Thursday 14 November 2019

ಎಲ್ಲಿಯವರೆಗೆ ಸಮ್ಮಾದೃಷ್ಟಿ

ಎಲ್ಲಿಯವರೆಗೆ ಸಮ್ಮಾದೃಷ್ಟಿ

ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ತಂಗಿರುವಾಗ ಪೂಜ್ಯ ಕಚ್ಚಾಯನರು ಅಲ್ಲಿಗೆ ಬಂದು ವಂದಿಸಿ ಗೌರವದಿಂದ ಒಂದೆಡೆ ಕುಳಿತರು. ನಂತರ ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದರು: ಭಗವಾನ್ ಸಮ್ಮಾದೃಷ್ಟಿ, ಸಮ್ಮಾದೃಷ್ಟಿ ಎನ್ನುತ್ತಾರೆ, ಎಲ್ಲಿಯವರೆಗೆ ಸಮ್ಮಾದೃಷ್ಟಿ ಎನಿಸುತ್ತದೆ?
ಓ ಕಚ್ಚಾಯನ, ಈ ಲೋಕದಲ್ಲಿ ಎರಡುರೀತಿಯ ವಿಷಯಗಳಲ್ಲಿ ದೃಷ್ಟಿಗಳು ರಚಿತವಾಗುತ್ತದೆ, ಅಸ್ತಿತ್ವದ ಬಗ್ಗೆ ಮತ್ತು ಅಸ್ತಿತ್ವವಿಲ್ಲದಿರುವ ಬಗ್ಗೆ.
ಯಾರಿಗೆ ಯೋಗ್ಯ ದೃಷ್ಟಿಯಿರುತ್ತದೋ ಆತನು ಉದಯಿಸುವ ಲೋಕವನ್ನು ಅದು ಇರುವಂತೆ ನೊಡುತ್ತಾನೆ. ಹೀಗಾಗಿ ಆತನು ಅಸ್ತಿತ್ವವಿಲ್ಲ ಎಂಬ ದೃಷ್ಟಿಕೋನಕ್ಕೆ ಅಂಟಲಾರ. ಆದರೆ ಯಾರು ಯೋಗ್ಯ ದೃಷ್ಟಿಯಿಂದ ಲೋಕವು ಅಳಿಯುವುದನ್ನು ಮರೆಯಾಗುವುದನ್ನು ಕಾಣುತ್ತಾನೋ ಆತನು ಅಸ್ತಿತ್ವ ಇದೆ ಎಂಬ ದೃಷ್ಟಿಕೋನಕ್ಕೆ ಅಂಟಲಾರ.
ಹೀಗೆ ಸಿದ್ಧಾಂತಗಳಿಗೆ ಅಂಟಿಕೊಂಡು ಅದಕ್ಕೆ ಬಂಧಿತರಾಗುತ್ತಾರೆ ಮತ್ತು ಯಾರು ಸಿದ್ಧಾಂತಗಳಿಗೆ ಅಂಟುವುದಿಲ್ಲವೋ ಪೂವರ್ಾಗ್ರಹ ಪೀಡಿತರಾಗುವುದಿಲ್ಲವೋ, ಪಕ್ಷಾಪಾತರಹಿತರೋ ಅವರು ಇದು ನನ್ನ ಆತ್ಮ ಎಂದು ತೀಮರ್ಾನಿಸುವುದಿಲ್ಲ. ಅವರು ದುಃಖವು ಉದಯಿಸಿದೆ ಮತ್ತು ದುಃಖವು ಅಳಿಯುತ್ತಿದೆ ಎಂದು ವೀಕ್ಷಿಸುತ್ತಾರೆ.
ಅಂತಹವನು ಸಂಶಯಗಳಿಗೆ ಬೀಳಲಾರ, ದ್ವಂದ್ವಕ್ಕೆ ಸಿಲುಕಲಾರ. ಇಲ್ಲಿಯವರೆಗೆ ಕಚ್ಚಾಯನ ಇದು ಸಮ್ಮಾದೃಷ್ಟಿ ಎನಿಸುತ್ತದೆ.
ಪ್ರತಿಯೊಂದು ಇದೆ (ಅಸ್ತಿತ್ವದಲ್ಲಿದೆ) ಇದು ಒಂದು ಅತಿರೇಕ, ಹಾಗೆಯೇ ಯಾವುದೂ ಇಲ್ಲ (ಅಸ್ತಿತ್ವದಲ್ಲಿಲ್ಲ). ಇದು ಇನ್ನೊಂದು ಅತಿರೇಕವಾಗಿದೆ. ಆದ್ದರಿಂದಾಗಿ ತಥಾಗತರು ಮಧ್ಯಮ ಮಾರ್ಗವನ್ನು ಬೋಧಿಸುತ್ತಾರೆ. ಅದು ಹೀಗಿದೆ:
ಅಜ್ಞಾನದಿಂದಾಗಿ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ. ಸಂಖಾರಗಳಿಂದ ವಿಞ್ಞಾನವು (ಅರಿವು) ಉಂಟಾಗುತ್ತದೆ.
ವಿಞ್ಞಾನದಿಂದ ನಾಮರೂಪಗಳು (ದೇಹ ಮತ್ತು ಮನಸ್ಸು) ಉಂಟಾಗುತ್ತದೆ, ನಾಮರೂಪದಿಂದ ಸಳಾಯಾತನ (ಆರು ಇಂದ್ರೀಯಗಳ ಆಧಾರಗಳು) ಉಂಟಾಗುತ್ತದೆ, ಸಳಾಯಾತನದಿಂದ ಸ್ಪರ್ಶವು ಉಂಟಾಗುತ್ತದೆ, ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ, ವೇದನೆಗಳಿಂದ ತನ್ಹಾ (ತೃಷ್ಣೆ) ಉಂಟಾಗುತ್ತದೆ, ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ, ಅಂಟುವಿಕೆಯಿಂದ ಭವ ಉಂಟಾಗುತ್ತದೆ, ಭವದಿಂದ ಜನ್ಮ ಉಂಟಾಗುತ್ತದೆ, ಜನ್ಮದಿಂದ ದುಃಖರಾಶಿಯು ಉಂಟಾಗುತ್ತದೆ.
ಹೀಗೆ ಇವುಗಳ ಉದಯದಿಂದ ಇಡೀ ದುಃಖರಾಶಿ ಉದಯಿಸುತ್ತದೆ. ಆದರೆ ಅಜ್ಞಾನದ ನಿರೋಧದಿಂದ ಸಂಖಾರದ ನಿರೋಧವಾಗುತ್ತದೆ. ಸಂಖಾರದ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ, ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. ನಾಮರೂಪದ ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ, ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ, ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ ಜನ್ಮ ನಿರೋಧವಾಗುತ್ತದೆ, ಜನ್ಮದ ನಿರೋಧದಿಂದ ಇಡೀ ದುಃಖ ನಿರೋಧವಾಗುತ್ತದೆ. ಹೀಗೆ ಇವುಗಳ ನಿರೋಧದಿಂದ ಇಡೀ ದುಃಖರಾಶಿ ನಿರೋಧವಾಗುತ್ತದೆ. ಓ ಕಚ್ಚಾಯನ ಇಷ್ಟರಮಟ್ಟಿಗೆ ಇದು ಸಮ್ಮಾದೃಷ್ಟಿಯಾಗಿದೆ.

No comments:

Post a Comment