Sunday, 14 January 2018

the consequences of anger ಕೋಪ - ಕಾಳಯಕ್ಷಿನಿ

                                 ಕೋಪ - ಕಾಳಯಕ್ಷಿನಿ

ಬನಾರಸ್ನಲ್ಲಿ ಶ್ರೀಮಂತ ಬ್ರಾಹ್ಮಣನಿದ್ದನು. ಆತನ ಮರಣದ ನಂತರ ಆತನ ಆಸ್ತಿಯು ಆತನ ಪತ್ನಿಗೆ ಹಾಗು ಪುತ್ರನಿಗೆ ದೊರೆಯಿತು. ಕೆಲಕಾಲದ ನಂತರ ತಾಯಿಯು ಪುತ್ರನಿಗೆ ಮದುವೆ ಮಾಡಿಕೋ ಎಂದು ಸಲಹೆ ಕೊಟ್ಟಳು. ಆದರೆ ಆತನು ನಿರಾಕರಿಸಿದನು. ತನ್ನ ತಾಯಿಯನ್ನು ಆಕೆ ಇರುವವರೆಗೂ ತಾನೇ ಸಲಹುವೇ ಎಂದು ನಿರ್ಧರಿಸಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದನು. ಆದರೆ ತಾಯಿಯು ಮತ್ತೆ ಮತ್ತೆ ಒತ್ತಾಯಿಸಿದಳು. ಆಕೆಯ ಅಭಿಪ್ರಾಯದಂತೆ ಆತನು ಗೃಹಸ್ಥನ ಕಾರ್ಯಗಳನ್ನು ವಹಿಸಿಕೊಂಡು ಆಸ್ತಿಯಲ್ಲಿ ಸುಖವಾಗಿರಬೇಕೆಂಬುದಾಗಿತ್ತು. ತುಂಬಾ ಒತ್ತಾಯದ ನಂತರ ಪುತ್ರನು ಶಾಂತನಾದನು. ಅದು ಒಪ್ಪಿಗೆಯ ಸೂಚಕ ಎಂದು ಭಾವಿಸಿ ಸೂಕ್ತ ವಧುವನ್ನು ಹುಡುಕಲು ಪ್ರಾರಂಭಿಸಿದಳು. ಆಗ ಆಕೆ ಅದಕ್ಕೆ ಬೇಕಾದ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿದಲು. ವಧುವು ಆಯ್ಕೆಯಾಗಿ ಭಾರಿ ಸಮಾರಂಭಗಳಿಂದ ಮದುವೆಯಾಯಿತು.
ಕಾಲವು ಸರಿದು ಹೋದರೂ ಆ ವಧುವಿಗೆ ಮಕ್ಕಳಾಗಿರಲಿಲ್ಲ. ಆಗ ಬ್ರಾಹ್ಮಣ ಯುವಕನ ತಾಯಿಯು ವಂಶಾಭಿವೃದ್ಧಿಯ ಅಗತ್ಯವಿದೆ ಎಂದು ಚಿಂತಿಸಿ ಮತ್ತೊಂದು ವಧುವನ್ನು ಹುಡುಕುವ ಪ್ರಸ್ತಾಪ ಮಗನಲ್ಲಿ ಮೂರುಬಾರಿ ವ್ಯಕ್ತಪಡಿಸಿದಳು. ಆದರೆ ಆತನು ಆ ಪ್ರಸ್ತಾವನೆಯನ್ನು ಮೂರುಬಾರಿಯು ನಿರಾಕರಿಸಿದನು. ಈ ಸಂವಾದವನ್ನು ಕೇಳಿದ ಆ ವಧುವು ತನ್ನ ಪತಿಯು ತನ್ನ ತಾಯಿಯ ಮಾತನ್ನು ನಿರಾಕರಿಸಿ ಅವಿಧೇಯನಾಗಿರಬಾರದು ಎಂದು ಚಿಂತಿಸಿ ಸ್ವಯಂ ಆಕೆಯೇ ಹೊಸ ವಧುವನ್ನು ಹುಡುಕಲು ಪ್ರಾರಂಭಿಸಿದಳು. ನಂತರ ಮೊದಲ ಪತ್ನಿಯ ಆಯ್ಕೆಯಂತೆಯೇ ಇನ್ನೊಂದು ಯುವತಿಯೊಂದಿಗೆ ಬ್ರಾಹ್ಮಣನಿಗೆ ವಿವಾಹವಾಯಿತು.
ಕೆಲವು ಕಾಲದ ನಂತರ ಮೊದಲ ಪತ್ನಿಯು ಈ ರೀತಿ ಯೋಚಿಸಿದಳು: ದ್ವಿತೀಯ ಪತ್ನಿಯು ಮಗುವಿಗೆ ಜನ್ಮವಿತ್ತರೆ ಆಕೆಯೇ ಕುಟುಂಬದ ಮುಖ್ಯಸ್ಥಳಾಗುವಳು, ಆದ್ದರಿಂದ ಮಗುವಿನ ಜನ್ಮವನ್ನು ನಿರೋಧಿಸಬೇಕೆಂದು ಇಚ್ಛಿಸಿದಳು. ಆಗ ಆಕೆಯು ನೂತನ ವಧುವಿಗೆ ಗಭರ್ಿಣಿಯಾದಾಗ ತಿಳಿಸಬೇಕೆಂದು ಹೇಳಿದಳು. ಹಾಗೆಯೇ ಆಕೆಗೆ ಚಿಹ್ನೆಗಳು ಕಾಣಿಸಿದಾಗ ಆಕೆಯು ಸೂಚಿಸಿದಳು. ಮೊದಲ ಪತ್ನಿಯು ಆಗ ಆಹಾರದಲ್ಲಿ ಕೆಲವು ಔಷಧ ಬೆರೆಸಿ ದ್ವಿತೀಯ ಪತ್ನಿಗೆ ನೀಡಿದಾಗ ಆಕೆಯು ಅರಿವಿಲ್ಲದೆ ಆ ಔಷಧಿ ಸೇವಿಸಿ ಗರ್ಭಪಾತವಾಯಿತು. ದ್ವಿತೀಯ ಬಾರಿಯು ಸಹಾ ಹಾಗೆ ಆಯಿತು. ಆಗ ನೆರೆಹೊರೆಯ ಒಬ್ಬಳು ದ್ವಿತೀಯ ಪತ್ನಿಗೆ ಎಚ್ಚರಿಸಿ ಕೇಳಿದಾಗ ಆಕೆಯು ನಡೆದುದನ್ನು ತಿಳಿಸಿದಳು. ಆ ನೆರೆಯವಳು ಆಗ ಈ ರೀತಿ ಬುದ್ಧಿವಾದ ಹೇಳಿದಳು. ಗಭರ್ಿಣಿಯಾದರೆ ಅದನ್ನು ಮೊದಲ ಪತ್ನಿಗೆ ತಿಳಿಸದಿರುವಂತೆ ಹೇಳಿದಳು. ಅದರಂತೆಯೇ ಆಕೆಯು ಮೂರನೆಯ ಬಾರಿ ಗಭರ್ಿಣಿಯಾದಾಗ ತಿಳಿಸಲಿಲ್ಲ. ನಂತರ ಚಿಹ್ನೆಗಳನ್ನು ಗಮನಿಸಿ ಮೊದಲ ಪತ್ನಿಯು ಆಕೆಗೆ ತನಗೆ ಏಕೆ ಹೇಳಲಿಲ್ಲ ಎಂದು ಕೇಳಿದಾಗ ಈ ರೀತಿ ಉತ್ತರ ನೀಡಿದಳು: ನೀನೇ ನನಗೆ ಇಲ್ಲಿಗೆ ಕರೆತಂದೆ ಮತ್ತು ಎರಡು ಬಾರಿ ಔಷಧಿ ನೀಡಿ ಗರ್ಭಪಾತ ಮಾಡಿಸಿದೆ. ಆದ್ದರಿಂದಲೇ ನಾನು ನಿನಗೆ ಹೇಳಲಿಲ್ಲ. ನಂತರ ಗಭರ್ಾವಸ್ಥೆಯು ಅತಿ ಮುಂದುವರೆದಂತೆ ಮೊದಲ ಪತ್ನಿಯು ಎರಡನೆಯವಳಿಗೆ ತಿಳಿಯದಂತೆ ಔಷಧಿ ನೀಡಿದಳು. ಅದರ ಪರಿಣಾಮವಾಗಿ ದ್ವಿತೀಯ ಪತ್ನಿಯು ಅಪಾರವಾದ ನರಕದಂತಹ ನೋವನ್ನು ಅನುಭವಿಸಬೇಕಾಯಿತು. ಆಕೆಯು ಜೀವಿಸುವುದೇ ಸಂಶಯವಾಯಿತು. ಆಗ ಆಕೆಯ ಮೊದಲನೆಯವಳಿಗೆ ಈ ರೀತಿ ಹೇಳಿದಳು: ನೀನು ನನ್ನ ಮೂರು ಮಕ್ಕಳಿಗೆ ಕೊಂದಿರುವೆ ಮತ್ತು ನಾನು ಸಹಾ ಸಾಯುತ್ತಿದ್ದೇನೆ. ನಾನು ಸತ್ತನಂತರ ಯಕ್ಷಿಣಿಯಾಗಿ ಹುಟ್ಟುತ್ತೇನೆ, ಮತ್ತು ನಿನ್ನ ಎಲ್ಲಾ ಮಕ್ಕಳನ್ನು ತಿನ್ನುತ್ತೇನೆ. ನಂತರ ನೋವನ್ನು ಅನುಭವಿಸಿ ಆಕೆಯು ಮರಣಿಸಿದಳು. ಅದೇ ಮನೆಯಲ್ಲಿ ಬೆಕ್ಕಾಗಿ ಹುಟ್ಟಿದಳು. ಈ ವೃತ್ತಾಂತವೆಲ್ಲಾ ಕೇಳಿದ ಬ್ರಾಹ್ಮಣನು ಮೊದಲ ಪತ್ನಿಯನ್ನು ಸಾಯುವವರೆಗೆ ಕರುಣಾಹೀನನಾಗಿ ಹೊಡೆದನು. ಆಕೆಯು ಸತ್ತು ಅದೇ ಮನೆಯಲ್ಲಿ ಕೋಳಿಯಾಗಿ ಹುಟ್ಟಿದಳು. ಈಗ ಕೋಳಿಯು ಮೊಟ್ಟೆಗಳನ್ನು ಹಾಕಿತು. ಆಗ ಬೆಕ್ಕು ಮೂರುಬಾರಿ ಮೊಟ್ಟೆಗಳನ್ನು ತಿಂದುಹಾಕಿತು. ಕೊನೆಗೆ ಕೋಳಿಯನ್ನು ಸಹಾ ತಿಂದುಹಾಕಿತು. ಕೋಳಿಯು ಸಾಯುವಾಗ ಕ್ರೋಧದಿಂದ ತಾನು ಸಿಂಹಿಣಿಯಾಗುವಂತೆ ನಿರ್ಧರಿಸಿತು, ಹಾಗೆಯೇ ಸಿಂಹಿಣಿಯಾಯಿತು.
ಆ ಬೆಕ್ಕು ಸಹಾ ಸತ್ತು ಜಿಂಕೆಯಾಗಿ ಹುಟ್ಟಿತು. ಆ ಜಿಂಕೆಗೆ ಮೂರು ಮರಿಗಳಿದ್ದವು. ಆಗ ಸಿಂಹಿಣಿಯು ಆ ಮರಿಗಳನ್ನು ತಿಂದುಹಾಕಿ ಕೊನೆಗೆ ಜಿಂಕೆಯನ್ನು ಸಹಾ ತಿಂದುಹಾಕಿತು. ಆ ಜಿಂಕೆಯು ಸಾಯುವಾಗ ಆ ಸಿಂಹಿಣಿಯನ್ನು ತಿನ್ನುವ ಪ್ರಬಲ ಬಯಕೆ ವ್ಯಕ್ತಪಡಿಸಿತು. ನಂತರ ಆ ಜಿಂಕೆಯು ಸತ್ತು ಯಕ್ಷಿಣಿಯಾದಳು. ಆ ಸಿಂಹಿಣಿಯು ಸತ್ತು ಶ್ರಾವಸ್ತಿಯ ಕುಟುಂಬದಲ್ಲಿ ಹುಟ್ಟಿದಳು. ಆಕೆಗೆ ಯೌವನ ಬಂದಾಗ ನೆರೆಯ ನಗರದ ಯುವಕನಿಗೆ ಕೊಟ್ಟು ಮದುವೆ ಮಾಡಿದರು. ಕಾಲನಂತರ ಆಕೆಯು ಮಗುವಿಗೆ ಜನ್ಮವಿತ್ತಳು. ಆಗ ಯಕ್ಷಿಣಿಯು ಆಕೆಯ ಮನೆಯನ್ನು ವಿಚಾರಿಸಿಕೊಂಡು ವೇಷಧರಿಸಿ ಬಂದಳು. ಆಕೆ ಮಿತ್ರಳಂತೆ ವತರ್ಿಸಿ ಮಗುವನ್ನು ನೋಡುವ ಬಯಕೆ ವ್ಯಕ್ತಪಡಿಸಿ ಆ ಕೋಣೆಯಲ್ಲಿ ಮಗುವನ್ನು ವಾತ್ಸಲ್ಯದಿಂದ ಎತ್ತಿಕೊಳ್ಳುವಂತೆ ಎತ್ತಿ ಹಾಗೆಯೇ ತಿಂದು ಪರಾರಿಯಾದಳು. ಎರಡನೆಯಬಾರಿಯು ಸಹಾ ಹೀಗೆ ಆಯಿತು. ಮೂರನೆಯ ಬಾರಿ ಆಕೆಯು ತನ್ನ ತವರಿನ ಮನೆಗೆ ಮಗುವಿಗೆ ಜನ್ಮ ನೀಡಲು ಹೋದಳು.
ಯಕ್ಷಿಣಿ ಅಲ್ಲಿ ಬಂದು ಅತಿ ದಣಿವಾದವಳಂತೆ ನಟಿಸಿ ಅಲ್ಲಿ ಆಕೆಯ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ತವರಿಗೆ ಹೋಗಿರುವುದು ತಿಳಿಯಿತು. ಆಕೆಯು ಎಲ್ಲಿಯೇ ಹೋಗಲಿ ನಾನು ಆಕೆಯನ್ನು ಬೇಟೆಯಾಡುನೆನು ಎಂದು ಯಕ್ಷಿಣಿಯು ಹೇಳಿದಳು. ಇಲ್ಲಿ ಆ ಯುವತಿಯು ಮಗುವಿಗೆ ಜನ್ಮವಿತ್ತು ತನ್ನ ಪತಿಯ ಮನೆಗೆ ಮರಳುತ್ತಿದ್ದಳು. ದಾರಿಯಲ್ಲಿ ಜೇತವನ ವಿಹಾರದ ಬಳಿ ಕೊಳವಿತ್ತು. ಆಕೆಯು ಅಲ್ಲಿ ಸ್ನಾನ ಮುಗಿಸಿದಳು. ನಂತರ ಆಕೆಯ ಪತಿಯು ಮಗುವನ್ನು ಆಕೆಯ ಕೈಗೆ ಕೊಟ್ಟು ತಾನು ಸ್ನಾನ ಮಾಡಲು ಹೊರಟನು. ಈಗ ದಾರಿಯಲ್ಲಿ ಯಕ್ಷಿಣಿಯು ಬರುತ್ತಿದ್ದಳು. ಆ ಸ್ತ್ರೀಯು ಯಕ್ಷಿಣಿಯನ್ನು ಕಂಡು ವಿಹಾರದತ್ತ ಅತ್ಯಂತ ಭಯದಿಂದ ಓಡಿದಳು.
ಅದೇ ಸಮಯದಲ್ಲಿ ಬುದ್ಧ ಭಗವಾನರು ಜನರಿಗೆ ಬೋಧನೆಯನ್ನು ನೀಡುತ್ತಿದ್ದರು. ಆ ಯುವತಿಯು ಬುದ್ಧರ ಬಳಿ ಓಡಿಬಂದು ಅವರ ಪಾದದ ಮಣೆಯ ಮೇಲೆ ಮಗುವಿಟ್ಟು, ಬುದ್ಧ ಭಗವಾನರ ಪಾದವನ್ನು ಅಭಯಕ್ಕಾಗಿ ರಕ್ಷಣೆಗೆ ಗಟ್ಟಿಯಾಗಿ ಹಿಡಿದು ಬೇಡಿಕೊಂಡಳು. ಯಕ್ಷಿಣಿಯು ಆಕೆಯನ್ನು ಬೆನ್ನಟ್ಟಿ ಬಂದಳು. ಆದರೆ ವಿಹಾರದ ದ್ವಾರವನ್ನು ದಾಟಲಾಗಲಿಲ್ಲ. ಆಗ ಭಗವಾನರು ಆನಂದನಿಗೆ ಯಕ್ಷಿಣಿಯನ್ನು ಇಲ್ಲಿಗೆ ಕರೆತರುವಂತೆ ಹೇಳಿದರು. ಯಕ್ಷಿಣಿಯು ಬರುವುದನ್ನು ಕಂಡು ಯುವತಿಯು ಅತಿ ಭಯಗ್ರಸ್ಥಳಾಗಿ ಪ್ರಲಾಪಿಸಿದಳು, ಗಟ್ಟಿಯಾಗಿ ಅತ್ತಳು, ಭಗವಾನರು ಸಮಾಧಾನಿಸಿದರು. ನಂತರ ಭಗವಾನರು ಹೀಗೆ ಹೇಳಿದರು:
ನೀನು ನನ್ನ ಹತ್ತಿರ ಬರದೆ ಹೋಗಿದ್ದರೆ, ನಿಮ್ಮ ಕೋಪ ಹೀಗೆಯೇ ಬಹಳ ಕಾಲ ಮುಂದುವರೆಯುತ್ತಿತ್ತು. ದ್ವೇಷವು ದ್ವೇಷದಿಂದ ಎಂದಿಗೂ ಕೊನೆಯಾಗದು. ದಯೆಯಿಂದ ಮಾತ್ರ ದ್ವೇಷ ಕೊನೆಯಾಗುತ್ತದೆ ಎಂದು ಹೇಳಿದರು.
ನಂತರ ಅವರಿಬ್ಬರೂ ಮಿತ್ರರಾದರು ಮತ್ತು ಯಕ್ಷಿಣಿಯೇ ಆಕೆ ಸಹಾಯ ನೀಡಿದಳು ಹಾಗು ಆ ಸ್ತ್ರೀ ನಂಬಿಕೆಗೆ ಅರ್ಹಳಾದಳು.
- ಧಮ್ಮಪದ ಅಟ್ಠಕಥಾ

No comments:

Post a Comment