Saturday 8 January 2022

ಪುಸ್ಸ ಪುನ್ನಮಿ (ಜನವರಿ ತಿಂಗಳ ಹುಣ್ಣಿಮೆ)ಯ ವೈಶಿಷ್ಯತೆಗಳು the significance of January full moon day

      ಪುಸ್ಸ ಪುನ್ನಮಿ (ಜನವರಿ ತಿಂಗಳ ಹುಣ್ಣಿಮೆ)ಯ ವೈಶಿಷ್ಯತೆಗಳು




ಈ ಶುಭದಿನದಂದು ಬುದ್ಧ ಭಗವಾನರು ತಮ್ಮ ಸಂಯಕ್ ಸಂಬೋಧಿಪ್ರಾಪ್ತಿಯ 9 ತಿಂಗಳ ನಂತರ ಜಟಿಲ ಕಸ್ಸಪರಾದ ಉರುವೇಲ ಕಸ್ಸಪ, ಗಯಾಕಸ್ಸಪ, ಮತ್ತು ನದಿ ಕಸ್ಸಪರನ್ನ್ನು ದಮಿಸಿದ ನಂತರ ಅವರು ಮೋದಲ ಬಾರಿಗೆ ಶ್ರೀಲಂಕೆಗೆ ಮೋದಲ ಭೇಟಿ ನೀಡಿದ ದಿನವಾಗಿದೆ. ಇದರ ಬಗ್ಗೆ ಶ್ರೀಲಂಕೆಯ ಇತಿಹಾಸ ಗೃಂಥಗಳು ಬೆಳಕು ಚೆಲ್ಲುತ್ತದೆ. ಈ ಪುಸ್ಸ(ಪುಷ್ಯ) ಹುಣ್ಣಮಿಯು ಸಾಧಾರಣವಾಗಿ ಜನವರಿ ತಿಂಗಳಲ್ಲೆ ಬರುವುದು. 


  ರಾವಣ, ವಿಭೀಷಣರವರ ನಂತರದ ಸಂತಾನವನ್ನು ಯಕ್ಷರು ಎಂದು ಕರೆಯುತ್ತಿದ್ದರು, ಅಲ್ಲಿ ಆಗ ಶ್ರೀಲಂಕೆಯಲ್ಲಿ ಯಕ್ಷರು ಹಾಗೂ ನಾಗರು ವಾಸಿಸುತ್ತಿದ್ದರು. ಈ ನಾಗ ಹಾಗೂ ಯಕ್ಷರ ನಡುವೆ ಆಗ ಸದಾ ಯುದ್ಧಗಳು ಸಂಭವಿಸುತ್ತಿತ್ತು. ಆಗ ಲಂಕೆಯ ದೇವನಾದ ಸುಮನನಿಗೆ ಈ ಕಾದಾಟಗಳಿಗೆ ಅಂತ್ಯವಾಡಲು ಬುದ್ಧಭಗವಾನರಿಂದ ಮಾತ್ರ ಸಾಧ್ಯ ಎಂದು ಅರಿತು ಆತನು ಭಗವಾನ ಬುದ್ಧರ ಬಳಿಗೆ ಬಂದು ಪ್ರಾಥರ್ಿಸುತ್ತಾನೆ. ಆಗ ಭಗವಾನರು ಆತನ ಕೋರಿಕೆಗೆ ಒಪ್ಪಿಗೆ ಸೂಚಿಸಿ, ಇದ್ಧಿಬಲದಿಂದ ಶ್ರೀಲಂಕೆಗೆ ಬರುತ್ತಾರೆ. 


       ಯಕ್ಷರ ದಮನ ಮತ್ತು ದಮ್ಮದ ಆರಂಭ

 ಆ ಸಮಯದಲ್ಲಿ ಯಕ್ಷರು ಮಹಿಯಂಗನದಲ್ಲಿನ ಮಹಾನಾಗ ಉಧ್ಯಾನವನದಲ್ಲಿ ಸಭೆ ಸೇರಿರುತ್ತಾರೆ. ಅಲ್ಲಿ ಭಗವಾನರು ಪ್ರತ್ಯಕ್ಷರಾಗುತ್ತಾರೆ. ಅವರು ಅದ್ವಿತೀಯ ಪ್ರಭಾವಳಿಯಿಂದ ಕೂಡಿ ತಮ್ಮ ಆರು ವರ್ಣಗಳ ಪ್ರಭೆಯಿಂದಾಗಿ ಪರಮದಿವ್ಯರಾಗಿ ಕಾಣಿಸುತ್ತಾರೆ. ಅದರೆ ಆ ಯಕ್ಷರು ಅವರನ್ನು ಯಾರೊ ಆಕ್ರಮಣಕ್ಕೆ ಬಂದಿರುವರು ಎಂದು ಭಾವಿಸಿ, ಅವರೆಲ್ಲರೂ ಶಸ್ತ್ರಗಳನ್ನು ಬೀಸಲು ಸಿದ್ಧರಾದರು. ಆಗ ಭಗವಾನರು ತಕ್ಷಣ ತಮ್ಮ ಇದ್ದಿಬಲದಿಂದ ಮಹಾ ಬಿರುಗಾಳಿ, ಮಳೆ, ಸಿಡಿಲು, ಮಿಂಚುಗಳ ಮಿಶ್ರಿತ ಭೀಕರ ವಾತಾವರಣವನ್ನು ಸೃಷ್ಟಿಸಿದರು. ಆಗ ಯಕ್ಷರಿಗೆ ಭಗವಾನರ ಮಹಾಬಲವೂ ಅರ್ಥವಾಗಿ ಪೂರ್ಣವಾಗಿ ಶರಣು ಹೋದರು, ಅವರೊಂದಿಗೆ ಭಯ, ಭಕ್ತಿಯಿಂದ ನಡೆದುಕೊಂಡರು. ನಂತರ ಭಗವಾನರು ಅಲ್ಲಿನ ವೃಕ್ಷವೊಂದರ ಕೆಳಗೆ ಪತಕಡ ವಸ್ತ್ರವನ್ನು ಹಾಸಿ ಅದರ ಮೇಲೆ ಕುಳಿತು ಅಲ್ಲಿಗೆ ನಾಗರನ್ನು ಕರೆಯಿಸಿ ಯಕ್ಷ ಹಾಗೂ ನಾಗರಲ್ಲಿ ಸಂಧಾನವೆರ್ಪಡಿಸಿ ಅವರಲ್ಲಿ ಮೆತ್ತವನ್ನು ಹರಡಿ ಅವರೆಲ್ಲಾ ಮಿತ್ರತ್ವಭಾವದಿಂದ ಇರುವಂತೆ ಮಾಡಿದರು. ನಂತರ ಗಿರಿದ್ವೀಪವನ್ನು ಹತ್ತಿರ ಬರಮಾಡಿ ಅದರಲ್ಲಿ ಯಕ್ಷರಾಕ್ಷಸರನೆಲ್ಲಾ ಕಳುಹಿಸಿದರು. . ನಂತರ ಯಕ್ಷರು ಅಲ್ಲಿ ತೊಂದರೆ ಮಾಡದೆ ಗಿರಿದೀಪದಲ್ಲಿಯೇ ನೆಲೆಸಲು ಹೋದರು. ಅವರ ಈ ಮೋದಲ ಭೇಟಿಯು ಮುಂದೆ ಅಸೋಕ ಸಾಮ್ರಾಟ್ರವರ ಮಗ ಮಹಿಂದರು ಬುದ್ಧಧಮ್ಮವನ್ನು ಹರಡಲು ಸಹಾಯಕವಾಯಿತು


  ನಂತರ ಅಲ್ಲಿ ನಾಗಪಂಗಡದವರು ಹಾಗೂ ದೇವತೆಗಳು ಆ ನಾಗವನದಲ್ಲಿ ಭಗವಾನರ ಬಳಿ ತಿಸರಣವನ್ನು ಪಡೆದರು. ಮಧ್ಯ ಶ್ರಿಲಂಕೆಯಲ್ನಿ ಬೆಟ್ಟಗಳಲ್ಲಿ ದೇವಗಣವು ವಾಸಿಸುತ್ತಿದ್ದರು, ಅವರ ನಾಯಕನೇ ಸುಮನ ಸಮನ್ ಆತನಿಗೆ ಸೋತಪತ್ತಿ ಫಲವು ದೊರೆಯಿತು. ಬುದ್ಧರ ಬೋಧನೆಯಿಂದ ಸೋತಪನ್ನನಾದ ಮೇಲೆ ಆತನು ಅಪಾರ ಶ್ರದ್ಧೆಯಿಂದ ಕೂಡಿ ಭಗವಾನರ ಬಳಿ ಪೂಜಿಸುವ ದಾತುವನ್ನು ನೀಡುವಂತೆ ಕೋರಿಕೊಂಡನು. ಆಗ ಭಗವಾನರು ಆತನಿಗೆ ಹಿಡಿ ಕೇಶವನ್ನು ಕಿತ್ತು ನೀಡುವರು. ಅದನ್ನು ಆತನು ಸ್ವರ್ಣ ಪಾತ್ರೆಯಲ್ಲಿ ಪಡೆದು ಮಹಿಯಗನ ಚೇತಿಯವನ್ನು ನಿಮರ್ಿಸಿ ಅದರಲ್ಲಿ ಭಗವಾನರ ಪವಿತ್ರ ಕೇಶವನ್ನಿಟ್ಟು ಇಲ್ಲಿಯವರೆವಿಗೂ ಲಂಕಾ ಪ್ರಜೆಗಳು ಪೂಜಿಸುತ್ತ ಬಂದಿರುವರು.  ಬುದ್ಧರ ಕಾಲದಲ್ಲೇ ನಿಮರ್ಿತವಾದ ಮೊದಲ ಲಂಕಾದ ಪಗೋಡವಾಗಿದೆ(ದಬೋಗ). ಈ ಮಹಿಯಗೀನ ದಬೋಗವು ಮಿಯುಗುಣಸೇಯಾ ಎಂದು ಕರೆಯಲ್ಪಡುತ್ತದೆ. ಇದು ಸಹಾ ಮಹಾನಾಗವನದಲ್ಲೆ ಇದೆ. 


   ಈ ಘಟನೆಯ 45ವರ್ಷಗಳ ನಂತರ ಅಂದರೆ ಬುದ್ಧಭಗವಾನರ ಪರಿನಿಬ್ಬಾಣದ ನಂತರ ಪೂಜ್ಯ ಸಾರಿಪುತ್ತರ ಶಿಷ್ಯರಾದಂತಹ ಅರಹಂತ ಸರಭರು ಬುದ್ಧಭಗವಾನರ ಹೆಗಲಿನ ಅಸ್ತಿಯನ್ನು(ಗ್ರೀವ ಧಾತು) ಇಲ್ಲಿಗೆ ತಂದು ಸ್ತೂಪವನ್ನು ನಿಮರ್ಿಸುತ್ತಾರೆ. ನಂತರ ದೇವ ಸುಮನಸಮನ್ರವರು ಆ ಸ್ತೂಪವನ್ನು 12 ಮೊಳದಷ್ಟು (ಒಂದು ಮೋಳ =18 ಇಂಚು)ಎತ್ತರ ನಿಮರ್ಿಸುವರು. ಅಂದರೆ ಸುಮಾರು 18 ಅಡಿಗಳ ಸ್ತೂಪ. ನಂತರ ಬಂದತಹ ರಾಜ ದೇವಾಂಪ್ರಿಯ ತಿಸ್ಸನ ಸೋದರನಾದ ಉದ್ಧ ಚುಲಭಯನು ಅದೇ ಸ್ತೂಪವನ್ನು 30 ಮೊಳದಷ್ಟು(45 ಅಡಿ) ಎತ್ತರವಾದ ಸ್ತೂಪವನ್ನಾಗಿದನು. ಅದಕ್ಕೆ ಕಂಚುಕ ಚೇತಿಯ ಎಂದು ಕರೆದರು.  ನಂತರ ಬಂದಂತಹ ಶ್ರದ್ಧಾಶೀಲ ರಾಜನಾದ ದುಟುಗೆಮೆನು ಈ ಸ್ಥಳದ ಮಹತ್ವವನ್ನು ಅರಿತು ಆ ಸ್ತೂಪದ ಸುತ್ತಲು 80 ಮೊಳ ಎತ್ತರದ ಸ್ತೂಪವನ್ನು ನಿಮರ್ಿಸುವನು. ಅದು ಹಳೆಯ ಸ್ತೂಪದ ಮೇಲೆ ನಿಮರ್ಾಣವಾಯಿತು. ನಂತರವೂ ಕಾಲ ಕಾಲಕ್ಕೇ ಆಲ್ಲಿನ ರಾಜರೂಗಳಾದ ಧಾಟುಸೇನ, ಸಿರಿಸಂಗಬೊ, ಅಗ್ಬೊ, ಮಿಯುಗುಣ ಸೇಯಾ, ರವರು ಅದನ್ನು ಇನ್ನಷ್ಟು ಎತ್ತರ, ಅಗಲ, ಬಲಿಷ್ಟ, ವಿಶಿಷ್ಟವಾಗುವಂತೆ ರಚಿಸಿದ್ದಾರೆ. ಈಗ ಅದನ್ನು ಮಹಿಯಗಣ ಚೇತಿಯಾ ವರ್ಧನ ಸಮಿತಿಯ ನಿರ್ವಹಿಸುತ್ತದೆ.


    ಇಲ್ಲಿಗೆ ಭಕ್ತಗಣವು ಸಮಾನ್ಯವಾಗಿ ಜನವರಿ ತಿಂಗಳಲ್ಲೆ ಹೆಚ್ಚಾಗಿ ಬೇಟಿ ನೀಡುವರು. ಇದು ದುರುತು (ಜನವರಿ) ಮಾಸದ ಹುಣ್ಣಿಮೆದಿನದಂದು ಅಪಾರ ಭಕ್ತ ಸಮೂಹವು ಸೇರುವುದು. ಈ ಸ್ತೂಪವು ಮಹಾವೇಲಿ ನದಿಯ ದಡದಲ್ಲಿದೆ, ಇಲ್ಲಿ ರಾಜಕುಮಾರ ಸಂಘಬೋಧಿಯಿಂದ ಬೋಧಿವೃಕ್ಷವೂ ಸಹಾ ನೆಡಲ್ಪಟ್ಟಿದೆ.

 

    ರಾಜ ಬಿಂಬಸಾರನಿಗೆ ಧಮ್ಮಬೋದನೆ

  ನಂತರ ಭಗವಾನರು ಇದೇ ಸಮಯದಲ್ಲಿ ಅಂದರೆ ಇದೇ ಹುಣ್ಣಿಮೆಯಂದು ರಾಜ ಬಿಂಬಸಾರನಿಗೆ ಧಮ್ಮ ಬೋಧನೆಯನ್ನು ನೀಡಲು ಮಗಧೆಗೆ ಹೋದರು. ಆಗ ಅವರ ಹಿಂದೆ ಕಸ್ಸಪ ಸೋದರರು ಹಾಗೂ ಅವರ ಸಾವಿರಾರು ಶಿಷ್ಯರು ಸಹಾ ಇದ್ದರು. ಆಗ ರಾಜ ಬಿಂಬಸಾರನಿಗೆ ಬುದ್ದರ ಶಿಷ್ಯ ಉರುವೇಳ ಕಸ್ಸಪನೋ, ಅಥವಾ ಉರುವೇಳ ಕಸ್ಸಪನ ಶಿಷ್ಯ ಬುದ್ಧರೊ ಎಂಬ ಅನುಮಾನವಾಯಿತು . ಅವರ ಮನಸ್ಸನ್ನು ಓದಿದ ಭಗವಾನರು ಉರುವೇಳ ಕಸ್ಸಪರಿಗೆ ಹೀಗೆ ಕೇಳಿದರು :  ರೂಪಗಳಲ್ಲಿ, ಶಬ್ಧಗಳಲ್ಲಿ, ರಸಗಳಲ್ಲಿ, ರಮಿಸದೇ ಈ ದೇವಮನುಷ್ಯಗಳ ಲೋಕಗಳಲ್ಲಿ ಇನ್ಯಾವುದರಲ್ಲಿ ನಿನ್ನ ಮನವು ರಮಿಸುವುದು ಕಸ್ಸಪ ?

 ಆಗ ಉರುವೇಳ ಕಸ್ಸಪರು ಭಗವಾನರ ಪ್ರಶ್ನೆಗೇ ಅರ್ಥ ಮಾಡಿಕೊಂಡು ಹೀಗೇ ಉತ್ತರಿಸಿದರು :  ಪರಮಪದವಾಗಿರುವ, ಪರಮಶಾಂತತೆಯ, ಏನೂ ಇಲ್ಲದ , ಆ ನಿಬ್ಬಾಣದ ಮಹತ್ವತೆಯನ್ನು  ಅರಿತು, ಅದರಲ್ಲಿಯೇ ಮನವೂ ಬಾಗಿ, ಅಗ್ನಿ ಆಹುತತೆಯ ಮಾರ್ಗದಲ್ಲಿ ರಮಿಸುತ್ತಿಲ್ಲ, ಅವನ್ನೇಲ್ಲಾ ದುಃಖವಿಮುಕ್ತಿಗೇ ಅಸಹಾಯಕವೆಂದು ಅರಿತು ವಜರ್ಿಸಿದ್ದೇನೆ. ಎಂದು ಹೇಳಿ ಬುದ್ದಭಗವಾನರ ಪಾದಗಳಲ್ಲಿ ಶಿರವಿಟ್ಟು ವಂದಿಸಿ, ಪವಾಡವನ್ನು ಪ್ರದಶಿಸಿ, ಮಹಾಮಮಹೀಮರಾದ ಬುದ್ಧಭಗವಾನರೇ ನನ್ನ ಗುರುವು, ನಾನು ಅವರ ಶಿಷ್ಯನಷ್ಟೇ. ಎಂದು ನುಡಿದರು. 

 ಆಗ ಅಲ್ಲಿರುವ ಜನರಿಗೆಲ್ಲಾ ಹಾಗೂ ರಾಜ ಬಿಂಬಸಾರರಿಗೆ ಬುದ್ಧಭಗವಾನರ ಮಹತ್ವತೆ ಅರಿವಾಯಿತು. ಅವರೆಲ್ಲಾ ತಿಸರಣಕ್ಕೆ ಶರಣಾಗತರಾದರು. ರಾಜ ಬಿಂಬಸಾರನು ಭಗವಾನರಿಗೆ  ಹಾಗೂ ಸಾವಿರ ಅರಹಂತರಿಗೆ ಊಟಕ್ಕೇ ಆಹ್ವಾನಿಸಿದರು ನಂತರ ಪ್ರದಕ್ಷಣೆಮಾಡಿ ವಂದಿಸಿ ಹೋದರು. ರಾಜ ಬಿಂಬಸಾರನು ಸೋತಪನ್ನರಾದರು.

  ನಂತರ ಬಿಂಬಸಾರನು ಅತ್ಯಂತ ಪೂಜ್ಯಭಾವದಿಂದ ಆಹಾರ ಬಡಿಸಿ ಅವರ ಸೇವೆ ಮಾಡಿದನು. ನಂತರ ಅವರಿಗೆ ವೇಳುವನವನ್ನು ದಾನ ಮಾಡಿದನು. ಆಗ ಭೂಮಿಯು ಸಹಾ ಹಷರ್ಿತವಾದಂತೆ ಕಂಪಿತವಾಯಿತು. ನಂತರ ಭಗವಾನರು ಸಹಾ ಅವರ ದಾನವನ್ನು ಪ್ರಶಂಸೆ ಮಾಡಿ ಅವುಗಳ ಫಲವಾಗಿ ಸಾಧಾರಣ ಸುಖ ಆಯುವಿನಿಂದ ನಿಬ್ಬಾಣದವರೆವಿಗೂ ಲಾಭವಿದೆ ಏಂದು ಬೋಧಿಸಿದರು. ನಂತರ ಭಗವಾನರು ಭಿಕ್ಖಗಳಿಗೆ ವಸತಿ ಸ್ವೀಕರಿಸಲು ಅನುಮತಿ ನೀಡಿದರು.

  ಆ ರಾತ್ರಿ ಬಿಂಬಸಾರನಿಗೆ ಪೇತಗಳ ಭೀಕರ ಹಾಗೂ ಕರುಣಾಜನಕ ಶಬ್ದಗಳು ಕೇಳಿಸಿತು. ಅದನ್ನು ಆಲಿಸಿ ಹೆದರಿದ ಬಿಂಬಸಾರರು ಈ ವéಿಷಯದ ಬಗ್ಗೆ ಭಗವಾನರಲ್ಲಿ ಕೇಳಿದರು. ಆಗ ಭಗವಾನರು : ಭಯ ಬೇಡ ಮಹಾರಾಜ, ಇದರಿಂದ ನಿನಗೇನು ಹಾನಿಯಿಲ್ಲ, ಬದಲಾಗಿ ನಿನ್ನ ಉನ್ನತಿಯೇ ಹತ್ತಿರ ಬಂದಿದೆ, ಅವರೆಲ್ಲಾ ನಿನ್ನ ಪೂರ್ವಜರಾಗಿದ್ದಾರೆ, ಈಗ ಪೇತಗಳಾಗಿರುವರು, ನೆನ್ನೆ ಅವರಿಗೇ ನೀನು ದಾನಫಲವನ್ನು ಸಮಪರ್ಿಸದ ಕಾರಣ ದುಃಖಿತರಾಗಿರುವರು. ಈಗ ಪುನಃ ದಾನ ಮಾಡಿ ಅದರ ಫಲವನ್ನು  ಈ ದಾನಗಳ ಫಲವೇಲ್ಲಾ ನನ್ನ ಜ್ಞಾತಿ(ನೆಂಟ)ರಿಗೆ ತಲುಪಲಿ, ಅವರೆಲ್ಲಾ ಸುಖಿಯಾಗಿರಲಿ ಎಂದು ಸಂಕಲ್ಪಿಸು. ಎಂದು ಸಮಾಧಾನ ಮಾಡಿದರು.

  ನಂತರ ಬಿಂಬಸಾರರು ಹಾಗೇಯೆ ದಾನ ಮಾಡಿ ಸಂಕಲ್ಪಿದರು. ಅವರು ಭಗವಾನರ ಇಚ್ಛಾಶಕ್ತಿಯಿಂದಾಗಿ ಅವರು ಸ್ವಯಂ ತಮ್ಮ ಬಂಧುಗಳು ದಾನಗಳ ಫಲದಿಂದಾಗಿ ದೇವತಾ ಸಮಾನವಾದ ಆಹಾರ ಪಾನೀಯಗಳು ಹಾಗೂ ವಸತಿಗಳನ್ನು ಪಡೆಯುವುದನ್ನು ಸ್ವಯಂ ನೋಡಿದರು.

ನಂತರ ಭಗವಾನರು ಅವರಿಗೇ ತಿರೊಕುಡ್ಡ ಸುತ್ತವನ್ನು ಬೋಧಿಸಿದರು. ಇವೆಲ್ಲಾ ಈ ಪುಸ್ಸ ಹುಣ್ಣಮಿಯಂದು ನಡೆದ ಘಟನೆಗಳಾಗಿವೆ.