ಅವೇಳೆಯಲ್ಲಿ ಅಡ್ಡಾಡುವಿಕೆ - ಕಂಠಹಾರ ಕದ್ದ ಘಟನೆ
ಅಲ್ಲಿ ವಾಸಿಸುತ್ತಿದ್ದ ಒಂದು ಕೋತಿಯು ಆ ವಸ್ತ್ರಾಭರಣಗಳಲ್ಲಿ ಹೊಳೆಯುತ್ತಿದ್ದ ಕಂಠಹಾರವನ್ನು ಗಮನಿಸಿತು. ಅದು ಮರದಿಂದ ಮೆಲ್ಲನೆ ಇಳಿಯಿತು. ಹಾಗೆಯೇ ಕಾವಲುಗಾರನಿಗೆ ಗೊತ್ತಾಗದ ಹಾಗೆ ಚಿನ್ನದ ಕಂಠಹಾರ ಅಪಹರಿಸಿ ಓಡಿಹೋಯಿತು.
ರಾಜ ಪರಿವಾರವು ಸ್ನಾನದ ನಂತರ ವಸ್ತ್ರಗಳನ್ನು ಧರಿಸಿದರು. ಅವರಿಗೆ ಚಿನ್ನದ ಕಂಠಹಾರವು ಮಾಯವಾಗಿರುವುದು ಕಂಡುಬಂದಿತು. ಅವರು ಹಾಗೆಯೇ ಕಾವಲುಗಾರನಿಗೆ ಪ್ರಶ್ನಿಸಿದರು. ಆತನಿಗೆ ಚಿಂತೆಯು ಆಳವಾಗಿ ಮುಟ್ಟಿತು. ಆತನು ಹಾದುಹೋದ ಪಾದಚಾರಿಗಳ ಬಗ್ಗೆ ಸಂಶಯಿಸಿದನು. ಹಾಗೆಯೇ ಆತನು ಒಬ್ಬನ ಬಗ್ಗೆ ಸಂಶಯಿಸಿ ಆತನೇ ಮಾಡಿರಬಹುದು ಎಂದು ಹೇಳಿದನು. ರಾಜಭಟರು ಆ ವ್ಯಕ್ತಿಯನ್ನು ಹಿಡಿದರು, ಆತನು ನಿರಪರಾಧಿಯಾಗಿದ್ದರೂ ಸಹಾ ರಾಜನ ಮುಂದೆ ಹಾಗು ಕಾವಲುಗಾರನ ಸಂಶಯದ ಮುಂದೆ ಭಯಪಟ್ಟು ತಾನು ನಗರದ ಸಿತಾವನಿಗೆ ನೀಡಿದೆ ಎಂದನು. ಸಿತಾನನಿಗೆ ಪ್ರಶ್ನಿಸಿದಾಗ ಆತನು ಭಯಪಟ್ಟು ಪಂಡಿತನಿಗೆ ನೀಡಿದೆ ಎಂದುಬಿಟ್ಟನು. ಪಂಡಿತನಿಗೆ ಪ್ರಶ್ನಿಸಿದಾಗ ಆತನು ತಿಂಗಳಲ್ಲಿ ಹಿಂದಿರುಗಿಸುವೆ ಎಂದನು.
ನಂತರ ಪಂಡಿತನು ಸಿತಾನನ್ನು ಹಾಗು ಪಾದಚಾರಿಯನ್ನು ಪ್ರಶ್ನಿಸಿದನು. ಆತನು ಅವರಲ್ಲಿ ನಿಷ್ಕಪಟತೆ ಕಂಡು ಬೇರೆ ರೀತಿಯಲ್ಲಿ ಚಿಂತಿಸಿದನು. ನಂತರ ಪಂಡಿತನು ಅವರಲ್ಲಿ ಈ ಪ್ರಶ್ನೆ ಕೇಳಿದನು. ಏನೆಂದರೆ ದಡದ ಬಳಿ ಯಾವ ಯಾವ ಪ್ರಾಣಿಗಳು ಬರುತ್ತದೆ ಎಂದು ಪ್ರಶ್ನಿಸಿದನು. ಅವರು ಕೆಲವು ಕೋತಿಗಳು ಬರುತ್ತವೆ ಎಂದರು. ನಂತರ ಪಂಡಿತನು ಉಪಾಯವೊಂದನ್ನು ಹೂಡಿದನು, ಕೆಲವು ಕೋತಿಗಳನ್ನು ಹಿಡಿಸಿದನು. ಪ್ರತಿ ಕೋತಿಗೂ ಒಂದೊಂದು ಹೂವಿನ ಹಾರವನ್ನು ಹಾಕಿಸಿ, ಅವುಗಳನ್ನು ನದಿ ದಡದಲ್ಲಿ ಬಿಟ್ಟನು.
ಹೂಹಾರ ಹಾಕಿದ ಕೋತಿಗಳನ್ನು ಕಂಡು ಕಂಠಹಾರ ಕದ್ದ ಕೋತಿಯು ತಾನು ಏನೂ ಕಡಿಮೆ ಎಂದು ಕಂಠಹಾರ ಹಾಕಿಕೊಂಡು ಆ ಗುಂಪಿನಲ್ಲಿ ಸೇರಿತು. ಇದನ್ನು ಕಾಡುತ್ತಿದ್ದ ಪಂಡಿತನು ಆ ಕೋತಿಯನ್ನು ಹಿಡಿಸಿದನು. ಹಾಗು ರಾಜನ ಮುಂದೆ ಸರ್ವವನ್ನು ವಿಷದಪಡಿಸಿದನು. ರಾಜನಿಗೆ ಇದನ್ನು ಕೇಳಿ ಆನಂದವಾಯಿತು. ಆತನು ಪಂಡಿತನಿಗೆ ಕೃತಜ್ಞತೆ ಅಪರ್ಿಸಿದನು. ಏಕೆಂದರೆ ಮೂರು ನಿರಪರಾದಿಗಳು ಶಿಕ್ಷೆಗೆ ಒಳಗಾಗುತ್ತಿದ್ದರು. ಆದ್ದರಿಂದಲೇ ಅವೇಳೆಯಲ್ಲಿ ನಿರಾಕರಿಸಲ್ಪಟ್ಟ ಪ್ರದೇಶಗಳಿಗೆ ಹೋಗುವುದು ಅಪಾಯಕರ ಎಂದು ತಿಳಿಯುತ್ತದೆ. ಅದು ಸಂಶಯವನ್ನು ಉತ್ಪತ್ತಿ ಮಾಡುತ್ತದೆ. ಅಪರಾಧಗಳು ತಲೆಗೆ ಬರುತ್ತದೆ. ತೊಂದರೆಗಳಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಆದರೆ ಪಂಡಿತರಾದವರು ಹೀಗೆ ಸಂಶಯದಿಂದ, ತೊಂದರೆಯಿಂದ ಮುಕ್ತರಾಗುತ್ತಾರೆ.
No comments:
Post a Comment