, ಹಿಂಭಾಗದಿಂದ, ಬಲಭಾಗದಿಂದ, ಏಡಭಾಗದಿಂದ, ಮೇಲ್ಭಾಗದಿಂದ ಮತ್ತು ಕೆಳಬಾಗದಿಂದ  ಒಂದೂಂದು ಭಾಗದಿಂದ ಒಂದೂಂದು ವರ್ಣವೂ ಹೊರಹೊಮ್ಮಿ ನಂತರ ಎಲ್ಲಾ ವರ್ಣಗಳ ಸಂಗಮವಾಗಿ ಪರಮ ಅಧ್ಭುತ ದೃಶ್ಯಾವಳಿ ಆ ಸ್ಥಳವೂ ಸಾಕ್ಷಿಯಾಯಿತು. ಇಲ್ಲಿ ಭಗವಾನರು ಧಮ್ಮಾರತನದ ಬಗ್ಗೆ ಧ್ಯಾನಿಸಿದರು, ಈ ಸ್ಥಳಕ್ಕೆ ರತನ ಘರ ಚೇತೀಯ ಎಂದು ಕರೆಯುತ್ತಾರೆ. ಈ ವರ್ಣಗಳನ್ನೇ ಬೌದ್ಧರ ಧ್ವಜಕ್ಕೂ ಆಯ್ಕೆ ಮಾಡಲಾಗಿದೆ. ಈ ಆರು ವರ್ಣಗಳಿಗೆ ಅರ್ಥವಿದೆ ಅದೆಂದರೆ ಬಿಳಿ ವರ್ಣವು ಪರಿಶುದ್ಧತೆಗೆ, ನೀಲಿ ಶ್ರದ್ಧೆಗೆ, ಕೆಂಪು ಪ್ರಜ್ಞಾಗೆ, ಕಿತ್ತಳೆ ವಿರಾಗಕ್ಕೆ, ಮಿಶ್ರಿತ ವರ್ಣವು ಎಲ್ಲಾ ಉದಾತ್ತಗುಣಗಳಿಗೆ ಪ್ರತಿನಿಧಿಸುತ್ತವೆ.

  ಐದನೇಯಯ ವಾರ ಅಜಪಾಲ ವೃಕ್ಷ ಸಪ್ತಾಹ (ಆಲದಮರದ ಕೆಳಗೆ ಧ್ಯಾನ)


  ಅಜಪಾಲ ಎಂದರೆ ಕುರಿಗಳು ಕಾಯುವವರ ಸ್ಥಳ, ಅಂದರೆ ಅದು ಅದಕ್ಕೆ ಮುಂಚೆ ಅದಕ್ಕೆ ಬಳಕೆಯಾಗುತ್ತಿತ್ತು. ಅದು ಮಹಬೋಧಿ ವೃಕ್ಷಕ್ಕೆ ಪೂರ್ವ ದಿಕ್ಕಿನಲ್ಲಿದೆ. ಐದನೆಯ ವಾರ ಇಲ್ಲಿ ಧ್ಯಾನಿಸಲು ಆರಂಬಿಸುವಾಗ ಬ್ರಾಹ್ಮಣನೊಬ್ಬನು ಭಗವಾನರಲ್ಲಿ ಯಾರು ಬ್ರಾಹ್ಮಣ ? ಎಂಬ ಪ್ರಶ್ನೆ ಹಾಕಿ ಅದರ ಉತ್ತರ ಪಡೆದನು. ಭಗವಾನರು ಸಮೀಪದ ಆಲದ ಮರದ ಕೆಳಗೆ ಧ್ಯಾನ ಮಾಡುತ್ತಿದ್ದಾಗ ಮಾರನ ಆಗಮನವಾಗುತ್ತದೆ, ಅತನು ತನ್ನ ನಿಯಂತ್ರಣದಲ್ಲಿ ಲೋಕಗಳೆಲ್ಲವಿದ್ದರೂ ಭಗವಾನರು ಇಲ್ಲದಿರುವುದನ್ನು ಕಂಡು ಬುದ್ಧರೋಂದಿಗೆ ಮಾತಾನಾಡಿ ನಿರಾಶನಾಗಿ ದುಃಖಿತನಾಗಿರುವುದನ್ನು ಕಂಡು ಮಾರನ ಪುತ್ರಿಯರು ಭಗವಾನರಲ್ಲಿ ಕಾಮವನ್ನು ಪ್ರಚೋದಿಸಲು ಸಿದ್ಧರಾಗಿ ಬರುತ್ತಾರೆ. ಮಾರನ ಪುತ್ತಿಯರಾದ ತನ್ಹಾ, ರತಿ, ಹಾಗೂ ರಾಗ ಎಂಬ ಹೆಸರಿನ ಮೂವರು ಪರಮಸುಂದರ ಯುವತಿಯರು ಅವರ ಗಮನ ಸೆಳೆಯಲು, ಆಕಷರ್ಿಸಲು, ಮೋಹವನ್ನುಂಟು ಮಾಡಲು, ವಶಮಾಡಿಕೊಳ್ಳಲು ಅತ್ಯಂತ ಉದ್ರೇಕಕಾರಿ ನೃತ್ಯ, ಗೀತೆಗಳು, ಇನ್ನೀತರ ಸರ್ವಮೋಹಿನಿ ತಂತ್ರಗಳನ್ನೇಲ್ಲವನ್ನು ಮಾಡಿದರು, ವಿವಿಧ ವಯಸ್ಸಿನ ಸ್ತೀಯರಾಗಿ ಕಾಣಿಸಿಕೊಂಡು, ವಿವಿದ ಬಗೆಯ ವಸ್ತ್ರಗಳಿಂದ ,ವಿವಿಧ ಬಗೆಯ ರೂಪಗಳಿಂದ ವೈವಿಧ್ಯಮಯ ಶೃಂಗಾರಗಳಿಂದ ಪ್ರಚೋಧಿಸುತ್ತಾರೆ. ಅದರೆ ಭಗವಾನರ ಗಮನವು ಅಣು ಮಾತ್ರವೂ, ಕ್ಷಣಾರ್ಧ ಮಾತ್ರವೂ ಆ ಕಡೆ ವಾಲಲಿಲ್ಲ. ಬದಲಾಗಿ, ಫಲ ಸಮಾಪತ್ತಿ ಹಾಗೂ ನಿಬ್ಬಾಣ ಸುಖದಲ್ಲಿ ತಲ್ಲಿನರಾಗಿರುತ್ತಾರೆ. 


ಯಾರ ಜಯವು ಯಾರಿಂದಲೂ, ಯಾವುದರಿಂದಲೂ ಅಪಜಯವಾಗದೇ, ಜಯಿಸಿದ ಲೋಕಗಳ ಕಲ್ಮಶಗಳು ಯಾರನ್ನು ಹಿಂಬಾಲಿಸುವುದಿಲ್ಲವೋ ಅಂತಹ ಬುದ್ಧರು ಅನಂತ ವ್ಯಾಪ್ತಿವುಳ್ಳವರು, ಅಂತಹವರನ್ನು ಯಾವ ಹಾದಿಯಿಂದ ನೀನು

  ಶೋಧಿಸುವೆ? (179)

ಯಾರಲ್ಲಿ ಜಾಲದಲ್ಲಿ ಸಿಕ್ಕಿಸಿಕೊಳ್ಳುವ, ಗೊಂದಲದಲ್ಲಿ ಸಿಲುಕುವ, ವಿಷಯವಾದ ತನ್ಹಾ ಇಲ್ಲವಾಗಿದೆಯೋ ಅಂತಹ ಅನಂತ ವ್ಯಾಪ್ತಿವುಳ್ಳವರಿಗೆ ಹಾದಿಯೇ ಇಲ್ಲ. ಅಂತಹವರನ್ನು ಯಾವ ಹಾದಿಯಿಂದ ನೀನು

  ಶೋಧಿಸುವೆ. (180

ನಂತರ ಆ ಮಾರಪುತ್ರಿಯರು ಬಳಲಿ, ನಿರಾಶರಾಗಿ ಅಲ್ಲಿಂದ ಹೊರಟರು.




  ನಂತರ ಭಗವಾನರು ಯಾರು ಲೋಕಗಳಿಗೆಲ್ಲಾ ಶೀಲದಲ್ಲಿ, ಸಮಾಧಿಯಲ್ಲಿ, ಪ್ರಜ್ಞಾದಲಿ, ಮತ್ತು ವಿಮುಕ್ತಿಯಲ್ಲಿ ಶ್ರೇಷ್ಟರು ಎಂದು ಶೋಧಿಸಿದಾಗ ಅವರಿಗಿಂತ ಪರಮಶ್ರೇಷ್ಟರು ಯಾರು ಇಲ್ಲ ಎಂದು ಅವರಿಗೆ ಅರಿವಾಯಿತು. ಹೀಗಾಗಿ ಅವರು ಧಮ್ಮವನ್ನೇ ಗೌರವಿಸುವುದು ಎಂದು ನಿಧರ್ಾರ ಮಾಡಿದರು.. ಆಗ ಅವರ ಚಿತ್ತವನ್ನು ಓದಿದಂತಹ ಬ್ರಹ್ಮ ಸಹಂಪತಿಯು ಕಾಣಿಸಿಕೊಂಡು ಹಿಂದಿನ ಬುದ್ಧರು ಸಹಾ ಹೀಗೆಯೇ ಯಾವ ವ್ಯಕ್ತಿಯನ್ನು ಬುದ್ಧರಿಗಿಂತ ಶ್ರೇಷ್ಟರಾಗಿ ಕಾಣದೆ ತಾವು ಶೋದಿಸಿದಂತಹ ಧಮ್ಮವನ್ನೇ ಗೌರವಿಸಿದರು. ಎಂಬಂತಹ ವಿಷಯವನ್ನು ತಿಳಿಸುತ್ತಾರೆ. ಹಾಗೂ ಬುದ್ಧರಿಗೆ ವಂದಿಸಿ ಅದೃಷ್ಯರಾಗುತ್ತಾರೆ.

 ಆರನೇಯ ವಾರ ಮುಚಲಿಂದ(ಮರದ ಕೆಳಗೆ ಧ್ಯಾನ)ಸಪ್ತಾಹ 


 ಆರನೆಯ ವಾರದಂದು ಅವರು ಸಮೀಪದ ಮುಚಲಿಂದ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿತ್ತಿದ್ದರು. ಅವರು ಫಲ ಸಮಾಪತ್ತಿಯಲ್ಲಿ ತಲ್ಲಿನರಾಗಿದ್ದರು. ಈ ಸ್ಥಳವು ಮಹಾಬೋಧಿವೃಕ್ಷಕ್ಕೇ ಈಶಾನ್ಯ ದಿಕ್ಕಿನಲ್ಲಿದೆ. ಆಗ ಭೀಕರ ಸಿಡಿಲು ಮಿಂಚಿನಿಂದ ಕೂಡಿದ ಬéೀಷಣ ಮಳೆಯು ಆಕ್ರಮಣ ಮಾಡಿತು, ಆಗ ಆವೃಕ್ಷದ ಕೇಳಗೆ ವಾಸವಾಗಿದ್ದಂತಹ ದಿವ್ಯ ಬೃಹತ್ ನಾಗರಾಜವು ಅವರು ನೆನಯದಿರಲೇಂದು ಅವರ ಸುತ್ತಲು ಏಳು ಬಾರಿ ಸುತ್ತಿಕೊಂಡು ಬೃಹತ್ ಹೆಡೆಯಿಂದ ಅವರ ತಲೆಯನ್ನು ಮಳೆಯಿಂದ ನೆನೆಯಲು ಬಿಡಲಿಲ್ಲ, ಆ ಬೃಹತ್ ಮಳೆಯು ವಾರವಿಡಿ ಬಿದ್ದಿತು, ಆ ಮುಚಲಿಂದ ನಾಗರಾಜನೂ ಸಹಾ ಏಳು ದಿನದವರೆವಿಗೂ ಅವರಿಗೆ ಹೀಗೇ ಮಳೆಯಿಂದ ರಕ್ಷಣೆಯನ್ನು ನೀಡಿದನು. ನಂತರ ಮಳೆಯು ನಿಂತಿತು , ಆ ನಾಗರಾಜನೂ ಸಹಾ ಅವರ ಶರೀರವನ್ನು ಬಿಟ್ಟು ಅವರ ಮುಂದೆ ಯುವಕನ ರೂಪದಲ್ಲಿ ರೂಪಾಂತರ ಹೊಂದಿ ಭಕ್ತಿಗೌರವದಿಂದ ಕೈಮುಗಿಯುತ್ತ ನಿಂತನು. ನಂತರ ಭಗವಾನರು ಧ್ಯಾನದಿಂದ ಎದ್ದರು, ಹಾಗೂ ಆತನನ್ನು ನೋಡಿ ಹೀಗೆ ಉದಾನವನ್ನು ನುಡಿದರು, :


    ಸಂತೃಪ್ತರು ಸುಖಿಗಳು,

   ಧಮ್ಮವನ್ನು ಆಲಿಸಿದವರು ಹಾಗೂ 

ಅರ್ಥಮಾಡಿಕೊಂಡಿರುವವರು ಸುಖಿಗಳು,

ಈ ಲೋಕಗಳಲ್ಲಿ ಸರ್ವಜೀವಿಗಳ ಬಗ್ಗೆ 

ಮೆತ್ತವನ್ನು ಹೊಂದಿರುವವರು ಸುಖಿಗಳು.


ಯಾರಲ್ಲಿ ಅಂಟುವಿಕೆಯಿಲ್ಲವೋ ಹಾಗೂ 

ಇಂದ್ರಿಯ ಬಯಕೆಗಳಿಂದ ಮೀರಿರುವವರೊ ಅವರು ಸುಖಿಗಳು.

ನಾನು ಎಂಬ ಭಾವನೆ ಯಾರಲ್ಲಿ ಅದೃಷ್ಯವಾಗಿದೆಯೋ 

ಅವರು ಪರಮ ಸುಖಿಗಳು

  ಏಳನೇಯ ವಾರ ರಾಜಾಯತನ(ಮರದ ಕೆಳಗೆ ಧ್ಯಾನ) ಸಪ್ತಾಹ


ಏಳನೇಯ ವಾರ ಅವರು ಸಮೀಪದ ರಾಜಯಾತನ ಮರದ ಕೆಳಗೆ ಅರಹತ್ವ ಸುಖದಲ್ಲಿಯೇ ಧ್ಯಾನಿಸಿದರು.. ಅದು ಮಹಾಬೋಧಿವೃಕ್ಷದ ದಕ್ಷಿಣ ದಿಕ್ಕಿನಲ್ಲಿದೆ. ಹೀಗೆ ಅವರು ಏಳು ದಿನಗಳ ಕಾಲ ಅರಹತ್ವ ಸುಖದಲ್ಲಿಯೇ ಇದ್ದರು. 

ನಂತರ ಭಗವಾನರು ಫಲಸಮಾಪತ್ತಿಯಿಂದ ಎದ್ದರು.. ಅಂದಿಗೆ 49 ದಿನಗಳು ಕಳೆದಿದ್ದರು. ಅಂದಿಗೆ ಬೋಧಿ ಪ್ರಾಪ್ತಿಯಾಗಿ 50ನೇ ದಿನವಾಗಿತ್ತು. ಅಂದು ಬುಧವಾರ ಶುಕ್ಲಪಕ್ಷ ಪಂಚಮಿಯಾಗಿತ್ತು.. 

ಏಳು ವಾರಗಳ ನಂತರದ 50ನೇಯ ದಿನದಂದು ಅವರ ಬಳಿಗೆ ದೇವೆಂದ್ರ ಶಕ್ರನು ಬಂದು ಅಳಲೇಕಾಯಿಯನ್ನು ನೀಡುತ್ತಾರೆ. ಅದನ್ನು ಸೇವಿಸಿ 49 ದಿನಗಳ ಉಪವಾಸ ಭಂಗ ಮಾಡುತ್ತಾರೆ. ಸಮ್ಮಕ್ ಸಂಬೋಧಿಪ್ರಾಪ್ತಿಯ ಬಳಿಕ 49 ದಿನಗಳ ನಂತರ ಸೇವಿಸಿದಂತಹ ಆಹಾರವೂ ಇದೇ ಆಗಿತ್ತು ,ಅಲ್ಲಿಯವರೆಗೆ ಭಗವಾನರು ಆಹಾರ, ನಿದ್ರೆ, ವಿಶ್ರಾಂತಿ ಯಾವುದು ಮಾಡಿರಲಿಲ್ಲ. ನಂತರ ಶಕ್ರನು ಅವರಿಗೆ ಹಲ್ಲುಜ್ಜಲು ನಾಗಲತೆಯನ್ನು ಹಾಗೂ ಮುಖತೋಳೆಯಲು ಅನೊತ್ತತ್ತ ಸರೋವರದಿಂದ ನೀರನ್ನು ತಂದು ಕೊಡುತ್ತಾನೆ. ನಂತರ ಅವರು ಅದೇ ರಾಜಾಯತನ ವೃಕ್ಷದ ಬಳಿಯಲ್ಲಿಯೇ ಕುಳಿತಿರುವಾಗ ಅವರ ಬಳಿಗೆ ಬರ್ಮ ದೇಶದ ಇಬ್ಬರು ವರ್ತಕರು ಅವರ ಬಳಿಗೆ ಬಂದರು ಅವರೇ ತಪುಸ್ಸ ಹಾಗೂ ಭಲ್ಲಿಕಾ. ಅವರು ಭಗವಾನರಿಗೆೆ ಕಜ್ಜಾಯ ಹಾಗೂ ಜೇನುತುಪ್ಪವನ್ನು ದಾನವಾಗಿ ನೀಡಲು ಬರುತ್ತಾರೆ, ಅದರೆ ಭಗವಾನರ ಬಳಿ ಪಿಂಡಪಾತ್ರೆಯು ಇರುವುದಿಲ್ಲ.  ಆಗ ಚತರ್ ಮಹರಾಜಿಕ ದೇವತೆಗಳು ಪಚ್ಚೆಯ ಪಿಂಡಪಾತ್ರೆಯನ್ನು ನೀಡುತ್ತಾರೆ. ಅವೆಲ್ಲವೂ ಭಗವಾನರ ಸಂಕಲ್ಪದಿಂದ ಒಂದಾಗಿ ಬಿಡುತ್ತದೆ. ಅದರಿಂದ ತಪುಸ್ಸ ಭಲ್ಲಿಕಾರ ಆಹಾರ ಸ್ವೀಕರಿಸುತ್ತಾರೆ.


 ನಂತರ ಆ ವ್ಯಾಪಾರಿಗಳು ಬುದ್ದರಲ್ಲಿ, ಹಾಗೂ ಧಮ್ಮದಲ್ಲಿ ಶರಣು ಹೋದರು. ಇವರೇ ಬುದ್ಧರ ಮೊದಲ ಹಿಂಬಾಲಕರು. ಆಗಿನ್ನೂ ಭಿಕ್ಖುಸಂಘ ನಿಮರ್ಾಣವಾಗದ ಕಾರಣ ಸಂಘಕ್ಕೆ ಶರಣು ಹೋಗಿರಲಿಲ್ಲ. ನಂತರ ಅವರು ಭಗವಾನರಲ್ಲಿ ಅವರ ನೆನಪಿಗಾಗಿ ಹಾಗೂ ಪೂಜೆಗಾಗಿ ಸ್ಮರಣಾತ್ಮಕ ಕಾಣಿಕೆ ಆಶಿಸಿದರು. ಆಗ ಬುದ್ಧ ಭಗವಾನರು ಅವರಿಗಾಗಿ ತಮ್ಮ ತಲೆಯ ಕೂದಲುಗಳನ್ನು ಸವರಿ ಆ ಕೇಶಧಾತುವನ್ನು ನೀಡಿದರು. ಅದನ್ನು ಆ ಇಬ್ಬರು ವರ್ತಕರು ಪರಮ ಐಶ್ವರ್ಯದಂತೆ, ಪರಮ ಪೂಜ್ಯತೆಯ  ಪ್ರತಿನಿಧಿಸುವ ಪರಮರತ್ನದಂತೆ ಸೀಕರಿಸಿದರು. ಹಾಗೂ ಅವನ್ನು ಪುಕ್ಕರಾವತಿ (ಬರ್ಮ)ದೇಶದ ಉಕ್ಕಾಲದಲ್ಲಿ (ರಂಗೂನ್ನಲಿ)್ಲ ಬೃಹತ್ ಸ್ತೂಪವನ್ನು ನಿಮರ್ಿಸಿ ಅದರಲ್ಲಿ ಚಿನ್ನದ ಕಳಶದಲ್ಲಿ ಪವಿತ್ರವಾದ ಕೇಶದಾತುವನ್ನಿಟ್ಟು ಪೂಜಿಸತೊಡಗಿದರು. ಇಂದಿಗೂ ಅದು ಇದೆ. ಆ ಬೃಹತ್ ಸ್ವರ್ಣ ಸ್ತೂಪಕ್ಕೆ  ಬರ್ಮದ ರಂಗೂನ್ನಲ್ಲಿ ಶ್ವೇಡಗಾನ್ ಪಗೂಡ ಎಂದು ಕರೆಯುತ್ತಾರೆ.








 

Tuesday 25 May 2021

ಬುದ್ಧಪುರ್ಣಮಿಯ ಆ ದಿನದ 63 ವೈಶಿಷ್ಟತೆಗಳು the significance of vesak or buddha purnima

 ಬುದ್ಧಪುರ್ಣಮಿಯ ಆ ದಿನದ 63 ವೈಶಿಷ್ಟತೆಗಳು


  ಬುದ್ಧ ಭಗವಾನರ ಜನ್ಮದ ದಿನ ಏನೇನೂ ಅಧ್ಭುತಗಳು ಸಂಭವಿಸಿದವು !?


         ಅಂದು ಒಟ್ಟು 32 ಅಧ್ಭುತಗಳು ಸಂಭವಿಸಿದವು.  ಬೋದಿಸತ್ತರ ಜನ್ಮ , ಅಸಿತ ಮುನಿಯ ಭವಿಷ್ಯವಾಣಿ ಹಾಗೂ ನಾಮಕರಣ ಒಟ್ಟು 35 ಘಟನೆಗಳು ನಡೆದವು 

  ಅಂದಿನ ವಾತವರಣವು ಅತ್ಯಂತ ಆಹ್ಲಾದಕರವಾಗಿ ತಂಪಾಗಿತ್ತು, ಪಕ್ಷಿಗಳೆಲ್ಲಾ ಇಂಪಾಗಿ ಹಾಡತೊಡಗಿದವು,  .ಲಘು ಭೂಕಂಪವು ಆಯಿತು, ಎಲ್ಲೇಡೆ ಸ್ವಗರ್ೀಯ ಹೊಂಬೆಳಕು, ಸ್ವಗರ್ೀಯ ಸಂಗೀತವು ಕೇಳಿಸಿತ್ತಿತ್ತು, ಸ್ವಗರ್ೀಯ ಸುಗಂಧಗಳು ಎಲ್ಲರನ್ನು ಮತ್ತೇರಿಸುವಂತಿತ್ತು,, ಅಲ್ಲಿ ದಶಸಹಸ್ರ ದೇವ ದೇವತೆಗಳ ಸಮೂಹವು ನೇರೆದಿತ್ತು,, ಅಂದು ಯಾರಿಗೂ ಹಸಿವಾಗಲಿಲ್ಲ, ಯಾರಿಗೂ ಬಾಯರಿಕೆಯಾಗಲಿಲ್ಲ, ಬಳಲಿಕೆಯೂ ಆಗಲಿಲ್ಲ, ಅಂದು ಅವೇಳೆಯಲ್ಲಿಯೂ ಹೂಗಳು ಹಾಗೂ ಹಣ್ಣುಗಳು ಗಿಡಗಳಲ್ಲಿ, ವೃಕ್ಷಗಳಲ್ಲಿ ಅವಿರ್ಭವಿಸಿದವು, ಅಂದು ರೋಗಿಗಳ ರೋಗಗಳು ವಾಸಿಯಾಯಿತು, ಕುರುಡರಿಗೆ ದೃಷ್ಟಿಯುಂಟಾಯಿತು, ಕಿವುಡರಿಗೆ ದ್ವನಿಯು ಕೇಳಿಸಿತು, ಮೂಕರಿಗೆ ಮಾತು ಬಂದಿತು, ಅಂಗವಿಕಲಿರಿಗೆ ಚೈತನ್ಯ ಬಂದಿತು, ಅಂದು ಸ್ವರ್ಣ ಹಾಗೂ ವಿವಿಧ ಬಗೆಯ ರತ್ನಗಳು ಸ್ವಯಂ ಪ್ರಕಾಶಮಾನವಾಗಿ ಹೊಳೆಯಲಾರಂಬಿಸಿದವು, ಅಂದು ಎಲ್ಲಾ ಜೀವಿಗಳಲ್ಲಿ ಹಾಗೂ ಮಾನವರಲ್ಲಿ ಮೆತ್ತಾ ಭಾವನವು ಸ್ವಯಂ ಆಗಿ ಹೊರಹೊಮ್ಮಿತು, ಅಂದು ನರಕಗಳಲ್ಲಿ ನರಕಾಗ್ನಿಯು ನಂದಿಹೋಯಿತು, ಸದಾ ಕತ್ತಲಿನಿಂದ ಕೂಡಿರುತ್ತಿದ್ದ ಲೋಕೋಂಧಕಾರ ನರಕಗಳಲ್ಲಿಯು ಸಹಾ ಅಂದು ದಿವ್ಯ ಬೆಳಕು ಪ್ರಕಾಶಿಸಿತು, ಮುಚ್ಚಿದ ಬಾಗಿಲುಗಳು ತೆರೆಯಲ್ಪಟ್ಟವು, ಪಾಪಿಗಳಲ್ಲಿಯು ಪುಣ್ಯಚಾರಣೆಯ ಬಯಕೆಗಳು ಉಂಟಾಯಿತು, ದಾರಿತಪ್ಪಿದ್ದಂತಹ ಹಡಗುಗಳು ಸರಿಯಾದ ಗುರಿ ತಲುಪಿದವು, ಅಂದು ಸಮುದ್ರಗಳು ಸಹಾ ತಾತ್ಕಲಿಕವಾಗಿ ಸಿಹಿಯಾದವು, 


     ಬೋಧಿಸತ್ವರ ಜನ್ಮವು ಪ್ರಕೃತಿಯ ಮಧ್ಯೆ ಸಾಲ ವೃಕ್ಷದ ಕೆಳಗೆ ಆಯಿತು, ಮಹಾಮಾತೆ ಮಹಾಮಾಯೆಯವರು ನಿಂತೆ ಸಾಲ ವೃಕ್ಷವನ್ನು ಹಿಡಿಯಲು ಹೋದಾಗ ವೃಕ್ಷದ ಕೊಂಬೆಯೇ ಕೈಗೆ ತಾಗಿತು, ಅದೇ ವೇಳೆಯಲ್ಲಿ ಯಾವುದೇ ಪ್ರಸವ ವೇದನೆಯಿಲ್ಲದೆ ಜನ್ಮ ನೀಡಿದರು, ನಿಂತುಕೊಂಡೆ ಜನ್ಮ ನೀಡಿದರು, ಅವರ ಜನ್ಮವೂ ದೇಹದ ಪಾಶ್ರ್ವದಿಂದ ಆಯಿತು, ಬೋಧಿಸತ್ವರನ್ನು ಭೂಮಿಗೆ ಬೀಳದಂತೆ ಮೂದಲು ಬ್ರಹ್ಮರೂ ಹಿಡಿದರು, ನಂತರ ಚತುಮರ್ಾರಾಜಿಕ ದೇವತೆಗಳು ಹಿಡಿದವು, ನಂತರ ಮಹಾಮಾಯೆಯ ಸಖೀಯರು ಹಿಡಿದರು, ಆ ಮಗುವು ಅವರಿಂದಲೂ ಜಾರಿ ಭೂಮಿಯ ಮೇಲೆ ನಿಧಾನವಾಗಿ ಭೂಮಿಯ ಮೇಲೆ ಸ್ಥಿರವಾಗಿ ನಿಂತಿತು. ಆ ಸಮಯದಲ್ಲಿ ಮೇಲಿನ ಎಲ್ಲಾ ಅಧ್ಭುತಗಳು ಸಂಭವಿಸಿದವು. ನಂತರ ಆ ಬೋಧಿಸತ್ವ ಏಳು ಹೆಜ್ಜೆ ಉತ್ತರ ದಿಕ್ಕಿನೆಡೆಗೆ ನಡೆಯಿತು, ಅದು ಹೆಜ್ಜೆ ಇಟ್ಟ ಸ್ಥಳಗಳಲ್ಲಿ ಪದ್ಮಗಳು ಉದಯಿಸಿದವು, ನಂತರ ಆ ಪರಮಶ್ರೇಷ್ಡ ಮಗುವು ಹೀಗೆ ನುಡಿಯಿತು : 

"ಅಗ್ಗೊ ಹಂ ಅಸ್ಮಿ ಲೊಕಸ್ಸಾ

ಜೆಟ್ಟ್ಗೊ ಹಂ ಅಸ್ಮಿ ಲೊಕಸ್ಸಾ

ಸೆಟ್ಟೊ  ಹಂ ಅಸ್ಮಿ ಲೊಕಸ್ಸಾ

ಅಯಂ ಅಂತಿಮ ಜಾತಿ

ನತ್ಥಿ ದಾನಿ ಪುನಭ್ಭವೊ"


  ಅಗ್ರನು ನಾನು ಲೋಕಗಳಿಗೆಲ್ಲಾ

   ಜೇಷ್ಡನು ನಾನು ಲೋಕಗಳಿಗೆಲ್ಲಾ

  ಶ್ರೇಷ್ಡನು ನಾನು ಲೋಕಗಳಿಗೆಲ್ಲಾ

 ಇದೇ ನನ್ನ ಅಂತಿಮ ಜನ್ಮವು

 ನನಗೆ ಮುಂದೆ ಪುನರ್ಜನ್ಮವಿಲ್ಲ.


ಬೋದಿಸತ್ವರು 3 ಜನ್ಮಗಳಲ್ಲಿ ಮಾತ್ರ ಶಿಶುವಾಗಿರುವಾಗಲೇ ಮಾತನಾಡಿದ್ದಾರೆ. ಅವೇಂದರೆ ಮಹಾಔಷಧಕುಮಾರನಾಗಿದ್ದಾಗ,  ವೆಸ್ಸಂತರನಾಗಿದ್ದಾಗ ಹಾಗೂ ಕೋನೆಯ ಜನ್ಮವಾದ ಸಿಧ್ಧಾರ್ಥ ಗೋತಮರಾಗಿದ್ದಾಗ. ಅವರು ಮಹಾಔಷಧಕುಮಾರನಾಗಿದ್ದಾಗ ಜನ್ಮದಿಂದಲೇ ಕೈಯಲ್ಲಿ ಹಿಡಿದು ಬಂದಿದ್ದ ಮೂಲಿಕೆ ಬಗ್ಗೆ ಹೀಗೆ ಮಾತನಾಡಿದ್ದರು : ಅಮ್ಮ, ಇದು ಔಷಧಿ ಎಂದು ತಾಯಿಯು ತನ್ನ ಕೈಯಲಿನ ಮೂಲಿಕೆ ಏನೆಂದು ಕೇಳಿದಾಗ ಉತ್ತರಿಸಿದ್ದರು. ಅವರು ವೆಸ್ಸಂತರ ಬೋಧಿಸತ್ತನಾಗಿ ಹುಟ್ಟಿದ್ದಾಗ ತಮ್ಮ ತಾಯಿಗೆ ಹೀಗೆ ಪ್ರಶ್ನೀಸಿದ್ದರು ಅಮ್ಮ ನನ್ನ ಸ್ವರ್ಣಅರಮನೆಯಲ್ಲಿ ದಾನ ನೀಡಲೂ ಏನೆಲ್ಲಾ ಇವೆ. ಎಂದು ಪ್ರಶ್ನಿಸಿದಾಗ ಆ ಮಹಾ ಮಾತೆಯು ಕಂದನೇ ನೀನೂ ಸ್ವರ್ಣಅರಮನೆಯ ಐಶ್ವರ್ಯದಲ್ಲಿ ಹುಟ್ಟಿರುವೆ. ಎಂದು ಉತ್ತರಿಸಿದರು.


  ಬೋಧಿಸತ್ವರು ಹುಟ್ಟಿದ ಸಮಯದಲ್ಲೇ ಯಾರ್ಯಾರು ಹುಟ್ಟಿದ್ದರು ?

1.ಯಸೋಧರೆ

2.ಪೂಜ್ಯ ಆನಂದ

3. ಸಾರಥಿಯಾಗಿದ್ದ ಛನ್ನ

4.ಬಾಲ್ಯ ಮಿತ್ರ ಕಾಲೂದಾಯಿ

5. ಕುದರೆ ಕಂಥಕ

6. ಬೋಧಿವೃಕ್ಷ

7.ನಾಲ್ಕು ಬೃಹತ್ ಕೊಪ್ಪರಿಗೆ ಸ್ವರ್ಣರಾಶಿ 


ಬೋಧಿಸತ್ವರು 32 ಮಹಾಪುರುಷ ಲಕ್ಷಣಗಳನ್ನು 80 ಅಸಿತಿ ಅನುವ್ಯಂಜನ (ಉಪ ಮಹಾಪುರುಷ ಲಕ್ಷಣಗಳು) ಒಟ್ಟಾರೆ ಶತ ಪುಣ್ಯಲಕ್ಷಣಗಳನ್ನು ಹೊಂದಿದ್ದರು. 


ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳುಳ್ಳ ಶರೀರ

1. ಸಂದಿಲ್ಲದ ಸಮತಟ್ಟಾದ ಪಾದಗಳು 

2. ಪಾದಗಳಲ್ಲಿ ಸಾವಿರ ಅರೆಗಳುಳ್ಳ ನೇಮಿ ನಾಭಿಸಹಿತ ಚಕ್ರ ಚಿಹ್ನೆ

3. ತೆಳ್ಳನೆಯ ಉದ್ದವಾದ ಬೆರಳುಗಳು

4. ಸುಲಭವಾಗಿ ಮಣಿಯುವ(ಮೃದುವಾದ) ಕೈ ಹಾಗು ಕಾಲುಗಳು

5. ಅಂಗೈ(ಬೆರಳು)ಗಳು ಹಾಗೂ ಪಾದಗಳು(ಬೆರಳು)ಬಲೆಯಂತೆ (ಇರುವ ರೇಖೆಗಳು) ಇರುತ್ತವೆ

6. ಅಗಲವಾದ ಚಾಚಿದ ಶಂಕಾಕೃತಿಯ ಹಿಮ್ಮಡಿಗಳು

7. ಕಮಾನಿನಂತಿರುವ ಮೇಲ್ಕಾಲು

8. ಸಾರಂಗ (ನಿಗ್ರೋದ)ದಂತಿರುವ ಕಾಲು(ತೋಡೆ)ಗಳು

9. ನಿಂತಿರುವಾಗ ಹಸ್ತಗಳು ಮೊಳಕಾಲುಗಳ ಕೆಳಗೆ ತಾಕುತ್ತದೆ

10. ಕೋಶದಿಂದ ಆವೃತವಾದ ಪುರುಷೇಂದ್ರೇಯ

11. ಬಾಹುಗಳನ್ನು ವಿಸ್ತರಿಸದಷ್ಟೇ ಎತ್ತರವಿರುವ ದೇಹಾಕೃತಿ, ಅಥವಾ ದೇಹಾಕೃತಿಯಷ್ಟು ಉದ್ದಾವಾದ ತೋಳುಗಳು

12. ಪ್ರತಿ ಕೂದಲು ಗಾಡನೀಲಿವರ್ಣದ್ದು ಹಾಗೂ ಪ್ರತಿ ರೋಮಕೂಪದಲ್ಲು ಒಂದೇ ಕೂದಲಿರುತ್ತದೆ.

13. ದೇಹದ ಕೂದಲು ಅಕರ್ಷಣೆಯಿಂದ ಹಾಗೂ ಗುಂಗರೂ ಆಗಿರುತ್ತದೆ. ಹಾಗೂ ಮೇಲ್ಮುವಾಗಿ ಹಾಗು ಬಲಗಡೆಗೆ ತಿರುಗಿರುತ್ತದೆ.

14. ಸುವರ್ಣವರ್ಣದ ತ್ವಚೆಯ ಬಣ್ಣ, 

15. ಹತ್ತು ಅಡಿ ಉದ್ದದ ಪ್ರಭೆ ಸದಾ ಸುತ್ತಲೂ ಆವೃತವಾಗಿರುವುದು.

16. ಕೋಮಲವಾದ ತ್ವಚೆ, ಚರ್ಮದ ಮೇಲೆ ಧೂಳಿರುವುದಿಲ್ಲ.

17. ಪಾದಗಳು, ಅಂಗೈ, ಭುಜಗಳು, ಹಾಗೂ ಶಿರವೂ ಗುಂಡನೆಯ ಆಕೃತಿಯನ್ನು ಹೊಂದಿದೆ.(ದೇಹದಲ್ಲಿ ಸಪ್ತ ಉಬ್ಬುಗಳಿರುತ್ತದೆ)

18. ಆಲದ ಮರದಂತೆ ಸಮಪ್ರಮಾಣದ ಅಂಗಾಂಗಗಳು

19. ಸಿಂಹಾಕೃತಿಯಂತೆ ಕತ್ತು ಹಾಗೂ ಸೊಂಟವಿರುವ ಶರೀರ

20. ಬ್ರಹ್ಮಲೋಕದವರಂತೆ ನೆಟ್ಟಗಿರುವ ಹಾಗೂ ನೇರವಾದ ಶರೀರ

21. ಪೂರ್ಣವಾದ ದುಂಡಾದ ಭುಜಗಳು, ನಡುವೆ ತಗ್ಗು ಇರುವುದಿಲ್ಲ.

22. ಹುಟ್ಟಿದಾಗಲೇ 40 ಹಲ್ಲುಗಳು

23. ಹಲ್ಲುಗಳು ಬಿಳಿ, ಸಮನಾದುದು, ಮಧ್ಯೆ ರಂದ್ರಗಳಿಲ್ಲದೆ ಕೂಡಿರುತ್ತವೆ.

24. ಕ್ಷತ್ರೀಯರಂತಿರುವ ಎದೆಯ ಆಕಾರ

25. ಸಿಂಹದಂತಹ ದವಡೆ, ಸಮಮಟ್ಟದ ಹಲ್ಲಿನ ಸಾಲು

26. ಶ್ರೇಷ್ಟ ಅಭಿರುಚಿಯನ್ನು ಹೊಂದಿರುತ್ತಾರೆ ಆಹಾರ ಸೇವಿಸಿದಾಗ ನಾಲಿಗೆಗೆ ಅಷ್ಟೇ ಅಲ್ಲದೆ, ಎಲ್ಲಾ ಭಾಗಗಳಿಗೂ ರುಚಿ ಸಿಗುವುದು.

27. ಹಣೆ ಹಾಗೂ ಕಿವಿಗಳನ್ನು ಸುಲಭವಾಗಿ ತಾಗುವಂತಹ ಉದ್ದವಾದ ನಾಲಿಗೆ

28. ಚಕ್ರವಾಕ ಪಕ್ಷಿಯಂತೆ ಅಥವಾ ಕೋಗಿಲೆ(ಕರವಿಕ)ಯಂತಹೆ ಪರಮ ಮಾಧುರ್ಯದ ಬ್ರಹ್ಮಸ್ವರವಿರುತ್ತದೆ..

29. ಗಾಢ ಅಭಿನೀಲಿವರ್ಣದ ಕಣ್ಣುಗಳು

30. ರಾಜವೃಷಭಕ್ಕೆರುವಂತಹ ನಯನಗೂದಲುಗಳು

31. ಭೃಮಧ್ಯೆ ಒಂದು ಉಬ್ಬಿದ್ದು ಅದರಲ್ಲಿ ಊದ್ರ್ವಮುಖಿಯಾಗಿರುವ ಅರಳೆಯಂತಹ ಒಂದು ಬಿಳಿ ಕೂದಲಿರುತ್ತದೆ.

32. ಕಿರೀಟದಂತಿರುವಂತಹ ದುಂಡನೆಯ ಶಿರಸ್ಸಿನ ಆಕಾರ.


ಕಾಲದೇವಿಲರ ಅರಮನೆ ಬೇಟಿ 

ಮಹಾಸತ್ವ ಬೋಧಿಸತ್ವರನ್ನು ಕಾಣಲು ಮಹಾಋಷಿಯಾದ ಕಾಲದೇವಿಲ ಅಥವಾ ಅಸಿತ ಋಷಿಯು ಸಹಾ ಆ ದಿನದಂದೆ ಅರಮನೆಗೆ ಬೇಟಿ ನೀಡಿದ್ದರು. ಹಾಗೂ ಶತ ಪುಣ್ಯಲಕ್ಷಣಗಳನ್ನು ನೋಡಿ ಹಾಗೂ ದಿವ್ಯದೃಷ್ಠಿಯಿಂದ ವೀಕ್ಷಿಸಿ , ಮೋದಲು ಹಷರ್ಿಸಿ ನಂತರ ಅತ್ತರು, ಇದಕ್ಕೆ ಕಾರಣ ಕೇಳೀದಾಗ ಈ ಬಾಲಕನು ಮುಂದೆ ಸಂಯಕ್ ಸಮ್ಮಸಂಬುದ್ಧರು ಆಗುವರು ಎಂದು ಭವಿಷ್ಯವಾಣಿ ನುಡಿದರು. .ಹಾಗೂ ಅದನ್ನು ಆಲಿಸಲು ತಾನೂ ಇರುವುದಿಲ್ಲ ಎಂದು ವ್ಯಥೆಪಟ್ಟರು.

     ಅದೇದಿನದಂದು ಅವರ ಹೆಸರು ಸಿದ್ಧಾರ್ಥನೆಂದು ನಾಮಕರಣ ಮಾಡಲಾಯಿತು.

 ಇವಿಷ್ಟು ಘಟನೆಗಳು ಬುದ್ದಭಗವಾನರ ಜನನದ ಆ ದಿನದಂದು ನಡೆಯಿತು.


ಸಮ್ಮಸಂಬೋಧಿಪ್ರಾಪ್ತಿಯ ಆ ದಿನದಂದು ಏನೆಲ್ಲಾ ನಡೆಯಿತು !?


.ಅಂದು ಒಟ್ಟು 11 ಘಟನೆಗಳು ನಡೆದವು. ಅವೆಂದರೆ

1. ಮುಂಜಾನೆ 5 ಸ್ವಪ್ನಗಳು ಕಂಡಿದ್ದು

2. ಸುಜಾತಳಿಂದ ಘನ ಪಾಯಸ ಸ್ವೀಕಾರ ಹಾಗೂ ಸೇವನೆ

3. ಆ ಸುವರ್ಣಪಾತ್ರೆಯನ್ನು ಸತ್ಯಕ್ರಿಯೆ ಮಾಡಿ ಹೊಳೆಯ ಮೇಲ್ಮುಖವಾಗಿ ಕಳುಹಿಸಿದ್ದು

4. ಸೋತ್ಥಿಯನಿಂದ ಹುಲ್ಲು ಸ್ವೀಕಾರ ಹಾಗೂ ಅಪರಿಜಿತ ವಜ್ರಸನದಪೀಠದ ಸಿದ್ಧತೆ

5. ಮಹಾ ಧೃಢಸಂಕಲ್ಪ

6. ಮಾರ ಪರಾಜಯ

7. ಪುಬ್ಬೆನಿವಾಸಾನುಸ್ಸತಿ ಅಭಿಜ್ಞಾ

8. ದಿವ್ಯಚಕ್ಕು ಅಭಿಜ್ಞಾ

9. ಅಸವಕ್ಖಯ ಜ್ಞಾನ

10. ಸಂಯಕ್ ಸಂಬುದ್ಧತ್ವದ ಪ್ರಾಪ್ತಿ 

11. ಉದಾನ ನುಡಿದಿದ್ದು.

ಆಗ ನುಡಿದಿದ್ದಂಹ ಉದಾನ ಏನೆಂದರೆ


ಅನೇಕ ಜನ್ಮಗಳನ್ನು ಈ ಸಂಸಾರದಲ್ಲಿ ಪಡೆದಿದ್ದೇನೆ. 

ಅನ್ವೇಷಿಸಿದೆ ಆಪಾರ, ಆದರೆ ಪಡೆಯಲಿಲ್ಲ ಗೃಹ ನಿಮರ್ಾತನನು; 

ಪುನಃ ಪುನಃ ಜನ್ಮವೆತ್ತುವುದು ನಿಜಕ್ಕೂ ದುಃಖಕರ. (153)



ಓ ಗೃಹ ನಿಮರ್ಾತನೇ ! ನಿನ್ನನ್ನು ನೋಡಿಯಾಯಿತು, 

ಹೀಗಾಗಿಯೇ ಮತ್ತೆ ನೀನು ಮನೆ ಕಟ್ಟಲಾರೆ, ನಿನ್ನೆಲ್ಲಾ ತೋಲೆ ನಿಲುವುಗಳೆಲ್ಲಾ ಚೂರಾಗಿದೆ.

 ಗೃಹದ ಆಧಾರ ಕಂಬವು ಮುರಿದಿದೆ, 

ಸ್ಥಿತಿಗೆ ಅತೀತವಾಗಿದೆ (ಸಂಖಾರತೀತವಾಗಿದೆ) ಚಿತ್ತವು, ತನ್ಹಾ ಕ್ಷಯವನ್ನು ಸಾಧಿಸಿದ್ದಾಗಿದೆ. (154)




ಮಹಾಪರಿನಿಬ್ಬಾಣದ ಆ ದಿನದಂದು ಎನೆಲ್ಲಾ ನಡೆಯಿತು !?



 ಅಂದು ಒಟ್ಟು 17 ಘಟನೆಗಳು ನಡೆದವು. ಅವೆಂದರೆ

 1.ವೈಶಾಲಿಯನ್ನು ಕೋನೆಯ ಬಾರಿ ನೋಡಿದ್ದು

2. ಆರ್ಯ ಸತ್ಯಗಳನ್ನು ಅರಿಯದೆ ಸಂಸಾರ ಸುತ್ತಾಟ ಎಂಬ ಬೋದನೆ ನೀಡಿದ್ದು

3. ಬೋದನೆಗಳನ್ನು 4 ರೀತಿ ಪ್ರಮಾಣ ತಾಳೆ ನೋಡುವ ಬಗೆ ತಿಳಿಸಿದ್ದು

4. ಕಮ್ಮಾರ ಪುತ್ತ ಚುಂದನ ಬಳಿ ಕೋನೆಯ ಆಹಾರ ಸೇವನೆ

5. ದೇಹಕ್ಕೇ ಆಪಾರ ನೋವು ಅನುಭವ

6. ಕುಸಿನಾರಕ್ಕೆ ಆಗಮನ

7. ಕೆಂಪು ಬಗ್ಗಡ ನೀರನ್ನು ತಿಳಿಯಾಗಿಸಿ ಸೇವಿಸಿದ್ದು

8. ಮಲ್ಲಪುತ್ತ ಪುಕ್ಕಸನಿಗೆ ಶಬ್ಧತೀತ ಅಭಂಗ ಸಮಾಧಿಯ ಬಗ್ಗೆ ತಿಳಿಸಿದ್ದು

9. ಪುಕ್ಕಸನು ಚಿನ್ನದ ಶಾಲು ಹೊದೆಸಿದ್ದು

10. ಶಾಲ ವೃಕ್ಷದ ವರ್ಣನೆ

11. ನಾಲ್ಕು ಶ್ರದ್ಧಾಸ್ಥಳಗಳ ಬಗ್ಗೆ ಅರಿವು ಮೂಡಿಸಿದ್ದು

12. ಸ್ತೂಪಕ್ಕೆ ಅರ್ಹ ವ್ಯಕ್ತಿಗಳ ಬಗ್ಗೆ ತಿಳಿಸಿದ್ದು

13. ಆನಂದರ ಪ್ರಶಂಸೆ ಮಾಡಿದ್ದು

14. ಮಹಾಸುದಸ್ಸನ ಸುತ್ತ ವಿವರಿಸಿದ್ದು

15. ಸುಭದ್ಧ ಪರಿಬ್ಬಾಜ್ಜಕನಿಗೆ ಆರ್ಯರು ಇಲ್ಲಿ ಮಾತ್ರವೇ ಎಂಬ ಬೋದನೆ ನೀಡಿದರು

16. ಕೋನೆಯ ವಚನಗಳನ್ನು ನುಡಿದಿದ್ದು

"ಭಿಕ್ಖುಗಳೇ ಒತ್ತಿ ನುಡಿಯುತ್ತಿದ್ದೇನೆ, ಎಲ್ಲಾ ಸಂಖಾರಗಳು ಶಿಥಿಲವಾಗಿ ನಾಷಗೊಳ್ಳುವವು ಅಪ್ರಮತ್ತತೆಯಿಂದ ಅರಹತ್ವವನ್ನು ಸಂಪಾದಿಸಿಕೋಳ್ಳಿರಿ."

17. ಮಹಾಪರಿನಿಬ್ಬಾಣ ಪ್ರಾಪ್ತಿ ಮಾಡಿದರು.