Friday 20 April 2018

ಸುನೀತ

ಸುನೀತ

ಮೈತ್ರಿ ಹಾಗು ಕರುಣೆ ಈ ಎಡರು ಶ್ರೇಷ್ಠ ದಿವ್ಯ ವಿಹಾರಗಳು ಬುದ್ಧಭಗವಾನರು ತಿಳಿಸಿದ್ದಾರೆ. ಅವು ಬೌದ್ಧರ ನೈತಿಕ ರಹಸ್ಯ ಕಲ್ಲುಗಳಾಗಿವೆ ಮತ್ತು ಶ್ರಿಲಂಕಾ, ಬರ್ಮ, ಥೈಲ್ಯಾಂಡ್, ಲಾವಸ್ ಮತ್ತು ಕಾಂಬೋಡಿಯಗಳ ಬೌದ್ಧಧರ್ಮಗಳಲ್ಲಂತು ಇದು ಪ್ರಧಾನ ಧ್ಯಾನದ ವಿಧವಾಗಿದೆ.
ಬುದ್ಧಭಗವಾನರ ಬೋಧನೆಯು ಎಲ್ಲೇ ಸಿಗಲಿ, ಯಾವ ಭಾಷೆಯಲ್ಲೇ ಸಿಗಲಿ, ಬುದ್ಧಭಗವಾನರ ಅಪರಿಮಿತ ಮೈತ್ರಿ ಮತ್ತು ಅನಂತ ಕರುಣೆಯನ್ನು ನಾವು ಕಾಣುತ್ತೇವೆ. ಬುದ್ಧರ ಕರುಣೆಯು ಅತಿರೇಕ ಸನ್ನಿವೇಶಗಳಾದಂತಹ ಅಂಗುಲಿಮಾಲಾನ ಮೇಲಷ್ಟೇ ಅಲ್ಲ, ಅದೂ ಸಾಧಾರಣ ಮಾನವರ ಸಹಾಯಕ್ಕೂ ಪ್ರಸರಿಸಿತ್ತು. ಮುಂದಿನ ಕೆಲವು ಘಟನೆಗಳು ಅವರ ಅಪಾರ ಮೈತ್ರಿ ಮತ್ತು ಆಶಾವಾದ, ಅಸೀಮ ಕರುಣೆಯನ್ನು ನಾವು ಕಾಣುತ್ತೇವೆ.
ಸುನೀತ ರಾಜಗೃಹದಲ್ಲಿ ಬೀದಿ ಗುಡಿಸುವವರ ಪೈಕಿ ಆ ಕುಟುಂಬದಲ್ಲಿ ಅತ್ಯಂತ ಕಿರಿಯವನಾಗಿದ್ದನು.  ಆತನ ರಸ್ತೆ ಗುಡಿಸುವಿಕೆಯಿಂದ ಆತನ ಜೀವನ ಅತಿ ಕಷ್ಟದಿಂದ ಸಾಗುತ್ತಿತ್ತು.  ಮನೆ, ಔಷಧಿ, ವಸ್ತ್ರಗಳಂತೂ ಆತನ ಸಿಗುವಿಕೆಗೆ ಮೀರಿದ ಮಾತಾಗಿತ್ತು.  ಆತನು ರಸ್ತೆಯ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ, ಏಕೆಂದರೆ ಆತನು ಒಬ್ಬ ಅಸ್ಪೃಶ್ಯನೆನಿಸಿಕೊಂಡಿದ್ದನು.  ಯಾರಾದರೂ ಮೇಲು ಜಾತಿಯವರು ಬರುತ್ತಿದ್ದರೆ ಆತನು ಆ ದಾರಿಯನ್ನೇ ಬದಲಿಸಬೇಕಿತ್ತು.  ಆತನ ನೆರಳನ್ನು ಸಹಾ ಅವರ ಮೇಲೆ ಬೀಳಿಸಬಾರದಿತ್ತು.  ಇಲ್ಲದಿದ್ದರೆ ಆತನನ್ನು ಹಿಡಿದು ರಕ್ತ ಬರುವವರೆಗೆ ಹೊಡೆಯುತ್ತಿದ್ದರು.  ಆತನಿಗೆ ಯಾವ ವಿದ್ಯಾಭ್ಯಾಸವು ಇರಲಿಲ್ಲ. ಬೇರೆ ಧರ್ಮಗಳ ಸಾಧನೆಗೂ ಅವಕಾಶವಿರಲಿಲ್ಲ.
ಒಂದುದಿನ ಬೆಳಿಗ್ಗೆ ಮುಂಚೆಯೇ ದಾರಿಯನ್ನು ಸ್ವಚ್ಛಗೊಳಿಸಿ ಮತ್ತು ಕಸವನ್ನು ಬೀದಿಯಿಂದ ಬೇರೆಡೆಗೆ ಸಾಗಿಸುತ್ತಿದ್ದ.  ಆತನು ಅತಿಯಾಗಿ ಬೆವರುತ್ತಿದ್ದನು ಮತ್ತು ಧೂಳಿನಿಂದ ಕಶ್ಮಲದಿಂದ ದೇಹ ಆವೃತವಾಗಿತ್ತು.  ಆತನು ಕಸದ ಮಕ್ಕರಿಗಳನ್ನು ಜೋಡಿಸುವಾಗಂತು ಸಣ್ಣ ಬಟ್ಟೆಯನ್ನು ಧರಿಸುತ್ತಿದ್ದನು.
ಸೂರ್ಯನ ಕಿರಣಗಳ ಪ್ರಾರಂಭವಾಗುವ ಆ ಸಮಯದಲ್ಲಿ ಬುದ್ಧ ಭಗವಾನರು ದಾರಿಯಲ್ಲಿ ಮಹಾ ಭಿಕ್ಷು ಸಂಘದ ಸಮೇತ ಬರುತ್ತಿದ್ದರು. ಅವರು ಹತ್ತಿರ ಬರುತ್ತಿದ್ದಂತೆ ಸುನೀತನ ಹೃದಯವು ಆನಂದದಿಂದ ತುಂಬಿಹೋಯಿತು.  ಹಾಗೆಯೇ ಭಯವು ಆಕ್ರಮಿಸಿತು.  ಒಂದು ದೊಡ್ಡ ಗೋಡೆ ಬಳಿಯಲ್ಲಿ ಕಾಣಿಸಿತು.  ಆತನಿಗೆ ಆಶ್ರಯ ಸಿಕ್ಕಿದಂತಾಯಿತು.  ಗೋಡೆಯ ಹಿಂದೆ ನಿಂತು ಅಲ್ಲಿ ಗೋಡೆಗೆ ಒರಗಿಕೊಂಡು ತನ್ನ ಹಸ್ತಗಳನ್ನು ಭಕ್ತಿಯಿಂದ ಜೋಡಿಸಿ ಬುದ್ಧಭಗವಾನರಿಗೆ ವಂದನೆಗಳನ್ನು ಸಲ್ಲಿಸತೊಡಗಿದ. 
ಬುದ್ಧಭಗವಾನರು ಆತನ ಸಮೀಪಕ್ಕೆ ಬಂದರು ತಮ್ಮ ಮಧುರ ಇಂಪಿನ ಧ್ವನಿಯಲ್ಲಿ ದಯೆಯಿಂದ ಹೀಗೆ ನುಡಿದರು : ಪ್ರಿಯ ಮಿತ್ರ, ನಮ್ಮೊಂದಿಗೆ ಸೇರಲು ಬಯಸುವೆಯಾ?
ಸುನೀತನಲ್ಲಿ ಆನಂದವು ಉಕ್ಕಿ ಹರಿಯಿತು. ಆತನಿಗೆ ಮಾತನಾಡುವುದೇ ಕಷ್ಟವಾಯಿತು. ಆತನಿಗೆ ಹಿಂದೆ ಯಾರೊಬ್ಬರೂ ಸಹಾ ಹೀಗೆ ಕರುಣೆಯಿಂದ ಈ ರೀತಿ ಮಾತನಾಡಿಸಿರಲಿಲ್ಲ ಅಥವಾ ಈ ರೀತಿ ವತರ್ಿಸಿರಲಿಲ್ಲ.
ಕೊನೆಗೂ ಆತನಿಗೆ ಮಾತನಾಡಲು ಸಾಧ್ಯವಾಯಿತು, ಆತ ಹೀಗೆ ಕೂಗಿಕೊಂಡ ಓ ಪರಮ ಪೂಜ್ಯರೇ, ನಾನು ಎಂದಿಗೂ ಈ ಬಗೆಯ ಕರುಣೆಯ ಶಬ್ದಗಳನ್ನು ಕೇಳಿರಲಿಲ್ಲ.  ಆದರೆ ತಾವು ನನ್ನಂಥಹ ಕೊಳಕ ದುಃಖಿತ ಕಸಗುಡಿಸುವವರನ್ನು ತೆಗೆದುಕೊಳ್ಳಲು ಸಿದ್ಧವಿದ್ದರೆ ನಾನು ಧನ್ಯನಾದೆ.  ನಾನು ಅತ್ಯಂತ ಆನಂದದಿಂದ ಈ ವೃತ್ತಿಯನ್ನು ಬಿಟ್ಟು ಭಿಕ್ಷುವಾಗುವೆ.
ನಂತರ ಬುದ್ಧಭಗವಾನರು ಅಲ್ಲೇ ಆತನಿಗೆ ಭಿಕ್ಷುವನ್ನಾಗಿ ಮಾಡಿ ಸಹಭಿಕ್ಷುಗಳೊಡನೆ ಕರೆದೊಯ್ದರು. ನಂತರ ಆತನಿಗೆ ವಿಹಾರದಲ್ಲಿ ಧಮ್ಮ ವಿಷಯಗಳನ್ನು ಕಲಿಸಿದರು. ಧ್ಯಾನದ ವಿಷಯವನ್ನು ನೀಡಿದರು. ಅದರಿಂದ ಆತನು ಅರಹಂತನಾದನು.  ಪ್ರತಿಯೊಂದು ಸ್ಥಾನದ ಜನರು ಆತನಿಗೆ ಗೌರವ ಕೊಟ್ಟರು, ವಂದಿಸಿದರು.  ಆತನ ಬೋಧನೆಯಂತೆ ನಡೆದರು. 
ಸುನೀತನಂತಹ ವ್ಯಕ್ತಿಗಳ ಬಗ್ಗೆ ಬುದ್ಧಭಗವಾನರು ಹೀಗೆ ನುಡಿದಿದ್ದಾರೆ: ಪ್ರತಿಯೊಬ್ಬರ ಆಶ್ರು ಹಾಗು ರಕ್ತ ಒಂದೇ ಬಣ್ಣದ್ದಾಗಿದೆ.  ಪ್ರತಿಯೊಬ್ಬರು ತಮ್ಮ ಕ್ರಿಯೆಗಳಿಂದ ಶ್ರೇಷ್ಠ ಹಾಗು ನೀಚರಾಗುತ್ತಾರೆ.  ಪ್ರತಿಯೊಂದು ನದಿಯು ಪ್ರತ್ಯೇಕ ಹೆಸರನ್ನು ಪಡೆದಿದ್ದರೂ ಸಾಗರವನ್ನು ಸೇರಿ ಒಂದಾಗುತ್ತದೆ.  ಹಾಗೆಯೇ ಯಾವುದೇ ವಿಧದ ವ್ಯಕ್ತಿ ಸಂಘಕ್ಕೆ ಸೇರಿದ ನಂತರ ಆತನು ಸಂಘದೊಡನೆ ಒಂದಾಗುತ್ತಾನೆ.

No comments:

Post a Comment