Friday 15 May 2015

upajjhatthaana sutta in kannada ಉಪಜ್ಝತ್ಥಾನ ಸುತ್ತ: ಚಿಂತನೆಗೆ ಪರಮಯೋಗ್ಯ ವಿಷಯಗಳು {ಸಂಕ್ಷೀಪ್ತ}

ಉಪಜ್ಝತ್ಥಾನ ಸುತ್ತ: ಚಿಂತನೆಗೆ ಪರಮಯೋಗ್ಯ ವಿಷಯಗಳು {ಸಂಕ್ಷೀಪ್ತ}

" 5 ಬಗೆಯ ವಾಸ್ತವಗಳನ್ನು ಒಬ್ಬನು ಪುರುಷನಾಗಲಿ ಅಥವಾ ಸ್ತ್ರೀಯಾಗಲಿ, ಉಪಾಸಕನಾಗಲಿ ಅಥವಾ ಭಿಕ್ಖುವಾಗಲಿ ಅಗ್ಗಾಗ್ಗೆ ಚಿಂತನೆಮಾಡುತ್ತಲೇ ಇರಬೇಕು. ಯಾವುವವು ಐದು?

1.ನಾನು ಜರಾವಿಗೆ[ಮುಪ್ಪಿಗೆ] ಈಡಾಗುತ್ತೇನೆ. ಜರಾಗೆ ಅತೀತವಾಗಲು ಸಾಧ್ಯವಿಲ್ಲ.
2.ನಾನು ವ್ಯಾಧಿಗೆ ಗುರಿಯಾಗುತ್ತೇನೆ, ವ್ಯಾಧಿಗೆ ಅತೀತನಾಗಲು ಸಾಧ್ಯವಿಲ್ಲ.
3.ನಾನು ಖಂಡಿತವಾಗಿ ಮರಣವಪ್ಪುವೆನು ,ಮರಣವನ್ನು ತಡೆಯಲು ಸಾಧ್ಯವಾಗುವುದಿಲ್ಲ.
4.ಯಾರೆಲ್ಲಾ ನನಗೆ ಪ್ರೀಯರಾಗಿರುವರೋ ಹಾಗು ಯಾವುದೆಲ್ಲವೂ ಚಿತ್ತಾಕರ್ಷವಾಗಿವೆಯೋ ಅವೆಲ್ಲದರಿಂದಲೂ ನಾನು ವಿಯೋಗ ಹೊಂದುವೆನು.
5.ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ}, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ.ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು.

5 ಬಗೆಯ ವಾಸ್ತವಗಳನ್ನು ಒಬ್ಬನು ಪುರುಷನಾಗಲಿ ಅಥವಾ ಸ್ತ್ರೀಯಾಗಲಿ, ಉಪಾಸಕನಾಗಲಿ ಅಥವಾ ಭಿಕ್ಖುವಾಗಲಿ ಅಗ್ಗಾಗ್ಗೆ ಚಿಂತನೆಮಾಡುತ್ತಲೇ ಇರಬೇಕು.
 ಯಾವಾಗ ಒಬ್ಬನು ಜರಾಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಯವ್ವನದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಯವ್ವನ ಮದದಿಂದಾಗಿ ಯವ್ವನವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.
ಅದೇ ರೀತಿಯಾಗಿ ಒಬ್ಬನು ವ್ಯಾದಿ ಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಆರೋಗ್ಯದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಅರೋಗ್ಯದ ಮದದಿಂದಾಗಿ ಅರೋಗ್ಯವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.

ಅದೇ ರೀತಿಯಾಗಿ ಒಬ್ಬನು ಮರಣ ಧಮ್ಮವನ್ನು ಈ ಬಗೆಯಲ್ಲಿ ಚಿಂತನೆ ನಡೆಸುತ್ತಾನೋ ಆತನಲ್ಲಿ ಜೀವನದ ಮದದ ಅಮಲು ಅಳಿದು ಹೋಗುವುದು, ಯಾರು ಹೀಗೆ ಚಿಂತನೆ ಮಾಡುವುದಿಲ್ಲವೋ ಅವರು ಜೀವನದ ಮದದಿಂದಾಗಿ ಜೀವನವು ನಿತ್ಯವೆಂಬ ಭ್ರಮೆಯಲ್ಲಿ ಶರೀರದಿಂದ, ಮಾತಿನಿಂದ, ಹಾಗು ಮನಸ್ಸಿನಿಂದ ನಾನ ಬಗೆಯ ಪಾಪಗಳನ್ನು ಮಾಡಿತ್ತಾರೆ, ಪರಿಣಾಮವಾಗಿ ಅವುಗಳ ಕಮ್ಮವಿಪಾಕವನ್ನು ಪಡೆಯುವರು. ಪಂಡಿತರು ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಮದದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಮದವನ್ನು ದುರ್ಬಲಗೊಳಿಸುವರು.
  ಹಾಗು ಯೋಗ್ಯಚಿಂತನೆಯಿಂದಾಗಿ ಒಬ್ಬನು ತನಗೆ ಪ್ರಿಯವಾದ ಪ್ರತಿಯೊಂದು ಹಾಗು ಪ್ರತಿಯೊಬ್ಬರು ವಿಯೋಗಹೊಂದುವರು ಎಂದು ಆಗಾಗ್ಗೆ ನೆನೆಸಿಕೊಳ್ಳುತ್ತಿರುವಾಗ ಒಬ್ಬನ ವಿಷಯಗಳ ಮೇಲಿನ ಹಾಗು ವ್ಯಕ್ತಿಗಳ ಮೇಲಿನ ಭಾವೋದ್ರೇಕಗಳು ಪೂರ್ಣವಾಗಿ ಅಳಿದು ಹೋಗುವವು ಅಥವಾ ದುರ್ಬಲವಾಗುವವು. ಹಾಗು ಆತನು ಪರರಂತೆ ಭಾವಾವೇಶದಿಂದಾಗಿ ಶರೀರದಿಂದ, ಮಾತಿನಿಂದ,ಮನಸ್ಸಿನಿಂದ ಪಾಪಗಳನ್ನು  ಮಾಡಲಾರ.
 ಅದೇ ರೀತಿಯಲ್ಲಿಯೇ ಜ್ಞಾನಿಯು ಹೀಗೆ ಚಿಂತನೆ ಮಾಡುತ್ತಾನೆ ".ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ}, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ.ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು." ಯಾವ ಜೀವಿಗಳು ಈ ಹಿಂದೆ ತ್ರಿಕರಣಪೂರ್ವಕವಾಗಿ ಪಾಪ ಮಾಡುತ್ತಿದ್ದರೊ, ನಂತರ  ಈ ಬಗೆಯ ಚಿಂತನೆಯಿಂದಾಗಿ ಆ ಬಗೆಯ ಪಾಪದಿಂದಾಗಿ ಪೂರ್ಣವಾಗಿ ಮುಕ್ತನಾಗುವನು ಅಥವಾ ಆ ಪಾಪವನ್ನು ದುರ್ಬಲಗೊಳಿಸುವರು.
 ನಂತರ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಜರಾಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ಜರಾವಿಗೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ
ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಮುಪ್ಪಿಗೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ರೋಗಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ರೋಗಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ರೋಗಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಮರಣಧಮ್ಮಕ್ಕೆ ಗುರಿಯಾಗಿಲ್ಲ, ಯಾರೂ ಮರಣಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಮರಣಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ "ನಾನು ಒಬ್ಬನೇ ಪ್ರೀಯವಿಯೋಗ ಧಮ್ಮಕ್ಕೆಗುರಿಯಾಗಿಲ್ಲ, ಯಾರೂ ಪ್ರಿಯವಿಯೋಗಧಮ್ಮಕ್ಕೆ ಅತೀತವಾಗಿ ಹೋಗಿಲ್ಲ, ಭೂತಕಾಲದಲ್ಲಿ ಆಗಲಿ ಅಥವಾ ಭವಿಷ್ಯದಲ್ಲಿಯಾಗಲಿ ಸತ್ತನಂತರ ಮರು ಉಗಮಿಸುವ ಸರ್ವಜೀವಿಗಳು ಪ್ರಿಯವಿಯೋಗಕ್ಕೆ ಅತೀತವಾಗಿ ಹೋಗಲು ಸಾಧ್ಯವಿಲ್ಲ." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.
ನಂತರ ಅದೇ ರೀತಿಯಾಗಿ ಆರ್ಯರ ಶಿಷ್ಯನು ಹೀಗೆ ಅಲೋಚಿಸುತ್ತಾನೆ ".ನನ್ನ ಕಮ್ಮಗಳಿಗೆ ನಾನೇ ಹೋಣೆಗಾರ[ಯಜಮಾನ},ಹಾಗೇಯೇ ಪರರು ಸಹಾ ತಮ್ಮಕಮ್ಮಗಳಿಗೆ ಓಡೆಯರು ಆಗಿದ್ದಾರೆ, ನನ್ನ ಕಮ್ಮಗಳಿಂದಾಗಿ ಜನಿಸಿದ ಹಾಗು ನನ್ನ ಕಮ್ಮಗಳಿಗೆ ಸಂಬಂದಿಸಿದ ನನ್ನ ಕಮ್ಮಗಳಿಗೆ ನಾನೇ ಹಕ್ಕುದಾರ ಹಾಗೇಯೇ ಎಲ್ಲಾ ಜನರು ತಮ್ಮ ಕಮ್ಮಗಳಿಗೆ ಅವುಗಳ ಪರಿಣಾಮಗಳಿಗೆ ಭಾದ್ಯಸ್ಥರಾಗಿದ್ದಾರೆ, ನನ್ನ ನಿರ್ಣಯಗಳಿಂದಲೇ ಕಮ್ಮವು ಆಗಿದೆ ಹಾಗೆಯೇ ಅವರ ನಿರ್ಣಯಗಳಿಂದಲೇ ಕಮ್ಮವುಆಗುತ್ತಿದ್ದೆ. ಯಾವುದೆಲ್ಲಾ ಕುಶಲ ಅಥವಾ ಪಾಪ ನಾನು ಮಾಡಿದರೆ ಅದಕ್ಕೆ ನಾನೇ ಉತ್ತರಾಧಿಕಾರಿಯಾಗುವೆನು ಹಾಗೇಯೇ ಪರರು ಸಹಾ ತಮ್ಮ ಕಮ್ಮಗಳಿಗೆ ಉತ್ತರಾದಿಕಾರಿಯಾಗುವರು." ಈ ರೀತಿಯಾಗಿ ಚಿಂತನೆ ಮಾಡುತ್ತಿರುವಾಗ ಆತನಲ್ಲಿ ಮಾರ್ಗವು ಉದಯಿಸುತ್ತದೆ, ಆಗ ಆತನು ಆ ಮಾರ್ಗದಲ್ಲಿಯೇ ನೆಲೆಸುತ್ತಾನೆ, ಅದನ್ನೇ ವೃದ್ಧಿಗೊಳಿಸುತ್ತಾನೆ, ಆಗ ಅತನಲ್ಲಿ ಬಂಧನಗಳು ಕಳಚಿಬೀಳುವವು, ಆತನ ದಾಹ ಹಾಗು ಮೋಹವು ಕ್ಷಯಿಸಿಹೋಗುವುದು.







Tuesday 5 May 2015

sakkaya ditti wrong views on self

                          ಸಕ್ಕಾಯ ದಿಟ್ಠಿ


ಶ್ರಾವಸ್ಥಿಯಲ್ಲಿ ಭಗವಾನರು ಹೀಗೆ ಬೋಧಿಸಿದರು.
"ಸಮಣ ಬ್ರಾಹ್ಮಣರು ಅನೇಕ ವಿಧದಲ್ಲಿ ಆತ್ಮವನ್ನು ಅಥವಾ ವ್ಯಕ್ತಿತ್ವವನ್ನು ಅಂಟಿದ್ದಾರೆ. ಪಂಚಖಂಧಗಳಿಗೆ ಅಂಟಿರುವರು. ಈ ಕೆಳಕಂಡ ದೃಷ್ಟಿಗಳಲ್ಲಿ ಒಂದಕ್ಕೆ ಅಂಟಿರುತ್ತಾರೆ. ಯಾರು ಆರ್ಯರಲ್ಲವೋ, ಸುಶಿಕ್ಷಿತರಲ್ಲವೋ ಅವರು ದೇಹವನ್ನೇ ಆತ್ಮ ಎನ್ನುತ್ತಾರೆ ಅಥವಾ ಆತ್ಮವು ದೇಹವನ್ನು ಹೊಂದಿದೆ ಅಥವಾ ದೇಹವು ಆತ್ಮವನ್ನು ಹೊಂದಿದೆ, ದೇಹದಲ್ಲಿ ಆತ್ಮವಿದೆ ಅಥವಾ ಆತ್ಮದಲ್ಲಿ ದೇಹವಿದೆ ಎಂದು ಭಾವಿಸುತ್ತಾರೆ.
ಹಾಗೆಯೇ ವೇದನೆಯೇ ಆತ್ಮವೆಂದು ಹೇಳುತ್ತಾರೆ. ಉದಾಹರಣೆಗೆ ಆನಂದವೇ ಆತ್ಮ ಅಥವಾ ವೇದನೆಯು ಆತ್ಮವನ್ನು ಹೊಂದಿದೆ ಅಥವಾ ಆತ್ಮವು ವೇದನೆಯನ್ನು ಹೊಂದಿದೆ, ವೇದನೆಯಲ್ಲಿ ಆತ್ಮವಿದೆ, ಆತ್ಮದಲ್ಲಿ ವೇದನೆಗಳಿವೆ.
ಹಾಗೆಯೇ ಸಞ್ಞ (ಗ್ರಹಿಕೆ)ವೇ ಆತ್ಮ ಎನ್ನುತ್ತಾರೆ. ಗ್ರಹಿಕೆಯು ಆತ್ಮವನ್ನು ಹೊಂದಿದೆ ಅಥವಾ ಆತ್ಮವು ಗ್ರಹಿಕೆಯನ್ನು ಹೊಂದಿದೆ. ಆತ್ಮದಲ್ಲಿ ಗ್ರಹಿಕೆಯಿದೆ. ಅಥವಾ ಗ್ರಹಿಕೆಯಲ್ಲಿ ಆತ್ಮವಿದೆ. ಉದಾಹಣೆಗೆ ಬುದ್ಧಿಯಲ್ಲಿ ಆತ್ಮವಿದೆ ಎಂದು ಹೇಳುತ್ತಾರೆ.
ಹಾಗೆಯೇ ಸಂಖಾರಗಳೇ (ಚಿತ್ತದ ಚಟುವಟಿಕೆಗಳು) ಆತ್ಮವೆನ್ನುತ್ತಾರೆ. (ಉದಾಹರಣೆಗೆ ಪ್ರಜ್ಞಾ ಅಥವಾ ಕರುಣಾ) ಅಥವಾ ಆತ್ಮವು ಸಂಖಾರಗಳನ್ನು ಹೊಂದಿವೆ. ಅಥವಾ ಸಂಖಾರಗಳು ಆತ್ಮವನ್ನು ಹೊಂದಿದೆ. ಆತ್ಮದಲ್ಲಿ ಸಂಖಾರಗಳಿವೆ ಅಥವಾ ಹಾಗೆಯೇ ವಿಞ್ಞನವೇ (ಅರಿಯುವಿಕೆ) ಆತ್ಮವೆನ್ನುತ್ತಾರೆ. ಅಥವಾ ಆತ್ಮವು ವಿಞ್ಞಾನವನ್ನು ಹೊಂದಿದೆ. ಅಥವಾ ವಿಞ್ಞನವು ಆತ್ಮವನ್ನು ಹೊಂದಿದೆ. ಆತ್ಮದಲ್ಲಿ ವಿಞ್ಞಾನವಿದೆ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎನ್ನುತ್ತಾರೆ. (ಹೀಗೆ ಪಂಚಖಂಧಗಳಲ್ಲಿ ಒಂದು ಆತ್ಮವೆಂದು, ಉಳಿದವನ್ನು ಅದರ ಅಧೀನವೆನ್ನುತ್ತಾರೆ ಅಥವಾ ಪಂಚಖಂಧಗಳಿಗೆ ಅತೀತವಾಗಿ ಆತ್ಮವಿದೆ ಎಂದು ಹೇಳಿ ಅದಕ್ಕೆ ಇವೆಲ್ಲವೂ ಅಧೀನ ಎನ್ನುತ್ತಾರೆ). 'ಇದೇ ನಾನು' ಎಂದು ಹೇಳಿ ಅದಕ್ಕೆ ಇವೆಲ್ಲವೂ ಅಧೀನ ಎನ್ನುತ್ತಾರೆ). 'ಇದೇ ನಾನು' ಎಂದು ದೃಷ್ಟಿಸುತ್ತಾನೆ. ಆತನಲ್ಲಿ ನಾನಾಬಗೆಯ ದೃಷ್ಟಿಕೋನಗಳು ಉಂಟಾಗುತ್ತದೆ. ಆತ್ಮವೇ ಎಲ್ಲವನ್ನು ನೋಡುತ್ತಿದೆ, ಕೇಳುತ್ತಿದೆ, ಅಘ್ರಾಣಿಸುತ್ತಿದೆ, ಸ್ವಾದಿಸುತ್ತಿದೆ, ಸ್ಪಶರ್ಿಸುತ್ತಿದೆ, ಯೋಚಿಸುತ್ತಿದೆ ಎಂದು ಭಾವಿಸುತ್ತಾನೆ. ಹೀಗೆ ದೃಷ್ಟಿ ಜಾಲದಲ್ಲಿ ಬೀಳುತ್ತಾನೆ. 'ಇದೇ ನಾನು' ಅಥವಾ 'ವಿಷಯಗಳು ಅಶರೀರ' ಎನ್ನುತ್ತಾನೆ. 'ವಿಷಯಗಳು ಶರೀರ ಹೊಂದಿವೆ' ಎನ್ನುತ್ತಾನೆ, 'ವಿಷಯಗಳು ಅರಿವನ್ನು ಹೊಂದಿದೆ ಅಥವಾ ವಿಷಯಗಳು ಅರಿವನ್ನು ಹೊಂದಿಲ್ಲ' ಅಥವಾ 'ವಿಷಯಗಳು ಅರಿವನ್ನು ಹೊಂದಿಲ್ಲ, ಹೊಂದದೆಯೂ ಇಲ್ಲ' ಎಂದು ಭಾವಿಸುತ್ತಾನೆ.
ಆದರೆ ಆರ್ಯಶ್ರಾವಕನು ಯಾವಾಗ ಅಜ್ಞಾನವನ್ನು ದೂರೀಕರಿಸುತ್ತಾನೆ ಮತ್ತು ಆತನಲ್ಲಿ ಜ್ಞಾನವು ಉದಯಿಸುತ್ತದೆ, ಅಜ್ಞಾನದ ನಾಶದೊಂದಿಗೆ ಆತನಲ್ಲಿ 'ಅಹಂ', 'ನಾನು', 'ಇದೇ ನಾನು', 'ಆತ್ಮವಿದೆ', 'ಆತ್ಮವಿಲ್ಲ', 'ಆತ್ಮಕ್ಕೆ ದೇಹವಿದೆ', 'ಆತ್ಮಕ್ಕೆ ದೇಹವಿಲ್ಲ', 'ಆತ್ಮಕ್ಕೆ ಅರಿವಿದೆ', 'ಆತ್ಮಕ್ಕೆ ಅರಿವಿಲ್ಲ'. ಆತ್ಮಕ್ಕೆ ಅರಿವಿಲ್ಲ, ಇಲ್ಲದೆಯೂ ಇಲ್ಲ' ಎಂದೆಲ್ಲಾ ಮಿಥ್ಯಾದೃಷ್ಟಿಗಳು ನಾಶವಾಗುತ್ತದೆ.
ನಿಮ್ಮದೆಲ್ಲವನ್ನು ಬಿಟ್ಟುಬಿಡಿ
ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಹೀಗೆ ಹೇಳಿದ್ದರು:
"ಭಿಕ್ಷುಗಳೇ, ನಿಮ್ಮದೆಲ್ಲವನ್ನು ಬಿಟ್ಟುಬಿಡಿ, ಹಾಗೆ ಬಿಟ್ಟಾಗ ನೀವು ಲಾಭವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ."
"ಭಿಕ್ಷುಗಳೇ, ನಿಮ್ಮದಲ್ಲದ್ದು ಯಾವುದು?"
ಈ ದೇಹ ನಿಮ್ಮದಲ್ಲ... ಈ ವೇದನೆಗಳು... ಈ ಗ್ರಹಿಕೆಗಳು... ಈ ಚಿತ್ತದ ಚಟುವಟಿಕೆಗಳು... ಈ ಅರಿವು ನಿಮ್ಮದಲ್ಲ. ಇವುಗಳನ್ನು ಬಿಟ್ಟುಬಿಡಿ, ಅಂಟದಿರಿ, ಇವನ್ನು ಬಿಟ್ಟಾಗ ನೀವು ಲಾಭವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ. ಹೇಗೆಂದರೆ ಕೆಲವರು ಹುಲ್ಲನ್ನು ಮತ್ತು ಕಟ್ಟಿಗೆಗಳನ್ನು ಸುಡುತ್ತಿದ್ದರೆ ಅದು ನಿಮ್ಮನ್ನು ಸುಡುವಂತೆ ಆಗುವುದೇ?"
"ಇಲ್ಲ ಭಂತೆ."
"ಏಕೆ?"
"ಏಕೆಂದರೆ ಅದು ನಮ್ಮದಲ್ಲ, ನಾವು ಅಲ್ಲ, ನಮ್ಮ ಆತ್ಮವೂ ಅಲ್ಲ."
"ಅದೇರೀತಿಯಾಗಿ ಭಿಕ್ಷುಗೇ, ಈ ಶರೀರ ಮತ್ತು ಮನಸ್ಸನ್ನು (ವೇದನೆ) ಗ್ರಹಿಕೆ, ಚಟುವಟಿಕೆ, ಅರಿವು) ಬಿಟ್ಟಿಬಿಡಿ. ಅದು ನಿಮ್ಮದಲ್ಲ, ಇವನ್ನು ನೀವು ಬಿಟ್ಟಾಗ ಮತ್ತೆ ಅಂಟದಿದ್ದಾಗ ನೀವು ಸುಖವನ್ನು ಮತ್ತು ಕ್ಷೇಮವನ್ನು ಪಡೆಯುವಿರಿ."
ಆತ್ಮವು ಸರ್ವಶಕ್ತವೇ? ಪರಿಶುದ್ಧವೇ? ನಿತ್ಯವೇ?
ಒಮ್ಮೆ ಸಚ್ಚಕ ಎಂಬ ಮಹಾ ವಾಗ್ಮಿಯು ಭಗವಾನರನ್ನು ವಾದದಲ್ಲಿ ಸೋಲಿಸಲು  ಬಂದನು. ಆತನ ಪ್ರಕಾರ ಪಂಚಖಂಧಗಳು (ದೇಹ ಮತ್ತು ಮನಸ್ಸು) ಆತ್ಮವಾಗಿತ್ತು. ಆದರೆ ಭಗವಾನರು ಯಾವುದನ್ನು ಆತ್ಮವೆಂದು ಒಪ್ಪುತ್ತಿರಲಿಲ್ಲ.
ಸಚ್ಚಕ : "ದೇಹ ಮತ್ತು ಮನಸ್ಸನ್ನು ಅವಲಂಬಿಸಿಯೇ ಪಾಪ ಪುಣ್ಯಗಳು ಉಂಟಾಗುತ್ತದೆ."
ಭಗವಾನರು : "ಅಗ್ಗಿವೇಸನ, ನೀನು ಹೇಳುತ್ತಿರುವುದು ಈ ರೀತಿಯಾಗಿರಬಹುದೇ, ದೇಹವೇ ನನ್ನ ಆತ್ಮ, ಮನಸ್ಸೇ (ವೇದನೆ, ಸಞ್ಞ, ಸಂಖಾರ, ವಿಞ್ಞಾನ) ನನ್ನ ಆತ್ಮ."
ಸಚ್ಚಕ : "ಹೌದು."
ಭಗವಾನರು : "ಒಬ್ಬ ರಾಜನಿಗೆ ಅಪರಾಧಿಗಳಿಗೆ ಗಡಿಪಾರು ಮಾಡುವ ಅಥವಾ ಮರಣದಂಡನೆ ನೀಡುವ ಅಧಿಕಾರವಿರುತ್ತದೆ. ಏಕೆಂದರೆ ಆತನು ಅಭಿಶಕ್ತ ಸರ್ವ ಅಧಿಕಾರವನ್ನು ಹೊಂದಿರುತ್ತಾನೆ, ಅದೇರೀತಿಯಲ್ಲಿ ಆತ್ಮಕ್ಕೂ ಸಹಾ ಅಂತಹ ಶಕ್ತಿ ಇರಲೇಬೇಕು. ಈಗ ನೀನು ದೇಹವೇ ನನ್ನ ಆತ್ಮ ಎನ್ನುವುದಾದರೆ 'ನನ್ನ ದೇಹ ಬದಲಾಗದಿರಲಿ, ಬಲಿಷ್ಠವಾಗಿರಲಿ, ರೋಗಕ್ಕೆ ಈಡಾಗದಿರಲಿ, ವೃದ್ಧಾಪ್ಯ ಹೊಂದದಿರಲಿ, ಮರಣಕ್ಕೆ ಈಡಾಗದಿರಲಿ' ಎಂದರೆ ಹಾಗೆ ಆಗುತ್ತದೆಯೇ?"
ಆಗ ಸಚ್ಚಕ ನಿರುತ್ತರನಾದನು. ನಂತರ ಇಲ್ಲವೆಂದು ಒಪ್ಪಿದನು.
ಭಗವಾನರು : "ವೇದನೆಯು ನನ್ನ ಆತ್ಮ ಎನ್ನುವುದಾದರೆ ನನ್ನ ವೇದನೆಯು ಹೀಗಿರಲಿ (ಸದಾ ಸುಖಿಯಾಗಿರಲಿ), ನನ್ನ ವೇದನೆ ಹೀಗಿರದಿರಲಿ (ಎಂದು ದುಃಖಿತವಾಗದಿರಲಿ) ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಸಞ್ಞೆಯು ನನ್ನ ಆತ್ಮ ಎನ್ನುವುದಾದರೆ ಇಂತಹ ಗ್ರಹಿಕೆಯೇ ಇರಲಿ, ಇಂತಹ ಗ್ರಹಿಕೆ ಇಲ್ಲದಿರಲಿ ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಸಂಖಾರಗಳು ನನ್ನ ಆತ್ಮ ಎನ್ನುವುದಾದರೆ ನನ್ನ ಸಂಖಾರಗಳು ಹೀಗಿರಲಿ (ಮೈತ್ರಿ, ಪ್ರಜ್ಞೆ) ನನ್ನ ಸಂಖಾರಗಳು ಹೀಗಿರದಿರಲಿ (ಲೋಭ, ದ್ವೇಷ, ಮೋಹ) ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಗವಾನ್."
ಭಗವಾನರು : "ವಿಞ್ಞಾನವು ನನ್ನ ಆತ್ಮ ಎನ್ನುವುದಾದರೆ ನನ್ನ ಅರಿಯುವಿಕೆ ಹೀಗಿರಲಿ, ನನ್ನ ಅರಿಯುವಿಕೆ ಹೀಗಿರದಿರಲಿ ಎಂದರೆ ಹಾಗಾಗುವುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ದೇಹ ಮತ್ತು ಮನಸ್ಸುಗಳು ನಿತ್ಯವೋ ಅನಿತ್ಯವೋ?"
ಸಚ್ಚಕ : "ಅನಿತ್ಯ ಭಂತೆ."
ಭಗವಾನರು : "ಯಾವುದು ಅನಿತ್ಯವೋ ಅದು ಸುಖವೋ ಅಥವಾ ದುಃಖವೋ?"
ಸಚ್ಚಕ : "ದುಃಖ ಭಂತೆ."
ಭಗವಾನರು : "ಯಾವುದು ಅನಿತ್ಯವೋ, ದುಃಖಕರವೋ ಅದನ್ನು ಇದು ನಾನು, ಇದು ನನ್ನದು ಮತ್ತು ಇದೇ ನನ್ನ ಆತ್ಮವೆಂದು ಹೇಳಬಹುದೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನರು : "ಅಗ್ಗಿವೇಸನ, ಇದರ ಬಗ್ಗೆ ನೀನು ಹೇಗೆ ಯೋಚಿಸುತ್ತೀಯೆ, ಯಾವಾಗ ಒಬ್ಬನು ದುಃಖವನ್ನು ಒಪ್ಪಿ, ಅವಲಂಬಿಸಿದರೆ, ದುಃಖವನ್ನೇ ನಾನು ಎಂದು ಭಾವಿಸಿ, ದುಃಖವನ್ನು ನನ್ನದು ಎಂದು ಭಾವಿಸಿ, ದುಃಖವನ್ನೇ ನನ್ನ ಆತ್ಮ ಎಂದು ಪರಿಗಣಿಸಿದರೆ ಆತನು ಎಂದಾದರೂ ಪೂರ್ಣವಾಗಿ ದುಃಖದಿಂದ ಮುಕ್ತನಾಗಲು ಸಾಧ್ಯವೇ?"
ಸಚ್ಚಕ : "ಇಲ್ಲ ಭಂತೆ."
ಭಗವಾನ್ : "ಇಲ್ಲಿ ಯಾವ ಭಿಕ್ಷುವು ಪಂಚಖಂಧಗಳನ್ನು (ದೇಹ ಮತ್ತು ಮನಸ್ಸು) ದುಃಖವೆಂದು ಸಮ್ಮಾಪ್ರಜ್ಞೆಯಿಂದ ಕಂಡು ಯಾವ ಬಂಧನಕ್ಕೂ ಅಂಟದೆ ಮುಕ್ತನಾಗುತ್ತಾನೆ. ಈ ರೀತಿಯಾಗಿ ಅರಹಂತನಾಗುತ್ತಾನೆ."
ಆಗ ಸಚ್ಚಕನು ಭಗವಾನರಲ್ಲಿ ಕ್ಷಮೆ ಯಾಚಿಸಿ, ಆಹಾರಕ್ಕೆ ಆಹ್ವಾನಿಸುತ್ತಾನೆ.
ಆತ್ಮರಹಿತ ಸ್ಪಷ್ಟವಾದ ಅರಿವು
ಭಗವಾನರು ಶ್ರಾವಸ್ತಿಯಲ್ಲಿ ಇದ್ದರು. ಆಗ ಅವರು ನಾಲ್ಕುರೀತಿಯ ಆಹಾರಗಳಾದ ಭೌತಿಕ ಆಹಾರ, ಸ್ಪರ್ಶ, ಇಚ್ಛೆ ಮತ್ತು ವಿಞ್ಞಾನ (ಅರಿವು) ಇವುಗಳ ಬಗ್ಗೆ ಬೋಧಿಸುತ್ತಿದ್ದರು. ಆಗ ಪೂಜ್ಯ ಮೋರಿಯ ಫಾಲ್ಗುಣರು ಈ ರೀತಿ ಪ್ರಶ್ನಿಸಿದರು: "ಭಗವಾನ್ ಯಾರು ವಿಞ್ಞಾನದ ಆಹಾರವನ್ನು ಸೇವಿಸುತ್ತಿರುವುದು?"
ಭಗವಾನರು : "ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಆಹಾರವನ್ನು ಸೇವಿಸುತ್ತಿರುವನು ಎಂದು ಬೋಧಿಸುತ್ತಿಲ್ಲ. ನಾನು ಆ ಅರ್ಥದಲ್ಲಿ ಬೋಧಿಸುತ್ತಿಲ್ಲ. ಪ್ರಶ್ನೆಯನ್ನು ಈ ರೀತಿಯಲ್ಲಿ ಕೇಳಬೇಕು: 'ವಿಞ್ಞಾನವು ಪೋಷಿತವಾದ ನಂತರ ಏನಾಗುವುದು? ಮತ್ತು ಅದಕ್ಕೆ ತಕ್ಕ ಉತ್ತರವೆಂದರೆ ವಿಞ್ಞಾನವು ಪೋಷಿತವಾದಾಗ ಭವವು ಉಂಟಾಗುತ್ತದೆ, ಭವದಿಂದ ಜನ್ಮವು ಉಂಟಾಗುತ್ತದೆ. ಜನ್ಮದಲ್ಲಿ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ. ಆರು ಇಂದ್ರೀಯ ಆಧಾರಗಳಿಂದ ಸ್ಪರ್ಶವು ಉಂಟಾಗುತ್ತದೆ."
ಆಗ ಫಾಲ್ಗುಣನು ಮತ್ತೆ ಈ ರೀತಿ ಪ್ರಶ್ನಿಸುತ್ತಾನೆ: "ಭಗವಾನ್, ಯಾರು ಸ್ಪರ್ಶವನ್ನು ಪಡೆಯುತ್ತಿರುವುದು?"
ಭಗವಾನರು: "ಓ ಫಾಲ್ಗುಣ ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಸ್ಪರ್ಶವನ್ನು ಪಡೆಯುತ್ತಿರುವನು ಎಂದು ಬೋಧಿಸುತ್ತಿಲ್ಲ. ನಾನು ಹಾಗೆ ಹೇಳುತ್ತಿದ್ದರೆ ಈ ಪ್ರಶ್ನೆಯು ಸರಿಯಾಗುತ್ತಿತ್ತು. ನೀನು ಹೀಗೆ ಪ್ರಶ್ನೆ ಕೇಳಬೇಕಿತ್ತು 'ಸ್ಪರ್ಶದ ಪರಿಣಾಮವೇನಾಗುವುದು' ಮತ್ತು ಅದಕ್ಕೆ ತಕ್ಕ ಉತ್ತರ ಏನೆಂದರೆ ಸ್ಪರ್ಶದಿಂದಾಗಿಯೇ ವೇದನೆಗಳು ಉಂಟಾಗುತ್ತವೆ."
ಆಗ ಫಾಲ್ಗುಣ ಮತ್ತೆ ಈ ರೀತಿ ಪ್ರಶ್ನಿಸಿದನು: "ಭಗವಾನ್ ಯಾರು ವೇದನೆಗಳನ್ನು ಅನುಭವಿಸುತ್ತಿರುವುದು?"
ಭಗವಾನ್: "ಓ ಫಾಲ್ಗುಣ, ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ವೇದನೆಗಳನ್ನು ಅನುಭವಿಸುತ್ತಿದ್ದಾನೆ ಎಂದು ಬೋಧಿಸುತ್ತಿಲ್ಲ, ಹಾಗೆ ಹೇಳಿದ್ದರೆ ಈ ಪ್ರಶ್ನೆ ಉಚಿತ ಆಗಿರುತ್ತಿತ್ತು. ಮತ್ತು ನಾನು ಹಾಗೆ ಬೋಧಿಸಿಲ್ಲದುದರಿಂದಾಗಿ ನೀನು ಹೀಗೆ ಪ್ರಶ್ನೆ ಕೇಳಬೇಕಿತ್ತು: 'ವೇದನೆಗಳ ಪರಿಣಾಮವು ಏನಾಗುತ್ತದೆ, ಭಗವಾನ್?' ಮತ್ತು ಅದಕ್ಕೆ ಯೋಗ್ಯ ಉತ್ತರವೆಂದರೆ ವೇದನೆಗಳಿಂದಾಗಿ ತನ್ಹಾ (ತೀವ್ರ ಬಯಕೆ) ಉಂಟಾಗುತ್ತದೆ."
ಫಾಲ್ಗುಣ: "ಭಗವಾನ್ ಯಾರು ತನ್ಹಾ (ತೀವ್ರ ಬಯಕೆ) ಪಡುತ್ತಿರುವುದು?"
ಭಗವಾನ್: "ಓ ಪಾಲ್ಗುಣ, ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ತೀವ್ರ ಬಯಕೆ (ತನ್ಹಾ) ಪಡುತ್ತಿದ್ದಾನೆ ಎಂದು ಬೋಧಿಸುತ್ತಿಲ್ಲ. ಹಾಗೆ ಬೋಧಿಸಿದ್ದರೆ, ನೀನು ಹೀಗೆ ಕೇಳುವುದು ಉಚಿತವಾಗುತ್ತಿತ್ತು. ನಾನು ಆ ರೀತಿ ಬೋಧಿಸದ ಕಾರಣ, ನೀನು ಹೀಗೆ ಪ್ರಶ್ನಿಸಬೇಕು: 'ತನ್ಹಾದ ಪರಿಣಾಮವೇನಾಗುವುದು ಭಗವಾನ್'. ಆಗ ಅದಕ್ಕೆ ತಕ್ಕ ಉತ್ತರವೇನೆಂದರೆ ತನ್ಹಾದಿಂದ ಅಂಟುವಿಕೆಯು ಉಂಟಾಗುತ್ತದೆ."
ಫಾಲ್ಗುಣ: "ಭಗವಾನ್ ಯಾರು ಅಂಟುವಿಕೆಯನ್ನು ವ್ಯಕ್ತಿಪಡಿಸುತ್ತಿರುವುದು?"
ಭಗವಾನ್: "ಇದು ಪ್ರಶ್ನಿಸಬೇಕಾದ ರೀತಿಯಲ್ಲ, ನಾನು ಯಾರೋ ಅಂಟುತ್ತಿರುವನು ಎಂದು ಬೋಧಿಸುತ್ತಿಲ್ಲ, ಹಾಗೆ ಬೋಧಿಸಿದ್ದರೆ, ನೀನು ಹೀಗೆ ಕೇಳುವುದು ಉಚಿತವಾಗಿರುತ್ತಿತ್ತು. ನಾನು ಹಾಗೆ ಬೋಧಿಸದ ಕಾರಣ ನೀನು ಹೀಗೆ ಪ್ರಶ್ನಿಸಬೇಕು: 'ಅಂಟುವಿಕೆಯ ಪರಿಣಾಮ ಏನಾಗುತ್ತದೆ?' ಆಗ ಅದಕ್ಕೆ ತಕ್ಕ ಉತ್ತರ ಏನೆಂದರೆ ಅಂಟುವಿಕೆಯಿಂದ ಭವ ಉಂಟಾಗುತ್ತದೆ, ಭವದಿಂದ ಜನ್ಮ, ಜನ್ಮದಿಂದ ಮುಪ್ಪು, ರೋಗ, ಮರಣ, ಶೋಕ, ಪ್ರಲಾಪ, ದುಃಖ, ನಿರಾಶೆ ಮುಂತಾದ ದುಃಖರಾಶಿಯೇ ಉಂಟಾಗುತ್ತದೆ."
"ಆದರೆ ಫಾಲ್ಗುಣ ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶದ ನಿರೋಧ ಉಂಟಾಗುತ್ತದೆ. ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ, ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ, ಜನ್ಮದ ನಿರೋಧವು, ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.
ಆತ್ಮದ ಬಗ್ಗೆ ಚಚರ್ೆ
ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದರು. ಅಲ್ಲಿ ಪೂಟ್ಟಪಾದ ಎಂಬ ಸಮಣನೊಂದಿಗೆ ನಡೆದ ಚಚರ್ೆಯಿದು. ಭಗವಾನರು ಅಲ್ಲಿ ಆತನಿಗೆ ಧಮ್ಮ ಬೋಧಿಸುತ್ತಾರೆ. ಆಗ ಆತನಿಗೆ ಈ ಪ್ರಶ್ನೆ ಉಂಟಾಗುತ್ತದೆ. "ಭಂತೆ ಸಞ್ಞ (ಗ್ರಹಿಕೆಯು)ವು ಮೊದಲು ಉದಯಿಸಿ, ನಂತರ ಜ್ಞಾನವು ಉದಯಿಸುವುದೋ ಅಥವಾ ಜ್ಞಾನವು ಮೊದಲು ಉದಯಿಸಿ ನಂತರ ಸಞ್ಞ (ಗ್ರಹಿಕೆ) ಉಂಟಾಗುವುದೋ ಅಥವಾ ಎರಡೂ ಒಟ್ಟಿಗೆ ಉದಯಿಸುವುದೋ ಅಥವಾ ಎರಡೂ ಮೊದಲು ಹಾಗು ನಂತರ ಉಂಟಾಗುವುದಿಲ್ಲವೋ?"
"ಓ ಪೊಟ್ಟಪಾದ ಮೊದಲು ಸಞ್ಞ (ಗ್ರಹಿಕೆ) ಉಂಟಾಗಿ ನಂತರ ಜ್ಞಾನವು ಉಂಟಾಗುತ್ತದೆ ಮತ್ತು ಜ್ಞಾನವು ಗ್ರಹಿಕೆಗೆ (ಸಞ್ಞ) ಅವಲಂಬಿಸಿರುತ್ತದೆ. ಇದರಿಂದಾಗಿ ಗೊತ್ತಾಗುವುದು ಏನೆಂದರೆ ಜ್ಞಾನವು ಉಂಟಾಗುವುದಕ್ಕೂ ಕಾರಣವಿದೆ."
"ಹಾಗಾದರೆ ಭಂತೆ, ಸಞ್ಞ (ಗ್ರಹಿಕೆ)ಯು ಮತ್ತು ಆತ್ಮವು ಒಂದೆಯೇ ಅಥವಾ ಸಞ್ಞವೇ ಬೇರೆ ಮತ್ತು ಆತ್ಮವು ಬೇರೆಯೇ?"
"ಓ ಪೊಟ್ಟಿಪಾದ, ಮತ್ತೆ ನೀನು ಆತ್ಮದ ಹಿಂದೆ ಬಿದ್ದೆಯಾ?"
"ಭಂತೆ ಅಂದರೆ ಭೌತಿಕ ಆತ್ಮ ಅದಕ್ಕೆ ಆಕಾರವಿದ್ದು (ಸೂಕ್ಷ್ಮ ಶರೀರ) ನಾಲ್ಕು ಮಹಾಭೂತಗಳಿಂದ ರಚಿತವಾಗಿರುವಂತಹುದು ಮತ್ತು ಘನ ಆಹಾರದಿಂದ ಪೋಷಿತವಾಗುವಂತಹುದು."
"ಓ ಪೊಟ್ಟಿಪಾದ, ಅಂತಹ ಆತ್ಮವು ಇದ್ದಿದ್ದರೆ ನಿನ್ನ ಸಞ್ಞವೇ ಬೇರೆ ಮತ್ತು ಆತ್ಮವು ಬೇರೆಯಾಗುತ್ತಿತ್ತು..."
"ಹಾಗಾದರೆ ಭಂತೆ, ನಾನು ಆತ್ಮವು ಮನೋಮಯವೆಂದು (ಮನಸ್ಸಿನಿಂದ ನಿಮರ್ಾಣ) ಭಾವಿಸುತ್ತೇನೆ. ಅದರ ಎಲ್ಲಾ ಪ್ರಧಾನ ಮತ್ತು ಅಪ್ರಧಾನ ಅಂಗಗಳು ಪೂರ್ಣವಾಗಿರುತ್ತದೆ, ಯಾವುದೇ ಕೊರತೆಯಿಂದ ಕೂಡಿರುವುದಿಲ್ಲ."
"ಆಗಲೂ ಪೊಟ್ಟಿಪಾದ, ನಿನಗೆ ಇಂತಹ ಆತ್ಮವಿದ್ದರೆ, ಅದೇ ಚಚರ್ೆಯು ಅನ್ವಯವಾಗುವುದು."
"ಹಾಗಾದರೆ ಭಂತೆ, ನಾನು ಆಕಾರವಿಲ್ಲದ (ಅರೂಪಿ), ಸಞ್ಞಮಯ (ಗ್ರಹಿಕೆಯಿಂದಲೇ ಕೂಡಿದ) ಆತ್ಮವಿದೆ ಎನ್ನುತ್ತೇನೆ."
"ಆಗಲೂ ಪೊಟ್ಟಿಪಾದ, ನಿನಗೆ ಇಂತಹ ಆತ್ಮವಿದ್ದರೆ, ಅದೇ ಚಚರ್ೆಯು ಅನ್ವಯವಾಗುವುದು."
"ಆದರೆ ಭಂತೆ, ನನಗೆ ಇದು ಅರ್ಥವಾಗುತ್ತದೆಯೇ? ಸಞ್ಞವೇ ಆತ್ಮವಾಗಿದೆಯೇ ಅಥವಾ ಎರಡೂ ಬೇರೆ ಬೇರೆಯೇ?"
"ಓ ಪೊಟ್ಟಿಪಾದ, ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ, ವಿಭಿನ್ನ ಉದ್ದೇಶವನ್ನು ಹೊಂದಿರುವ, ವಿಭಿನ್ನವಾಗಿ ಶಿಕ್ಷಣ ಪಡೆದಿರುವ, ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ನೀನು ಸತ್ಯವನ್ನು ಅದರ ಯಥಾಭೂತ ಸ್ಥಿತಿಯಲ್ಲಿ ಅರಿಯಲಾರೆ."
"ಹಾಗಾದರೆ ಭಂತೆ ನನಗೆ ತಿಳಿಸಿ: 'ಈ ಲೋಕ ಶಾಶ್ವತವೆ ಅಥವಾ ಅಶಾಶ್ವತವೇ? ಅಥವಾ ಅನಂತವೇ ಅಥವಾ ಅಂತ್ಯವುಳ್ಳದ್ದೇ ಅಥವಾ ದೇಹ ಮತ್ತು ಆತ್ಮ ಒಂದೆಯೇ ಅಥವಾ ದೇಹ ಮತ್ತು ಆತ್ಮ ಬೇರೆ ಬೇರೆಯೇ? ಅಥವಾ ತಥಾಗತರು ಸಾವಿನನಂತರ ಇರುವರೇ, ಇರುವುದಿಲ್ಲವೇ? ಎರಡೂ ಸತ್ಯವೇ, ಅಥವಾ ಯಾವುದೂ ಇಲ್ಲವೇ?"
"ಓ ಪೊಟ್ಟಿಪಾದ, ಇದಕ್ಕೂ ಸಹಾ ನಾನು ಯಾವ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾರೆ!"
"ಭಗವಾನ್, ತಾವು ಏತಕ್ಕೆ ಅಂತಹ ಅಭಿಪ್ರಾಯಗಳನ್ನು ಹೊಂದಿಲ್ಲ?"
"ಏಕೆಂದರೆ ಈ ಪ್ರಶ್ನೆಗಳು ಅನರ್ಥಕಾರಿಯಾದವು. ಧಮ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಬ್ರಹ್ಮಚರ್ಯೆ ಜೀವನಕ್ಕೆ, ವಿಶುದ್ಧಿಗೆ, ಪರಮಶಾಂತತೆಗೆ, ವಿರಾಗಕ್ಕೆ, ನಿರೋಧಕ್ಕೆ ಮತ್ತು ನಿಬ್ಬಾಣಕ್ಕೆ ಸಹಕಾರಿಯಲ್ಲ. ಆದ್ದರಿಂದ ನಾನು ಅಂತಹ ಅಭಿಪ್ರಾಯಗಳನ್ನು ಹೊಂದಿಲ್ಲ."
"ಹಾಗಾದರೆ ಭಗವಾನರು ಯಾವುದನ್ನು ಬೋಧಿಸುತ್ತಾರೆ?"
"ನಾನು ನಾಲ್ಕು ಆರ್ಯಸತ್ಯಗಳನ್ನು ಬೋಧಿಸುತ್ತೇನೆ..."
"ಓ ಪೊಟ್ಟಿಪಾದ, ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಅವರು ಈ ರೀತಿಯ ಸಿದ್ಧಾಂತ ಹೊಂದಿದ್ದರು: 'ಆತ್ಮವು ಆನಂದಮಯ ಮತ್ತು ಸಾವಿನ ನಂತರ ಸ್ವಸ್ತಿಯಾಗಿರುತ್ತದೆ.' ನಾನು ಅವರ ಬಳಿಗೆ ಹೋಗಿ ಹೀಗೆ ಕೇಳಿದೆನು: 'ಆತ್ಮವು ಆನಂದಮಯವೇ ಆಗಿದ್ದರೆ, ಲೋಕದ ಜನರೆಲ್ಲಾ ಸುಖಿಗಳಾಗಿ, ಆನಂದಭರಿತರಾಗಿ ಇರಬೇಕಿತ್ತು, ಅವರೆಲ್ಲಾ ಹಾಗಿದ್ದಾರೆಯೇ."
"ಇಲ್ಲ ಭಂತೆ."
"ಹೋಗಲಿ, ನೀವು ಇಡೀ ರಾತ್ರಿ ಅಥವಾ ಇಡೀ ಹಗಲು ಆನಂದದಿಂದ ಕೂಡಿರುವಿರಾ?"
"ಇಲ್ಲ ಭಂತೆ."
"ಹೋಗಲಿ, ನಿಮಗೆ ಆನಂದದಿಂದ ಕೂಡಿರುವಂತಹ ಮಾರ್ಗ ತಿಳಿದಿದೆಯೇ?"
"ಇಲ್ಲ ಭಂತೆ."
"ಅಥವಾ ನಿಮಗೆ ಯಾವುದಾದರೂ ದೇವತೆ ಬಂದು ಈ ರೀತಿ ಜೀವಿಸಿದರೆ ಆನಂದಮಯವಾಗಿ ಸಾವಿನ ನಂತರ ಇರಬಹುದು, ನಾವು ಹೀಗೆ ಜೀವಿಸಿ ಹೀಗಾಗಿರುವೆವು ಎಂದು ಹೇಳಿದೆಯೇ?"
"ಇಲ್ಲ ಭಂತೆ" ಎಂದು ಅವರು ಹೇಳಿದರು.
"ನಿನಗೆ ಏನು ಅನಿಸುತ್ತದೆ? ಈ ಸಮಣ ಬ್ರಾಹ್ಮಣರು ಉತ್ತಮ ನೆಲೆಯಲ್ಲಿದ್ದು ಮಾತನಾಡುತ್ತಿರುವರೇ?"
"ಇಲ್ಲ ಭಂತೆ."
"ಮೂರು ರೀತಿಯಲ್ಲಿ ಆತ್ಮವನ್ನು ವಿವರಿಸುತ್ತಾರೆ. ಅದೆಂದರೆ: ಭೌತಿಕ, ಮನೋಮಯಿ ಮತ್ತು ಅರೂಪಿ (ಅಶರೀರ). ಮೊದಲನೆಯದು ನಾಲ್ಕು ಮಹಾಭೂತಗಳಿಂದಾದ, ಆಹಾರದಿಂದ ಪೋಷಿತವಾದ ಶರೀರ, ಎರಡನೆಯದು ಮನೋಮಯ ಮನಸ್ಸಿನಿಂದಲೇ ನಿಮರ್ಾಣವಾಗಿರುವಂತಹ, ಮನೋ ಕಾರ್ಯಗಳನ್ನು ಮಾಡುವಂತಹುದು, ಎಲ್ಲಾ ಪ್ರಧಾನ ಮತ್ತು ಅಪ್ರಧಾನ ಅಂಗಗಳನ್ನು ಹೊಂದಿರುವಂತಹ ಸೂಕ್ಷ್ಮ ಶರೀರಿಯಾಗಿದೆ ಮತ್ತು ಮೂರನೆಯದು ಅರೂಪಿ (ಅಶರೀರ) ಶರೀರವೇ ಇಲ್ಲದ ಕೇವಲ ಸಞ್ಞವನ್ನು ಹೊಂದಿರುವಂತಹುದು."
ಆಗ ಅಲ್ಲಿಯೇ ಇದ್ದ ಚಿತ್ತನೆಂಬುವವನು ಈ ರೀತಿ ಪ್ರಶ್ನಿಸಿದನು: "ಭಗವಾನ್, ಈ ಮೂರು ರೀತಿಯ ಆತ್ಮಗಳಲ್ಲಿ ಒಮ್ಮೆ ಒಂದನ್ನು ಮಾತ್ರ ಹೊಂದಲು ಸಾಧ್ಯ. ಹಾಗಾದಾಗ ಮಿಕ್ಕ ಎರಡು ಅಸತ್ಯವೇ? ಒಂದು ಮಾತ್ರ ಸತ್ಯವೇ?"
"ಓ ಚಿತ್ತ, ಈ ಮೂರರಲ್ಲಿ ಒಂದು ಮಾತ್ರ ಒಂದು ಸಮಯದಲ್ಲಿ ಇರುವುದು, ಮಿಕ್ಕವು ಇರುವುದಿಲ್ಲ, ಇದು ಕೇವಲ ನಾಮಮಾತ್ರವಾಗಿದೆ. ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ."
"ಚಿತ್ತ, ನಿನಗೆ ಯಾರಾದರೂ ಹೀಗೆ ಕೇಳುತ್ತಾರೆ: 'ನೀನು ಹಿಂದೆ ಇದ್ದೆಯೋ ಅಥವಾ ಇಲ್ಲವೋ; ನೀನು ಮುಂದೆ ಇರುವೆಯೋ ಅಥವಾ ಇಲ್ಲವೋ? ನೀನು ಈಗ ಇದ್ದೀಯೋ ಅಥವಾ ಇಲ್ಲವೋ?' ಆಗ ನೀನು ಹೇಗೆ ಉತ್ತರಿಸುವೆ?"
"ನಾನು ಹೀಗೆ ಉತ್ತರಿಸುವೆ, ನಾನು ಹಿಂದೆ ಇದ್ದೆನು, ಇಲ್ಲದೆ ಇರಲಿಲ್ಲ. ಹಾಗೆಯೇ ಮುಂದೆಯೂ ಇರುವೆನು, ಇಲ್ಲದೆ ಇರುವುದಿಲ್ಲ. ಮತ್ತು ನಾನು ಈಗ ಇರುವೆನು, ಇಲ್ಲದೆ ಇಲ್ಲ."
"ಆಗ ಅವರು ಹೀಗೆ ಹೇಳುತ್ತಾರೆ 'ಹಾಗದರೆ ಹಿಂದೆ ಇದ್ದ ಆತ್ಮ ಮಾತ್ರ ಸತ್ಯವೇ; ಮುಂದೆ ಬರುವ ಮತ್ತು ಈಗಿರುವ ಆತ್ಮ ಮಿಥ್ಯವೇ? ಅಥವಾ ಭವಿಷ್ಯದ ಆತ್ಮ ಮಾತ್ರ ಸತ್ಯವೇ; ಹಿಂದಿನ ಮತ್ತು ಈಗಿರುವ ಆತ್ಮ ಮಿಥ್ಯವೇ ಅಥವಾ ಈಗಿನ ಆತ್ಮ (ವ್ಯಕ್ತಿತ್ವ) ಮಾತ್ರ ಸತ್ಯ; ಹಿಂದಿನ ಮತ್ತು ಮುಂದಿನ ಆತ್ಮ ಮಿಥ್ಯವೇ?" ಆಗ ನೀನು ಏನೆಂದು ಉತ್ತರಿಸುವೆ?"
"ಆಗ ನಾನು ಹೀಗೆ ಉತ್ತರಿಸುವೆ: 'ಅತೀತಕಾಲ (ಭೂತಕಾಲ)ದಲ್ಲಿ ಆ ಆತ್ಮವೇ ನನಗೆ ಸತ್ಯವಾಗಿತ್ತು, ಉಳಿದಿದ್ದು ಮಿಥ್ಯವಾಗಿತ್ತು; ಮತ್ತು ಅದೇರೀತಿ ಈಗಿನ ಆತ್ಮವೇ ನನಗೆ ಸತ್ಯವಾಗಿದೆ, ಉಳಿದಿದ್ದು ಮಿಥ್ಯವಾಗಿತ್ತು. ಹಾಗೆಯೇ ಭವಿಷ್ಯದಲ್ಲಿ ಆ ಆತ್ಮವೇ ಸತ್ಯವಾಗುತ್ತದೆ, ಉಳಿದಿದ್ದು ಮಿಥ್ಯವಾಗುತ್ತದೆ."
"ಚೆನ್ನಾಗಿ ಹೇಳಿದೆ ಚಿತ್ತ, ಯಾವಾಗ ಒಂದು ಆತ್ಮ (ವ್ಯಕ್ತಿತ್ವ) ಸಾಗುತ್ತಿರುವುದೋ ಆಗ ಅದು ಉಳಿದ ವಿಭಾಗಕ್ಕೆ ಬರುವುದಿಲ್ಲ. ಹೇಗೆಂದರೆ ಚಿತ್ತ ಹಸು ಹಾಲು ನೀಡುತ್ತದೆ ಮತ್ತು ಹಾಲಿನಿಂದ ಮೊಸರಾಗುತ್ತದೆ. ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ, ತುಪ್ಪದಿಂದ ತಿಂಡಿಗಳು ಸಿದ್ಧವಾಗುತ್ತವೆ. ಆದರೆ ಯಾವಾಗ ಹಾಲಿರುತ್ತದೋ ಆಗ ಅದನ್ನು ಮೊಸರೆಂದಾಗಲಿ ಅಥವಾ ಬೆಣ್ಣೆಯೆಂದಾಗಲಿ ಅಥವಾ ತುಪ್ಪವೆಂದಾಗಲಿ ಅಥವಾ ತಿಂಡಿಯೆಂದಾಗಲಿ ಕರೆಯುವುದಿಲ್ಲ. ಮತ್ತು ಯಾವಾಗ ಅದು ಮೊಸರಾಗಿರುತ್ತದೋ ಆಗ ಅದನ್ನು ಬೇರೆ ಅವಸ್ಥೆಗಳ ಹೆಸರಿನಿಂದ ಕರೆಯುವುದಿಲ್ಲ, ಹಾಗೆಯೇ ಬೆಣ್ಣೆಯಾಗಿರುವಾಗ.... ಅದೇರೀತಿಯಲ್ಲಿ ಚಿತ್ತ, ಯಾವಾಗ ಮೂರು ರೀತಿಗಳ ಮನಸ್ಸು ಒಂದು ಅವಸ್ಥೆಯಲ್ಲಿ ಸಾಗುತ್ತಿರುವುದೋ ಆಗ ಅದಕ್ಕೆ ಬೇರೆ ಹೆಸರಿನಿಂದಾಗಲಿ ಕರೆಯಲಾಗುವುದಿಲ್ಲ. ಏಕೆಂದರೆ ಹೆಸರುಗಳು, ವ್ಯಕ್ತಿತ್ವಗಳು, ಸಂಭಾಷಣೆಯಾಗುತ್ತದೆ, ಜಗತ್ತಿನಲ್ಲಿ ಅಂಕಿತವು ಸಾಧಾರಣ ಸಂಗತಿಯಾಗಿದೆ ಮತ್ತು ತಥಾಗತರು ಮಾತ್ರ ಅದರ ಯೋಗ್ಯ ಬಳಕೆ ಮಾಡುತ್ತಾರೆ. ಅದರಿಂದ ಜನರು ಹಾದಿ ತಪ್ಪುವುದಿಲ್ಲ."
ಆಗ ಪೊಟ್ಟಿಪಾದನು ಭಗವಾನರಿಗೆ ನಾನಾರೀತಿಯಲ್ಲಿ ಹೊಗಳಿದನು. ನಂತರ ತ್ರಿರತ್ನಗಳಿಗೆ ಶರಣು ಹೋದನು. ಆದರೆ ಚಿತ್ತ, ಸಂಘಕ್ಕೆ ಸೇರಲು ಅನುಮತಿ ಪಡೆದನು. ಮುಂದೆ ಆತನು ಅರಹಂತನು ಆಗುತ್ತಾನ 

brahmajaala sutta in kannada ಬ್ರಹ್ಮಜಾಲ ಸುತ್ತ

.
                          ಬ್ರಹ್ಮಜಾಲ ಸುತ್ತ 
                ಬ್ರಹ್ಮಜಾಲ ಸುತ್ತವು ನನಗೆ ನಾನಾಕಾರಣಗಳಿಂದ ಇಷ್ಟವಾಗುತ್ತದೆ, ಮೊದಲನೆಯದಾಗಿ ಬುದ್ಧರಿಗೆ ನಿಂದಿಸಿದಾಗ, ಯಾವರೀತಿ ಉದ್ವೇಗ, ಉದ್ರೇಕ ತಾಳದೆ ಸತ್ಯ ಹೇಗೆ ಮನವರಿಕೆ ಮಾಡಬೇಕು ಎನ್ನುವುದು, ಎರಡನೆಯದಾಗಿ ಭಗವಾನರ ಶೀಲದ ವರ್ಣನೆ, ಅವರ ಜೀವನೋಪಾಯ ಹೇಗೆ ಉತ್ಕೃಷ್ಟ, ಹಾಗೆಯೇ 62 ಆಧಾರಗಳಿಂದ ಮಿಥ್ಯಾ ದೃಷ್ಟಿಗಳ ವಿವರಣೆ, ಅವುಗಳಿಗೆ ಕಾರಣ ಮತ್ತು ನಿವಾರಣೆ ಇವುಗಳಿಂದಾಗಿ ಭಗವಾನರಿಗೆ ಹೇಗೆ ಶ್ರೇಷ್ಠಕರವಾಗಿ ಪ್ರಶಂಸಿಸಬಹುದು ಎಂದು ಅರಿವಾಗುತ್ತದೆ.


*   *   *
                ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಸುಮಾರು 500 ಭಿಕ್ಷುಗಳ ಬೃಹತ್ ಸಮೂಹದೊಂದಿಗೆ ರಾಜಗೃಹ ಮತ್ತು ನಳಂದದ ಹೆದ್ದಾರಿಯಲ್ಲಿ ಹೋಗುತ್ತಿದ್ದರು. ಅದೇರೀತಿಯಲ್ಲಿ ಸುಪ್ಪಿಯನೆಂಬ ಪರಿವ್ರಾಜಕ ಮತ್ತು ಆತನ ಯುವ ಶಿಷ್ಯನಾದ ಬ್ರಹ್ಮದತ್ತನು ಅದೇದಾರಿಯಲ್ಲಿ ಹೋಗುತ್ತಿದ್ದರು. ಆಗ ಸುಪ್ಪಿಯನು ಭಗವಾನರ ಬಗ್ಗೆ, ಧಮ್ಮದ ಬಗ್ಗೆ ಮತ್ತು ಸಂಘದ ಬಗ್ಗೆ ನಿಂದೆ ಮಾಡತೊಡಗಿದನು. ಆದರೆ ಯುವ ಬ್ರಹ್ಮದತ್ತನು ಬುದ್ಧರ ಬಗ್ಗೆ, ಧಮ್ಮದ ಬಗ್ಗೆ ಮತ್ತು ಸಂಘದ ಬಗ್ಗೆ ನಾನಾರೀತಿಯಲ್ಲಿ ಪ್ರಶಂಸೆ ಮಾಡತೊಡಗಿದನು.
                ಹೀಗೆ ಗುರುಶಿಷ್ಯರು ತಮ್ಮ ಅಭಿಪ್ರಾಯಗಳನ್ನು ಎತ್ತಿಹಿಡಿಯುತ್ತ ನೇರವಾಗಿ ಪರಸ್ಪರ ವಿರೋಧಿಸುತ್ತಿದ್ದರು. ಹಾಗು ಭಿಕ್ಷುಗಣವನ್ನು ಹಿಂಬಾಲಿಸುತ್ತಲೇ ಹೀಗೆ ಮಾಡತೊಡಗಿದರು.
                ಈಗ ಭಗವಾನರು ಅಂಬಿಲಟ್ಟಕಾ ಎಂಬ ಮಾವಿನ ಮರದ ಸಮೀಪದ ರಾಜ ವಾಸ ಮಂದಿರದಲ್ಲಿ ರಾತ್ರಿ ಕಳೆಯಲು ತಂಗಿದರು. ಅವರ ಜೊತೆಗೆ ಅವರ ಭಿಕ್ಷುವು ಸಹಾ ಇತ್ತು. ಅಲ್ಲಿ ಸಮೀಪದಲ್ಲಿಯೇ ಸುಪ್ಪಿಯ ಮತ್ತು ಬ್ರಹ್ಮದತ್ತನು ಸಹಾ ತಂಗಿ ತಮ್ಮ ಚಚರ್ೆಯ ವಿಷಯವನ್ನು ಮತ್ತೆ ಪ್ರಾರಂಭಿಸಿದರು. ತ್ರಿರತ್ನದ ನಿಂದೆ ಮತ್ತು ಪ್ರಶಂಸೆಯಲ್ಲಿ ರಾತ್ರಿ ಕಳೆದರು.
                ಮಾರನೆಯ ದಿನದ ಮುಂಜಾನೆ ಭಿಕ್ಷುಗಳು ಎದ್ದು ಡೇರೆಯಲ್ಲಿ ಸೇರಿದರು. ಅವರಲ್ಲಿ ಈ ಬಗೆಯ ಮಾತುಕತೆಗಳು ಆರಂಭವಾಯಿತು. ಎಷ್ಟು ಅದ್ಭುತ, ಭಿಕ್ಷುಗಳೇ ಭಗವಾನರು ಎಷ್ಟು ವಿಶಿಷ್ಟ ಅಪರಿಚಿತ. ಅವರು ಎಲ್ಲವನ್ನೂ ಬಲ್ಲವರು ಮತ್ತು ಕಾಣುವವರು. ತಥಾಗತರು ಆಗಿದ್ದಾರೆ. ಮಾನವನಲ್ಲಿನ ಪ್ರವೃತ್ತಿ ಹಾಗು ಪ್ರತಿಭೆಗಳನ್ನು ಸ್ಪಷ್ಟವಾಗಿ ಕಾಣುವವರು ಆಗಿದ್ದಾರೆ. ನೋಡಿ ಹೇಗೆ ಸುಪ್ಪಿಯಾ ಪರಿವ್ರಾಜಕನು ತ್ರಿರತ್ನವನ್ನು ಹಲವುರೀತಿಯಲ್ಲಿ ನಿಂದಿಸಿದನು. ಹಾಗೆಯೇ ಬ್ರಹ್ಮದತ್ತನು ನಾನಾರೀತಿಯಲ್ಲಿ ತ್ರಿರತ್ನವನ್ನು ಪ್ರಶಂಸಿಸಿದನು. ಹೀಗೆ ಈ ಗುರುಶಿಷ್ಯರು ಭಗವಾನರಿಗೆ ಮತ್ತು ಭಿಕ್ಷುವನ್ನು ಹಿಂಬಾಲಿಸುತ್ತಲೇ ನೇರವಾಗಿ ಪರಸ್ಪರ ವಿರೋಧಿಸುತ್ತಿದ್ದರು.
                ನಂತರ ಭಗವಾನರು ಅವರ ಮಾತುಕತೆಯ ದಿಶೆ ಯಾವುದೆಂದು ಗುಡಾರಕ್ಕೆ ಅರಿತು ಹೋಗಿ, ತಮಗಾಗಿ ಸಿದ್ಧಪಡಿಸಿದ್ದ ಆಸನದಲ್ಲಿ ಕುಳಿತರು; ನಂತರ ಹೀಗೆ ಕೇಳಿದರು: ಯಾವ ವಿಷಯದ ಮಾತುಕತೆಯಿಂದಾಗಿ ನೀವು ಹೀಗೆ ನೆಲೆದಿರುವಿರಿ ಮತ್ತು ನಿಮ್ಮ ಸಂಭಾಷಣೆಯ ವಿಷಯ ಯಾವುದಾಗಿದೆ? ಮತ್ತು ಅವರು ವಿಷಯವೆಲ್ಲಾ ಹೇಳಿದರು. ಆಗ ಭಗವಾನರು ಭಿಕ್ಷು ಹೀಗೆ ಬುದ್ಧಿವಾದ ನೀಡಿದರು.
                ಭಿಕ್ಷುಗಳೇ ಪರರು ನನ್ನ ವಿರುದ್ಧ ನುಡಿಯಬಹುದು. ಅಥವಾ ಧಮ್ಮದ ವಿರುದ್ಧ ಅಥವಾ ಸಂಘದ ವಿರುದ್ಧ ನುಡಿಯಬಹುದು. ಆದರೆ ಅದಕ್ಕಾಗಿ ನೀವು ದ್ವೇಷವಾಗಲಿ, ಮತ್ಸರವಾಗಲಿ, ದುಃಖವಾಗಲಿ ಆಳ ಅಪ್ರಿಯ ವೇದನೆಯಾಗಲಿ ಪಡಬಾರದು, ಸಹಿಸಿಕೊಳ್ಳಬೇಕು. ನೀವು ಅದರಿಂದಾಗಿ ಕೋಪವಾಗಲಿ ಅಥವಾ ದುಃಖಿತರಾದರೆ ಅದರಿಂದಾಗಿ ನಿಮ್ಮ ಸ್ವ-ಸಂಶೋಧನೆಗೆ ತೊಡಕಾಗುತ್ತದೆ. ಯಾವಾಗ ಪರರು ನಮ್ಮ ವಿರುದ್ಧ ನುಡಿದಾಗ, ನೀವು ಕೋಪಗೊಂಡರೆ ಮತ್ತು ಅಸಂತೃಪ್ತರಾದರೇ ನೀವು ಅವರ ನುಡಿಯುವಿಕೆಯಲ್ಲಿ ಎಷ್ಟು ಒಳಿತಿದೆ ಅಥವಾ ಕೆಡಕಿದೆ ಎಂದು ಮೌಲ್ಯಮಾಪನ ಮಾಡಬಲ್ಲಿರಾ?
                ಹಾಗೆ ಮಾಡುವುದಕ್ಕೆ ಆಗುವುದಿಲ್ಲ ಭಂತೆ.
                ಆದರೆ ಹಾಗೆಯೇ ಪರರು ನನ್ನನ್ನು ಅಥವಾ ಧಮ್ಮವನ್ನು ಅಥವಾ ಸಂಘವನ್ನು ದೂಷಿಸಿದಾಗ, ನೀವು ಆ ಗೋಜನ್ನು ಬಿಡಿಸಬೇಕು. ಯಾವುದು ಸುಳ್ಳಾಗಿದೆಯೋ ಮತ್ತು ತಪ್ಪಾಗಿದೆಯೋ ಅದನ್ನು ಎತ್ತಿತೋರಿಸಿ ಈ ಅಥವಾ ಆ ಕಾರಣದಿಂದಾಗಿ ಇದು ಸತ್ಯವಲ್ಲ, ವಾಸ್ತವವಲ್ಲ, ಅದು ಹಾಗಲ್ಲ, ಅಂತಹ ವಿಷಯ ನಮ್ಮಲ್ಲಿಲ್ಲ. ಅಂತಹದನ್ನು ನಿಮ್ಮಲ್ಲಿ ಹುಡುಕಲು ಆಗುವುದಿಲ್ಲ ಎಂದು ಮನವರಿಕೆ ಮಾಡಿಸಬೇಕು.
                ಆದರೆ ಹಾಗೆಯೇ ಭಿಕ್ಷುಗಳು ಪರರು ತಮಗೆ ಅಥವಾ ಧಮ್ಮಕ್ಕೆ ಅಥವಾ ಸಂಘಕ್ಕೆ ಪ್ರಶಂಸಿಸಬಹುದು, ಆದರೆ ಅದರಿಂದಾಗಿ ಸಂತೋಷಿತರಾಗಬಾರದು ಅಥವಾ ಆನಂದಿಸಬಾರದು ಅಥವಾ ಆನಂದಭರಿತರಾಗಿ ಉಬ್ಬಿಹೋಗಬಾರದು, ಹಾಗೇನಾದರೂ ನೀವು ಮಾಡಿದರೆ ನಿಮ್ಮ ಸ್ವ-ಸಂಶೋಧನೆಗೆ ಅದು ತೊಡಕಾಗುವುದು.
                ಹಾಗೆಯೇ ಯಾವಾಗ ಪರರು ನಿಮ್ಮನ್ನು ಪ್ರಶಂಸಿಸಿದಾಗ, ಅಥವಾ ಧಮ್ಮವನ್ನು ಪ್ರಶಂಸಿಸಿದಾಗ ಅಥವಾ ಸಂಘವನ್ನು ಪ್ರಶಂಸಿಸಿದಾಗ, ನೀವು ಅದನ್ನು ಆಲಿಸಿ ಅದರಲ್ಲಿನ ಸತ್ಯಾಂಶಗಳನ್ನು ಒಪ್ಪಬೇಕು. ವಾಸ್ತವಗಳನ್ನು ಒಪ್ಪಬೇಕು. ಈ ಅಥವಾ ಆ ಕಾರಣಗಳಿಂದಾಗಿ ಇದು ಸತ್ಯವಾಗಿದೆ, ಅಂತಹುದು ನಮ್ಮಲ್ಲಿ ಹುಡುಕಬಹುದು, ನಮ್ಮಲ್ಲಿ ಆ ಅಂಶವಿದೆ ಎಂದು ಒಪ್ಪಬೇಕು.
                ಇದು ಕೇವಲ ಕ್ಷುಲ್ಲಕ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಅಲ್ಪ ಮೌಲ್ಯಗಳಿಗೆ ಸಂಬಂಧಿಸಿದ್ದಾಗಿದೆ. ಕೇವಲ ಶೀಲಗಳಿಗೆ ಸಂಬಂಧಿಸಿದ್ದಾಗಿದೆ. ಅದು ಪರಿವತರ್ಿತನಾಗದ ಮನುಷ್ಯ ತಥಾಗತರಿಗೆ ಪ್ರಶಂಸಿಸುವಾಗ ಹೇಳುವಂತಹದ್ದಾಗಿದೆ ಮತ್ತು ಯಾವರೀತಿಯಲ್ಲಿ ಆತನು ಪ್ರಾಥಮಿಕವಾಗಿ ಮತ್ತು ಕೇವಲ ಶೀಲಗಳನ್ನು ಪ್ರಶಂಸಿಸುತ್ತಾನೆ.
ಶೀಲಗಳು ಭಾಗ-1
ಚಿಕ್ಕ ಶೀಲಗಳು :
                ಜೀವಿಗಳ ಹತ್ಯೆಯಿಂದಾಗಿ ದೂರಾಗಿ ಗೋತಮರು ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಒರಟುತನಕ್ಕೆ ನಾಚಿಕೆಪಟ್ಟು, ಅನುಕಂಪದಿಂದ ಕೂಡಿದವರಾಗಿ, ಸರ್ವಜೀವಿಗಳ ಬಗ್ಗೆ ಕರುಣೆಯಿಂದ ಕೂಡಿದ್ದು ವಿಹರಿಸುವರು, ಜೀವವಿರುವ ಸರ್ವಜೀವಿಗಳ ಬಗ್ಗೆ ದಯೆವುಳ್ಳವರಾಗಿರುತ್ತಾರೆ ಹೀಗೆ ಪರಿವತರ್ಿತನಾಗದ ಮನುಷ್ಯನು ತಥಾಗತರ ಬಗ್ಗೆ ಪ್ರಶಂಸಿಸಬಹುದು.
                ಅಥವಾ ಅವರು ಹೀಗೂ ಹೇಳಬಹುದು: ತನಗೆ ನೀಡದಿದ್ದನ್ನು ತೆಗೆದು ಕೊಳ್ಳುವುದನ್ನು ತೊರೆದಿರುವ ಗೋತಮರು, ತಮ್ಮದಲ್ಲದ್ದನ್ನು ಹಿಡಿಯದೆ ಪ್ರತ್ಯೇಕವಾಗಿ ಜೀವಿಸುತ್ತಾರೆ, ಅವರು ಕೊಟ್ಟಿದ್ದನ್ನು ಮಾತ್ರ ಸ್ವೀಕರಿಸುತ್ತಾರೆ. ಈ ರೀತಿ ಪ್ರಾಮಾಣಿಕವಾಗಿ ಜೀವಿಸುತ್ತಾರೆ. ಪರಿಶುದ್ಧ ಹೃದಯದವರಾಗಿರುತ್ತಾರೆ.
                ಅಥವಾ ಅವರು ಹೀಗೂ ಹೇಳಬಹುದು: ಅಪವಿತ್ರತೆಯನ್ನು ದೂರೀಕರಿಸುವ ಗೋತಮರು ಬ್ರಹ್ಮಚರ್ಯೆಯಿಂದ, ಪರಿಶುದ್ಧತೆಯಿಂದ ಇರುತ್ತಾರೆ. ಅವರು ತುಚ್ಛವಾದ ಆಚರಣೆಯಿಂದ, ದೂರವಾಗಿ ಜೀವಿಸುತ್ತಾರೆ.
                ಅಥವಾ ಅವರು ಹೀಗೂ ಹೇಳಬಹುದು: ಅಸತ್ಯತೆಯ ಮಾತುಗಳಿಂದ ದೂರವಾಗಿರುವ ಗೋತಮರು, ಸುಳ್ಳಿನಿಂದ ದೂರವಾಗಿರುವರು. ಅವರು ಸದಾ ಸತ್ಯವನ್ನೇ ಹೇಳುವರು. ಸತ್ಯದಿಂದ ಎಂದಿಗೂ ಅವರು ದೂರವಾಗುವುದಿಲ್ಲ. ನಂಬಿಕೆಗೆ ಅರ್ಹರು, ಲೋಕಕ್ಕೆ ನೀಡಿದ ಮಾತುಗಳನ್ನು ತಪ್ಪದವರು ಆಗಿದ್ದಾರೆ.
                ಅಥವಾ ಅವರು ಹೀಗೂ ಹೇಳಬಹುದು: ಚಾಡಿಯಿಂದ ದೂರವಾಗಿರುವ ಗೋತಮರು ಕಳಂಕ ಹಚ್ಚುವುದರಿಂದ ರಹಿತರಾಗಿದ್ದಾರೆ. ಯಾವುದನ್ನು ಅವರು ಇಲ್ಲಿ ಕೇಳುತ್ತಾರೊ ಅದನ್ನು ಮತ್ತೊಂದೆಡೆ ಹೇಳಿ ಜಗಳವನ್ನು, ಐಕ್ಯತೆ ಭಂಗವನ್ನು ಮಾಡುವುದಿಲ್ಲ, ಬೇರೆಡೆ ಕೇಳಿದ್ದನ್ನು ಇಲ್ಲಿ ಹೇಳಿ ಜಗಳವನ್ನು ಐಕ್ಯತೆ ಭಂಗವನ್ನು ಮಾಡುವುದಿಲ್ಲ, ಹೀಗೆ ಅವರು ಪ್ರತ್ಯೇಕವಾಗಿರುವವರನ್ನು ಒಗ್ಗೂಡಿಸುತ್ತಾರೆ ಮತ್ತು ಅವರು ಮಿತ್ರರನ್ನು, ಶಾಂತಿ ನಿಮರ್ಿಸುವವರನ್ನು, ಶಾಂತಿಪ್ರಿಯರನ್ನು, ಪ್ರೋತ್ಸಾಹಿಸುವವ ರಾಗಿದ್ದಾರೆ. ಶಾಂತಿದಾಯಕ ಪದಗಳನ್ನು ನುಡಿಯುವವರಾಗಿದ್ದಾರೆ.
                ಅಥವಾ ಅವರು ಹೀಗೂ ಹೇಳಬಹುದು: ಮಾತಿನ ಒರಟುತನದಿಂದ ದೂರವಿರುವ ಗೋತಮರು, ಕಟುನಿಂದನೀಯ ಭಾಷೆಯಿಂದ ರಹಿತರಾಗಿರುವರು, ಯಾವುದೆಲ್ಲವೂ ನಿಂದಾತೀತವೋ, ಕಿವಿಗಳಿಗೆ ಆನಂದನೀಡುವಂತಹುದು, ಜನರಿಗೆ ಸುಖವನ್ನುಂಟು ಮಾಡುವ ಪ್ರಿಯವಾಗಿರುವಂತಹ ಮಾತುಗಳನ್ನು ಅವರು ಆಡುವರು.
                ಅಥವಾ ಅವರು ಹೀಗೂ ಹೇಳಬಹುದು: ನಿಷ್ಫಲವಾದ, ತಿರುಳಿಲ್ಲದ ಹರಟೆಯಿಂದ ದೂರವಾಗಿರುವ ಗೋತಮರು ವ್ಯರ್ಥವಾದ ಸಂಭಾಷಣೆಯಿಂದ ರಹಿತರಾಗಿದ್ದಾರೆ, ಯೋಗ್ಯ ಸಮಯದಲ್ಲಿ ಮಾತ್ರ ಮಾತನಾಡುತ್ತಾರೆ. ಸತ್ಯಗಳನ್ನು, ವಾಸ್ತವಗಳನ್ನು ಹೇಳುವಂತಹವರು, ಅರ್ಥಬದ್ಧ ಪದಗಳನ್ನು ಹೇಳುವವರು, ಧಮ್ಮವನ್ನು ಮತ್ತು ವಿನಯವನ್ನು ಹೇಳುವವರಾಗಿದ್ದಾರೆ ಮತ್ತು ಯೋಗ್ಯವಾದ ಕಾಲದಲ್ಲಿ ಹೇಳುವವರಾಗಿದ್ದಾರೆ. ಒಬ್ಬನ ಮನಸ್ಸಿನಲ್ಲಿ ಪರಿಣಾಮಕಾರಿಯಾಗುವಂತಹ, ವಿವರವಾದ, ವಿಶ್ಲೇಷಿತವಾದ, ಗಮ್ಯಕ್ಕೆ ಸೇರಿಸುವಂತಹ ಮಾತುಗಳನ್ನು ಆಡುತ್ತಾರೆ.
                ಅಥವಾ ಪರರು ಹೀಗೂ ವಣರ್ಿಸಬಹುದು: ಸಮಣ ಗೋತಮರು ಸಸ್ಯಗಳಿಗೆ ಅಥವಾ ಬೀಜಗಳಿಗೂ ಹಾನಿ ಮಾಡುವುದರಿಂದ ದೂರಾಗಿದ್ದಾರೆ. ಅವರು ದಿನದಲ್ಲಿ ಕೇವಲ ಒಂದು ಹೊತ್ತು ಮಾತ್ರ ಊಟ ತೆಗೆದುಕೊಳ್ಳುತ್ತಾರೆ. ಹಾಗೆಯೇ ಮಧ್ಯಾಹ್ನದ ನಂತರ ಆಹಾರ ಸೇವಿಸುವುದಿಲ್ಲ ಹಾಗು ರಾತ್ರಿಯ ಹೊತ್ತು ತಿನ್ನುವುದಿಲ್ಲ.
                ಅವರು ಜಾತ್ರೆಗಳನ್ನು, ನೃತ್ಯಗಳನ್ನು ನೋಡುವುದು ಹಾಗು ಹಾಡುಗಳನ್ನು ಮತ್ತು ಸಂಗೀತ ಆಲಿಸುವುದನ್ನು ಸಹಾ ಮಾಡುವುದಿಲ್ಲ.
                ಹಾಗೆಯೇ ಅವರು ಹೂಹಾರಗಳನ್ನು ಧರಿಸುವುದು, ಶೃಂಗಾರ ಮಾಡಿಕೊಳ್ಳುವುದು, ಆಭರಣ ಧರಿಸುವುದು ಹಾಗು ಸೌಗಂಧ ದ್ರವ್ಯಗಳನ್ನು ಹಾಕಿಕೊಳ್ಳುವುದು ಮಾಡುವುದಿಲ್ಲ. ಅವರು ಅಗಲವಾದ ಮತ್ತು ಎತ್ತರವಾದ ಹಾಸಿಗೆಗಳನ್ನು ಬಳಸುವುದಿಲ್ಲ. ಅವರು ಬೆಳ್ಳಿಯಾಗಲಿ ಅಥವಾ ಚಿನ್ನವಾಗಲಿ (ಹಣವಾಗಲಿ) ಸ್ವೀಕರಿಸುವುದಿಲ್ಲ. ಅವರು ಬೇಯಿಸಿದ ಧಾನ್ಯಗಳನ್ನು ಸ್ವೀಕರಿಸುವುದಿಲ್ಲ. ಅವರು ಹಸಿ ಮಾಂಸವನ್ನು ಸ್ವೀಕರಿಸುವುದಿಲ್ಲ. ಅವರು ಕನ್ಯೆಯರನ್ನಾಗಲಿ ಅಥವಾ ಸ್ತ್ರೀಯರನ್ನಾಗಲಿ ಸ್ವೀಕರಿಸುವುದಿಲ್ಲ.
                ಅವರು ಸೇವಕ ಅಥವಾ ಸೇವಕಿಯರನ್ನು ಸ್ವೀಕರಿಸುವುದಿಲ್ಲ. ಅವರು ಕುರಿ ಅಥವಾ ಮೇಕೆಗಳನ್ನು ಸಹಾ ಸ್ವೀಕರಿಸುವುದಿಲ್ಲ. ಅವರು ಕೋಳಿಗಳನ್ನಾಗಲಿ ಅಥವಾ ಹಂದಿಗಳನ್ನಾಗಿ ಸ್ವೀಕರಿಸುವುದಿಲ್ಲ. ಹಾಗೆಯೇ ಅವರು ಆನೆಗಳಾಗಲಿ, ಆಕಳುಗಳಾಗಲಿ, ಕುದುರೆಗಳಾಗಲಿ, ಹೆಣ್ಣು ಕುದುರೆಗಳಾಗಲಿ ಸ್ವೀಕರಿಸುವುದಿಲ್ಲ. ಹಾಗೆಯೇ ಅವರು ಕೃಷಿ ಭೂಮಿಯನ್ನಾಗಲಿ ಅಥವಾ ಅಕೃಷಿ ಭೂಮಿಯನ್ನಾಗಲಿ ಸ್ವೀಕರಿಸುವುದಿಲ್ಲ. ಅವರು ಇಬ್ಬರ ನಡುವೆ ದೂತರಾಗಿ ಕಾರ್ಯ ಮಾಡುವುದಿಲ್ಲ. ಅವರು ಕ್ರಯ-ವಿಕ್ರಯಗಳಂತಹ ವ್ಯಾಪಾರದಲ್ಲೂ ತೊಡಗುವುದಿಲ್ಲ. ಅವರು ತೂಕ, ಅಳತೆ, ಮುಂತಾದವುಗಳಲ್ಲಿ ಮೋಸವು ಮಾಡುವುದಿಲ್ಲ, ಅದರಲ್ಲಿ ತೊಡಗುವುದಿಲ್ಲ. ಅವರು ವಕ್ರ ಮಾರ್ಗಗಳಾದ ಲಂಚ, ಮೋಸ, ವಂಚನೆಗಳಲ್ಲಿ ತೊಡಗುವುದಿಲ್ಲ. ಹಾಗೆಯೇ ಅವರು ಕೈಕಾಲು ಮುರಿಯುವುದು (ಅಂಗಭೇದ), ಕೊಲೆ, ಸಂಕೋಲೆ, ಡಕಾಯಿತಿ, ಹಿಂಸೆ ಇಂತಹ ನೀಚ ಕೃತ್ಯಗಳಲ್ಲಿ ತೊಡಗುವುದಿಲ್ಲ.
ಮಧ್ಯಮ ಶೀಲಗಳು :
                ಅಥವಾ ಪರರು ಹೀಗೆ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಶ್ರದ್ಧಾಳುಗಳಿಂದ ಆಹಾರಗಳನ್ನು ಸ್ವೀಕರಿಸಿದರೂ ಸಹಾ, ಬೀಜಗಳನ್ನು ಅಥವಾ ಸಸ್ಯಗಳನ್ನು ನಾಶಮಾಡುತ್ತಾರೆ. ಬೇರುಗಳಿಂದ, ಗಂಟುಗಳಿಂದ, ಮಣ್ಣಿನಿಂದ ಕಸಿ ಮಾಡುವಿಕೆಯಿಂದ ಸಸ್ಯಗಳನ್ನು ಬೆಳೆಯುತ್ತಾರೆ. ಆದರೆ ಸಮಣ ಗೋತಮರು ಅಂತಹವುಗಳಿಂದ ದೂರವಿದ್ದಾರೆ. ಅಥವಾ ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಶ್ರದ್ಧಾಳುಗಳಿಂದ ಆಹಾರ ಪಡೆದು ಜೀವಿಸುತ್ತಿದ್ದರೂ ಸಹಾ ನಾನಾ ವಸ್ತುಗಳ ಸಂಗ್ರಹಣೆ ಮಾಡುತ್ತಾರೆ. ಹೇಳುವುದಾದರೆ ಆಹಾರಗಳು, ಪಾನೀಯಗಳು, ವಸ್ತ್ರಗಳು, ಹಾಸಿಗೆಗಳು, ಸುಗಂಧ ದ್ರವ್ಯಗಳು, ಧಾನ್ಯಗಳು ಮತ್ತು ಇತ್ಯಾದಿ. ಆದರೆ ಸಮಣ ಗೋತಮರು ಅಂತಹವುಗಳಿಂದ ದೂರವಿದ್ದಾರೆ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿದರೂ ಸಹಾ ಕೆಲವುರೀತಿಯ ಪ್ರದರ್ಶನಗಳಿಗೆ ಭೇಟಿ ನೀಡುತ್ತಾರೆ. ಅವೆಂದರೆ ನೃತ್ಯಗಳು, ಗೀತೆಗಳು, ವಾದನಗಳು, ಜಾತ್ರೆಗಳ ಪ್ರದರ್ಶನಗಳು, ಲಾವಣಿ ಪದಗಳ ಹಾಡುವಿಕೆ, ಕೈಗಳಿಂದ ನುಡಿಯುವ ಸಂಗೀತ, ಕವಿಗೋಷ್ಠಿ, ಗಾಯನಗೋಷ್ಠಿ, ಕುಂಭ ಧೂನಂ (ಘಟವಾದನ), ಶೋಭನಗರಕಂ (ನಾಟಕ ದೃಶ್ಯಗಳ ಸೃಷ್ಠಿ), ನಾಟಕ, ಚಂಡಾಲ ವಂಶಜರ ದೊಂಬರಾಟ, ಪ್ರಾಣಿಗಳ (ಆನೆ, ಕುದುರೆ, ಕೋಣ, ಗೂಳಿ, ಕುರಿ, ಮೇಕೆ, ಹುಂಜ ಮತ್ತು ಪುರಲಿ ಹಕ್ಕಿಯ) ಕಾಳಗ ವೀಕ್ಷಿಸುವುದು, ದೊಣ್ಣೆವರಸೆ, ಮುಷ್ಠಿಯುದ್ಧ ಕುಸ್ತಿ ಇತ್ಯಾದಿಗಳ ಪಂದ್ಯಗಳು ವೀಕ್ಷಿಸುವುದು, ನಾನಾರೀತಿಯ ಕಾಳಗ ಇತ್ಯಾದಿಗಳ ಪ್ರದರ್ಶನಗಳನ್ನು ನೋಡುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿದರೂ ಸಹಾ ಕೆಲವು ರೀತಿಯ ಆಟಗಳಲ್ಲಿ, ವಿನೋದಗಳಲ್ಲಿ ತಲ್ಲೀನರಾಗುತ್ತಾರೆ. ಅವೆಂದರೆ: 8 ಅಥವಾ 10 ಸಾಲಿನ ಚೌಕಗಳ ಫಲಕಗಳ ಆಟ (ಚದುರಂಗ), ಅದೇರೀತಿಯ ಆಟಗಳನ್ನು ಕಾಲ್ಪನಿಕ ಆಕಾಶದಲ್ಲಿ ಕಲ್ಪಿಸಿ ಆಡುವಿಕೆ. ಭೂಮಿಯಲ್ಲಿ ರೇಖಾಚಿತ್ರಗಳನ್ನು ರಚಿಸಿ ಎಲ್ಲೆಲ್ಲಿ ಹೆಜ್ಜೆ ಹಾಕಬೇಕು ಎಂಬ ಆಟ, ರಾಶಿಯಲ್ಲಿ ಚೂರೊಂದನ್ನು ಉಗುರಿನಿಂದ ತೆಗೆದುಹಾಕುವುದು ಅಥವಾ ಬೇರೊಂದನ್ನು ರಾಶಿಯಲ್ಲಿ ಅಲುಗಾಡಿಸದೆ ಅಡಗಿಸುವುದು, ದಾಳ (ಪಗಡೆ)ಗಳನ್ನು ಎಸೆಯುವುದು, ಗಿಲ್ಲಿದಾಂಡು ಆಟ, ಕೈಯನ್ನು ಬಣ್ಣಗಳ ಅಸಿಟಿನಲ್ಲಿ ಅದ್ದಿ ಗೋಡೆಗಳಲ್ಲಿ ಆಕಾರಗಳನ್ನು ರಚಿಸುವ ಆಟ, ಚೆಂಡಾಟ, ಎಲೆಗಳಿಂದ ಕೊಳವೆಗಳನ್ನು ರಚಿಸಿ ಊದುವ ಆಟ, ಆಟದ ಗೊಂಬೆಗಳಿಂದ ನೇಗಿಲು ಹೊಡೆಯುವಿಕೆ, ಪಲ್ಟಿಗಳನ್ನು ಹೊಡೆಯುವುದು, ತಾಳೆಯ ಎಲೆಗಳಿಂದ ಗಾಳಿಯಂತ್ರಗಳನ್ನು ರಚಿಸಿ ಆಡುವ ಆಟ, ತಾಳೆ ಎಲೆಗಳಿಂದ ಗೊಂಬೆ ಮಾಡಿ ಆಡುವ ಆಟ, ಆಟಿಕೆಯ ಬಂಡಿ ಅಥವಾ ಬಿಲ್ಲನ್ನು ರಚಿಸಿ ಆಡುವುದು, ಗಾಳಿಯಿಂದ ಅಕ್ಷರಗಳನ್ನು ಊಹಿಸುವುದು ಅಥವಾ ಬೆನ್ನ ಮೇಲೆ ನೋಡಿ ಅಕ್ಷರಗಳನ್ನು ಊಹಿಸುವುದು, ಪರರ ಯೋಚನೆಗಳನ್ನು ಊಹಿಸುವುದು, ಪರರ ಧ್ವನಿ, ಹಾವಭಾವ ಅನುಕರಿಸುವುದು ಇಂತಹ ಆಟಗಳಲ್ಲಿ ಅಥವಾ ವಿನೋದಗಳಲ್ಲಿ ಸಮಣ ಗೋತಮರು ತಲ್ಲೀನರಾಗಿರುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ನೀಡುವ ಆಹಾರ ಸೇವಿಸುತ್ತ ಜೀವಿಸಿಯು ಎತ್ತರವಾದ ಮತ್ತು ಅಗಲವಾದ ಹಾಸಿಗೆಗಳನ್ನು ಬಳಸುತ್ತಾರೆ. ಯಾವುವೆಂದರೆ: ಚಲಿಸುವ ಉದ್ದದ ಸೋಫಾಗಳಲ್ಲಿ ಆನಂದಿಸುವುದು, ಪ್ರಾಣಿ ಚಿತ್ರಗಳ, ಇನ್ನಿತರ ಕಲಾತ್ಮಕ ಫಲಂಗಗಳನ್ನು ಬಳಸುವಿಕೆ, ತುಪ್ಪಳದಿಂದ ಕೂಡಿದ ಮಂಚ, ವರ್ಣವರ್ಣದ ಕಲಾತ್ಮಕ ಹಾಸಿಗೆ, ಶ್ವೇತಕಂಬಳಿ, ಉಣ್ಣೆ ಮತ್ತು ಹೂಗಳಿಂದಾದ ಹಾಸಿಗೆ, ಹತ್ತಿಯಿಂದಾದ ಗಾದಿ, ಕಲಾತ್ಮಕ ಕುಸುರಿ ಕಲೆಯ ಹಾಸಿಗೆಯ ಹೊರಪದರ, ಉಣ್ಣೆ ತುಪ್ಪಳ ಇತ್ಯಾದಿಗಳಿಂದ ಹಾಸಿಗೆ, ಎರಡುಕಡೆಯು ಉಣ್ಣೆ ತುಪ್ಪಳದಿಂದಾದ ಹಾಸಿಗೆ, ರತ್ನಗಳಿಂದಾದ ಅಲಂಕೃತವಾದ ಹಾಸಿಗೆ, ರೇಷ್ಮೆಯ ಹಾಸಿಗೆ, ರತ್ನಗಂಬಳಿ, ಜಿಂಕೆ ಚರ್ಮದ ಹಾಸಿಗೆ, ಗುಡಾರ ಸಮೇತ ಹಾಸಿಗೆ, ಕೆಂಪು ದಿಂಬುಗಳಿಂದ ಕೂಡಿದ ಹಾಸಿಗೆ, ಇಂತಹ ಯಾವುದನ್ನು ಸಮಣ ಗೋತಮರು ಬಳಸುವುದಿಲ್ಲ, ಹೊಂದುವುದಿಲ್ಲ!
                ಅಥವಾ ಅವರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರ ಸೇವಿಸುತ್ತ ಜೀವಿಸಿಯು ಸಹಾ ತುಚ್ಛವಾದ ಈ ರೀತಿಯ ಸಂಭಾಷಣೆಗಳಲ್ಲಿ ತಲ್ಲೀನರಾಗಿರುತ್ತಾರೆ. ಅವೆಂದರೆ: ಯುದ್ಧಗಳ, ಕಥೆಗಳು, ಯುದ್ಧಗಳ ಭಯಾನಕತೆಯ ವಿಷಯಗಳು... ಆಹಾರ ಪಾನೀಯಗಳ ಮಾತುಕತೆ, ವಸ್ತ್ರಗಳ, ಹಾಸಿಗೆಗಳ, ಹಾರಗಳ, ಸೌಗಂಧದ್ರವ್ಯಗಳ ಮಾತುಕತೆ.... ಸಂಬಂಧಗಳ ಚಚರ್ೆ, ಪ್ರವಾಸಗಳ, ಹಳ್ಳಿಗಳ, ಪಟ್ಟಣ, ನಗರಗಳ ಮತ್ತು ದೇಶಗಳ ಬಗ್ಗೆ ಮಾತುಕತೆ; ಸ್ತ್ರೀಯರ ಬಗ್ಗೆ, ವೀರರ ಬಗ್ಗೆ ಕಥೆಗಳು, ಬೀದಿಗಳ, ನೀರಿನ ಸ್ಥಳಗಳ ಬಗ್ಗೆ, ದೆವ್ವಗಳ ಬಗ್ಗೆ ಮಾತುಕತೆ, ಅಸಂಬದ್ಧ ವಿಷಯಗಳು ಭೂ ಸೃಷ್ಟಿಯ ಬಗ್ಗೆ, ಸಾಗರ ಸೃಷ್ಟಿಯ ಬಗ್ಗೆ ಚಚರ್ೆಗಳು, ಇರುವಿಕೆಯ ಬಗ್ಗೆ ಅಥವಾ ಇಲ್ಲದಿರುವಿಕೆಯ ಬಗ್ಗೆ ಚಚರ್ೆ ಮಾಡುತ್ತಿರುತ್ತಾರೆ. ಆದರೆ ಸಮಣ ಗೋತಮರು ಅಂತಹ ನಿರರ್ಥಕ ಚಚರ್ೆ, ಕತೆ, ಮಾತುಕತೆಗಳಲ್ಲಿ ತೊಡಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿಯು ವಾದವಿವಾದದಲ್ಲಿ ತೊಡಗುತ್ತ ಈ ರೀತಿ ಕೂಗಾಡುವರು:
                ನಿನಗೆ ಈ ಸತ್ಯ (ಸಿದ್ಧಾಂತ) ಮತ್ತು ಶಿಸ್ತು ತಿಳಿದಿಲ್ಲ ಅಂದರೆ ನನಗೆ ತಿಳಿದಿದೆ.
                ನಿನಗೆ ಹೇಗೆತಾನೆ ಸಿದ್ಧಾಂತ ಮತ್ತು ಶಿಸ್ತು ತಿಳಿದೀತು ?
                ನೀನು ಮೂಢನಂಬಿಕೆಗಳಲ್ಲಿ ಬಿದ್ದಿದ್ದೀಯೆ, ನಾನೇ ಸರಿಯಾಗಿದ್ದೇನೆ.
                ನಾನು ವಿಷಯದ ಸಾರದಲ್ಲೇ ಮಾತನಾಡುತ್ತಿರುವೆನು. ಆದರೆ ನೀನು ಹಾಗಿಲ್ಲ.
                ನೀನು ಮೊದಲು ಹೇಳಬೇಕಾದುದನ್ನು ಕೊನೆಗೆ ಹೇಳುತ್ತಿರುವೆ ಮತ್ತು ಕೊನೆಗೆ ಹೇಳಬೇಕಾಗಿರುವುದನ್ನು ಮೊದಲು ಹೇಳುತ್ತಿರುವೆ.
                ನೀನು ತುಂಬಾ ಉದ್ದವಾಗಿ ಪರ್ಯಾಲೋಚನೆ (ಕಲ್ಪನೆ) ಮಾಡುತ್ತಿರುವೆ, ಅದು ಎಲ್ಲವನ್ನು ಹಾಳು (ತಲೆಕೆಳಕಾಗಿಸುವುದು) ಮಾಡುವುದು.
                ನಿನ್ನ ಸವಾಲನ್ನು ಸ್ವೀಕರಿಸಿರುವೆ.
                ನೀನು ತಪ್ಪೆಂದು ದೃಢಪಡಿಸಲಾಗಿದೆ.
                ನಿನ್ನ ತಪ್ಪು ದೃಷ್ಟಿಕೋನಗಳನ್ನು ದೂರೀಕರಿಸಲು ಶ್ರಮಪಡು.
                ಈ ಗೋಜುಗಳಿಂದ ಸಾಮಥ್ರ್ಯವಿದ್ದರೆ ಬಿಡಿಸಿಕೋ
                ಆದರೆ ಸಮಣ ಗೋತಮರು ಈ ರೀತಿ ಅಹಂಕಾರದಿಂದ, ನಿರರ್ಥಕ ವಾದವಿವಾದಗಳಲ್ಲಿ ತೊಡಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು, ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸುತ್ತಿದ್ದರೂ, ದೂತರಾಗಿ ಕಾರ್ಯನಿರ್ವಹಿಸುವರು. ಇಲ್ಲಿಯ ಸಂದೇಶ ಅಲ್ಲಿಗೆ ತಲುಪಿಸುವರು, ಅಲ್ಲಿಯದನ್ನು ಇಲ್ಲಿ ನುಡಿಯುವರು, ಮಧ್ಯವತರ್ಿಯಾಗಿ ಕಂಡುಬರುವರು, ಅವರು ರಾಜರ, ಮಂತ್ರಿಗಳ, ಕ್ಷತ್ರಿಯರ, ಬ್ರಾಹ್ಮಣರ, ಯುವಕರ ದೂತರಂತೆ ಕೆಲಸ ಮಾಡುವರು. ಅವರು ಇವರಿಗೆ ಹೀಗೆ ಹೇಳುವರು: ಅಲ್ಲಿಗೆ ಹೋಗು, ಇಲ್ಲಿಗೆ ಬಾ, ಇದನ್ನು ನಿನ್ನೊಂದಿಗೆ ಕೊಂಡು ಹೋಗು, ಅದನ್ನು ಅಲ್ಲಿಂದ ತಾ. ಆದರೆ ಸಮಣ ಗೋತಮರು ಇಂತಹವನ್ನೆಲ್ಲಾ ಮಾಡುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿಯೂ ವಿದೂಷಕತೆಯನ್ನು ಪ್ರದಶರ್ಿಸುವವರು, ಸೋಮಾರಿಗಳು, ಶಕುನ ಹೇಳುವವರು, ದೆವ್ವ ಬಿಡಿಸುವವರು ಆಗಿರುತ್ತಾರೆ. ಆದರೆ ಸಮಣ ಗೋತಮರು ಇಂಥ ನೀಚ ವಿದ್ಯೆಗಳಿಂದ ಹೊರತಾಗಿರುತ್ತಾರೆ.
ಮಹಾ ಶೀಲಗಳು:
                ಅಥವಾ ಪರರು ಹೀಗೂ ಹೇಳಬಹುದು, ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರ ತಿಂದು ಜೀವಿಸಿಯೂ ಸಹಾ ಮಿಥ್ಯಾ ಜೀವನದಿಂದ ಸಿಗುವ ಅರ್ಥದಿಂದ ಜೀವನೋಪಾಯ ನಡೆಸುತ್ತಾರೆ. ಅವು ಯಾವುವೆಂದರೆ: ಹಸ್ತಸಾಮುದ್ರಿಕಾ, ಶಕುನಶಾಸ್ತ್ರ, ಮಿಂಚು ಮುಂತಾದ ಆಕಾಶಕಾಯಗಳ ಉತ್ಪಾದಗಳನ್ನು ಗಮನಿಸಿ ಶಕುನ ನುಡಿಯುವುದು, ಸ್ವಪ್ನಫಲ ಶಾಸ್ತ್ರ, ಶರೀರದ ಅಂಗರಚನೆ ನೋಡಿ ಭವಿಷ್ಯ ನುಡಿಯುವುದು, ಇಲಿಯು ಬಟ್ಟೆ ಕಡಿದಾಗ ಅದನ್ನು ಗಮನಿಸಿ ಭವಿಷ್ಯ ನುಡಿಯುವುದು, ಅಗ್ನಿಹೋಮ (ಅಗ್ನಿಗೆ ಆಹುತಿ ನೀಡುವುದು), ಡಬ್ಬ (ಚರ್ಮದಿಂದ) ಹೋಮ ಆಚರಿಸುವುದು, ಯಜ್ಞ ಕುಂಡದಲ್ಲಿ ದೇವತೆಗಳಿಗೆ ಕುಂಕುಮ, ಧಾನ್ಯ, ಹೊಟ್ಟು, ತುಪ್ಪ, ಎಣ್ಣೆ ಇತ್ಯಾದಿಗಳನ್ನು ಸುರಿಸುವುದು, ಬಾಯಿಯಿಂದ ಯಗ್ನಕುಂಡಕ್ಕೆ ಸಾಸುವೆಗಳನ್ನು ಕಕ್ಕುವುದು, ಮೊಣಕಾಲಿನ ರಕ್ತವನ್ನು ದೇವತೆಗಳಿಗೆ ಅಪರ್ಿಸುವುದು, ಬೆರಳಿನ ಗಿಣ್ಣು ನೋಡಿಯೇ ಆತನು ಅದೃಷ್ಟವಂತನೋ ಅಥವಾ ದುರಾದೃಷ್ಟವಂತನೋ ಎಂದು ಹೇಳುವುದು, ಭೂಮಿ ನೋಡಿ ಇದು ಅದೃಷ್ಟಕರವೋ ಅಥವಾ ದುರಾದೃಷ್ಟಕರವೋ ಎಂದು ಹೇಳುವುದು, ಕ್ಷೇತ್ರ (ಭೂ) ವಿದ್ಯೆಗಳು, ಶಿವವಿದ್ಯೆ (ನರಿಗಳ ಕೂಗು ಕೇಳಿ ಶಕುನ ನುಡಿಯುವಿಕೆ), ಭೂತವಿದ್ಯೆ (ವಾಮಾಚಾರ), ಭೂರಿವಿದ್ಯೆ (ಮನೆಯಲ್ಲಿ ಬಳಸುವ ಮಂತ್ರವಿದ್ಯೆ) ಅಹಿವಿದ್ಯೆ (ಸರ್ಪಗಳ ವಶೀಕರಣ ವಿದ್ಯೆ), ವಿಷ ಇಳಿಸುವ ವಿದ್ಯೆ), ಚೇಳಿನ ಕಡಿತದ ನಿವಾರಣೆ ವಿದ್ಯೆ, ಇಲಿಯ ಭಾಷೆ ವಿದ್ಯೆ, ಪಕ್ಷಿ ಭಾಷೆ ವಿದ್ಯೆ, ಕಾಗೆಯ ಕೂಗಿನ ಶಕುನ ವಿದ್ಯೆ, ಆಯಸ್ಸನ್ನು ಹೇಳುವ ವಿದ್ಯೆ, ಬಾಣಗಳಿಂದ ತಪ್ಪಿಸಿಕೊಳ್ಳುವ ಮಂತ್ರವಿದ್ಯೆ, ಎಲ್ಲಾ ಮೃಗಗಳ ಭಾಷೆ ವಿದ್ಯೆ ಇಂತಹ ಎಲ್ಲಾ ನೀಚ ವಿದ್ಯೆಗಳಿಂದ ಸಮಣ ಗೋತಮರು ದೂರವಿರುತ್ತಾರೆ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಜನರು ಶ್ರದ್ಧೆಯಿಂದ ನೀಡುವ ಆಹಾರ ಸೇವಿಸುತ್ತ ಜೀವಿಸಿಯು ಮಿಥ್ಯಾ ಜೀವನೋಪಾಯ ನಡೆಸುತ್ತಾರೆ ಅವೆಂದರೆ: ಕೆಲವು ವಸ್ತುಗಳು ಮತ್ತು ಜೀವಿಗಳ ಲಕ್ಷಣಗಳನ್ನು ಗಮನಿಸಿ ಅದರಿಂದ ಅದೃಷ್ಟ ಅಥವಾ ದುರಾದೃಷ್ಟ ಎಂದು ಭವಿಷ್ಯ ನುಡಿಯುವಿಕೆ. ಉದಾಹರಿಸುವುದಾದರೆ, ಹರಳುಗಳು, ರತ್ನಗಳು, ದೋಣಿಯ ಅಥವಾ ಪಿಪಾಯಿಯ ರಂಧ್ರಗಳನ್ನು ನೋಡಿ ಭವಿಷ್ಯ ನುಡಿಯುವುದು, ಹಾಗೆಯೇ ವಸ್ತ್ರಗಳು, ಖಡ್ಗಗಳು, ಬಾಣಗಳು, ಬಿಲ್ಲುಗಳು, ಶಸ್ತ್ರಗಳು, ಸ್ತ್ರೀ ಪುರುಷ, ಬಾಲಕ, ಬಾಲಕಿ, ಸೇವಕ, ಸೇವಕಿ, ಗಜ, ಅಶ್ವ, ಕೋಣ, ಕುರಿ, ಮೇಕೆ, ಕೋಳಿ, ಹುಂಜ, ಉಡ, ಆಮೆ ಮತ್ತಿತರ ಪ್ರಾಣಿಗಳ ಲಕ್ಷಣ ಗಮನಿಸಿ ಶುಭ ಅಶುಭ ಎಂದು ನುಡಿಯುವಿಕೆ. ಆದರೆ ಸಮಣ ಗೋತಮರು ಇಂತಹ ನೀಚ ವಿದ್ಯೆಗಳಲ್ಲಿ ನಿರತರಾಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಶ್ರದ್ಧೆಯಿಂದ ಪರರು ನೀಡುವ ಆಹಾರ ತಿಂದು ಜೀವಿಸಿಯು ಮಿಥ್ಯಾ ಮಾರ್ಗಗಳಿಂದ ಜೀವನೋಪಾಯ ಮಾಡುತ್ತಿದ್ದಾರೆ. ಅವೆಂದರೆ: ಸೇನಾನಾಯಕರು ಇಂತಹ ವೇಳೆಯಲ್ಲೇ ಹೊರ ಹೋಗುವರು, ಹಿಂತಿರುಗುವರು, ದೇಶ ಸೈನ್ಯ ಇಂತಹ ವೇಳೆಯಲ್ಲೇ ಆಕ್ರಮಣ ಮಾಡುವರು ಮತ್ತು ಶತ್ರುಸೈನ್ಯ ಇಂತಹ ವೇಳೆಯಲ್ಲೇ ಪಲಾಯನ ಮಾಡುವರು. ಅಥವಾ ಇಂತಹ ವೇಳೆಯಲ್ಲೇ ಶತ್ರುಸೈನ್ಯ ಆಕ್ರಮಣ ಮಾಡುವರು ಹಾಗು ದೇಶ ಸೈನ್ಯವು ಪಲಾಯನ ಮಾಡುವರು, ಇಲ್ಲಿಯವರು ಗೆಲ್ಲುವರು, ಪರರು ಸೋಲುವರು ಅಥವಾ ಪರರು ಗೆಲ್ಲುವರು, ಇಲ್ಲಿಯವರು ಸೋಲುವರು ಎಂದೆಲ್ಲಾ ಭವಿಷ್ಯ ನುಡಿಯುವರು. ಆದರೆ ಸಮಣ ಗೋತಮರು ಇಂತಹ ನೀಚವೃತ್ತಿಗಳಲ್ಲಿ ತೊಡಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ದಾನ ಸ್ವೀಕರಿಸಿಯೂ ಸಹಾ ಮಿಥ್ಯಾ ಮಾರ್ಗದಿಂದ ಜೀವನೋಪಾಯ ನಡೆಸುತ್ತಾರೆ. ಹೇಳುವುದಾದರೆ: ಇಂತಹ ದಿನದಲ್ಲಿ ಚಂದ್ರಗ್ರಹಣ, ಸೂರ್ಯಗ್ರಹಣ, ನಕ್ಷತ್ರಗ್ರಹಣ, ಚಂದ್ರನ ಪಥ ಭ್ರಷ್ಟತೆ, ಸೂರ್ಯನ ಪಥ ಭ್ರಷ್ಟತೆ, ಪುನಃ ನಿಗದಿತ ಪಥಚಲನೆ, ನಕ್ಷತ್ರಗಳ ಪಥಭ್ರಷ್ಟತೆ, ಪುನಃ ನಿಗಧಿತ ಪಥಚಲನೆ ಆಗುತ್ತದೆ ಎಂದು ಭವಿಷ್ಯ ನುಡಿಯುವುದು, ಹಾಗೆಯೇ ಉಲ್ಕೆಗಳ ಬೀಳುವಿಕೆ, ಕಾಡ್ಗಿಚ್ಚು ಮುನ್ಸೂಚನೆ, ಭೂಕಂಪ, ಸಿಡಿಲಿನ ಬಗ್ಗೆ ಹೇಳುವಿಕೆ. ಹಾಗೆಯೇ ಸೂರ್ಯ, ಚಂದ್ರ, ನಕ್ಷತ್ರಗಳ ಉದಯಕಾಲ, ಅಸ್ತಕಾಲ, ಪ್ರಕಾಶಕಾಲ, ಮಂಪುಕಾಲ... ಹೀಗೆ ಈ ಆಕಾಶಕಾಯಗಳ ಬಗ್ಗೆ ಸ್ಥಿತಿಗತಿ, ಪರಿಣಾಮವೆಲ್ಲಾ ವಿವರಿಸುವಂತಹ ನೀಚ ವೃತ್ತಿಗಳಲ್ಲಿ ಸಮಣ ಗೋತಮರು ತೊಡಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸುತ್ತ ಇದ್ದರೂ ಸಹಾ, ನಾನಾರೀತಿಯ ಮಿಥ್ಯಾ ಮಾರ್ಗದಲ್ಲಿ ಜೀವನೋಪಾಯ ನಡೆಸುತ್ತ ನೀಚ ವೃತ್ತಿಗಳಲ್ಲಿ ತೊಡಗುತ್ತಾರೆ ಅವೆಂದರೆ: ಹೇರಳವಾದ ಮಳೆಯ ಬಗ್ಗೆ ಮುನ್ಸೂಚನೆ, ಮಳೆಯ ಕೊರತೆಯ ಬಗ್ಗೆ ಮುನ್ಸೂಚನೆ, ಹೇರಳ ಪೈರಿನ ಬಗ್ಗೆ ಮುನ್ಸೂಚನೆ, ಆಹಾರದ ಕೊರತೆಯಲ್ಲಿ ಭವಿಷ್ಯ ನುಡಿಯುವಿಕೆ, ಶಾಂತ ಸಾಮಾಜಿಕ ಜೀವನದ ಬಗ್ಗೆ, ಜೀವನದಲ್ಲಿ ಬರುವ ತೊಂದರೆಗಳ ಬಗ್ಗೆ, ಅಂಟುರೋಗಗಳ ಬಗ್ಗೆ ಆರೋಗ್ಯಕರ ಋತುವಿನ ಬಗ್ಗೆ, ಮುದ್ರೆಗಳ ಬಗ್ಗೆ, ಸಾಂಖ್ಯಗಳ ಬಗ್ಗೆ, ಕಾವ್ಯಗಳ ಬಗ್ಗೆ, ಲೇಖನಗಳ ಬಗ್ಗೆ, ಲೋಕಾಯತದ ಬಗ್ಗೆ, ಇನ್ನಿತರ ಶಾಸ್ತ್ರದಲ್ಲಿ ತೊಡಗುವಂತಹ ನೀಚ ವೃತ್ತಿಗಳಲ್ಲಿ ತೊಡಗುತ್ತಾರೆ. ಆದರೆ ಸಮಣ ಗೋತಮರು ಇಂತಹ ನೀಚ ವೃತ್ತಿಗಳಲ್ಲಿ ತೊಡಗುವುದಿಲ್ಲ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು, ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿದರೂ ಸಹಾ, ಮಿಥ್ಯಾ ಮಾರ್ಗದಲ್ಲಿ ಜೀವನೋಪಾಯ ನಡೆಸುತ್ತಾರೆ. ಅವೆಂದರೆ : ವಧು-ವರರಿಗೆ ಶುಭದಿನ ಗೊತ್ತುಮಾಡುವುದು, ಅವರ ಆಗಮನ, ನಿರ್ಗಮನಕ್ಕೆ ಶುಭದಿನ ಗೊತ್ತುಮಾಡುವಿಕೆ, ಶಾಂತಿ ಮಾಡಿಸುವಿಕೆ, ದ್ವೇಷ ಶಮನಕ್ಕೆ ಶುಭದಿನ ನಿರ್ಧರಿಸುವಿಕೆ, ಸಾಲ ತೆಗೆದುಕೊಳ್ಳಲು, ತೀರಿಸಲು ಶುಭ ದಿನವನ್ನು ದಾಳಗಳಿಂದ ನಿರ್ಧರಿಸುವುದು, ಹಣ ಖಚರ್ು ಮಾಡಲು ಶುಭದಿನ ನಿಗದಿಮಾಡುವುದು. ಜನರ ಶುಭಕ್ಕಾಗಿ ಮಂತ್ರ ಪ್ರಯೋಗ, ಜನರಿಗೆ ಹಾಳು ಮಾಡಲು ಮಂತ್ರ ಪ್ರಯೋಗ, ಗರ್ಭಪಾತವಾಗಲು ಮಂತ್ರ ಪ್ರಯೋಗ, ಕಿವುಡನಾಗಲು ಮಾಟ, ದವಡೆ ತೆರೆಯದಂತೆ ಮಾಟ, ಕೈಗಳು ಬಿದ್ದುಹೋಗಲು ಮಾಟ, ಮೂಕನಾಗಿಸಲು ಮಾಟ, ಮಾಯ ಕನ್ನಡಿಯಲ್ಲಿ ದೇವತೆಗಳಿಂದ ಪ್ರಶ್ನೆಗಳ ಉತ್ತರ ಪಡೆಯುವ ಅದಾಸಪನ್ಹೊ, ಕುಮಾರಿಯಲ್ಲಿ ದೇವತೆಗೆ ಅವಾಹಿಸಿ ಉತ್ತರ ಪಡೆಯುವಿಕೆ, ದೇವತೆಗಳಿಂದ ನೇರವಾಗಿ ಉತ್ತರ ಪಡೆಯುವಿಕೆ, ಸೂರ್ಯನ ಆರಾಧನೆ (ಆದಿಕ್ಕುಪಥ್ಥನಂ) ಮಹಾ (ಬ್ರಹ್ಮನ) ಆರಾಧನೆ, ಬಾಯಿಂದ ಜ್ವಾಲೆಗಳನ್ನು ತರಿಸುವಿಕೆ, ಸಿರಿದೇವಿ (ಲಕ್ಷ್ಮಿ)ಯನ್ನು ಆವಾಹಿಸುವಿಕೆ, ಇಂತಹವನ್ನೆಲ್ಲಾ ಮಾಡುವರು. ಆದರೆ ಸಮಣ ಗೋತಮರು ಇಂಥ ನೀಚ ವೃತ್ತಿಗಳಿಂದ ದೂರವಿರುತ್ತಾರೆ.
                ಅಥವಾ ಪರರು ಹೀಗೂ ಹೇಳಬಹುದು: ಕೆಲವು ಸಮಣ ಬ್ರಾಹ್ಮಣರು ಪರರು ಶ್ರದ್ಧೆಯಿಂದ ನೀಡುವ ಆಹಾರದಿಂದ ಜೀವಿಸಿಯೂ ಮಿಥ್ಯಾ ಜೀವನೋಪಾಯದಿಂದ ಜೀವಿಸುತ್ತಾರೆ. ಮೂಢನಂಬಿಕೆಗಳಿಂದ ಜೀವಿಸುತ್ತಾರೆ. ಹೇಗೆಂದರೆ: ದೇವತೆಗಳಲ್ಲಿ ಹರಕೆ ಹೊತ್ತುವಿಕೆ, ಕಾರ್ಯವಾದ ನಂತರ ಆ ಹರಕೆಗಳನ್ನು ತೀರಿಸುವಿಕೆ, ಮಣ್ಣಿನ ಮನೆಯಲ್ಲಿ ಮಂತ್ರಗಳನ್ನು ಪಠಿಸುವಿಕೆ, ಪೌರುಷತ್ವ ಪಡೆಯುವಂತೆ ಮಾಡುವುವು, ನಪುಂಸತ್ವ ಮೂಡಿಸುವಿಕೆ, ವಾಸಿಸಲು ಭಾಗ್ಯಯುತ ಮನೆ ಹುಡುಕುವಿಕೆ; ವಾಸ್ತುವಿದ್ಯೆ, ಬಾಯಿ ಮುಕ್ಕಳಿಸುವ ಸಮಾರಂಭ, ಸ್ನಾನ ಸಮಾರಂಭ, ಯಾಗ-ಯಜ್ಞ, ವಾಂತಿ-ಬೇಧಿ ಮಾಡಿಸುವಿಕೆ, ಸೀನಿಸುವಿಕೆ, ಕಿವಿಯಲ್ಲಿ ಎಣ್ಣೆ ಬಿಡುವಿಕೆ, ಕಣ್ಣಿಗೆ ಮದ್ದು ಹಾಕುವಿಕೆ, ಮೂಗಿಗೆ ಔಷಧಿಜಲ ಬಿಡುವಿಕೆ, ಕಣ್ಣಿಗೆ ಅಂಜನ ಬಳಿಯುವಿಕೆ ಮತ್ತು ಔಷಧಿಯ ಲೇಪನ ಹಾಕುವಿಕೆ, ನೇತ್ರಜ್ಞನಾಗುವಿಕೆ, ಶಸ್ತ್ರವೈದ್ಯನಾಗುವಿಕೆ, ಮಕ್ಕಳ ತಜ್ಞನಾಗುವಿಕೆ, ಗಿಡಮೂಲಿಕೆ ಔಷಧಿಗಳನ್ನು ನಿರ್ವಹಿಸುವಿಕೆಗಳನ್ನೆಲ್ಲಾ ಮಾಡುತ್ತಾರೆ. ಆದರೆ ಸಮಣ ಗೋತಮರು ಇಂತಹ ಅಲ್ಪ ವೃತ್ತಿಗಳಿಂದ ಜೀವನೋಪಾಯ ಮಾಡುವುದಿಲ್ಲ.
                ಇವೇ ಭಿಕ್ಷುಗಳೇ, ಕ್ಷುಲ್ಲಕ ವಿಷಯಗಳಾಗಿವೆ. ಇವು ಕೇವಲ ಶೀಲಗಳ ಸಂಕ್ಷಿಪ್ತ ವಿವರಣೆಯಾಗಿದೆ. ಇಂತಹ ಉದಾಹರಣೆಗಳಿಂದ ಪರಿವತರ್ಿತನಾಗದ ಮನುಷ್ಯನೊಬ್ಬನು ತಥಾಗತರಿಗೆ ಪ್ರಶಂಸಿಸುತ್ತಾನೆ.
                ಭಿಕ್ಷುಗಳೇ, ಕೆಲವು ಬೇರೆ ವಿಷಯಗಳಿವೆ. ಅವು ಉದಾತ್ತವಾದುದು, ಅರಿಯಲು ಕಷ್ಟಕರವಾದುದು, ಪ್ರಶಾಂತವಾದುದು, ಮಧುರವಾದುದು, ತಕರ್ಾತೀತವಾದುದು, ಪರಮ ಸೂಕ್ಷ್ಮವಾದುದು, ಕೇವಲ ಜ್ಞಾನಿಗಳಿಂದಲೇ ಅರಿಯುವಂತಹುದು. ಈ ವಿಷಯಗಳೆಲ್ಲ ತಥಾಗತರು ತಮ್ಮಿಂದಲೇ ನೇರವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾರೆ ಮತ್ತು ಈ ರೀತಿಯಾಗಿ ಯಾರು ತಥಾಗತರಿಗೆ ಪ್ರಶಂಸಿಸುವರೋ ತಥಾಗತರಿಗೆ ಅವರು ಸತ್ಯಕ್ಕೆ ಅನುಸಾರವಾಗಿ ಹೇಳುವರು ಮತ್ತು ಅವು ಯಾವುವು?
                ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಅವರು ಚರಮ ಆದಿಯ ವಿಷಯಗಳನ್ನು ಮರು ನಿಮರ್ಿಸಲು ಹೊರಟಿದ್ದಾರೆ. ಅವರ ಊಹಾಪೋಹಗಳ ದೃಷ್ಟಿಕೋನಗಳು ಕೇವಲ ಹಿಂದಿನದನ್ನು ಮಹತ್ವ ನೀಡಿದೆ ಮತ್ತು ಇದಕ್ಕಾಗಿ ಅವರು ಹದಿನೆಂಟು ಆಧಾರಗಳನ್ನು (ನೆಲೆಗಳನ್ನು) ನೀಡುತ್ತಾರೆ ಮತ್ತು ಯಾವುದರ ಬಗ್ಗೆ, ಯಾವುದನ್ನು ಉಲ್ಲೇಖಿಸುತ್ತಾರೆ. ಇವುಗಳ ಬಗ್ಗೆ ಅವರೇನು ಹೇಳುವರು.
4 ಬಗೆಯ ಶಾಶ್ವತವಾದ
                ಕೆಲವರಿದ್ದಾರೆ ಭಿಕ್ಷುಗಳೆ, ಕೆಲವು ಸಮಣ ಬ್ರಾಹ್ಮಣರು ಶಾಶ್ವತವಾದವನ್ನು ಮಂಡಿಸುತ್ತಾರೆ ಮತ್ತು ಅವರಿಗೆ ಹಾಗೆ ಹೇಳಲು ನಾಲ್ಕು ನೆಲೆಗಳಿವೆ. ಇದರಿಂದಾಗಿ ಅವರು ಆತ್ಮವೂ ಶಾಶ್ವತ ಮತ್ತು ಲೋಕವು ಶಾಶ್ವತ ಎನ್ನುತ್ತಾರೆ. ಯಾವುದರ ನೆಲೆಯಿಂದಾಗಿ ಅವರು ಹೀಗೆ ವಾದ ಮಂಡಿಸುತ್ತಾರೆ.
                ಇಲ್ಲಿ ಕೆಲವು ಸಮಣ ಬ್ರಾಹ್ಮಣರು ಧ್ಯಾನದಿಂದಾಗಿ, ಎಚ್ಚರಿಕೆಯಿಂದಾಗಿ, ಯೋಗ್ಯವಾದ ಗಮನಹರಿಸುವಿಕೆಯಿಂದಾಗಿ, ಚೇತೋ ಸಮಾಧಿಯನ್ನು ಪಡೆಯುತ್ತಾರೆ. ಅಂತಹ ಸಮಾಹಿತವಾದ ಚಿತ್ತದಿಂದಾಗಿ ಅವರು ತಮ್ಮ ಹಿಂದಿನ ಜನ್ಮಗಳನ್ನು ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ಒಂದು ಜನ್ಮ, ಎರಡು ಅಥವಾ ಮೂರು ಅಥವಾ ನಾಲ್ಕು ಅಥವಾ ಐದು ಅಥವಾ ಹತ್ತು ಜನ್ಮಗಳನ್ನು ಅಥವಾ ಇಪ್ಪತ್ತು ಜನ್ಮಗಳನ್ನು ಮೂವತ್ತು ಅಥವಾ ನಲವತ್ತು ಅಥವಾ ಐವತ್ತು ಅಥವಾ ನೂರು ಅಥವಾ ಸಾವಿರ ಅಥವಾ ಲಕ್ಷ ಹೀಗೆ ಜನ್ಮಗಳನ್ನು ಸ್ಮರಿಸುತ್ತಾನೆ. ಆಗ ಹೀಗೆ ಯೋಚಿಸುತ್ತಾನೆ: ಅಲ್ಲಿ ಆ ಜನ್ಮದಲ್ಲಿ ನನಗೆ ಅಂತಹ ಹೆಸರಿತ್ತು, ಅಂತಹ ವಂಶವಿತ್ತು, ಅಂತಹ ಗೋತ್ರವಿತ್ತು, ಇಂತಿಂತಹ ಆಹಾರವನ್ನು ನಾನು ಆಗ ಸೇವಿಸಿದ್ದೆನು. ಇಂತಿಂಥ ಸುಖ-ದುಃಖಗಳನ್ನು ಅನುಭವಿಸಿದ್ದೆನು. ಇಷ್ಟಿಷ್ಟು ಕಾಲ ಜೀವಿಸಿದ್ದೆನು ಮತ್ತು ಅಲ್ಲಿಂದ ಮರಣಿಸಿ, ಇನ್ನೊಂದೆಡೆ ಜನ್ಮಿಸಿದೆನು. ಅಲ್ಲಿಯೂ ಹೀಗೆ ಸುಖ-ದುಃಖಗಳನ್ನು ಅನುಭವಿಸಿ, ಇಷ್ಟು ವರ್ಷಕಾಲ ಜೀವಿಸಿದ್ದೆನು. ಅಲ್ಲಿಂದ ಜಾರಿ ಇಲ್ಲಿ ಜನ್ಮಿಸಿದೆನು. ಹೀಗೆ ಆತನು ವಿವರವಾಗಿ ಸ್ಥಿತಿಗಳನ್ನು ಎಲ್ಲವನ್ನು ವೀಕ್ಷಿಸಿ, ತನಗೆತಾನೇ ಹೀಗೆ ಹೇಳಿಕೊಳ್ಳುತ್ತಾನೆ: ಆತ್ಮವು ಶಾಶ್ವತವಾಗಿದೆ ಮತ್ತು ಲೋಕವು ಸಹಾ ಶಾಶ್ವತವಾಗಿದೆ. ಇಲ್ಲಿ ಯಾವುದೇ ಹೊಸತನಕ್ಕೆ ಜನ್ಮ ನೀಡಲಿಲ್ಲ. ಇವೆಲ್ಲವೂ ಪರ್ವತ ಶಿಖರದ ಹಾಗೆ ಅಥವಾ ಸ್ಥಂಭದ ಹಾಗೆ ಸ್ಥಿರವಾಗಿದೆ ಮತ್ತು ಜೀವಿಗಳು ಪದೇಪದೇ ಪುನರ್ಜನ್ಮಿಸಬಹುದು, ಸಾಯಬಹುದು. ಆದರೂ ಸಹಾ ಅವು ಎಂದಿಗೂ ಎಂದೆಂದಿಗೂ ಇರುತ್ತವೆ ಮತ್ತು ಏಕೆ ಹೀಗೆ? ಏಕೆಂದರೆ ನಾನು ಧ್ಯಾನದಿಂದ, ಎಚ್ಚರಿಕೆಯಿಂದ, ಯೋಗ್ಯವಾದ ಗಮನಹರಿಸುವಿಕೆಯಿಂದ ಸಮಾಧಿ ಸಾಧಿಸಿ ನನ್ನ ಮನಸ್ಸನ್ನು ಹಿಂದಿನ ಜನ್ಮಗಳನ್ನು ಸ್ಮರಿಸಿ ಅಸಂಖ್ಯಾತ ಜನ್ಮಗಳನ್ನು ವೀಕ್ಷಿಸಿದ್ದೇನೆ. ಆದ್ದರಿಂದಾಗಿ ನಾನು ಆತ್ಮವು ಶಾಶ್ವತ ಮತ್ತು ಲೋಕವು ಶಾಶ್ವತ ಎಂದು ಹೇಳುತ್ತಿದ್ದೇನೆ. ಇಲ್ಲಿ ಯಾವುದು ಹೊಸದಾಗಿ ಜನ್ಮ ನೀಡಲಾರದು ಪರ್ವತಶಿಖರದಂತೆ ಅಥವಾ ದೃಢ ಸ್ತಂಭದಂತೆ ಶಾಶ್ವತವಾಗಿದೆ. ಇಲ್ಲಿ ಜೀವಿಗಳು ಪುನರ್ಜನ್ಮಿಸುತ್ತಲೇ ಇರುತ್ತವೆ. ಮರಣಿಸುತ್ತ ಪುನಃ ಜನಿಸುತ್ತಿರುತ್ತದೆ. ಹೀಗಾಗಿ ಅವು ಎಂದೆಂದಿಗೂ ಇರುತ್ತದೆ.
                ಇದೇ ಭಿಕ್ಷುಗಳೇ, ವಿಷಯಗಳ ಪ್ರಥಮ ಸ್ಥಿತಿಯಾಗಿದೆ. ಇದರಿಂದಾಗಿಯೇ ಕೆಲವು ಸಮಣ ಬ್ರಾಹ್ಮಣರು ಶಾಶ್ವತವಾದಿಗಳಾಗಿ ಆತ್ಮವು ಶಾಶ್ವತ ಮತ್ತು ಲೋಕವು ಶಾಶ್ವತ ಎಂದು ಪ್ರತಿಪಾದಿಸುತ್ತಾರೆ.
                (ಎರಡನೆಯ ಅವಸ್ಥೆಯಲ್ಲಿ ಮೊದಲಿನ ಹಾಗೆ ಎಲ್ಲವೂ ಹಾಗೇ ಇರುತ್ತದೆ. ಆದರೆ ಇಲ್ಲಿ ಪೂರ್ವ ಜನ್ಮಗಳಿಗೆ ಸ್ಮರಣೆ ಇಲ್ಲಿ ದಶಲೋಕ ಕಲ್ಪಗಳನ್ನು ಸ್ಮರಣೆ ಮಾಡಿಕೊಳ್ಳುತ್ತಾರೆ).
                (ಮೂರನೆಯ ಅವಸ್ಥೆಯಲ್ಲಿ ಮೊದಲಿನ ಹಾಗೇ ಎಲ್ಲವೂ ಹಾಗೆಯೇ ಇರುತ್ತದೆ. ಆದರೆ ಇಲ್ಲಿ ಪೂರ್ವಜನ್ಮಗಳ ಸ್ಮರಣೆ 40 ಲೋಕ ಕಲ್ಪಗಳಷ್ಟು (ಸಂವಿಟ್ಠ-ವಿವಟ್ಠ) ನೆನೆಸಿಕೊಳ್ಳುತ್ತಾನೆ.)
                (ನಾಲ್ಕನೆಯ ಅವಸ್ಥೆಯಲ್ಲಿ, ಭಿಕ್ಷುಗಳೇ, ಇಲ್ಲಿ ಸಮಣ ಬ್ರಾಹ್ಮಣರು ತರ್ಕ ಮತ್ತು ವಿಮಶರ್ೆಗೆ ಅಂಟಿದ್ದು, ತರ್ಕ ಲೆಕ್ಕಾಚಾರವೆಲ್ಲಾ ಹಾಕಿ ಕೊನೆಗೆ ಈ ನಿಧರ್ಾರ ತಲುಪುತ್ತಾರೆ. ಅದೇನೆಂದರೆ ಆತ್ಮವು ಶಾಶ್ವತ ಮತ್ತು ಲೋಕವು ಶಾಶ್ವತ, ಇಲ್ಲಿ ಹೊಸದೊಂದು ಯಾವುದೂ ಸೃಷ್ಟಿಯಾಗುತ್ತಿಲ್ಲ. ಹೇಗೆ ಪರ್ವತಶಿಖರ ಅಥವಾ ದೃಢಸ್ಥಂಭದ ಹಾಗೆ ಎಲ್ಲವೂ ಶಾಶ್ವತವಾಗಿ, ಎಲ್ಲಾ ಜೀವಿಗಳು ಮರಣಿಸಿ ಪುನಃ ಇನ್ನೊಂದು ಸ್ಥಿತಿಯಲ್ಲಿ ಜನಿಸುತ್ತದೆ. ಈ ಕ್ರಿಯೆ ಹೀಗೆ ನಿರಂತರ ನಡೆಯುತ್ತಲೇ ಇರುತ್ತದೆ.
                ಇದೇ ಭಿಕ್ಷುಗಳೇ, ಈ ನೆಲೆಗಳಿಂದಾಗಿ ಕೆಲವು ಸಮಣ ಬ್ರಾಹ್ಮಣರು ತಮ್ಮ ಶಾಶ್ವತವಾದವಾದ ಆತ್ಮವು ಶಾಶ್ವತ ಮತ್ತು ಲೋಕವು ಶಾಶ್ವತ ಎಂದು ಪ್ರತಿಪಾದಿಸುತ್ತಾರೆ.
                ಇದೇ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಶಾಶ್ವತವಾದವನ್ನು ಪ್ರತಿಪಾದಿಸುತ್ತಾರೋ ಅವರು ನಾಲ್ಕು ಆಧಾರಗಳಿಂದ ಆತ್ಮವೂ ಮತ್ತು ಲೋಕವು ಶಾಶ್ವತ ಎಂದು ಹೇಳುತ್ತಾರೆ. ಯಾರೆಲ್ಲರೂ ಹೀಗೆ ಹೇಳುತ್ತಾರೋ ಅವರಿಗೆ ಈ ನಾಲ್ಕರ ಅಥವಾ ಇವುಗಳಲ್ಲಿ ಒಂದರ ಆಧಾರದಲ್ಲಿ ಹೀಗೆ ಹೇಳುತ್ತಾರೆ. ಇದರ ಹೊರತು ಅವರ ಅಭಿಪ್ರಾಯಗಳಿಗೆ ಬೇರೆ ಹಾದಿಯಿಲ್ಲ.
                ಈಗ ಇವುಗಳಲ್ಲಿ ಭಿಕ್ಷುಗಳೇ, ಈ ಊಹಾಪೋಹಗಳು, ಸಿದ್ಧಾಂತಗಳು ಹೇಗೆ ಬಂದಿತು ಮತ್ತು ಹೇಗೆ ದೃಢವಾಯಿತು, ಅವುಗಳ ಪರಿಣಾಮಗಳೇನು? ಯಾವುದನ್ನು ನಂಬಿದವರಿಂದಾಗಿ ಎಂತೆಂತಹ ಪರಿಣಾಮಗಳು ಅವರಿಗೆ ಭವಿಷ್ಯದಲ್ಲಿ ದೊರಕುವುವು ಎಂದೆಲ್ಲಾ ತಥಾಗತರಿಗೆ ತಿಳಿದಿದೆ. ಇವುಗಳನ್ನು ಅರಿತಿರುವುದಷ್ಟೇ ಅಲ್ಲ, ಇದನ್ನು ಮೀರಿದ, ದಾಟಿದ ಇನ್ನೆಷ್ಟೋ ವಿಷಯಗಳನ್ನು ತಥಾಗತರು ಅರಿತಿದ್ದಾರೆ. ಆದರೆ ಅಂತಹ ಗಂಭೀರ ಜ್ಞಾನದಿಂದಲೂ ಅವರು ಉಬ್ಬಿಹೋಗುವುದಿಲ್ಲ ಮತ್ತು ಹೀಗೆ ಯಾರಿಗೂ ಅವಲಂಬಿತವಾಗದೆ, ತಮಗೆ ತಾವೇ ಆಧಾರವಾಗಿರುತ್ತಾರೆ. ಪರರಿಗಾಗಿ ವಿಮುಕ್ತಿಯ ಹಾದಿಯನ್ನು ಸಾಕ್ಷಾತ್ಕರಿಸಿದ್ದಾರೆ, ಅರಿತಿದ್ದಾರೆ. ಸತ್ಯವನ್ನು ಅದು ಹೇಗಿದೆಯೋ ಹಾಗೆಯೇ ಅರಿತಿದ್ದಾರೆ. ಅವುಗಳ ಉದಯ ವ್ಯಯವನ್ನು, ಅವುಗಳ ರುಚಿ, ಅವುಗಳ ಅಪಾಯ, ಅವು ಹೇಗೆ ನಂಬಿಕೆಗೆ ಅರ್ಹವಲ್ಲವೆಂಬುದನ್ನು ಅರಿತು, ಅವುಗಳಲ್ಲಿ ಯಾವುದಕ್ಕೂ ಅಂಟದೆ ತಥಾಗತರು ಮುಕ್ತರಾಗಿದ್ದಾರೆ.
                ಇದೇ ಭಿಕ್ಷುಗಳೇ, ಆ ಪರ ವಿಷಯಗಳು, ಉದಾತ್ತವಾದುದು, ಅರಿಯಲು ಕಡುಕಷ್ಟವಾಗಿರುವಂತಹುದು, ಪ್ರಶಾಂತತೆ ನೀಡುವಂತಹುದು, ಮಧುರವಾದುದು, ಕೇವಲ ತರ್ಕದಿಂದಲೇ ಹಿಡಿತಕ್ಕೆ ಸಿಗಲಾರದಂತಹುದು, ಪರಮಸೂಕ್ಷ್ಮವಾದುದು, ಕೇವಲ ಪ್ರಾಜ್ಞರಿಂದಲೇ ಅರಿಯುವಂತಹುದು, ಅದನ್ನು ತಥಾಗತರು ತಾವಾಗಿಯೇ, ನೇರವಾಗಿ ಎದುರುಬದುರಾಗಿ ಸಾಕ್ಷಾತ್ಕರಿಸಿರುವರು ಮತ್ತು ಈ ವಿಷಯಗಳಲ್ಲಿ ನಿಜಕ್ಕೂ ಯೋಗ್ಯವಾಗಿ ತಥಾಗತರನ್ನು ಸತ್ಯಕ್ಕೆ ಅನುಗುಣವಾಗಿ ಜ್ಞಾನಿಗಳು ಪ್ರಶಂಸುತ್ತಿದ್ದಾರೆ.
ನಾಲ್ಕುಬಗೆಯ ಎಕಚ್ಚ ಶಾಶ್ವತವಾದಿಗಳು (ಪಾರ್ಶ ಶಾಶ್ವತವಾದಿಗಳು):
                ಇಲ್ಲಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಅವರು ಕೆಲವು ವಿಷಯಗಳಿಗೆ ಶಾಶ್ವತವಾದಿಗಳಾಗಿದ್ದಾರೆ. ಮತ್ತೆ ಕೆಲವು ವಿಷಯಗಳಿಗೆ ಶಾಶ್ವತವಾದಿಗಳಾಗಿಲ್ಲ. ಅವರು ತಮ್ಮ ಈ ಪಾಶ್ರ್ವ ಶಾಶ್ವತವಾದಕ್ಕೆ ನಾಲ್ಕು ಆಧಾರಗಳನ್ನು ಮಂಡಿಸುತ್ತಾರೆ. ಮತ್ತು ಅವರು ಈ ತೀಮರ್ಾನಕ್ಕೆ ಬರಲು ಕಾರಣವೇನು? ಅದು ಹೇಗೆ ಆರಂಭವಾಯಿತು, ಅವಲಂಬಿತವಾಯಿತು ಮತ್ತು ನಿರ್ಧರಿತವಾಯಿತು?
                ಒಂದು ಕಾಲ ಬರುತ್ತದೆ ಭಿಕ್ಷುಗಳೇ, ಆಗ ಬೇಗನೆಯೋ ಅಥವಾ ನಿಧಾನವೊ, ಕಾಲನಂತರದಲ್ಲಿ ಈ ಲೋಕವ್ಯವಸ್ಥೆಯು ಅಂತ್ಯವಾಗುತ್ತದೆ ಮತ್ತು ಯಾವಾಗ ಹೀಗೆ ಆಗುವುದೋ, ಆಗ ಇಲ್ಲಿರುವ ಜೀವಿಗಳೆಲ್ಲಾ ಪ್ರಕಾಶವುಳ್ಳ ಲೋಕದಲ್ಲಿ (ಅಭ್ಯಸ್ಸರ) ಜನಿಸುತ್ತಾರೆ. ಅಲ್ಲಿ ಅವರು ಮನಸ್ಸಿನಿಂದಲೇ ನಿಮರ್ಿತವಾಗಿ ವಿಹರಿಸುತ್ತಾರೆ. ಆನಂದದಿಂದಲೇ ಅವಲಂಬಿತರಾಗಿ (ಸೇವಿಸಿ) ಸ್ವಯಂ ಪ್ರಭಾರಾಗಿ (ತಮ್ಮಲ್ಲೇ ಪ್ರಕಾಶವನ್ನು ವಿಸ್ತರಿಸುತ್ತ), ಅಂತರಿಕ್ಷದಲ್ಲಿ ಚಲಿಸುವವರಾಗಿ, ಭವ್ಯತೆಯನ್ನು ಮುಂದುವರೆಸುತ್ತ, ಹೀಗೆ ಅಪಾರ ಕಾಲದಲ್ಲಿ ಇರುತ್ತಾರೆ.
                ಓ ಭಿಕ್ಷುಗಳೇ, ಒಂದು ಕಾಲವು ಬರುತ್ತದೆ. ಆಗ ಬೇಗನೆಯೋ, ನಿಧಾನವಾಗಿಯೋ ಈ ಲೋಕ ವ್ಯವಸ್ಥೆಯು ಮರುಸ್ಥಾಪಿತವಾಗುತ್ತದೆ ಮತ್ತು ಯಾವಾಗ ಹೀಗೆ ಆಗುವುದೋ ಆಗ ಬ್ರಹ್ಮನ ಅರಮನೆಯು ಪ್ರತ್ಯಕ್ಷವಾಗುತ್ತದೆ. ಆದರೆ ಅದು ಶೂನ್ಯವಾಗಿರುತ್ತದೆ ಮತ್ತು ಆಗ ಒಂದು ಜೀವಿ ಪ್ರಕಾಶವುಳ್ಳ ಲೋಕದಿಂದ ಆಯುಕ್ಷೀಣವಾಗಿ ಅಥವಾ ಪುಣ್ಯಕ್ಷೀಣವಾಗಿ ಅಲ್ಲಿಂದ ಬಿದ್ದು, ಬ್ರಹ್ಮನ ಅರಮನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿಯೂ ಸಹಾ ಅದು ಮನಸ್ಸಿನಿಂದಲೇ ನಿಮರ್ಿತರಾಗಿ ಜೀವಿಸುತ್ತಾರೆ. ಆನಂದದಿಂದಲೇ ಅವಲಂಬಿತರಾಗಿ, ಪ್ರಕಾಶವನ್ನು ಬೀರುತ್ತ, ಅಂತರಿಕ್ಷದಲ್ಲಿ ಚಲಿಸುವವರಾಗಿ, ಭವ್ಯತೆಯನ್ನು ಮುಂದುವರೆಸುತ್ತ, ಹೀಗೆಯೇ ಅಪಾರ ಕಾಲದವರೆಗೂ ಇರುತ್ತದೆ.
                ಈಗ ಅಲ್ಲಿರುವ ಆ ಏಕೈಕ ಜೀವಿಗೆ, ಏಕಾಂತವಾಗಿದ್ದು, ಅತೃಪ್ತಿಯಾಗುತ್ತದೆ. ಅದು ಪರಜೀವಿಗಳನ್ನು ಹೀಗೆ ಬಯಸುತ್ತದೆ. ಓ ಬೇರೆ ಜೀವಿಗಳು ಈ ಅರಮನೆಯಲ್ಲಿಯೇ ನನ್ನೊಡನೆ ಸೇರುವ ಹಾಗಿದ್ದರೆ! ಮತ್ತು ಆಗ ಪುಣ್ಯಕ್ಷಯದಿಂದಲೂ ಅಥವಾ ಆಯು ಕ್ಷೀಣಿಸಿಯೋ ಪ್ರಕಾಶಲೋಕದ ಜೀವಿಗಳು ಅಲ್ಲಿಂದ ಜಾರಿ ಬ್ರಹ್ಮನ ಅರಮನೆಯಲ್ಲಿ ಕಾಣಿಸಿಕೊಂಡು ಆತನಿಗೆ ಸಹಚರರಾಗಿ ಗೌರವಿಸುತ್ತ ಅಲ್ಲಿ ನೆಲೆಸುತ್ತಾರೆ.
                ಈ ರೀತಿಯಾಗಿ ಭಿಕ್ಷುಗಳೇ, ಅಲ್ಲಿ ಮೊದಲು ಜನಿಸಿದ ಜೀವಿಯು ತನಗೆತಾನೇ ಈ ರೀತಿಯಾಗಿ ಯೋಚಿಸುತ್ತದೆ: ನಾನು ಬ್ರಹ್ಮ, ಮಹಾಬ್ರಹ್ಮನಾಗಿದ್ದೇನೆ, ಮಹಾಬಲಿಷ್ಠನೂ, ಸರ್ವವನ್ನು ಕಾಣುವವನು, ಆಳುವವನು, ಸರ್ವರಿಗೂ ಸ್ವಾಮಿಯು, ನಿಮರ್ಾತನು, ಸೃಷ್ಠಿಕರ್ತನು, ನಾಯಕನು, ಒಡೆಯನು, ತಂದೆಯು ಆಗಿದ್ದೇನೆ ಮತ್ತು ಏತಕ್ಕೆ ಹೀಗೆ? ಏಕೆಂದರೆ ಕೇವಲ ನನ್ನ ಇಚ್ಛೆಯಂತೆ ಈ ಜೀವಿಗಳೆಲ್ಲ ಇಲ್ಲಿ ಕಾಣಿಸಿಕೊಂಡರು.
                ಅಷ್ಟೇ ಅಲ್ಲ, ಅಲ್ಲಿರುವ ಜೀವಿಗಳು ಸಹಾ ಹೀಗೆಯೇ ಯೋಚಿಸುತ್ತವೆ: ಈತನು ಬ್ರಹ್ಮನೇ ಆಗಿದ್ದಾನೆ, ಮಹಾಬ್ರಹ್ಮನೇ ಆಗಿದ್ದಾನೆ, ಶ್ರೇಷ್ಠನಾಗಿದ್ದಾನೆ. ಮಹಾ ಬಲಿಷ್ಠನಾಗಿದ್ದಾನೆ, ಸರ್ವವನ್ನು ವೀಕ್ಷಿಸುವವನು, ಆಳುವವನು, ಸರ್ವರ ಪ್ರಭುವು, ನಿಮರ್ಾತನು, ಸೃಷ್ಠಿಕರ್ತನು, ನಾಯಕನು ಆಗಿದ್ದಾನೆ. ಸರ್ವರಿಗೂ ತಮ್ಮ ಸ್ಥಾನದಲ್ಲಿರುವಂತೆ ಅರಮನೆಯಲ್ಲಿ ನೇಮಿಸಿದ್ದಾನೆ. ಅಪಾರ ಕಾಲದಿಂದಲೂ ತಂದೆಯಂತೆ ಇದ್ದಾನೆ. ನಾವೆಲ್ಲರೂ ಆತನಿಂದಲೇ ಸೃಷ್ಠಿಸಲ್ಪಟ್ಟಿದ್ದೇವೆ ಮತ್ತು ಏಕೆ ಹೀಗೆ. ಏಕೆಂದರೆ ನಾವು ಇಲ್ಲಿಗೆ ಬಂದಾಗ ಆತನೊಬ್ಬನೇ ಇಲ್ಲಿದ್ದನು ಮತ್ತು ನಾವು ನಂತರ ಬಂದೆವು.
                ಭಿಕ್ಷುಗಳೇ, ಈ ರೀತಿಯಾಗಿ ಮೊದಲು ಬಂದಂತಹ ಜೀವಿಯು ಪರರಿಗೆ ಹೋಲಿಸಿದರೆ ದೀಘರ್ಾಯುವು, ಭವ್ಯತೆಯುಳ್ಳದ್ದು, ಮಹಾಶಕ್ತಿಶಾಲಿಯು ಆಗಿತ್ತು. ಆನಂತರದಲ್ಲಿ ಬಂದಿದ್ದ ಜೀವಿಗಳು ಅಲ್ಲಿಂತ ಚ್ಯುತರಾಗಿ, ಇಲ್ಲಿ ಜನಿಸುತ್ತದೆ. ಇಲ್ಲಿರುವಾಗ ಗೃಹತ್ಯಾಗ ಮಾಡಿ ಸಮಣನಾಗಿ ಧ್ಯಾನದಲ್ಲಿ ತೊಡಗಿದಾಗ, ಎಚ್ಚರಿಕೆಯಿಂದ, ಯೋಗ್ಯರೀತಿಯಲ್ಲಿ ಗಮನಹರಿಸಿದಾಗ, ಚೇತೋಸಮಾಧಿ ಸಿದ್ಧಿಸಿದಾಗ, ಅದು ತನ್ನ ಹಿಂದಿನ ಜನ್ಮವನ್ನು ಸ್ಮರಿಸುತ್ತದೆ. ಆಗ ಅದು ಹೀಗೆ ಹೇಳಿಕೊಳ್ಳುತ್ತದೆ: ಈತನೇ ಬ್ರಹ್ಮ, ಮಹಾಬ್ರಹ್ಮ, ಪರಮಶ್ರೇಷ್ಠನು, ಬಲಿಷ್ಠನು, ಸರ್ವವನ್ನು ವೀಕ್ಷಿಸುವವನು, ಆಳುವವನು, ಸವರ್ಾಧಿಪತಿಯು, ನಿಮರ್ಾತನು, ಸೃಷ್ಠಿಕರ್ತನು, ಸರ್ವರ ಒಡೆಯನು ಆಗಿದ್ದಾನೆ. ನಾವೆಲ್ಲಾ ಆತನಿಂದಲೇ ಸೃಷ್ಟಿಯಾಗಿದ್ದೇವೆ. ಆತನು ನಿತ್ಯವಾಗಿ, ದೃಢವಾಗಿ, ಧೃವವಾಗಿ ನೆಲೆಸಿದ್ದಾನೆ. ಆತನು ಹೀಗೆಯೇ ಎಂದೆಂದಿಗೂ ಬದಲಾವಣೆ, ಹೊಂದದೆ ಇರುತ್ತಾನೆ. ಆದರೆ ಆತನಿಂದ ಸೃಷ್ಟಿಸಲ್ಪಟ್ಟ ನಾವು ನಿತ್ಯದಲ್ಲಿ ಪರಿಮಿತರಾಗಿರುವೆವು.
                ಇದೇ ಭಿಕ್ಷುಗಳೇ, ಮೊದಲ ಆಧಾರವಾಗಿದ್ದು ಅದರಿಂದಾಗಿ ಕೆಲವು ಸಮಣ ಬ್ರಾಹ್ಮಣರು, ಕೆಲವೊಂದಕ್ಕೆ ಶಾಶ್ವತವಾದಿಯಾಗಿ ಮಿಕ್ಕೆಲ್ಲ ವಿಷಯಕ್ಕೆ ಅಶಾಶ್ವತವಾದಿಗಳಾಗಿ, ಆತ್ಮವೂ ಮತ್ತು ಲೋಕವೂ ಭಾಗಶಃ ಶಾಶ್ವತ ಮತ್ತು ಭಾಗಶಃ ಅಶಾಶ್ವತ ಎಂದು ತೀಮರ್ಾನಕ್ಕೆ ಬರುತ್ತಾರೆ.
                ಮತ್ತು ಎರಡನೆಯ ಆಧಾರ ಯಾವುದು?
                ಓ ಭಿಕ್ಷುಗಳೇ, ಖಿದ್ದ-ಪದೊಸಿಕಾ ಎಂಬ ದೇವತೆಗಳಿರುತ್ತಾರೆ, ಅವರಿಗೆ ಹಾಸ್ಯ, ಮೋದ, ರಾಗಗಳಿಂದ ಅವರ ಆಯುವು ಕ್ಷೀಣಿಸಿ, ತಮ್ಮ ಸ್ವಸ್ಥಾನದಿಂದ ಬೀಳುತ್ತವೆ.
                ಈಗ ಆ ಜೀವಿಗಳು ಅಲ್ಲಿಂದ ಬಿದ್ದು, ಇಲ್ಲಿ ಜನಿಸುತ್ತವೆ. ಆ ಜೀವಿಯು ಸಮಣ ಬ್ರಾಹ್ಮಣನಾಗಿ, ಧ್ಯಾನದಲ್ಲಿ ತೊಡಗಿ, ತನ್ನ ಹಿಂದಿನ ಜನ್ಮವನ್ನು ನೆನಪಿಸಿಕೊಳ್ಳುತ್ತಾನೆ. ಮತ್ತು ಆಗ ಆತನಿಗೆ ಹೀಗೆ ಅನಿಸುತ್ತದೆ: ಯಾವೆಲ್ಲಾ ಜೀವಿಗಳು ಸುಖಕ್ಕೆ, ಮೋದಕ್ಕೆ, ರಾಗಕ್ಕೆ, ಬಿದ್ದಿಲ್ಲವೋ ಅವೆಲ್ಲಾ ದೃಢವಾಗಿ, ಧೃವವಾಗಿ, ಅಚಲವಾಗಿ, ಯಾವುದೇ ಬದಲಾವಣೆ ಇಲ್ಲದೆ ಎಂದೆಂದಿಗೂ ಶಾಶ್ವತವಾಗಿಯೇ ಇರುತ್ತವೆ. ಆದರೆ ನಾನು ಸ್ವನಿಯಂತ್ರಣ ತಪ್ಪಿ ಸುಖ-ರಾಗಗಳಿಗೆ ಬಲಿಯಾಗಿ ಹೀಗೆ ಬದಲಾವಣೆಗೆ, ಅಶಾಶ್ವತವಾದ ಜೀವನಕ್ಕೆ ಪರಿಮಿತವಾದ ಜೀವನಕ್ಕೆ ಬಲಿಯಾದೆನು.
                ಮತ್ತು ಮೂರನೆಯ ಆಧಾರ ಯಾವುದು?
                ಇಲ್ಲಿ ಭಿಕ್ಷುಗಳೇ, ಮನೋ-ಪದೊಸಿಕಾವೆಂಬ ದೇವತೆಗಳು ಇರುತ್ತಾರೆ. ಅವು ನಿರಂತರ ಅಸೂಯಾಪರರಾಗಿ, ತಮ್ಮತಮ್ಮಲ್ಲೇ ದ್ವೇಷಿಸತೊಡಗುತ್ತವೆ. ಅವರ ಚಿತ್ತಗಳು ಅಸೂಯೆ ಮತ್ತು ದ್ವೇಷದಿಂದ ತುಂಬಿಕೊಳ್ಳುತ್ತವೆ. ಅದರ ಪರಿಣಾಮವಾಗಿ, ಅವುಗಳ ದೇಹಗಳು ದುರ್ಬಲವಾಗಿ, ಮನಸ್ಸು ದುರ್ಬಲವಾಗಿ, ಅವು ತಮ್ಮ ಸ್ಥಾನದಿಂದಾಗಿ ಚ್ಯುತರಾಗುತ್ತವೆ.
                ಈಗ ಈ ರೀತಿಯಾಗಿ, ಆ ಲೋಕದಿಂದಾಗಿ ಚ್ಯುತರಾದ ಜೀವಿಗಳು ಆ ಸ್ಥಿತಿಯಿಂದ ಇಲ್ಲಿಗೆ ಬರುತ್ತವೆ. ಅವು ಸಮಣ ಬ್ರಾಹ್ಮಣರಾದಾಗ ಧ್ಯಾನಿಸಿ, ಹಿಂದಿನ ಜನ್ಮದ ಸ್ಮರಣೆ ಮಾಡಿದರೆ, ಆತನು ಈ ರೀತಿಯ ತೀಮರ್ಾನ ತೆಗೆದುಕೊಳ್ಳುತ್ತಾನೆ: ಆ ದೇವತೆಗಳು ಅಸೂಯೆಯಿಂದಾಗಿ, ದ್ವೇಷದಿಂದಾಗಿ ಭ್ರಷ್ಟರಾಗದೆ ಇದ್ದಿದ್ದರೆ, ಅವುಗಳು ದುರ್ಬಲವಾಗಿ ಚ್ಯುತರಾಗಿ ಇಲ್ಲಿ ಹುಟ್ಟುತ್ತಿರಲಿಲ್ಲ. ಅವು ಅಲ್ಲೇ ಇದ್ದಿದ್ದರೆ ನಿತ್ಯವಾಗಿ ಬದಲಾವಣೆಯಿಲ್ಲದೆ ಅಮರವಾಗಿ, ಶಾಶ್ವತವಾಗಿ ಅಲ್ಲೇ ಇರುತ್ತಿದ್ದರು. ಆದರೆ ನಾವು ಚಿತ್ತ ಕಲುಷಿತರಾಗಿ, ಅಸೂಯೆಪರರಾಗಿ, ಹೀಗೆ ದುಃಸ್ಥಿತಿಗೆ ಒಳಗಾಗಿ ಅಶಾಶ್ವತವುಳ್ಳವರು, ಪರಿಮಿತ ಆಯುಷ್ಯಿನ ಜೀವಿಗಳಾಗಿರುವೆವು. ಇದೇ ಭಿಕ್ಷುಗಳೇ ಮೂರನೆಯ ಆಧಾರ.
                ಮತ್ತು ನಾಲ್ಕನೆಯ ಆಧಾರ ಯಾವುದು ?
                ಇಲ್ಲಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ತರ್ಕ ಮತ್ತು ವಿಚಾರಶೀಲತೆಯಲ್ಲಿ ಮಗ್ನರಾಗುತ್ತಾರೆ. ನಂತರ ಆತನು ತನ್ನದೇ ಆದ ತೀಮರ್ಾನದಿಂದ ವಾದಮಂಡನೆಯಲ್ಲಿ ಈ ರೀತಿ ತೊಡಗುತ್ತಾನೆ. ಈ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಶರೀರವು ಅಶಾಶ್ವತವಾಗಿದೆ. ಪರಿವರ್ತನೀಯ ಧಮ್ಮದ್ದು ಆಗಿದ್ದು, ಆದರೆ ಅದರ ಚಿತ್ತವು (ವಿಞ್ಞನವು) ನಿತ್ಯವಾಗಿದೆ, ಬದಲಾಗದ ಧಮ್ಮದ್ದು ಮತ್ತು ಶಾಶ್ವತವಾಗಿದೆ.
                ಇದೇ ಭಿಕ್ಷುಗಳೇ, ಸಮಣ ಭಿಕ್ಷುಗಳು ನೀಡುವ ಪಾರ್ಶಶಾಶ್ವತ ವಾದಕ್ಕೆ ನಾಲ್ಕನೆಯ ಆಧಾರವಾಗಿದೆ. ಈ ನಾಲ್ಕು ವಿಧದಿಂದಾಗಿ ಅಥವಾ ನಾಲ್ಕರಲ್ಲಿ ಒಂದು ಅಥವಾ ಎರಡನ್ನು ಬಳಸಿ ಕೆಲವು ಶಾಶ್ವತ ಮತ್ತು ಕೆಲವು ನಶ್ವರ ಎಂದು ಪ್ರತಿಪಾದಿಸುತ್ತಾರೆ.
                ಇವುಗಳ ಬಗ್ಗೆ ಭಿಕ್ಷುಗಳೇ, ತಥಾಗತರಿಗೆ ಈ ಊಹಾಪೋಹಗಳು, ಸಿದ್ಧಾಂತಗಳು ಹೇಗೆ ಅಸ್ತಿತ್ವಕ್ಕೆ ಬಂದಿತು, ಮುಂದುವರೆಯಿತು ಮತ್ತು ಅವುಗಳ ಪರಿಣಾಮಗಳು ಏನೇನು ಆಯಿತು, ಅದನ್ನು ನಂಬಿದವರು ಏನಾದರೂ ಅವೆಲ್ಲವೂ ಗೊತ್ತು. ಅಷ್ಟೇ ಅಲ್ಲ, ತಥಾಗತರಿಗೆ ಅವುಗಳಿಗೆ ಮೀರಿದ ಸತ್ಯಗಳು ತಿಳಿದಿವೆ. ಈ ರೀತಿಯ ಜ್ಞಾನದಿಂದಲೂ ಅವರು ಉಬ್ಬಿಹೋಗುವುದಿಲ್ಲ. ಆದರೆ ಆ ವಿಧವಾದ ಮಿಥ್ಯಾದೃಷ್ಟಿಗಳಿಗೆ ಅಂಟಿಕೊಳ್ಳದೆ, ತಮಗೆ ತಾವೇ ನಿರವಲಂಬನೆ ಸಾಧಿಸುತ್ತಾರೆ. ಇವೆಲ್ಲದರ ಉದಯವನ್ನು ಅರಿಯುತ್ತಾರೆ. ಇವುಗಳ ಪರಿಣಾಮ, ಇವುಗಳ ಅಳಿವನ್ನು ಕಾಣುತ್ತಾರೆ. ಇವುಗಳ ರುಚಿಯನ್ನು ಹಾಗೆಯೇ ಇವುಗಳ ಅಪಾಯವನ್ನು, ಇವುಗಳು ಹೇಗೆ ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಅರಿತು, ಇವ್ಯಾವುದಕ್ಕೂ ಅಂಟಿಕೊಳ್ಳದೆ ತಥಾಗತರು ಮುಕ್ತರಾಗಿದ್ದಾರೆ.
                ಇವೇ ಭಿಕ್ಷುಗಳೇ, ಆ ಇನ್ನಿತರ ವಿಷಯಗಳು ಉದಾತ್ತವಾಗಿದೆ. ಅರಿಯಲು ಕಷ್ಟಕರವಾಗಿದೆ, ಪ್ರಶಾಂತತೆ ಉಂಟುಮಾಡುವಂತಹುದು, ಮಧುರವಾದುದು, ತರ್ಕಕ್ಕೆ ಸಿಗಲಾರದಂತಹುದು, ಪರಮಸೂಕ್ಷ್ಮವಾದುದು, ಕೇವಲ ಜ್ಞಾನಿಗಳಿಂದಲೇ ಅರಿಯುವಂತಹುದು, ಆದರೆ ತಥಾಗತರು ಅವುಗಳನ್ನು ನೇರವಾಗಿ, ಮುಖಾಮುಖಿಯಾಗಿ ಸಾಕ್ಷಾತ್ಕರಿಸಿ, ಪ್ರಕಟಿಸಿರುತ್ತಾರೆ. ಈ ವಿಷಯಗಳಲ್ಲಿ ತಥಾಗತರನ್ನು ಪ್ರಶಂಸಿಸಿದರೆ ಅದು ನಿಜಕ್ಕೂ ಯೋಗ್ಯವಾದ ಪ್ರಶಂಸೆ ಆಗಿರುತ್ತದೆ. ಸತ್ಯಕ್ಕೆ ಅನುಗುಣವಾದ ಪ್ರಶಂಸೆ ಆಗಿರುತ್ತದೆ.
ನಾಲ್ಕುಬಗೆಯ ಅಂತಅನಂತವಾದ
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಅವರು ಅಂತಾನಂತ ವಾದಿಗಳಾಗಿರುತ್ತಾರೆ ಮತ್ತು ಅವರು ನಾಲ್ಕುರೀತಿಯಲ್ಲಿ ತಮ್ಮ ವಾದದಂತೆ ಲೋಕವು ಅನಂತ ಇಲ್ಲವೇ ಲೋಕವು ಅಂತ ಎಂದು ಪ್ರತಿಪಾದಿಸುತ್ತಾರೆ ಮತ್ತು ಅವರು ಯಾವುದರ ಆಧಾರದ ಮೇಲೆ ಈ ರೀತಿ ವಾದಗಳನ್ನು ಮಂಡಿಸುತ್ತಾರೆ?
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರು, ಧ್ಯಾನದಲ್ಲಿ ಪರಿಶ್ರಮಯುತರಾಗಿ, ಎಚ್ಚರಿಕೆಯುಳ್ಳವರಾಗಿ, ಯೋಗ್ಯವಾದ ಗಮನಹರಿಸುವಿಕೆಯಿಂದಾಗಿ, ಆತನು ಲೋಕಗಳನ್ನು ವೀಕ್ಷಿಸುತ್ತಾನೆ. ಆಗ ಆತನಿಗೆ ಲೋಕವು ಅಂತ್ಯವುಳ್ಳದ್ದಾಗಿದೆ ಎಂದು ಭಾಸವಾಗುತ್ತದೆ. ಆಗ ಆತನು ಲೋಕವು ಅಂತವುಳ್ಳದ್ದು ಎಂಬ ತೀಮರ್ಾನಕ್ಕೆ ಬರುತ್ತಾನೆ. ಏಕೆಂದರೆ ಆತನು ಧ್ಯಾನದಲ್ಲಿ ಪರಿಶ್ರಮಪಟ್ಟಿದವನಾಗಿ, ಚಿತ್ತವನ್ನು ಲೋಕಗಳಿಗೆ ಹರಿಸಿದ್ದರಿಂದಾಗಿ ಲೋಕವು ಅಂತ ಎಂಬ ತೀಮರ್ಾನಕ್ಕೆ ಬರುತ್ತಾನೆ.
                ಇದೇ ಭಿಕ್ಷುಗಳೇ ಮೊದಲ ಆಧಾರವಾಗಿದೆ.
                ಎರಡನೆಯ ಆಧಾರವು ಸಹಾ ಅದೇರೀತಿಯಾಗಿದೆ. ಆದರೆ ಉಪಸಂಹಾರವು ಮಾತ್ರ ವಿಭಿನ್ನವಾಗಿ ಹೀಗಿದೆ: ಈ ಲೋಕವು ಯವುದೇ ಮಿತಿಯಿಲ್ಲದೆ ಅನಂತವಾಗಿದೆ, ಯಾವ ಸಮಣ ಬ್ರಾಹ್ಮಣರು ಲೋಕಕ್ಕೆ ಅಂತವಿದೆ ಎಂದು ಹೇಳುತ್ತಾರೋ ಅವರು ತಪ್ಪಾಗಿದ್ದಾರೆ, ಏಕೆಂದರೆ ಮಾರ್ಗವು ವೃತ್ತಾಕಾರವಾಗಿ ಪತ್ತೆಹಚ್ಚಲಾಗಿದೆ.
                ಮೂರನೆಯ ಆಧಾರವು ಸಹಾ ಅದೇರೀತಿಯಾಗಿದೆ, ಆದರೆ ಉಪ ಸಂಹಾರವು ಮಾತ್ರ ವಿಭಿನ್ನವಾಗಿ ಹೀಗಿದೆ: ಇಲ್ಲಿ ಆತನು ಉದ್ವರ್ಾ ಮತ್ತು ಅದೋದಿಕ್ಕು ಮಾತ್ರ ಪರಿಮಿತವೆಂದು ಕಲ್ಪಿಸಿಕೊಳ್ಳುತ್ತಾನೆ. ಆದರೆ ಸುತ್ತಲು ಅನಂತವೆಂದು ಭಾವಿಸಿ ಆತನು ತನ್ನದೇ ಸತ್ಯವೆಂದು ಪ್ರತಿಪಾದಿಸಿ ಹಿಂದಿನ ಸಿದ್ಧಾಂತಗಳನ್ನು ತಪ್ಪೆಂದು ನಿರ್ಣಯಿಸುತ್ತಾನೆ.
                ನಾಲ್ಕನೆಯ ಆಧಾರ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ತಮ್ಮ ತರ್ಕ ಮತ್ತು ವಿಚಾರಶೀಲತೆಯಿಂದ ಅದರಲ್ಲೇ ತಲ್ಲೀನರಾಗಿ ತಮ್ಮ ವಿಚಾರವನ್ನು ಈ ರೀತಿ ಮಂಡಿಸುತ್ತಾರೆ: ಈ ಲೋಕಕ್ಕೆ ಅಂತವೂ ಇಲ್ಲ, ಹಾಗೆಯೇ ಅನಂತವೂ ಇಲ್ಲ. ಯಾರು ಲೋಕಕ್ಕೆ ಅಂತವಿದೆ, ಅಥವಾ ಅನಂತವೆಂದು ಹೇಳುತ್ತಾರೋ ಅಥವಾ ಅಂತಅನಂತ ವೆಂದೂ ಹೇಳುವರು, ಅವೆಲ್ಲ ಸುಳ್ಳು. ಈ ಲೋಕಕ್ಕೆ ಅಂತವೂ ಇಲ್ಲ, ಹಾಗೆಯೇ ಅನಂತವೂ ಇಲ್ಲ. ಇದೇ ಭಿಕ್ಷುಗಳೇ ನಾಲ್ಕನೆಯ ಆಧಾರವಾಗಿದೆ.
                ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಅನಂತಂತವಾದವನ್ನು ಮಂಡಿಸುವರೋ ಅವರು ಈ ನಾಲ್ಕುರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಅಥವಾ ಈ ನಾಲ್ಕರಲ್ಲಿ ಒಂದನ್ನು ಹೇಳುತ್ತಾರೆ ಮತ್ತು ಇದರ ಹೊರತು ಪ್ರತಿವಾದಿಸಲು ಬೇರೆ ಯಾವ ಹಾದಿಯೂ ಇಲ್ಲ.
                ಈಗ ಇದರಲ್ಲಿ ಭಿಕ್ಷುಗಳೇ, ತಥಾಗತರಿಗೆ ಈ ಊಹಾಪೋಹಗಳು, ಮಿಥ್ಯಾದೃಷ್ಟಿಗಳು ಹೇಗೆ ಅಸ್ಥಿತ್ವಕ್ಕೆ ಬಂದಿತೊ ಗೊತ್ತಿದೆ. ಹಾಗು ಹೇಗೆ ನೆಲೆಯೂರುತ್ತವೆ ಎಂಬುದು ಗೊತ್ತಿದೆ. ಹಾಗೆಯೇ ಅವುಗಳನ್ನು ನಂಬಿದರೆ ಪರಿಣಾಮಗಳು ಭವಿಷ್ಯದಲ್ಲಿ ಹೇಗೆ ಆಗುತ್ತದೆ ಎಂಬುದು ಗೊತ್ತಿದೆ. ಅಷ್ಟೇ ಅಲ್ಲ, ತಥಾಗತರು ಇದರ ಆಚೆಯದನ್ನು ಅರಿತಿರುವರು. ಜ್ಞಾನವನ್ನು ತಿಳಿದಿದ್ದರೂ ಸಹಾ ಅವರು ಉಬ್ಬಿಹೋಗುವುದಿಲ್ಲ ಮತ್ತು ಹಾಗೆಯೇ ಅವುಗಳಿಗೆ ಅಂಟುವುದೂ ಇಲ್ಲ. ಹಾಗೆಯೇ ಯಾವುದಕ್ಕೂ ಅಂಟದೆ ತಮಗೆ ತಾವೇ ವಿಮುಕ್ತಿ ಸಾಧಿಸಿರುವರು. ತಥಾಗತರಿಗೆ ಈ ಮಿಥ್ಯಾದೃಷ್ಟಿಗಳು ಹೇಗೆ ಉದಯಿಸುತ್ತದೆ ಮತ್ತು ಹೇಗೆ ಅಳಿಯುತ್ತದೆ ಎಂಬುದು ತಿಳಿದಿದೆ. ಇವುಗಳ ರುಚಿಯನ್ನು, ಹಾಗೆಯೇ ಇವುಗಳ ಅಪಾಯವನ್ನು, ಹೇಗೆ ಇವು ನಂಬಿಕೆಗೆ ಅರ್ಹವೆಂದು ತಿಳಿದು ಯಾವುದಕ್ಕೂ ಅಂಟದೆ ತಥಾಗತರು ಮುಕ್ತರಾಗಿದ್ದಾರೆ.
                ಇವೇ ಭಿಕ್ಷುಗಳೇ, ಆ ಬೇರೆಯ ವಿಷಯಗಳು, ಉದಾತ್ತವಾದುದು ಅರಿಯಲು ಕಷ್ಟಕರವಾದುದು, ಸಾಕ್ಷಾತ್ಕರಿಸಲು ಕಠಿಣವಾದುದು, ಪ್ರಶಾಂತವಾದುದು, ಮಧುರ ವಾದುದು, ತಕರ್ಾತೀತವಾದುದು, ಪರಮಸೂಕ್ಷ್ಮವಾದುದು, ಕೇವಲ ಜ್ಞಾನಿಗಳಿಂದಲೇ ಅರಿಯುವಂತಹುದು. ಅವುಗಳನ್ನು ತಥಾಗತರು ನೇರವಾಗಿ ಅಭಿಮುಖವಾಗಿ ಸಾಕ್ಷಾತ್ಕರಿಸಿರುವರು ಮತ್ತು ಪ್ರಕಟಪಡಿಸಿರುವರು. ಇವಕ್ಕೆ ಸಂಬಂಧಿಸಿದಂತೆ ಪ್ರಶಂಸಿಸಿದರೆ, ತಥಾಗತರಿಗೆ ಸತ್ಯಕ್ಕೆ ಅನುಗುಣವಾಗಿ ಪ್ರಶಂಸಿಸಿದಂತೆ ಆಗುತ್ತದೆ.
ನಾಲ್ಕುಬಗೆಯ ಅಮರ ವಿಕ್ಖೇಪ ವಾದ
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಅವರು ಹಾವುಮೀನಿನಂತೆ ಜಾರುವವರಾಗಿದ್ದಾರೆ. ಅವರಿಗೆ ಪ್ರಶ್ನೆ ಹಾಕಲ್ಪಟ್ಟಾಗ ಅವರು ಈ ರೀತಿಯಾಗಿ ಅಥವಾ ಆ ರೀತಿಯಾಗಿ ಧ್ವಂದ್ವಾರ್ಥದ ಸಂಭಾಷಣೆ ನೀಡಿ ಹಾವುಮೀನಿನಂತೆ ನಾಲ್ಕು ರೀತಿಯಲ್ಲಿ ಜಾರಿಹೋಗುತ್ತಾರೆ.
                ಈಗ ಅವರು ಯಾವ ಆಧಾರದಿಂದಾಗಿ ಹೀಗೆ ಮಾಡುವರೋ ಅರಿಯೋಣ.
                ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಒಳಿತನ್ನು ಅರಿಯಲಾರರು, ಅವರು ಒಳಿತಿನ ನಿಜಸ್ವರೂಪವಾಗಲಿ ಅಥವಾ ಕೆಟ್ಟ ಸ್ವರೂಪವಾಗಲಿ ಅರಿಯಲಾರರು ಮತ್ತು ಅವರು ಹೀಗೆ ಯೋಚಿಸುತ್ತಾರೆ: ನನಗೆ ಒಳಿತಾಗಲಿ ಅಥವಾ ಕೆಡುಕಾಗಲಿ ಅದರಂತೆಯೇ ತಿಳಿದಿಲ್ಲ. ಆ ವ್ಯಕ್ತಿಯಂತೆ ನಾನೂ ಸಹಾ ಒಳ್ಳೆಯದೆ ಅಥವಾ ಕೆಟ್ಟದ್ದು ಎಂದು ಎಚ್ಚರಿಸುತ್ತೇನೆ. ನಾನು ಭಾವೋದ್ರೇಕ ತಾಳಿರಬಹುದು ಮತ್ತು ಪರಿಸ್ಥಿತಿಯ ಒತ್ತಡದಿಂದಾಗಿ ನಾನು ತಪ್ಪಿರಲುಬಹುದು ಮತ್ತು ತಪ್ಪಿತಸ್ಥನಾದ್ದರಿಂದಾಗಿ ನನಗೆ ಪಶ್ಚಾತ್ತಾಪದ ನೋವು ಉಂಟಾಗಬಹುದು ಮತ್ತು ಪಶ್ಚಾತ್ತಾಪವೇ ನನಗೆ ತಡೆಯಾಗಿದೆ. ಹೀಗೆ ಆತನು ಭೀತಿಪಡುತ್ತಾ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸುತ್ತಾ ಆತನು ಯಾವುದನ್ನು ಒಳ್ಳೆಯದೆಂದು ಅಥವಾ ಕೆಟ್ಟದೆಂದು ನಿರ್ಣಯಿಸಲಾರ. ಆದರೆ ಆತನಿಗೆ ಪ್ರಶ್ನಿಸಲ್ಪಟ್ಟಾಗ ಆತನು ಹಾವು-ಮೀನಿನಂತೆ ಜಾರಿಕೊಳ್ಳುತ್ತ ಹೀಗೆ ಹೇಳುತ್ತಾನೆ: ನಾನು ಹೀಗೆ ತೆಗೆದುಕೊಳ್ಳಲಾರೆ, ನಾನು ಬೇರೆ ವಿಧವಾಗಿಯು ತೆಗೆದುಕೊಳ್ಳಲಾರೆ. ಆದರೆ ನಾನು ಬೇರೆ ಅಭಿಪ್ರಾಯವನ್ನು ಹೇಳಲಾರೆ ಮತ್ತು ನಿಮ್ಮದನ್ನು ನಿರಾಕರಿಸಲಾರೆ ಮತ್ತು ನಾನು ಇದೇ ಸರಿ ಅಥವಾ ಅದೇ ಸರಿ ಎಂದು ಹೇಳಲಾರೆ. ಹೀಗೆ ಭಿಕ್ಷುಗಳೇ, ಈ ಒಂದುರೀತಿ ಹೇಳುವರು ಮತ್ತು ಎರಡನೆಯ ಆಧಾರ ಯಾವುದು?
                (ಹಿಂದಿನಂತೆಯೇ...) ಇಂತಹ ಪರಿಸ್ಥಿತಿಗಳಲ್ಲಿ ನಾನು ಚಿತ್ತವನ್ನು ಹಿಡಿಯುವಿಕೆಯಲ್ಲಿ ಬೀಳಬಹುದು. ಅದರಿಂದಾಗಿ ಪುನರ್ಜನ್ಮ ಸಿಗಬಹುದು ಮತ್ತು ನನಗೆ ಪಶ್ಚಾತ್ತಾಪ ಉಂಟಾಗಬಹುದು ಮತ್ತು ಪಶ್ಚಾತ್ತಾಪವೇ ನನಗೆ ತಡೆಯಾಗಬಹುದು. ಹೀಗೆ ಭೀತನಾಗಿ ಮತ್ತು ಆ ಸ್ಥಿತಿಯಿಂದ ಬೀಳಲು ಒಪ್ಪದೆ ಆತನು ಯಾವುದನ್ನು ನಿರ್ಣಯಿಸಲಾರನು. ಇದೇ ಎರಡನೆಯ ರೀತಿಯಾಗಿದೆ.
                ಮತ್ತು ಮೂರನೆಯ ರೀತಿ ಯಾವುದು? (ಹಿಂದಿನಂತೆಯೇ...) ಮತ್ತು ಆತನು ಹೀಗೆ ಯೋಚಿಸುವನು: ನನಗೆ ಒಳಿತು ಗೊತ್ತಿಲ್ಲ. ಹಾಗೆಯೇ ಕೆಡಕು ಸಹಾ. ಈಗ ಈ ಸಮಣ ಬ್ರಾಹ್ಮಣರು ಚಾಣಾಕ್ಷರಾಗಿದ್ದಾರೆ. ಸೂಕ್ಷ್ಮಮತಿಗಳಾಗಿದ್ದಾರೆ, ವಾಗ್ಮಿಗಳಾಗಿದ್ದಾರೆ. ತಲೆಗೂದಲನ್ನು ಸೀಳುವವರಾಗಿದ್ದಾರೆ. ನಾನು ವಾದಿಸಿದರೆ ನನಗೆ ಅವರು ಬುದ್ಧಿಯಿಂದಾಗಿ ನುಚ್ಚುನೂರು ಮಾಡಬಲ್ಲರು. ನಾನೇನಾದರೂ ಇದೇ ಸರಿ ಅಂದರೆ ಅಥವಾ ಅದು ಸರಿಯಲ್ಲ ಎಂದರೆ ಈ ಜನರು ನನ್ನೊಂದಿಗೆ ವಾದಿಸಲು ತೊಡಗುತ್ತಾರೆ. ಅದಕ್ಕೆ ಕಾರಣಗಳನ್ನು ಕೇಳುತ್ತಾರೆ. ನನ್ನ ತಪ್ಪುಗಳನ್ನು ತೋರಿಸುತ್ತಾರೆ. ಈ ರೀತಿಯಾದರೆ ನಾನು ವಿವರಿಸಲು ಅಸಮರ್ಥನಾಗುವೆ. ಇದರಿಂದಾಗಿ ನನಗೆ ಪಶ್ಚಾತ್ತಾಪ ಉಂಟಾಗುತ್ತದೆ, ಅದೇ ನನಗೆ ತಡೆಯಾಗುತ್ತದೆ. ಹೀಗೆ ಭೀತನಾಗಿ ಆತನು ಯಾವ ಪಕ್ಷದ ಪರವು ವಾದಿಸದೆ, ಯಾವುದನ್ನು ನಿಭಾಯಿಸಲಾರನು. ಇದೇ ಮೂರನೇ ವಾದವಾಗಿದೆ.
                ಮತ್ತು ನಾಲ್ಕನೆಯದು ಯಾವುದು?
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರು ಮೂರ್ಖರಾಗಿರುತ್ತಾರೆ, ದಡ್ಡರಾಗಿರುತ್ತಾರೆ ಮತ್ತು ತಮ್ಮ ಈ ಮೂರ್ಖತ್ವದಿಂದಾಗಿ ಅವರಿಗೆ ಪ್ರಶ್ನೆ ಕೇಳಿದಾಗ ಅವರು ಹೀಗೆ ಅಥವಾ ಹಾಗೆ ಹಾವುಮೀನಿನಂತೆ ಜಾರಿಕೊಳ್ಳುತ್ತಾರೆ. ಉದಾಹರಿಸುವು ದಾದರೆ: ನೀವು ನನಗೆ ಇನ್ನೊಂದು ಲೋಕವು ಇದೆ ಎಂದು ಕೇಳಿದರೆ, ನನಗೂ ಇದೆ ಎನಿಸಿ, ಹಾಗೆಯೇ ಹೇಳುತ್ತೇನೆ. ನಾನು ಇಲ್ಲವೆನ್ನುವುದಿಲ್ಲ ಮತ್ತು ನಾನು ಅದು ಹೀಗಿದೆ ಅಥವಾ ಹಾಗಿದೆ ಎನ್ನುವುದಿಲ್ಲ ಮತ್ತು ನಾನು ಬೇರೆರೀತಿ ಯೋಚಿಸುವುದಿಲ್ಲ ಮತ್ತು ನಾನು ನಿರಾಕರಿಸುವುದೂ ಇಲ್ಲ ಮತ್ತು ನಾನು ಇಲ್ಲವೆನ್ನುವುದಿಲ್ಲ. ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಹೇಳುವುದಿಲ್ಲ. ಹೀಗಾಗಿ ಆತನು ಈ ಕೆಳಗಿನ ಧ್ವಂದ್ವಾರ್ಥದ ಹೇಳಿಕೆಗಳನ್ನು ನೀಡುತ್ತಾನೆ.
.               (1) ಪರಲೋಕವಿದೆ (2) ಪರಲೋಕವಿಲ್ಲ (3) ಪರಲೋಕವಿದೆ ಹಾಗು ಇಲ್ಲ (4) ಪರಲೋಕವಿಲ್ಲ, ಪರಲೋಕವಿಲ್ಲದೆಯೂ ಇಲ್ಲ.
.               (1) ಒಪಪಾತಿಕ ಜೀವಿಗಳು (ತಂದೆ-ತಾಯಿ ಇಲ್ಲದೆ ಹಾಗೆಯೇ ಜನ್ಮಿಸುವ ಜೀವಿಗಳು) ಇವೆ. (2) ಒಪಪಾತಿಕ ಜೀವಿಗಳು ಇಲ್ಲ (3) ಒಪಪಾತಿಕ ಜೀವಿಗಳು ಇವೆ ಮತ್ತು ಇಲ್ಲ (4) ಒಪಪಾತಿಕ ಜೀವಿಗಳು ಇಲ್ಲ, ಇಲ್ಲದೆಯೂ ಇಲ್ಲ.
.               (1) ಪುಣ್ಯ ಮತ್ತು ಪಾಪಕರ್ಮಗಳಿಗೆ ಫಲವಿದೆ (2) ಫಲವಿಲ್ಲ (3) ಫಲವಿದೆ ಮತ್ತು ಫಲವಿಲ್ಲ (4) ಫಲವಿಲ್ಲ, ಫಲವಿಲ್ಲದೆಯೂ ಇಲ್ಲ.
ಗಿ.       (1) ತಥಾಗತರು ಸಾವಿನ ನಂತರ ಇರುತ್ತಾರೆ (2) ಇರುವುದಿಲ್ಲ (3) ಇರುತ್ತಾರೆ ಮತ್ತು ಇಲ್ಲ (4) ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ.
                ಇದೇ ಭಿಕ್ಷುಗಳೇ, ಅವರ ನಾಲ್ಕನೆಯ ವಾದ.
                ಹೀಗೆ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು... ಹಾವುಮೀನಿನಂತೆ ಜಾರಿಕೊಳ್ಳುತ್ತಾರೆ.... ನಾಲ್ಕು ರೀತಿಯಲ್ಲಿ... ಬೇರೆ ಯಾವುದೇ ರೀತಿಯಲ್ಲಿ ಹೇಳುವುದಿಲ್ಲ.
                ಭಿಕ್ಷು ತಥಾಗತರಿಗೆ ಈ ಎಲ್ಲಾ ಊಹಾಪೋಹಗಳ, ಮಿಥ್ಯಾದೃಷ್ಟಿಗಳು ಹೇಗೆ ಅಸ್ತಿತ್ವಕ್ಕೆ ಬಂದಿತು ತಿಳಿಯದೆ... ಮುಂದುವರಿಯುವಿಕೆ... ನಂಬುವವರ ಪರಿಣಾಮ... ಯಾವುದಕ್ಕೂ ಅಂಟುವುದಿಲ್ಲ... ರುಚಿ ಅಪಾಯ ತಿಳಿದಿರುತ್ತಾರೆ... ಮುಕ್ತರಾಗಿದ್ದಾರೆ.
                ಇವೇ ಭಿಕ್ಷುಗಳೇ, ಬೇರೆಯ ವಿಷಯಗಳು... ಈ ರೀತಿಯಾಗಿ ಹೇಳಿದರೆ ತಥಾಗತರನ್ನು ಸತ್ಯಕ್ಕೆ ಅನುಗುಣವಾಗಿ ಪ್ರಶಂಸಿಸಿದಂತೆ ಆಗುವುದು.
ಎರಡುರೀತಿಯ ಅಧಿಚ್ಛ ಸಮುಪ್ಪನ್ನಿಕಾ ವಾದ (ಆಕಸ್ಮಿಕ ಉತ್ಪನ್ನ ವಾದಿಗಳು)
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರು ಆಕಸ್ಮಿಕ ಉತ್ಪನ್ನವಾದಿಗಳಾಗಿರುತ್ತಾರೆ. ಅಂದರೆ ಇವರು ಎರಡು ರೀತಿಯಿಂದ ಆತ್ಮವು ಮತ್ತು ಲೋಕವು ಯಾವುದೇ ಕಾರಣವಿಲ್ಲದೆ, ಇದ್ದಕ್ಕಿದ್ದಂತೆ ಉದ್ಭವಿಸಿದವು ಎಂದು ವಾದಿಸುತ್ತಾರೆ. ಹಾಗೆ ಅವರು ಹೇಳಲು ಕಾರಣವೇನು, ಆಧಾರವೇನು?
                ಇಲ್ಲಿ ಭಿಕ್ಷುಗಳೇ, ಅಸಞ್ಞ (ಗ್ರಹಿಕೆಯಿಲ್ಲದಿರುವ ಧ್ಯಾನಲೋಕ) ಜೀವಿಗಳಿರುತ್ತಾರೆ. ಅವರಲ್ಲಿ ಗ್ರಹಿಕೆ ಉಂಟಾದ ಕ್ಷಣದಲ್ಲೇ ಅವರು ಅಲ್ಲಿಂದ ಚ್ಯುತರಾಗಿ ಇಲ್ಲಿ ಜನ್ಮಿಸುತ್ತಾರೆ. ಇಲ್ಲಿ ಅವರು ಸಮಣ ಅಥವಾ ಬ್ರಾಹ್ಮಣರಾದಾಗ ಹಾಗು ಧ್ಯಾನದಲ್ಲಿ ತೊಡಗಿ ತಮ್ಮ ಹಿಂದಿನ ಜನ್ಮವನ್ನು ಸ್ಮರಿಸುತ್ತಾರೆ. ಆಗ ಅವರಿಗೆ ತಮ್ಮ ಹಿಂದಿನ ಅಸ್ತಿತ್ವವೇ ಕಾಣಲಾಗದು. ಆಗ ಅವರು ಈ ನಿಧರ್ಾರಕ್ಕೆ ಬರುತ್ತಾರೆ. ಏನೆಂದರೆ: ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಆತ್ಮವೂ ಮತ್ತು ಲೋಕವು ಉದ್ಭವಿಸಿವೆ. ಏಕೆಂದರೆ ಹಿಂದೆ ನಾನಿರಲಿಲ್ಲ. ಆದರೆ ಈಗ ಇದ್ದೇನೆ. ಇಲ್ಲದಿದ್ದ ನಾನು ಈಗ ಜನ್ಮಿಸಿರುವೆ.
                ಇದೇ ಭಿಕ್ಷುಗಳೇ, ಆಕಸ್ಮಿಕ ಉತ್ಪನ್ನವಾದಿಗಳು ನೀಡುವ ಪ್ರಥಮ ಆಧಾರವಾಗಿದೆ. ಮತ್ತು ಎರಡನೆಯದು ಯಾವುದು?
                ಭಿಕ್ಷುಗಳೇ, ಇಲ್ಲಿ ಕೆಲವು ಸಮಣ ಬ್ರಾಹ್ಮಣರು ತರ್ಕ ಮತ್ತು ವಿಚಾರತೆಯಲ್ಲಿ ಮುಳುಗುತ್ತಾರೆ. ಹೀಗೆ ತಕರ್ಿಸಿ ತಮ್ಮ ವಾದ ಹೀಗೆ ಮಂಡಿಸುತ್ತಾರೆ.
                ಇಲ್ಲಿ ಆತ್ಮವು ಮತ್ತು ಲೋಕವು ಯಾವುದೇ ಕಾರಣವಿಲ್ಲದೆ ಆಕಸ್ಮಿಕವಾಗಿ, ಇದ್ದಕ್ಕಿದ್ದಂತೆ ಉದ್ಭವಿಸಿತು.
                ಇದೇ ಭಿಕ್ಷುಗಳೇ, ಎರಡನೆಯ ಆಧಾರ. ಭಿಕ್ಷುಗಳೇ, ತಥಾಗತರಿಗೆ ಈ ಊಹಾಪೋಹಗಳು ಮಿಥ್ಯದೃಷ್ಟಿಗಳು ಹೇಗೆ ಬಂದಿತು ತಿಳಿದಿದೆ.... ರುಚಿ... ಅಪಾಯ... ತಿಳಿದು ಮುಕ್ತರಾಗಿದ್ದಾರೆ.
                ಭಿಕ್ಷುಗಳೇ, ಯಾವ ಬೇರೆ ವಿಷಯಗಳು ಉದಾತ್ತವಾಗಿದೆಯೋ... ಇವುಗಳಿಗೆ ಸಂಬಂಧಿಸಿದಂತೆ ಪ್ರಶಂಸಿಸಿದರೆ ಅವರು ಸತ್ಯಕ್ಕೆ ಅನುಗುಣವಾಗಿ ಪ್ರಶಂಸಿಸಿದಂತಾಗುತ್ತದೆ.
                ಇವೇ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರ ಆದಿಯ ಬಗೆಗಿನ ವಾದ ಮಂಡನೆಗಳು. ಅವರು ಚರಮ ಆದಿಯ ಬಗ್ಗೆ ಈ ರೀತಿ 18 ವಾದ ಮಂಡನೆಗಳನ್ನು ಮಂಡಿಸಿರುವರು ಮತ್ತು ಯಾರೆಲ್ಲರೂ ಆದಿಯನ್ನು ವಿವರಿಸುವರೋ ಅವರೆಲ್ಲ ಹೀಗೆ 18ರಲ್ಲಿ ಒಂದಲ್ಲ ಒಂದನ್ನು ಹೇಳಿರುವರು, ಬೇರೇನಿಲ್ಲ.
                ಇವುಗಳಲ್ಲಿ ಭಿಕ್ಷುಗಳೇ, ತಥಾಗತರಿಗೆ ಈ ವಾದಗಳೆಲ್ಲವೂ ಹೇಗೆ ಅಸ್ತಿತ್ವಕ್ಕೆ ಬಂದಿತೋ ತಿಳಿದಿದೆ.... ಪರಿಣಾಮ ತಿಳಿದಿದೆ... ಅದರ ಆಚೆಗಿನದು ತಿಳಿದಿದೆ... ರುಚಿ... ಅಪಾಯ ತಿಳಿದಿದೆ... ಮುಕ್ತರಾಗಿದ್ದಾರೆ.
                ಭಿಕ್ಷು ಅನ್ಯ ವಿಷಯಗಳು ಗಹನವಾಗಿದೆ, ಉದಾತ್ತವಾಗಿದೆ... ಸತ್ಯಕ್ಕೆ ಅನುಗುಣವಾಗಿ ಪ್ರಶಂಸಿಸಿದಂತಾಗುತ್ತದೆ.
ಅಪರನ್ತಕಪ್ಪಿಕಾ
                ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಭವಿಷ್ಯದಲ್ಲಿ ಹೀಗಾಗುವುದು, ಹೀಗಿರುವುದು ಎಂದು ನಾನಾರೀತಿಯ ಊಹಾಪೋಹಗಳ ಸಿದ್ಧಾಂತಗಳನ್ನು 44 ರೀತಿಯಲ್ಲಿ ವಾದಿಸುವರು ಮತ್ತು ಯಾವುದರಿಂದ ಅವರು ಹಾಗೆ ವಾದಿಸುವರು?
16 ಬಗೆಯ ಸಞ್ಞೇವಾದ :
                ಇಲ್ಲಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಸಾವಿನ ನಂತರ ಭವಿಷ್ಯದಲ್ಲಿ ಆತ್ಮ ಹೀಗಿರುವುದು ಎಂದು 16 ವಾದಗಳಲ್ಲಿ ಹೇಳುತ್ತಾರೆ. ಯಾವ ಆಧಾರದಿಂದ ಅವರು ಹಾಗೆ ಹೇಳುವರು? ಅವರು ಆತ್ಮದ ಬಗ್ಗೆ ಹೀಗೆ ಹೇಳುವರು: ಸಾವಿನ ನಂತರ ಆತ್ಮ ಶಿಥಿಲವಾಗುವುದಿಲ್ಲ ಮತ್ತು ಅರಿವನ್ನು ಹೊಂದಿರುತ್ತದೆ. (1) ಆಕಾರವಿದೆ (2) ಆಕಾರವಿಲ್ಲ (3) ಆಕಾರವಿದೆ ಹಾಗು ಇಲ್ಲ (4) ಆಕಾರವಿಲ್ಲ, ಇಲ್ಲದೆಯೂ ಇಲ್ಲ (5) ಅಂತವಿದೆ (6) ಅನಂತ (7) ಅಂತಅನಂತ ಎರಡೂ (8) ಎರಡೂ ಅಲ್ಲ (9) ಒಂದುಬಗೆಯ ಅರಿವನ್ನು ಹೊಂದಿರುತ್ತದೆ (10) ನಾನಾಬಗೆಯ ಅರಿವನ್ನು ಹೊಂದಿರುತ್ತದೆ (11) ಪರಿಮಿತ ಅರಿವನ್ನು ಹೊಂದಿರುತ್ತದೆ (12) ಅನಂತ ಅರಿವನ್ನು ಹೊಂದಿರುತ್ತದೆ (13) ಪೂರ್ಣವಾಗಿ ಸುಖಕರವಾಗಿರುತ್ತದೆ (14) ಪೂರ್ಣವಾಗಿ ದುಃಖಕರವಾಗಿರುತ್ತದೆ (15) ಸುಖ-ದುಃಖಗಳಿಂದ ಇರುತ್ತದೆ (16) ಸುಖದಿಂದಾಗಲಿ ಅಥವಾ ದುಃಖದಿಂದಾಗಲಿ ಇರುವುದಿಲ್ಲ.
                ಇವೇ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಹೊಂದಿರುವ ಮರಣದ ನಂತರದ ಆತ್ಮದ ದೃಷ್ಟಿಯಾಗಿದೆ ಮತ್ತು ಅವರು ಈ 16 ರೀತಿಯಲ್ಲಿ ಪ್ರತಿಪಾದಿಸುತ್ತಾರೆ ಮತ್ತು ಯಾರೆಲ್ಲರೂ ಹಾಗೆ ಮಾಡುವರೋ ಅವರು ಈ 16ರಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ.
                ಇವುಗಳು ಭಿಕ್ಷುಗಳೇ, ಇವೆಲ್ಲಾ ಮಿಥ್ಯಾದೃಷ್ಟಿಗಳು ಯಾವುದರಿಂದ ಹೇಗೆ ಅಸ್ಥಿತ್ವಕ್ಕೆ ಬಂದಿತು ಗೊತ್ತಿದೆ... ಇದಕ್ಕೆ ಮೀರಿದುದು ಸಹಾ ಗೊತ್ತಿದೆ.... ರುಚಿ... ಅಪಾಯ... ತಥಾಗತರು ಮುಕ್ತರಾಗಿದ್ದಾರೆ.
                ಇವು ಭಿಕ್ಷುಗಳೇ, ಆ ಬೇರೆಯ ವಿಷಯಗಳಾಗಿವೆ. ಉದಾತ್ತವಾದುದು, ಗಂಭೀರವಾದುದು, ಅರಿಯಲು ಕಷ್ಟಕರವಾದುದು, ಸಾಕ್ಷಾತ್ಕರಿಸಲು ಕಡುಕಷ್ಟಕರವಾದುದು, ಪ್ರಶಾಂತತೆಯನ್ನುಂಟುಮಾಡುವುದು, ಮಧುರವಾದುದು... ಇದರ ಬಗ್ಗೆ ಪ್ರಶಂಸಿಸಿದಾಗ ತಥಾಗತರಿಗೆ ಯೋಗ್ಯವಾಗಿ ಪ್ರಶಂಸಿಸಿದಂತೆ ಆಗುತ್ತದೆ.
ಎಂಟುಬಗೆಯ ಅಸಞ್ಞೇ ವಾದ :
                ಕೆಲವು ಸಮಣ ಬ್ರಾಹ್ಮಣರಿದ್ದಾರೆ ಭಿಕ್ಷುಗಳೇ, ಅವರು ಅಸ್ಸಞ್ಞವಾದಿಗಳಾಗಿದ್ದಾರೆ. ಅಂದರೆ ಸಾವಿನ ನಂತರ ಗ್ರಹಿಕೆಯಿಲ್ಲದಿರುವ ಅಸ್ತಿತ್ವವಿದೆ ಎಂದು ಪ್ರತಿಪಾದಿಸುವವ ರಾಗಿದ್ದಾರೆ. ಅವರು ತಮ್ಮ ಈ ಸಿದ್ಧಾಂತವನ್ನು ಎಂಟುರೀತಿಯಲ್ಲಿ ಪ್ರಕಟಪಡಿಸುತ್ತಾರೆ ಮತ್ತು ಯಾವುವವು?
                ಅವರು ಹೇಳುವಂತೆ ಸಾವಿನ ನಂತರ ಆತ್ಮವು ಶಿಥಿಲವಾಗುವಿಕೆಗೆ, ಒಳಪಡುವುದಿಲ್ಲ ಮತ್ತು ಗ್ರಹಿಕೆಗೆ ಅತೀತವಾಗಿರುತ್ತದೆ. (1) ದೇಹವಿರುತ್ತದೆ (ರೂಪ) (2) ದೇಹವಿರುವುದಿಲ್ಲ (ಅರೂಪ) (3) ದೇಹವಿರುತ್ತದೆ ಮತ್ತು ಇರುವುದಿಲ್ಲ (ರೂಪ ಮತ್ತು ಅರೂಪ) (4) ದೇಹವಿಲ್ಲ, ದೇಹವಿಲ್ಲದೆಯೂ ಇಲ್ಲ (5) ಅಂತವಿರುತ್ತದೆ (6) ಅನಂತವಾಗಿರುತ್ತದೆ (7) ಅಂತ ಮತ್ತು ಅನಂತ ಎರಡೂ ಸಹಾ (8) ಅಂತವಲ್ಲ ಹಾಗೆಯೇ ಅನಂತವೂ ಅಲ್ಲ.
                ಇಲ್ಲಿ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಅಸಞ್ಞವಾದಿಗಳಾಗಿರುವೋ ಅವರು 8 ವಿಧದಿಂದ ಸಾವಿನನಂತರ ಆತ್ಮವು ಅಸಞ್ಞಾದಿಂದ ಕೂಡಿರುತ್ತದೆ ಎಂದು ವಾದಿಸುತ್ತಾರೆ ಮತ್ತು ಯಾರೆಲ್ಲರೂ ಹಾಗೆ ವಾದಿಸುವರೋ ಅವರು ಈ ಎಂಟರಲ್ಲಿ ಒಂದನ್ನು ಒತ್ತುಕೊಟ್ಟು ವಾದಿಸುವರು, ಹೊರತು ಬೇರಲ್ಲ.
                ಭಿಕ್ಷುಗಳೇ, ಈ ಎಲ್ಲಾ ಮಿಥ್ಯಾದೃಷ್ಟಿಗಳು ಹೇಗೆ ಅಸ್ತಿತ್ವಕ್ಕೆ ಬಂದಿತೋ ತಥಾಗತರಿಗೆ ತಿಳಿದಿದೆ.... ತಥಾಗತರು ಮುಕ್ತರಾಗಿದ್ದಾರೆ.
                ಇವು ಭಿಕ್ಷುಗಳೇ, ಆ ಬೇರೆಯ ಉದಾತ್ತ ಗಂಭೀರ ವಿಷಯಗಳಾಗಿವೆ... ತಥಾಗತರು ಪ್ರಶಂಸಿಸಿದಂತೆ ಆಗುತ್ತದೆ.
ಎಂಟು ಬಗೆಯ ನೇವಸಞ್ಞೇನಾಸಞ್ಞೇ ವಾದ
                ಇದು ಸಹಾ ಮೇಲಿನಂತೆಯೇ. ಆದರೆ ಅಸಞ್ಞ ಬದಲು ನೇವಸಞ್ಞನಸಞ್ಞ ಬಳಸುತ್ತಾರೆ ಅಷ್ಟೇ. ಅಂದರೆ ಇಲ್ಲಿ ಸಾವಿನ ನಂತರ ಆತ್ಮವು ಗ್ರಹಿಕೆಯಿಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಸ್ಥಿತಿಯಲ್ಲಿದ್ದು ಮೇಲಿನಂತೆ 8 ರೀತಿಯಲ್ಲಿ ಪ್ರಕಟಪಡಿಸುತ್ತಾರೆ.
                ಇವು ಭಿಕ್ಷುಗಳೇ, ಆ ಬೇರೆಯ ಉದಾತ್ತ ಗಂಭೀರ ವಿಷಯಗಳಾಗಿವೆ... ತಥಾಗತರು ಪ್ರಶಂಸಿಸಿದಂತೆ ಆಗುತ್ತದೆ.
ಏಳು ಬಗೆಯ ಉಚ್ಚೇದವಾದ (ವಿನಾಶವಾದಿಗಳು)
                ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಭಿಕ್ಷುಗಳೇ, ಅವರು ಉಚ್ಛೇದ (ವಿನಾಶ)ವಾದಿಗಳಾಗಿದ್ದಾರೆ. ಅವರು ಜೀವಿಯ ವಿನಾಶವನ್ನು ಏಳು ರೀತಿಯಲ್ಲಿ ಪ್ರಕಟಪಡಿಸುತ್ತಾರೆ. ಯಾವುದರಿಂದಾಗಿ ಅವರು ಆ ರೀತಿ ಮಾಡುತ್ತಾರೆ?
                ಇಲ್ಲಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಈ ರೀತಿಯ ಅಭಿಪ್ರಾಯವನ್ನು ಹೊಂದಿರುತ್ತಾರೆ: ಇಲ್ಲಿ ಭಂತೆ, ಈ ಆತ್ಮಕ್ಕೆ ರೂಪವಿದೆ (ದೇಹವಿದೆ) ಈ ದೇಹವು ನಾಲ್ಕು ಮಹಾಭೂತಗಳಿಂದ ನಿಮರ್ಿತವಾಗಿದೆ ಮತ್ತು ಇದು ತಂದೆ-ತಾಯಿಗಳಿಂದ ಹುಟ್ಟಿದೆ. ಆದರೆ ಇದು ಸಾವಿನ ನಂತರ ಶರೀರದೊಂದಿಗೆ ಆತ್ಮವು ಸಹಾ ನಾಶವಾಗಿ ಹೋಗುತ್ತದೆ. ಹೀಗೆ ಕೆಲವು ಸಮಣ ಬ್ರಾಹ್ಮಣರು ಜೀವಿಯ ವಿನಾಶವಾದವನ್ನು ಮಂಡನೆ ಮಾಡುತ್ತಾರೆ.
                ಆಗ ಬೇರೆಯವರು ಹೀಗೂ ಹೇಳುತ್ತಾರೆ: ಭಂತೆ, ನೀವು ಈ ರೀತಿಯ ಆತ್ಮವನ್ನು ವಣರ್ಿಸಿದಿರಿ, ನಾನು ನಿರಾಕರಿಸಲಾರೆ. ಆದರೆ ಇಡಿಯ ಆತ್ಮವು ಪೂರ್ಣವಾಗಿ ನಾಶ ಹೊಂದಲಾರದು, ಅದರ ಜೊತೆಗೆ ಇನ್ನೊಂದು ಆತ್ಮವಿದೆ. ಅದು ದಿವ್ಯವಾದುದು, ರೂಪವನ್ನು ಹೊಂದಿದೆ ಮತ್ತು ಅದು ಇಂದ್ರೀಯಗ್ರಾಹ್ಯ ಉಳ್ಳದ್ದಾಗಿದೆ. ಘನ ಆಹಾರದಿಂದ ಸೇವಿತವಾಗಿದೆ. ಅದನ್ನು ನೀವು ಅರಿತಿಲ್ಲ, ನಿಮಗೆ ಗೊತ್ತೂ ಇಲ್ಲ, ಆದರೆ ನನಗೆ ಗೊತ್ತಿದೆ ಮತ್ತು ನಾನು ಅನುಭವವನ್ನು ಪಡೆದಿದ್ದೇನೆ. ಸಾವಿನ ನಂತರ ದೇಹದ ಜೊತೆಗೆ ಈ ಆತ್ಮವು ಸಹಾ ವಿನಾಶವಾಗುತ್ತದೆ. ನಂತರ ಉಳಿಯಲಾರದು. ಹೀಗೆ ಪೂಜ್ಯರೇ, ಆತ್ಮವು ಪೂರ್ಣವಾಗಿ ವಿನಾಶವಾದುದು. ಹೀಗೆ ಕೆಲವರು ವಿನಾಶವಾದವನ್ನು ಮಂಡಿಸುವರು.
                ಆಗ ಆತನಿಗೆ ಪರರು ಹೀಗೆ ಹೇಳುವರು: ಪೂಜ್ಯರೇ, ನೀವು ಹೇಳಿದಂತಹ ಆತ್ಮವನ್ನು ನಾನು ನಿರಾಕರಿಸಲಾರೆ. ಆದರೆ ಇಡೀ ಆತ್ಮವು ಪೂರ್ಣವಾಗಿ ವಿನಾಶವಾಗಲಾರದು. ಜೊತೆಗೆ ಒಂದು ಆತ್ಮವಿರುತ್ತದೆ. ಅದು ದಿವ್ಯವಾದುದು, ದೇಹವನ್ನು ಹೊಂದಿರುವುದು, ಮನೋಮಯವಾಗಿರುವುದು (ಮನಸ್ಸಿನಿಂದ ನಿಮರ್ಿತ), ಅದರ ಎಲ್ಲಾ ಪ್ರಮುಖ ಮತ್ತು ಚಿಕ್ಕ ಅಂಗಗಳು ಪೂರ್ಣವಾಗಿರುತ್ತದೆ. ಯಾವುದೇ ಅಂಗದ ಕೊರತೆಯಿರುವುದಿಲ್ಲ. ಇದು ನಿಮಗೆ ಗೊತ್ತಿಲ್ಲ. ಹಾಗು ಇದನ್ನು ಗ್ರಹಿಸಿಯೂ ಇಲ್ಲ. ಆದರೆ ನನಗೆ ಗೊತ್ತಿದೆ ಮತ್ತು ನಾನು ಇದನ್ನು ಅನುಭವಿಸಿದ್ದೇನೆ ಮತ್ತು ಇದು ಸಾವಿನ ನಂತರ ದೇಹ ನಾಶವಾಗುತ್ತದೆ. ಹೀಗೆ ಆತ್ಮವು ವಿನಾಶವಾಗುತ್ತದೆ.
                ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೇ, ನೀವು ಹೇಳಿದಂತಹ ಆತ್ಮವಿದೆ. ನಾನು ನಿರಾಕರಿಸಲಾರೆ. ಆದರೆ ಇಡೀ ಆತ್ಮ ಆಗಲೇ ಪೂರ್ಣವಾಗಿ ನಾಶವಾಗಲಾರದು. ಅಲ್ಲಿ ಆತ್ಮವಿರುವುದು ಅದು. ದೇಹದ ಎಲ್ಲಾ ಗ್ರಹಿಕೆಗಳಿಂದ ಆಚೆಗಿನದು. ಅದು ಇಂದ್ರೀಯ ಗ್ರಹಿಕೆಗಳನ್ನು ದೇಹದ ಸಂಞ್ಞೆಗಳನ್ನು ಮೀರಿ ಆಕಾಶ ಅನಂತ ಎಂಬ ಆಧಾರ (ಆಯಾತನ)ದಲ್ಲಿ ನೆಲೆಸುತ್ತದೆ. ಇದು ನಿಮಗೆ ಗೊತ್ತಿಲ್ಲ. ಹಾಗೆಯೇ ಗ್ರಹಿಸಿಯೂ ಇಲ್ಲ. ಆದರೆ ನನಗೆ ಗೊತ್ತಿದೆ ಮತ್ತು ಅನುಭವಿಸಿಯೂ ಇದ್ದೇನೆ ಮತ್ತು ಇದು ಸಹಾ ಮರಣದ ನಂತರ ದೇಹದ ಜೊತೆಗೆ ಆತ್ಮವೂ ಸಹಾ ನಾಶವಾಗುವುದು. ಇದನ್ನು ಕೆಲವರು ಹೀಗೆ ಪ್ರತಿಪಾದಿಸುವರು.
                ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೇ, ನೀವು ಹೇಳುವಂತಹ ಆತ್ಮವಿದೆ. ನಾನು ನಿರಾಕರಿಸುವುದಿಲ್ಲ. ಆದರೆ ಇಡೀ ಆತ್ಮವು ಪೂರ್ಣವಾಗಿ ವಿನಾಶವಾಗಲಾರದು. ಅಲ್ಲಿ ಆತ್ಮವಿರುತ್ತದೆ. ಅದು ಆಕಾಶ ಅನಂತ ಆಯಾತನವನ್ನು ದಾಟಿ ವಿಞ್ಞಾನ ಅನಂತ ಆಯತನದಲ್ಲಿ ನೆಲೆಸುತ್ತದೆ. ಇದು ನೀವು ಗ್ರಹಿಸಿಲ್ಲ ಮತ್ತು ನಿಮಗೆ ಗೊತ್ತೂ ಇಲ್ಲ. ಆದರೆ ನನಗೆ ಗೊತ್ತಿದೆ ಮತ್ತು ನಾನು ಅನುಭವಿಸಿದ್ದೇನೆ ಮತ್ತು ಯಾವಾಗ ಮರಣ ಸಂಭವಿಸುತ್ತದೆಯೋ ಆಗ ಆತ್ಮವು ಮರಣವನ್ನಪ್ಪುತ್ತದೆ. ಈ ರೀತಿಯಾಗಿ ಕೆಲವರು ಉಚ್ಚೇದವಾದವನ್ನು ಪ್ರತಿಪಾದಿಸುತ್ತಾರೆ.
                ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೆ, ನೀವು ಹೇಳುವ ಆತ್ಮವನ್ನು ನಾನು ನಿರಾಕರಿಸಲಾರೆ, ಆದರೆ ಇಡೀ ಆತ್ಮವು ವಿನಾಶವಾಗಲಾರದು, ಅಲ್ಲಿ ಆತ್ಮವಿರುತ್ತದೆ. ಅದು ಈ ಹಿಂದಿನ ಆಯಾತನಗಳನ್ನು ದಾಟಿ ಅಕಿಂಚಯಾತನದಲ್ಲಿ ನೆಲೆಸುತ್ತದೆ. ಇದು ನೀವು ಗ್ರಹಿಸಿಲ್ಲ ಮತ್ತು ನಿಮಗೆ ಗೊತ್ತೂ ಇಲ್ಲ. ಆದರೆ ನನಗೆ ಗೊತ್ತಿದೆ ಮತ್ತು ನಾನು ಅನುಭವಿಸಿದ್ದೆನೆ ಮತ್ತು ಯಾವಾಗ ಮರಣ ಸಂಭವಿಸುತ್ತದೆಯೋ ಆಗ ಆತ್ಮವು ಮರಣವಪ್ಪುತ್ತದೆ.
                ಆಗ ಮತ್ತೊಬ್ಬ ಹೀಗೆ ಹೇಳುತ್ತಾನೆ : ಪೂಜ್ಯರೇ, ನೀವು ಹೇಳುವ ಆತ್ಮವನ್ನು ನಾನು ನಿರಾಕರಿಸುವುದಿಲ್ಲ. ಆದರೆ ಇಡೀ ಆತ್ಮವು ಪೂರ್ಣವಾಗಿ ವಿನಾಶವಾಗಲಾರದು. ಅಲ್ಲಿ ಆತ್ಮವಿರುತ್ತದೆ. ಅದು ಹಿಂದಿನ ಪರಿಧಿಗಳನ್ನೆಲ್ಲಾ ದಾಟಿ ನೇವಸಞ್ಞನಸಞ್ಞ ಆಯಾತನದಲ್ಲಿ (ಗ್ರಹಿಕೆಯಿಲ್ಲ, ಗ್ರಹಿಕೆಯಿಲ್ಲದೆಯೂ ಇಲ್ಲ) ನೆಲೆಸುತ್ತದೆ. ಇದು ನಿಮಗೆ ಗೊತ್ತಿಲ್ಲ ಮತ್ತು ಗ್ರಹಿಸಿಯೂ ಇಲ್ಲ. ಆದರೆ ನನಗೆ ಗೊತ್ತಿದೆ ಮತ್ತು ನಾನು ಅನುಭವಿಸಿಯೂ ಇದ್ದೇನೆ. ಮತ್ತು ಯಾವಾಗ ಆತ್ಮವು ಶರೀರದಿಂದ ಬೇರೆಯಾಗುತ್ತದೋ, ಶರೀರವು ನಾಶವಾಗುವುದೋ, ಆಗ ಆತ್ಮವು ಸಹಾ ನಾಶವಾಗುವುದು.
                ಈ ರೀತಿಯಾಗಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಯಾರು ಉಚ್ಚೇದವಾದಿ ಗಳಾಗಿರುವರೋ ಅವರು ಏಳು ವಿಧದಲ್ಲಿ ವಿನಾಶವಾದವನ್ನು ಮಂಡಿಸುತ್ತಾರೆ ಮತ್ತು ಯಾರೆಲ್ಲರೂ ಹೀಗೆ ಹೇಳುವರು. ಅವರು ಈ ಏಳು ವಿಧದಲ್ಲಿ ಒಂದನ್ನು ಹೇಳುತ್ತಾರೆ, ಹೊರತು ಬೇರಲ್ಲ.
                ಇವು ಭಿಕ್ಷುಗಳೇ, ಆ ಬೇರೆಯ ಉದಾತ್ತ ಗಂಭೀರ ವಿಷಯಗಳಾಗಿವೆ... ತಥಾಗತರು ಪ್ರಶಂಸಿಸಿದಂತೆ ಆಗುತ್ತದೆ.
ಐದು ಬಗೆಯ ದಿಟ್ಠಧಮ್ಮ ನಿಬ್ಬಾನವಾದ
                ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಅವರು ಈ ಜೀವಿತದಲ್ಲೇ ಸುಖದ ಸಿದ್ಧಾಂತ ಮಂಡಿಸುತ್ತಾರೆ. ಅವರು ಐದು ವಿಧದಲ್ಲಿ ಈ ಲೋಕದಲ್ಲೇ ಪೂರ್ಣ ವಿಮೋಚನೆಯನ್ನು ಹೇಳುತ್ತಾರೆ. ಮತ್ತು ಯಾವುದನ್ನು ಅವಲಂಬಿಸಿ, ಯಾವುದರಿಂದ ಅವರು ಹೀಗೆ ಹೇಳುತ್ತಾರೆ?
                ಇಲ್ಲಿ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಈ ರೀತಿಯ ದೃಷ್ಟಿಯನ್ನು ಹೊಂದಿರುತ್ತಾರೆ: ಯಾರೆಲ್ಲರೂ ಆತ್ಮವನ್ನು ಹೊಂದಿದ್ದಾರೋ, ಐದು ಇಂದ್ರೀಯಗಳಿಂದ ಆನಂದ ಅನುಭವಿಸುತ್ತಿದ್ದಾರೋ ಅವರು ಈ ಜಗತ್ತಿನಲ್ಲಿಯೇ ಶ್ರೇಷ್ಠವಾದ ನಿಬ್ಬಾಣ ಪಡೆದಿದ್ದಾರೆ (ಅಂದರೆ ಅವರ ಲೆಕ್ಕದಲ್ಲಿ ಇಂದ್ರೀಯ ಸುಖವೇ ನಿಬ್ಬಾಣವಾಗಿದೆ). ಹೀಗೆ ಕೆಲವರು ಈ ಲೋಕದ ಸುಖದ ಬಗ್ಗೆ ಹೇಳುತ್ತಾರೆ.
                ಆಗ ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೇ, ನೀವು ಹೇಳುವಂತಹ ಆತ್ಮ ನಾನು ನಿರಾಕರಿಸಲಾರೆ. ಆದರೆ ಆತ್ಮವೊಂದೇ ಶ್ರೇಷ್ಠ ನಿಬ್ಬಾಣವನ್ನು ಪಡೆಯಲಾರದು? ಮತ್ತು ಏಕಿಲ್ಲ? ಏಕೆಂದರೆ ಪೂಜ್ಯರೆ, ಇಂದ್ರೀಯಾನಂದವು ಕ್ಷಣಿಕವಾಗಿದೆ, ದುಃಖದಿಂದ ಕೂಡಿದೆ, ಕ್ಷಣಿಕದಿಂದಲೇ ಶೋಕ, ಪ್ರಲಾಪ, ನೋವು, ದೋಮನಸ್ಸುಗಳು ಉದಯಿಸುತ್ತವೆ. ಆದರೆ ಯಾರೇ ಆಗಲಿ ಇಂದ್ರೀಯ ಸುಖಗಳನ್ನು ದೂರೀಕರಿಸುವನೋ ಹಾಗು ಅಕುಶಲ ವಿತರ್ಕಗಳನ್ನು ದೂರ ಮಾಡಿರುವನೋ ಆತನು ಮಾತ್ರ ಪ್ರಥಮ ಧ್ಯಾನವನ್ನು ಪ್ರಾಪ್ತಿಮಾಡುತ್ತಾನೆ. ಆ ಸಮಾಧಿಯು ವಿತರ್ಕ ವಿಚಾರ ಪೀತಿ, ಸುಖ ಏಕಾಗ್ರತೆಯಿಂದ ಕೂಡಿರುತ್ತದೆ. ಹೀಗೆ ಪೂಜ್ಯರೇ, ಈ ಲೋಕದಲ್ಲೇ ಶ್ರೇಷ್ಠವಾದ ಈ ನಿಬ್ಬಾಣವನ್ನು ಪಡೆಯುತ್ತಾರೆ (ಇಲ್ಲಿ ಪ್ರಥಮ ಸಮಾಧಿಯನ್ನೇ ನಿಬ್ಬಾಣವೆಂದು ಇವರು ಭಾವಿಸುವರು). ಹೀಗೆ ಅವರು ತಮ್ಮ ವಾದವನ್ನು ನುಡಿಯುತ್ತಾರೆ.
                ಆಗ ಆತನಿಗೆ ಬೇರೊಬ್ಬರು ಹೀಗೆ ಹೇಳುತ್ತಾರೆ: ಪೂಜ್ಯರೇ, ನೀವು ಹೇಳಿದಂತಹ ಆತ್ಮವನ್ನು ನಾನು ನಿರಾಕರಿಸಲಾರೆ. ಆದರೆ ಆತ್ಮವೊಂದೇ ಶ್ರೇಷ್ಠ ನಿಬ್ಬಾಣ ಪಡೆಯಲಾರದು ಮತ್ತು ಏಕಿಲ್ಲ? ಏಕೆಂದರೆ, ವಿಚಾರ ಮತ್ತು ವಿತರ್ಕಗಳು ಸ್ಥೂಲವಾಗಿದೆ. ಆದರೆ ಆತ್ಮವು ವಿಚಾರ ಮತ್ತು ವಿತರ್ಕವನ್ನು ಮೀರಿ ದ್ವಿತೀಯ ಧ್ಯಾನಕ್ಕೆ ಪ್ರವೇಶಿಸಿದಾಗ, ಪ್ರೀತಿ, ಸುಖ ಮತ್ತು ಏಕಾಗ್ರತೆಯಿಂದ ಕೂಡಿರುವ ಸಮಾಧಿ ಪಡೆಯುತ್ತಾನೆ. ಇದೇ ಪೂಜ್ಯರೇ, ಈ ದೃಷ್ಟಿಸಲ್ಪಡುವ ಲೋಕದಲ್ಲಿ ಆತ್ಮ ಪಡೆಯುವ ಪರಮ ನಿಬ್ಬಾಣವಾಗಿದೆ. (ಇಲ್ಲಿ ಇವರು ದ್ವಿತೀಯ ಸಮಾಧಿಗೆ ನಿಬ್ಬಾಣವೆಂದು ಭಾವಿಸುತ್ತಾರೆ) ಹೀಗೆ ಕೆಲವರು ಈ ಲೋಕದಲ್ಲೇ ವ್ಯಕ್ತವಾಗುವ ಈ ಸುಖವನ್ನು ಹೀಗೆ ಹೇಳುತ್ತಾರೆ.
                ಆಗ ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೇ, ನೀವು ಹೇಳುವಂತಹ ಆತ್ಮವಿದೆ. ನಾನು ನಿರಾಕರಿಸುವುದಿಲ್ಲ. ಆದರೆ ಕೇವಲ ಆತ್ಮವೇ ಉನ್ನತವಾದ ನಿಬ್ಬಾಣವನ್ನು ಪ್ರಾಪ್ತಿಮಾಡಲಾರದು ಮತ್ತು ಏಕಿಲ್ಲ? ಏಕೆಂದರೆ ಪೀತಿ (ಆನಂದ)ಯು ಸ್ಥೂಲವಾಗಿದೆ. ಆದರೆ ಯಾವ ಆತ್ಮವು ಪೀತಿಗೆ ಅತೀತವು ಅಂತಹ ಆತ್ಮವು ಸಮಚಿತ್ತತೆಯಿಂದ ಜಾಗರೂಕತೆಯಿಂದ ಸುಖ ಅನುಭೂತಿಯಿಂದ ಕೂಡಿರುತ್ತದೆ. ಅದನ್ನು ಧ್ಯಾನಿಗಳು ಹೀಗೆ ಹೇಳುತ್ತಾರೆ: ಪ್ರಶಾಂತತೆ ಮತ್ತು ಸುಖದಿಂದ ಕೂಡಿರುವ ಸುಖದ ಪೀತಿಯ ಧ್ಯಾನವನ್ನು ಪ್ರಾಪ್ತಿಮಾಡುತ್ತಾನೆ, ಇದೇ ನಿಬ್ಬಾಣವಾಗಿದೆ. (ಅವರು ತೃತೀಯ ಧ್ಯಾನವನ್ನು ನಿಬ್ಬಾಣವೆಂದು ಭಾವಿಸುತ್ತಾರೆ). ಹೀಗೆ ಕೆಲವರು ಇಂತಹ ಪೂರ್ಣ ಸುಖವನ್ನೇ ಗೋಚರಿಸುವಂತಹ ನಿಬ್ಬಾಣ ಎನ್ನುತ್ತಾರೆ.
                ಆಗ ಆತನಿಗೆ ಬೇರೊಬ್ಬ ಹೀಗೆ ಹೇಳುತ್ತಾನೆ: ಪೂಜ್ಯರೇ, ನೀವು ಹೇಳುವಂತಹ ಆತ್ಮವಿದೆ, ನಾನು ನಿರಾಕರಿಸುವುದಿಲ್ಲ. ಆದರೆ ಆತ್ಮವೊಂದೇ ಉನ್ನತವಾದ ನಿಬ್ಬಾಣವನ್ನು ಪ್ರಾಪ್ತಿಮಾಡಲಾರದು, ಏಕಿಲ್ಲ? ಏಕೆಂದರೆ ಅದರಲ್ಲಿರುವ ಸುಖವು ಸ್ಥೂಲವಾಗಿದೆ. ಹೀಗೆ ಪೂಜ್ಯರೇ, ಆತ್ಮವೂ ಸುಖವನ್ನು ಮತ್ತು ನೋವುಗಳನ್ನು ಮೀರಿ ಪರಿಶುದ್ಧವಾದ ನಾಲ್ಕನೆಯ ಧ್ಯಾನವಾದ ಸಮಚಿತ್ತತೆ ಮತ್ತು ಏಕಾಗ್ರತೆಯಿಂದಾದ ಆ ದಿವ್ಯ ಸ್ಥಿತಿಯನ್ನು ಪ್ರಾಪ್ತಿಮಾಡುತ್ತಾನೆ. ಇವೇ ಗೋಚರಿಸುವಂತಹ ಉನ್ನತ ನಿಬ್ಬಾಣವಾಗಿದೆ. (ಇಲ್ಲಿ ಅವರು ನಾಲ್ಕನೆಯ ಧ್ಯಾನಕ್ಕೆ ನಿಬ್ಬಾಣವೆಂದು ಭಾವಿಸುತ್ತಾರೆ). ಹೀಗೆ ಕೆಲವರು ಗೋಚರಿಸುವಂತಹ ನಿಬ್ಬಾಣವೆಂದು ಪ್ರತಿಪಾದಿಸುತ್ತಾರೆ.
                ಇವೇ ಭಿಕ್ಷುಗಳೇ, ಕೆಲವು ಸಮಣ ಬ್ರಾಹ್ಮಣರು ಐದು ರೀತಿಯಲ್ಲಿ ದಿಟ್ಠಧಮ್ಮ ನಿಬ್ಬಾಣವಾದವನ್ನು ಮಂಡಿಸುತ್ತಾರೆ. ಹೀಗೆ ಅವರು ಐದರಲ್ಲಿ ಒಂದು ಎತ್ತಿಹಿಡಿದು ವಾದಿಸುತ್ತಾರೆ.
                ಇವು ಭಿಕ್ಷುಗಳೇ, ಆ ಬೇರೆಯ ಉದಾತ್ತ ಗಂಭೀರ ವಿಷಯಗಳಾಗಿವೆ... ತಥಾಗತರನ್ನು ಪ್ರಶಂಸಿಸುತ್ತಾರೆ.
                ಇವೇ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಭವಿಷ್ಯವನ್ನು ಊಹಾಪೋಹಗಳಿಂದ, ಮಿಥ್ಯಾದೃಷ್ಟಿಗಳಿಂದ 44 ಆಧಾರಗಳಿಂದ ಇವುಗಳಲ್ಲಿ ಒಂದನ್ನು ಪ್ರತಿಪಾದಿಸುತ್ತಾರೆ ಹೊರತು ಬೇರಲ್ಲ.
                ಇವು ಭಿಕ್ಷುಗಳೇ, ಆ ಬೇರೆಯ ಉದಾತ್ತ ಗಂಭೀರ ವಿಷಯಗಳಾಗಿವೆ... ಹೀಗೆ ತಥಾಗತರನ್ನು ಯೋಗ್ಯವಾಗಿ ಪ್ರಶಂಸಿಸಿದಂತಾಗುತ್ತದೆ.
                ಇವೇ ಭಿಕ್ಷುಗಳೇ, ಸಮಣ ಬ್ರಾಹ್ಮಣರು, ಭೂತಕಾಲದಿಂದ ಅಥವಾ ಭವಿಷ್ಯ ಕಾಲದಲ್ಲಿ ಹೀಗಿರುತ್ತದೆ ಎಂದು ತಮ್ಮ ತರ್ಕ, ಊಹೆ ಮತ್ತು ಸೀಮಿತ ಅನುಭವದಿಂದ 62 ರೀತಿಯಲ್ಲಿ ಒಂದನ್ನು ನೀಡಿ, ವಾದಿಸುತ್ತಾರೆ ಹೊರತು ಬೇರಲ್ಲ.
........................
........................
1.            ಭಿಕ್ಷುಗಳೇ, ಇಲ್ಲಿ ಯಾವ ಸಮಣ ಬ್ರಾಹ್ಮಣರು ಶಾಶ್ವತವಾದಿಗಳು ಆಗಿದ್ದಾರೋ ಅವರು ನಾಲ್ಕುರೀತಿಯಲ್ಲಿ ಲೋಕವು ಮತ್ತು ಆತ್ಮವು ಶಾಶ್ವತ ಎಂದು ವಾದಿಸುತ್ತಾರೆ.
2.            ಭಿಕ್ಷುಗಳೇ, ಇಲ್ಲಿ ಯಾವ ಸಮಣ ಬ್ರಾಹ್ಮಣರು ಪಾಶ್ರ್ವ ಶಾಶ್ವತವಾದಿಗಳು ಆಗಿದ್ದಾರೋ, ಅವರು ನಾಲ್ಕುರೀತಿಯಲ್ಲಿ ಲೋಕವೂ ಮತ್ತು ಆತ್ಮವೂ ಭಾಗಶಃ ಶಾಶ್ವತ ಮತ್ತು ಅಶಾಶ್ವತ ಎಂದು ವಾದಿಸುತ್ತಾರೆ.
3.            ಯಾರು ಅಂತಅನಂತವಾದಿಗಳು ಆಗಿದ್ದಾರೋ ಅವರು ನಾಲ್ಕುರೀತಿಯಲ್ಲಿ ಲೋಕವು ಅನಂತ ಅಥವಾ ಅಂತವೆಂದು ವಾದಿಸುತ್ತಾರೆ.
4.            ಯಾರು ಹಾವುಮೀನಿನಂತೆ ಜಾರಿಕೊಳ್ಳುವವರೋ ಅವರು ನಾಲ್ಕುರೀತಿಯಲ್ಲಿ ಸಂಭಾಷಿಸಿ ಜಾರಿಕೊಳ್ಳುತ್ತಾರೆ.
5.            ಯಾರು ಆಕಸ್ಮಿಕ ಉತ್ಪನ್ನವಾದಿಗಳಾಗಿರುವರೋ ಅವರು ಎರಡು ರೀತಿಯಲ್ಲಿ ಲೋಕವು ಮತ್ತು ಆತ್ಮವು ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಉತ್ಪನ್ನವಾಯಿತು ಎಂದು ವಾದಿಸುತ್ತಾರೆ.
                ಇವೇ ಭಿಕ್ಷುಗಳೇ, 18 ರೀತಿಯಲ್ಲಿ ಭೂತಕಾಲದ ರಚನೆ ಮಾಡುವರು.
6.            ಯಾರು ಸಞ್ಞೆವಾದಿಗಳೋ ಅವರು 16 ವಿಧಗಳಿಂದ ಆತ್ಮಕ್ಕೆ ಸಾವಿನ ನಂತರ (ಅರಿವು) ಗ್ರಹಿಕೆಯಿರುತ್ತದೆ ಎಂದು ವಾದಿಸುತ್ತಾರೆ.
7.            ಯಾರು ಅಸಞ್ಞವಾದಿಗಳೋ ಅವರು 8 ವಿಧಗಳಿಂದ ಆತ್ಮಕ್ಕೆ ಸಾವಿನ ನಂತರ ಅರಿವಿರುವುದಿಲ್ಲ (ಗ್ರಹಿಕೆಯಿರುವುದಿಲ್ಲ) ಎಂದು ವಾದಿಸುತ್ತಾರೆ.
8.            ಯಾರು ನೇವಸನ್ಯಾನಸನ್ಯಾದಾದಿಗಳೋ ಅವರು 8 ವಿಧಗಳಿಂದ ಆತ್ಮಕ್ಕೆ ಸಾವಿನ ನಂತರ ಗ್ರಹಿಕೆಯಿರುವುದಿಲ್ಲ, ಹಾಗೆಯೇ ಇಲ್ಲದೆಯೂ ಇರುವುದಿಲ್ಲ ಎಂದು ವಾದಿಸುತ್ತಾರೆ.
9.            ಯಾರು ಉಚ್ಛೇದ (ವಿನಾಶ) ವಾದಿಗಳೋ ಅವರು 7 ವಿಧಗಳಿಂದ ಆತ್ಮವು ಸಾವಿನ ನಂತರ ಇನ್ನಿಲ್ಲವಾಗುತ್ತದೆ ಎಂದು ವಾದಿಸುತ್ತಾರೆ.
10.          ಯಾರು ದಿಟ್ಠಧಮ್ಮ ನಿಬ್ಬಾಣ ವಾದಿಗಳೋ ಅವರು 5 ವಿಧಗಳಿಂದ ಈ ಲೋಕದಲ್ಲೇ ಗೋಚರವಾಗುವ ನಿಬ್ಬಾಣವನ್ನು ವಾದಿಸುತ್ತಾರೆ. ಹೀಗೆ 44 ರೀತಿಗಳಲ್ಲಿ ಭವಿಷ್ಯದ ಬಗ್ಗೆ ವಾದಿಸುತ್ತಾರೆ.
                ಇವರೆಲ್ಲರ ದೃಷ್ಟಿಕೋನಗಳು ಕೇವಲ ಸೀಮತ ವ್ಯಕ್ತಿಗತ ಅನುಭವಗಳಿಂದ ಬಂದಿದುದ್ದಾಗಿದೆ. ಇದರ ಪರಿಣಾಮವು ನೋವಿನಿಂದ ದುಃಖಗಳಿಂದ ಕೂಡಿದೆ. ಯಾವ ಸಮಣ ಬ್ರಾಹ್ಮಣರು ಇವುಗಳ ಪರಿಣಾಮಗಳು ತಿಳಿಯಲಾರರೋ ಅವರೆಲ್ಲರೂ ತನ್ಹಾಕ್ಕೆ ಸಿಲುಕುತ್ತಾರೆ (ತನ್ಹಾವೇ ದುಃಖಕ್ಕೆ ಕಾರಣವಾಗಿದೆ).
                ಅವರೆಲ್ಲರ ಅನುಭವವು ಸ್ಪರ್ಶದಿಂದ ಅವಲಂಬಿತವಾಗಿದೆ. ಅವರು ಸ್ಪರ್ಶವಿಲ್ಲದಿದ್ದರೆ ಈ ಅನುಭವವನ್ನು ಪಡೆಯುತ್ತಿರಲಿಲ್ಲ. ಅವರೆಲ್ಲರೂ ಈ ಅನುಭವಗಳನ್ನು ನಿರಂತರ ಸ್ಪರ್ಶದಿಂದಾಗಿ ಪಡೆದಿದ್ದಾರೆ. ಈ ಅನುಭವದ ಪರಿಣಾಮವು ತೃಷ್ಣೆಯಾಗಿದೆ, ತೃಷ್ಣೆಯ ಪರಿಣಾಮವು ಉಪಾದಾನ ಮತ್ತು ಭವವಾಗಿದೆ. ಭವವಿರುವಾಗ ಜನ್ಮವು ಮತ್ತೆ ಮತ್ತೆ ತಾಳುತ್ತಾರೆ. ಜನ್ಮ ತಾಳಿದಾಗ ಅವರು ದುಃಖರಾಶಿಯನ್ನು ಅನುಭವಿಸಬೇಕಾಗುತ್ತದೆ. ಆದರೆ ಯಾವ ಆರ್ಯಶ್ರಾವಕನು ಇದನ್ನು ಇದು ಇರುವಂತೆಯೇ ಅರಿಯುತ್ತಾನೋ ಅವುಗಳ ಆದಿ ಮತ್ತು ಅಂತ್ಯವನ್ನು, ಅವುಗಳ ರುಚಿ ಮತ್ತು ಅಪಾಯಗಳನ್ನು ಅರಿತಾಗ ಆತನು ಆರು ಇಂದ್ರೀಯಗಳ ಸ್ಪರ್ಶದಿಂದ ಆತೀತನಾಗುತ್ತಾನೆ. ಹೀಗೆ ಆತನು ಈ ಎಲ್ಲಾ ದೃಷ್ಟಿಜಾಲದಿಂದ ಆಚೆಗೆ ಹೋಗುತ್ತಾನೆ.
                ಭಿಕ್ಷುಗಳೇ, ಯಾರೆಲ್ಲರೂ ಸಮಣಬ್ರಾಹ್ಮಣರೋ ಈ ರೀತಿಯಾಗಿ ಭೂತ ಅಥವಾ ಭವಿಷ್ಯದ ಬಗ್ಗೆ ಅಥವಾ ಎರಡರ ಬಗ್ಗೆ ತಮ್ಮ ಊಹಾಪೋಹದ ದೃಷ್ಟಿಕೋನಗಳಿಂದ ಮತ್ತು ಸೀಮಿತ ಅನುಭವದಿಂದ ಪ್ರತಿಪಾದಿಸುತ್ತಿರುವರೋ ಅವರೆಲ್ಲರೂ ಈ 62 ದೃಷ್ಟಿಜಾಲಗಳಲ್ಲಿ ಸಿಲುಕಿರುವರು. ಈ ರೀತಿಯಾಗಿ ಅಥವಾ ಆ ರೀತಿಯಾಗಿ ಮುಳುಗಿ ಹೋಗಿದ್ದಾರೆ. ಕೆಸರಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ, ಸಿಲುಕಿ ಹೋಗಿದ್ದಾರೆ.
                ಹೇಗೆ ಭಿಕ್ಷುಗಳೇ, ಕುಶಲ ಮೀನುಗಾರನು ಬಲೆಯನ್ನು ಬೀಸುವಾಗ ಹೀಗೆ ಯೋಚಿಸುತ್ತಾನೆ: ಇಲ್ಲಿ ಯಾವುದೇ ಅಳತೆಯ ಮೀನುಗಳಿರಲಿ, ಅವೆಲ್ಲವು ನನ್ನ ಬಲೆಗೆ ಸಿಲುಕುತ್ತವೆ, ನಾನು ಹಿಡಿದೇ ತೀರುತ್ತೇನೆ. ಅದೇರೀತಿಯಲ್ಲಿ ಯಾರೆಲ್ಲರೂ ಭೂತ ಮತ್ತು ಭವಿಷ್ಯದ ದೃಷ್ಟಿಕೋನಗಳಲ್ಲಿ ಬಿದ್ದಿರುವರೋ, ಅವರೆಲ್ಲರೂ ದೃಷ್ಟಿಜಾಲದಲ್ಲಿ ಸಿಲುಕಿದ್ದಾರೆ.
                ಓ ಭಿಕ್ಷುಗಳೇ, ತಥಾಗತರ ಬಾಹ್ಯರೂಪವು ನಿಮ್ಮ ಮುಂದೆ ಇದೆ. ಅವರಲ್ಲಿ ಪುನರ್ಜನ್ಮಕ್ಕೆ ಕಾರಣವಾದುದೆಲ್ಲ ಕತ್ತರಿಸಲ್ಪಟ್ಟಿದೆ. ಎಲ್ಲಿಯವರೆಗೆ ಅವರಿಗೆ ಶರೀರವಿದೆಯೋ ಅಲ್ಲಿಯವರೆಗೆ ಅವರನ್ನು ದೇವತೆಗಳು ಮತ್ತು ಮಾನವರು ಪೂಜಿಸುತ್ತಾರೆ. ಆದರ ಅವರ ಮಹಾ ಪರಿನಿಬ್ಬಾಣದ ನಂತರ, ಶರೀರದ ಕರಗುವಿಕೆಯ ನಂತರ ದೇವತೆಗಳಾಗಲಿ ಅಥವಾ ಮಾನವರೇ ಆಗಲಿ, ಯಾರೂ ಅವರನ್ನು ಕಾಣಲಾರರು.
                ಓ ಭಿಕ್ಷುಗಳೇ, ಹೇಗೆ ಮಾವಿನ ಮರದ ಕೊಂಬೆಯನ್ನು ಕತ್ತರಿಸಿದರೂ ಸಹಾ, ಆ ಕತ್ತರಿಸಲ್ಪಟ್ಟ ಕೊಂಬೆಗೆ ಮಾವುಗಳು ನೇತಾಡುತ್ತಲೇ ಇರುತ್ತವೆ. ಅದೇರೀತಿಯಲ್ಲಿ ಭಿಕ್ಷುಗಳು ತಥಾಗತರ ಬಾಹ್ಯ ಸ್ವರೂಪವು ನಿಮ್ಮ ಮುಂದಿದ್ದರೂ ಸಹಾ, ಅವರ ಪುನರ್ಜನ್ಮಕ್ಕೆ ಕಾರಣವಾದುದೆಲ್ಲವೂ ಕತ್ತಿರಿಸಲ್ಪಟ್ಟಿದೆ. ಎಲ್ಲಿಯವರೆಗೆ ಶರೀರವಿದೆಯೋ ಅಲ್ಲಿಯವರೆಗೆ ದೇವತೆಗಳು ಮತ್ತು ಮಾನವರು ಅವರನ್ನು ಪೂಜಿಸುತ್ತಾರೆ. ಆದರೆ ಮಹಾ ಪರಿನಿಬ್ಬಾಣದ ನಂತರ ದೇಹ ಕರಗಿದ ನಂತರ ದೇವತೆಗಳಾಗಲಿ ಅಥವಾ ಮಾನವರಾಗಲಿ ಅವರನ್ನು ಕಾಣಲಾರರು.
                ಹೀಗೆ ಭಗವಾನರು ಹೇಳಿದ ನಂತರ ಪೂಜ್ಯ ಆನಂದರವರು ಭಗವಾನರೊಂದಿಗೆ ಹೀಗೆ ಹೇಳಿದರು: ಅದ್ಭುತ ಭಂತೆ, ಆಶ್ಚರ್ಯ ಭಗವಾನ್. ಇದು ನಿಜಕ್ಕೂ ಪರಮಾದ್ಭುತವಾಗಿದೆ. ಈ ಸತ್ಯಭರಿತ ಸುತ್ತಕ್ಕೆ ಏನೆಂದು ಹೆಸರಿಡೋಣ?
                ಆನಂದ, ನಿನಗೆ ನೆನಪಿರಬಹುದು, ಈ ಸುತ್ತವು ಅರ್ಥಕ್ಕೆ ಸಂಬಂಧಿಸಿದುದ್ದಾಗಿದೆ. ಆದ್ದರಿಂದ ಇದಕ್ಕೆ ಅರ್ಥ ಜಾಲಾ ಅಥವಾ ಧಮ್ಮಜಾಲಾ ಎನ್ನಬಹುದು ಅಥವಾ ಬ್ರಹ್ಮಜಾಲಾ ಅಥವಾ ದೃಷ್ಟಿಜಾಲಾ ಎಂದು ಕರೆಯಬಹುದು ಅಥವಾ ಅನುತ್ತರ ಸಂಗ್ರಾಮ ವಿಜಯ ಎಂದು ಕರೆಯಬಹುದು.

                ಹೀಗೆ ಭಗವಾನರು ಹೇಳಿದಾಗ ಎಲ್ಲಾ ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು ಮತ್ತು ಈ ಸುತ್ತ ಪ್ರವಚಿಸಿದಾಗ ದಶಸಹಸ್ರ ಲೋಕಧಾತುಗಳು ಕಂಪಿಸಿದವು