Sunday 14 January 2018

the effects of greed ದುರಾಸೆ- ಗೋಸಕ

                                       ದುರಾಸೆ- ಗೋಸಕ


ಕೋಸಂಬಿ ಪಟ್ಟಣದಲ್ಲಿ ವೇಶ್ಯೆಯೊಬ್ಬಳು ಮಗುವಿಗೆ ಜನ್ಮವಿತ್ತಳು. ಅದು ಗಂಡು ಮಗುವೆಂದು ತಿಳಿದು ಅದನ್ನು ತಿಪ್ಪೆಯ ರಾಶಿಯಲ್ಲಿ ಬಿಸಾಡಲು ಆಜ್ಞಾಪಿಸಿದಳು. ಹಾಗೆ ಮಾಡಿದಾಗ ಆ ಮಗುವಿನ ಸುತ್ತಲೂ ಕಾಗೆಗಳು ಹಾಗು ನಾಯಿಗಳು ಸುತ್ತುವರೆಯುತ್ತವೆ. ಆಗ ಅಕ್ಕಪಕ್ಕದವನೊಬ್ಬನು ಈ ದೃಶ್ಯದಿಂದ ಆಕಷರ್ಿತನಾಗಿ ಹತ್ತಿರ ಬಂದು ನೋಡಿ ಆ ಮಗುವನ್ನು ಅತ್ಯಂತ ವಾತ್ಸಲ್ಯದಿಂದ ತನ್ನ ಮನೆಗೆ ಕರೆದೊಯ್ಯುತ್ತಾನೆ.
ಒಬ್ಬ ಸಿತನ (ಲಕ್ಷಾಧಿಪತಿ) ಯೊಬ್ಬನು ತನ್ನ ಮನೆಗೆ ಹಿಂತಿರುಗಿ ಹೋಗುವಾಗ ದಾರಿಯಲ್ಲಿ ಜ್ಯೋತಿಷ್ಯನೊಬ್ಬನನ್ನು ಈ ದಿನದ ಗ್ರಹಗತಿಗಳನ್ನು ಕೇಳಿದಾಗ ಅತನು ಈ ರೀತಿ ಉತ್ತರಿಸಿದನು: ಯಾವುದೇ ಮಗುವು ಈ ದಿನ ಹುಟ್ಟಲಿ ಅದು ಈ ಊರಿನ ಮುಖ್ಯ ಲಕ್ಷಾಧಿಪತಿಯಾಗುತ್ತಾನೆ.
ಆ ದಿನದಲ್ಲಿ ಆ ಲಕ್ಷಾಧಿಪತಿಯ ಹೆಂಡತಿಯೂ ಸಹಾ ಗಭರ್ಿಣಿಯಾಗಿರುತ್ತಾಳೆ. ಆದ್ದರಿಂದ ಆ ಸಿತನ ಆತುರದಿಂದ ಅರಮನೆಯಿಂದ ಮನೆಗೆ ಬರುತ್ತಾನೆ. ಆತನು ತನ್ನ ದಾಸಿ ಕಾಳಿಯನ್ನು ಕರೆದು ಈ ದಿನ ಜನ್ಮ ಹೊಂದಿದ ಮಗುವನ್ನು ತೆಗೆದುಕೊಂಡು ಬರುವಂತೆ ಆಜ್ಞಾಪಿಸಿ ಅದಕ್ಕೆ ಪ್ರತಿಯಾಗಿ ಸಾವಿರ ರೂಪಾಯಿ ಕೊಡುತ್ತೇನೆ ಎಂದು ಹಣ ನೀಡುತ್ತಾನೆ.
ಆಕೆಯು ಅದರಂತೆ ಆ ದಿನ ಹುಟ್ಟಿದ ಮಗುವನ್ನು ಹುಡುಕುತ್ತಾ ಹೊರಡುತ್ತಾಳೆ. ಅಲ್ಲಿ ಆ ಪೋಷಕರಿಗೆ ಸಾವಿರ ವರಹಗಳನ್ನು ನೀಡಿ ಆ ಮಗುವನ್ನು ಸಿತನನಿಗೆ ತಂದು ಒಪ್ಪಿಸುತ್ತಾಳೆ. ಸಿತನ ಈ ರೀತಿ ಯೋಚಿಸುತ್ತಾನೆ: ಆತನ ಮಡದಿಯು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಈ ಮಗುವಿಗೂ ಅದಕ್ಕೂ ಮದುವೆ ಮಾಡಿಸುವುದು. ಒಂದುವೇಳೆ ಗಂಡು ಮಗುವಿಗೆ ಜನ್ಮ ನೀಡಿದರೆ ಪರ ಮಗುವನ್ನು ನಾಶಪಡಿಸುವುದು ಎಂದು ನಿರ್ಧರಿಸುತ್ತಾನೆ. ಆತನ ಪತ್ನಿಯು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ಸಿತನನು ತನ್ನ ಬುದ್ಧಿಯನ್ನು ಉಪಯೋಗಿಸಿ ನಾನಾ ವಿಧದಿಂದ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ, ಆದರೆ ವಿಫಲನಾಗುತ್ತಾನೆ. ಮೊದಲು ಹಸುವಿನ ಕೊಟ್ಟಿಗೆಯ ಬಾಗಿಲಲ್ಲಿ ಇಟ್ಟು ಅದರ ತುಳಿತಕ್ಕೆ ವಶವಾಗಲೆಂದು ಇಡುತ್ತಾನೆ. ನಂತರ ಹೆದ್ದಾರಿಯಲ್ಲಿ ಮಗುವನ್ನು ಇಡುತ್ತಾನೆ. ಅಲ್ಲಿ ಅದು ಪ್ರಾಣಿಗಳ ತುಳಿತಕ್ಕೆ ಅಥವಾ ಬಂಡಿಗಳ ಚಕ್ರಕ್ಕೆ ಸಿಕ್ಕಿ ಸಾಯಲೆಂದು ಇಡುತ್ತಾನೆ. ನಂತರ ಸ್ಮಶಾನದಲ್ಲಿ ಯಕ್ಷ (ನರಭಕ್ಷಕರು) ತಿನ್ನಲೆಂದು ಇಡುತ್ತಾನೆ. ಆದರೆ ಅಲ್ಲಿ ಹೆಣ್ಣು ಮೇಕೆಯಿಂದ ಆ ಮಗು ಪೋಷಿತವಾಗುತ್ತದೆ. ಮತ್ತೊಂದುಬಾರಿ ಅಪರಾಧಿಗಳನ್ನು ತಳ್ಳುವ ಪ್ರಪಾತದಲ್ಲಿ ಎಸೆಯುತ್ತಾನೆ, ಆದರೂ ಪುಣ್ಯ ಬಲದಿಂದ ಆ ಮಗುವು ಪಾರಾಗುತ್ತಿತ್ತು. ಪ್ರತಿಸಾರಿಯು ಸಿತನನು ಸಾವಿರ ವರಹ ನೀಡಿ ಅದನ್ನು ಕಾಪಾಡಿದವರಿಂದ ಅದನ್ನು ಹಿಂದಕ್ಕೆ ಪಡೆಯಲು ವ್ಯಯಿಸುತ್ತಿದ್ದನು. ಆ ಮಗುವು ಸರ್ವ ವಿರೋಧವನ್ನು ಮೀರಿ ದೊಡ್ಡದಾಯಿತು, ಆ ಮಗುವಿನ ಹೆಸರೇ ಗೋಸಕ.
ಸಿತನನಿಗೆ ಒಬ್ಬ ಮಿತ್ರನಿದ್ದನು. ಆತನು ಕುಂಬಾರನಾಗಿದ್ದನು. ಆತನಿಗೆ ಸಿತನನು ಈ ರೀತಿ ಹೇಳಿದನು: ಸ್ನೇಹಿತನೇ, ನನಗೆ ಪ್ರಿಯವಾಗಿರುವ ಈ ಕಾರ್ಯವನ್ನು ನೆರವೇರಿಸು, ನನ್ನ ಸಾಕು ಪುತ್ರ ಅನಧಿಕಾರದ ಆ ಪುತ್ರನನ್ನು ನಿನ್ನ ಬಳಿ ಕಳುಹಿಸುತ್ತೇನೆ, ಆತನನ್ನು ನೀನು ಒಲೆಗೆ ಎಸೆದುಬಿಡು, ಈ ಕಾರ್ಯಕ್ಕೆ ಮುಂಗಡವಾಗಿ ನಿನಗೆ ಸಾವಿರ ವರಹ ನೀಡುತ್ತೇನೆ, ನಾಳೆ ನಾನು ಆ ಹುಡುಗನನ್ನು ನಿನ್ನ ಬಳಿ ಕಳುಹಿಸುತ್ತೇನೆ ಎಂದು ಹೇಳಿದಾಗ ಕುಂಬಾರನು ಅದಕ್ಕೆ ಒಪ್ಪಿದನು. ನಂತರ ಸಿತನನು ಗೋಸಕನನ್ನು ಕರೆಸಿ ಈ ರೀತಿ ಹೇಳಿದನು: ಮಗು, ನಾನು ಆ ಕುಂಬಾರನ ಬಳಿ ನನ್ನ ಒಂದು ಕೆಲಸವನ್ನು ಒಪ್ಪಿಸಿದ್ದೆ. ಅದನ್ನು ನೆರವೇರಿಸು ಎಂದು ಆತನಿಗೆ ಹೇಳು. ಆಗ ಗೋಸಕನು ಆ ಕಾರ್ಯ ಮಾಡಲು ಸಿದ್ಧನಾದನು. ಅಲ್ಲಿ ಆತನ ತಮ್ಮನು (ಸಿತನನ ಮಗ) ಎಲ್ಲಿ ಹೋಗುತ್ತಿರುವುದು ಎಂದು ಕೇಳಿದನು. ಗೋಸಾಕನು ವಿವರಿಸಿದನು. ಆಗ ಆ ಬಾಲಕನು ತಾನೇ ಆ ಕಾರ್ಯ ಮಾಡುವುದಾಗಿ ಒತ್ತಾಯಿಸಿದನು. ಬದಲಾಗಿ ತಾನು ಆಟದಲ್ಲಿ ಕಳೆದುಕೊಂಡಿರುವುದನ್ನು ಸರಿಪಡಿಸು ಎಂದು ಹೇಳಿ ಆ ತಮ್ಮನು ಗೋಸಕನ ಬದಲಿಗೆ ತಾನೇ ಕುಂಬಾರನ ಬಳಿಗೆ ಸಂದೇಶ ತೆಗೆದುಕೊಂಡು ಹೋದನು. ಆ ಕುಂಬಾರನು ಆತನನ್ನು ಹಿಡಿದು ಒಲೆಗೆ ಎಸೆದನು.
ಸ್ವಲ್ಪ ಕಾಲದ ನಂತರ ಗೋಸಕನು ಮನೆಗೆ ಹೋದಾಗ ಸಿನನು ತಾನು ಒಪ್ಪಿಸಿದ ಕಾರ್ಯ ಮಾಡಿರುವೆಯೋ ಇಲ್ಲವೋ ಎಂದು ಕೇಳಿದಾಗ ಗೋಸಕನು ನಡೆದ ವಿಷಯ ತಿಳಿಸಿದನು. ತಕ್ಷಣ ಸಿತನನು ಕುಂಬಾರನ ಬಳಿ ಓಡಿಬಂದನು. ಆದರೆ ಆತನು ತನ್ನ ಕೆಲಸ ಪೂರೈಸಿದ್ದನು. ಪರಿಣಾಮವಾಗಿ ಸಿತನನು ಅತಿ ದುಃಖದಿಂದ ತನ್ನ ದಿನಗಳನ್ನು ದೂಡುತ್ತಾನೆ. ಈ ಎಲ್ಲಾ ಕೃತ್ಯಗಳನ್ನು ಸಿತನನು ತನ್ನ ಪುತ್ರ ವಾತ್ಸಲ್ಯದಿಂದ, ಸ್ವಾರ್ಥದಿಂದ ಮಾಡಿದ್ದನು.
- ಧಮ್ಮಪದ ಅಟ್ಠಕಥಾ

No comments:

Post a Comment