Saturday 2 November 2019

ಬುದ್ಧ ಭಗವಾನರ ಅನನ್ಯತೆ BUDDHA THE INCOMPARABLE

ಬುದ್ಧ ಭಗವಾನರ ಅನನ್ಯತೆ

ಬುದ್ಧರು ಅಸಮಾನ್ಯ ಬಲವುಳ್ಳವರು :

1. ಅವರಿಗೆ ಭೂತಕಾಲದ ತಡೆರಹಿತ ಜ್ಞಾನ(ದರ್ಶನ)ವಿತ್ತು.
2. ಅವರು ವರ್ತಮಾನ ಸರ್ವದರ ಬಗ್ಗೆಯೂ ತಡೆರಹಿತ ಜ್ಞಾನ (ದರ್ಶನ)ವಿತ್ತು.
3. ಅವರು ಭವಿಷ್ಯದ ಬಗ್ಗೆಯು ತಡೆರಹಿತ ಅನಾವರಣ ಜ್ಞಾನ (ದರ್ಶನ) ಸಾಮಥ್ರ್ಯ ಪಡೆದಿದ್ದರು.
4. ಅವರ ಎಲ್ಲಾ ಭೌತಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
5. ಅವರ ಎಲ್ಲಾ ವಾಚಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
6. ಅವರ ಎಲ್ಲಾ ಮಾನಸಿಕ ಕ್ರಿಯೆಗಳು ಪ್ರಜ್ಞಾದ ಮೂಲಕ ನಡೆಯುತ್ತಿತ್ತು.
7. ಅವರ ಇಚ್ಛೆಗೆ ವಿರುದ್ಧವಾಗಿ ಯಾರು ಹೋಗುವುದಕ್ಕೆ ಆಗುವುದಿಲ್ಲ.
8. ಯಾರಿಂದಲೂ, ಯಾವುದರಿಂದಲೇ ಆಗಲಿ ಅವರ ಏಕಾಗ್ರತೆ ಭಂಗ ಅಸಾಧ್ಯ.
9. ಅವರ ಜ್ಞಾನಕ್ಕೆ ಯಾವ ತಡೆಯಾಗಲಿ, ಆವರಣವಾಗಲಿ ಇಲ್ಲ.
10. ಅವರ ಪ್ರಯತ್ನಕ್ಕೆ ಯಾವ ತಡೆಯೂ ಇಲ್ಲ.
11. ಅವರಲ್ಲಿ ಯಾವ ಚಂಚಲತೆಯೂ ಇಲ್ಲ.
12. ಅವರ ವಿಮುಕ್ತಿಗೆ ಯಾವ ತಡೆಯೂ ಇಲ್ಲ.
13. ಅವರ ಧಮ್ಮ ಪ್ರವಚನಕ್ಕೆ ಯಾವ ಅಡ್ಡಿಯೂ ಇಲ್ಲ.
14. ಅವರು ಶಬ್ದವಾಗಲಿ, ಗಲಾಟೆಯಾಗಲಿ ಮಾಡುತ್ತಿರಲಿಲ್ಲ.
15. ಅವರಲ್ಲಿ ದೈಹಿಕ ಸಂತೋಷವಿಲ್ಲ ಮತ್ತು ಕೃತಕ ಹೊಗಳಿಕೆ ಇಲ್ಲ.
16. ಅವರಲ್ಲಿ ಆತುರತೆ ಇಲ್ಲ.
17. ಅವರು ವ್ಯರ್ಥ ಕೆಲಸಗಳನ್ನು ನಿಶ್ಚಯವೇ ಮಾಡುತ್ತಿರಲಿಲ್ಲ.
18. ಅವರು ಸದಾ ಶಾಂತಶೀಲರು, ಶಾಂತ ಚಿತ್ತರು.
19. ಅವರು ಅಜ್ಞಾನದ ಯಾವ ಕಾರ್ಯ ಮಾಡಲಿಲ್ಲ.
20. ಅವರು ಅನುಪಮ ಅನುಕಂಪವುಳ್ಳವರಾಗಿದ್ದವರು ಮತ್ತು ಇತ್ಯಾದಿ.


ಬುದ್ಧರ 10 ಅಲೌಕಿಕ ಬಲಗಳು

1. ಇರುವುದನ್ನು ಇರುವುದೆಂದು, ಇಲ್ಲದ್ದನ್ನು ಇಲ್ಲವೆಂದು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
2. ಹಿಂದಿನ, ಮುಂದಿನ, ಇಂದಿನ ಕಮರ್ಾನುಷ್ಠಾನಗಳ ಫಲವನ್ನು ಸಾಧ್ಯತೆಯ ಪ್ರಕಾರ, ಕಾರಣಗಳ ಪ್ರಕಾರ ಯತಾರ್ಥವಾಗಿ ಅರಿಯುತ್ತಾರೆ.
3. ಎಲ್ಲಿಗೆ ಎಲ್ಲಾ ಮಾರ್ಗಗಳು (ಧ್ಯಾನ ಮಾರ್ಗ) ಮತ್ತು ಕರ್ಮಫಲ ಒಯ್ಯುತ್ತವೋ ಅದನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
4. ಅನೇಕ ಧಾತುಗಳು (ದೇಹದ) ಮೂಲಧಾತುಗಳು, ಇಂದ್ರೀಯ ಧಾತುಗಳು, ವಿಜ್ಞಾನ ಧಾತುಗಳು ಹಾಗು ವಿವಿಧ ಧಾತುಗಳಿಂದ ಕೂಡಿದ ಸರ್ವಲೋಕವನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
5. ಜೀವಿಗಳ ವಿವಿಧ ಒತ್ತಾಸೆಗಳನ್ನು ಯತಾರ್ಥವಾಗಿ ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
6. ಸರ್ವಜೀವಿಗಳ ಪ್ರವೃತ್ತಿಗಳನ್ನು, ದೌರ್ಬಲ್ಯಗಳನ್ನು, ಪ್ರತಿಭೆಯನ್ನು ಯತಾರ್ಥವಾಗಿ ಅರಿಯುತ್ತಾರೆ ಮತ್ತು ಪರಿಣಾಮಕಾರಿಯಾಗುವಂತೆ ಬೋಧಿಸುತ್ತಾರೆ.
7. ಧ್ಯಾನ, ಸಮಾಧಿ, ಸಮಾಪತ್ತಿ, ವಿಮೋಕ್ಖಗಳನ್ನು, ಅವುಗಳ ಕಲುಶತೆ, ಸ್ವಚ್ಛತೆ, ವಿಶುದ್ಧತೆ, ಮೀರಿ ಹೋಗುವಿಕೆಗಳನ್ನು ಯತಾರ್ಥವಾಗಿ, ಪ್ರಜ್ಞಾಪೂರ್ವಕವಾಗಿ ಅರಿಯುತ್ತಾರೆ.
8. ತಮ್ಮ ಮತ್ತು ಪರರ ಎಲ್ಲಾ ಪೂರ್ವ ಜನ್ಮಗಳನ್ನು ಸ್ಮರಿಸಿಕೊಳ್ಳುವರು.
9. ತಮ್ಮ ದಿವ್ಯ ಚಕ್ಷುವಿನಿಂದ ಸರ್ವಜೀವಿಗಳ ಸುಗತಿ, ದುರ್ಗತಿಗಳನ್ನು ಸರ್ವಕರ್ಮದ ಅವಸ್ಥೆಗಳನ್ನು, ಅದನ್ನು ಅನುಭವಿಸುತ್ತಿರುವ ಜೀವಿಗಳನ್ನು ಪ್ರಜ್ಞಾಪೂರ್ವಕವಾಗಿ ಯತಾರ್ಥವಾಗಿ ಅರಿಯುತ್ತಾರೆ.
10. ಅಸವರಹಿತವಾಗಿ ವಿಮುಕ್ತಿ ಪಡೆದು ನಿಬ್ಬಾಣ ಸಾಕ್ಷಾತ್ಕಾರ ಪಡೆದು ಜೀವಿಸುತ್ತಾರೆ ಮತ್ತು ಅವುಗಳ ಪ್ರತಿಹಂತ ಅರಿತು ಬೋಧಿಸುತ್ತಾರೆ. ಇವು ತಥಾಗತರ 10 ಬಲಗಳಾಗಿವೆ.


ಬುದ್ಧರ ಭಗವಾನರ ಅತೀಂದ್ರಿಯಶಕ್ತಿಗಳು

  ಬುದ್ಧ ಭಗವಾನರು ಸಮಾದಿಯಲ್ಲಿ ಅತ್ಯುನ್ನತ ಹಾಗೂ ಪರಮಾಗ್ರ ಸ್ಥಿತಿಯನ್ನು ಮುಟ್ಟಿದ್ದರು, ಅವರು ಸಮಥ ಧ್ಯಾನದಲ್ಲಿ ಪರಮಾಗ್ರ ಸ್ಥಿತಿಯನ್ನು ತಲುಪಿದ್ದರಿಂದಲೇ ಈ ಅತೀಂದ್ರೀಯ ಶಕ್ತಿಗಳನ್ನು ಪಡೆದರು. ಒಮ್ಮೆ ಅವರು ಧ್ಯಾನ ಮಾಡುತ್ತಿರುವಾಗ ಭೀಕರ ಸಿಡಿಲಿನ, ಗುಡುಗಿನ, ಮಿಂಚಿನ ಮಳೆಯು ಸುರಿಯಿತು. ಆ ಸಮಯದ ಸಿಡಿಲಿನ ಆರ್ಭಟಕ್ಕೆ ಕೆಲವು ಪ್ರಾಣಿಗಳು ಸತ್ತವು. ಇಷ್ಟೇಲ್ಲಾ ನಡೆದಿದ್ದರೂ ಸಹಾ ಬುದ್ಧರಿಗೆ ಮಾತ್ರ ಸ್ವಲ್ಪ ಶಬ್ದವೂ ತಿಳಿಯಲಿಲ.್ಲ. ಇದು ಅವರ ಏಕಾಗ್ರತೆಯ ಶಕ್ತಿ ಉದಾಹರಣೆಯಾಗಿದೆ.
1. ದಿವ್ಯ ಚಕ್ಷು : ದಿವ್ಯವಾದ ಚಕ್ಷುವನ್ನು ಪಡೆದಿದ್ದರು. ಅದರ ಮೂಲಕ ಸರ್ವರ ಉನ್ನತಿ ಅವನತಿ ಸಾವಿನ ನಂತರದ ಎಲ್ಲರ ಸ್ಥಿತಿಗತಿಗಳನ್ನು ಅರಿಯುತ್ತಿದ್ದರು. ಭೂತ, ಭವಿಷ್ಯದ ಮತ್ತು ವರ್ತಮಾನದ ಎಲ್ಲವನ್ನೂ ಅರಿಯುತ್ತಿದ್ದರು.
2. ದಿವ್ಯವಾದ ಕಿವಿ : ಅದರ ಮೂಲಕ ಸರ್ವಜೀವಿಗಳ ಸಂಭಾಷಣೆ, ಸರ್ವಲೋಕದ ಶಬ್ದಗಳನ್ನು ಕೇಳುತ್ತಿದ್ದರು. ದೂರದ, ಹತ್ತಿರದ, ಸೂಕ್ಷ್ಮ, ಅತಿಸ್ಥೂಲ ಎಲ್ಲ ಬಗೆಯ ಧ್ವನಿಯನ್ನು ಕೇಳುತ್ತಿದ್ದರು.
3. ಪರರ ಚಿತ್ತವನ್ನು ಓದುವಿಕೆ : ಇದರ ಮೂಲಕ ಸರ್ವರ ಮನಸ್ಸನ್ನು ಓದುತ್ತಿದ್ದರು ಮತ್ತು ಹಾಗೆಯೇ ಅರಿಯುತ್ತಿದ್ದರು.
4. ಹಿಂದಿನ ಜನ್ಮದ ಸ್ಮರಣೆ : ಇಲ್ಲಿ ಅವರು ಸರ್ವರ (ಎಲ್ಲರ) ಅಸಂಖ್ಯಾತ ಹಿಂದಿನ ಕಲ್ಪಗಳಷ್ಟು ಹಿಂದಿನ ಘಟನೆಗಳಲ್ಲಾ ಅರಿಯುತ್ತಿದ್ದರು. ಅಷ್ಟೇ ಅಲ್ಲ, ಮುಂದಿನ ಜನ್ಮಗಳನ್ನು ಅರಿಯುತ್ತಿದ್ದರು. ಈ ಬಲದಿಂದ ಅವರು ಎಷ್ಟೇ ಭೂತಕಾಲದ ಹಿಂದೆ ಹಾಗೆಯೇ ಎಷ್ಟೇ ಭವಿಷ್ಯತ್ತಿರಲಿ, ಅದನ್ನು ವರ್ತಮಾನದಂತೆ ಅರಿಯುತ್ತಿದ್ದರು.
5. ದೇಹದಿಂದ ವಿವಿಧರೀತಿಯ ಪವಾಡಗಳು : ಆಕಾಶದಲ್ಲಿ ನಿಲ್ಲುವಿಕೆ, ನಡೆಯುವಿಕೆ, ಮಲಗುವಿಕೆ, ವೇಗವಾಗಿ ಹಾರುವಿಕೆ, ನೀರಿನಲ್ಲಿ ನಡೆಯುವಿಕೆ, ನೆಲದಲ್ಲಿ ಮುಳುಗುವಿಕೆ, ಬಂಡೆಗಳಲ್ಲಿ ತೂರುವಿಕೆ, ಗೋಡೆಗಳಲ್ಲಿ ತೂರಿ ಹೋಗುವಿಕೆ, ಪ್ರತ್ಯಕ್ಷವಾಗುವಿಕೆ, ಮಾಯವಾಗುವಿಕೆ, ಅದೃಷ್ಯವಾಗಿ ಮಾತನಾಡುವಿಕೆ, ವಿವಿಧ ರೂಪ ಬದಲಾಯಿಸುವಿಕೆ, ಅನೇಕ ದೇಹ ಸೃಷ್ಠಿಸುವಿಕೆ, ಇಷ್ಟವಾದುದನ್ನು ಸೃಷ್ಠಿಸುವಿಕೆ (ಮಳೆ ತರಿಸುವಿಕೆ ಇತ್ಯಾದಿ) (ಪಂಚಭೂತದಿಂದಾದ ಏನನ್ನು ಬೇಕಾದರೂ ಸೃಷ್ಟಿಸುವಿಕೆ) ರೋಗಗುಣಪಡಿಸುವಿಕೆ, ಕಲ್ಪಕಾಲ ಬದುಕುವಿಕೆ, ಏಕಕಾಲದಲ್ಲಿ ವಿವಿಧರೀತಿಯ ಪವಾಡ ಮಾಡುವಿಕೆ, ದೇಹವನ್ನಾಗಲಿ, ಪಂಚಭೂತಗಳನ್ನಾಗಲಿ ಹೇಗೆ ಬೇಕೋ ಹಾಗೆ ಮಾರ್ಪಡಿಸುವಿಕೆ ಇತ್ಯಾದಿ.
6. ಪ್ರಭುತ್ವ : ಮನಸ್ಸನ್ನು ಅಗತ್ಯಕ್ಕೆ ತಕ್ಕಂತೆ ನಿಗ್ರಹ, ಶಾಂತತೆ, ಕಾರ್ಯಮಗ್ನತೆ ದೃಢತೆಯಿಂದ ಹೇಗೆ ಬೇಕೋ ಹಾಗೆ ಬಯಸಿದಷ್ಟು ಕಾಲ (ಸಮಾಧಿಯಲ್ಲಿ) ಇಟ್ಟುಕೊಳ್ಳುವುದು.
7. ಚಿತ್ತವನ್ನು ವಿಶುದ್ಧಿಗೊಳಿಸಿ ನಿಬ್ಬಾಣ ಸಾಕ್ಷಾತ್ಕರಿಸುವುದು.
8. ಪರರನ್ನು ಪರಿವತರ್ಿಸಿ ಅವರನ್ನು ದುಃಖದಿಂದ ವಿಮುಕ್ತಗೊಳಿಸುವುದು. ಲೋಕಕಲ್ಯಾಣವನ್ನುಂಟು ಮಾಡುವುದು ಮತ್ತು ಇತ್ಯಾದಿ.

No comments:

Post a Comment