ಕಳ್ಳತನ - ಕಳ್ಳತನ ಮಾಡಿ ಅದರ ಕೆಟ್ಟ ಫಲ ಅನುಭವಿಸಿದ ಸ್ತ್ರೀಯ ಕತೆ
ಕಸ್ಸಪ ಬುದ್ಧ ಭಗವಾನರ ಕಾಲದಲ್ಲಿ ಬನಾರಸ್ನ ಹತ್ತಿರ ಸ್ತ್ರೀಯೊಬ್ಬಳು ವಾಸಿಸುತ್ತಿದ್ದಳು. ಆಕೆ ಹೆಂಡ ಹಾಗು ಎಣ್ಣೆಯ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಳು. ಒಂದುದಿನ ಒಂದು ಗುಂಪು ಅಮಲಿನಲ್ಲಿ ಪ್ರಜ್ಞೆತಪ್ಪಿ ಗಾಢ ನಿದ್ರೆಯಲ್ಲಿದ್ದಾಗ ಆಕೆ ಅವರ ವಸ್ತ್ರಗಳನ್ನು ಅಪಹರಿಸಿದಳು. ಮತ್ತೆ ಒಮ್ಮೆ ಆಕೆ ಅರ್ಹಂತ (ವಿಮುಕ್ತಿ ಸಾಧಿಸಿದ) ಭಿಕ್ಷುವನ್ನು ಕಂಡು, ಸ್ವಾಗತಿಸಿ ಮಧ್ಯಾಹ್ನದ ಊಟವನ್ನು ಬಡಿಸಿದಳು. ಅವರು ಆಹಾರವನ್ನು ಮುಗಿಸಿ ಬೋಧನೆಯನ್ನು ಬೋಧಿಸಿ ಹೊರಟರು. ಹಲವು ಕಾಲದ ನಂತರ ಆಕೆಯ ಮರಣವಾಯಿತು. ಆಕೆ ಸಮುದ್ರದ ಮಧ್ಯೆ ಒಂದು ಸುಂದರವಾದ ದ್ವೀಪದಲ್ಲಿ ಜನಿಸಿದಳು. ಆಕೆಯ ಹಿಂದಿನ ಜನ್ಮದ ಪುಣ್ಯದಿಂದ ಸುಂದರಳಾಗಿದ್ದಳು. ಆದರೂ ಆಕೆ ಆ ಜನ್ಮದಲ್ಲಿ ವಸ್ತ್ರಗಳನ್ನು ಅಪಹರಿಸಿದ್ದರಿಂದಾಗಿ ಆಕೆಯ ನಗ್ನತೆಯನ್ನು ಮುಚ್ಚುವಷ್ಟು ವಸ್ತ್ರವು ಸಿಗುತ್ತಿರಲಿಲ್ಲ. ಆಕೆ ಸತ್ತು ಮತ್ತೆ ಮತ್ತೆ ಆ ದ್ವೀಪದಲ್ಲಿ ಜನಿಸುತ್ತಿದ್ದಳು. ಗೌತಮ ಬುದ್ಧರ ಕಾಲದಲ್ಲಿ ಶ್ರಾವಸ್ತಿಯ ಐನೂರು ವರ್ತಕರು ಸ್ವರ್ಣ ಭೂಮಿಗೆ ಹಡಗಿನಲ್ಲಿ (ಬರ್ಮ ದೇಶ) ಹೋಗಿ ಅಲ್ಲಿ ವ್ಯಾಪಾರ ಮಾಡಿ ಅಲ್ಲಿಂದ ಚಿನ್ನದೊಂದಿಗೆ ತಮ್ಮ ದೇಶಕ್ಕೆ ಹಿಂದಿರುಗತೊಡಗಿದರು. ಆಗ ಭೀಕರ ಬಿರುಗಾಳಿಯ ಪರಿಣಾಮವಾಗಿ ಅವರ ಹಡಗು ಆ ಸ್ತ್ರೀಯು ವಾಸಿಸುತ್ತಿದ್ದ ದ್ವೀಪಕ್ಕೆ ಬಂತು ನಿಂತಿತು.
ಆ ವರ್ತಕರು ಆಕೆಯ ಚಿನ್ನದ ಬಂಗಲೆಗೆ ಬಂದಾಗ ಆಕೆಯು ಅವರೊಂದಿಗೆ ಅವರಿಗೆ ಮಾತನಾಡಿಸಿದಳು. ಆಗ ವರ್ತಕರಲ್ಲಿ ಮುಖ್ಯಸ್ಥನು ಆಕೆಗೆ ಮುಂದೆ ಬಂದು ಮಾತನಾಡುವಂತೆ ಕೇಳಿದಾಗ ಆಕೆ ಈ ರೀತಿ ಹೇಳಿದಳು: ಸ್ನೇಹಿತರೆ, ನನಗೆ ಹೊರಬರಲು ನಾಚಿಕೆಯಾಗುತ್ತಿದೆ, ಏಕೆಂದರೆ ನನಗೆ ನನ್ನ ನಗ್ನತೆ ಮುಚ್ಚಲು ವಸ್ತ್ರಗಳಿಲ್ಲ. ಆಗ ವರ್ತಕರ ಮುಖ್ಯಸ್ಥನು ಆಕೆಗೆ ನಿಲುವಂಗಿಯನ್ನು ನೀಡಿದನು. ಆದರೆ ಆಕೆ ಈ ರೀತಿ ಹೇಳಿದಳು: ನಾನು ಈ ರೀತಿಯಾಗಿ ತೆಗೆದುಕೊಳ್ಳುವುದಿಲ್ಲ. ನಿಮ್ಮಲ್ಲಿ ಯಾರಾದರೂ ಶೀಲಗಳನ್ನು ಪಾಲಿಸುತ್ತಿದ್ದರೆ ಮತ್ತು ಬುದ್ಧರಲ್ಲಿ, ಧಮ್ಮದಲ್ಲಿ ಹಾಗು ಸಂಘದಲ್ಲಿ ಅಚಲ ಶ್ರದ್ಧೆಯಿಟ್ಟಿದ್ದರೆ ಅಂತಹವರು ತಮ್ಮ ಪುಣ್ಯವನ್ನು ನನಗೆ ಹಂಚಿಕೊಡಲಿ. ಎಂದಳು.
ಅದರಂತೆಯೇ ಅಲ್ಲಿದ್ದ ಉಪಾಸಕರೊಬ್ಬರು ಒಂದು ಜೊತೆ ಬಟ್ಟೆಯನ್ನು ನೀಡಿದರು. ಪಾತ್ರೆಯಲ್ಲಿನ ನೀರನ್ನು ಬಿಟ್ಟು ಪುಣ್ಯವನ್ನು ಹಂಚಿ ಆಕೆಗೆ ನೀಡಿದರು.
ಆ ಕ್ಷಣದಲ್ಲೇ ಮಡಚಿರುವ ಹೇರಳವಾದ ದಿವ್ಯವಾದ ವಸ್ತ್ರಗಳು ನಾನಾ ಆಕಾರವುಳ್ಳದ್ದು ಪ್ರತ್ಯಕ್ಷವಾದವು. ಅದನ್ನು ಆ ಸ್ತ್ರೀಯು ತೆಗೆದುಕೊಂಡಳು. ವಸ್ತ್ರಗಳನ್ನು ಸ್ವೀಕರಿಸಿ ಆಕೆಗೆ ಬಹಳಷ್ಟು ಅಸಂಖ್ಯಾತ ವರ್ಷಗಳಾಗಿತ್ತು.
ಹಿಂದಿನ ಜನ್ಮದಲ್ಲಿ ಒಮ್ಮೆ ವಸ್ತ್ರಗಳನ್ನು ಅಪಹರಿಸಿ ಅಸಂಖ್ಯಾತ ವರ್ಷಗಳಷ್ಟು ಕಾಲ ವಸ್ತ್ರರಹಿತಳಾಗಿ ಕಾಲಕಳೆದಳು. ಅದರಿಂದ ಕಳ್ಳತನದಿಂದಾಗುವ ಕೆಟ್ಟ ಪರಿಣಾಮಗಳನ್ನು ಅರಿತು ವಿವೇಕಿಗಳು ಅದರಿಂದ ವಿರತರಾಗಲಿ.
- ಖುದ್ದಕನಿಕಾಯ ಅಟ್ಠಕಥಾ

No comments:
Post a Comment