Sunday, 14 January 2018

THE CONSEQUENCES OF DANCING ನೃತ್ಯ - ಶ್ರೀಮಂತ ಕುಮಾರನ ಕಥೆ

                           ನೃತ್ಯ - ಶ್ರೀಮಂತ ಕುಮಾರನ ಕಥೆ :


ಬನಾರಸ್ನಲ್ಲಿ ಒಬ್ಬ ಕುಮಾರನು 80 ದಶಲಕ್ಷಗಳಷ್ಟು ಚಿನ್ನದ ನಾಣ್ಯಗಳ ಕುಟುಂಬದಲ್ಲಿ ಹುಟ್ಟಿದನು. ಆತನ ತಂದೆ-ತಾಯಿಗಳು ಈ ಐಶ್ವರ್ಯವೇ ಸಾಕು, ತಮ್ಮ ಕುಮಾರನಿಗೆ ಸಹಾಯ ನೀಡುತ್ತದೆ ಎಂದು ಭಾವಿಸಿ ಆತನಿಗೆ ಯಾವುದೇ ವೃತ್ತಿಶಿಕ್ಷಣ ನೀಡಲಿಲ್ಲ. ಕೇವಲ ಆತನಿಗೆ ನೃತ್ಯ ಹಾಗು ಸಂಗೀತ ಕಲಿಸಿದರು. ಅದೇ ನಗರದಲ್ಲಿ 80 ದಶಲಕ್ಷ ಚಿನ್ನದ ನಾಣ್ಯವುಳ್ಳ ಕುಟುಂಬದಲ್ಲಿ ಕುಮಾರಿಯು ಇದ್ದಳು. ಆಕೆಗೂ ಸಹಾ ನೃತ್ಯ, ಸಂಗೀತವನ್ನೇ ಕಲಿಸಿದ್ದರು. ಅವರಿಬ್ಬರಿಗೆ ಯೌವ್ವನದಲ್ಲಿ ವಿವಾಹ ಮಾಡಿದರು. ಇಬ್ಬರ ತಂದೆ-ತಾಯಿಗಳು ತೀರಿಹೋದಾಗ ಈ ಎಲ್ಲಾ ಐಶ್ವರ್ಯವು ಕುಮಾರನ ಕೈಗೆ ಬಂದಿತು.
ಕುಮಾರನಿಗೆ ರಾಜನಿಂದ ದಿನಕ್ಕೆ ಮೂರುಬಾರಿ ಕರೆ ಬರುತ್ತಿತ್ತು. ಆ ನಗರದಲ್ಲಿ ಕೆಲವು ಕುಡುಕರು ಕುಮಾರನಿಗೆ ಮದ್ಯಪಾನ ಕಲಿಸಲು ನಿರ್ಧರಿಸಿದರು. ಕುಮಾರನು ರಾಜನಲ್ಲಿಗೆ ಹೋಗಿ ಮತ್ತೆ ಹಿಂದಿರುಗಿ ಬರುವುದು ಅವರಿಗೆ ಗೊತ್ತಿತ್ತು. ಆದ್ದರಿಂದ ಅವರು ಆತನು ಹಿಂದಿರುಗಿ ಬರುವ ಸ್ಥಳದಲ್ಲಿ ಮದ್ಯಪಾನ ಮಾಡಿ, ಸುಟ್ಟಿದ್ದ ಮಾಂಸವನ್ನು ತಿನ್ನುತ್ತಾ ಈತನನ್ನು ಕಂಡು ಈ ರೀತಿ ಉದ್ಗಾರ ತೆಗೆಯುತ್ತಿದ್ದರು:
ಓಹ್, ಕುಮಾರನು ದೀಘರ್ಾಯುವಾಗಲಿ, ಆತನಿಂದಾಗಿಯೇ ನಾವು ಈ ರೀತಿ ಆನಂದದಿಂದ ಇದ್ದೇವೆ. ಅವರನ್ನು ಕಂಡು ಕುಮಾರನು ಅವರಿಗೆ ಏನನ್ನು ಕುಡಿಯುತ್ತಿರುವಿರಿ ಎಂದು ಪ್ರಶ್ನಿಸಿದಾಗ ಅವರು ಹೀಗೆ ಪ್ರತಿಯಾಗಿ ಉತ್ತರಿಸಿದರು: ಈ ಪಾನೀಯವು ಜಗತ್ತಿನ ಪಾನಿಯಗಳಲ್ಲೇ ಸರ್ವ ಉತ್ಕೃಷ್ಟ ಎಂದರು. ಆಗ ಕುಮಾರನು ಅದನ್ನು ಸ್ವಲ್ಪ ತರಿಸಿ ಪ್ರತ್ಯೇಕವಾಗಿ ಕುಡಿದನು. ಆ ಕುಡುಕರು ಜೊತೆಗೂಡಿದರು. ನಂತರ ಕುಡುಕ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. ಈಗ ಕುಮಾರನು ಪಾನೀಯಕ್ಕೆ 200 ಅಥವಾ 300 ವರಹ ಒಂದು ಸಮಯಕ್ಕೆ ನೀಡುತ್ತಿದ್ದನು. ಆ ಅಮಲಿನಲ್ಲಿ ಆತನು ಸಂಗೀತಗಾರರನ್ನು ಆಮಂತ್ರಿಸಿ ಒಂದು ಸಮಯಕ್ಕೆ ಸಾವಿರ ವರಹ ನೀಡುತ್ತಿದ್ದನು. ಕೆಲವೇ ವರ್ಷಗಳಲ್ಲಿ ಕುಮಾರನ ಸರ್ವ ಐಶ್ವರ್ಯವೂ ನಾಶವಾಯಿತು. ಈಗ ಉಳಿದ ಪತ್ನಿಯ ಐಶ್ವರ್ಯ ಬಳಸಿದನು. ಕೆಲವು ವರ್ಷಗಳ ನಂತರ ಆಕೆಯ ಸರ್ವ ಐಶ್ವರ್ಯ ಖಚರ್ು ಮಾಡಿದನು. ನಂತರ ಆತನು ಮನೆ, ಸಾಮಗ್ರಿ, ಉದ್ಯಾನಗಳು ಹಾಗು ಗದ್ದೆಗಳು ಇತ್ಯಾದಿಯನ್ನು ಮಾರಿದನು. ಅದೆಲ್ಲವನ್ನು ಕುಡಿತಕ್ಕೆ, ಸಂಗೀತಕ್ಕೆ, ನೃತ್ಯಕ್ಕೆ ಬಳಸಿದನು. ಕೆಲವು ಕಾಲದ ನಂತರ ಅವರ ಮನೆಯು ಸಹಾ ಬೇರೊಬ್ಬನ ಸ್ವತ್ತಾಯಿತು. ಅವರು ಮನೆಯಿಲ್ಲದವರಾದರು.
ಅವರಿಗೆ ಇರಲು ಪ್ರದೇಶವಿಲ್ಲದೆ ಒಂದು ಮುರಿದ ಮನೆಯ ಗೋಡೆಯ ಆಶ್ರಯ ಪಡೆದರು ಹಾಗು ಭಿಕ್ಷೆ ಬೇಡುತ್ತಿದ್ದರು. ಹೀಗೆಯೇ ಇದ್ದಾಗ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದ ಸ್ಥಳದಲ್ಲಿ ಬಂದರು. ಅಲ್ಲಿ ಬಿಸಾಡಿದ ಆಹಾರ ತೆಗೆದುಕೊಂಡರು. ಇದನ್ನು ಕಂಡ ಭಗವಾನರು ಅವರ ಭವಿಷ್ಯ ಅರಿತು ಮುಗುಳುನಗೆ ಬೀರಿದರು. ಅವರ ಹಿಂಬಾಲಕ ಆನಂದ ಥೇರರು ಭಗವಾನರ ಮುಗುಳುನಗೆಗೆ ಕಾರಣ ಏನೆಂದು ಪ್ರಶ್ನಿಸಿದಾಗ, ಸರ್ವಜ್ಞ ಬುದ್ಧರು ಉತ್ತರಿಸಿದರು: ನೋಡು ಆನಂದ, ಆ ಕುಮಾರನನ್ನು ನೋಡು. ಆತನಿಗೆ 160 ದಶಲಕ್ಷ ಚಿನ್ನದ ಐಶ್ವರ್ಯ ಇತ್ತು. ಈಗ ಭಿಕ್ಷುಕನಾಗಿದ್ದಾನೆ. ಆದರೆ ಆತನು ಮುಂದೆ ಉತ್ತಮ ಜೀವನ ಜೀವಿಸಿ ಅರಹಂತ (ಮುಕ್ತ) ನಾಗುತ್ತಾನೆ. ಹಾಗು ಆತನು ಪತ್ನಿಯು ಸೋತಪನ್ನಳಾಗುತ್ತಾಳೆ. ಅವರು ಯುವಕರಾಗಿದ್ದಾಗ ಅತಿ ಉತ್ಕೃಷ್ಟ ನಾಗರಿಕರಾಗಿದ್ದರು. ಆದರೆ ಈಗ ಇಂತಹ ಅಪಮಾನ ಪರಿಸ್ಥಿತಿಗೆ ಬಂದಿರುವರು. ಈಗ ಆತನ ಸ್ಥಿತಿಯು ಒಣಗಿದ ಕೆಸರಿಗೆ ಸಿಕ್ಕ ಗಿಡುಗನಂತೆ ಆಗಿದೆ. ಇತ್ತು ಮೀನು ಸಿಗುವ ಹಾಗಿಲ್ಲದ ಹಾಗೆ ಆಗಿದೆ. ಇದನ್ನು ವಿವೇಕಿ ಮನುಷ್ಯನು ಕಂಡು ಜೀವನ ಅರ್ಥಮಾಡಿಕೊಳ್ಳಲಿ. ನೃತ್ಯ, ಗೀತೆ ಹಾಗು ಕುಡಿತಕ್ಕೆ ಸಿಲುಕಿ ಮುಂದೆ ಅಪಾರ ದುಃಖವನ್ನು ಅನುಭವಿಸಬೇಕಾಗುವುದೆಂದು ಅರಿತು ಮೊದಲೇ ಅವೆಲ್ಲದರಿಂದ ಸಂಯಮದಿಂದಿರು.
-ಪರಾಭವ ಸುತ್ತ ಅರ್ಥ ವಿವರಣೆ

No comments:

Post a Comment