ಜೂಜಾಡುವಿಕೆ - ಅನಾಥಪಿಂಡಿಕನ ಪುತ್ರನ ವೃತ್ತಾಂತ
ಬಹುಕಾಲದ ಹಿಂದೆ ಬ್ರಹ್ಮದತ್ತನು ರಾಜನಾಗಿರುವಾಗ ಅದೇ ಬನಾರಸ್ನಲ್ಲಿ ಬೋಧಿಸತ್ತರು ಶ್ರೀಮಂತ ವ್ಯಾಪಾರಿಯಾಗಿ ಹುಟ್ದಿದ್ದರು. ಅವರು ಅನೇಕ ದಾನ ಕ್ರಿಯೆಗಳನ್ನು ಮಾಡುತ್ತಿದ್ದರು. ಅವರಲ್ಲಿ ಅನ್ನದಾನವು ಒಂದಾಗಿತ್ತು. ಅವರು ಬಡವರಿಗೆ ದೊಡ್ಡದಾದ ವಾಸ ಮಂದಿರವನ್ನು ಕಟ್ಟಿಸಿದ್ದರು. ನಾನಾರೀತಿಯ ಸೇವಾಕಾರ್ಯಗಳನ್ನು ಮಾಡುತ್ತಿದ್ದರು. ಅವರಿಗೆ ಜೀವನ ಕಾಲ ಮುಗಿಯುತ್ತಾ ಬಂತು. ಆಗ ಅವನು ಪುತ್ರನನ್ನು ಕರೆದು ದಾನ ಮಂದಿರದಲ್ಲಿ ದಾನವನ್ನು ನಿರಂತರ ನೀಡುವಂತೆ ಕೇಳಿಕೊಂಡರು. ನಂತರ ಬೋಧಿಸತ್ತರು ಮರಣದ ನಂತರ ಪುಣ್ಯ ಫಲವಾಗಿ ಸಕ್ಕದೇವ ಇಂದ್ರರಾಗಿ ಜನಿಸಿದರು. ಮತ್ತು ತಮ್ಮ ಪುತ್ರನು ಹೇಗೆ ಜೀವಿಸುತ್ತಿದ್ದಾನೆ ಎಂದು ಅರಿಯಲು ಇಷ್ಟಪಟ್ಟರು. ಅವರು ಗಮನಿಸಿದಾಗ ಅವರ ಪುತ್ರನ ಅವಸ್ಥೆಯು ಅತ್ಯಂತ ದಾರುಣವಾಗಿತ್ತು, ಯಾತನಾಮಯವಾಗಿತ್ತು. ಆಗ ಅವರು ತಮ್ಮ ಬುದ್ಧಿಯಿಲ್ಲದ ಮಗನ ಮೇಲೆ ಕರುಣೆ ತಾಳಿ ಮಗನ ಮುಂದೆ ಪ್ರತ್ಯಕ್ಷವಾದರು ಹಾಗು ಆತನಿಗೆ ಸರ್ವ ಇಚ್ಛೆ ಪ್ರಸಾದಕ ಮಡಿಕೆ ನೀಡಿದರು. ಅದು ಇರುವವರೆಗೆ ಆತನು ಬೇಡಿದ್ದನ್ನು ನೀಡುವುದೆಂದು ಹೇಳಿ, ಜೋಪಾನವಾಗಿ ಇಟ್ಟುಕೋ ಎಂದು ಹೇಳಿ ಹೊರಟರು. ಆದರೆ ಈ ಪುತ್ರನು ಆ ಮಡಿಕೆಯಿಂದ ಸಿಗುವ ಸರ್ವ ಐಶ್ವರ್ಯವನ್ನು ಜೂಜಿಗಾಗಿ ಹಾಗು ಮದ್ಯಕ್ಕಾಗಿ ವಿನಿಯೋಗಿಸುತ್ತಿದ್ದನು.
ಒಂದುದಿನ ಆತನು ಅಮಲಿನಲ್ಲಿ ಇದ್ದಾಗ ಮಡಿಕೆಯನ್ನು ಮೇಲಕ್ಕೆಸೆದು ಹಿಡಿಯುವ ಆಟ ಆಡುತ್ತಿದ್ದನು. ಆಗ ಅದು ಕೈಜಾರಿ ಕೆಳಗೆ ಬಿದ್ದು ಪುಡಿಯಾಯಿತು. ಇದಾದನಂತರ ಆತನ ಐಶ್ವರ್ಯವು ಕ್ಷಯವಾಗಿ ಆತನು ಮತ್ತೆ ದುಃಖಾವಸ್ಥೆಗೆ ಬಿದ್ದನು. ಹೀಗೆ ಆತನಿಗೆ ಉತ್ಕೃಷ್ಟವಾದುದು ಸಕ್ಕರಿಂದ ಸಿಕ್ಕಿದರೂ ಅದನ್ನು ಉಳಿಸಿಕೊಂಡು, ಬಳಸಿಕೊಂಡು ಹೋಗುವ ಪ್ರಜ್ಞೆಯಿಲ್ಲದೆ, ಇದ್ದ ಅಮೂಲ್ಯ ಐಶ್ವರ್ಯ ಹಾನಿ ಮಾಡಿಕೊಂಡನು.
ಈ ರೀತಿಯಾಗಿ ಯಾರು ಜೂಜು ಹಾಗು ಮದ್ಯಪಾನದ ಚಟವನ್ನು ಹಿಡಿದಿರುವರೋ ಅವರು ಐಶ್ವರ್ಯ ಹೀನರಾಗಿ ಈ ಲೋಕದಲ್ಲಿ ದುಃಖಿತರಾಗಿ ಮತ್ತೆ ಪರಲೋಕದಲ್ಲಿಯೂ ಸಹಾ ದುರ್ಗತಿಗೆ ಬೀಳುವರು ಮತ್ತು ಜನರಿಂದ ಅವರಿಗೆ ಗೌರವವು ಸಹಾ ದೊರೆಯುವುದಿಲ್ಲ.
- ಪರಾಭವ ಸುತ್ತ ಅರ್ಥ ವರ್ಣನೆ
No comments:
Post a Comment