Sunday 14 January 2018

THE CONSEQUENCES OF LAZYNESS ಸೋಮಾರಿತನ - ಚುಲಕಾಲನ ಘಟನೆ

                           ಸೋಮಾರಿತನ - ಚುಲಕಾಲನ ಘಟನೆ


ಸೇತಾವವೆಂಬ ಪಟ್ಟಣದಲ್ಲಿ ಮಹಾಕಾಲ, ಮಜ್ಜಿಮಕಾಲ ಮತ್ತು ಚುಲಕಾಲರೆಂಬ ಮೂವರು ಸೋದರರಿದ್ದರು. ಮೊದಲ ಇಬ್ಬರು ವೃತ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.  ಕೊನೆಯವನಿಗೆ ಯಾವುದೇ ಹೇಳುವಂತಹ ವೃತ್ತಿಯಿರಲಿಲ್ಲ.
ಮಹಾಕಾಲ ಮತ್ತು ಚುಲಕಾಲರು ಬಂಡಿಗಳಲ್ಲಿ ಸರಕುಗಳನ್ನು ಹಾಕಿಕೊಂಡು ಒಮ್ಮೆ ಶ್ರಾವಸ್ತಿಗೆ ಹೋಗಿದ್ದಾಗ ಅವರು ಜೇತವನ ವಿಹಾರದ ಹತ್ತಿರ ಬಿಡಾರ ಹಾಕಿದ್ದರು. ಸಂಜೆಯಾದಾಗ ಅವರು ದೃಶ್ಯವನ್ನು ಗಮನಿಸಿದರು. ಏನೆಂದರೆ: ಜನರು ಗುಂಪಾಗಿ ವಿಹಾರಕ್ಕೆ ಪುಷ್ಪಗಳನ್ನು, ಗಂಧವನ್ನು ತೆಗೆದುಕೊಂಡು ಹೋಗುವುದು ಅವರಿಗೆ ಕಾಣಿಸಿತು. ಮಹಾಕಾಲನು ಕುತೂಹಲ ತಡೆಯಲಾರದೆ ಬಂಡಿಗಳನ್ನು ತಮ್ಮನಿಗೆ ಒಪ್ಪಿಸಿ, ತಾನು ವಿಹಾರದಲ್ಲಿ ಕುಳಿತು ಧಮ್ಮಶ್ರವಣ ಮಾಡಲು ಹೋದನು. ಬುದ್ಧ ಭಗವಾನರು ಮಹಾಕಾಲನ ಧಾತುಗಳಿಗೆ ಸರಿಹೊಂದುವಂತೆ ಧಮ್ಮಪ್ರವಚನ ಮಾಡಿದರು. ಅದರ ಪರಿಣಾಮವಾಗಿ ಆತನಿಗೆ ಭಿಕ್ಷುವಾಗುವ ಬಯಕೆ ಉಂಟಾಯಿತು. ಆತನಲ್ಲಿ ವೈರಾಗ್ಯ ಪ್ರಬಲವಾಗಿ ಬುದ್ಧ ಭಗವಾನರಿಗೆ ಅದನ್ನು ಹೇಳಿದನು. ನಂತರ ಹಿಂತಿರುಗಿ ಬಂದು ತಮ್ಮನಿಗೂ ಸಹಾ ಅದನ್ನು ಹೇಳಿದನು. ಆದರೆ ತಮ್ಮನು ಅದನ್ನು ಬಲವಾಗಿ ವಿರೋಧಿಸಲಿಲ್ಲ. ನಂತರ ಮಹಾಕಾಲನು ಭಿಕ್ಷು ಸಂಘಕ್ಕೆ ಸೇರಿದನು ಮತ್ತು ಕೆಲವು ಸಮಯದಲ್ಲೇ ಆತನ ತಮ್ಮನು ಸಹಾ ಹಾಗೇ ಮಾಡಿದನು.
ಮಹಾಕಾಲನು ತನ್ನ ಮನಸ್ಸನ್ನು ಸಮಾದಿಯಲ್ಲೇ ತಲ್ಲೀನಗೊಳಿಸಿದನು. ಮತ್ತು ಮನಸ್ಸಿನ ಭಾವೋದ್ರೇಕಗಳನ್ನು ದೂರೀಕರಿಸಲು ದೃಢ ಶ್ರಮವನ್ನು ಪಟ್ಟನು. ಆದರೆ ಚುಲಕಾಲನು ಪ್ರಯತ್ನಹೀನನಾಗಿ ಆತನ ಇಂದ್ರಿಯಗಳನ್ನು ಸಡಿಲವಾಗಿ ಬಿಟ್ಟನು. ಆತನು ಸಂಜೆಯೇ ಮಲಗಿ ಸೂರ್ಯ ಹುಟ್ಟಿದ ಎಷ್ಟೋ ಕಾಲಕ್ಕೆ ಏಳುತ್ತಿದ್ದನು. ಆತನು ಶೀಲ ಪಾಲಿಸುವಿಕೆಯಲ್ಲಿಯೂ ಸಹಾ ಆಲಸ್ಯ ತೋರಿಸುತ್ತಿದ್ದನು. ಆತನು ಭಿಕ್ಷುವಾಗಿಯೂ ಸಹಾ ಭಿಕ್ಷುವಿನ ರೀತಿ ಜೀವಿಸುತ್ತಿರಲಿಲ್ಲ. ಆತನು ಬೆಳಿಗ್ಗೆ ಎದ್ದಮೇಲೆ ಪ್ರಾಪಂಚಿಕತೆಯನ್ನು ಚಿಂತಿಸುತ್ತಿದ್ದನು. ಆತನು ತನ್ನ ಅಣ್ಣನ ನಿರಂತರ ಕಠಿಣ ಶ್ರಮ ಭಿಕ್ಷು ಜೀವನದಲ್ಲಿ ಪಾಲಿಸುವುದು ಕಂಡರೂ ಸಹಾ ಆತನಂತು ಸೋಮಾರಿಯಾಗಿಯೇ ಇದ್ದನು. ನಂತರದ ಸ್ವಲ್ಪ ಕಾಲದಲ್ಲಿಯೇ ಮಹಾಕಾಲನು ಅರಹಂತನಾದನು. ಆತನು ಶ್ರಮಣ ಜೀವನದ ಮಹತ್ವವನ್ನು ಅರಿತನು. ಯಾವುದನ್ನು ಪ್ರಾಪ್ತಿ ಮಾಡಲು ಭಿಕ್ಷುವಾದನೋ ಅದನ್ನು ಆತನು ಪ್ರಾಪ್ತಿಮಾಡಿದನು. ಬುದ್ಧ ಭಗವಾನರು ಬೋಧನೆ ನೀಡುತ್ತಾ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದರು. ಈ ಬಾರಿ ಸೇತೌವ ಪಟ್ಟಣಕ್ಕೆ ಭಿಕ್ಷುಗಳ ಸಮೇತ ಬಂದಿದ್ದರು. ಅದು ಮಹಾಕಾಲ ಹಾಗು ಚೂಲಕಾಲನ ಊರಾಗಿತ್ತು. ಅವರ ಬಂಧುಗಳಿಗೆ ಇವರಿಬ್ಬರನ್ನು ಗೃಹಸ್ಥರನ್ನಾಗಿ ಮಾಡಬೇಕೆಂದು ಬಯಕೆಯಾಯಿತು. ಅವರು ಬುದ್ಧರನ್ನು ಹಾಗು ಭಿಕ್ಷು ಸಂಘವನ್ನು ಆಹಾರಕ್ಕಾಗಿ ಆಹ್ವಾನಿಸಿದರು. ಪೀಠಗಳನ್ನು ಸಕಾಲಕ್ಕೆ ಸಿದ್ಧಪಸಿಸಿದಾಗ ಮಹಾಕಾಲನು ತನ್ನ ತಮ್ಮನಿಗೆ ಮೊದಲು ಹೋಗೆಂದು ಹೇಳಿದನು. ಆಹಾರ ಬಡಿಸುವ ವೇಳೆ ಈ ರೀತಿ ಪೀಠಗಳನ್ನು ಜೋಡಿಸುವುದು ಸಮಾನ್ಯವಾಗಿತ್ತು. ಹೇಗೆಂದರೆ ಬುದ್ಧ ಭಗವಾನರ ಪೀಠವನ್ನು ಮಧ್ಯದಲ್ಲಿ, ಅವರ ಬಲ ಪಕ್ಕದಲ್ಲಿ ಸಾರಿಪುತ್ತ ಥೇರರು ಮತ್ತು ಎಡಪಕ್ಕದಲ್ಲಿ ಮೊಗ್ಗಲ್ಲಾನ ಥೇರರನ್ನು ಹಾಕುತ್ತಿದ್ದರು. ಚುಲಕಾಲನು ತನ್ನ ಮನೆಗೆ ಹೋದಾಗ ಆತನ ಮನೆಯವರು ಆತನೊಂದಿಗೆ ಅಪಹಾಸ್ಯ ಮಾಡಿದರು. ಆತನು ಎತ್ತರದ ಪೀಠಗಳನ್ನು ಮುಂದೆ ಹಾಕುವಂತೆ ಹೇಳಿದಾಗ ಅವರು ಅದಕ್ಕೆ ವಿರುದ್ಧವಾಗಿ ಹಿಂದೆ ಹಾಕಿದರು. ಮತ್ತು ಆತನಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಮೂರ್ಖನೊಂದಿಗೆ ವತರ್ಿಸುವಂತೆ ವತರ್ಿಸಿದರು. ಅವು ಯಾವುವೆಂದರೆ, ಯಾರ ಅಪ್ಪಣೆ ಪಡೆದು ನೀನು ಭಿಕ್ಷುವಾದೆ, ನೀನು ಇಲ್ಲಿಗೆ ಏಕೆ ಬಂದೆ? ನಮಗೆ ಅಪ್ಪಣೆ ಮಾಡಲು ನೀನು ಯಾರು? ಅಲ್ಲಿದ್ದು ನೀನು ಕಲಿತಿರುವುದು ಏನನ್ನು? ನೀನೇ ಏತಕ್ಕೆ ಪೀಠವನ್ನು ಜೋಡಿಸಬಾರದು? ಕೊನೆಗೆ ಆತನಿಗೆ ಕಾಷಾಯ ವಸ್ತ್ರ ಕಿತ್ತುಹಾಕಿ, ಆತನನ್ನು ಗೃಹಸ್ಥನ ಬಿಳಿವಸ್ತ್ರ ತೊಡಿಸಿದರು. ಆತನಿಗೆ ನಾನಾಬಣ್ಣದ ಹೂವುಗಳ ಕಿರೀಟವನ್ನು ತೊಡಿಸಿದರು. ಹಾಗು ಅತನಿಗೆ ಭಿಕ್ಷು ಜೀವನದ ನಿಯಮಗಳು, ಅರ್ಥಗಳು ಆಳವಾಗಿ ಅರಿತಿಲ್ಲದ್ದರಿಂದ ಆತನಿಗೆ ಅವರು ಮಾಡುವ ಅವಮಾನವು ಸಹಾ ಅವಮಾನದ ರೀತಿ ಕಾಣಲಿಲ್ಲ. ಅವರು ಹೇಳಿದಂತೆಯೇ ಆತನು ಬುದ್ಧ ಭಗವಾನರನ್ನು ಸ್ವಾಗತಿಸಿದನು. ಮಾರನೆಯ ದಿನವೂ ಸಹಾ ಚುಲಕಾಲನ ಮನೆಯವರು ತಥಾಗತರಿಗೆ ವಂದಿಸಿ ಆತಿಥ್ಯವನ್ನು ನೀಡಿದರು. ಮತ್ತು ಮತ್ತೊಬ್ಬ ಥೇರರು ಅವರ ಗೃಹಸ್ಥ ಜೀವನದ ಮನೆಗೆ ಹೋಗಿ ಭಿಕ್ಷುಗಳಿಗೆ ಪೀಠಗಳನ್ನು ಏಪರ್ಾಟು ಮಾಡಲು ಹೋದರು. ಅಲ್ಲಿ ಭೋಜನದ ನಂತರ ಧರ್ಮಬೋಧನೆ ಮಾಡಲು ಮಹಾಕಾಲನಿಗೆ ಪ್ರತಿನಿಧಿಸಿದರು ಮತ್ತು ಭಗವಾನರು ಹಾಗು ಉಳಿದ ಭಿಕ್ಷುಗಳು ವಿಹಾರಕ್ಕೆ ಮರಳಿದರು.
ಕೆಲವು ಭಿಕ್ಷುಗಳಿಗೆ ಮಹಾಕಾಲನಿಗೆ ಆಯ್ಕೆ ಮಾಡಿದ್ದು ಇಷ್ಟವಾಗಲಿಲ್ಲ. ಏಕೆಂದರೆ ಹಿಂದಿನದಿನ ಚುಲಕಾಲನಿಗೆ ಆದ ಅವಮಾನ ಅವರಿಗೆ ಮರೆಯಲಾಗಲಿಲ್ಲ. ಭಿಕ್ಷುಗಳೆಲ್ಲರೂ ಸ್ವಲ್ಪದೂರ ಹೋದ ನಂತರ ಸ್ವಲ್ಪ ಕಾಲದ ನಂತರ ಮಹಾಕಾಲ ಅರಹಂತರಿಗೆ ಮಹಾಕಾಲನ ಪತ್ನಿ ಹಾಗು ಉಳಿದ ಬಂಧುಗಳು ಸುತ್ತವರೆದರು. ಚುಲಕಾನಿಗೆ ಪ್ರಶ್ನಿಸಿದ ರೀತಿಯಲ್ಲಿ ಆತನಿಗೂ ಸಹಾ ಪ್ರಶ್ನಿಸತೊಡಗಿದರು. ಅರಹಂತ ಮಹಾಕಾಲನಿಗೆ ಅವರ ಮೂರ್ಖತನ ಅರಿವಾಯಿತು. ಇವರೆಲ್ಲಾ ಬೋಧನೆಗೆ ಅರ್ಹರಲ್ಲ ಎಂದು ಅರಿತು ಮುಂದಾಗುವ ಅಪ್ರಿಯ ಸನ್ನಿವೇಶಕ್ಕೆ ಪ್ರತಿಯಾಗಿ ಅವರು ತಮ್ಮ ಋದ್ದಿಶಕ್ತಿಯಿಂದ (ಪವಾಡಶಕ್ತಿ) ಮನೆಯ ಮೇಲ್ಭಾಗಕ್ಕೆ ಹಾರಾಡಿದರು. ಹಾಗೆಯೇ ಗಾಳಿಯಲ್ಲಿ ಹಾರುತ್ತಾ ಭಗವಾನರು ಇದ್ದಕಡೆ ಬಂದು ಭಗವಾನರು ಇದ್ದಕಡೆ ಬಂದು ಭಗವಾನರಿಗೆ ಭಕ್ತಿಯುತ ಶ್ರದ್ಧಾಂಜಲಿಯನ್ನು ಸುಗತರ ಪಾದದ ಮೇಲೆ ತಲೆಯಿಟ್ಟು ಗೌರವ ಅಪರ್ಿಸಿದರು.
ಆಗ ಭಗವಾನರು ಭಿಕ್ಷುಗಳಿಗೆ ಮಹಾಕಾಲ ಹಾಗು ಚುಲಕಾಲರ ಶೀಲದ ವ್ಯತ್ಯಾಸ ತಿಳಿಸಿದರು. ಚುಲಕಾಲನು ಪ್ರಯತ್ನಹೀನತೆಯಿಂದ ಸೋಮಾರಿತನದಿಂದ ತನ್ನ ಇಂದ್ರಿಯಗಳನ್ನು ಧಮಿಸಲಾರದವನು ಹಾಗು ಅತನಿಗೆ ಹೇಗೆ ನಿಲ್ಲಬೇಕು, ನಡೆಯಬೇಕು, ಕುಳಿತುಕೊಳ್ಳಬೇಕು ಮತ್ತು ಹೇಗೆ ಸರಿಯಾಗಿ ಮಲಗಬೇಕು ಎಂಬುದು ಅರಿಯದಾದನು. ಆತನ ಸೋಮಾರಿತನದ ವ್ಯಕ್ತಿತ್ವದಿಂದ ಆತನು ಗೃಹಸ್ಥನಾಗಿ ಶ್ರೀಮಂತನಾಗಲು ಅನರ್ಹನಾದನು. ತನ್ನ ಹೀನ ವೀರ್ಯದಿಂದ ಆತನ ಭಾವಾವೇಶಗಳನ್ನು ಧಮಿಸಿ ತನ್ನ ಅಣ್ಣನಂತೆ ಅರಹಂತನು ಸಹಾ ಆಗಲಿಲ್ಲ.
ಕೆಲವರು ಸೋಮಾರಿತನಕ್ಕೆ ವಶವಾಗಿ ಆಳವಾದ ದುಃಖಕ್ಕೆ ಈಡಾಗಬೇಕಾಗುತ್ತದೆ. ಪಾಪಿಗಳು ವಿಮುಕ್ತಿಯ ಹಾದಿಯನ್ನು ಕ್ರಮಿಸಲು ವಿಫಲರಾಗುತ್ತಾರೆ.
- ಧಮ್ಮಪದ ಅಟ್ಠಕಥ 

No comments:

Post a Comment