Sunday, 14 January 2018

the consequences of adultery ಕಾಮುಕತೆ - ಕೋಸಲ ರಾಜನ ಪ್ರಸಂಗ

ಕಾಮುಕತೆ - ಕೋಸಲ ರಾಜನ ಪ್ರಸಂಗ

(ಈ ಬೋಧನೆಯು ಬುದ್ಧ ಭಗವಾನರಿಂದ ಜೇತವನ ಆರಾಮದಲ್ಲಿ ಹೇಳಲ್ಪಟ್ಟಿತ್ತು. ಅದು ಕೋಸಲ ರಾಜನಿಗೆ ಸಂಬಂಧಪಟ್ಟಿತ್ತು.)
ಒಮ್ಮೆ ಕೋಸಲ ರಾಜ್ಯದಲ್ಲಿ ರಾಷ್ಟ್ರೀಯ ದಿನದಂದು ಪ್ರಜೆಗಳೆಲ್ಲರೂ ಆನಂದಿಸುತ್ತಿದ್ದರು. ಕೋಸಲ ರಾಜನು ಸಹಾ ಅತ್ಯಂತ ಅಲಂಕೃತ ಆನೆಯನ್ನೇರಿ (ಪಟ್ಟದ ಆನೆ) ನಗರದ ಕಡೆಗೆ ಹೊರಟನು. ವಿಸ್ತಾರವಾದ ಜನಜಂಗುಳಿಯು ರಾಜನನ್ನು ನೋಡಲು ಹಾತೊರೆಯುತ್ತಿತ್ತು. ಆತನು ಒಂದು ಬೀದಿಯನ್ನು ಹಾದು ಹೋಗುತ್ತಿರುವಾಗ ನಗರಾಧಿಪತಿಯ ಪತ್ನಿಯು ಈ ಸಡಗರವನ್ನು ಮೇಲಿನ ಮಹಡಿಯ ಕಿಟಕಿಯಿಂದ ನೋಡುತ್ತಿದ್ದಳು. ರಾಜನು ಆ ಸ್ತ್ರೀಯನ್ನು ನೋಡಿದನು. ಆಕೆಯ ರೂಪವು ಅವನನ್ನು ಅತಿ ಆಕಷರ್ಿಸಲ್ಪಟ್ಟಿತು. ಆತನು ಆಕೆಯನ್ನು ಬಯಸಿದನು. ಆತನು ಆತುರನಾಗಿ ಹಾಗೆಯೇ ಅರಮನೆಗೆ ಹಿಂತಿರುಗಿದನು. ತನ್ನ ನಿಷ್ಠಾವಂತ ಮಂತ್ರಿಯನ್ನು ಕರೆಸಿದನು. ಅವನಲ್ಲಿ ಆ ಸ್ತ್ರೀಯ ಬಗ್ಗೆ ಬೀದಿ, ಮನೆ ಹೇಳಿ ವಿಚಾರಿಸಿದನು. ಆಗ ಮಂತ್ರಿಯು ತಿಳಿದುದನ್ನು ಉತ್ತರಿಸಿದನು. ನಂತರ ರಾಜನು ಆಕೆಯು ವಿವಾಹಿತಳೇ ಅಥವಾ ಅವಿವಾಹಿತಳೇ ಎಂದು ತಿಳಿದು ಬರಲು ಆಜ್ಞಾಪಿಸಿದನು. ಆ ಮಂತ್ರಿಯು ವಿಚಾರಿಸಿ ಆಕೆ ವಿವಾಹಿತಳು, ಆಕೆಯ ಪತಿಯೊಡನೆ ವಾಸಿಸುತ್ತಿರುವಳು ಎಂದು ತಿಳಿಸಿದನು. ನಂತರ ರಾಜನು ಆಕೆಯ ಪತಿಯನ್ನು ತನ್ನನ್ನು ಕಾಣುವಂತೆ ಆಜ್ಞಾಪಿಸಿದನು. ಆತನು ಆಜ್ಞೆ ಪಾಲಿಸಲು ಅರಮನೆಗೆ ಬಂದನು. ಆತನಿಗಂತೂ ತನ್ನ ಪತ್ನಿಯ ಕಾರಣದಿಂದಲೇ ಅಪಾಯ ಉದ್ಭವಿಸಲಿದೆ ಎಂದು ಅರಿವಾಯಿತು. ಆತನು ರಾಜನನ್ನು ಕಂಡು ಗೌರವ ಅಪರ್ಿಸಿದನು. ಆಗ ರಾಜನು ಆತನಿಗೆ ಹೀಗೆ ಹೇಳಿದನು: ಇಂದಿನಿಂದ ನೀನು ನನ್ನ ಹತ್ತಿರ ಸೇವೆ ಮಾಡಿಕೊಂಡಿರು. ಆತನು ಹಾಗೇ ಆಗಲೆಂದು ಒಪ್ಪಿದನು. ಆಗ ರಾಜನು ಆತನಿಗೆ ಆತನಿಂದ ಬರುವ ತೆರಿಗೆ ಕೊಡಬೇಕಾಗಿಲ್ಲ ಅದರ ಬದಲು ವೈಯಕ್ತಿಕ ಸೇವೆ ಮಾಡಬೇಕು ಎಂದು ಹೇಳಿ ಕೆಲವು ಕಾರ್ಯ ವಹಿಸಿದನು. ಆಗ ಆತನಿಗೆ ಈ ರೀತಿ ಹೊಳೆಯಿತು: ಇದು ನನ್ನ ಪತ್ನಿಯನ್ನು ಅಪಹರಿಸುವ ರಾಜನ ಸಂಚು ಎಂದು. ಆತನು ಬಹಳಷ್ಟು ಭೀತನಾದನು. ಆದರೆ ರಾಜನು ಹೇಳಿದ ಕಾರ್ಯ ಮಾಡಿದನು. ರಾಜನಿಗೆ ಆತನ ಕಾರ್ಯದಲ್ಲಿ ಸಣ್ಣ ಕಲೆಯನ್ನು ಸಹಾ ಕಾಣಲಾಗಲಿಲ್ಲ. ಆಗ ಆತನಿಗೆ ಈ ರೀತಿ ಆಜ್ಞಾಪಿಸಿದನು: ಆತನು ಬೆಳಿಗ್ಗೆ ಎದ್ದು ನೂರು ಯೋಜನ ದೂರದಲ್ಲಿರುವ ನದಿಗೆ ಹೋಗಿ ಕಮಲದ ಹೂವುಗಳ ಕಟ್ಟನ್ನು ಹಾಗು ನಾಗಲೋಕದ ಮಣ್ಣಿನ ಮುದ್ದೆಯನ್ನು ಸಂಜೆಯ ಸ್ನಾನದ ಒಳಗೆ ತರಬೇಕು, ಈ ಕಾರ್ಯದಲ್ಲಿ ವಿಫಲನಾದರೆ ಆತನಿಗೆ ನೇಣು ಹಾಕುವುದು. ಆ ಮನುಷ್ಯನಿಗೆ ಈ ಕಾರ್ಯ ಸಾಧಿಸುವಲ್ಲಿ ಸಂಶಯವುಂಟಾಗಿ ಅತಿಯಾಗಿ ಹೆದರಿದನು. ಮನೆಗೆ ಹೋಗಿ ಅನ್ನವನ್ನು ಬುಟ್ಟಿಯಲ್ಲಿಟ್ಟುಕೊಂಡು ತನ್ನ ಪ್ರಯಾಣ ಪ್ರಾರಂಭಿಸಿದನು. ಒಂದು ಯೋಜನ ದೂರ ಹೋದನಂತರ ಒಂದು ಪಾಲು ಆಹಾರವನ್ನು ಒಂದೆಡೆಯಿಟ್ಟು ತಾನು ತಿನ್ನುವುದಕ್ಕೆ ಪ್ರಾರಂಭಿಸಿದನು. ಹಾಗೆಯೇ ಒಬ್ಬ ಬಡ ಪ್ರಯಾಣಿಕನಿಗೆ ಆ ಪಾಲನ್ನು ನೀಡಿದನು. ಇಬ್ಬರೂ ಅನ್ನದ ಪಾಲನ್ನು ತೆಗೆದುಕೊಂಡ ನಂತರ ಹಿಡಿಯಷ್ಟು ಅನ್ನವನ್ನು ನದಿಗೆ ಬಿಟ್ಟನು. ಆನಂತರ ಆತನು ದೇವತೆಗಳಿಗೆ ಮೂರುಬಾರಿ ಪ್ರಾಥರ್ಿಸಿದನು. ತಾನು ಪ್ರಯಾಣಿಕನಿಗೆ ಮತ್ತು ಮೀನುಗಳಿಗೆ ಆಹಾರ ನೀಡಿದ್ದ ಫಲವಾಗಿ ತನ್ನ ಕಾರ್ಯದಲ್ಲಿ ಯಶಸ್ಸು ಸಿಗಲೆಂದು ಪ್ರಾಥರ್ಿಸಿದನು.
ಒಬ್ಬ ದೇವತೆ ವೃದ್ಧನ ವೇಷದಲ್ಲಿ ಪ್ರತ್ಯಕ್ಷವಾಗಿ ಆತನ ಕೋರಿಕೆ ಈಡೇರಿಸಿದನು. ಅಲ್ಲಿ ರಾಜನಿಗೆ ಈ ಮನುಷ್ಯ ಏನಾದರೂ ತನ್ನ ಕಾರ್ಯದಲ್ಲಿ ಸಫಲನಾದರೆ ಅದು ವ್ಯರ್ಥವಾಗಲೆಂದು ಅರಮನೆಯ ಬಾಗಿಲನ್ನು ಮುಚ್ಚಿಸಿ ತನ್ನಲ್ಲಿಯೇ ಬೀಗದ ಕೈಯನ್ನು ಇಟ್ಟುಕೊಂಡನು.
ಇಲ್ಲಿ ಈತನು ಕಮಲದ ಹೂಗಳನ್ನು ಹಾಗು ಮಣ್ಣಿನ ಮುದ್ದೆಯನ್ನು ರಾಜನ ಸಂಜೆಯ ಸ್ನಾನದ ವೇಳೆಗೆ ಮುಂಚೆ ತಂದನು. ಆದರೆ ಅರಮನೆಯ ಬಾಗಿಲು ಹಾಕಿತ್ತು. ಆತನು ಬಾಗಿಲನ್ನು ತೆರೆಯುವಂತೆ ಪ್ರಾಥರ್ಿಸಿದಾಗ, ಕಾವಲುಗಾರನು ಏನಾಯಿತೆಂದು ಅಲ್ಲಿಂದಲೇ ಕೇಳಿದನು. ಆಗ ಈತನಿಗೆ ಜೀವ ಭಯ ಅತಿಯಾಗಿ ಆತನು ಬಾಗಿಲಿನಲ್ಲಿ ಹೂವು ಮಣ್ಣಿನ ಮುದ್ದೆಯನ್ನು ಎಸೆದು ಅಲ್ಲಿದ್ದ ನಗರವಾಸಿಗಳಿಗೆ ತಾನು ರಾಜಕಾರ್ಯ ನೆರವೇರಿಸಿದ್ದಾಗಿ ತಿಳಿಸಿ, ಅವರಿಗೆ ಸಾಕ್ಷಿಯಾಗಿ ಭಾವಿಸಿ ಶಾಂತತೆಗಾಗಿ ಸಮೀಪದ ಭಿಕ್ಷು ವಿಹಾರಕ್ಕೆ ಹೋದನು.
ರಾತ್ರಿ ರಾಜನು ಆ ಸ್ತ್ರೀಯ ಬಗ್ಗೆ ವಿಕಾರವಾಗಿ ಚಿಂತಿಸುತ್ತಾ ಆ ಮನುಷ್ಯನನ್ನು ಮರುದಿನ ಕೊಲ್ಲಲು ನಿರ್ಧರಿಸಿದನು. ಹಾಗು ಅವನ ಪತ್ನಿಯನ್ನು ಅರಮನೆಗೆ ಕರೆತರುವ ನಿಧರ್ಾರ ಮಾಡಿದನು. ರಾತ್ರಿ ನಿದ್ರಿಸುತ್ತಿರುವಾಗ ಆತನಿಗೆ ಅತಿ ಭಯಂಕರ ಶಬ್ದಗಳನ್ನು ಕೇಳಿ ಅತ್ಯಂತ ಭಯಭೀತನಾದನು. ಆ ಶಬ್ದಗಳು ನಾಲ್ಕು ಜೀವಿಗಳು ಲೋಹಕುಂಬಿ ನರಕದಿಂದ ನರಳುತ್ತಿರುವ ಶಬ್ದವಾಗಿತ್ತು. ಆತನು ಅದರಿಂದ ಭಯಪಟ್ಟನು: ಓಹ್! ಈ ಶಬ್ದಗಳು ಯಾವ ಮುನ್ಸೂಚನೆ ನೀಡುತ್ತಿವೆ, ನನಗೆ ಯಾವ ಅಪಾಯವು ಬರಬಹುದು ಅಥವಾ ನನ್ನ ರಾಣಿಗೆ ಯಾವ ಅಪಾಯ ಬರಬಹುದು, ನನ್ನ ರಾಜ್ಯಕ್ಕೆ ಏನಾದರೂ ಅಪಾಯವಿದೆಯೇ? ಹೀಗೆಂದು ಭಯದಿಂದ ನಿದ್ರಾರಹಿತ ರಾತ್ರಿ ಕಳೆದನು. ಮುಂಜಾನೆಯೇ ರಾಜ ಪುರೋಹಿತನನ್ನು ಕರೆಸಿ, ಈ ವಿಷಯವನ್ನು ವಿಚಾರಿಸಿದನು. ಆ ಬ್ರಾಹ್ಮಣನಿಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೂ ಸಹಾ ಆತನು ಇದು ರಾಜರಿಗೆ ಅಪಾಯದ ಸೂಚನೆ ಎಂದನು. ರಾಜನಿಗೆ ಇದರಿಂದ ಮತ್ತಷ್ಟು ಭೀತಿಯಾಗಿ ಇದರ ನಿವಾರಣ ಮಾರ್ಗವನ್ನು ಕೇಳಿದನು. ಅದಕ್ಕೆ ಆ ಬ್ರಾಹ್ಮಣ ಹೆದರಬೇಡ ರಾಜ, ನಾನು ಮೂರು ವೇದಗಳನ್ನು ಅರಿತಿದ್ದೇನೆ. ಬಲಿ ಕೊಡುವುದರಿಂದ ಕೆಡುಕು ನಿವಾರಣೆಯಾಗುವುದು ಎಂದನು. ಅದಕ್ಕಾಗಿ ನಿನಗೆ ಏನೇನು ಬೇಕಾಗುವುದು? ಎಂದು ರಾಜನು ಕೇಳಿದಾಗ ಅವನು ಆನೆಗಳು, ಕುದುರೆಗಳು, ಗೋವುಗಳು, ಮೇಕೆಗಳು, ಕುರಿಗಳು, ಹುಂಜಗಳು, ಹಂದಿಗಳು, ಹುಡುಗರು ಮತ್ತು ಹುಡುಗಿಯರು. ಪ್ರತಿಯೊಂದು ನೂರು ನೂರು ಬೇಕು ಎಂದನು. ರಾಜನಿಗೆ ಇದರಿಂದ ತಾನು ಕ್ಷೇಮವಾಗಿ ಇರಬಹುದು ಎಂದು ಭಾಸವಾಗಿ ಪ್ರತಿಯೊಂದೂ ಆಗಲೇ ದೊರೆಯುವಂತೆ ಆಜ್ಞಾಪಿಸಿದನು. ತಂದೆ-ತಾಯಿಗಳು, ಬಂಧುಗಳು, ಮಿತ್ರರು ಬಹಳಷ್ಟು ನಾಗರಿಕರು ಮಾನವ ಬಲಿಯು ಸಹಾ ಆಗುತ್ತಿರುವುದನ್ನು ಕೇಳಿ ಅತಿಯಾಗಿ ಶೋಕಿಸಿದರು ಮತ್ತು ಪ್ರಲಾಪಿಸಿದರು.
ರಾಣಿ ಮಲ್ಲಿಕಾ ರಾಜನ ಬಳಿ ಹೋಗಿ ರಾಜನು ಚಿಂತಿತನಾಗಿರುವುದನ್ನು ಕಂಡು ಕಾರಣ ಕೇಳಿದಳು. ಅದಕ್ಕೆ ರಾಜನು ಈ ರೀತಿ ಹೇಳಿದನು: ನಿನಗೆ ಇನ್ನೂ ಗೊತ್ತಾಗಲಿಲ್ಲವೆ, ನನ್ನ ಕಿವಿಯಲ್ಲಿ ಹಾವು ಹೋಗಿದೆ ಎಂದು ಪೂರ್ಣ ವೃತ್ತಾಂತ ತಿಳಿಸಿದನು ಮತ್ತು ರಾಜ ಪುರೋಹಿತ ಮಾಡುತ್ತಿರುವ ಕಾರ್ಯ ತಿಳಿಸಿದನು. ಆಗ ರಾಣಿ ಮಲ್ಲಿಕಾಳು ಈ ರೀತಿ ಹೇಳಿದಳು: ಏನು ಓ ರಾಜರೇ, ನೀವು ಎರಡು ಸಾಮ್ರಾಜ್ಯವನ್ನು ಆಳುತ್ತಿದ್ದರೂ ಕೇವಲ ಆ ಬ್ರಾಹ್ಮಣರ ಮೇಲೆ ನಂಬಿಕೆ ಇಟ್ಟಿರಾ? ಒಬ್ಬನ ಜೀವ ಉಳಿಸಲು ಅಷ್ಟು ಜನರನ್ನು ಹಾಗು ಪ್ರಾಣಿಗಳನ್ನು ಬಲಿಕೊಟ್ಟರೆ ಸಾರ್ಥಕವಾಗುವುದೇ? ಇಲ್ಲೇ ಬುದ್ಧ ಭಗವಾನರು ವಾಸಿಸುತ್ತಿದ್ದಾರೆ, ಅವರು ಸರ್ವಜ್ಞರು, ಸರ್ವವಿದರು ಆಗಿದ್ದಾರೆ. ಅವರು ವಿಹಾರದಲ್ಲೇ ವಾಸಿಸುತ್ತಿರುವರು, ಅವರ ಬಳಿ ಹೋಗಿ ಅವರ ಬುದ್ಧಿವಾದ ಪಡೆದರೆ ತುಂಬ ಒಳಿತಾಗುವುದು ಎಂದಳು. ರಾಜನಿಗೆ ಈ ಸಲಹೆ ಒಪ್ಪಿಗೆಯಾಗಿ ಬುದ್ಧರ ಬಳಿ ರಾಣಿ ಸಮೇತ ಹೋದನು. ಅಲ್ಲಿ ಬುದ್ಧರಿಗೆ ವಂದಿಸಿ, ಅನಂತರ ಮೌನವಾಗಿ ಉಳಿದನು. ನಂತರ ಭಗವಾನರು ಪ್ರಶ್ನಿಸಿದಾಗ ರಾಣಿಯು ಉದ್ದೇಶವನ್ನು ವಿವರಿಸಿದಳು. ಆಗ ಭಗವಾನರು ಈ ರೀತಿ ಹೇಳಿದರು: ಮಹಾರಾಜ, ಹೆದರಬೇಡ, ನಿನಗೆ ಯಾವ ಅಪಾಯವೂ ಬಂದಿಲ್ಲ ಎಂದು ಹೇಳಿ ಆ ನರಕದಲ್ಲಿ ನರಳುತ್ತಿರುವ ಆ ಜೀವಿಗಳ ವೃತ್ತಾಂತ ಹೇಳಿದರು.
ಒಮ್ಮೆ ಬನಾರಸ್ನಲ್ಲಿ ನಾಲ್ಕು ಶ್ರೀಮಂತರು ತಮ್ಮಲ್ಲೇ ಈ ರೀತಿ ಚಚರ್ಿಸಿದರು. ಏಕೆಂದರೆ ತಮ್ಮ ಹಣವನ್ನು ಹೇಗೆ ಬಳಕೆ (ಖಚರ್ು) ಮಾಡುವುದು. ಒಬ್ಬನು ಭಿಕ್ಷುಗಳಿಗೆ ಆಹಾರ ನೀಡಿದರೆ ಬಹಳಷ್ಟು ಪುಣ್ಯ ಸಿಗುವುದು ಎಂದನು. ಎರಡನೆಯವನು ಮದ್ಯಪಾನ ಹಾಗು ಮಾಂಸಹಾರ ಉತ್ತಮ ಎಂದನು. ಮೂರನೆಯವನು ವಿವಿಧಬಗೆಯ ಮಾಂಸಹಾರ ಮತ್ತು ಅತ್ಯುತ್ತಮ ಆಹಾರಗಳು ಸರಿ ಎಂದನು. ನಂತರ ನಾಲ್ಕನೆಯವನು ಯಾವುದೂ ವ್ಯಭಿಚಾರ ಸುಖದಷ್ಟು ಶ್ರೇಷ್ಠ ಸುಖ ನೀಡಲಾರದು ಎಂದನು. ಇದನ್ನೇ ಎಲ್ಲರೂ ಒಪ್ಪಿದರು ಹಾಗು ತಮ್ಮ ಹಣವನ್ನೆಲ್ಲಾ ವ್ಯಭಿಚಾರದಲ್ಲಿ ವಿನಿಯೋಗಿಸತೊಡಗಿದರು. ಕಾಲನಂತರ ಅವರು ಆ ಜನ್ಮದಲ್ಲೇ ದುಃಖ ಅನುಭವಿಸಿದರು. ಸಾವಿನ ನಂತರ ಹಲವಾರು ಜನ್ಮ ನರಕದಲ್ಲಿ ನರಳಿದರು. ಕೊನೆಗೆ ಲೋಹಕುಂಬಿ ನರಕದಲ್ಲಿ ನೋವಿನ ಚೀತ್ಕಾರ ಮಾಡಿದಾಗ ಆ ಧ್ವನಿಯು ರಾಜನಿಗೆ ಕೇಳಿಸಿತ್ತು.
ಈಗ ರಾಜನಿಗೆ ವ್ಯಭಿಚಾರದ ದುಷ್ಟರಿಣಾಮದ ಬಗ್ಗೆ ಅತಿ ಭಯವುಂಟಾಗಿ ತ್ರಿಕರಣ ಪೂರ್ವಕವಾಗಿ ವ್ಯಭಿಚಾರ ವಜರ್ಿಸಿ ಆ ಮನುಷ್ಯನನ್ನು ವಿಹಾರದಿಂದ ಬಿಡುಗಡೆ ಮಾಡಿ ತನ್ನ ಸೇವಾ ಕಾರ್ಯದಿಂದಲೂ ಮುಕ್ತಿಗೊಳಿಸಿದನು.
- ಧಮ್ಮಪದ ಅಟ್ಠಕಥಾ

No comments:

Post a Comment