Thursday, 14 June 2018

ಕಾಲದ ಬಗ್ಗೆ ಪ್ರತಿಯೊಬ್ಬರಿಗೂ ಕಾಡುವಂತಹ ಪ್ರಶ್ನೆಗಳು:The Questions On Time

ಕಾಲದ ಬಗ್ಗೆ ಪ್ರತಿಯೊಬ್ಬರಿಗೂ ಕಾಡುವಂತಹ ಪ್ರಶ್ನೆಗಳು:



 ಅವೆಂದರೆ

1. ಭೂತಕಾಲದ ಬಗ್ಗೆ :

 ನಾನು ಹಿಂದೆ (ಭೂತಕಾಲದಲ್ಲಿ) ಇದ್ದೇನೆ? ನಾನು ಈ ಹಿಂದೆ ಇರಲಿಲ್ಲವೇ? ನಾನು ಹಿಂದೆ ಏನಾಗಿದ್ದೆ? ಹೇಗಿದ್ದೆ? ಏನಾಗಿದ್ದೆ? ನಂತರ ಏನಾದೆ?

2. ಭವಿಷ್ಯ ಕಾಲದ ಬಗ್ಗೆ : 

ನಾನು ಭವಿಷ್ಯದಲ್ಲಿ (ಮುಂದೆ) ಇರುವೆನೆ? ನಾನು ಭವಿಷ್ಯದಲ್ಲಿ ಇರುವುದಿಲ್ಲವೇ? ನಾನು ಭವಿಷ್ಯದಲ್ಲಿ ಏನು ಆಗಿರುತ್ತೇನೆ? ನಾನು ಭವಿಷ್ಯದಲ್ಲಿ ಹೇಗಿರುತ್ತೇನೆ? ಭವಿಷ್ಯದಲ್ಲಿ ಏನಾಗಿದ್ದು ನಾನು ಏನಾಗುತ್ತೇನೆ?

3. ವರ್ತಮಾನದ ಬಗ್ಗೆ :

 ನಾನು ಇರುವೆನೇ? ನಾನು ಇಲ್ಲವೇ? ನಾನು ಏನು ಆಗಿದ್ದೇನೆ? ನಾನು ಹೇಗಿದ್ದೇನೆ? ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುವೆನು?

ಭಗವಾನರು ದಿವ್ಯಚಕ್ಷುವಿನಿಂದ ತಮ್ಮ ಮತ್ತು ಪರರ ಭೂತಕಾಲದ ಬಗ್ಗೆ ಹಾಗೆಯೇ ಭವಿಷ್ಯದ ಬಗ್ಗೆ ಹಾಗೆಯೇ ವರ್ತಮಾನದ ಬಗ್ಗೆ ಪೂರ್ಣ ವಿಶ್ಲೇಷಣೆಯಿಂದ ಅರಿತು ವಿವರಿಸಿದ್ದಾರೆ. ನಾವು ಸಹ ಸಾಧನೆಯಿಂದ ದಿವ್ಯಚಕ್ಷು ಪಡೆದು ನೋಡಬಹುದು ಅಥವಾ ತರ್ಕಶಕ್ತಿಯಿಂದಲೇ ಭೂತ, ವರ್ತಮಾನ ಮತ್ತು ಭವಿಷ್ಯ ಅರಿಯಬಹುದು.
ನಮ್ಮ ಶರೀರ ಮನಸ್ಸಿಗೆ ಮೂಲ, ನಮ್ಮ ಹಿಂದಿನ ಜನ್ಮದ ಚಿತ್ತ (ವಿನ್ಯಾನ) ಆಗಿದೆ. ಆ ಹಿಂದಿನ ಜನ್ಮದ ಚಿತ್ತಕ್ಕೆ ಕಾರಣ ಸಂಖಾರಗಳಾಗಿವೆ. ಸಂಖಾರಗಳಿಗೆ ಕಾರಣ ಅಜ್ಞಾನವಾಗಿದೆ. ಹೀಗೆ ಅಜ್ಞಾನದಿಂದ ಸಂಖಾರಗಳು ಉದಯಿಸುತ್ತದೆ. ಸಂಖಾರಗಳಿಂದ ವಿನ್ಯಾನ ಉಂಟಾಗುತ್ತದೆ. ವಿನ್ಯಾನದಿಂದ ನಾಮರೂಪಗಳು (ಶರೀರ ಮತ್ತು ಮನಸ್ಸು) ಉಂಟಾಗುತ್ತದೆ.
ಇದನ್ನು ಸ್ಪಷ್ಟವಾಗಿ ಅರಿತಾಗ ಆತನು ಆಕಸ್ಮಿಕವಾಗಿ ಜನ್ಮಿಸಿರುವೆ ಎಂದು ಹೇಳುವುದಿಲ್ಲ. ಬದಲಾಗಿ ಕಾರಣದಿಂದ ಜನಿಸಿದ್ದೇನೆ ಎನ್ನುವನು. ಹಾಗೆಯೇ ಹೀಗೆ ಸ್ಪಷ್ಟವಾಗಿ ಅರಿತಾಗ ಆತನು ದೇವರಿಂದ ಜನ್ಮಿಸಿರುವೆ ಅಥವಾ ವಿಧಿಯಿಂದ ಜನ್ಮಿಸಿರುವೆ ಎಂದು ಹೇಳುವುದಿಲ್ಲ. ಬದಲಾಗಿ ಹಿಂದಿನ ಜನ್ಮ ಆಸಕ್ತಿ ಮತ್ತು ಕರ್ಮಫಲಗಳಿಂದ ಜನ್ಮಿಸಿದ್ದೇನೆ ಎಂದು ಹೇಳುತ್ತಾನೆ.
ಈಗಿನ ಶರೀರ ಮನಸ್ಸಿನಿಂದ ಸಳಯಾತನಗಳು (ಇಂದ್ರೀಯಗಳು) ಉಂಟಾಗುತ್ತದೆ.
ಇಂದ್ರೀಯಗಳಿಂದ (ವಿಷಯಗಳೊಂದಿಗೆ) ಸ್ಪರ್ಶ ಉದಯಿಸುತ್ತವೆ.
ಸ್ಪರ್ಶದಿಂದ ವೇದನೆಗಳು ಉದಯಿಸುತ್ತವೆ.
ವೇದನೆಗಳಿಂದ ತೀವ್ರ ಬಯಕೆಗಳು ಉದಯಿಸುತ್ತವೆ.
ತೀವ್ರ ಬಯಕೆಗಳಿಂದ ಅಂಟುಕೊಳ್ಳುವಿಕೆ ಉದಯಿಸುತ್ತದೆ.

 ನಾಲ್ಕು ರೀತಿಯಲ್ಲಿ ಕರ್ಮವಿಪಾಕ ವಗರ್ಿಕರಣ 


ಹೀಗಾದಾಗ ಆತನು ಅನೇಕ ಕರ್ಮಗಳನ್ನು ಮಾಡುತ್ತಾನೆ. ಅದರಂತೆಯೇ ಫಲಗಳನ್ನು ಪಡೆಯುತ್ತಾನೆ. ಯಾವ ಯಾವ ಕರ್ಮ ವಿಪಾಕಗಳಿವೆ? ಅದು ಹೀಗಿದೆ: ಅದನ್ನು ನಾಲ್ಕು ರೀತಿಯಲ್ಲಿ ಕರ್ಮವಿಪಾಕ ವಗರ್ಿಕರಣ ಮಾಡಲಾಗಿದೆ.

ಕಾಲದ ಪರಿಗಣನೆಯಿಂದಾದ ವಗರ್ಿಕರಣ

1. ತಕ್ಷಣ ಪರಿಣಾಮ ಬೀರುವ ಕಮ್ಮ : ಈಗಲೇ ಫಲ ನೀಡುವ ಕರ್ಮ
2. ಅನಂತರ ಪರಿಣಾಮ ಬೀರುವ ಕರ್ಮ : ಮುಂದಿನ ಜನ್ಮದಲ್ಲಿ ಫಲ
3. ಅನಿಶ್ಚಿತ ಕಾಲದವರೆಗೆ ಪರಿಣಾಮ ಬೀರುವ ಕರ್ಮ : ಎಷ್ಟೋ ಕಲ್ಪಗಳ ನಂತರ
ಫಲ ನೀಡುವ ಕರ್ಮ
4. ಅಪರಿಣಾಮಕಾರಿ ಕಮ್ಮ : ಫಲ ನೀಡದ ಕರ್ಮ.

ಪರಿಣಾಮದ ಪರಿಗಣನೆಯಿಂದಾದ ವಗರ್ಿಕರಣ

1. ಭಾರವಾದ ಕರ್ಮ - ತಂದೆ-ತಾಯಿಯರ ಹತ್ಯೆಯಿಂದ ನೇರವಾಗಿ ನರಕ ಅಥವಾ ಧ್ಯಾನದಿಂದ ಮುಂದಿನ ಸುಜನ್ಮ.
2. ಮರಣದ ಸಮೀಪದ ಗ್ರಹಿಕೆಯಿಂದಾದ ಕರ್ಮ : ಮರಣದ ವೇಳೆಯಲ್ಲಿರುವ ಮನಸ್ಥಿತಿಗೆ ಅವಲಂಬನೆ ಸಿಗುವಂತಹ ಜನ್ಮ.
3. ಅಭ್ಯಾಸದ ಕರ್ಮ : ನಿರಂತರ ಅಭ್ಯಾಸದಿಂದ ಏರ್ಪಟ್ಟ ವ್ಯಕ್ತಿತ್ವದಿಂದ ಲಭಿಸುವ ಮುಂದಿನ ಜನ್ಮ.
4. ರಾಶಿ ಕರ್ಮ : ಮುಂದೆ ಕಾದಿಟ್ಟ ಕರ್ಮ ಫಲ.

ಕ್ರಿಯೆಯ ಪರಿಗಣನೆಯಿಂದ ವಗರ್ಿಕರಣ :

1. ಉತ್ಪನ್ನಕಾರಿ ಕರ್ಮ : ಹಿಂದಿನ ಜನ್ಮದ ಪ್ರಚನ್ನತೆಯಿಂದಾದ ಉತ್ಪನ್ನ
2. ಬೆಂಬಲಕಾರಿ ಕರ್ಮ : ಹಿಂದಿನ ಮತ್ತು ಈಗಿನ ಪ್ರಯತ್ನ
3. ಪ್ರತಿಕ್ರಿಯಾಕಾರಿ ಕರ್ಮ : ಈಗಿನ ಪಾಪ ಅಥವಾ ಪುಣ್ಯದ ಪ್ರತಿಕ್ರಿಯೆ.
4. ನಾಶಕಾರಿ ಕರ್ಮ : ಕೆಟ್ಟ ಪಾಪದ ಫಲ.

ಮುಂದಿನ ಗತಿಯ ಪರಿಗಣನೆಯಿಂದಾದ ವಗರ್ಿಕರಣ

1. ಅಕುಶಲ ಕರ್ಮಗಳಿಂದಾಗಿ ಕಾಮಲೋಕದಲ್ಲಿ ಅಂದರೆ ಮಾನವ ಲೋಕದಲ್ಲಿ ಅಥವಾ ದುರ್ಗತಿಗಳಾದ, ಅಸುರ, ಪ್ರೇತ, ಪ್ರಾಣಿ, ಈ ನರಕಗಳಲ್ಲಿ ಜನನ ಮತ್ತು ದುಃಖ ಅನುಭವಿಸುವಿಕೆ.
2. ಕುಶಲ ಕರ್ಮಗಳಿಂದಾಗಿ ಸುಗತಿಯಲ್ಲಿ ಅಂದರೆ ದೇವಲೋಕದಲ್ಲಿ ಅಥವಾ ಮಾನವ ಲೋಕದಲ್ಲಿ ಜನನ ಮತ್ತು ಸುಖಪ್ರಾಪ್ತಿ.
3. ಧ್ಯಾನಗಳಿಂದ ಸಿಗುವ ರೂಪಲೋಕ.
4. ಧ್ಯಾನಗಳಿಂದ ಸಿಗುವ ಅರೂಪಲೋಕ.
ಹೀಗೆ ಆತನು ಕರ್ಮ ಪರಿಣಾಮಗಳನ್ನು ಅರಿತಾಗ ಕರ್ಮಗಳಿಂದಾಗಿ ಸಿಗುವ ಅಪಾಯ ಅಥವಾ ಸುಗತಿ ಸ್ಪಷ್ಟವಾಗಿ ಅರಿತಾಗ ಆತನು ವರ್ತಮಾನ ಕಾಲದ ಮಹತ್ವತೆ ಅರಿತು ಕುಶಲ ಕರ್ಮಗಳಲ್ಲಿ ತಲ್ಲೀನನಾಗಿ ಧ್ಯಾನಗಳಲ್ಲಿ, ಪ್ರಜ್ಞಾಭಾವನಾದಲ್ಲಿ ತಲ್ಲೀನನಾಗುತ್ತಾನೆ. ಧ್ಯಾನದಲ್ಲಿ ಎಲ್ಲವನ್ನು ಅರಿಯುವ ಸಾಧಕನಿಗೆ ಮುಂದಿನ ಜನ್ಮವಿಲ್ಲ ಎಂಬು ಮಿಥ್ಯಾದೃಷ್ಟಿಯು ನಾಶವಾಗುತ್ತದೆ. ಹಾಗೆಯೇ ಎಲ್ಲದಕ್ಕೂ ಹಿಂದಿನ ಜನ್ಮವೇ ಕಾರಣ ವರ್ತಮಾನದ ಮಹತ್ವವಿಲ್ಲ ಎಂಬ ಮಿಥ್ಯಾದೃಷ್ಟಿಯು ನಾಶವಾಗುತ್ತದೆ. ಹಾಗೆಯೇ ಕರ್ಮಫಲವಿಲ್ಲ ಎಂಬ ಮಿಥ್ಯಾದೃಷ್ಟಿಯು ನಾಶವಾಗುತ್ತದೆ.
ಹೀಗೆ ಆತನು ಅಂಟಿಕೊಳ್ಳುವಿಕೆ ಭವ ಉದಯಿಸುತ್ತದೆ. ಭವದಿಂದ ಜನ್ಮ ಉದಯಿಸುತ್ತದೆ. ಜನ್ಮದಿಂದ ದುಃಖವು ಉದಯಿಸುತ್ತದೆ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.
ಆಗ ಆತನಿಗೆ ಇದ್ದ ಮೂರು ಕಾಲಗಳ ಬಗೆಗಿನ ಸಂದೇಹಗಳೆಲ್ಲವೂ ಪರಿಹಾರವಾಗುತ್ತದೆ. ಆತನಿಗೆ ಬುದ್ಧರ ಬಗ್ಗೆ, ಧಮ್ಮದ ಬಗ್ಗೆ, ಸಂಘದ ಬಗ್ಗೆ (ವಿನಯ/ಶಿಸ್ತು), ಭೂತಕಾಲದ ಬಗ್ಗೆ, ಭವಿಷ್ಯಕಾಲದ ಬಗ್ಗೆ ಮತ್ತು ವರ್ತಮಾನದ ಬಗ್ಗೆ ಮತ್ತು ಪಟಚ್ಛ ಸಮುಪ್ಪಾದದ ಬಗ್ಗೆ ಎಲ್ಲಾರೀತಿಯ ಸಂದೇಹಗಳು ಪರಿಹಾರವಾಗುತ್ತದೆ.


ಕರ್ಮ ಮತ್ತು ಅದರ ಪರಿಣಾಮವಿದೆ, ಆದರೆ ಕತರ್ೃವಿಲ್ಲ :

ಯಾವುದೇ ರೀತಿಯ ಪಕ್ಷಪಾತವಿಲ್ಲದೆ ವೀಕ್ಷಿಸುತ್ತಿರುವ ಆತನಿಗೆ ಎಲ್ಲಾ ಬಗೆಯ ಸಂಭವಿಸುವಿಕೆಗಳು, ಎಲ್ಲಾ ಹಂತಗಳು ಕೇವಲ ಶಾರೀರಿಕ, ಮಾನಸಿಕಾ (ನಾಮರೂಪ) ಗಳಾಗಿಯೇ ಕಾಣುತ್ತದೆ. ಅವೆಲ್ಲವೂ ಕಾರಣ ಮತ್ತು ಫಲ (ಪರಿಣಾಮ)ದ ಕೊಂಡಿಗಳಾಗಿ ಕಾಣುತ್ತದೆ. ಆತನು ಯಾವುದೇ ಕತರ್ೃವನ್ನು (ಕರ್ಮ ಮಾಡುವವನನ್ನು) ಕಾಣಲಾರ. ಹಾಗೆಯೇ ಆತನಿಗೆ ಕಮರ್ಾನುಭವಿಯನ್ನು (ಕರ್ಮ ಪರಿಣಾಮವನ್ನು ಅನುಭವಿಸುವವನು) ಕಾಣಲಾರ. ಇದನ್ನು ಆತನು ಸ್ಪಷ್ಟವಾಗಿ, ಸಮ್ಮಾದೃಷ್ಟಿಯಿಂದ ಕಾಣುತ್ತಾನೆ.

 ಅಲ್ಲಿ ಕೇವಲ ಮಾಡುವಿಕೆ ಇರುತ್ತದೆ 
ಆದರೆ ಮಾಡುವವನು ಇರಲಾರ. 
ಅಲ್ಲಿ ಕೇವಲ ಅನುಭವ ಇರುತ್ತದೆ. 
ಆದರೆ ಅನುಭವಿಸುವವನು ಇರಲಾರ.

ಅದು ಕೇವಲ ವ್ಯವಹಾರ ಭಾಷೆಯಷ್ಟೇ. ಆದ್ದರಿಂದಲೇ ಸನಾತನಿ ಬೌದ್ಧರು ಹೇಳಿರುವುದು:

ಕರ್ಮ ಮಾಡುವವನು (ಕತರ್ೃ) ಇಲ್ಲ 
ಅಥವಾ ಕರ್ಮ ಪರಿಣಾಮವನ್ನು ಅನುಭವಿಸುವವನೂ ಇಲ್ಲ.
 ಕೇವಲ ಆಗುಹೋಗುವಿಕೆಗಳು ಹರಿಯುತ್ತಿವೆ. 
ಇದರ ಹೊರತು ಬೇರೆ ಯಾವುದೂ ಸಮ್ಮಾದೃಷ್ಟಿಯಿಲ್ಲ.

ಮತ್ತು ಹೀಗೆ ಕರ್ಮ ಮತ್ತು ಪರಿಣಾಮಗಳು ಕಾರಣಬದ್ಧವಾಗಿ ತಮ್ಮ ಸುತ್ತುಗಳನ್ನು ನಡೆಸುತ್ತಿರುತ್ತವೆ. ಹೇಗೆಂದರೆ ಬೀಜ ಮತ್ತು ವೃಕ್ಷಗಳು ಬದಲಾಗುವ ರೀತಿ ಪ್ರಥಮ ಆದಿಯನ್ನು ತೋರಿಸಲು ಆಗುವುದಿಲ್ಲ. ಹಾಗೆಯೇ ಜನ್ಮಗಳ ಚಕ್ರಗಳ ಭವಿಷ್ಯವನ್ನು ಸಹಾ ಅವು ಸಂಭವಿಸಬಾರದೆಂದು ತೋರಿಸಲು ಅಗುವುದೇ? ಅನ್ಯ ಪಂಥಿಯರು ಇದನ್ನು ಅರಿಯಲಾಗದೆ ಪೂರ್ಣ ಸ್ವ-ಪ್ರಭುತ್ವವನ್ನು ಪಡೆಯಲು ವಿಫಲರಾಗಿರುವರು.

ಅವರು ಜೀವಿಯನ್ನು (ಆತ್ಮ) ಕಲ್ಪಿಸುವರು.
ಅದನ್ನು ನಿತ್ಯವೆಂದು ಅಥವಾ ನಶ್ವರವೆಂದು ಕಾಣುವರು.
 64 ಮಿಥ್ಯಾದೃಷ್ಟಿಗಳನ್ನು ಅವರು ಹೊಂದಿದ್ದು,
 ಅವೆಲ್ಲಾ ಒಂದು ಇನ್ನೊಂದಕ್ಕೆ ವಿರೋಧವಾಗಿರುವುವು.

ತನ್ಹಾದ ಪ್ರವಾಹವು ಅವರನ್ನು ಸದೆಬಡಿದಿದೆ.
ಅವರು ತಮ್ಮದೇ ಆದ ದೃಷ್ಟಿಗಳ ಬಲೆಯಲ್ಲಿ ಸಿಕ್ಕಿಕೊಂಡಿದ್ದಾರೆ
ಮತ್ತು ಹೀಗೆ ಪ್ರವಾಹವು ಅವರನ್ನು ಸದೆಬಡಿಯುವಾಗ
ಅವರು ದುಃಖದಿಂದ ಮುಕ್ತರಾಗುವುದಿಲ್ಲ.

ಬುದ್ಧರ ಶಿಷ್ಯನಾದ ಭಿಕ್ಖುವು ತನ್ನ ಅಭಿಜ್ಞಾ ಮತ್ತು ಪ್ರಜ್ಞಾದಿಂದ ಈ ವಾಸ್ತವವನ್ನು ಅರಿಯುತ್ತಾನೆ
 ಮತ್ತು ಶೂನ್ಯ ಸ್ಥಿತಿಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಅರಿಯುತ್ತಿರುತ್ತಾರೆ.

ಪರಿಣಾಮದಲ್ಲಿ ಯಾವ ಕರ್ಮವೂ ಇಲ್ಲ. 
ಹಾಗೆಯೇ ಕರ್ಮದಲ್ಲಿ ಯಾವ ಪರಿಣಾಮವೂ ಇಲ್ಲ.
 ಅವು ಒಂದಕ್ಕೆ ಇನ್ನೊಂದು ಶೂನ್ಯವಾಗಿದ್ದರೂ ಕರ್ಮದ ವಿನಃ ಫಲವಿಲ್ಲ.

ಹೇಗೆ ಅಗ್ನಿಯು ರತ್ನದ ಹರಳಿನಲ್ಲಿಯಾಗಲಿ, ಭರಣಿಯಲ್ಲಾಗಲಿ, ಕಟ್ಟಿಗೆಯಲ್ಲಾಗಲಿ ಇರುವುದಿಲ್ಲವೋ ಹಾಗೆಯೇ ಅವುಗಳ ಹೊರಗೂ ಇರುವುದಿಲ್ಲವೋ, ಆದರೆ ಅದರ ಅಂಗಗಳ ಯೊಗ್ಯರೀತಿಯಲ್ಲಿನ ಕ್ರಿಯೆ ಮಾಡಿದಾಗ ಅಗ್ನಿಯನ್ನು ಉತ್ಪಾದಿಸಬಹುದು.
ಹೀಗೆ ಎರಡು ರೀತಿಯಲ್ಲಿಯೂ ಪರಿಣಾಮಗಳನ್ನು ನಾವು ಕಾಣಲಾರೆವು.
ಕರ್ಮ ಒಳಗೂ ಅಥವಾ ಕರ್ಮದ ಹೊರಗೂ ಅಥವಾ ಅದರ ಫಲಿತಾಂಶದಲ್ಲೂ ಸಹಾ.

ಕರ್ಮಕ್ಕೆ ಅದರ ಫಲವೂ ಶೂನ್ಯ, ಫಲಕ್ಕೆ ಕರ್ಮವೂ ಶೂನ್ಯ. 
ಆದರೆ ಫಲವಂತು ಅದರಿಂದಲೇ ಬರುತ್ತದೆ. 
ಕರ್ಮವನ್ನು ಅವಲಂಬಿಸಿಯೇ ಹುಟ್ಟುತ್ತದೆ ಮತ್ತು
 ಇಲ್ಲಿ ಯಾವ ಸೃಷ್ಟಿಕರ್ತ ಬ್ರಹ್ಮ ಇಲ್ಲ. 
ಜನ್ಮಗಳಲ್ಲಿ ಸುತ್ತಾಡಿಸುವಂತಹ ಸೃಷ್ಟಿಕರ್ತನಿಲ್ಲ. 
ಕೇವಲ ಕಾರಣ ಮತ್ತು ಅದರ ಅಂಗಗಳ ಆಗುಹೋಗುವಿಕೆಗಳೇ ಹರಿಯುತ್ತಿವೆ.

ಹೀಗೆ ಆತನು ನಾಮರೂಪಗಳನ್ನು ಮತ್ತು ಕರ್ಮ ಹಾಗು ಕರ್ಮದ ಪರಿಣಾಮಗಳನ್ನು ಈ ರೀತಿಯಾಗಿ ಅರಿಯುತ್ತಿರುವಾಗ ಆತನಲ್ಲಿ ಕಾಲದ ಮೂರು ಹಂತಗಳಾದ ಭೂತ, ಭವಿಷ್ಯತ್ ಮತ್ತು ವರ್ತಮಾನದ ಎಲ್ಲಾ ಸಂಶಯಗಳು ನಿವಾರಣೆಯಾಗುತ್ತದೆ. ಆತನಿಗೆ ಮರಣ ಮತ್ತು ಪುನರ್ಜನ್ಮದ ಕೊಂಡಿಗಳು ಸ್ಪಷ್ಟವಾಗಿ ಅರ್ಥವಾಗುತ್ತದೆ. ಭೂತಕಾಲದಿಂದ ವರ್ತಮಾನದ ಕೊಂಡಿ, ಹಾಗೆಯೇ ವರ್ತಮಾನದಿಂದ ಭವಿಷ್ಯದ ಕೊಂಡಿಗಳನ್ನು ಸ್ಪಷ್ಟವಾಗಿ ಅರಿಯತ್ತಾನೆ.
ಹೇಗೆ ಕಣ್ಣಿನ ವಿನ್ಯಾನವನ್ನು ಮನೋವಿನ್ಯಾನವು (ಚಿತ್ತದ ವಿಷಯಗಳು) ಹಿಂಬಾಲಿಸುವುದೋ, ಅದು ಅದರಿಂದಲೇ ಬಂದಿರುವಂತಹದ್ದಾಗಿದೆ. ಹಾಗೆಯೇ ಪುನರ್ ಜನ್ಮದ ಕೊಂಡಿಯು ಸಹಾ ನಿರಂತರ ನಡೆಯುತ್ತಲೇ ಇರುತ್ತದೆ. ಹಿಂದಿನ ಚಿತ್ತವು ಮುರಿಯುತ್ತದೆ. ನಂತರದ ಚಿತ್ತವು ಅದರಿಂದಲೇ ಹುಟ್ಟುತ್ತದೆ. ಇವುಗಳ ನಡುವಿನ ಅಂತರವಿಲ್ಲ. ನಿಲ್ಲುವಿಕೆಯಿಲ್ಲ, ವಿಶ್ರಾಂತಿಯೂ ಇಲ್ಲ. ಅಲ್ಲಿ ಏನೊಂದು ಹಾದು ಹೋಗದಿದ್ದರೂ ಪುನರ್ಜನ್ಮದ ಕೊಂಡಿಯು ಅಸ್ತಿತ್ವಕ್ಕೆ ಬಂದಿದೆ.
ಹೀಗೆ ಅತನು ಅನಿತ್ಯವನ್ನು ಗಮನಿಸುತ್ತಿರುವಾಗ ಎಲ್ಲಾ ಖಂಧಗಳ ಅನಿತ್ಯವನ್ನು ಸ್ಪಷ್ಟವಾಗಿ ನೋಡುತ್ತಾನೆ. ಆಗ ಆತನ ಸಂದೇಹಗಳೆಲ್ಲವೂ ಪರಿಹಾರವಾಗುತ್ತದೆ.
ಸರಿಯಾದ ಜ್ಞಾನ, ಯೋಗ್ಯವಾದ ರೀತಿಯಲ್ಲಿ ನೋಡುವಿಕೆ ಮತ್ತು ಸಂದೇಹವನ್ನು ಹಾದುಹೋಗುವಿಕೆ ಇವೆಲ್ಲವೂ ಒಂದೇ ಅರ್ಥವನ್ನು ನೀಡುತ್ತದೆ. ಕೇವಲ ಪದಗಳು ಬೇರೆಯಷ್ಟೇ. ಈ ರೀತಿಯಲ್ಲಿ ಭಿಕ್ಷುವು ನಾಮರೂಪಗಳನ್ನು ಸದಾ ಜಾಗ್ರತೆಯಲ್ಲಿ ಗಮನಿಸಿ ಸಂದೇಹಾತೀತನಾಗುತ್ತಾನೆ. ಆತನು ಸೋತಪನ್ನ ಸ್ಥಿತಿಗಿಂತ ಸ್ವಲ್ಪ ಕೆಳಗೆ ಇರುತ್ತಾನೆ.
ಆತನಿಗೆ ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘಗಳಲ್ಲಿ ಸಂಶಯ ನಾಶವಾಗಿ ತ್ರಿರತ್ನಗಳಲ್ಲಿ ಪ್ರಬಲ ಶ್ರದ್ಧೆಯುಳ್ಳವನಾಗುತ್ತಾನೆ.
ಇಲ್ಲಿಯದನ್ನು ಕುರಿತ, ಮುಂದಿನದನ್ನು ಕುರಿತ ಯಾವ ಸಂಶಯಗಳಿವೆಯೋ, ತಾನೇ ಅರಿತಿರುವುದಾಗಲಿ ಅಥವಾ ಪರರಿಗೆ ತಿಳಿದವುಗಳಾಗಲಿ, ಅವೆಲ್ಲವನ್ನು ಧ್ಯಾನಿಗಳಾದವರು ಪರಿಹರಿಸಿ ತೊರೆಯುತ್ತಾರೆ. ಶ್ರದ್ಧೆಯಿಂದ ಬ್ರಹ್ಮಚರ್ಯ ಜೀವನ ಪಾಲಿಸುತ್ತಾರೆ.
ಯಾರಿಗೆ ಬಂಧನವಿಲ್ಲವೋ ಯಾರು ಪೂರ್ಣ ಪ್ರಜ್ಞೆಯಿಂದಾಗಿ ಸರ್ವ ಸಂಶಯಗಳನ್ನು ಇಲ್ಲವಾಗಿಸಿಕೊಂಡಿರುವನೋ ಮತ್ತು ಅಮರತ್ವ ಸಿದ್ಧಿಸಲು ಸಿದ್ಧನೋ ಆತನನ್ನು ನಾನು ಬ್ರಾಹ್ಮಣ (ಶ್ರೇಷ್ಠ/ಪರಿಶುದ್ಧ) ಎನ್ನುತ್ತೇನೆ. (ಧಮ್ಮಪದ 411 

Saturday, 21 April 2018

ಬೋಧನೆಯ ವಿಮಶರ್ೆ (ಟೀಕೆ) ಸ್ವೀಕರಿಸುವಿಕೆ

ಬೋಧನೆಯ ವಿಮಶರ್ೆ (ಟೀಕೆ) ಸ್ವೀಕರಿಸುವಿಕೆ 

(ಬೋಧನೆಯ ಬಗ್ಗೆ ವಿಮಶರ್ೆ ಮತ್ತು ಸ್ವೀಕಾರ)
ಪ್ರಜ್ಞಾಪ್ರದೀಪ ಬುದ್ಧರು ತಮ್ಮ ಶಿಷ್ಯರಿಗೆ ಹೇಗೆ ಬಾಹ್ಯದವರ ಅಭಿಪ್ರಾಯಗಳೊಡನೆ ಸ್ತುತಿ, ಟೀಕೆಗಳೊಡನೆ ವತರ್ಿಸಬೇಕೆಂದು ಹೇಳಿದ್ದಾರೆ.
ಒಂದುದಿನ ಕೆಲವು ಭಿಕ್ಷುಗಳು ತಾವು ಕಂಡ ಒಬ್ಬ ಗುರು ಮತ್ತು ಆತನ ಶಿಷ್ಯನ ವಾದವಿವಾದಗಳ ವಿಷಯ ನಡೆಯುತ್ತಿತ್ತು. ಆಗ ಭಗವಾನರು ಅಲ್ಲಿ ಪ್ರವೇಶ ಮಾಡಿದರು. ಒಂದು (ಕ್ಷೇಮ) ಕುಶಲ ವಿಚಾರಣೆಯ ನಂತರ ಯಾವ ಚಚರ್ೆ ನಡೆಯುತ್ತಿತ್ತು ಎಂದು ಕೇಳಿದರು. ಭಂತೆ (ಪೂಜ್ಯರೇ) ಎಂದು ಮತ್ತೆ ಉತ್ತರಿಸಿದನು ಕಳೆದ ದಿನದ ಸಂಜೆ ನಾವು ಒಂದು (ಪಂಗಡದ) ಗುರುವಿನ ಹಾಗು ಆತನ ಶಿಷ್ಯ ಬ್ರಹ್ಮದತ್ತನ ಬಗ್ಗೆ ಕೆಲವು ಮಾತುಗಳು ಕೇಳಿದೆವು. ಆಗ ಬ್ರಹ್ಮದತ್ತನು ಬುದ್ಧರನ್ನು, ಧಮ್ಮವನ್ನು ಮತ್ತು ಸಂಘವನ್ನು ಸ್ತುತಿಸುತ್ತಿದ್ದನು.  ಆದರೆ ಆತನ ಗುರುವು ತ್ರಿರತ್ನಗಳನ್ನು (ಬುದ್ಧ, ಧಮ್ಮ, ಸಂಘ) ನಿಂದಿಸುತ್ತಿದ್ದನು. ಈ ವಿಷಯವೇ ಚಚರ್ಿಸುತ್ತಿದ್ದೆವು ತಮ್ಮ ಆಗಮನವಾಯಿತು ಎಂದರು.
ಆಗ ಲೋಕಾಕಾರುಣಿಕ ಪೂರ್ಣವಾಗಿ ನಿಸ್ವಾಥರ್ಿಗಳಾಗಿದಂತಹ ಬುದ್ಧ ಭಗವಾನರು ಹೀಗೆ ನುಡಿದರು ಓ ಭಿಕ್ಷುಗಳೇ, ಪರರು ನನ್ನ ವಿರುದ್ಧ, ನನ್ನ ಬೋಧನೆಯ (ಧಮ್ಮ) ವಿರುದ್ಧ ಅಥವಾ ನನ್ನ ಸಂಘದ ವಿರುದ್ಧ (ನಿಂದಿಸುವಿಕೆ) ಮಾತನಾಡಿದರೆ, ನೀವು ಕೋಪಿಸಿಕೊಳ್ಳಬಾರದು. ಅದನ್ನೇ ಹಿಡಿದಿಟ್ಟುಕೊಳ್ಳಬಾರದು, ಅದರಿಂದ ನಿಮಗೆ ಹಾನಿಯಾಗುತ್ತದೆ. ಈಗ ನೀವು ಕೋಪಗೊಂಡರೆ ನಿಮಗೆ ಅವರು ಹೇಳುತ್ತಿರುವುದು ನಿಜವೋ ಅಥವಾ ಸುಳ್ಳೋ ಅರಿಯಲಾಗುವುದಿಲ್ಲ ಮತ್ತು ಹಾಗೆಯೇ ಪರರು ನನ್ನನ್ನು ಸ್ತುತಿಸಬಹುದು, ನನ್ನ ಬೋಧನೆಯನ್ನು ಸ್ತುತಿಸಬಹುದು ಅಥವಾ ಸಂಘವನ್ನು ಸ್ತುತಿಸಬಹುದು. ಆದರೆ ಆಗಲೂ ಸಹಾ ನೀವು ಆನಂದಗೊಳ್ಳಬಾರದು ಅಥವಾ ಉಬ್ಬಿ ಹೆಮ್ಮೆಪಡಬಾರದು. ಏಕೆಂದರೆ ನೀವು ಅತಿಯಾಗಿ ಆನಂದದಿಂದ ಉಬ್ಬಿ ಹೆಮ್ಮೆಪಡುತ್ತಿರುವಾಗ ಅವರು ಹೇಳುತ್ತಿರುವುದರ ಬಗ್ಗೆ ಸರಿಯಾಗಿ ಅರಿಯಲಾಗುವುದಿಲ್ಲ. ಆದ್ದರಿಂದ ಪರರು ತ್ರಿರತ್ನವನ್ನು (ಬುದ್ಧರನ್ನು, ಧಮ್ಮವನ್ನು, ಸಂಘವನ್ನು) ಸ್ತುತಿಸಲಿ ಅಥವಾ ಟೀಕಿಸಲಿ ನೀವು ಹೆಮ್ಮೆಯು (ಆನಂದ) ಪಡಬೇಡಿ ಅಥವಾ ಕೋಪವೂ ಪಡಬೇಡಿ. ನೀವು ನಿಷ್ಪಕ್ಷಪಾತಿಗಳಾಗಿ ಸಮ್ಮ ದೃಷ್ಠಿಯಿಂದ ಶಾಂತವಾಗಿ ಅವರು ಹೇಳುತ್ತಿರುವುದು ಸರಿಯೇ ಅಥವಾ ತಪ್ಪೆ ಎಂದು ಅರಿತು ಅವರು ಸರಿ ಹೇಳುತ್ತಿದ್ದರೆ ಸರಿಯೆಂದು, ಅವರು ತಪ್ಪು ಹೇಳುತ್ತಿದ್ದರೆ ಎಲ್ಲಿ ತಪ್ಪು ಹೇಳುತ್ತಿದ್ದಾರೆ ಎಂದು ವಿವರಿಸಬೇಕು. ಮತ್ತೇ ಕೋಪವೇ ಆಗಲಿ, ಅಥವಾ ಹೆಮ್ಮಯೇ ಆಗಲಿ ನಿಮ್ಮ ಮಾನಸಿಕ ಬೆಳವಣಿಗೆಗೆ (ಸಹಕಾರಿಯಲ್ಲ) ವಿರುದ್ಧವಾಗುತ್ತದೆ ಎಂದು ವಿದ್ಯಾಚರಣ ಸಂಪನ್ನರು ಹೇಳಿದರು.

ಮೈತ್ರಿಯು (ಕರುಣಾಯುತ ಪ್ರೀತಿಯು) ಸರ್ವರಿಗಾಗಿ

ನಮ್ಮಲ್ಲಿ ಬಹಳಷ್ಟು ಮಂದಿ ದೀರ್ಘ ಅಂತರದಿಂದ ಮೈತ್ರಿ ಹಾಗು ಕರುಣೆಯನ್ನು ಪ್ರಸರಿಸುತ್ತಾ ಬಂದಿದ್ದೇವೆ. ಹೇಗೆ ಬುದ್ಧರು ಪ್ರಸರಿಸುತ್ತಿದ್ದರೂ ಹಾಗೆ ಆಗದಿದ್ದರೂ ನಾವು ಈ ಹಿಂದೆಯು ಅಧ್ಯಾಯದಲ್ಲಿ ಹಾಗು ಕೆಲವು ಘಟನೆಗಳಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ನಾವು ಈ ಶ್ರೇಷ್ಠ ದಿವ್ಯ ಸ್ಥಿತಿಗಳನ್ನು ಅಭಿವೃದ್ಧಿಗೊಳಿಸಿದರೆ ನಾವು ದುಃಖದಿಂದ ಮುಕ್ತರಾಗಿ ಪರರಿಗೂ ಸರ್ವರಿಗೂ ಸಹಾಯ ಮಾಡಬಹುದು. ನೀವು ಮೈತ್ರಿಯನ್ನು ಎಷ್ಟು ಅಗಾಧವಾಗಿ, ಆಳವಾಗಿ, ಶುದ್ಧವಾಗಿ ಮತ್ತು ಪೂರ್ಣವಾಗಿ ಅಭ್ಯಸಿಸುವರೋ ಹಾಗೆ ಸಾಧನೆ ಮಾಡುವಿರೋ ನೀವು ಬುದ್ಧಭಗವಾನರ ತರಹವೇ ಆಗುವಿರಿ. (ಏಕೆಂದರೆ ಬುದ್ಧರು ಮೈತ್ರಿಯ ಹಾಗು ಜ್ಞಾನದ ಸಂಗಮವಾಗಿದ್ದಾರೆ)
ಮೈತ್ರಿಯು ಅಭಿವೃದ್ಧಿಗೊಳಿಸುವುದಕ್ಕೆ ಒಂದು ನಿಶ್ಶಬ್ಧವಾದ ಪ್ರದೇಶದ ಆಯ್ಕೆ ಉತ್ತಮವಾದುದ್ದು. ಎಲ್ಲಿ ನೀವು ನಿಮ್ಮ ಎಲ್ಲಾ ಉದ್ರೇಕ, ಚಿಂತೆ, ಆವೇಶ ಮುಂತಾದವುಗಳಿಂದ ಅಡಚಣೆಯಾಗಬಾರದು, ಗುಂಪು, ಗದ್ದಲ ಹಾಗು ಗೊಂದಲಗಳಿಂದ ಮುಕ್ತವಾದ ಯಾವುದಾದರೂ ಸ್ಥಳವನ್ನು ಹುಡುಕಿಕೊಳ್ಳಬೇಕು. ಆ ಸ್ಥಳವು ನಿಮ್ಮ ಕೋಣೆಯಾಗಿರಬಹುದು, ಉದ್ಯಾನವನ ಅಥವಾ ನಿಮ್ಮ ಮಲಗುವ ಕೋಣೆ, ಯಾವುದಾದರೂ ಸ್ಥಳ ಅದು ನಿಮಗೆ ಹಿತಕರವಾಗಿರಬೇಕು. ಒಮ್ಮೆ ಸ್ಥಳದ ಆಯ್ಕೆಯ ನಂತರ ಅದಕ್ಕೆ ಹೊಂದಿಕೊಂಡು ಇದ್ದುಬಿಡಿ ಮತ್ತು ಅತ್ಯುತ್ತಮ ಫಲಿತಾಂಶಕ್ಕಾಗಿ ಒಂದು ನಿಗದಿತ ವೇಳೆಯನ್ನು ಸಹಾ ಆಯ್ಕೆ ಮಾಡಿ ಮತ್ತು ಅದಕ್ಕೆ ಹೊಂದಿಕೊಂಡು ಸ್ಥಿರವಾಗಿ ಇದ್ದುಬಿಡಿ. ನಿಮಗೆ ಸಾಧ್ಯವಾದರೆ ಪದ್ಮಾಸನದಲ್ಲಿ ಕುಳಿತುಬಿಡಿ ಅಥವಾ ಬೆನ್ನು ನೇರ ಹಾಗು ಹಿತವಾಗಿ ಇರುವಂತಹ ಯಾವುದಾದರು ಆಸನದಲ್ಲಿ ಕುಳಿತುಕೊಳ್ಳಿ. ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳಿ. ನೀವು ಸಾಧ್ಯವಾದರೆ ದಿನಕ್ಕೆ ಎರಡುಬಾರಿ ಅಭ್ಯಸಿಸಿ. ಮುಂಜಾನೆ ಅಥವಾ ಸಂಜೆ (ಸಾಧ್ಯವಾಗದಿದ್ದಿರೆ ರಾತ್ರಿ) ಕನಿಷ್ಟಪಕ್ಷ 15 ನಿಮಿಷಗಳಾದರೂ ಮಾಡಿ.

the Buddha and akkosaka ಅಕ್ಕೂಸಕ

ಅಕ್ಕೂಸಕ

ಮತ್ತೊಂದು ಸನ್ನಿವೇಶವು ಸಹಾ ಬ್ರಾಹ್ಮಣ ಯುವಕನದ್ದಾಗಿದೆ. ಅಲ್ಲಿಯೂ ಸಹಾ ಭಗವಾನರು ಅದೇರೀತಿ ಪಾಠ ಕಲಿಸುತ್ತಾರೆ.
ಒಮ್ಮೆ ಭಾರದ್ವಜ ಪಂಗಡದ ಅಕ್ಕೂಸಕನೆಂಬುವವನು ಭಗವಾನರು ಬೋಧಿಸುತ್ತಿದ್ದಾರೆ ಎಂದು ಕೇಳಿಯೆ ಕ್ರೋಧಗೊಂಡನು. ಆತನು ಮಹಾ ಕಾರುಣಿಕರು ಇದ್ದಲ್ಲಿಗೆ ಹೋಗಿ ಅವರನ್ನು ನಿಂದಿಸತೊಡಗಿದನು. ನಂತರ ಭಗವಾನರು ಆತನಿಗೆ ಹೀಗೆ ಕೇಳಿದರು: ಹೇಳು ಬ್ರಾಹ್ಮಣ ನೀನು ನಿನ್ನ ಬಂಧುಗಳೊಂದಿಗೆ ಅಥವಾ ಮಿತ್ರರಿಗೆ ಸ್ವಾಗತವಿದೆಯಲ್ಲವೆ?
ಹೌದು ಗೌತಮರೆ, ಕೆಲವೊಮ್ಮೆ ಅವರು ಬರುವರು
ಮತ್ತು ನನಗೆ ಹೇಳು, ನೀನು ಅವರಿಗೆ ಘನವಾದ ಆಹಾರವನ್ನು ಮತ್ತು ಮೃದುವಾದ ಆಹಾರವನ್ನು ಸವಿಯಾಗಿರುವುದನ್ನು ಬಡಿಸುತ್ತೀಯಲ್ಲವೆ?
ಹೌದು ಗೌತಮರೆ, ಕೆಲವೊಮ್ಮೆ
ಬ್ರಾಹ್ಮಣ ಈಗ ನನಗೆ ಹೇಳು, ನಿನ್ನ ಆತಿಥ್ಯವನ್ನು ಅವರು ನಿರಾಕರಿಸಿದರೆ ನಿನ್ನ ಆಹಾರವೆಲ್ಲವೂ ಯಾರಿಗೆ ಸೇರುತ್ತದೆ?
ಅವರಿಗೆ ಬೇಡವಾದರೆ, ನಿರಾಕರಿಸಿದರೆ ನನಗೆಯೇ ದೊರೆಯುತ್ತದೆ, ಅದು ನನಗೆ ಸೇರಿದ್ದು.
ಇಲ್ಲಿಯೂ ಹಾಗೆಯೇ ಬ್ರಾಹ್ಮಣ. ಕಟುನುಡಿ, ನಿಂದಿಸುವಿಕೆ, ದೂಷಿಸುವಿಕೆಯಿಂದ ನೀನು ನಮ್ಮತ್ತ ಬಿಡಬಹುದು, ಆದರೆ ನಾವು ಅದನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಅದು ನಿನಗೆ ಸೇರಿದ್ದು ಬ್ರಾಹ್ಮಣ, ಅದು ನಿನ್ನದೆ. ಈಗ ಒಬ್ಬ ಮನುಷ್ಯ ನಿಂದೆಗೆ ಪ್ರತಿಯಾಗಿ ನಿಂದೆ, ಕಟುನುಡಿಗೆ ಪ್ರತಿಯಾಗಿ ಕಟುನುಡಿ, ದೂಷಿಸುವಿಕೆಗೆ ಪ್ರತಿಯಾಗಿ ದೂಷಿಸುವಿಕೆ ಮಾಡಿದರೆ ಬ್ರಾಹ್ಮಣ ಅದು ಔತಣದಲ್ಲಿ ಅತಿಥಿಗಳು ಸೇರಿದಂತಾಗುತ್ತದೆ. ಆದರೆ ನಾವು ನಿನ್ನ ಆತಿಥ್ಯದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಇದೆಲ್ಲವೂ ನಿನ್ನದೆ. ಬ್ರಾಹ್ಮಣ ಇದೆಲ್ಲವೂ ಪೂರ್ಣವಾಗಿ ನಿನ್ನದೆ ಎಂದು ಹೀಗೆ ಪರಿಪೂರ್ಣರು ವಿವರಿಸಿದರು. ನಂತರ ಗಾಥೆಗಳಲ್ಲಿ ಕ್ರೋಧದ ಸಂಗಡ ಹೇಗೆ ವತರ್ಿಸಬೇಕೆಂದು ವಿವರಿಸಿದರು.
ಕೋಪವು ಆತನಲ್ಲಿ ಹೇಗೆ ಉದಯಿಸುತ್ತದೆ? ಯಾರು ಸ್ವತಂತ್ರನೋ, ದ್ವೇಷರಹಿತನೂ, ಯಾರ ಉದ್ರೇಕಗಳು (ಭಾವಾವೇಶಗಳು) ಪಳಗಿಸಿ ಶಾಂತವಾಗಿವೆಯೋ, ಪರಮಶ್ರೇಷ್ಠ ಪ್ರಜ್ಞಾದಿಂದ ಮುಕ್ತವಾಗಿರುವನೋ, ನುಡಿದಂತೆ ನಡೆಯುವನೋ, ಪರಿಪೂರ್ಣವಾಗಿ ಶಾಂತನೋ (ಆತನಲ್ಲಿ ಕೋಪ ಹೇಗೆ ಉದಯಿಸುವುದು)?
ಒಬ್ಬಾತನು ನಿಂದಿಸಿದರೆ ಮತ್ತು ಪ್ರತಿಯಾಗಿ ಉತ್ತರಿಸಿದರೆ (ನಿಂದೆ) ಈ ಎರಡು ಆತನು ಕೆಟ್ಟದನ್ನು ಸೂಚಿಸುವುವು. (ಕಟುವಾಗಿ) ಯಾರು ಪ್ರತಿಯಾಗಿ ನುಡಿಯುವುದಿಲ್ಲವೋ ಕರುಣೆಯಿಂದ ಇರುವನೋ ಆತನು ಇಮ್ಮಡಿಯಷ್ಟು ಜಯದ (ಸಂಭ್ರಮ)ದಲ್ಲಿರುತ್ತಾನೆ.
ಆತನ ಕ್ರಿಯೆಗಳಿಂದ ಎರಡೂ ಕಡೆಗೂ ಲಾಭವಾಗುತ್ತದೆ, ಆತನಿಗೂ ಮತ್ತು ನಿಂದಿಸಿದವನಿಗೆ ಸಹಾ.
ವ್ಯಕ್ತಿಯ ಕೋಪದ ಪ್ರಕೃತಿಯನ್ನು ಅರಿತು ಆತನಿಗೆ ಸರಿಯಾಗುವಂತೆ ಸಹಾಯ ಮಾಡಿ ಮತ್ತು ಶಾಂತಿಯನ್ನು ಪ್ರಾಪ್ತಿ ಮಾಡಿಸಬೇಕು. ಆತನು ಇಬ್ಬರಿಗೂ ಗುಣ ಮಾಡುತ್ತಾನೆ. ಏಕೆಂದರೆ ಆತನಿಗೂ ಮತ್ತು ದೂಷಿಗೂ ಲಾಭವಾಗುವಂತೆ ಮಾಡುತ್ತಾನೆ.
ಆದರೆ ಜನರು ಅಂತಹವನನ್ನು ಮೂರ್ಖನೆಂದು ಭಾವಿಸುತ್ತಾರೆ.  ಆದರೆ ಸ್ವತಃ ಅವರೇ ಸತ್ಯವನ್ನು ಅಥರ್ೈಸಿಕೊಳ್ಳಲಿಲ್ಲ.

ಒಬ್ಬ ಒರಟು ಮನುಷ್ಯ A rude person and Buddha

ಒಬ್ಬ ಒರಟು ಮನುಷ್ಯ


ಬುದ್ಧಭಗವಾನರು (ತಮ್ಮ) ಕರುಣೆಯನ್ನು ಹೇಗೆ ಸಂವೃದ್ಧಿಗೊಳಿಸಿದ್ದಾ ರೆಂದು ಹೇಳುತ್ತಿದ್ದರು.
ಒಂದುದಿನ ತಥಾಗತರು ಹಳ್ಳಿಯಲ್ಲಿ ನಡೆಯುತ್ತಿದ್ದರು. ಆಗ ಒಬ್ಬ ಕ್ರೋಧದಿಂದ ಕೂಡಿದ ಒರಟು ಮನುಷ್ಯನು ಬಂದು ನಿಂದಿಸತೊಡಗಿದನು. ನೀವು ಪರರಿಗೆ ಬೋಧಿಸುವುದು ಸರಿಯಿಲ್ಲ ಎಂದು ಅರಚಿದನು. ನೀವು ಪ್ರತಿಯೊಬ್ಬರ ಹಾಗೆ ದಡ್ಡರು, ನೀವು ತೋರಿಕೆಯವರಲ್ಲದೆ ಬೇರೆ ಅಲ್ಲ ಎಂದು ಕಿರುಚುತ್ತಿದ್ದನು.
ಆದರೆ ಸಹನಾಮೂತರ್ಿ ಕರುಣಾಸಂಪನ್ನರು ಲವಲೇಶವು ವಿಚಲಿತರಾಗಲಿಲ್ಲ. ಬದಲಾಗಿ ಆ ಯುವಕನಿಗೆ ಈ ರೀತಿ ಪ್ರಶ್ನಿಸಿದರು ನನಗೆ ಉತ್ತರಿಸು, ನೀನು ಯಾರಾದರೂ ಒಬ್ಬರಿಗೆ ಒಂದು ಕೊಡುಗೆಯನ್ನು ಉಡುಗೊರೆಯನ್ನು ನೀಡುವೆ ಮತ್ತು ಆ ಮನುಷ್ಯ (ವ್ಯಕ್ತಿ) ಅದನ್ನು ನಿರಾಕರಿಸುವನು. ಈಗ ಆ ಉಡುಗೊರೆ ಯಾರಿಗೆ ಸೇರುತ್ತದೆ?
ಆ ಒರಟು ಮನುಷ್ಯನಿಗೆ ಈ ಪ್ರಶ್ನೆಯಿಂದ ಆಶ್ಚರ್ಯವಾಯಿತು ಮತ್ತು ಆತ ಉತ್ತರಿಸಿದನು ಅದು ನನಗೆಯೇ ಸೇರುತ್ತದೆ ಏಕೆಂದರೆ ನಾನೇ ಅಲ್ಲವೆ ಆ ಕೊಡುಗೆ ತಂದದ್ದು.
ಈಗ ಪ್ರಜ್ಞಾಪ್ರದೀಪ ಭಗವಾನರು ಮುಗುಳ್ನಗೆ ಬೀರಿ ಹೇಳಿದರು ಅದು ಸರಿಯೆ ಮತ್ತು ಅದೇರೀತಿ ನಿನ್ನ ಕೋಪಕ್ಕೂ ಸಹಾ, ಈಗ ನೀನು ನನ್ನ ಮೆಲೆ ಕೋಪಿಸಿಕೊಳ್ಳುತ್ತಿ, ಮತ್ತು ನಾನು ಅದರಿಂದ ಉದ್ರೇಕರಹಿತಗೊಂಡಿದ್ದೇನೆ. ಆಗ ಆ ಕೋಪ ನಿನ್ನ ಮೇಲೆಯೇ ಬೀಳುತ್ತದೆ. ಆಗ ನೀನು ಮಾತ್ರ ಒಬ್ಬ ದುಃಖಿತನಾಗಿರುತ್ತೀಯೆ ನಾನಲ್ಲ. ನೀನು ನಿನ್ನಿಂದಲೆ ಹಿಂಸೆ ಮಾಡಿಕೊಳ್ಳುತ್ತಿದ್ದೀಯೆ.
ನೀನು ನಿನ್ನನ್ನು ಹಿಂಸಿಸಿಕೊಳ್ಳುವುದು ಬೇಡ ಎಂದು ನಿನ್ನ ಕೋಪವನ್ನು ವಜರ್ಿಸು ಮತ್ತು ಬದಲಾಗಿ ಮೈತ್ರಿಯುಳ್ಳವನಾಗಿರು.
ನೀನು ಪರರಿಗೆ ದ್ವೇಷಿಸಿದರೆ ನೀನೆ ದುಃಖಿತನಾಗುವೆ. ಆದರೆ ಪರರಿಗೆ ಪ್ರೀತಿಸಿದರೆ (ಮೈತ್ರಿಯು ತುಂಬಿದರೆ) ಪ್ರತಿಯೊಬ್ಬರು ಸುಖವಾಗಿರುತ್ತಾರೆ.
ಆ ಯುವಕನು ಪೂರ್ಣವಾಗಿ ಈ ಜ್ಞಾನವಂತ ವಾಣಿಯನ್ನು ಕೇಳಿದನು ತಾವು ಹೇಳಿದ್ದು ಸರಿಯಾಗಿದೆ ಭಗವಾನ್ ಎಂದು ಕ್ಷಮೆ ಯಾಚಿಸಿ, ನಂತರ ದಯವಿಟ್ಟು ನನಗೆ ಆ ಮೈತ್ರಿಯ ಮಾರ್ಗವನ್ನು ತಿಳಿಸಿ ನಾನು ನಿಮ್ಮ ಹಿಂಬಾಲಕನಾಗಬೇಕೆಂದು ಇರುವೆ.
ಆಗ ತಥಾಗತರು ದಯೆಭರಿತ ಸ್ವರದಿಂದ ಹೇಳಿದರು ಖಂಡಿತವಾಗಿ ನಾನು ಜ್ಞಾನಪೇಕ್ಷೆಗಳಿಗೆ ನೈಜವಾಗಿ ಸತ್ಯವನ್ನು ಅರಸುತ್ತಿರುವವರಿಗೆ ಎಲ್ಲರಿಗೂ ಬೋಧಿಸುವೆ, ನನ್ನೊಡನೆ ಬಾ.

ದೇವದತ್ತ

ದೇವದತ್ತ

ಬುದ್ಧಭಗವಾನರ ಸಹಾನುಭೂತಿ ಕರುಣೆಯು ಮತ್ತು ಮೈತ್ರಿಯು ಸರ್ವರಿಗೂ ಸಮಾನವಾಗಿ ಅಗಾಧವಾಗಿತ್ತು. ಅವರು ಯಾವ ಜೀವಿಗೆ ಮೈತ್ರಿ ಮಾಡಬೇಕು ಎಂದು ಮೌಲ್ಯಮಾಪನ ಮಾಡುತ್ತಿರಲಿಲ್ಲ. ಅವರ ಸಹಾನುಭೂತಿಯು ಪ್ರತಿಯೊಂದು ಜೀವಿಗೂ ಅಷ್ಟೇ ಅಗಾಧವಾಗಿ ಸಮಾನವಾಗಿತ್ತು. ಆದ್ದರಿಂದ ಅವರಲ್ಲಿ ಶತ್ರುಗಳೆಂಬ (ಪರರು) ಭಾವನೆಯೇ ಇರಲಿಲ್ಲ.
ಒಮ್ಮೆ ದೇವದತ್ತನು ಕಾಯಿಲೆ ಬಿದ್ದನು. ತುಂಬಾ ವೈದ್ಯರು ಬಂದು ಉಪಚರಿಸಿದರು, ಆದರೂ ವಾಸಿಯಾಗಲಿಲ್ಲ.  ನಂತರ ದೇವದತ್ತನ ದೊಡ್ಡಪ್ಪನ ಪುತ್ರರಾದ ಭಗವಾನರು ಆತನನ್ನು ನೋಡಲು ಹೋದರು.
ಆಗ ಬುದ್ಧರ ಹಿಂಬಾಲಕರೊಬ್ಬರು ಭಗವಾನರನ್ನು ಪ್ರಶ್ನಿಸಿದನು ಓ ಭಗವಾನ್, ತಾವು ದೇವದತ್ತನಿಗೆ ಸಹಾಯ ಮಾಡಲು ಏಕೆ ಹೋಗುತ್ತಿರುವಿರಿ ? ಆತನು ತಮಗೆ ಬಹಳಷ್ಟು ಸಾರಿ ಹಿಂಸಿಸಲು ಪ್ರಯತ್ನಿಸಿದ್ದಾನೆ. ಆ ಕ್ರೂರಿಯು ತಮ್ಮ ಹತ್ಯಗೈಯಲು ಪ್ರಯತ್ನಿಸಿದ್ದ!
ನಂತರ ಬುದ್ಧಭಗವಾನರು ಉತ್ತರಿಸಿದರು :
ಯಾರೊಂದಿಗೆ ಆಗಲಿ, ಮಿತ್ರತ್ವದಿಂದ ಇರಬೇಕಾದರೆ ಕಾರಣಗಳು ಬೇಕಾಗಿಲ್ಲ (ಅಂದರೆ ಆತನು ಹಿತವಾಗಿಯು ಅಥವಾ ಪ್ರಿಯವಾಗಿಯೆ ವತರ್ಿಸಬೇಕಾಗಿಲ್ಲ) ಮತ್ತು ಪರರಲ್ಲಿ ಶತೃತ್ವದಿಂದ ಇರಬೇಕಾಗಿಲ್ಲ.  ಎಲ್ಲಾ ಜನರು (ಜೀವಿಗಳು) ಸುಖವನ್ನು ಬಯಸುತ್ತದೆ ಮತ್ತು ಯಾರು ಸಹಾ ರೋಗಿಯಾಗಲು ಅಥವಾ ದುಃಖದಿಂದ ಇರಲು ಬಯಸುವುದಿಲ್ಲ, ಆದ್ದರಿಂದ ನಾವು ಪ್ರತಿಯೊಬ್ಬರಲ್ಲಿಯೂ ಮೈತ್ರಿಯಿಂದಿರಬೇಕು (ಶುದ್ಧ ಪ್ರೀತಿ) ಎಂದು ಆ ಮಹಾ ನಿಸ್ವಾಥರ್ಿ ಕರುಣಾ ಸ್ವರೂಪರು ಉತ್ತರಿಸಿದರು.
ನಂತರ ದೇವದತ್ತನ ಹಾಸಿಗೆಯ ಬಳಿ ಬಂದು ಈ ಸತ್ಯವಚನ ನುಡಿದರು : ನನಗೆ ನಿರಂತರ ಹಿಂಸಿಸುತ್ತಿರುವ ದೇವದತ್ತನ ಮೇಲು, ಹಾಗು ನನ್ನ ಏಕೈಕ ಪುತ್ರ ರಾಹುಲನ ಮೇಲು ನನ್ನ ಮೈತ್ರಿ ಸಮಾನವಾಗಿದೆ. ರಾಹುಲಷ್ಟೆ ಮೈತ್ರಿ ದೇವದತ್ತನ ಮೇಲು ಇದೆ. ಈ ನುಡಿಯು ಸತ್ಯಭರಿತವಾಗಿದ್ದರೆ ದೇವದತ್ತನು ರೋಗದಿಂದ ಗುಣಮುಖನಾಗಲಿ! ಎಂದು ಸತ್ಯವಚನಗೈದರು ಆ ತಥಾಗತರು. ಆಶ್ಚರ್ಯ! ಅದೇ ಕ್ಷಣದಲ್ಲಿ ದೇವದತ್ತನ ರೋಗ ಮಾಯವಾಗಿ ಆರೋಗ್ಯವಂತನಾದನು.
ಬುದ್ಧಭಗವಾನರು ತಮ್ಮ ಹಿಂಬಾಲಕರಿಗೆ ಹೇಳಿದರು ನೆನಪಿಡಿ, ನಿಜವಾದ ಬುದ್ಧರು ಪ್ರತಿಯೊಂದು ಜೀವಿಗೂ ಸಮಾನವಾಗಿ ಸಹಾಯ ಮಾಡುತ್ತಾರೆ.

ಬುದ್ಧಭಗವಾನರು ಮತ್ತು ಪ್ರಾಣಿಗಳು

ಪ್ರಾಣಿಗಳು


ಬುದ್ಧಭಗವಾನರ ಮೈತ್ರಿ ಹಾಗು ಕರುಣೆಯು ಸಾರ್ವತ್ರೀಕವಾಗಿತ್ತು.  ಸರ್ವ ಜೀವಿಗಳಿಗೂ ಹಬ್ಬಿತ್ತು (ಪ್ರಸರಿಸಿತ್ತು). ಅವರ ಮಹಾ ಹೃದಯ ಕೇವಲ ಒಂದು ಪಂಗಡಕ್ಕೆ, ಒಂದು ದೇಶಕ್ಕೆ ಅಥವಾ ಒಂದು ಬಗೆಯ ವರ್ಗಕ್ಕೆ ಸಂಕುಚಿತವಾಗಿರಲಿಲ್ಲ.  ಅದು ಆಕಾಶದ ಹಾಗೆ ಅಸೀಮವಾಗಿ ಸರ್ವಜೀವಿಗಳಿಗೂ ಸಮಾನವಾಗಿ, ಅಗಾಧವಾಗಿ ಹರಡಿತ್ತು.  ಜೀವನದ  ಶುದ್ಧತೆಯನ್ನು ಪಂಚಶೀಲದಲ್ಲಿ ವ್ಯಕ್ತಪಡಿಸಿದ್ದಾರೆ.  ಪಂಚಶೀಲದಲ್ಲಿ ಮೊದಲನೆಯದೆ. ಅಹಿಂಸೆ (ಅಹತ್ಯೆ) ಅದರ ಹಿಂದೆಯೆ ಸರ್ವ ಧಾಮರ್ಿಕತೆಯು ಹಿಂಬಾಲಿಸುತ್ತದೆ ನಾನು ಸ್ವಯಿಚ್ಛೆಯಿಂದ ಜೀವಹತ್ಯೆ ಮಾಡುವುದನ್ನು ತ್ಯಜಿಸುವ (ಶಿಸ್ತನ್ನು) ನಿಯಮವನ್ನು ಪಾಲಿಸುತ್ತಾನೆ.
ಮುಂದೆ ಬರುವ ಘಟನೆಗಳು ಬುದ್ಧರ ಕರುಣೆಯು ಆ ಮನುಷ್ಯರ ಬಗೆಗೆ ಹೇಗಿತ್ತು ಎಂಬುದನ್ನು ತಿಳಿಸುತ್ತದೆ.

1. ಪ್ರಾಣಿ ಬಲಿ-

ಹಿಂದೆ ಭಾರತದಲ್ಲಿ ಜನರು ಯಜ್ಞಕ್ಕಾಗಿ (ದೇವರಿಗಾಗಿ) ಪ್ರಾಣಿಗಳನ್ನು ಕೊಂದು ಬಲಿ ಕೊಡುವುದು ಸಾಮಾನ್ಯವಾಗಿತ್ತು. ಹೀಗೆ ಮಾಡಿದರೆ ದೇವತೆಗಳು ಸಂತುಷ್ಟರಾಗುತ್ತಾರೆ ಎಂದು ಭಾವಿಸಲಾಗುತ್ತಿತ್ತು.  ಆಗ ಆದರೆ ದೇವರು ಅವರ ಪ್ರಾರ್ಥನೆಗಳಾದ ಐಶ್ವರ್ಯ ಅಥವಾ ಹೊಲಬೆಳೆಗಳಿಗೆ ಮಳೆ, ನೆರವೇರಿಸುವನು ಎಂದು ಭಾವಿಸಲಾಗುತ್ತಿತ್ತು.
ಬುದ್ಧಭಗವಾನರು ಎಲ್ಲೇ ಹೋಗಲಿ ಈ ವಿಷಯ ಬಂದಾಗ (ಕಾಲಸೂಚಕವಾಗಿ) ಪ್ರಾಣಿಬಲಿಯು ಕೆಟ್ಟದೆಂದು, ಇದು ಪಾಪಕೃತ್ಯವೆಂದು ಹೇಳುತ್ತಿದ್ದರು. ಕೆಲವು ವ್ಯಕ್ತಿಗಳು ಇದನ್ನು ಕೇಳಿ ಕುಪಿತರಾದರು. ಹಾಗು ಭಗವಾನರ ಹತ್ತಿರ ತಮ್ಮ ಕೋಪವನ್ನು ಮಾತಿನ ಮೂಲಕ ಹೀಗೆ ಹೇಳಿದರು. ನಮ್ಮ ಪವಿತ್ರ ಗ್ರಂಥಗಳು ದೇವರುಗಳಿಗಾಗಿ ಬಲಿ ಕೊಡುವುದು ಉಚಿತವೆಂದು ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ ಹೇಳಲು ನಿಮಗೆಷ್ಟು ಧೈರ್ಯ? ಎಂದು ಅಬ್ಬರಿಸಿದರು.
ಬುದ್ಧಭಗವಾನರು ತಮ್ಮ ಪ್ರಜ್ಞಾಪ್ರದೀಪವನ್ನು ಹೀಗೆ ಪ್ರಕಾಶಿಸಿದರು: ನೀವು ನಿಮ್ಮ ಸುಖಕ್ಕಾಗಿ ಪರರನ್ನು ದುಃಖಿತರನ್ನಾಗಿ ಮಾಡುವುದು ಸರಿಯಲ್ಲ.  ಅದಕ್ಕಾಗಿ ನೀವು ಬಲಿ ಅಪರ್ಿಸಿದರೆ ನೀವು ಸ್ವಾಥರ್ಿಗಳಾಗುವಿರಿ (ಕ್ರೂರಿಗಳಾಗುವಿರಿ). ನಾನು ಬೋಧಿಸುವಂತೆ ಸ್ವಾಥರ್ಿ ವ್ಯಕ್ತಿಗೆ ದುಃಖದ ವಿನಃ ಜೀವನದಲ್ಲಿ ಬೇರೇನೂ ದೊರೆಯದು.
ಯಾವ ದೇವರಾದರೂ ತಾನು ಸಹಾಯ ಮಾಡುವುದಕ್ಕೆ ಮುಂಚೆ ಪ್ರಾಣಿಯೊಂದರ ರಕ್ತವನ್ನು ಬಯಸಿದರೆ ಅವನು ಕರುಣೆಯಿಲ್ಲದ ದೇವರಷ್ಟೆ.  ಆತನು ಪೂಜೆಗೆ (ಯಾರಿಂದಲೂ) ಅರ್ಹನಲ್ಲ.  ಆದರೆ ಬದಲಾಗಿ ನೀವು ಪ್ರತಿಯೊಂದು ಜೀವಿಯ ಬಗ್ಗೆ ಕರುಣೆಯಿಂದ ವತರ್ಿಸಿದರೆ ದೇವತೆಗಳೇ ನಿಮಗೆ ಪೂಜಿಸುತ್ತಾರೆ.
ಕೆಲವು ವ್ಯಕ್ತಿಗಳಿಗೆ ಇದರ ಸತ್ಯತೆ ಅರಿವಾಗಿ ತಮ್ಮ ಕೊಲ್ಲುವ (ಬಲಿಯ) ಸಂಪ್ರದಾಯವನ್ನು ತ್ಯಜಿಸಿದರು. ಈ ರೀತಿಯಾಗಿ ದುಃಖದ ಭಾರಿ ವ್ಯವಹಾರವೊಂದು ಕೊನೆಯಾಯಿತು.

2. ಪ್ರಾಣಿ ಬಲಿ-

ಒಂದು ಸಮಯದಲ್ಲಿ ಮಹಾ ಯಜ್ಞವೊಂದು ಕೋಸಾಧಿಪತಿ ರಾಜ ಪಸೇನದಿಯ ಸಮ್ಮುಖದಲ್ಲಿ ಸಿದ್ಧವಾಯಿತು. ಐದುನೂರು ಎತ್ತುಗಳು, ಐದುನೂರು ವೃಷಭಗಳು ಮತ್ತು ಇತರ ಪಡ್ಡೆಗಳು, ಕುರಿಗಳು ಮತ್ತು ಮೇಕೆಗಳು. ಅವುಗಳನ್ನು ಬಲಿಕೊಡುವ ಕಂಬದ ಬಳಿ ಕರೆದೊಯ್ಯ ಲಾರಂಭಿಸಿದರು ಮತ್ತು ಯಾರೂ ಗುಲಾಮರಾಗಿದ್ದರೊ ಮತ್ತು ಸೇವಕರು ಹೊಡೆತಗಳನ್ನು ನೀಡುತ್ತಾ ಶೋಕದಿಂದ ತುಂಬಿರುವ ಆ ಬಲಿಪಶುಗಳನ್ನು ಗಮನಿಸದೆ ತಮ್ಮ ಸಿದ್ಧತೆಗಳನ್ನು ಮುಂದುವರಿಸಿದರು.
ಬಹು ಭಿಕ್ಷುಗಳು ಬೆಳಿಗ್ಗೆ ಧ್ಯಾನ ಮುಂತಾದ ಕ್ರಿಯೆಗಳ ನಂತರ ವಸ್ತ್ರಗಳನ್ನು ಸಿದ್ಧಪಡಿಸಿ ಶ್ರಾವಸ್ತಿಯಲ್ಲಿ ಭಿಕ್ಷಾಟನೆಗೆ ಹೊರಟರು.  ನಂತರ ಶ್ರಾವಸ್ತಿಯಿಂದ ಹಿಂದಿರುಗುವಾಗ ಅವರುಗಳು ಭಗವಾನರಲ್ಲಿ ಒಂದು ಯಜ್ಞಗಳ ಸಿದ್ಧತೆಯ ಬಗ್ಗೆ ತಿಳಿಸಿದರು.
ಆಗ ತಥಾಗತರು ಈ ವಿಷಯದ ಮೂಲವನ್ನು ಅರಿತು ಈ ಗಾಥೆಗಳನ್ನು ನುಡಿದರು :
ಯಜ್ಞಗಳಿಂದ ಕುದುರೆಗಳು, ಮನುಷ್ಯರು ಸೇರುತ್ತಾರೆ, ಹಂದಿಗಳ ಬಿಸಾಟ ಸ್ಥಳವು ಏಪರ್ಾಡಾಗುತ್ತದೆ (ಏನೂ) ಜಯ ಸಾಧಿಸದ (ಹಾಗೆ) ಪಾನಿಯಗಳು ಸಿದ್ಧವಾಗುತ್ತದೆ. ಇಲ್ಲಿ ಅಗುಳಿಗಳು ತೆರೆದು ಹಾಕಲ್ಪಟ್ಟಿದೆ. (ಇಂದ್ರೀಯಗಳು ಸಡಿಲವಾಗಿವೆ). ಹಾಗು ಬಾರಿ ಸಂಭ್ರಮದ ಆಚರಣೆಗಳು ಸಿದ್ಧವಾಗಿದ್ದರೂ ಇಂತಹ ಆಚರಣೆಗಳ ಮೌಢ್ಯದಿಂದ ಯಾವ ಫಲ (ಸುಖ)ವು ಸಿಗಲಾರದು.
ಎಲ್ಲಿ ಮೇಕೆ ಮುಂತಾದವುಗಳನ್ನು ತಳ್ಳುತ್ತಿರುವವರೂ ಮತ್ತು ಕುರಿ-ಕರುಗಳನ್ನು ಸಿಗಿದು ಹಾಕುತ್ತಿರುವವರು, ಇಂತಹವನ್ನು ಶ್ರೇಷ್ಠ ಆರ್ಯರು ಮಾಡಿಸುವುದಿಲ್ಲ (ಮಾಡುವುದು ಇಲ್ಲ) ಏಕೆಂದರೆ ಅವರು ಪೂರ್ಣ ಹಾದಿಯಲ್ಲಿಹರು.
ಯಾವ ಆಚರಣೆಯಲ್ಲಿ ಗದ್ದಲವಿಲ್ಲವೊ, ಸಂಭ್ರಮದ ಗಲಿಬಿಲಿ ಯಿಲ್ಲವೋ ಅಲ್ಲಿ (ಸುಖಭೋಗದ ಬಯಕೆಗಳನ್ನು) ತ್ಯಜಿಸಿ (ಶಾಂತಿಗೆ ತಮ್ಮನ್ನು) ಅಪರ್ಿಸುವರೋ ಅಲ್ಲಿ ಅಮರವಾದ ಆಸ್ತಿ ದೊರೆಯುತ್ತದೆ. ಅಲ್ಲಿ ಮೇಕೆಗಳಾಗಲಿ, ಕರು, ಕುರಿಗಳೇ ಆಗಲಿ ಯಾವ ಜೀವಿಗಳೇ ಆಗಲಿ ಸಂಹರಿಸುವುದಿಲ್ಲವೋ ಅಂತಹ ಯಜ್ಞವನ್ನು ಪೂರ್ಣ ಹಾದಿಯಲ್ಲಿನ ಶ್ರೇಷ್ಠ ಆರ್ಯರು ಮಾಡಿಸುತ್ತಾರೆ.
ಇಂತಹ ಆಚರಣೆಗಳೆ ಶ್ರೇಷ್ಠ ಫಲವನ್ನು ನೀಡುವುದು. ಇವುಗಳಲ್ಲಿ ಮಗ್ನನಾಗಿರುವವನಿಗೆ ಧನ್ಯತೆಯು ದೊರಕುತ್ತದೆಯೇ ಹೊರತು ನಿಂದೆಯಲ್ಲ. ಇಂತಹ ಸುಕಾರ್ಯಗಳು ನಡೆಯುತ್ತಿದ್ದರೆ ದೇವತೆಗಳೂ ಸಂತುಷ್ಟರಾಗುವರು.

3. ಹಾವಿನ ಕಚ್ಚುವಿಕೆ 

ಒಮ್ಮೆ ಬುದ್ಧರು ಆಹಾರಕ್ಕಾಗಿ ಶ್ರಾವಸ್ತಿಯೆಡೆಗೆ ಹೊರಟರು. ಆಗ ಮಾರ್ಗವನ್ನು ದಾಟುತ್ತಿರುವಾಗ ಕೆಲವು ಯುವಕರು ಹಾವೊಂದನ್ನು ದೊಣ್ಣೆಗಳಿಂದ ಹೊಡೆಯುತ್ತಿದ್ದರು. ಆ ಯುವಕರಿಗೆ ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದಾಗ ಆ ಯುವಕರು ಈ ಹಾವು ಯಾರಿಗಾದರೂ ಕಚ್ಚುವುದೆಂಬ ಭಯದಿಂದ ಹೀಗೆ ಬಡಿಯುವೆವೆ ಎಂದು ಉತ್ತರಿಸಿದರು.
ಆಗ ಲೋಕಕಾರುಣಿಕ ಭಗವಾನರು ಹೀಗೆ ಬುದ್ಧಿವಾದ ನೀಡಿದರು: ನೀವು ಹಿಂಸೆಗೆ ಒಳಗಾಗಲು ಇಚ್ಛಿಸದಿದ್ದರೆ, ನೀವು ಸಹಾ ಪರರಿಗೆ ಹಿಂಸಿಸಬೇಡಿ, ನೀವು ಪರರಿಗೆ ಹಿಂಸಿಸಿದರೆ, ನೀವು ಭವಿಷ್ಯದಲ್ಲಿ ಸುಖವನ್ನು ಗಳಿಸಲಾರಿರಿ.
ಹಿಂಸೆಯ ಅಪಾಯವನ್ನು ಭಗವಾನರ ಮೂಲಕ ಅರಿತ, ಆ ಯುವಕರು ಇದನ್ನು ಗಂಭೀರವಾಗಿ ಅಥರ್ೈಸಿಕೊಂಡು ಸೋತಪನ್ನರಾದರು.

4. ಜಿಂಕೆಯನ್ನು ಸ್ವತಂತ್ರಗೊಳಿಸುವಿಕೆ 

ಒಂದುದಿನ ಬುದ್ಧಭಗವಾನರು ಕಾಡಿನಲ್ಲಿ ಸಂಚರಿಸುತ್ತಿರುವಾಗ ಒಂದು ಜಿಂಕೆಯು ಬಲೆಯಲ್ಲಿ ಸಿಕ್ಕಿಕೊಂಡು ಬಿಡುಗಡೆ ಪಡೆಯಲು ಒದ್ದಾಡುವುದನ್ನು ಗಮನಿಸಿದರು. ಕರುಣಾ ಸ್ವರೂಪರು ಆ ಜಿಂಕೆಗೆ ಬಲೆಯಿಂದ ಬಿಡಿಸಿ ಬಂಧನಮುಕ್ತ ಮಾಡಿದರು. ಆ ಜಿಂಕೆಯು ಅಲ್ಲಿಂದ ಸ್ವತಂತ್ರವಾಗಿ ಓಡಿಹೋಯಿತು. ನಂತರ ಭಗವಾನರು ಮರದ ಬಳಿಯಲ್ಲಿ ವಿಶ್ರಾಮಕ್ಕಾಗಿ ಕುಳಿತರು. ಆಗ ಬೇಟೆಗಾರನು ಬರುತ್ತಿದ್ದನು. ಅವನಿಗೆ ಜಿಂಕೆಯು ಸ್ವತಂತ್ರಗೊಂಡು ಓಡುತ್ತಿದ್ದಾಗ ಅದನ್ನು ಯಾರೋ ಬಿಡಿಸಿರಬೇಕೆಂದು ಅರಿವಾಯಿತು.
ಆಗ ಆತನು ಯಾರ ಕೆಲಸವಿದು ಎಂದು ಸುತ್ತಲೂ ಗಮನಿಸಿದಾಗ ಮರದ ಕೆಳಗೆ ಕುಳಿತಿರುವ ಕಾಷಾಯವಸ್ತ್ರಧಾರಿ ಮಹಾತೇಜಸ್ವಿ ಸಮಣರು ಕುಳಿತಿರುವುದು ಕಂಡಿತು. ಬೇಟೆಗಾರನು ಇದು ಇವರದೇ ಕಾರ್ಯ ಎಂದು ನಿಶ್ಚಯಿಸಿದನು.
ಇಂಥಹ ಪರಿಶುದ್ಧರು ಅಪಾರವಾಗಿಹೋಗುತ್ತಿದ್ದಾರೆ ಎಂದು ಕೋಪದಿಂದ ಹೇಳಿಕೊಂಡು ಇವರು ತಮ್ಮ ಧಾಮರ್ಿಕ ಮಾರ್ಗಗಳಿಂದ, ಪ್ರಮಾಣಿಕರ ವ್ಯವಹಾರಗಳನ್ನು ಹಾಳುಮಾಡುತ್ತಾರೆ. ಅಂತಹದಕ್ಕೆ ಕಾಯುತ್ತಿರುತ್ತಾರೆ ಎಂದು ಕ್ರೋಧದಿಂದ ತನ್ನ ಧನುಷ್ಯನ್ನು ಎತ್ತಿಕೊಂಡು ಬಾಣವನ್ನು ಭಗವಾನರೆಡೆಗೆ ಗುರಿಯಿಟ್ಟನು. ಆದರೆ ಶಾಂತಸ್ವರೂಪ ಬುದ್ಧರು ಹಾಗೆಯೆ ಸ್ಥಿರವಾಗಿ ಕುಳಿತಿದ್ದರು. ನಾನು ಈ ಭಿಕ್ಷುಗಳಲ್ಲಿ ಒಬ್ಬನನ್ನು ಕಡಿಮೆ ಮಾಡುತ್ತೇನೆ ಎಂದು ಬೇಟೆಗಾರನು ಗುರಿಯಿಟ್ಟನು. ಆದರೆ ಆತನ ಕೈ ಅದುರಿ ಗುರಿತಪ್ಪಿ ಬಾಣವು ಬೇರೆಡೆ ಹೋಯಿತು. ಆತನ ಜೀವಮಾನದಲ್ಲಿ ಆತನು ಗುರಿತಪ್ಪಿದ ಬಾಣವನ್ನು ಬಿಟ್ಟಿರಲಿಲ್ಲ. ಆಗ ಮತ್ತಷ್ಟು ಉಗ್ರನಾಗಿ ಮತ್ತೆ ಗುರಿಯಿಟ್ಟು ಬಾಣ ಬಿಟ್ಟನು. ಅದು ಭಗವಾನರ ಪಕ್ಕಕ್ಕೆ ಹೋಯಿತೆ ವಿನಃ ಗುರಿ ತಲುಪಲಿಲ್ಲ. ನಂತರ ಮತ್ತೊಂದುಬಾರಿ ಪ್ರಯತ್ನಿಸಿ ವಿಫಲನಾದನು. ಆತನಿಗೆ ಆಶ್ಚರ್ಯವಾಯಿತು. ಆತನು ಶ್ರೇಷ್ಠ ಗುರಿಕಾರನಾಗಿಯು ಈ ವ್ಯಕ್ತಿಯ ಕಡೆ ಪ್ರಯತ್ನಿಸಿ ವಿಫಲನಾಗಿದ್ದಾನೆ. ಈಗ ಆತನಲ್ಲಿ ಭೀತಿಯು ಹುಟ್ಟಿ ಭಯಗೊಂಡನು, ಅಧೈರ್ಯಗೊಂಡು ಬಿಲ್ಲು ಬಾಣಗಳನ್ನು ಕೈಯಿಂದ ಬಿಟ್ಟುಬಿಟ್ಟನು. ನಂತರ ವಿನಮ್ರನಾಗಿ ಬುದ್ಧಭಗವಾನರ ಬಳಿ ಹೋಗಿ ಅವರು ಯಾರೆಂದು ಕೇಳಿಕೊಂಡರು.
ಆಗ ವಿಜ್ಞಾಚರಣ ಸಂಪನ್ನರು ಆತನಿಗೆ ಹೇಳಿ, ಮತ್ತೆ ಗಂಭೀರ ಮಧುರತೆಯಿಂದ ಹಿಂಸೆಹತ್ಯೆಯ ದುಷ್ಪರಿಣಾಮಗಳನ್ನು ಹೇಳಿದರು. ಜೀವವನ್ನು ಸುಲಭವಾಗಿ ತೆಗೆಯಬಹುದು, ಆದರೆ ಪ್ರಾಣವನ್ನು ನೀಡಲು ಅಸಾಧ್ಯವೆಂದು ತಿಳಿಸಿ, ಅದರಿಂದ ಉಂಟಾಗುವ ಪಾಪ ಫಲಗಳನ್ನು ಹೇಳಿದರು. ಆ ಬೇಟೆಗಾರನು ಭಗವಾನರನ್ನು ಹಾಗು ಅವರ ಸತ್ವಭರಿತ ವಾಣಿಯನ್ನು ಆಲಿಸಿದನು. ಜೀವಹತ್ಯೆಯನ್ನಾಗಲಿ, ಹಿಂಸೆಯನ್ನಾಗಲಿ ಮಾಡಲಾರೆ ಎಂದು ಸತ್ಯವಚನಗೈದನು.

ರಜ್ಜುಮಾಲಾ rajjumala

ರಜ್ಜುಮಾಲಾ

ಬುದ್ಧಭಗವಾನರು ತಮ್ಮ ಅಸಾಧಾರಣವಾದ ಜ್ಞಾನದಿಂದ ಜನರಿಗೆ ಸಹಾಯ ಮಾಡುತ್ತಿದ್ದರು. ಜನರು ತಮ್ಮ ಅಜ್ಞಾನದ ಕಾರ್ಯಗಳಿಂದ ಮತ್ತೆ ಹೆಚ್ಚು ದುಃಖ ಅನುಭವಿಸುವುದನ್ನು ತಡೆಯಲು ಅವರಿಗೆ ಸಮ್ಮದೃಷ್ಟಿ ನೀಡುತ್ತಿದ್ದರು.
ಅಂತಹುದೇ ಈ ಘಟನೆ ರಜ್ಜುಮಾಲಾಳದು. ಆಕೆಯು ಗಯಾ ಸಮೀಪದ ಹಳ್ಳಿಯಲ್ಲಿ ಗುಲಾಮಳಾಗಿದ್ದಳು. ಆಕೆಯ ಒಡತಿಗೆ ರಜ್ಜುಮಾಲಾಳೆಂದರೆ ಅಸಹ್ಯವಾಗುತ್ತಿತ್ತು.  ಅದ್ದರಿಂದ ಆಕೆಯು ಸದಾ ರಜ್ಜುಮಾಲಾಳೊಂದಿಗೆ ಕೆಟ್ಟರೀತಿಯಲ್ಲಿ ವತರ್ಿಸುತ್ತಿದ್ದಳು.  ಕೆಲವೊಮ್ಮೆ ಆಕೆಯ ತಲೆಗೂದಲನ್ನು ಎಳೆದು ಹಾಕಿದ್ದುಂಟು.  ಒಂದುದಿನ ರಜ್ಜುಮಾಲಾಳು ತಲೆ ಬೋಡಿಸಿಕೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದುಂಟು. ಆದರೆ ಆಕೆಯ ಕ್ರೂರಿ ಒಡತಿ ಆಕೆಯ ಕತ್ತಿನ ಸುತ್ತಲು ಹಗ್ಗವನ್ನು ಹಾಕಿ ಎಳೆದಾಡುತ್ತಿದ್ದಳು.
ರಜ್ಜುಮಾಲಾಳಿಗೆ ಜೀವಿಸುವುದೇ ಅಸಾಧ್ಯವಾಯಿತು ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಆದರೆ ಆಕೆಯ ಹಳ್ಳಿಯ ಮಾರ್ಗದಲ್ಲಿ ಬುದ್ಧರು ಆಕೆಗಾಗಿ ಕಾಯುತ್ತಿರುವುದನ್ನು ಕಂಡಳು. ಪ್ರಜ್ಞಾನಾಥ ತಥಾಗತರು ಆದ ಬುದ್ಧರು ಆಕೆಗೆ ಧಮ್ಮವನ್ನು ಬೋಧಿಸಿದರು. ಧಮ್ಮವನ್ನು ಪರಿಶುದ್ಧವಾಗಿ ಹೀರಿಕೊಂಡು ಆಕೆಯು ಸೋತಪನ್ನಳಾದಳು. ಆಕೆ ಲೋಕ ಕರುಣಿಕರ ಹಿಂಬಾಲಕಳಾದಳು.
ಆಕೆ ಹಿಂತಿರುಗಿ ತನ್ನ ಒಡತಿಗೆ ಏನಾಯಿತೆಂದು ಹೇಳಿದಳು. ಆಕೆಯ ಒಡತಿ ಈ ವಿಷಯ ಕೇಳಿ ಬುದ್ಧರನ್ನು ದಶರ್ಿಸಿ ಅವರ ಬೋಧನೆಯನ್ನು ಆಲಿಸಿದಳು. ನಂತರ ಆಕೆಯೂ ಸಹ ಸೋತಪನ್ನಳಾಗಿ ವಿಧ್ಯಾಚರಣ ಸಂಪನ್ನರ ಹಿಂಬಾಲಕಳಾದಳು.
ನಂತರ ಬುದ್ಧಭಗವಾನರು ಅವರಿಗೆ ಹಿಂದಿನ ಜನ್ಮಗಳ ವೃತ್ತಾಂತವನ್ನು ತಿಳಿಸಿದರು. ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಒಡತಿಯಾಗಿದ್ದಳು. ಈಗಿರುವ ಒಡತಿ ಆಗ ಸೇವಕಿಯಾಗಿದ್ದಳು (ಗುಲಾಮಳು). ಆ ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಆ ಗುಲಾಮಳಿಗೆ ಬಹಳ ಹಿಂಸೆ ನೀಡಿದ್ದಳು. ಆ ಸೇವಕಿಯು ಸೇಡಿಗಾಗಿ ಪ್ರತಿಜ್ಞೆ ಮಾಡಿದ್ದಳು. ಫಲವಾಗಿ ಈಗ ಸೇವಕಿಯು ಒಡತಿಯಾಗಿ, ಒಡತಿ ಸೇವಕಿಯಾಗಿರುವಳು. ಕೊನೆಗೆ ಬುದ್ಧಭಗವಾನರು ಕರುಣಾಶಕ್ತಿಯಿಂದ ಅವರಿಬ್ಬರು ಮತ್ತೆ ಪಾಪ ಮಾಡುವುದು ತಪ್ಪಿತು. ದ್ವೇಷಿಸುವುದು ತಪ್ಪಿತು. ಅಷ್ಟೇ ಅಲ್ಲದೆ ಈಗ ಬಾಂಧವ್ಯದಿಂದ ಇರುವುದು ಆಯಿತು.

poor former and buddha ಬಡರೈತ

ಬಡರೈತ

ಮಹಾದುಗ್ಗಟನಿಗಿಂತಲೂ ಸರಳವಾಗಿ ಕರುಣೆ ಪ್ರಸರಿಸುವ ಪ್ರಸಂಗವು ಹಸಿದ ಬಡರೈತನದು ಆಗಿದೆ.  ಆ ರೈತನಿಗೆ ಪ್ರಾಥಮಿಕ ಅವಶ್ಯಕತೆ ಈಡೇರಿಸಿದ ಸ್ವಾಭಾವಿಕ ಕರುಣಾ ಘಟನೆಯಿದು.
ಒಂದುದಿನ ಬುದ್ಧಭಗವಾನರು ಮತ್ತು ಭಿಕ್ಷುಗಳು ಅಳವಿಯೆಂಬ ಹಳ್ಳಿಯಲ್ಲಿ ಅತಿಥಿಗಳಾಗಿದ್ದರು.  ಅಲ್ಲಿ ಭಗವಾನರು ಉಪದೇಶ ಕೊಡುವವರಿದ್ದರು.  ಆ ಹಳ್ಳಿಯ ಬ್ರಾಹ್ಮಣನೊಬ್ಬನು ಬುದ್ಧಭಗವಾನರ ಉಪದೇಶ ಕೇಳುವ ನಿಧರ್ಾರ ಮಾಡಿದನು. ಆದರೆ ಆ ದಿನ ಏನಾಯಿತೆಂದರೆ ಆತನ ಒಂದು ಎತ್ತು ಕಳೆದುಹೋಯಿತು. ಆತನ ಎತ್ತಿನ ಕಾರಣದಿಂದ ಆತನು ಭಗವಾನರ ಉಪದೇಶ ಕೇಳುವ ಆಸೆಯು ಬೇರೆಯಾಯಿತು. ಆತನು ಮುಂಜಾನೆಯೇ ಎದ್ದು ಕಳೆದು ಹೋಗಿರುವ ಎತ್ತನ್ನು ಹುಡುಕಲು ಹೊರಟನು. ಅನಂತರ ಉಪದೇಶ ಕೇಳುವ ನಿಧರ್ಾರ ಮಾಡಿದನು. ಮಧ್ಯಾಹ್ನದ ನಂತರ ಆತನು ಆ ಎತ್ತನ್ನು ಹುಡುಕಿ ಅದನ್ನು ಹಳ್ಳಿಗೆ ಕರೆತರತೊಡಗಿದನು. ಆ ಬ್ರಾಹ್ಮಣನು ಅತಿ ಹಸಿದಿದ್ದನು ಹಾಗು ಅತಿ ಆಯಾಸಗೊಂಡಿದ್ದನು. ಏಕೆಂದರೆ ಸುಡುಬಿಸಿಲಿನಲ್ಲಿ ಆತನು ಹುಡುಕಾಡಿದ್ದನು. ಆದರೆ ಆತನು ಬುದ್ಧಭಗವಾನರ ಉಪದೇಶ ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಆದ್ದರಿಂದ ಆತನು ಬುದ್ಧಭಗವಾನರು ಇದ್ದ ಕಡೆ ವಿಶ್ರಾಮವಿಲ್ಲದೆ, ಆಹಾರವಿಲ್ಲದೆ ಓಡಿಬಂದನು.
ಬುದ್ಧಭಗವಾನರು ಮತ್ತು ಭಿಕ್ಷುಗಳು ಆಗತಾನೇ ಅಳವಿ ಹಳ್ಳಿಗೆ ಬಂದರು.  ಅಲ್ಲಿಯ ಜನರಿಂದ ಭೋಜನವಾಯಿತು. ಭಗವಾನರು ಅಲ್ಲಿ ಧಮ್ಮ ಬೋಧನೆಯನ್ನು ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಆ ರೈತನು ಬಂದನು. ಆತನ ಆಯಾಸ ದಣಿವನ್ನು ತಥಾಗತರು ನೋಡಿ ಆತನಿಗೆ ಆಹಾರವನ್ನು ಹಾಗು ಕುಳಿತುಕೊಳ್ಳಲು ಸ್ಥಳವನ್ನು ಕೊಡಿಸಿದರು. ಆತನು ಆಹಾರವನ್ನು ತಿಂದು ಮುಗಿಸುವವರೆಗೆ ಸುಮ್ಮನಿದ್ದರು, ನಂತರ ಬೋಧನೆಯನ್ನು ಪ್ರಾರಂಭಿಸಿದರು.
ಅಲ್ಲಿಯ ಜನರಿಗೆ ಹಾಗು ಭಿಕ್ಷುಗಳಿಗೆ ಇದು ಸರಿಬರಲಿಲ್ಲ, ಹಾಗು ಆಶ್ಚರ್ಯವಾಯಿತು.  ಏಕೆಂದರೆ ಆತನು ಬುದ್ಧರ ಹಿಂಬಾಲಕನೂ ಅಲ್ಲ, ಅದು ಅಲ್ಲದೆ ಆತನಿಗೆ ಆಹಾರ ಕೊಟ್ಟದ್ದು ಅಲ್ಲದೆ, ಆತನಿಗಾಗಿ ಕಾಯ್ದಿದ್ದಾರೆ ಇವರ ಮನಸ್ಸುಗಳು ಬುದ್ಧಭಗವಾನರಿಗೆ ಅರಿವಾಗಿ ಹೀಗೆ ಉತ್ತರಿಸಿದರು.
ನಾನು ಏನಾದರೂ ಈ ಮನುಷ್ಯನಿಗೆ ಹಸಿದಿದ್ದಾಗ ಬೋಧಿಸಿದ್ದರೆ ಹಸಿವಿನ ನೋವಿನಲ್ಲಿ ಆತನು ಧರ್ಮವನ್ನು ಅರಿಯುತ್ತಿರಲಿಲ್ಲ.  ಹಾಗು ಅರಿವಿನ ಕೊರತೆಯಿಂದ ಅನುಸರಿಸುತ್ತಿರಲಿಲ್ಲ. ಹಸಿವಿನಂತಹ ರೋಗ (ನೋವು) ಇನ್ನೊಂದಿಲ್ಲ ಎಂದರು.

ಮಹಾದುಗ್ಗಟ

ಮಹಾದುಗ್ಗಟ

ಬುದ್ಧಭಗವಾನರು ತಮ್ಮ ಕರುಣೆಯನ್ನು ಸಾಮಾನ್ಯ ಘಟನೆಯಲ್ಲೂ ಹಾಗೆಯೇ ತೋರುತ್ತಿದ್ದರು. ಇಲ್ಲಿಯ ಘಟನೆ ದಾನದ ಬಗ್ಗೆ ಇದೆ. ಮಹಾದುಗ್ಗಟನು ಬನಾರಸ್ನಲ್ಲಿ ಆತ ಬಡವನಾಗಿದ್ದನು. ಬನಾರಸ್ನಲ್ಲಿ ಅಲ್ಲಿಯ ನಾಗರಿಕರು ಬುದ್ಧರನ್ನು ಮತ್ತು ಭಿಕ್ಷುಗಳನ್ನು ಆಹ್ವಾನಿಸಿದರು ಮತ್ತು ಅಲ್ಲಿಯ ಜನರನ್ನು ಪೂಜ್ಯರನ್ನು ಸರಿಯಾಗಿ ನೋಡಿಕೊಳ್ಳುವಂತೆ ಏಪರ್ಾಟು ಮಾಡಿದನು. ಮಹಾ ದುಗ್ಗಟನು ಅತಿ ಬಡವನಾದರೂ ಅವನು ಮತ್ತು ಆತನ ಪತ್ನಿಯು ಒಬ್ಬ ಭಿಕ್ಷುವನ್ನು ನೋಡಿಕೊಳ್ಳುವಂತೆ ನಿರ್ಧರಿಸಿದರು. ಅವರಿಬ್ಬರು ಅತಿ ಕಷ್ಟ-ಶ್ರಮಗಳಿಂದ ಹಣವನ್ನು ಸಂಪಾದಿಸಿ ಸರಳ ಊಟವನ್ನು ತಯಾರಿಸಿದರು. ಅವರು ಮಧ್ಯಾಹ್ನ ಸಮಯದಲ್ಲಿ ಊಟಕ್ಕೆ ಆಹ್ವಾನಿಸಲು ನೋಡಿದಾಗ ಎಲ್ಲಾ ಭಿಕ್ಷುಗಳು ಅವರಿವರ ಮನೆಗಳಿಗೆ ಅತಿಥಿಗಳಾಗಿ ಸೇರಿದ್ದರು. ಮಹಾದುಗ್ಗಟನ ಮನೆಯನ್ನು ಅಲಕ್ಷಿಸಲಾಗಿತ್ತು.  ಆ ಬಡಪಾಯಿಯು ಕೈಗಳನ್ನು ಹಿಂಡಿಕೊಳ್ಳುತ್ತಾ ಆಶ್ರುಗಳನ್ನು ಸುರಿಸುತ್ತಿದ್ದನು.
ಆಗ ಯಾರೋ ಒಬ್ಬರು ಆತನಿಗೆ ಹೇಳಿದರು ಬುದ್ಧರಿಗೆ ಇನ್ನೂ ಯಾರೂ ಸಹಾ ಆತಿಥ್ಯಕ್ಕೆ ಕರೆದಿಲ್ಲ. ಆತನು ಆಗಲೇ ಅಲ್ಲಿಂದ ವಿಹಾರಕ್ಕೆ ಹೊರಟು ಲೋಕ ಕಾರುಣಿಕರನ್ನು (ಬುದ್ಧ) ಆತಿಥ್ಯಕ್ಕೆ ಕೇಳಿಕೊಂಡನು, ಬುದ್ಧಭಗವಾನರು ಒಪ್ಪಿಕೊಂಡರು. ಹೊರಗೆ ಅದೇ ಸಮಯದಲ್ಲಿ ರಾಜಕುಮಾರರು ಮತ್ತು ಗಣ್ಯರು ತಮ್ಮಲ್ಲಿಗೆ ಭಗವಾನರನ್ನು ಕರೆದೊಯ್ಯಲು ಕಾಯುತ್ತಿದ್ದರು.  ಆದರೆ ಬುದ್ಧಭಗವಾನರ ಮಹದುಗ್ಗಟನಿಂದ ಮಾಡಲ್ಪಟ್ಟ ಆಹಾರವನ್ನು ತಿಂದರು ಹಾಗು ಕೃತಜ್ಞತೆ ಅಪರ್ಿಸಿದರು.
ಅದಾದ ನಂತರ ಮಹಾದುಗ್ಗಟನ ಅದೃಷ್ಟವು ಪುಸಲಾಯಿಸಿತು.  ಮತ್ತು ಆತನು ಶ್ರೀಮಂತನಾದನು. ರಾಜನಿಗೆ ಈ ವಿಷಯ ತಿಳಿದು ಆತನನ್ನು ಖಜಾನೆದಾರನನ್ನಾಗಿ ಮಾಡಿದನು. ಮಹಾದುಗ್ಗಟನು ಹೊಸ ಮನೆಯನ್ನು ಕಟ್ಟಲು ತೊಡಗುವಾಗ ಅಲ್ಲಿಯ ನೆಲದಲ್ಲಿ ಅನೇಕ ನಿಧಿ ನಿಕ್ಷೇಪಗಳು ದೊರೆತವು.  ಹೀಗೆ ಇನ್ನೂ ಶ್ರೀಮಂತನಾದನು. ಆತ ಮತ್ತೆ ಬುದ್ಧಭಗವಾನರನ್ನು ಮತ್ತು ಭಿಕ್ಷುಗಳನ್ನು ಏಳು ದಿನಗಳವರೆಗೆ ಆತಿಥ್ಯಕ್ಕೆ ಕರೆದರು. ಈ ರೀತಿಯ ನಿಸ್ವಾರ್ಥ ಸೇವೆಗಳಿಂದ ಆತನು ಮರಣದ ನಂತರ ಶ್ರೇಷ್ಠ ಸ್ಥಿತಿಯನ್ನು ಪಡೆದನು.

Friday, 20 April 2018

ಸುಭದ್ದ

ಸುಭದ್ದ

ಬುದ್ಧಭಗವಾನ ಕರುಣೆಗೆ ಯಾವ ಕಾಲದ ಮಿತಿಯೂ ಇರಲಿಲ್ಲ.  ಅವರ ಅಂತಿಮ ಕ್ಷಣಗಳ ಪ್ರಸಂಗವಿದು.
ಸುಭದ್ದನೆಂಬ ಪರಿವ್ರಾಜಕ ಸನ್ಯಾಸಿಯು ಕುಸಿನಾರದ ಹತ್ತಿರ ವಾಸವಾಗಿದ್ದನು. ಅವನಿಗೆ ಈ ವಿಷಯ ತಿಳಿಯಿತು. ಏನೆಂದರೆ ಬುದ್ಧಭಗವಾನರು ತಮ್ಮ ಅಂತಿಮ ಅವಸ್ಥೆಯಲ್ಲಿರುವರೆಂದು ತಿಳಿಯಿತು.  ಆಗ ಸುಭದ್ದನು ಬುದ್ಧಭಗವಾನರನ್ನು ನೋಡಿ ಅವರನ್ನು ಕೆಲವು ವಿಷಯಗಳ ಬಗ್ಗೆ ಈಗಲೇ ತಿಳಿಯಬೇಕೆಂದು ನಿರ್ಧರಿಸಿದನು.  ಆತನಿಗೆ ಬುದ್ಧ ಭಗವಾನರು ಅವನ ಪ್ರಶ್ನೆಗಳಿಗೆ ಉತ್ತರಿಸಿ ಆತನ ಸಂದೇಹಗಳನ್ನು ಪರಿಹರಿಸುವರು ಎಂಬ ನಂಬಿಕೆಯಿತ್ತು.
ಆದ್ದರಿಂದ ಸುಭದ್ದು ಸಾಲುವೃಕ್ಷಗಳ ತೋಪಲ್ಲಿ ಹೊರಟನು. ಅಲ್ಲಿ ಆನಂದರವರಿಗೆ ಹೋಗಿ ತಾನು ಬುದ್ಧರಿಗೆ ಕಾಣುವ ಅವಕಾಶ ನೀಡಬೇಕೆಂದು ಕೇಳಿಕೊಂಡನು. ಆದರೆ ಆನಂದರು ಹೀಗೆ ಉತ್ತರಿಸಿದರು ಸಾಕು ಮಿತ್ರ ಸುಭದ್ದ, ಬುದ್ಧಭಗವಾನರು ತುಂಬ ಬಳಲಿದ್ದಾರೆ, ಅವರಿಗೆ ತೊಂದರೆ ಕೊಡಬೇಡ.
ಅನಂತರ ಎರಡನೆಯಬಾರಿ ಸುಭದ್ದನು ಹಿಂದಿನಂತೆಯೇ ವಿನಂತಿಸಿಕೊಂಡನು. ಆನಂದರು ಸಹ ಹಿಂದಿನಂತೆಯೇ ಉತ್ತರಿಸಿದರು. ಮತ್ತೆ ಮೂರನೆಯ ಸಾರಿ ಸುಭದ್ದನು ಹಿಂದಿನಂತೆಯೇ ಕೋರಿಕೊಂಡನು. ಆನಂದರು ಮತ್ತೆ ಹಾಗೆ ಉತ್ತರಿಸಿದರು.
ಆದರೆ ಭಗವಾನರಿಗೆ ಇವರಿಬ್ಬರ ನಡುವಿನ ಸಂಭಾಷಣೆಯ ಒಂದೆರಡು ಪದಗಳು ಸಿಕ್ಕಿತ್ತು. ಅವರು ಆನಂದರಿಗೆ ಕರೆದರು ಮತ್ತು ಹೇಳಿದರು ಬಾ ಆನಂದ, ಸುಭದ್ದನನ್ನು ನನ್ನಿಂದ ದೂರವಿಸಬೇಡ, ಆತನು ಬಂದು ನನ್ನನ್ನು ಕಾಣುವಂತಾಗಲಿ. ಸುಭದ್ದನು ನನ್ನಿಂದ ಏನು ಬೇಕಾದರೂ ಕೇಳಲಿ, ಅವನು ಜ್ಞಾನಾಪೇಕ್ಷೆಯಿಂದ ಬಂದಿದ್ದಾನೆಯೇ ಹೊರತು ನನಗೆ ತೊಂದರೆ ಕೊಡಲು ಅಲ್ಲ ಮತ್ತು ಅವನ ಪ್ರಶ್ನೆಗಳಿಗೆ ನಾನು ಕೊಡುವ ಉತ್ತರವನ್ನು ಸಹಾ ಅತಿ ಕ್ಷಿಪ್ರವಾಗಿ ಅಥರ್ೈಸಿಕೊಳ್ಳಬಲ್ಲ.
ಹೀಗೆ ಅವಕಾಶ ಸಿಕ್ಕಿದ ಬಳಿಕ ಸುಭದ್ದ ಭಗವಾನರ ಬಳಿಗೆ ಬಂದು ಅವರನ್ನು ಪ್ರಶ್ನಿಸಿ ಉತ್ತರ ಪಡೆದು ಸಂತೃಪ್ತನಾದನು. ನಂತರ ಬುದ್ಧಭಗವಾನರ ಮುಂದೆ ಭಿಕ್ಷುವಾಗಿ ದೀಕ್ಷೆ ಪಡೆದವರಲ್ಲಿ ಕೊನೆಯವನಾದನು. ಹಾಗು ತನ್ನ ಜಾಗೃತಿ ನಿರಂತರ ಪ್ರಯತ್ನಶೀಲತೆಯಿಂದ ಭಗವಾನರ ಜ್ಞಾನದಿಂದ ಆತನು ಅರಹಂತನಾದನು.

ಪಟಚರಿ

ಪಟಚರಿ

ಮೇಲಿನ ಕೆಲವೊಂದು ಘಟನೆಗಳು ಈ ರೀತಿ ಸೂಚಿಸುತ್ತದೆ.  ಹೇಗೆಂದರೆ ಕೆಲವೊಂದು ಬಲಗಳು ಕೇವಲ ಒಬ್ಬರಿಗಾಗಿಯೇ ಅಥವಾ ಬುದ್ಧರಿಗಾಗಿಯೇ ಬೆಳವಣಿಗೆ ಹೊಂದಿದೆ.  ಮತ್ತೆ ಕೆಲವೊಂದು ಘಟನೆಗಳು ಬುದ್ಧರ ಕರುಣೆ ಮತ್ತು ಮೈತ್ರಿಯನ್ನು ಸಮಾನ್ಯವಾಗಿ ಪ್ರಸರಿಸಿವೆ.  ಆದಾಗ್ಯೂ ಶ್ರೇಷ್ಠತರವಾಗಿ ಗೋಚರಿಸುತ್ತದೆ.  ಅವರ ಕರುಣೆ ಮೈತ್ರಿಗಳು ಸದಾ ಹಾಗೆ ಪ್ರತಿಷ್ಠಿತವಾಗಿರುತ್ತದೆ.  ಆದರೆ ಸನ್ನಿವೇಶಕ್ಕೆ ತಕ್ಕಂತೆ ಅದು ದೊಡ್ಡದು ಅಥವಾ ಸಣ್ಣ ಘಟನೆ ಎನಿಸುತ್ತದೆ.  ಅವರ ಭಾಷೆ ಹಾಗು ವರ್ತನೆ ಅಸಾಧಾರಣವಾಗಿ ಶ್ರೇಷ್ಠವಾಗಿತ್ತು.
ಪಟಚರಿಯು ಶ್ರಾವಸ್ಥಿಯಲ್ಲಿ ಒಬ್ಬ ಶ್ರೀಮಂತ ಬಟ್ಟೆ ವ್ಯಾಪಾರಿಯ ಮಗಳಾಗಿದ್ದಳು. ಆಕೆಯು ಯೌವನಕ್ಕೆ ಬಂದಾಗ ತನ್ನ ಕುಟುಂಬದ ಸೇವಕನೊಬ್ಬನಲ್ಲಿ ಅನುರಕ್ತಳಾಗಿ ಪ್ರೇಮಿಯಾದಳು. ಆದರೆ ಆಕೆಯ ತಂದೆ-ತಾಯಿಗಳು ಆಕೆಗಾಗಿ ಸಮಾನ ದಜರ್ೆಯ ಶ್ರೇಷ್ಠ ವರನ ಅನ್ವೇಷಣೆಯಲ್ಲಿದ್ದರು.  ಆಗಲೇ ಪಟಚರಿಯು ತನ್ನ ಪ್ರಿಯಕರನೊಂದಿಗೆ ದೂರ ಓಡಿಹೋದಳು. ಅವರು ಅಲ್ಲಿ ವಿವಾಹವಾಗಿ ಒಂದು ಚಿಕ್ಕ ಹಳ್ಳಿಯಲ್ಲಿ ನೆಲೆಸಿದರು.
ಆಕೆ ಗಭರ್ಿಣಿಯಾಗುವ ಸೂಚನೆಗಳು ಕಂಡುಬಂದಾಗ ಆಕೆ ತನ್ನ ಪತಿಗೆ ತಾನು ತನ್ನ ತಾಯಿಯ ಮನೆಯಲ್ಲಿ ಮಗುವನ್ನು ಹಡೆಯುವ ಬಯಕೆ ಹೇಳಿದಳು. ಆದರೆ ಆಕೆಯ ಪತಿಯು ಇದಕ್ಕೆ ಹೆದರಿ ಏನಾದರೂ ನೆಪಹೇಳಿ ಮುಂದೂಡುತ್ತಿದ್ದನು. ಕೊನೆಗೆ ಆಕೆ ಒಬ್ಬಂಟಿಯಾಗಿದ್ದಾಗ ಆಕೆ ತನ್ನ ನೆರೆಹೊರೆಯವರಿಗೆ ವಿಷಯ ತನ್ನ ಪತಿಗೆ ತಿಳಿಸುವಂತೆ ಹೇಳಿ ಆಕೆ ತನ್ನ ತವರಿಗೆ ಪ್ರಯಾಣ ಬೆಳೆಸಿದಳು. ಪತಿಗೆ ವಿಷಯ ತಿಳಿದಾಗ ಆತನು ಆಕೆಯ ಹಿಂದೆಯೇ ಹೋದನು. ಆದರೆ ಅವರು ಶ್ರಾವಸ್ತಿಯನ್ನು ತಲುಪುವ ಮುಂಚೆಯೆ ಆಕೆ ಒಂದು ಗಂಡು ಮಗುವನ್ನು ಹೆತ್ತಳು. ಆದ್ದರಿಂದ ಅವರು ತಮ್ಮ ಮನೆಗೆ ಹಿಂತಿರುಗಿದರು.
ಮತ್ತೆ ಆಕೆ ಎರಡನೆಯ ಮಗುವಿಗೆ ಗಭರ್ಿಣಿಯಾದಳು. ಆಕೆ ಮತ್ತೆ ತನ್ನ ಪತಿಯಲ್ಲಿ ತನ್ನ ತಂದೆ-ತಾಯಿಗಳ ಬಳಿ ಹೋಗಲು ಒತ್ತಾಯಿಸಿದಳು.
ಆದರೆ ಆತನು ಮತ್ತೆ ನಿರಾಕರಿಸಿದನು. ಕೊನೆಗೆ ಆಕೆ ತಾನೆ ಹೊರಟಳು. ಈತನು ಹಿಂದಿನಂತೆಯೇ ವಿಷಯ ತಿಳಿದು ಹಿಂಬಾಲಿಸಿದನು. ಆದರೆ ದಾರಿಯಲ್ಲಿಯೆ ಆಕೆ ಮಗುವನ್ನು ಹೆತ್ತಳು. ಜನ್ಮ ತಾಳಿದ ಸ್ವಲ್ಪದಲ್ಲಿಯೆ ಬೃಹತ್ ಬಿರುಗಾಳಿಯು ಬಂದಿತು. ಆಗ ಪಟಚರಿಯ ಗಂಡನು ಹುಲ್ಲು ಮತ್ತು ಕಟ್ಟಿಗೆಗಳನ್ನು ಕಡಿಯಲು ಹೋದನು. ಏಕೆಂದರೆ ಆಕೆಯ ಆಶ್ರಯಕ್ಕಾಗಿ ಅದು ಅವಶ್ಯಕವಾಗಿತ್ತು. ಆದರೆ ಆ ಅರಣ್ಯದಲ್ಲಿ ಆತನಿಗೆ ಸರ್ಪವೊಂದು ಕಡಿದು ಆತನು ಮೃತ್ಯವಶವಾದನು.
ದುಭರ್ಾಗ್ಯವತಿ ಪಟಚರಿಯು ರಾತ್ರಿಯನ್ನು ಏಕಾಂಗಿಯಾಗಿ ಕಳೆದಳು. ಆಕೆ ಅತಿ ಒದ್ದೆಯಾಗಿಬಿಟ್ಟಿದ್ದಳು. ತನ್ನ ಇಬ್ಬರು ಪುತ್ರರನ್ನು ಅಪ್ಪಿಕೊಂಡು ನೆಲದಲ್ಲಿ ಮಲಗಿದ್ದಳು. ನಂತರ ಬೆಳಿಗ್ಗೆ ಆಕೆ ತನ್ನ ಪತಿಯ ಶವವನ್ನು ಕಂಡಳು. ಆಕೆ ಶೋಕದಿಂದ ಪೂರ್ಣವಾಗಿ ಕಂಗೆಟ್ಟಳು. ನಂತರ ತನ್ನ ತಂದೆ-ತಾಯಿಯ ಮನೆಗೆ ಹೋಗಲು ನಿಶ್ಚಯಿಸಿದಳು. ನಂತರ ಆಕೆ ನದಿಯ ಪ್ರವಾಹವು ಹರಿಯುತ್ತಿದ್ದ ಕಡೆ ಬಂದಳು. ಅಲ್ಲಿಂದ ಆಕೆ ದಾಟಿ ಹೋಗಬೇಕಾಗಿತ್ತು, ಆದರೆ ಅತಿ ದುರ್ಬಲಳು, ಆಯಾಸಗೊಂಡವಳು ಹಾಗು ದುಃಖದಿಂದ ಕೂಡಿದವಳಾಗಿದ್ದಳು. ಆಕೆ ಒಂದೇಸಾರಿ ಇಬ್ಬರು ಮಕ್ಕಳನ್ನು ಕರೆದೊಯ್ಯಲು ಸಾಧ್ಯವಿರಲಿಲ್ಲ.  ಆದ್ದರಿಂದ ಆಕೆ ತನ್ನ ಹುಟ್ಟಿದ್ದ ಕೂಸನ್ನು ದಡದಲ್ಲಿ ಎಲೆಗಳ ಗುಂಪು ಹಾಕಿ ಅದರ ಮೇಲಿಟ್ಟು ನಂತರ ಹಿರಿಯ ಮಗುವನ್ನು ಆ ಕಡೆಯ ದಡವನ್ನು ಸೇರಿಸಲು ಹೊರಟಳು.  ಮಧ್ಯದ ಹೊಳೆಯಲ್ಲಿ ಆಕೆ ಹಿಂತಿರುಗಿ ನೋಡಿದಳು. ಅದೇ ಸಮಯದಲ್ಲಿ ಒಂದು ಬೃಹತ್ ಗಿಡುಗವು ಆಕೆಯ ನವ ಕೂಸನ್ನು ಹಿಡಿಯಲು ಹಾರಿ ಕೆಳಕ್ಕೆ ಬಂದಿತು. ಆಕೆ ಈ ತೀಷ್ಣ ಆಘಾತದಲ್ಲಿ ತನ್ನ ಮೊದಲ ಮಗುವನ್ನು ಬಿಟ್ಟುಬಿಟ್ಟಳು. ಅತ್ತ ಆ ಕೂಸನ್ನು ಗಿಡಗವು ಎತ್ತಿ ಹಾರಿಹೋದರೆ, ಇತ್ತ ಈ ಮಗುವನ್ನು ಪ್ರವಾಹವು ಸೆಳೆದುಕೊಂಡು ಹೋಯಿತು.
ಈಗ ಜಗತ್ತಿನಲ್ಲಿ ಅತ್ಯಂತ ದುಃಖಿತಳಾದ ಪಟಚರಿಯು ತನ್ನ ತಂದೆ ತಾಯಿಯ ಬಳಿ ಹೋಗಲು ನಿರ್ಧರಿಸುತ್ತಾಳೆ. ಆಕೆ ಶ್ರಾವತ್ತಿಯ ಬಳಿಗೆ ಬರುತ್ತಾಳೆ. ಅಲ್ಲಿ ಆಕೆಗೆ ತನ್ನ ತಂದೆ-ತಾಯಿಯ ಮನೆಗೆ ಬೆಂಕಿಯ ಭಾರಿ ಅಪಘಾತದಲ್ಲಿ ತನ್ನ ತಂದೆ-ತಾಯಿಯೊಂದಿಗೆ ಮನೆಯು ಸುಟ್ಟು ಬೂದಿಯಾಗಿರುವುದು ತಿಳಿಯುತ್ತದೆ.
ಒಂದರ ಮೇಲೊಂದು ದುಃಖದ ಭಾರಿ ಆಘಾತಗಳೊಂದಿಗೆ ಆಕೆ ತತ್ತರಿಸುತ್ತಾಳೆ. ಬಹುಶಃ ಆಕೆಯಷ್ಟು ದುಃಖ ಬೇರಾರಿಗೂ ಸಿಕ್ಕಿರಲಾರದು. ಮೊದಲೇ ದುಃಖದಿಂದ ನಿಯಂತ್ರಣ ತಪ್ಪಿದ್ದ ಆಕೆಗೆ ಈಗಂತೂ ಆಳವಾದ ದುಃಖದಿಂದ ಮನಸ್ಸಿನ ಪೂರ್ಣ ನಿಯಂತ್ರಣ ಕಳೆದುಕೊಂಡಳು. ಆಕೆಗೆ ಬಟ್ಟೆ ಕಳಚಿ ಹೋಗಿರುವುದು ಅರಿವಾಗಲಿಲ್ಲ. ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದಳು. ಜನರು ಸಹಾ ಆಕೆಯನ್ನು ಬಾಗಿಲಿನಿಂದ ತಳ್ಳುತ್ತಿದ್ದರು. ಹೀಗೆಯೇ ಒಂದುದಿನ ಆಕೆ ಜೇತವನಕ್ಕೆ ಬಂದಳು. ಅಲ್ಲಿ ಬುದ್ಧಭಗವಾನರು ಧರ್ಮಪ್ರವಚನ ಮಾಡುತ್ತಿದ್ದರು. ಜನರು ಆಕೆಯನ್ನು ಹತ್ತಿರ ಬರಲು ತಡೆದರು.  ಆದರೆ ಮಹಾ ಕಾರುಣಿಕರು ಆಕೆಯನ್ನು ಹತ್ತಿರ ಕರೆದು ಆಕೆಯೊಂದಿಗೆ ಮಾತನಾಡಿಸಿದರು. ಬುದ್ಧಭಗವಾನರ ಶ್ರೇಷ್ಠತೆ ಹಾಗು ಮಹಾ ಕರುಣೆಯ ಬಲದಿಂದ ಆಕೆಗೆ ಮತ್ತೆ ಮನಸ್ಸು ಸ್ಥೀಮಿತಕ್ಕೆ ಬಂದಿತು.  ಆಕೆ ಕುಳಿತು ಭಗವಾನರ ಬೋಧನೆ ಕೇಳತೊಡಗಿದಳು. ಒಬ್ಬ ಮಾನವ ವಸ್ತ್ರವನ್ನು ಆಕೆಯತ್ತ ಎಸೆದನು. ಆಕೆ ಅದನ್ನು ಹೊದ್ದುಕೊಂಡು ಭಗವಾನರ ಹತ್ತಿರ ಬಂದಳೂ. ಆಕೆ ಕರುಣಾಸ್ವರೂಪಿ ಬುದ್ಧರ ಪಾದಗಳಿಗೆ ಪೂಜಿಸಿದಳು. ಹಾಗು ತನ್ನ ದುಃಖಭರಿತ ಜೀವನಾವಳಿಯನ್ನು ಹೇಳಿದಳು. ಆಕೆಯು ಬುದ್ಧರ ಬಳಿ ಸಹಾಯಕ್ಕಾಗಿ ಕೇಳಿಕೊಂಡಳು. ಬುದ್ಧಭಗವಾನರು ಆ ದುಃಖತಪ್ತಳನ್ನು ಸಂತೈಸಿದರು, ಸಮಾಧಾನಿಸಿದರು.  ಆಕೆಗೆ ಮರಣವು ಪ್ರತಿಯೊಬ್ಬರಿಗೂ ಬರುತ್ತದೆ ಎಂಬುದನ್ನು ಅರಿವುಂಟು ಮಾಡಿಸಿದರು.  ನಂತರ ಆಕೆಗೆ ಬೋಧನೆಯ ಶ್ರೇಷ್ಠ ಸತ್ಯಗಳನ್ನು ಹೇಳಿದರು. ಬುದ್ಧಭಗವಾನರ ಬೋಧನೆಯು ಮುಗಿಯುತ್ತಿದ್ದಂತೆ ಪಟಚರಿಯು ಸೋತಪನ್ನ ಫಲವನ್ನು ಪ್ರಾಪ್ತಿ ಮಾಡಿದಳು. ಅದು ಪರಮಶ್ರೇಷ್ಠ ಜ್ಞಾನ ಸಂತತ್ವದ ಪ್ರಥಮಫಲವಾಗಿತ್ತು.  ಮತ್ತು ಭಿಕ್ಷುಣಿಯಾಗಲು ಅನುಮತಿ ಕೇಳಿದಳು. ಬುದ್ಧಭಗವಾನರು ಒಪ್ಪಿದರು. ಓಹ್ ಆ ದುಃಖಿತಳು ಕೊನೆಗೂ ಶಾಂತಿಯನ್ನು ಪಡೆದಳು.
ಒಂದುದಿನ ಆಕೆ ತನ್ನ ಪಾದವನ್ನು ತೊಳೆಯುತ್ತಿರುವಾಗ ಆಕೆ ಈ ರೀತಿ ಗಮನಿಸಿದಳು. ನೀರು ಹರಿದು ಕೆಲವೊಮ್ಮೆ ಹತ್ತಿರ ಬರುತ್ತದೆ ಮತ್ತು ಕೆಲವೊಮ್ಮೆ ದೂರ ಹೋಗುತ್ತದೆ.
ಆಕೆ ಜ್ಞಾನಯುತವಾಗಿ ಚಿಂತಿಸತೊಡಗಿದಳು. ಹೀಗೆಯೇ ಅಲ್ಲವೆ ಎಲ್ಲಾ ಮಾನವರು ಮರಣವನ್ನು ಅಪ್ಪುವುದು. ಮೊದಲು ಬಾಲ್ಯ, ನಂತರ ಯೌವ್ವನ, ಆನಂತರ ಮುಪ್ಪು ನಂತರ ಮರಣ... ಆಕೆ ಅರಹಂತಳಾದಳು. ಅದೇ ಸಂತತ್ವದ ಪರಮಗುರಿ, ಜ್ಞಾನದ ಅಂತಿಮ ಫಲ ಹಾಗು ದುಃಖದ ಪೂರ್ಣ ನಾಶ ಮಾಡಿಕೊಂಡ ವ್ಯಕ್ತಿತ್ವ, ಮತ್ತು ಪರಮಶಾಂತಿಯ ಪ್ರಾಪ್ತಿ.
ಬುದ್ಧ ಭಗವಾನರ ದಯೆಯಿಂದ ಹೀಗೆ ಆಕೆ ಮುಂದೆ ದೊಡ್ಡ ಬೋಧಕಳಾಗುತ್ತಾಳೆ.  ಎಷ್ಟು ಸ್ತ್ರೀಯರು ತಮ್ಮ ದುಃಖ ನಿವಾರಣೆಗೆ ಆಕೆಯತ್ತ ಬೋಧನೆಗೆ ಹಾಗು ಸಮಾಧಾನಕ್ಕೆ ಹೋಗುತ್ತಾರೆ. ಬುದ್ಧಭಗವಾನರು ಆಕೆಗೆ ಬಗ್ಗೆ ಹೀಗೆ ಘೋಷಿಸುತ್ತಾರೆ ವಿನಯವನ್ನು ಶ್ರೇಷ್ಠವಾಗಿ ಅರಿತಿರುವವರಲ್ಲಿ ಈಕೆಯು ಸಹಾ ಶ್ರೇಷ್ಠಳು

ಸೋಪಕ

ಸೋಪಕ

ಬುದ್ಧಭಗವಾನರ ಜ್ಞಾನವು ಅವರಿಗೆ ಅನಂತ ಅಪಾರ ಕರುಣೆ ಮತ್ತು ಅಸೀಮ ಮೈತ್ರಿಯುತರನ್ನಾಗಿ ಮಾಡಿತ್ತು.  ಅದು ಅವರಲ್ಲಿ ತುಂಬಿ ತುಳುಕಾಡುತ್ತಿತ್ತು.  ಅವರ ಕರುಣೆಯು ಅಪಾಯದಲ್ಲಿರುವ ಯಾರಿಗೂ ಸಹಾಯ ಮಾಡುತ್ತಿತ್ತು.
ಒಮ್ಮೆ ಸೋಪಕನೆಂಬ ಬಾಲಕನಿದ್ದನು. ಆತನಿಗೆ ಕೇವಲ 7 ವರ್ಷ ಮಾತ್ರವಾಗಿತ್ತು. ಆಗಲೆ ಆತನ ತಂದೆಯು ತೀರಿಹೋದನು.  ಆತನ ತಾಯಿಯು ಮತ್ತೊಬ್ಬನೊಡನೆ ವಿವಾಹವಾದಳು. ಆ ಮನುಷ್ಯನು ದಯಾರಹಿತನು ಹಾಗು ಅತಿ ಕ್ರೂರಿಯಾಗಿದ್ದನು. ಆ ಮಲತಂದೆಯು ಸದಾ ಸೋಪಕನನ್ನು ಹಿಡಿದು ಹೊಡೆಯುತ್ತಿದ್ದನು. ಕೆಲವು ಕಾಲದ ನಂತರ ಒಬ್ಬ ತಮ್ಮನು ಜನಿಸಿದನು. ಒಂದು ಸಂಜೆ ಆ ಚಿಕ್ಕ ಬಾಲಕನು ತನ್ನ ತೊಟ್ಟಿಲಿನಲ್ಲಿ ಅಳುತ್ತಿದ್ದನು.  ಮಲತಂದೆಯು ಸೋಪಕನ ಮೇಲೆ ಸಂಶಯಿಸಿ ಸೋಪಕನ ಕಿವಿಹಿಡಿದು ಒಂದು ಬಲವಾದ ಹೊಡೆತ ನೀಡಿದನು. ಸೋಪಕನು ಅತ್ತನು. ಸೋಪಕನ ಧ್ವನಿ ಕೇಳಿ ಆ ಚಿಕ್ಕ ಬಾಲಕನೂ ಅತ್ತನು. ಸೋಪಕನು ಇದರಿಂದ ಭಯಪಟ್ಟನು. ಏಕೆಂದರೆ ಮಲತಂದೆ ಮತ್ತೆ ಹೊಡೆಯುವ ಸಾಧ್ಯತೆ ಇತ್ತು.  ಸೋಪಕನ ತಾಯಿಯು ಸಹಾ ಆಗ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ.  ಮಲತಂದೆಯ ಕ್ರೂರತಕ್ಕೆ ಆಗ ಅಡ್ಡಿಯೇ ಇರಲಿಲ್ಲ. ಸೋಪಕನ ಗೋಳಾಟಕ್ಕೆ ಆತನ ತಂದೆಯು ಅವನಿಗೆ ಹಗ್ಗಕಟ್ಟಿ ನೇತುಹಾಕಲು ಹಗ್ಗ ತಂದನು. ಆಗ ಭೀತಿಗೊಂಡ ಆ ಮುಗ್ಧ ಮಗುವು ತನ್ನ ಪುಟ್ಟ ಕಾಲುಗಳು ಎಲ್ಲಿಯವರೆಗೆ ಓಡಬಹುದೋ ಅಷ್ಟು ದೂರ ಓಡಿತು. ಕೊನೆಗೆ ಆತನು ಕಾಡಿನ ಸ್ಮಶಾನವನ್ನು ತಲುಪಿದ್ದನು. ಅಲ್ಲಿ ಅನೇಕ ಶವಗಳು ದುವರ್ಾಸನೆಯಿಂದ ಕೂಡಿದ್ದು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಆದರೆ ಮಲತಂದೆ ಅಲ್ಲಿಯೂ ಬಿಡಲಿಲ್ಲ. ಸೋಪಕನನ್ನು ಹಿಡಿದುಕೊಂಡು ಒಂದು ಶವಕ್ಕೆ ಈತನನ್ನು ಸೇರಿಸಿ ಕಟ್ಟಿಹಾಕಿದನು. ಸೋಪಕನು ಅತ್ಯಂತ ದೈನ್ಯಭಾವದಿಂದ ಗೋಳಾಡಿ ಬೇಡಿಕೊಂಡನು. ತನ್ನನ್ನು ಬಿಡಿಸಬೇಕೆಂದು ಬೇಡಿದನು. ಆದರೆ ಆ ಕ್ರೂರಿ ಕಿವುಡನಂತೆ ಮನೆಗೆ ಹಿಂದಿರುಗಿದನು.
ರಾತ್ರಿ ಕತ್ತಲು ಆದಂತೆಯೇ ಸೋಪಕನ ಭಯವು ಇಮ್ಮಡಿಯಾಯಿತು.  ಆತನಿಗೆ ತೋಳಗಳ, ನರಿಗಳ, ಹುಲಿ-ಚಿರತೆಗಳ ಇನ್ನಿತರ ಪ್ರಾಣಿಗಳ ಕೂಗುಗಳು ಕೇಳಿಸತೊಡಗಿತು.  ಆತನ ಭಯದಿಂದ ಕೂಡಿದ ಗೋಳಾಟ ಕೂಗಾಟ ಹೆಚ್ಚಾಯಿತು.
ಇಲ್ಲಿ ತಾಯಿಯು ಮನೆಗೆ ಹಿಂದಿರುಗಿದಳು. ಆಕೆಗೆ ತನ್ನ ಮೊದಲ ಪುತ್ರನ ವಿಷಯವು ಅರ್ಥವಾಗಲಿಲ್ಲ. ಆಕೆಯ ಗಂಡನು ಸಹಾ ಏನೂ ಹೇಳಲಿಲ್ಲ. ಆದ್ದರಿಂದ ಆಕೆಯು ಸೋಪಕನನ್ನು ಹುಡುಕಲು ಹೊರಟಳು.  ಆಕೆಗೆ ಆತನನ್ನು ಹುಡುಕಲು ಸಾಧ್ಯವಾಗಲಿಲ್ಲ.  ಆಗ ಆಕೆಯ ದುಃಖವು ಹೆಚ್ಚಾಯಿತು.  ಆಕೆ ಅತ್ತಳು, ಆಕೆ ಶೋಕತಪ್ತಳಾಗಿ ಶ್ರಾವಸ್ಥಿಯಲ್ಲಿ ಪ್ರತಿಯೊಬ್ಬರಿಗೂ ತನ್ನ ಮಗನ ಬಗ್ಗೆ ಕೇಳುತ್ತಾ ಓಡುತ್ತಿದ್ದಳು. ಆದರೆ ಆಕೆಗೆ ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಆಕೆಗೆ ಓರ್ವ ಮುದುಕನು ಸಹಾಯ ಮಾಡುವಂತಹ ಏಕೈಕ ವ್ಯಕ್ತಿಯ ಬಗ್ಗೆ ತಿಳಿಸಿದನು, ಅವರೇ ಬುದ್ಧ ಭಗವಾನರು. ಬುದ್ಧಭಗವಾನರು ಆ ಸಮಯದಲ್ಲಿ ಜೇತವನದ ವಿಹಾರದಲ್ಲಿದ್ದರು.  ಆ ಮುದುಕನು ಆಕೆಗೆ ಈ ರೀತಿ ತಿಳಿಸಿದನು. ಏನೆಂದರೆ ಬುದ್ಧರಿಗೆ ಭೂತಕಾಲದ, ಭವಿಷ್ಯತ್ತಿನ ಬಗೆಗೆ ಹಾಗು ವರ್ತಮಾನದ ಬಗ್ಗೆ ತಿಳಿದಿದೆ. ಅಲ್ಲಿ ಭೇಟಿಮಾಡು ಎಂದು ತಿಳಿಸಿದ್ದನು. ಆ ಬಡಪಾಯಿ ದುಃಖತಪ್ತ ತಾಯಿಯ ವಿಹಾರಕ್ಕೆ ಹೋಗಿ ಬುದ್ಧಭಗವಾನರ ಬಳಿಗೆ ಬಂದು ತನ್ನ ದುಃಖ ಸಂಗತಿ ತಿಳಿಸಿದಳು. ಬುದ್ಧಭಗವಾನರು ಆಕೆಗೆ ಮನೆಗೆ ಹೋಗಲು ಹಾಗು ಬೆಳಿಗ್ಗೆ ಬಂದು ಕಾಣಲೆಂದು ಹೇಳಿ ಸಮಾಧಾನಿಸಿ ಕಳುಹಿಸಿದರು.
ಮಧ್ಯರಾತ್ರಿಯಲ್ಲಿ ಮೈತ್ರಿಯ ಬಲದಿಂದ ಬುದ್ಧಭಗವಾನರು ಸೋಪಕನನ್ನು ಸ್ಮಶಾನದಲ್ಲಿ ಕಂಡರು. ಹಾಗು ಅಲ್ಲಿಗೆ ಹೋದರು. ಸೋಪಕನಿಗೆ ದಯಪ್ರಕಾಶ ಬುದ್ಧಭಗವಾನರು ಹತ್ತಿರ ಬರುತ್ತಿರುವುದು ಕಂಡನು. ಬುದ್ಧಭಗವಾನರು ಹೀಗೆ ತಮ್ಮ ಮೃದು ಸಹಾನುಭೂತಿಯ ಸ್ವರದಲ್ಲಿ ಹೇಳಿದರು ಮಗು ಸೋಪಕ ಹೆದರಬೇಡ, ನಾನು ನಿನ್ನನ್ನು ಕಾಪಾಡುತ್ತೇನೆ, ನಾನು ಬುದ್ಧ ನಿನ್ನ ಪೂಜ್ಯ ತಂದೆ.
ಬುದ್ಧಭಗವಾನರು ಕೊಳೆತು ವಾಸನೆ ಬೀರುತ್ತಿರುವ ಆ ಶವದ ಬಳಿಗೆ ಬಾಗಿದರು. ಸೋಪಕನನ್ನು ಆತನ ತಂದೆ ಕರುಳುನಿಂದ ಕಟ್ಟಿಹಾಕಿದ್ದರು.  ಮಾಂಸವು ಮತ್ತು ಇತರ ಶರೀರದ ಗ್ರಂಥಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಭಗವಾನರು ಒಂದೊಂದು ಬಂಧನದಿಂದ ಬಿಡಿಸಿದರು.  ಮೃದುವಾದ ವಾಣಿಯಿಂದ ಆ ಬಾಲಕನನ್ನು ಸಂತೈಸಿದರು.
ಮಗು ನಾನು ನಿನ್ನನ್ನು ಹುಡುಕಿಕೊಂಡು ಬಂದೆ, ನಿನಗೆ ಸಹಾಯ ಮಾಡಲು ಬಂದಿದ್ದೇನೆ. ನಾನು ನಿನಗೆ ಬೇಗನೆ ಸ್ವತಂತ್ರಗೊಳಿಸುತ್ತೇನೆ.
ನಂತರ ಬುದ್ಧಭಗವಾನರು ಸೋಪಕನನ್ನು ಹೊಳೆಯ ಬಳಿ ಕರೆದೊಯ್ದರು. ಅಲ್ಲಿ ಅತನಿಗೆ ಶುದ್ಧವಾದ ಜಲದಲ್ಲಿ ಸ್ನಾನ ಮಾಡಿಸಿದರು. ನಂತರ ಆತನಿಗೆ ವಿಹಾರದಲ್ಲಿ ಕರೆದುಕೊಂಡು ಹೋದರು. ಅಲ್ಲಿ ಆತನಿಗೆ ತಿನ್ನಲು ಆಹಾರ ಮತ್ತು ಉಡಲು ವಸ್ತ್ರಗಳನ್ನು ನೀಡಿದರು ಹಾಗು ಸಮಾಧಾನಗೊಳಿಸಿದರು.
ಆ ಬಾಲಕನು ಎಷ್ಟು ಬಳಲಿದ್ದನೆಂದರೆ ಆತನು ಗಾಢವಾದ ನಿದ್ದೆಯಲ್ಲಿ ಮುಳುಗಿದನು. ಬುದ್ಧಭಗವಾನರು ಆನಂದರವರನ್ನು ಕರೆದು ಆನಂದ, ನಾನು ಈ ಬಾಲಕನನ್ನು ರಕ್ಷಿಸಿದ್ದೇನೆ. ಈತನು ಸ್ಮಶಾನದಲ್ಲಿ ಶವಕ್ಕೆ ಕಟ್ಟಿಹಾಕಲ್ಪಟ್ಟಿದ್ದನು. ನಾನು ಈತನನ್ನು ಶುಚಿಗೊಳಿಸಿ ಇಲ್ಲಿ ಕರೆತಂದಿದ್ದೇನೆ. ನೋಡು ಆನಂದ, ಈತ ಎಂತಹ ಗಾಢ ನಿದ್ದೆಯಲ್ಲಿ ಮುಳುಗಿದ್ದಾನೆ. ಅತ್ಯಂತ ಪರಮಸುಖವನ್ನು ಮಾನವ ಗಳಿಸಬೇಕೆಂದು ಇದ್ದರೆ ಆತನು ಅನಾಥವಾಗಿರುವ ದೀನರನ್ನು ರಕ್ಷಿಸಿ ಸಹಾಯ ಮಾಡಿ ಅವರನ್ನು ಸುಖಗೊಳಿಸಬೇಕು. ಈಗ ಈತನನ್ನು ನಿನ್ನ ಕೋಣೆಗೆ ತೆಗೆದುಕೊಂಡು ಹೋಗು. ಆತನಿಗೆ ಯೋಗ್ಯ ಸ್ಥಳದಲ್ಲಿ ಹಾಸಿಗೆ ಹಾಕು.
ಮಾರನೆಯ ದಿನ ಬೆಳಿಗ್ಗೆ ಸೋಪಕನ ತಾಯಿಯು ಮತ್ತೆ ವಿಹಾರಕ್ಕೆ ಬಂದಳು. ಬುದ್ಧಭಗವಾನರು ಆಕೆಗೆ ಕರುಣೆಯಿಂದ ಇಂತೆಂದರು ಚಿಂತಿಸಬೇಡ ಸೋದರಿ, ನಿನ್ನ ಪುತ್ರನು ಕ್ಷೇಮವಾಗಿದ್ದಾನೆ, ಇಗೋ ಇಲ್ಲಿದ್ದಾನೆ.
ಆ ಮಾತೆಯು ತನ್ನ ಪುತ್ರನ ದರ್ಶನದಿಂದ ಆನಂದದಿಂದ ತುಂಬಿದಳು. ಆಕೆ ಭಗವಾನರಲ್ಲಿ ತನ್ನ ಪುತ್ರನು ವಿಹಾರದಲ್ಲಿಯೇ ಇರಿಸಿಕೊಳ್ಳಲು ಕೋರಿಕೊಂಡಳು. ಹಾಗು ತನ್ನ ಪುತ್ರ ಸಂಘಕ್ಕೆ ಸೇರಲು ಅನುಮತಿ ನೀಡಿದಳು. 

ಸುನೀತ

ಸುನೀತ

ಮೈತ್ರಿ ಹಾಗು ಕರುಣೆ ಈ ಎಡರು ಶ್ರೇಷ್ಠ ದಿವ್ಯ ವಿಹಾರಗಳು ಬುದ್ಧಭಗವಾನರು ತಿಳಿಸಿದ್ದಾರೆ. ಅವು ಬೌದ್ಧರ ನೈತಿಕ ರಹಸ್ಯ ಕಲ್ಲುಗಳಾಗಿವೆ ಮತ್ತು ಶ್ರಿಲಂಕಾ, ಬರ್ಮ, ಥೈಲ್ಯಾಂಡ್, ಲಾವಸ್ ಮತ್ತು ಕಾಂಬೋಡಿಯಗಳ ಬೌದ್ಧಧರ್ಮಗಳಲ್ಲಂತು ಇದು ಪ್ರಧಾನ ಧ್ಯಾನದ ವಿಧವಾಗಿದೆ.
ಬುದ್ಧಭಗವಾನರ ಬೋಧನೆಯು ಎಲ್ಲೇ ಸಿಗಲಿ, ಯಾವ ಭಾಷೆಯಲ್ಲೇ ಸಿಗಲಿ, ಬುದ್ಧಭಗವಾನರ ಅಪರಿಮಿತ ಮೈತ್ರಿ ಮತ್ತು ಅನಂತ ಕರುಣೆಯನ್ನು ನಾವು ಕಾಣುತ್ತೇವೆ. ಬುದ್ಧರ ಕರುಣೆಯು ಅತಿರೇಕ ಸನ್ನಿವೇಶಗಳಾದಂತಹ ಅಂಗುಲಿಮಾಲಾನ ಮೇಲಷ್ಟೇ ಅಲ್ಲ, ಅದೂ ಸಾಧಾರಣ ಮಾನವರ ಸಹಾಯಕ್ಕೂ ಪ್ರಸರಿಸಿತ್ತು. ಮುಂದಿನ ಕೆಲವು ಘಟನೆಗಳು ಅವರ ಅಪಾರ ಮೈತ್ರಿ ಮತ್ತು ಆಶಾವಾದ, ಅಸೀಮ ಕರುಣೆಯನ್ನು ನಾವು ಕಾಣುತ್ತೇವೆ.
ಸುನೀತ ರಾಜಗೃಹದಲ್ಲಿ ಬೀದಿ ಗುಡಿಸುವವರ ಪೈಕಿ ಆ ಕುಟುಂಬದಲ್ಲಿ ಅತ್ಯಂತ ಕಿರಿಯವನಾಗಿದ್ದನು.  ಆತನ ರಸ್ತೆ ಗುಡಿಸುವಿಕೆಯಿಂದ ಆತನ ಜೀವನ ಅತಿ ಕಷ್ಟದಿಂದ ಸಾಗುತ್ತಿತ್ತು.  ಮನೆ, ಔಷಧಿ, ವಸ್ತ್ರಗಳಂತೂ ಆತನ ಸಿಗುವಿಕೆಗೆ ಮೀರಿದ ಮಾತಾಗಿತ್ತು.  ಆತನು ರಸ್ತೆಯ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ, ಏಕೆಂದರೆ ಆತನು ಒಬ್ಬ ಅಸ್ಪೃಶ್ಯನೆನಿಸಿಕೊಂಡಿದ್ದನು.  ಯಾರಾದರೂ ಮೇಲು ಜಾತಿಯವರು ಬರುತ್ತಿದ್ದರೆ ಆತನು ಆ ದಾರಿಯನ್ನೇ ಬದಲಿಸಬೇಕಿತ್ತು.  ಆತನ ನೆರಳನ್ನು ಸಹಾ ಅವರ ಮೇಲೆ ಬೀಳಿಸಬಾರದಿತ್ತು.  ಇಲ್ಲದಿದ್ದರೆ ಆತನನ್ನು ಹಿಡಿದು ರಕ್ತ ಬರುವವರೆಗೆ ಹೊಡೆಯುತ್ತಿದ್ದರು.  ಆತನಿಗೆ ಯಾವ ವಿದ್ಯಾಭ್ಯಾಸವು ಇರಲಿಲ್ಲ. ಬೇರೆ ಧರ್ಮಗಳ ಸಾಧನೆಗೂ ಅವಕಾಶವಿರಲಿಲ್ಲ.
ಒಂದುದಿನ ಬೆಳಿಗ್ಗೆ ಮುಂಚೆಯೇ ದಾರಿಯನ್ನು ಸ್ವಚ್ಛಗೊಳಿಸಿ ಮತ್ತು ಕಸವನ್ನು ಬೀದಿಯಿಂದ ಬೇರೆಡೆಗೆ ಸಾಗಿಸುತ್ತಿದ್ದ.  ಆತನು ಅತಿಯಾಗಿ ಬೆವರುತ್ತಿದ್ದನು ಮತ್ತು ಧೂಳಿನಿಂದ ಕಶ್ಮಲದಿಂದ ದೇಹ ಆವೃತವಾಗಿತ್ತು.  ಆತನು ಕಸದ ಮಕ್ಕರಿಗಳನ್ನು ಜೋಡಿಸುವಾಗಂತು ಸಣ್ಣ ಬಟ್ಟೆಯನ್ನು ಧರಿಸುತ್ತಿದ್ದನು.
ಸೂರ್ಯನ ಕಿರಣಗಳ ಪ್ರಾರಂಭವಾಗುವ ಆ ಸಮಯದಲ್ಲಿ ಬುದ್ಧ ಭಗವಾನರು ದಾರಿಯಲ್ಲಿ ಮಹಾ ಭಿಕ್ಷು ಸಂಘದ ಸಮೇತ ಬರುತ್ತಿದ್ದರು. ಅವರು ಹತ್ತಿರ ಬರುತ್ತಿದ್ದಂತೆ ಸುನೀತನ ಹೃದಯವು ಆನಂದದಿಂದ ತುಂಬಿಹೋಯಿತು.  ಹಾಗೆಯೇ ಭಯವು ಆಕ್ರಮಿಸಿತು.  ಒಂದು ದೊಡ್ಡ ಗೋಡೆ ಬಳಿಯಲ್ಲಿ ಕಾಣಿಸಿತು.  ಆತನಿಗೆ ಆಶ್ರಯ ಸಿಕ್ಕಿದಂತಾಯಿತು.  ಗೋಡೆಯ ಹಿಂದೆ ನಿಂತು ಅಲ್ಲಿ ಗೋಡೆಗೆ ಒರಗಿಕೊಂಡು ತನ್ನ ಹಸ್ತಗಳನ್ನು ಭಕ್ತಿಯಿಂದ ಜೋಡಿಸಿ ಬುದ್ಧಭಗವಾನರಿಗೆ ವಂದನೆಗಳನ್ನು ಸಲ್ಲಿಸತೊಡಗಿದ. 
ಬುದ್ಧಭಗವಾನರು ಆತನ ಸಮೀಪಕ್ಕೆ ಬಂದರು ತಮ್ಮ ಮಧುರ ಇಂಪಿನ ಧ್ವನಿಯಲ್ಲಿ ದಯೆಯಿಂದ ಹೀಗೆ ನುಡಿದರು : ಪ್ರಿಯ ಮಿತ್ರ, ನಮ್ಮೊಂದಿಗೆ ಸೇರಲು ಬಯಸುವೆಯಾ?
ಸುನೀತನಲ್ಲಿ ಆನಂದವು ಉಕ್ಕಿ ಹರಿಯಿತು. ಆತನಿಗೆ ಮಾತನಾಡುವುದೇ ಕಷ್ಟವಾಯಿತು. ಆತನಿಗೆ ಹಿಂದೆ ಯಾರೊಬ್ಬರೂ ಸಹಾ ಹೀಗೆ ಕರುಣೆಯಿಂದ ಈ ರೀತಿ ಮಾತನಾಡಿಸಿರಲಿಲ್ಲ ಅಥವಾ ಈ ರೀತಿ ವತರ್ಿಸಿರಲಿಲ್ಲ.
ಕೊನೆಗೂ ಆತನಿಗೆ ಮಾತನಾಡಲು ಸಾಧ್ಯವಾಯಿತು, ಆತ ಹೀಗೆ ಕೂಗಿಕೊಂಡ ಓ ಪರಮ ಪೂಜ್ಯರೇ, ನಾನು ಎಂದಿಗೂ ಈ ಬಗೆಯ ಕರುಣೆಯ ಶಬ್ದಗಳನ್ನು ಕೇಳಿರಲಿಲ್ಲ.  ಆದರೆ ತಾವು ನನ್ನಂಥಹ ಕೊಳಕ ದುಃಖಿತ ಕಸಗುಡಿಸುವವರನ್ನು ತೆಗೆದುಕೊಳ್ಳಲು ಸಿದ್ಧವಿದ್ದರೆ ನಾನು ಧನ್ಯನಾದೆ.  ನಾನು ಅತ್ಯಂತ ಆನಂದದಿಂದ ಈ ವೃತ್ತಿಯನ್ನು ಬಿಟ್ಟು ಭಿಕ್ಷುವಾಗುವೆ.
ನಂತರ ಬುದ್ಧಭಗವಾನರು ಅಲ್ಲೇ ಆತನಿಗೆ ಭಿಕ್ಷುವನ್ನಾಗಿ ಮಾಡಿ ಸಹಭಿಕ್ಷುಗಳೊಡನೆ ಕರೆದೊಯ್ದರು. ನಂತರ ಆತನಿಗೆ ವಿಹಾರದಲ್ಲಿ ಧಮ್ಮ ವಿಷಯಗಳನ್ನು ಕಲಿಸಿದರು. ಧ್ಯಾನದ ವಿಷಯವನ್ನು ನೀಡಿದರು. ಅದರಿಂದ ಆತನು ಅರಹಂತನಾದನು.  ಪ್ರತಿಯೊಂದು ಸ್ಥಾನದ ಜನರು ಆತನಿಗೆ ಗೌರವ ಕೊಟ್ಟರು, ವಂದಿಸಿದರು.  ಆತನ ಬೋಧನೆಯಂತೆ ನಡೆದರು. 
ಸುನೀತನಂತಹ ವ್ಯಕ್ತಿಗಳ ಬಗ್ಗೆ ಬುದ್ಧಭಗವಾನರು ಹೀಗೆ ನುಡಿದಿದ್ದಾರೆ: ಪ್ರತಿಯೊಬ್ಬರ ಆಶ್ರು ಹಾಗು ರಕ್ತ ಒಂದೇ ಬಣ್ಣದ್ದಾಗಿದೆ.  ಪ್ರತಿಯೊಬ್ಬರು ತಮ್ಮ ಕ್ರಿಯೆಗಳಿಂದ ಶ್ರೇಷ್ಠ ಹಾಗು ನೀಚರಾಗುತ್ತಾರೆ.  ಪ್ರತಿಯೊಂದು ನದಿಯು ಪ್ರತ್ಯೇಕ ಹೆಸರನ್ನು ಪಡೆದಿದ್ದರೂ ಸಾಗರವನ್ನು ಸೇರಿ ಒಂದಾಗುತ್ತದೆ.  ಹಾಗೆಯೇ ಯಾವುದೇ ವಿಧದ ವ್ಯಕ್ತಿ ಸಂಘಕ್ಕೆ ಸೇರಿದ ನಂತರ ಆತನು ಸಂಘದೊಡನೆ ಒಂದಾಗುತ್ತಾನೆ.

ಅಂಗುಲಿಮಾಲಾ (ಕರುಣಾಶಕ್ತಿಯ ಕಥಾನಕ)

ಅಂಗುಲಿಮಾಲಾ (ಕರುಣಾಶಕ್ತಿಯ ಕಥಾನಕ)

ಪಸನೇದಿ ರಾಜನ ಆಸ್ಥಾನದಲ್ಲಿದ್ದ ಪುರೋಹಿತನಿಗೆ ಮಗನು ಜನಿಸಿದನು. ಆತನಿಗೆ ಅಹಿಂಸಕನೆಂದು ಹೆಸರಿಡಲಾಯಿತು. ಆತನಿಗೆ ತಕ್ಷಶಿಲೆಗೆ ವಿದ್ಯಾಭ್ಯಾಸಕ್ಕೆ ಕಳುಹಿಸಲಾಯಿತು. ಅಹಿಂಸಕನು ತನ್ನ ಗುರುವಿಗೆ ಅತ್ಯಂತ ವಿಧೇಯನಾಗಿ ಹಾಗು ಅತ್ಯಂತ ಚಾಣಕ್ಷಮತಿಯಾಗಿದ್ದನು. ಆದ್ದರಿಂದ ಆತನು ತನ್ನ ಗುರುವಿಗೆ ಹಾಗು ಗುರುಪತ್ನಿಗೆ ಪ್ರಿಯನಾಗಿದ್ದನು. ಇದು ಬೇರೆ ವಿದ್ಯಾಥರ್ಿಗಳಿಗೆ ಮತ್ಸರವನ್ನು ಉಂಟುಮಾಡಿತು. ಆದ್ದರಿಂದ ಅವರು ಗುರುವಿನ ಹತ್ತಿರ ಹೋಗಿ ಅಹಿಂಸಕನ ವಿರುದ್ಧ ಆತನು ಗುರುಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಚಾಡಿ ಹೇಳಿದನು. ಮೊದಲು ಗುರುವು ಇದನ್ನು ನಂಬಲಿಲ್ಲ. ಆದರೆ ನಿರಂತರ ಈ ಬಗೆಯ ಚಾಡಿ ಕೇಳಿ ಇದು ನಿಜವೆನಿಸಿತು. ಆತನು ಅಹಿಂಸಕನ ಮೇಲೆ ಸೇಡು ತೀರಿಸುವುದಾಗಿ ಪ್ರತಿಜ್ಞೆ ಮಾಡಿಕೊಂಡನು. ಅಹಿಂಸಕನಿಗೆ ಕೊಲ್ಲುವುದು ಆತನಿಗೆ ಅಪಾಯವೆನಿಸಿತು.  ಆದರೆ ಆತನ ಕ್ರೋಧವು ಮುಗ್ಧ ಯುವಕ ಅಹಿಂಸಕನಿಗೆ ಸಾವಿರ ಜನರನ್ನು ಕೊಂದು ಅವರ ಬಲಗೈ ಹೆಬ್ಬರಳುಗಳನ್ನು ಗುರುದಕ್ಷಿಣೆಯಾಗಿ ನೀಡಬೇಕೆಂದು ಆಜ್ಞೆ ಮಾಡಿದನು. ಆದರೆ ಆ ಯುವಕ ಅಂಥದನ್ನು ಯೋಚಿಸಿಯು ಸಹಾ ಇರಲಿಲ್ಲ.  ಆದ್ದರಿಂದ ಆತನನ್ನು ಗುರುಕುಲದಿಂದ ಹೊರಹಾಕಿದರು. ನಂತರ ಅಹಿಂಸಕನು ತನ್ನ ಮನೆ ಕಡೆಗೆ ಹೊರಟನು.
ಯಾವಾಗ ಅಹಿಂಸಕನ ತಂದೆಯು ಈ ಎಲ್ಲಾ ಮೇಲು ವಿಷಯಗಳನ್ನು ತಿಳಿದನೋ ಆತನು ಅಹಿಂಸಕನ ಯಾವ ಮಾತನ್ನು ಕೇಳಲಿಲ್ಲ.  ಅದೇ ದಿನ ಮಳೆಯು ಧಾರಾಕಾರವಾಗಿ ಸುರಿಯುತ್ತಿತ್ತು.  ಆತನು ಅಹಿಂಸಕನಿಗೆ ಆ ಕ್ಷಣವೆ ಮನೆಯನ್ನು ಬಿಡುವಂತೆ ಆಜ್ಞೆ ಮಾಡಿದನು.  ಅಹಿಂಸಕನು ತನ್ನ ತಾಯಿಯ ಹತ್ತಿರ ಹೋಗಿ ಆಕೆಯ ಸಹಾಯವನ್ನು ಅಪೇಕ್ಷಿಸಿದನು.  ಆದರೆ ಆಕೆಯು ತನ್ನ ಪತಿಯ ಆಜ್ಞೆಯನ್ನು ಮೀರುವ ಹಾಗಿರಲಿಲ್ಲ.  ನಂತರ ಅಹಿಂಸಕನು ತನ್ನ ಭಾವಿ ಮಾವನ ಮನೆಗೆ ಹೋದನು. (ಹಿಂದಿನ ಕಾಲದಲ್ಲಿ ಚಿಕ್ಕಂದಿನಲ್ಲಿ ನಿಶ್ಚಿತಾರ್ಥ ಮಾಡಿ ಹಿರಿಯರಾದ ಮೇಲೆ ಮದುವೆ ಮಾಡುತ್ತಿದ್ದರು). ಆದರೆ ಆ ಕುಟುಂಬವು ಈತನು ವಿದ್ಯಾಭ್ಯಾಸದಿಂದ ಹೊರಹಾಕಲ್ಪಟ್ಟಿದ್ದನ್ನು ಅರಿತು ಅವರು ಸಹಾ ಆತನನ್ನು ಹೊರಹಾಕಿದರು.
ಆ ನಾಚಿಕೆ, ಕೋಪ, ಭಯ ಹಾಗು ನಿರಾಶೆ, ಶೋಕಗಳು ಆತನ ಮನಸ್ಸಿನ ನಿಯಂತ್ರಣವನ್ನು ತಪ್ಪಿಸಿದವು.  ಅವನ ದುಃಖತಪ್ತ ಮನವು ಗುರುವಿನ ದಕ್ಷಿಣೆಯನ್ನು ಪೂರ್ಣ ಮಾಡಲು ನಿರ್ಧರಿಸಿತು.  ಆತನು ಸಾವಿರ ಜನರನ್ನು ಕೊಂದು ಹೆಬ್ಬೆರಳನ್ನು ಸಂಗ್ರಹಿಸಲು ನಿರ್ಧರಿಸಿದನು. ಅವನು ಕೊಲ್ಲುವುದನ್ನು ಪ್ರಾರಂಭಿಸಿದನು. ಆತನು ಕೊಂದಂತೆಯೇ ಅವರ ಹೆಬ್ಬೆರಳುಗಳನ್ನು ಒಂದು ಮರಕ್ಕೆ ನೇತುಹಾಕುತ್ತಿದ್ದನು. ಆದರೆ ಅವು ಕಾಗೆ ಹದ್ದುಗಳಿಂದ ನಾಶವಾಗುತ್ತಿತ್ತು. ಆದ್ದರಿಂದ ಆತನು ಆ ಹೆಬ್ಬೆರಳುಗಳ ಹಾರವನ್ನು ಧರಿಸಿ ಅವುಗಳ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಲು ಆರಂಭಿಸಿದನು.
ಇದಾದ ನಂತರ ಆತನು ಅಂಗುಲಿಮಾಲಾ (ಹೆಬ್ಬರಳುಗಳ ಹಾರವುಳ್ಳವನು) ಎಂದು ಕುಖ್ಯಾತಿ ಪಡೆದನು. ಹಾಗು ಆ ರಾಜ್ಯದ ಭಾಗದಲ್ಲಿ ಆತನು ಅತಿ ಭಯಂಕರನಾದನು. ರಾಜನು ಈತನ ಎಲ್ಲಾ ಕಾರ್ಯಗಳನ್ನು ಕೇಳಿ ಆತನನ್ನ ಹಿಡಿದು ಹಾಕಬೇಕೆಂದು ನಿರ್ಧರಿಸಿನು. ಈ ವಿಷಯ ಅಂಗುಲಿಮಾಲಾನ ತಾಯಿ ಮಂತನಿಗೆ ತಿಳಿಯಿತು. ಆಕೆಯ ವಾತ್ಸಲ್ಯ ಆಕೆಗೆ ತನ್ನ ಮಗನನ್ನು ಉಳಿಸಬೇಕೆಂದು ಆಕೆ ಅರಣ್ಯಕ್ಕೆ ಬಂದಳು.  ಆ ಸಮಯದಲ್ಲಿ ಅಂಗುಲಿಮಾಲಾನ ಕತ್ತಿನಲ್ಲಿ 999 ಬೆರಳುಗಳು ಇದ್ದವು. ಒಂದೇ ಒಂದು ಹೆಬ್ಬೆರಳು ಆತನಲ್ಲಿ ಕಡಿಮೆ ಇತ್ತು.
ಬುದ್ಧ ಭಗವಾನರಿಗೆ ಈ ತಾಯಿಯು ತನ್ನ ಮಗನಿಗೆ ಪರಿವರ್ತನೆ ಗೊಳಿಸಿ ರಕ್ಷಿಸಿರೆಂದು ಹೊರಟಿರುವುದು ದಿವ್ಯದೃಷ್ಟಿಯ ಮೂಲಕ ತಿಳಿಯಿತು.  ಆದರೆ ಅಂಗುಲಿಮಾಲಾನಿಗೆ ಒಂದು ಬೆರಳಿನ ಕಾತುರ ಎಷ್ಟು ಇತ್ತು ಎಂದರೆ ಆತನು ತನ್ನ ತಾಯಿಯು ಅರಣ್ಯ ಮಾರ್ಗದಲ್ಲಿ ಬಂದರೂ ಸಹಾ ಆತನು ಆಕೆಯನ್ನು ಕೊಲ್ಲಲು ಸಿದ್ಧನಾಗಿದ್ದನು. ಹಾಗೇನಾದರೂ ಆದರೆ ಅಂಗುಲಿಮಾಲಾನು ತನ್ನ ಹೀನವಾದ ಕರ್ಮದಿಂದ ಅಪಾರ ಕಾಲದವರೆಗೆ ದುಃಖದ ಸ್ಥಿತಿ ಅನುಭವಿಸಬೇಕಾಗಿತ್ತು.  ಆದ್ದರಿಂದ ಬುದ್ಧ ಭಗವಾನರು ಸಕಾಲದಲ್ಲಿ ಅಪಾರ ಕರುಣೆಯಿಂದ ಕಾಡಿಗೆ ಹೊರಟರು.
ಅಂಗುಲಿಮಾಲಾನು ಸಹಾ ಎಷ್ಟೋ ಹಗಲು ರಾತ್ರಿಗಳನ್ನು ನಿದ್ದೆಗಳಿಲ್ಲದೆ ಕಳೆದಿದ್ದನು.  ಆತನು ಅತ್ಯಂತ ದಣಿದಿದ್ದನು, ಹಾಗು ತೀರ ನಿತ್ರಾಣನಾಗಿದ್ದನು.  ಆದರೂ ಆ ಸಮಯದಲ್ಲಿ ಆತನ ಸಾವಿರ ಬೆರಳಿಗಾಗಿ ಕೊನೆಯ ವ್ಯಕ್ತಿಯನ್ನು ಕೊಲ್ಲಲು ಅತಿ ಹಾತೊರೆಯುತ್ತಿದ್ದನು.
ಅವನು ಅರಣ್ಯದಲ್ಲಿ ಕಾಣುವ ಪ್ರಥಮ ವ್ಯಕ್ತಿಯನ್ನು ಕೊಲ್ಲಲು ನಿರ್ಧರಿಸಿದನು. ಆತನು ಒಂದು ಪರ್ವತದ ಎತ್ತರದಲ್ಲಿ ನಿಂತು ದಾರಿಯಲ್ಲಿ ಬರುತ್ತಿರುವ ಒಂದು ಸ್ರೀಯನ್ನು ಕಂಡನು. ಆತನು ತನ್ನ ಸಾವಿರದ ಬೆರಳನ್ನು ಪೂರ್ಣಗೊಳಿಸಲು ಆಕೆಯನ್ನು ಕೊಲ್ಲಲು ನಿರ್ಧರಿಸಿದನು.  ಆದರೆ ಆಕೆ ಹತ್ತಿರವಾದಂತೆ ನೋಡಿದಾಗ ಆಕೆ ಸಾಕ್ಷಾತ್ ತಾಯಿಯೇ ಆಗಿದ್ದಳು. ಅದೇ ಸಮಯದಲ್ಲಿ ಬುದ್ಧಭಗವಾನರು ಬರುತ್ತಿರುವುದು ಕಂಡನು. ಆಗ ಅಂಗುಲಿಮಾಲಾನು ತನ್ನ ತಾಯಿಯ ಬದಲು ಈ ಶ್ರಮಣರನ್ನು ಕೊಲ್ಲಲು ನಿರ್ಧರಿಸಿದನು. ಆತನು ತಥಾಗತರ ಬಳಿಗೆ ತನ್ನ ಖಡ್ಗವನ್ನು ಮೇಲೆತ್ತಿ ಬಂದನು. ಅಂದರೆ ಬುದ್ಧ ಭಗವಾನರು ತಮ್ಮ ಸಹಜ ಅನುಪಮ ಗಂಭೀರ ಮೈತ್ರಿಯ ನಡಿಗೆಯಲ್ಲಿ ಮುಂದೆ ಹೋಗುತ್ತಿದ್ದರು.  ಆದರೆ ಅಂಗುಲಿಮಾಲಾನಿಗೆ ಬುದ್ಧರನ್ನು ಹಿಡಿಯಲು ಸಾಧ್ಯವಾಗಲಿಲ್ಲ.  ಕೊನೆಗೆ ಆತನು ಓ ಬಿಕ್ಷು, ನಿಲ್ಲು ನಿಲ್ಲು ಎಂದು ಅರಚಿದನು. 
ಆಗ ಸಮ್ಮಸಂಬುದ್ಧರು ಹೀಗೆ ಉತ್ತರಿಸಿದರು ನಾನು ನಿಂತೆ ಇದ್ದೇನೆ ಅಂಗುಲಿಮಾಲಾ, ಆದರೆ ನೀನೇ ನಿಂತಿಲ್ಲ.
ಅಂಗುಲಿಮಾಲಾನಿಗೆ ಈ ಪದಗಲು ಅರ್ಥವಾಗಲಿಲ್ಲ.  ಆತನು ಬುದ್ಧರಿಗೆ ಕೇಳಿದನು ಓ ಭಿಕ್ಷು! ಏಕೆ ಹೀಗೆ ನೀನು ಹೇಳವೆ, ನೀನು ನಿಂತಿರುವೆ ನಾನು ನಿಂತಿಲ್ಲವೆಂದು.
ಬುದ್ಧಭಗವಾನರು ಉತ್ತರಿಸಿದರು ನಾನು ನಿಂತಿದ್ದೇನೆ, ಹೇಗೆಂದರೆ ನಾನು ಜೀವಿಗಳ ಹತ್ಯೆಯನ್ನು ಮಾಡುವುದನ್ನು ಎಂದೋ ತ್ಯಜಿಸಿದ್ದೇನೆ, ನಾನು ಜೀವಿಗಳ ಹಿಂಸೆಯನ್ನು ಬಿಟ್ಟಿಬಿಟ್ಟಿದ್ದೇನೆ ಹಾಗು ನಾನು ಮೈತ್ರಿ, ಕ್ಷಮೆ, ಸಹನೆ ಮತ್ತು ಜ್ಞಾನದಲ್ಲಿ ಪ್ರತಿಷ್ಠಿತವಾಗಿದ್ದೇನೆ.  ಆದರೆ ನೀನು ಕೊಲ್ಲುವುದನ್ನು ತ್ಯಜಿಸಿಲ್ಲ ಅಥವಾ ಪರಪೀಡನೆ ಬಿಟ್ಟಿಲ್ಲ ಮತ್ತು ನೀನು ಮೈತ್ರಿ ಸಹನೆ ಹಾಗು ಕ್ಷಮೆಯಲ್ಲಿ ಸ್ಥಾಪಿತನಾಗಿಲ್ಲ, ಆದ್ದರಿಂದ ನೀನು ಇನ್ನೂ ನಿಂತಿಲ್ಲ.
ಈ ಶಬ್ದಗಳು, ಈ ಪದಗಳು ಅಂಗುಲಿಮಾಲಾನಲ್ಲಿ ಸತ್ಯದ ಅರಿವನ್ನು ಉಂಟುಮಾಡಿತು. ಆತನಿಗೆ ಈ ಮಾತುಗಳು ಜ್ಞಾನಿಯ ಅಮೃತವಾಣಿ ಎನಿಸಿತು.  ಈ ಶ್ರಮಣನು ಅತ್ಯಂತ ಜ್ಞಾನಿ ಹಾಗು ಅತ್ಯಂತ ಧೈರ್ಯಶಾಲಿ, ಖಂಡಿತವಾಗಿ ಈತನೇ ನಾಯಕರೆಂದೂ ಹಾಗು ಇವರೇ ಬುದ್ಧಭಗವಾನ ರೆಂದು ಆತನಿಗೆ ಅರಿವಾಯಿತು. ಭಗವಾನರು ತನಗೆ ಬೆಳಕನ್ನುಂಟು ಮಾಡಲು ಸ್ವತಃ ಬಂದಿದ್ದಾರೆ ಎಂದೆನಿಸಿತು. ಹಾಗು ಆತನು ಜ್ಞಾನದ ಪರಿವರ್ತನೆಯ ಭಾವದಲ್ಲಿ ತನ್ನ ಆಯುಧಗಳನ್ನು ಎಸೆದನು ಮತ್ತು ಬುದ್ಧಭಗವಾನರಲ್ಲಿ ತನ್ನನ್ನು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಭಗವಾನರು ಭಿಕ್ಷುವನ್ನಾಗಿ ಮಾಡಿದರು.
ರಾಜ ಪಸನೇದಿ ಹಾಗು ಆತನ ಸೈನ್ಯವು ಅಂಗುಲಿಮಾಲಾನನ್ನು ಹಿಡಿಯಲು ಬಂದಿದ್ದರು. ಅವರು ಹಾದಿಯಲ್ಲಿ ಬುದ್ಧರನ್ನು ಕಾಣಲು ಬಂದಿರುವಾಗ ಬುದ್ಧ ವಿಹಾರದಲ್ಲಿ ಅಂಗುಲಿಮಾಲಾನನ್ನು ಕಂಡರು, ಅದೂ ಭಿಕ್ಷುವಿನ ರೂಪದಲ್ಲಿ. ಅವರಿಗೂ ಅಂಗೂಲಿಮಾಲಾನು ತನ್ನ ನೀಚತ್ವದ ಮಾರ್ಗವನ್ನು ವಜರ್ಿಸಿ ಸಂತತ್ವದ ಹಾದಿಯಲ್ಲಿರುವುದು ಅರಿವಾಯಿತು.  ರಾಜನು ಅಂಗುಲಿಮಾಲಾನನ್ನು ಏಕಾಂತವಾಗಿ, ಸ್ವತಂತ್ರವಾಗಿ ಬಿಡಲು ಒಪ್ಪಿದರು.  ಅಂಗುಲಿಮಾಲಾನು ವಿಹಾರದಲ್ಲಿ ಇರುವಾಗ ಆಳವಾದ ಧ್ಯಾನದಲ್ಲಿ ನಿರಂತರ ಪರಿಶ್ರಮ ಪಡುತ್ತಿದ್ದನು.
ಆದರೂ ಸಹಾ ಆತನಿಗೆ ಮನಶ್ಶಾಂತಿಯು ದೊರೆಯುತ್ತಿರಲಿಲ್ಲ.  ಏಕೆಂದರೆ ಆತನ ಏಕಾಂತತೆಯ ಧ್ಯಾನದಲ್ಲಿಯೂ ಸಹಾ ಆತನಿಗೆ ಹಿಂದಿನ ನೆನಪುಗಳು ಪಶ್ಚಾತ್ತಾಪವನ್ನುಂಟು ಮಾಡುತ್ತಿತ್ತು.  ಹಾಗು ಈತನಿಂದ ದುಭರ್ಾಗ್ಯಕ್ಕೀಡಾದವರ ಅಳಕು ಕೂಗುಗಳು ಆತನಿಗೆ ದುಃಖವನ್ನುಂಟು ಮಾಡುತ್ತಿತ್ತು.  ಆತನ ಕೆಟ್ಟಪಾಪದ ಕರ್ಮವು ಫಲ ಕೊಡಲು ಆರಂಭಿಸಿತು.  ಆತನು ಭಿಕ್ಷಾಟನೆಗೆ ಬೀದಿಯಲ್ಲಿ ಹೋಗುತ್ತಿದ್ದರೆ ಮೊಂಡಜನರ ಕಲ್ಲಿಗೆ, ಕೋಲುಗಳಿಗೆ ಆತನ ದೇಹವು ಸಿಕ್ಕಬೇಕಾಯಿತು. ಒಮ್ಮೆಯಂತು ತಲೆಗೆ ಏಟು ಬಿದ್ದು ಮುರಿದ ತಲೆಯೊಂದಿಗೆ ಜೇತವನದ ವಿಹಾರಕ್ಕೆ ರಕ್ತ ಸುರಿಸುತ್ತಾ, ಆಳವಾದ ಗಾಯಗಳೊಂದಿಗೆ ಬುದ್ಧಭಗವಾನರ ಬಳಿಗೆ ಬಂದನು. ಆಗ ಬುದ್ಧರು ಇಂತೆಂದರು : ಮಗು ಅಂಗುಲಿಮಾಲಾ, ನೀನು ಕೆಟ್ಟ ಕೃತ್ಯಗಳಿಂದ ಪಾರಾಗಿದ್ದೀಯೆ. ಸಹನೆ, ಕ್ಷಮೆಯುಳ್ಳವನಾಗಿರು. ಇದು ನೀನು ಮಾಡಿದ ಈ ಜನ್ಮದ ಪಾಪದ ಫಲವಾಗಿದೆ.  ಆದರೆ ನೀನು ಈ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಗಳ ಫಲ ನಿನಗೆ ದೊರೆಯದಂತೆ ನೀನಾಗಿದ್ದೀಯೆ.
ಒಂದು ದಿನ ಶ್ರಾವಸ್ಥಿಗೆ ಅಂಗುಲಿಮಾಲಾನು ಬೆಳಿಗ್ಗೆ ಭಿಕ್ಷಾಟನೆಗೆ ಹೋಗುತ್ತಿರುವಾಗ ಆತನಿಗೆ ಯಾರೋ ನೋವಿನಿಂದ ರೋಧಿಸುತ್ತಿರುವುದು ಕಂಡುಬಂತು. ಹತ್ತಿರ ಬಂದು ವೀಕ್ಷಿಸಿದಾಗ ಒಬ್ಬ ಗಭರ್ಿಣಿ ಹೆಣ್ಣು ತನ್ನ ಮಗುವನ್ನು ಹಡೆಯಲು ಆಗದೆ ಆಳವಾದ ನೋವುಗಳನ್ನು ಅಪಾರ ಕಷ್ಟವನ್ನು ಅನುಭವಿಸುತ್ತಿದ್ದಳು.  ಅಂಗುಲಿಮಾಲಾನಿಗೆ ಸರ್ವಜೀವಿಗಳೂ ದುಃಖದಲ್ಲಿರುತ್ತಾರೆ ಎಂದು ಜ್ಞಾನೋದಯವಾಯಿತು.  ಅವನು ಕರುಣೆಯಿಂದ ಅಲಂಕೃತನಾಗಿ ಈ ವಿಷಯವನ್ನು ಬುದ್ಧಭಗವಾನರಲ್ಲಿ ತಿಳಿಸಿದನು. ಭಗವಾನರು ಸತ್ಯಕ್ರಿಯೆಯ ಕೆಲವು ವಾಕ್ಯಗಳನ್ನು ತಿಳಿಸಿ ಅದನ್ನು ದುಃಖಿತ ಸ್ತ್ರೀಯ ಬಳಿ ಹೇಳೆಂದರು. (ಅದು ಮುಂದೆ ಈಗಲೂ ಅಂಗುಲಿಮಾಲಾ ಪರಿತ್ತಾ (ರಕ್ಷಣಾಸೂತ್ರ) ಎಂದು ಪ್ರಸಿದ್ಧಿಯಾಗಿದೆ). ಅಂಗುಲಿಮಾಲಾನು ಆ ಹೆಣ್ಣಿನ ಸಮೀಪದಲ್ಲಿ ಕುಳಿತರು. ಇಬ್ಬರಿಗೂ ನಡುವೆ ಒಂದು ಪರದೆಯಿತ್ತು.
ಅಂಗುಲಿಮಾಲಾನು ಆ ಸತ್ಯಕ್ರಿಯೆಯ ಆ ಶ್ರೇಷ್ಠ ನುಡಿಯನ್ನು ಕರುಣೆಯಿಂದ ಹೀಗೆ ನುಡಿದನು :
ಸೋದರಿ, ಎಂದಿನಿಂದ ನಾನು ಅರಹಂತನಾದೆನೋ, ಅಂದಿನಿಂದ ನಾನು ಪ್ರಜ್ಞಾಪೂರ್ವಕವಾಗಿ ಒಂದು ಜೀವಿಯನ್ನು ಸಹಾ ನಾಶಗೊಳಿಸಿಲ್ಲ.  ಈ ಸತ್ಯವಚನದಿಂದ ನೀನು ಸುಖ ಕ್ಷೇಮವಾಗಿರು ಮತ್ತು ಹುಟ್ಟುವ ನಿನ್ನ ಮಗುವು ಸಹಾ ಸುಖ ಕ್ಷೇಮವಾಗಿರಲಿ ತಕ್ಷಣ ಅದೇ ಸಮಯದಲ್ಲಿ ಆ ಗಭರ್ಿಣಿ ಸ್ತ್ರೀಯು ತನ್ನ ಮಗುವನ್ನು ಸುಖಪೂರ್ವಕವಾಗಿ ಹಡೆದಳು. ತಾಯಿ ಹಾಗು ಮಗುವು ಸುಖವಾಗಿ ಹಾಗು ಆರೋಗ್ಯದಿಂದ ಇದ್ದವು.  ಇಂದಿಗೂ ಸಹಾ ಈ ಪರಿತ್ತಾವನ್ನು ಕೆಲವು ಸನ್ನಿವೇಷಗಳಿಗೆ ಬಳಸುತ್ತಾರೆ.
ಅಂಗುಲಿಮಾಲಾನು ಏಕಾಂತಪ್ರಿಯನಾಗಿದ್ದನು. ಹಾಗು ಶ್ರಮ ಜೀವನದಲ್ಲಿ ಆನಂದಿಸುತ್ತಿದ್ದನು.  ಕಾಲಾನಂತರ ಆತನು ಶಾಂತಿಯುತವಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿದನು. ಆತನು ಜೀವನದಲ್ಲಿ ಅರ್ಹಂತ ನಾಗಿದ್ದನು.
ಕೆಲವು ಭಿಕ್ಷುಗಳು ಬುದ್ಧಭಗವಾನರ ಬಳಿಗೆ ಬಂದು ಅಂಗುಲಿಮಾಲಾ ಜನ್ಮವು ಮುಂದೆ ಎಲ್ಲಿ ಆಗಿರಬಹುದು ಎಂದು ಕೇಳಿದರು.  ಭಗವಾನರು ಅವರಿಗೆ ಈ ರೀತಿ ಉತ್ತರಿಸಿದರು : ನನ್ನ ಪುತ್ರ ಅಂಗುಲಿಮಾಲಾನು ಪರಿನಿಬ್ಬಾಣ ಪ್ರಾಪ್ತಿ ಮಾಡಿದ್ದಾನೆ.
ಅವರಿಗೆ ಇದನ್ನು ನಂಬಲು ಕಷ್ಟವಾಯಿತು. ಅವರು ಮತ್ತೆ ಕೇಳಿದರು ಭಗವಾನ್ ಇದು ಸಾಧ್ಯವೇ!? ನೂರಾರುಗಟ್ಟಲೆ ಹತ್ಯೆಗಳನ್ನು ಮಾಡಿದವನು ಪರಿನಿಬ್ಬಾಣ ಪ್ರಾಪ್ತಿಮಾಡಲು ಸಾಧ್ಯವೇ?
ಬುದ್ಧಭಗವಾನರು ಉತ್ತರಿಸಿದರು : ಭಿಕ್ಷುಗಳೇ, ಅಂಗುಲಿಮಾಲಾನು ಅನೇಕ ಅನೇಕ ಪಾಪ ಕೃತ್ಯಗಳನ್ನು ಮಾಡಿದನು, ಏಕೆಂದರೆ ಆತನಿಗೆ ಕುಶಲ ಮಿತ್ರರು ಇರಲಿಲ್ಲ. ಆದರೆ ನಂತರ ಆತನು ಕಲ್ಯಾಣ ಮಿತ್ರರನ್ನು ಶೋಧಿಸಿದ ಮತ್ತು ಅವರ ಸಹಾಯ ಹಾಗು ಶ್ರೇಷ್ಠ ಬೋಧನೆಯಿಂದ ಆತನು ಅತ್ಯಂತ ಜಾಗೃತನು, ಪರಿಶ್ರಮಿಯು, ಧಮ್ಮಪಾಲನೆಯುಳ್ಳವನು, ಧ್ಯಾನನಿರತನು ಮತ್ತು ದೃಢಶಾಲಿಯೂ ಆದನು. ಹೀಗೆ ಆತನು ಪಾಪ ಕರ್ಮಗಳನ್ನು ಪುಣ್ಯಕರ್ಮದಿಂದ ಜಯಿಸಿದನು ಮತ್ತು ಆತನ ಚಿತ್ತವು ಕಶ್ಮಲದಿಂದ ಪೂರ್ಣವಾಗಿ ಶುದ್ಧಿಯಾಯಿತು, ಮುಕ್ತಿಪಡೆಯಿತು.
ಬುದ್ಧಭಗವಾನರು ಅಂಗುಲಿಮಾಲಾನ ಬಗ್ಗೆ ಈ ಗಾಥೆ ಹೇಳಿದರು.
ಯಾರ ಪಾಪಕರ್ಮಗಳು ಕುಶಲ ಕರ್ಮದಿಂದ ದೂರವಾಗಿದೆಯೋ, ಆತನು ಈ ಜಗತ್ತಿನಲ್ಲಿ ಮೋಡದಿಂದ ಮುಕ್ತನಾದ ಪೂರ್ಣಚಂದ್ರನಂತೆ ಪ್ರಕಾಶಿಸುತ್ತಾನೆ.
ಮೈತ್ರಿ ಹಾಗು ಕರುಣೆಯ ಶಕ್ತಿಯು ಯಾವುದೇ ಕೆಟ್ಟದಕ್ಕಿಂತ ಬಲಯುತವಾಗಿದೆ ಮತ್ತು ಇವು ಜಾಗೃತಿಗೆ ಪೂರ್ಣಸ್ಥಿತಿಯಾಗಿದೆ. (17)

ಬ್ರಹ್ಮವಿಹಾರ(ಮೆತ್ತಾ, ಕರುಣಾ, ಮುದಿತಾ ಮತ್ತು ಉಪೇಖ್ಖಾ)

ಬ್ರಹ್ಮವಿಹಾರ(ಮೆತ್ತಾ, ಕರುಣಾ, ಮುದಿತಾ ಮತ್ತು ಉಪೇಖ್ಖಾ)



ಭಿಕ್ಷುಗಳೇ ನೀಚರಾದ ಡಕಾಯಿತರು ನಿಮ್ಮನ್ನು ಹಿಡಿದು ಎರಡುಕಡೆ ಹಿಡಿಯುಳ್ಳ ಗರಗಸದಿಂದ ನಿಮ್ಮ ಅಂಗಗಳನ್ನು ಬಿಡಿಬಿಡಿಯಾಗಿ ಕತ್ತರಿಸುತ್ತಿದ್ದರೂ ಆಗಲೂ ಸಹಾ ಯಾರ ಚಿತ್ತವೂ ದ್ವೇಷದಿಂದ ತುಂಬಿರುತ್ತದೆಯೋ ಆತನು ನನ್ನ ಬೋಧನೆಯನ್ನು ಅನುಸರಿಸುವವನು ಆಗಿರುವುದಿಲ್ಲ.  ಕೇಳಿ ಭಿಕ್ಷುಗಳೇ, ನೀವು ನಿಮ್ಮನ್ನು ಹೀಗೆ ಶಿಕ್ಷಣಿಸಿಕೊಳ್ಳಬೇಕು. ನಮ್ಮ ಮನಸ್ಸು ಕಲುಷಿತವಾಗುವುದಿಲ್ಲ ಮತ್ತು ಕಟು ವಾಕ್ಯವನ್ನು ನುಡಿಯಲಾರೆವು.  ಬದಲಾಗಿ ಕರುಣೆಯಿಂದ ಮೈತ್ರಿಯಿಂದ ನಾವು ವಾಸಿಸುತ್ತೇವೆ.  ಮೈತ್ರಿಯುತ ಮನದಿಂದ ದ್ವೇಷರಹಿತವಾಗಿ ಇರುತ್ತೇವೆ.  ನಾವು ಮೈತ್ರಿಯುತ ಮನವನ್ನು ಇಡೀ ವಿಶ್ವಕ್ಕೆ ಆಳವಾಗಿ, ವಿಶಾಲವಾಗಿ ಅಗಾಧವಾಗಿ ಹರಡಿ ಜೀವಿಸುತ್ತೇವೆ. ಕೋಪ, ದ್ವೇಷ, ಹಿಂಸರಹಿತರಾಗಿ ಜೀವಿಸುತ್ತೇವೆ. ಹೀಗೆ ನಿಮ್ಮನ್ನು ನೀವು ನಡೆಸಿಕೊಳ್ಳಬೇಕು ಭಿಕ್ಷುಗಳೇ.(1)
ಪ್ರೀತಿಯೆಂಬ ಅಭಿಪ್ರಾಯ ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಕೇಂದ್ರಿಕ ಅಂಶವಾಗಿದೆ.  ಆದರೂ ಅದರ ಅರ್ಥ ಒಂದು ಧರ್ಮದಲ್ಲಿ ಇರುವಂತೆ ಮತ್ತೊಂದು ಧರ್ಮದಲ್ಲಿ ಮತ್ತು ವಿಶೇಷವಾಗಿ ಪ್ರಾಪಂಚಿಕ ಪ್ರೀತಿಗಿಂತ ಭಿನ್ನವಾಗಿದೆ.  ಬೌದ್ಧ ಧರ್ಮದಲ್ಲಿ ಇದರ ಅಭಿಪ್ರಾಯ ನಾಲ್ಕು ಉದಾತ್ತ ಸ್ಥಿತಿಗಳಲ್ಲಿ ಒಂದು ಎಂದಾಗಿದೆ.  ಅದನ್ನು ಮೆತ್ತಾ (ಮೈತ್ರಿ), ಕರುಣಾ, ಮುದಿತ ಹಾಗೂ ಉಪೇಕ್ಖಾ ಎನ್ನುತ್ತಾರೆ.  ಬೇರೆಯವರು ಇದರ ಅರ್ಥವನ್ನು ವಿವರಿಸಲು ಪ್ರಯತ್ನಿಸಿದ್ದಾರೆ.  ಆದರೆ ಬೇರೆಯವರ ಬದಲು ನಾನು ಪಾಳಿಯ ಅನುವಾದಕ್ಕೆ ವಾಲುತ್ತೇನೆ.  ಬೌದ್ಧರ ಪ್ರೀತಿಯ ಬಗೆಗಿನ ಅರ್ಥವನ್ನು ಶ್ರದ್ಧಾಪೂರ್ವಕವಾಗಿ ವಿಷದಪಡಿಸುತ್ತೇನೆ.
ಮೆತ್ತಾ (ಮೈತ್ರಿ) ಎಂಬ ಪದವು ಮಿತ್ರ ಎಂಬ ಪದದ ಅಮೂರ್ತ ನಾಮಪದವಾಗಿದೆ.  ಆದರು ಇದನ್ನು ಕೇವಲ ಮಿತ್ರತ್ವ ಎನ್ನದೆ ಅದಕ್ಕಿಂತ ವಿಶಾಲವಾಗಿದೆ.  ತಾಯಿಯೊಬ್ಬಳು ತನ್ನ ಏಕ ಮಾತ್ರ ಮಗುವನ್ನು ತನ್ನ ಪ್ರಾಣಕ್ಕಿಂತಲೂ ಪ್ರೀತಿಸುವಂತಹದ್ದಾಗಿದೆ (ಮೆತ್ತಾ ಸುತ್ತದ ಪ್ರಕಾರ)
ತಾಯಿ ತನ್ನ ಮಗುವನ್ನು ರಕ್ಷಿಸುವ ಅದಕ್ಕಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಗಾಢವಾದ ಶ್ರೇಷ್ಠಭಾವದ ಪ್ರೀತಿಯನ್ನು ಎಲ್ಲ ಜೀವಿಗಳ ಬಗೆಗೂ (ಒಬ್ಬನು) ವಿಶಾಲಾನಂತವಾಗಿ ಪ್ರೀತಿಯ ಅಭಿವೃದ್ಧಿಯಲ್ಲಿರಲಿ. (2)
ಉದಾತ್ತ ಜೀವನವನ್ನು ನಡೆಸುವ ಶ್ರೇಷ್ಠ ಜೀವಿಗಳು ಮೆತ್ತಾದಲ್ಲಿ ಕರುಣೆಯಲ್ಲಿ, ಮುದಿತಾ ಮತ್ತು ಉಪೇಕ್ಷಾದಲ್ಲಿ ನೆಲೆಸುತ್ತಾರೆ.  ಆದ್ದರಿಂದ ಇದನ್ನು ಜೀವನದ ಶ್ರೇಷ್ಠ ಹಾದಿಗಳೆಂದು ಅಥವಾ ಬ್ರಹ್ಮ (ಶ್ರೇಷ್ಠ) ವಿಹಾರ (ನೆಲಸುವಂತಹುದು) ಎನ್ನುತ್ತಾರೆ.  ಮೈತ್ರಿಯು ಸರ್ವಜೀವಿಗಳಿಗೆ ವಿಶಾಲವಾಗಿ ಅಸೀಮವಾಗಿ ಅನಂತವಾಗಿ ಪ್ರಸರಿಸಬೇಕು.  ಕರುಣೆಯು ದುಃಖದಲ್ಲಿರುವ ನೋವು ಶೋಕದಿಂದ ಕೂಡಿರುವ ಎಲ್ಲಾ ಜೀವಿಗಳ ಬಗ್ಗೆ. ಮುದಿತವು ಸುಖ ಮತ್ತು ಉನ್ನತ ಸ್ಥಾನವನ್ನು ಹೊಂದಿರುವ ಅಥವಾ ಹೊಂದುತ್ತಿರುವವರ ಬಗ್ಗೆ. ಆನಂದಿಸುವ ಅಸೀಮ ಮನೋಭಾವವು ಮತ್ತು ಉಪೇಕ್ಷಾವು ಜೀವನದ ಅಸಮಾನ ಸ್ಥಿತಿಗಳಲ್ಲಿ ಪರಮಶಾಂತತೆಯನ್ನು ಹೊಂದಿರುವಂತಹ ಶ್ರೇಷ್ಠ ಮನೋಸ್ಥಿತಿಯಾಗಿದೆ. (3)
ಯಾವ ಒಬ್ಬ ವ್ಯಕ್ತಿಯು ಈ ಶ್ರೇಷ್ಠ ಸುಗುಣಗಳನ್ನು ಅಭಿವೃದ್ಧಿಗೊಳಿಸು ತ್ತಾನೋ ಆತನು ಹೀಗೆ ಕರೆಯಲ್ಪಡುತ್ತಾನೆ ಆಂತರಿಕ ಸ್ನಾನದಿಂದ ಪರಿಶುದ್ಧಿಯನ್ನು ಹೊಂದಿರುವವನು ಆತನು ಪರಜೀವಿಗಳ ಬಗ್ಗೆ ಅವರ ಸುಖ ಕ್ಷೇಮದ ಆಕಾಂಕ್ಷೆಯು (ಮೆತ್ತಾ), ಹಾಗು ಪರರ ದುಃಖ ವಿಮುಕ್ತಿಯ (ಕರುಣೆ) ಭಾವನೆಯುಳ್ಳ ಜಲದಿಂದ ಪರಿಶುದ್ಧಿಯಾಗುತ್ತಾನೆ. (4)
ಒಮ್ಮೆ ಬುದ್ಧಭಗವಾನರ ಅಗ್ರ ಆಪ್ತ ಶಿಷ್ಯರಾದ ಆನಂದರು ಹೀಗೆ ಹೇಳುತ್ತಾರೆ ಭಗವಾನರ ಅರ್ಧದಷ್ಟು ಬೋಧನೆಯು ಮೈತ್ರಿಯಲ್ಲಿ ಅಡಕವಾಗಿದೆ ಎಂದು. ಆಗ ಬುದ್ಧಭಗವಾನರು ತಿದ್ದುತ್ತಾರೆ : ಆನಂದ ಅರ್ಧದಷ್ಟು ಅಲ್ಲ, ಸಂಪೂರ್ಣ ಬೋಧಿಯು ಮೈತ್ರಿಯಲ್ಲಿ ಅಡಕವಾಗಿದೆ ಎಂದು ಹೇಳುತ್ತಾರೆ.
ಮೈತ್ರಿಯು ಬುದ್ಧ ಭಗವಾನರ ಮಧ್ಯಮ ಮಾರ್ಗದ ಸಾರವತ್ತಾದ ಭಾಗವಾಗಿದೆ.  ಇದು ಅಕುಶಲದ ಮೂಲವನ್ನು ಹುಡುಕಿ ಅದನ್ನು ನಿಶ್ಶೇಶವಾಗಿ ನಾಶ ಮಾಡುತ್ತದೆ.  ಅಕುಶಲದ ಮೂಲವಾದ ಲೋಭ, ದ್ವೇಷ ಮತ್ತು ಮೋಹವನ್ನು ನಾಶ ಮಾಡುತ್ತದೆ.  ಮೈತ್ರಿಯು ಶೀಲ, ಸಮಾಧಿ ಮತ್ತು ಪ್ರಜ್ಞಾ (ಹೇಗಿದೆಯೋ ಹಾಗೆ ಸತ್ಯವನ್ನು ಅರಿಯುವಿಕೆ)ಗಳ ಅಭಿವೃದ್ಧಿಯಲ್ಲಿ ಅದ್ಭುತವಾದ ಪಾತ್ರ ವಹಿಸುತ್ತದೆ.  ಹಾಗು ಅಂತಿಮ ಗುರಿಯಾದ ನಿಬ್ಬಾಣವನ್ನು ತಲುಪಿಸಲು ಸಹಾಯ ಮಾಡುತ್ತದೆ.
ಬುದ್ಧ ಭಗವಾನರು ಮೈತ್ರಿಯ (ಪರಹಿತ ಹಾಗು ಪರಸುಖ ಕಾಮನಾ) ಹಾಗು ಪ್ರೇಮದ (ವ್ಯಕ್ತಿಯಲ್ಲಿ ಆನಂದಿಸುವುದು) ವ್ಯತ್ಯಾಸವನ್ನು ತಿಳಿಸುತ್ತಾರೆ.  ಮೈತ್ರಿಯು ಯಾವ ಒಬ್ಬ ವ್ಯಕ್ತಿಯಲ್ಲಿ ಕೇಂದ್ರಿಕೃತವಾಗದೆ ಸರ್ವಜೀವಿಗಳ ಹಿತಸುಖಕ್ಕಾಗಿ ನಿಸ್ವಾರ್ಥದಿಂದ ಕೂಡಿರುವ ಒಂದು ಶ್ರೇಷ್ಠ ಮನಸ್ಥಿತಿಯಾಗಿದೆ.  ಆದರೆ ಪ್ರೇಮದಲ್ಲಿ ವ್ಯಕ್ತಿಗಳಲ್ಲಿ ಕೇಂದ್ರಿಕೃತವಾಗುವ ಮತ್ತು ಸ್ವಾರ್ಥದಿಂದ ಕೂಡಿರುವ ಪ್ರೀತಿ (ಆನಂದ) ಆಗಿದೆ.  ಕೇವಲ ವಾತ್ಸಲ್ಯವಷ್ಟೆ ಅಲ್ಲ, ಸಂಸರ್ಗ ಹಾಗು ಸ್ನೇಹವು ಸಹಾ ಅಂಟಿಕೊಳ್ಳುವಿಕೆಯಿಂದ ಕೂಡಿರುತ್ತದೆ.  ಬೌದ್ಧರ ಪ್ರಸಿದ್ಧವಾದ ಧಮ್ಮಪದದಲ್ಲಿ ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ. 
ಪ್ರೇಮದಿಂದ ದುಃಖ ಉದ್ಭವವಾಗುತ್ತದೆ. ಪ್ರೇಮದಿಂದ ಭಯವು ಉತ್ಪನ್ನವಾಗುತ್ತದೆ.  ಯಾರೂ ಪ್ರೇಮದಿಂದ ಪೂರ್ಣವಾಗಿ ಮುಕ್ತರೋ ಅವರಿಗೆ ಶೋಕವು ಇಲ್ಲ, ಭಯವು ಇಲ್ಲ (5)
ಬುದ್ಧಭಗವಾನರು ತಮ್ಮ ಭಿಕ್ಷುಗಳಿಗೆ ಹೀಗೆ ಬೋಧಿಸಿದ್ದಾರೆ ಭಿಕ್ಷುಗಳೇ, ಬಹುಜನಗಳ ಹಿತಕ್ಕಾಗಿ, ಬಹುಜನಗಳ ಸುಖಕ್ಕಾಗಿ, ಲೋಕಾನುಕಂಪೆಯಿಂದ ದೇವತೆಗಳ ಹಾಗು ಮಾನವರ ಸುಖಕ್ಕಾಗಿ ಹೋಗಿ, ಸಂಚರಿಸಿ. (6)
ಮೈತ್ರಿಯ ಪ್ರಧಾನ ಲಕ್ಷಣಗಳಲ್ಲಿ ಯಾರೊಬ್ಬರಿಗೆ ಅಂಟದೆ ಇರುವುದು ಒಂದಾಗಿದೆ. ಇದು ನಿಸ್ವಾರ್ಥ ಮಿತ್ರತ್ವವಾಗಿದೆ (ಅಂದರೆ ಪ್ರೇಮರಹಿತ ವಾತ್ಸಲ್ಯರಹಿತ) ಮೈತ್ರಿಯು ಸ್ವಾರ್ಥದಿಂದ ಪೂರ್ಣವಾಗಿ ಪರಿಶುದ್ಧವಾಗಿದೆ. 
ಬುದ್ಧ ಭಗವಾನರ ಅಪಾರ ಅನಂತ ಮೈತ್ರಿಯು ಕೇವಲ ಮಾನವರಿಗಾಗಿಯೇ ಸೀಮಿತವಾಗಿಲ್ಲ.  ಅದು ಎಲ್ಲಾ ಜೀವಿಗಳಿಗೆ ಸಮವಾಗಿ ಪ್ರಸರಿಸುತ್ತದೆ.  ಬೌದ್ಧರ ಮೈತ್ರಿ ಸುತ್ತದಲ್ಲಿ ಹೀಗಿದೆ :
ಎಲ್ಲಾ ಜೀವಿಗಳು ಸುಖವಾಗಿರಲಿ ಹಾಗು ಕ್ಷೇಮವಾಗಿರಲಿ.
ಎಲ್ಲಾ ಜೀವಿಗಳು ಸುಖವಾದ ಹಾಗು ಆರೋಗ್ಯ (ಶಾಂತತೆ)ವಾದ ಮನವನ್ನು ಹೊಂದಲಿ.  ಎಲ್ಲಾ ಜೀವಿಗಳು ಅವು ಹೇಗೆ ಇರಲಿ, ಬಲಹೀನವಾಗಿಯೆ ಇರಲಿ, ಬಲಿಷ್ಠವಾಗಿಯೆ ಇರಲಿ, ಉದ್ದವಾಗಿಯೆ ಇರಲಿ, ಮಧ್ಯಮವಾಗಿಯೆ ಇರಲಿ ಅಥವಾ ಗಿಡ್ಡದಾಗಿಯೆ ಇರಲಿ, ಚಿಕ್ಕದಾಗಿಯೆ ಇರಲಿ ಅಥವಾ ಅಗಲವಾಗಿಯೆ ಇರಲಿ, ಅವು ಸುಖವಾಗಿರಲಿ.
ಕಣ್ಣಿಗೆ ಗೋಚರವಾಗಿಯೆ ಇರಲಿ ಅಥವಾ ಅದೃಷ್ಯವಾಗಿಯೆ ಇರಲಿ, ಅವು ಸುಖವಾಗಿರಲಿ. ಯಾವ ಜೀವಿಗಳು ಹತ್ತಿರದಲ್ಲಿದೆಯೋ ಅಥವಾ ದೂರದಲ್ಲಿದೆಯೋ, ಯಾವುದು ಜನ್ಮ ತಾಳಿದೆಯೋ ಮತ್ತು ಯಾವುದು ಮುಂದೆ ಜನ್ಮತಾಳುವ ಸ್ಥಿತಿಯಲ್ಲಿವೆಯೋ. ಅವೆಲ್ಲಾ ಜೀವಿಗಳೂ ಸುಖಿಯಾಗಿ ಉದಾತ್ತ ಶಾಂತವಾದ ಆರೋಗ್ಯ ಮನದಿಂದ ತುಂಬಿರಲಿ. (7)
ಬುದ್ಧಭಗವಾನರು ಸರ್ವಜೀವಿಗಳ ದುಃಖ ವಿಮುಕ್ತಿಗೆ ತಮ್ಮ ಸಿಂಹಾಸನ, ಕುಟುಂಬ ಹಾಗು ಸರ್ವಸುಖ ಭೋಗಗಳನ್ನು ತ್ಯಾಗ ಮಾಡಿದರು ಮತ್ತು ದುಃಖವಿಮುಕ್ತಿಯ ಮಾರ್ಗ ಕಂಡುಹಿಡಿಯಲು ಅಪಾರ ಪರಿಶ್ರಮಪಟ್ಟರು.  ಅವರು ಸಮ್ಮ ಸಂಬೋಧಿಯನ್ನು ಪ್ರಾಪ್ತಿ ಮಾಡಲು ಅಸಂಖ್ಯಾತ ಅಗಣಿತ ಜನ್ಮಗಳಲ್ಲಿ ಮಹಾ ಸಂಘರ್ಷ ಮಾಡಿದ್ದಾರೆ.
ಬೌದ್ಧ ಗ್ರಂಥಗಳಲ್ಲಿ ಹೀಗಿದೆ :
ಯಾರಿಗೆ ಅಂಗಾಂಗಗಳು ಪ್ರಿಯವೋ ಅವರು ಲೌಕಿಕ ಸಂಪತ್ತುಗಳನ್ನು ದಾನ ಮಾಡಲಿ, ಯಾರಿಗೆ ಪ್ರಾಣವು ಪ್ರಿಯವೋ ಅವರು ಅಂಗಗಳನ್ನು ದಾನ ಮಾಡಲಿ, ಆದರೆ ಐಶ್ವರ್ಯ, ದೇಹಾಂಗಗಳು, ಪ್ರಾಣ ಹಾಗು ಸರ್ವಸ್ವವನ್ನು ಸಮರ್ಪಣೆ ಮಾಡುವುದೇ ಶ್ರೇಷ್ಠವಾದದ್ದು ಹಾಗು ಏಕೈಕ ಸ್ಮರಣಿಯ ವಾದದ್ದು. (8)
ಬೋಧಿಸತ್ವದ ಜೀವನ ಚರಿತ್ರೆಗಳಾದ ಜಾತಕದಲ್ಲಿ ಇವನ್ನೆಲ್ಲಾ ವಿವರಿಸಿದ್ದಾರೆ. ಉದಾಹರಣೆಗೆ
ಕ್ಷಾಂತಿವಾದಿ ಎಂಬ ತಪಸ್ವಿಯಿದ್ದನು. ಅವನು ಬನಾರಸ್ನಲ್ಲಿ ಒಮ್ಮೆ ಭೇಟಿ ಕೊಟ್ಟು ಅಲ್ಲೇ ಉದ್ಯಾನವನದಲ್ಲಿ ತಂಗಿದ್ದನು. ಬನಾರಸ್ನ ಕ್ರೂರಿ ದುಶ್ಶೀಲ ರಾಜನು ಶೀಲಕ್ಕೆ, ಧಾಮರ್ಿಕ ಜೀವನಕ್ಕೆ ಮೌಲ್ಯ ಕೊಡದವ ನಾಗಿದ್ದನು.  ಅವನು ಕ್ಷಾಂತಿವಾದಿಯನ್ನು ಹೀಗೆ ಕೇಳಿದನು ಓ ತಾಪಸಿಯೆ, ನೀನು ಎಂತಹ ಧರ್ಮವನ್ನು ಬೋಧಿಸುವೆ?
ನಾನು ಮೈತ್ರಿಯುತ ಸಹನೆಯನ್ನು (ಕ್ಷಾಂತಿ) ಅದರ ಮೌಲ್ಯವನ್ನು ಬೋಧಿಸುವೆ ಎಂದು ತಪಸ್ವಿಯು ಹೇಳಿದನು. ಆಗ ಆ ರಾಜನು ಸಹನೆಯನ್ನು ಪಾಲಿಸಲು ಅಸಾಧ್ಯವೆಂದು ಸಾಧಿಸಲು ಹೋದನು. ಆತನು ಮುಳ್ಳಿನ ಚಾಟೆಯಿಂದ ಹೊಡೆಸಿದನು. ಆದರೆ ಮುನಿಯು ಮುನಿಯಲಿಲ್ಲ, ನಂತರ ಮುನಿಯ ಕೈ ಹಾಗು ಕಾಲನ್ನು ಕತ್ತರಿಸಿದನು, ಹಾಗಾದರೂ ಸಹಾ ಆ ಸಹನಾಮೂತರ್ಿ ತಪಸ್ವಿಯು ಲವಲೇಶವೂ ಕುಪಿತನಾಗಲಿಲ್ಲ.
ಮತ್ತೊಂದು ಕಥೆಯಲ್ಲಿ ಹೀಗಿದೆ :
ಬುದ್ಧಭಗವಾನರು ಹಿಂದಿನ ಜನ್ಮದಲ್ಲಿ ಬೋಧಿಸತ್ವರಾಗಿದ್ದಾಗ ಪ್ರತಾಪನೆಂಬ ಕ್ರೂರಿ ರಾಜನ ಮಗನಾಗಿ ಹುಟ್ಟಿದರು. ಆ ಮಗುವು ಅದ್ಭುತವಾಗಿತ್ತು.  ಒಂದುದಿನ ರಾಜನು ಅಂತಃಪುರದಲ್ಲಿ ಬರುವಾಗ ರಾಣಿಯು ಮಗುವಿನಲ್ಲಿ ಆಟವಾಡುತ್ತಿದ್ದಳು. ಆಗ ಆಕೆಯು ರಾಜನನ್ನು ಗಮನಿಸದ ಕಾರಣ ಮೇಲಕ್ಕೆ ಏಳಲಿಲ್ಲ. ಅಷ್ಟಕ್ಕೇ ಆ ರಾಜನಿಗೆ ಅತ್ಯುಗ್ರ ಕ್ರೋಧವುಂಟಾಯಿತು. ಆ ಮಹಾ ಕ್ರೂರಿ ಕ್ರೋಧದಿಂದ ಸೇವಕರಿಗೆ ಆ ಮಗುವಿನ ಕೈಕಾಲು ಹಾಗು ತಲೆಯನ್ನು ಕತ್ತರಿಸಲು ಆಜ್ಞೆ ಮಾಡಿದರು. ಆದರೆ ಆ ಕೂಸು ಮಗು ಕೋಪಗೊಳ್ಳಲಿಲ್ಲ, ಕುಗ್ಗಲಿಲ್ಲ. ಭಯ ಶೋಕದಿಂದಲೂ ಕೂಡಿರಲಿಲ್ಲ. ಅದು ತಂದೆಯ ಮೇಲೆ ಕಟುಕನ ಮೇಲೆ ಹಾಗು ರೋಧಿಸುತ್ತಿರುವ ತಾಯಿಯ ಮೇಲೆ ಮತ್ತ ಸ್ವತಃ ತನ್ನ ಮೇಲೆ ಸಮಾನವಾದ ಮೈತ್ರಿ ಭಾವನೆಯನ್ನು ಹೊಂದಿತ್ತು. ಅದು ಸರ್ವರ ಸುಖವನ್ನು ಬಯಸುತ್ತಿತ್ತು. (10)
ಸಂಯುಕ್ತ ನಿಕಾಯದಲ್ಲಿ ಬುದ್ಧಭಗವಾನರು ಹೀಗೆ ಹೇಳಿದ್ದಾರೆ ಧ್ಯಾನಿಯು ಎಂದೂ ಬೋಧಿಸತ್ವರ ಹಿಂದಿನ ಶೀಲ ಮೈತ್ರಿಯ ಬಗ್ಗೆ ಧ್ಯಾನಿಸುವನೋ ಆಗ ಆತನ ಕೋಪವು ತಗ್ಗಿಹೋಗುತ್ತದೆ. ಆಗಲೂ ಆತನ ಮನವು ಪರರ ಮೇಲೆ ಕುದಿಯುತ್ತಿದ್ದರೆ ಆತನು ಬುದ್ಧಭಗವಾನರ ಈ ಅನುಶಾಸನವನ್ನು ಧ್ಯಾನಿಸಲಿ ಭಿಕ್ಷುಗಳೇ, ಜೀವಿಗಳನ್ನು ಹುಡುಕುವುದು ಸುಲಭವಲ್ಲ. ಏಕೆಂದರೆ ಅವರು ಹಿಂದಿನ ಜನ್ಮದಲ್ಲಿ ನಿಮ್ಮ ತಾಯಿ, ತಂದೆ, ನಿಮ್ಮ ಸೋದರ, ನಿಮ್ಮ ಸೋದರಿ ಅಥವಾ ನಿಮ್ಮ ಮಗ ಅಥವಾ ಮಗಳು ಆಗಿರಬಹುದು. (11)
ಮತ್ತಷ್ಟು ವಿವರವಾಗಿ ಪ್ರಿಯದಸ್ಸ ಥೇರರವರು ಬುದ್ಧರ ಸನಾತನ ಮಾರ್ಗದಲ್ಲಿ (ಃಣಜಜಚಿ ಂಟಿಛಿಜಟಿಣ ಠಿಚಿಣ) ಹೀಗೆ ಬರೆದಿದ್ದಾರೆ ಮೈತ್ರಿಯು ಕ್ರಿಯಾತ್ಮಕ ಶಕ್ತಿ, ಪ್ರತಿಯೊಂದು ಕ್ರಿಯೆಯು ಮೈತ್ರಿಯ ಸಹಿತವಾಗಿದ್ದರೆ ಅದು ಕಲ್ಮಶರಹಿತ ಮನದಿಂದ ಮಾಡಿರುತ್ತಾರೆ.  ಅವರು ಪರರಿಗೆ ಸಕಾಲಿಕ ಸಹಾಯ ಮಾಡುತ್ತಾರೆ, ಪರರನ್ನು ಸ್ಫೂತರ್ಿಗೊಳಿಸುತ್ತಾನೆ. ಬೇರೆಯವರ ಮಾರ್ಗಗಳನ್ನು ಸುಲಭಗೊಳಿಸುತ್ತಾನೆ. ದುಃಖಗಳನ್ನು ನಿವಾರಣೆಗೊಳಿಸುವ ಹಾಗು ಪರಮ ಸುಖವನ್ನು ಪ್ರಾಪ್ತಿ ಮಾಡುವಂತಹದ್ದಾಗಿದೆ.
ಮೈತ್ರಿಯು ಅಭಿವೃದ್ಧಿಗೊಳಿಸುವ ಮಾರ್ಗ ಹೇಗೆಂದರೆ ದ್ವೇಷದಿಂದ ಆಗುವ ಅನರ್ಥ ಅಪಾಯ ಅರಿಯುವುದು.  ಹಾಗು ಅದ್ವೇಷದ ಅರ್ಥ ಪ್ರಯೋಜನವನ್ನು ಹಾಗೆಯೇ ಯತಾರ್ಥವಾಗಿ ಅರಿತು ಯಾರಿಗೂ ಅಸಹ್ಯ ಪಡದೆ ಇರುವುದು. ಅಸಹ್ಯ ಪಡುವುದು ದ್ವೇಷಿಸುವುದು ಮೂರ್ಖರ ಮಾರ್ಗವಾಗಿದೆ. ಅದು ನೀಚವೇದನೆ, ಅದು ಮತ್ತಷ್ಟು ಕತ್ತಲೆ ಪ್ರಸರಿಸುತ್ತದೆ.  ದ್ವೇಷವು ಸಮ್ಯಕ್ ದೃಷ್ಟಿ (ಅರಿವು)ಗೆ ಅಡ್ಡಿಯಾಗಿದೆ.  ದ್ವೇಷವು ಬಂಧನ ಗೊಳಿಸುತ್ತದೆ, ಮೈತ್ರಿಯು ಬಿಡುಗಡೆಗೊಳಿಸುತ್ತದೆ. ದ್ವೇಷವು ಶತೃತ್ವ ಬೆಳೆಸುತ್ತದೆ, ಮೈತ್ರಿಯು ಯೋಗ್ಯ ಆಯ್ಕೆ ಮಾಡುತ್ತದೆ.  ದ್ವೇಷವು ಪಶ್ಚಾತ್ತಾಪ ಉಂಟು ಮಾಡುತ್ತದೆ. ಮೈತ್ರಿಯು ಶಾಂತಿ ಕೊಡುತ್ತದೆ. ದ್ವೇಷವು ಉದ್ರೇಕಿಸುತ್ತದೆ, ಮೈತ್ರಿಯು ಪ್ರಶಾಂತಗೊಳಿಸುತ್ತದೆ, ಅಚಲಗೊಳಿಸುತ್ತದೆ, ಸ್ತಬ್ದಗೊಳಿಸುತ್ತದೆ. ದ್ವೇಷವು ಬೇರ್ಪಡಿಸುತ್ತದೆ, ಮೈತ್ರಿಯು ಒಂದುಗೂಡಿಸುತ್ತದೆ. ದ್ವೇಷವು ಒರಟಾಗಿಸುತ್ತದೆ, ಮೈತ್ರಿಯು ಮೃದುಗೊಳಿಸುತ್ತದೆ. ದ್ವೇಷವು ಕಷ್ಟ ಕೊಡುತ್ತದೆ. ಮೈತ್ರಿಯು ಕಾಪಾಡುತ್ತದೆ ಮತ್ತು ಹೀಗೆಯೇ ದ್ವೇಷದ ದುಷ್ಪರಿಣಾಮಗಳನ್ನು ಅರಿತು ಮೈತ್ರಿಯ ಮಹಾ ಉಪಕಾರ ಅರಿತು ಒಬ್ಬನು ಮೈತ್ರಿಯನ್ನು ಅಭಿವೃದ್ಧಿಗೊಳಿಸಲಿ. (12)
ಮೈತ್ರಿ ಮತ್ತು ಕರುಣೆಯು ಬೌದ್ಧ ಧರ್ಮದಲ್ಲಿ ಆಳವಾಗಿ ಸ್ಥಾಪಿಸಲ್ಪಟ್ಟಿದೆ. ಕರುಣೆಗೂ ಮೈತ್ರಿಗೂ ಬಹಳ ಸಾಮಿಪ್ಯವಿದೆ. ಕರುಣೆಯು ಕೇವಲ ಅವಶ್ಯಕ ವಸ್ತುಗಳನ್ನು ಕೊಡುವಷ್ಟು ಮಾತ್ರವಲ್ಲ, ಅದೊಂದು ಪರಿಶುದ್ಧ ಕ್ರಿಯೆಯ ಭಾವ, ನಿಸ್ವಾರ್ಥ, ನಿರಹಂಕಾರಿಯಿಂದ ಕೂಡಿರುವಂತಹುದು ಹಾಗು ಮೌಢ್ಯರಹಿತವಾದುದು. ಉದಾಹರಣೆಗೆ ಒಮ್ಮೆ ಬುದ್ಧ ಭಗವಾನರು ಒಬ್ಬ ರೋಗಿಯನ್ನು ಮೈತ್ರಿ ಹಾಗು ಕರುಣೆಯಿಂದ ಸೇವೆ ಮಾಡುತ್ತಾರೆ.
ಇದೊಂದು ಪರಮ ಸುಂದರ ಮಾರ್ಗ ಧಮ್ಮಪದದಲ್ಲಿ ಅದರ ಬಗ್ಗೆ ಹೃದಯಸ್ಪಶರ್ಿ ಘಟನೆಯಾಗಿದೆ.
ಓರ್ವ ಯುವಕನು ಶ್ರಾವಸ್ಥೆಯ ವಾಸಿಯವನಾಗಿದ್ದನು. ಆತನು ಬುದ್ಧರ ಬೋಧನೆ ಕೇಳಿ ಶ್ರದ್ಧೆಯುಂಟಾಗಿ ಸಂಘ ಸೇರಿದನು.  ಆತನಿಗೆ ಎಲ್ಲರೂ ತಿಸ್ಸನೆಂದು ಕರೆಯುತ್ತಿದ್ದರು. ಕೆಲಕಾಲದ ನಂತರ ಆತನು ರೋಗಿಯಾದನು. ಮೊದಲು ಸಣ್ಣ ಗುಳ್ಳೆಗಳು ಇಡೀ ದೇಹದಲ್ಲಿ ತುಂಬಿಹೋದವು, ಕ್ರಮೇಣ ಅವು ದೊಡ್ಡದಾಗುತ್ತಾ ಒಡೆದುಹೋಯಿತು.  ಒಡೆದುಹೋದ ಹುಣ್ಣುಗಳಿಂದ ಅವನ ಶರೀರ ತುಂಬಿತು. ಆತನ ಸಹ ಭಿಕ್ಷುಗಳು ಆತನನ್ನು ನೋಡಿಕೊಳ್ಳಲು ಅಸಹ್ಯಪಟ್ಟುಕೊಂಡರು. ಹಾಗು ಆತನನ್ನು ತ್ಯಜಿಸಿದರು. ಭಗವಾನರಿಗೆ ಇದು ತಿಳಿಯಿತು, ಅವರು ನೀರನ್ನು ತೆಗೆದುಕೊಂಡು ಕಾಯಿಸಿದರು. ನಂತರ ತಥಾಗತರು ತಿಸ್ಸನ ಬಳಿಗೆ ಬಂದರು.  ಹಾಗೂ ತಿಸ್ಸನ ಹಾಸಿಗೆಯನ್ನು ಹಿಡಿದುಕೊಂಡರು. ಭಿಕ್ಷುಗಳಿಗೆ ಭಗವಾನರ ಉದ್ದೇಶ ಅರಿವಾಯಿತು. ಅವರು ಆ ರೋಗಿಯನ್ನು ಹಾಸಿಗೆ ಸಮೇತ ಒಲೆಯ ಬಳಿ ತಂದರು. ಆಗ ಭಗವಾನರು ತಿಸ್ಸನ ಉಡುಪುಗಳನ್ನು ಒಗೆದು ಒಣಗಿಸುವಂತೆ ಭಿಕ್ಷುಗಳಲ್ಲಿ ಪರಿವರ್ತನೆ ಮಾಡಿದರು. ನಂತರ ಸ್ವತಃ ಭಗವಾನ್ ಬುದ್ಧರೇ ಶ್ರೇಷ್ಠ ರೀತಿಯಲ್ಲಿ ತಿಸ್ಸನ ಹುಣ್ಣಿನ ದೇಹವನ್ನು ತೊಳೆದು ಶುದ್ಧಿಗೊಳಿಸಿದರು. ಆಗ ತಿಸ್ಸ ಪುನಃ ಚೈತನ್ಯ ಚಿಲುಮೆಯಂತಾದನು.  ಆತನು ಹಾಸಿಗೆಯಲ್ಲಿ ಶಾಂತತೆಯಿಂದ ಏಕಾಗ್ರಚಿತ್ತವನ್ನು ಹೊಂದಿದನು. ಭಗವಾನರು ಆ ಸಾರ್ಥಕ ಕಾಲ ಅರಿತು ಧಮ್ಮವನ್ನು ಬೋಧಿಸಿದರು. ಆ ಅಮರತ್ವದ ಧಾರೆಯನ್ನು ಪೂರ್ಣಮನದಿಂದ ಅರಿತನು. ಹಾಗು ಬೋಧನೆಯ ಅಂತ್ಯದಲ್ಲಿ ಸಂತತ್ವದ ಪರಮಗುರಿಯಾದ ಅರ್ಹಂತತ್ವವನ್ನು ಪ್ರಾಪ್ತಿಮಾಡಿ ನಿಬ್ಬಾಣವನ್ನು ಪಡೆದನು.  ಅನಂತರ ಅಲ್ಪಕಾಲದಲ್ಲಿಯೆ ಯೋಗ್ಯರೀತಿಯ ಆಚರಣೆಗಳಿಂದ ಆತನ ಅಂತಿನ ಪೂಜೆ ಮಾಡಿ ಸ್ತೂಪವನ್ನು ಕಟ್ಟಿದರು.
ಕರುಣೆ ಹಾಗು ಇತರ ದಿವ್ಯಸ್ಥಿತಿಗಳು ಸಮಾನವಾಗಿ ಎಲ್ಲಾ ಬೌದ್ಧ ಧರ್ಮದ ಶಾಖೆಗಳಲ್ಲಿ ಪ್ರಧಾನ ಅಂಶಗಳಾಗಿವೆ.  ಮುಂದಿನ ಗಾಥೆಗಳು (ಚಜಟಿ ಟಿ ಣಜ ಂಡಿಣ ಠಜಿ ಜಟಠಿಟಿರ) ಡಿ. ಬ್ರಾಂಡನ್ರವರ ಜೆನ್ ಇನ್ ದಿ ಆಟರ್್ ಆಫ್ ಹೆಲ್ಪಿಂಗ್ ಮತ್ತು ಬೇರೆ ಶಾಖೆಗಳಲ್ಲಿನ ಪ್ರಧಾನ ವಾಕ್ಯಗಳಾಗಿವೆ.
(ಪ್ರಾಪಂಚಿಕ) ಸಾಧಿಸುವುದಕ್ಕೆ ಕರುಣೆ ಏನೂ ಮಾಡುವುದಿಲ್ಲ. ಕರುಣೆಯು ಅತ್ಯಂತ ಸುಂದರವಾದುದು ಹಾಗು ಮಹಾ ಉದಾರತೆ ಯುಳ್ಳದ್ದು. ಯಾವಾಗ ಒಬ್ಬನು ಪರಿಶುದ್ಧ ಕರುಣೆಯನ್ನು ಅಭಿವೃದ್ಧಿ ಮಾಡುವನೋ, ಆಗ ಆತನಿಗೆ ದಾನಕ್ಕೆ ಪಾತ್ರರೂ ತಾನೋ ಅಥವಾ ಪರರೋ ಎಂಬುದು ಅಗೋಚರವಾಗುತ್ತದೆ. ಏಕೆಂದರೆ ಮೈತ್ರಿಯು ಸರ್ವರಿಗೂ ಮೀಸಲಾಗಿರುವುದು ಅದು ಪಕ್ಷಾತೀತ, ತಾನು ತನ್ನದರ ರಹಿತ ಹಾಗು ಪರರಿಗೆ ಎಂಬುವರ ಅತೀತ. ಅದು ಸರ್ವರಿಗೂ ಅದು ಆನಂದಿಂದ ತುಂಬಿರುತ್ತದೆ. ಸ್ವಯಂಪ್ರೇರಿತ ಪ್ರತ್ಯಕ್ಷ ಆನಂದ, ನಂಬಿಕೆಯ ದೃಷ್ಟಿಯಲ್ಲಿ ನಿತ್ಯನಿರಂತರ ಆನಂದ. ಆನಂದದ ಅರಿವಿನಲ್ಲಿ ಪರಮ ಮಹತ್ವದ ಐಶ್ವರ್ಯ ಗಣಿ...
ಅತ್ಯಂತ ಶ್ರೇಷ್ಠ ಹಂತದಲ್ಲಿ ಕರುಣೆಯು ಸಂಕುಚಿತವಾಗುವುದಿಲ್ಲ.  ಅದು ಕೆಲವರಿಗೆ ಅಥವಾ ಏಕವ್ಯಕ್ತಿಯ ದುಃಖವಿಮುಕ್ತಿಗೆ ನಿಲ್ಲುವುದಿಲ್ಲ.  ಅದು ವಿಶಾಲವಾಗಿ ಸರ್ವಜೀವಿಗಳ ದುಃಖ ವಿಮುಕ್ತಿಗೆ ಸಮಾವೇಶ ಗೊಳ್ಳುತ್ತದೆ (ಪ್ರಯತ್ನಿಸುತ್ತದೆ) ಅದು ಸಮ್ಮ ಸಂಬೋಧಿಯ ನಕ್ಷೆಯನ್ನು ಹರಡುತ್ತದೆ.
ಅದು ಬುದ್ಧರ ಮಾರ್ಗವಾಗಿದೆ, ನನಗೆ ಸುತ್ತಲಿನ ಸರ್ವಜೀವಿಗಳ ಬಗ್ಗೆ ಕಾಳಜಿ(ಕನಿಕರ)ಯಿದೆ.
... ಕರುಣೆಯು ತನ್ನಲ್ಲಿನ ಪೂರ್ಣ ಸಂಯೋಗದ ಪರಿಪೂರ್ಣ ಪ್ರತಿಫಲಿತವಾಗಿದೆ. (14)
ಮೂರನೆಯ ಶ್ರೇಷ್ಠ ದಿವ್ಯಸ್ಥಿತಿಯು ಮುದಿತಾ ಅಥವಾ ಪರ ಉನ್ನತಿಯ ಆನಂದ. ಇದು ಪರರ ಸುಖ ಹಾಗು ಶೀಲಗಳಲ್ಲಿ ಪೂರ್ಣವಾಗಿ ಆನಂದಿಸುವ ಭಾವ, ಮುದಿತಾವು ಪರರ ಉನ್ನತಿಯಲ್ಲಿ ನೋಡಿ (ಕೇಳಿ, ಯೋಚಿಸಿ) ಆನಂದಿಸುತ್ತದೆ. ಪರರ ಸುಖವನ್ನು ಸ್ವಾಗತಿಸುತ್ತದೆ.
ನಾಲ್ಕನೆಯ ಮಹಾದಿವ್ಯ ಸ್ಥಿತಿಯು ಸಮಚಿತ್ತತೆ (ಪ್ರಶಾಂತತೆ) (ಉಪೇಕ್ಷಾ). ನಾವು ಇದನ್ನು ಸಾಧಿಸಿದಾಗ ಎಲ್ಲಾ ಜೀವಿಗಳನ್ನು ಸಮಾನವಾಗಿ ಭಾವಿಸುತ್ತೇವೆ. ಇದನ್ನು ಮಾಡಬೇಕಾದಾಗ ಒಬ್ಬನು ತನ್ನ ಬಾಂಧವ್ಯವನ್ನು ತನ್ನ ನೆಂಟರಲ್ಲಿ ಮಿತ್ರರಲ್ಲಿ ಹಾಗು ಶತ್ರುಗಳನ್ನು ಇರುವ ಸನ್ನಿವೇಶವು ಪೂರ್ವ ಜನ್ಮದಿಂದಾದ ಫಲ ಎಂದು ಅರಿಯುತ್ತಾನೆ. ಆದ್ದರಿಂದ ಬಂಧುಗಳಾಗಲಿ ಹಾಗು ಮಿತ್ರರಲ್ಲಾಗಲಿ ಅಂಟದೆ ಪರರನ್ನು ಪಕ್ಷಪಾತದಿಂದ ನೋಡುವುದಿಲ್ಲ.
ಪೂಜ್ಯ ಬಾಲನ್ಗೊಲ್ಡ್ ಆನಂದ ಮೈತ್ರೆಯ ಇಂದಿನ ಶತಮಾನದ ಬೌದ್ಧ ವಿದ್ವಾಂಸರು.  ಅವರು ತಮ್ಮ ಬ್ರಹ್ಮ ವಿಹಾರದ ಅಭ್ಯುದಯದಲ್ಲಿ ಹೀಗೆ ಹೇಳಿದ್ದಾರೆ.
ಈ ವ್ಯಕ್ತಿ ನನ್ನ ಹಿಂದಿನ ಜನ್ಮದಲ್ಲಿ ನನ್ನ ತಾಯಿಯಾಗಿರಬಹುದು, ನನ್ನನ್ನು ಹತ್ತು ತಿಂಗಳು ಹೊತ್ತಿದ್ದಾಳೆ. ನಾನು ಮಗುವಾಗಿದ್ದಾಗ ಆಕೆ ನನ್ನ ಮಲಮೂತ್ರ ಇತ್ಯಾದಿ ಕಶ್ಮಲಗಳನ್ನು ಅಸಹ್ಯವಿಲ್ಲದೆ ತೆಗೆದಿದ್ದಾಳೆ. ಆಕೆ ತನ್ನ ಮಡಿಲಲ್ಲಿ ನನ್ನನ್ನು ಆಡಿಸಿದ್ದಾಳೆ, ಸಲಹಿದ್ದಾಳೆ, ತನ್ನ ಬಾಹುಗಳಿಂದ ಎತ್ತಿದ್ದಾಳೆ, ಆಕೆ ನನ್ನನ್ನು ಆಳವಾದ ಪ್ರೀತಿಯಿಂದ ಪೋಷಿಸಿದ್ದಾಳೆ.
ಈ ವ್ಯಕ್ತಿ ನನ್ನ ಹಿಂದಿನ ಜನ್ಮಗಳಲ್ಲಿ ತಂದೆಯಾಗಿದ್ದಿರಬಹುದು. ಆತನು ನನಗಾಗಿ ಜೀವನವೆಲ್ಲಾ ಕಷ್ಟ ಶ್ರಮಗಳನ್ನು ಎತ್ತಿದ್ದಾನೆ. ಹೇಗೆಂದರೆ ವ್ಯಾಪಾರಿಯಾಗಿ, ರೈತನಾಗಿ ಅಥವಾ ಇನ್ನಿತರ ಯಾವುದೇ ಉದ್ಯೋಗ ಹಿಡಿದು ಅಪಾರ ಶ್ರಮವನ್ನು ನನಗಾಗಿ ಮಾಡಿದ್ದಾನೆ ಮತ್ತು ಹಿಂದೆ ಈತನು ನನಗೆ ಸೋದರನಾಗಿಯೋ, ಸೋದರಿಯಾಗಿಯೋ, ಮಗನಾಗಿಯೋ ಅಥವಾ ಮಗಳಾಗಿಯೋ ನನಗೆ ಪ್ರೀತಿಯ ಆಸರೆ ನೀಡಿದ್ದಾರೆ.  ಆದ್ದರಿಂದ ಆತನ ಮೇಲೆ ನಾನು ಕೋಪಗೊಳ್ಳುವುದು ಅನ್ಯಾಯ. ಸತ್ಯಕ್ಕೆ ವಿರುದ್ಧವಾದದ್ದು. ಏಕೆಂದರೆ ಕೇವಲ ಈ ಜನ್ಮದಲ್ಲಿ ಮಾತ್ರ ನನ್ನ ವಿರುದ್ಧ ಅಪ್ರಿಯ ಕಾರ್ಯ ಮಾಡಿದ್ದಾನೆ. (15)
ದಿವ್ಯಸ್ಥಿತಿಗಳಲ್ಲಿ ಒಂದಾದ ಮೈತ್ರಿಯನ್ನು ಸಹಾ ಪ್ರತಿನಿತ್ಯದ ಜೀವನದಲ್ಲಿ ಅನುಭವಿಸಬೇಕಾಗಿರುವುದಾಗಿದೆ.  ಮೈತ್ರಿಯ ಭಾವವು ಹೀಗಿರುತ್ತದೆ : ತಂದೆ-ತಾಯಿಗಳಿಗೆ ಆಗತಾನೆ ಹುಟ್ಟಿದ ಮಗುವಿನಲ್ಲಿ ಇದ್ದಂತೆ, ಅದರ ಉತ್ತಮ ಆರೋಗ್ಯ ಬಯಸುವಂತೆ. ಯೋಗ್ಯ ಮಿತ್ರರು ಪಡೆಯುವಂತೆ, ಅತಿ ಪ್ರಜ್ಞಾವಂತ ಹಾಗು ಪರಿಶ್ರಮಗಳಲ್ಲಿ ವಿಜಯಿಯಾಗುವಂತೆ ಬಯಸುವುದು ಆಗಿದೆ.  ಥೇಟ್ ಅದೇರೀತಿಯಲ್ಲಿ ಸರ್ವಜೀವಿಗಳ ಬಗ್ಗೆ ಮೈತ್ರಿಭಾವವು ಇರಬೇಕು. ತಂದೆ-ತಾಯಿಗಳು ಮಗುವು ಕಾಯಿಲೆ ಬಿದ್ದಾಗ  ಸ್ವಾಭಾವಿಕವಾಗಿ ಕರುಣೆಯಿಂದ ಚಲಿಸುತ್ತಾರೆ. ಮಗುವು ರೋಗದಿಂದ, ದುಃಖದಿಂದ ಮುಕ್ತವಾಗಲಿ ಎಂದು ನೈಜವಾಗಿ ಪ್ರಬಲವಾಗಿ ಆಕಾಂಕ್ಷಿಸುತ್ತಾರೆ, ಸರಿಯಾಗಿ ಇದೇರೀತಿ ಸರ್ವಜೀವಿಗಳಲ್ಲಿ ಅವರ ದುಃಖ ವಿಮುಕ್ತಿಯನ್ನು ಬಯಸಬೇಕು. ಹೇಗೆ ತಂದೆ-ತಾಯಿಗಳು ಮಕ್ಕಳ ಅಭಿವೃದ್ಧಿ, ಉನ್ನತಿಯಲ್ಲಿ ಹಾಗು ಸುಖಗಳಲ್ಲಿ ಆನಂದಿಸುವರೋ ಅದೇರೀತಿಯಲ್ಲಿ ಸರ್ವಜೀವಿಗಳ ಸುಖಗಳನ್ನು ಅವರ ಉನ್ನತಿಯನ್ನು ನೋಡಿ ನಾವು ಆನಂದಿಸಬೇಕು. ಮುಂದೆ ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಸ್ವತಂತ್ರವಾಗಿ ತಮ್ಮ ಜವಾಬ್ದಾರಿಗಳೊಂದಿಗೆ ನೆಲಸತೊಡಗಿದಾಗ ತಂದೆ-ತಾಯಿಗಳಿಗೆ ಮೈತ್ರಿ ಕರುಣೆಗಳು ಮುದಿತಾವು ಇದ್ದರೂ ಆ ವೇದನೆಗಳು ಉಪೇಕ್ಷಾ (ಶಾಂತತೆ)ಯಲ್ಲಿ ಸಂಯೋಗಗೊಳ್ಳುತ್ತದೆ. ಪೋಷಕರು ಮಕ್ಕಳ ಸ್ವಾವಲಂಬನೆ ಹಾಗು ಜವಾಬ್ದಾರಿಗಳೊಂದಿಗೆ ಜೀವಿಸತೊಡಗಿದಾಗ ಅವರನ್ನು ಪ್ರೇಮಯುತವಾಗಿ ಅಂಟಬಾರದು.
ಬುದ್ಧ ಘೋಷರವರು ತಮ್ಮ ಅಂಗುತ್ತರ ನಿಖಾಯದ ವ್ಯಾಖ್ಯಾನದಲ್ಲಿ ಬ್ರಹ್ಮವಿಹಾರದ ಕ್ರಿಯಾತ್ಮಕತೆಯನ್ನು ತಂದೆ-ತಾಯಿಗಳು ಹಾಗು ಮಕ್ಕಳ ಉದಾಹರಣೆಯೊಂದಿಗೆ ಬೆಳೆಸಿ ನೀಡಿದ್ದಾರೆ. ಅದರಲ್ಲಿ
ಮಗುವು ಗರ್ಭದಲ್ಲಿದ್ದಾಗ ತಂದೆ-ತಾಯಿಗಳು ಈ ರೀತಿ ಚಿಂತಿಸುತ್ತಾರೆ, ನಾವು ನಮ್ಮ ಮಗುವನ್ನು ಸವರ್ಾಂಗ ಪೂರ್ಣನಾಗಿ ಹಾಗು ಆರೋಗ್ಯ ದಿಂದಿರುವುದನ್ನು ಎಂದು ನೋಡುತ್ತೇವೆ? ನಂತರ ಎಳೆಗೂಸು ಮಡಿಲಲ್ಲಿದ್ದು ಹೇನು ಅಥವಾ ಇತರ ಕ್ರಿಮಿಯಿಂದ ಬಾಧೆಗೊಳಪಟ್ಟ ಅತ್ತರೆ ಅಥವಾ ಮಲಗಿದರೆ ಅಥವಾ ರಾತ್ರಿಯಲ್ಲಿ ನಿದ್ರೆಯಲ್ಲಿ ಅತ್ತರೆ ತಂದೆ-ತಾಯಿಗಳು ಶಬ್ದವನ್ನು ಕೇಳಿ ಕರುಣೆಯನ್ನು ತೋರುತ್ತಾರೆ. ಆನಂತರ ಆ ಮಗುವು ಆಟವಾಡುತ್ತಿರುವಾಗ, ವಿಶ್ರಾಂತಿಯಲ್ಲಿರುವಾಗ, ಇತರ ವಿಷಯಗಳಲ್ಲಿ ಅಭಿವೃದ್ಧಿಗೊಳ್ಳುತ್ತಿರುವಾಗ ತಂದೆ-ತಾಯಿಯರ ಹೃದಯ ಎಷ್ಟು ಮೃದುವಾಗುತ್ತದೆ, ಅಂದರೆ ಅತ್ಯಂತ ಶುದ್ಧವಾದ ಬೆಣ್ಣೆಯನ್ನು ನೂರು ಹತ್ತಿಯ ನಯವಾದ ಉಂಡೆಗಳು ನೆನಸಿದಂತೆ ಆಗುತ್ತದೆ.  ತಾಯಿಯ ಮನವು ತೃಪ್ತವಾಗುತ್ತದೆ ಹಾಗು ಆನಂದಿತವಾಗುತ್ತದೆ.  ಆಗ ಅವರಲ್ಲಿ ಮುದಿತಾವು ಪ್ರತಿಷ್ಠಿತವಾಗಿರುತ್ತದೆ. ನಂತರ ಮಗುವು ಸ್ವಂತ ಉದ್ಯೋಗದಲ್ಲಿ ತೊಡಗಿ ಸ್ವಂತ ಮನೆಯಲ್ಲಿ ವಿವಾಹವಾಗಿ ವಾಸಿಸುತ್ತಿರುವಾಗ ತಂದೆ-ತಾಯಿಗಳು ಸಮಚಿತ್ತತೆಯಲ್ಲಿ ಯೋಚಿಸುತ್ತಾರೆ. ಓಹೋ ನಮ್ಮ ಮಕ್ಕಳು ಈಗ ತಮ್ಮ ಹಾದಿಯಲ್ಲಿ ಜೀವಿಸುತ್ತಿರುವರು ಎಂದು ಭಾವಿಸಿ ಶಾಂತತೆಯಲ್ಲಿ ಇರುತ್ತಾರೆ.
ಬುದ್ಧ ಭಗವಾನರ ಆರ್ಯ ಅಷ್ಟಾಂಗ ಮಾರ್ಗವನ್ನು 3 ಭಾಗಗಳಾಗಿ ವಿಂಗಡಿಸಬಹುದು. ಶೀಲ, ಸಮಾಧಿ ಮತ್ತು ಪ್ರಜ್ಞಾ. ಈ ಮೂರು ಮೆಟ್ಟಿಲಿನ ಮಾರ್ಗದಲ್ಲಿ ಶೀಲವಂತು ಮೈತ್ರಿಯ ತಳಹದಿ ಮೇಲೆಯೇ ನಿಂತಿದೆ. ಹಾಗು ಸಮಾಧಿ ಪ್ರಜ್ಞಾಗಳಲ್ಲಿ ಪ್ರವೇಶ ಮಾಡಿದೆ. ಶೀಲದಲ್ಲಿ ಮೈತ್ರಿಯು ಹೀಗೆ ಕಾಣುತ್ತದೆ. ಉದಾ: ಸಮ್ಯಕ್ ವಾಚಾ ಸಮ್ಯಕ್ ಕರ್ಮ ಮತ್ತು ಸಮ್ಯಕ್ ಜೀವನ. ಈ ಭಾಗಗಳ ಗುರಿಯು ಸಮಾಜದ (ಪರರ) ಹಿತವನ್ನು ಸಂಯೋಗಿಸುವುದು (ಪಾಲಿಸುವುದು). ಒಂದು ಸುತ್ತವು ನೆರೆಹೊರೆಯವರಲ್ಲಿ ಗೌರವಯುತವಾಗಿ ಹೇಗಿರಬೇಕೆಂದು ಹೀಗೆ ವಿವರಿಸಲಾಗಿದೆ.
ಅವರು ಪರಸ್ಪರ ಅತಿಥ್ಯ ಹಾಗು ದಾನ ಮನೋಭಾವದಿಂದ ಕೂಡಿರಬೇಕು. ಅವರು ಪ್ರಿಯವಾಗಿ ಸಿಹಿಯಾಗಿ ಹಾಗು ಜ್ಞಾನ ಉಚಿತವಾದ (ಒಪ್ಪುವಂತಹ) ಮಾತುಗಳನ್ನು ಆಡಬೇಕು.  ಪರಸ್ಪರ ಕ್ಷೇಮಕ್ಕಾಗಿ ದುಡಿಯಬೇಕು. ಪರಸ್ಪರ ಉಚ್ಚ ನೀಚ ಭಾವನೆರಹಿತವಾಗಿ ಇರಬೇಕು. ಪರಸ್ಪರ ಜಗಳವಾಡಬಾರದು. ಪರಸ್ಪರರು ಕಷ್ಟಗಳಲ್ಲಿ ಸಹಾಯ ಮಾಡಬೇಕು. ಹಾಗು ದುಃಖ ಸನ್ನಿವೇಶಗಳಲ್ಲಿ ಯಾರಿಗೂ ಪರಿತ್ಯಜಿಸಬಾರದು.
ಬೌದ್ಧರಲ್ಲಿ ಸಹಜವಾಗಿ ಸ್ವಮೈತ್ರಿಯು ನಿಣರ್ಾಯಕವಾದ ಪ್ರಥಮ ಮೆಟ್ಟಿಲು ಆಗಿದೆ. ಇದು ತನ್ನನ್ನು (ಮನಸ್ಸನ್ನು) ಪರಿಶುದ್ಧಿಗೊಳಿಸಿ ಪರಿಶುಭ್ರ ಗೊಳಿಸುತ್ತದೆ.  ಹಾಗು ಪರರಿಗೆ ಮೈತ್ರಿ ಮಾಡಲು ಸಹಾಯಕವಾಗುತ್ತದೆ.  ಹಾಗಲ್ಲದೆ ಆ ಪ್ರೀತಿಯು ರಾಗವಾಗಲು ಸಂಭವವಿದೆ. ಹಾಗಿದ್ದಾಗ್ಯೂ ಇದು ವ್ಯವಹಾರ ಸತ್ಯವಾಗಿದೆ. ಇದು ಸಾಮಾನ್ಯರಿಗೆ ಅರ್ಥವಾಗುವಂತಹ ಸಮಾಥ್ರ್ಯದಲ್ಲಿದೆ. ಪರಮಾರ್ಥದಲ್ಲಿ ಬೌದ್ಧರು ಹೀಗೆ ಹೇಳುತ್ತಾರೆ. ನಾನು ಎನ್ನುವ ಅಸ್ತಿತ್ವವೇ ಇಲ್ಲ, ಅದು ಕೇವಲ ಐದು ರಾಶಿಗಳ ಸಮೂಹವಾಗಿದೆ.  (ದೇಹ ಹಾಗು ಚಿತ್ತದ ರಾಶಿ). ಅದೇ ಅಸ್ತಿತ್ವವನ್ನು ಅರಿಯುವ ರೀತಿಯಾಗಿದೆ.  ಆದರೆ ವ್ಯವಹಾರ ಸತ್ಯದಲ್ಲಿ ಇದು ನೆರೆಹೊರೆಯವರನ್ನು ಪ್ರೀತಿಸುವುದು ಆಗಿದೆ. ಆದರೆ ವಿಶಾಲ ಅರ್ಥದಲ್ಲಿ ಪ್ರೀತಿಸುವುದಾಗಿದೆ.  ಹೇಗೆಂದರೆ ಕೇವಲ ಮಾನವರಿಗೆ ಸೀಮಿತವಾಗದೆ ಸರ್ವಜೀವಿಗಳಿಗೆ ಪ್ರಸರಿಸುವುದಾಗಿದೆ.  ಬೌದ್ಧರಲ್ಲಿ ದೇವರ (ಸೃಷ್ಟೀಕರ್ತ) ದೃಷ್ಟಿ (ಮೂಢನಂಬಿಕೆ) ಇಲ್ಲ. ಅಂದರೆ ದೇವರ ಇರುವಿಕೆಯಾಗಲಿ ಅಥವಾ ಆತನ ಕಾರ್ಯಗಳ ಮೇಲೆ ನಂಬಿಕೆ ಇಲ್ಲ. ಆದರೆ ಧರ್ಮ (ಜ್ಞಾನ)ವಿದೆ. ಏಕೆಂದರೆ ಧಮ್ಮವೆಂದರೆ ಸತ್ಯ. ಸಾಪೇಕ್ಷತೆಯ ನಿಯಮಗಳು. ಅದು ವ್ಯಕ್ತಿತ್ವ ಶೂನ್ಯವುಳ್ಳದ್ದು (ಅನತ್ತ) ಹಾಗು ಮೈತ್ರಿಯು ಏಕವಾದುದರಲ್ಲಿ ಕೇಂದ್ರೀಕೃತವಲ್ಲ. ಅದು ಸರ್ವರಿಗೂ ಮೈತ್ರಿ ಪ್ರಸರಣ ಮತ್ತು ಬೌದ್ಧರಲ್ಲಿ ಭಕ್ತಿಯಂತಹ ಸಂಕುಚಿತತೆಯಿಲ್ಲ. (ಏಕವಾದುದರಲ್ಲಿ ಕೇಂದ್ರೀಕೃತವಲ್ಲ)
ಬೌದ್ಧರ ಬ್ರಹ್ಮವಿಹಾರವು ವಿಚಾರ ಹಾಗೂ ಆಚಾರ ವಿಷಯದಲ್ಲಿ ಪ್ರಶ್ನಾತ್ಮಕವಾಗಿದೆ.  ಮೊದಲು ಬ್ರಹ್ಮ ವಿಹಾರದ (ಮೆತ್ತಾ, ಕರುಣೆ, ಮುದಿತಾ ಹಾಗೂ ಉಪೇಕ್ಷಾ) ಮಹೋನ್ನತೆಯನ್ನು ಅರಿಯಬೇಕು. ನಂತರ ಪರಿಪೂರ್ಣಗೊಳಿಸಬೇಕು.  ಮೈತ್ರಿಯನ್ನು ಸಾಧನೆ ಮಾಡುತ್ತಾ ಚೆನ್ನಾಗಿ ಅರಿಯಬಹುದು. ಬ್ರಹ್ಮವಿಹಾರವನ್ನು ಸಾಧನೆ ಮಾಡುತ್ತಾ ಅದನ್ನು ದಾನ, ಶೀಲ ಸುವಾಚ ಹಾಗು ಶ್ರೇಷ್ಠಯುತ ಸುಜೀವನವನ್ನಾಗಿ ಸುಸಂವೃದ್ಧಿ ಗೊಳಿಸಬೇಕು. ಇದರ ಧ್ಯಾನ ಪದ್ಧತಿಯು ಬೇರೆ ಧ್ಯಾನ ಪದ್ಧತಿಯಂತೆ ಸಾಮ್ಯತೆಯಿದೆ. ಅದರಲ್ಲಿ ಎಚ್ಚರಿಕೆಯಿಂದ, ಉತ್ಸಾಹದಿಂದ ಪೂರ್ಣವಾಗಿ ಏಕಾಗ್ರಗೊಳಿಸಬೇಕು. ಮೈತ್ರಿಯಲ್ಲಿ ಈ ಕ್ರಿಯಾತ್ಮಕತೆಯು ತನ್ನ ಸುತ್ತಲಿರುವ ಜೀವಿಗಳ ಬಗ್ಗೆ ಚಿತ್ತವನ್ನು ಪ್ರಿಯವಾಗಿ ಹಾಗು ಹಿತಕರ ಭಾವನೆಯನ್ನು ಪ್ರದಶರ್ಿಸಬೇಕು. ಎಂದೂ ಒಬ್ಬನು ಇದನ್ನು ಅಭಿವೃದ್ಧಿಗೊಳಿಸಿ ಸ್ಥಿರನಾಗಿರುತ್ತಾನೆಯೋ ಆಗ ಆತನು ಶಾಂತಚಿತ್ತನಾಗಿ ಹಾಗು ಆನಂದಮಯನಾಗಿರುತ್ತಾನೆ.  ಹಾಗು ಆತನು ಬುದ್ಧರ ಬೋಧಿಯನ್ನು ಚೆನ್ನಾಗಿ ಅರಿಯಬಲ್ಲ ಮತ್ತು ವಿಮುಕ್ತಿಯ ಹಾದಿಯಲ್ಲಿ ಕ್ರಮಿಸಿ ದುಃಖದಿಂದ ಪಾರಾಗಿ ನಿಬ್ಬಾಣ ಸಾಧಿಸಬಲ್ಲ.
ಪ್ರತಿಯೊಂದು ಬ್ರಹ್ಮವಿಹಾರವು ಕೆಲವು ಕಶ್ಮಲವನ್ನು ನಾಶಗೊಳಿಸಿ ಆತನು ಮಾರ್ಗದಲ್ಲಿ ಅಭಿವೃದ್ಧಿಯಾಗುವಂತೆ ಮಾಡುತ್ತದೆ.
ಮೈತ್ರಿಯು ಕೋಪ ಮತ್ತು ದ್ವೇಷವನ್ನು ನಾಶಗೊಳಿಸುತ್ತದೆ.  ಕರುಣೆಯು ಕ್ರೂರತನವನ್ನು ಹಾಗು ಸ್ವಾರ್ಥವನ್ನು ನಾಶಗೊಳಿಸುತ್ತದೆ.  ಮುದಿತಾ (ಆನಂದ)ವು ಮತ್ಸರವನ್ನು ನಾಶಗೊಳಿಸುತ್ತದೆ. ಸಮಚಿತ್ತತೆಯು (ಉಪೇಕ್ಖಾ) ಲೋಭವನ್ನು ಮೋಹವನ್ನು ನಾಶಗೊಳಿಸುತ್ತದೆ.
ಹೀಗೆಯೇ ಮುಂದುವರೆದು ಆತನು ಪರರಿಗೆ ಶ್ರೇಷ್ಠ ರೀತಿಯಲ್ಲಿ ಸಹಾಯ ಮಾಡುವುದನ್ನು ಸಾಧಿಸುತ್ತಾನೆ.  ಅದನ್ನು ಸ್ವಯಂಭೂವಾಗಿ ಮಾಡುತ್ತಾನೆ.
ಬುದ್ಧ ಭಗವಾನರ ಬೋಧಿ (ಬೋಧನೆ) ತನ್ನ ಪರಿಪೂರ್ಣತೆಯನ್ನು ಹಾಗು ಪರಹಿತವನ್ನು ಸಾಧಿಸುವುದೇ ಆಗಿದೆ.  ಜಗತ್ತಿನ ದುಃಖವನ್ನು ಬ್ರಹ್ಮವಿಹಾರದ ಸಹಾಯದಿಂದಲೂ ಲೋಕದ ದುಃಖ ವಿಮುಕ್ತಿಗೆ ಸಹಾಯ ಮಾಡಿ ತಾನು ಬೆಳೆಯುವುದಾಗಿದೆ.
ಸರ್ವರಿಗೂ ದುಃಖವಿಮುಕ್ತಿ ಹಾಗು ಪರಮಸುಖ (ನಿಬ್ಬಾಣ) ಪ್ರಾಪ್ತಿಯ ಈ ಮಾರ್ಗವನ್ನು ನಾವು ಬ್ರಹ್ಮವಿಹಾರದ ಪ್ರೀತಿ (ಮೆತ್ತಾ) ಎನ್ನುವೆವು. 

Sunday, 14 January 2018

THE CONSEQUENCES OF LAZYNESS ಸೋಮಾರಿತನ - ಚುಲಕಾಲನ ಘಟನೆ

                           ಸೋಮಾರಿತನ - ಚುಲಕಾಲನ ಘಟನೆ


ಸೇತಾವವೆಂಬ ಪಟ್ಟಣದಲ್ಲಿ ಮಹಾಕಾಲ, ಮಜ್ಜಿಮಕಾಲ ಮತ್ತು ಚುಲಕಾಲರೆಂಬ ಮೂವರು ಸೋದರರಿದ್ದರು. ಮೊದಲ ಇಬ್ಬರು ವೃತ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.  ಕೊನೆಯವನಿಗೆ ಯಾವುದೇ ಹೇಳುವಂತಹ ವೃತ್ತಿಯಿರಲಿಲ್ಲ.
ಮಹಾಕಾಲ ಮತ್ತು ಚುಲಕಾಲರು ಬಂಡಿಗಳಲ್ಲಿ ಸರಕುಗಳನ್ನು ಹಾಕಿಕೊಂಡು ಒಮ್ಮೆ ಶ್ರಾವಸ್ತಿಗೆ ಹೋಗಿದ್ದಾಗ ಅವರು ಜೇತವನ ವಿಹಾರದ ಹತ್ತಿರ ಬಿಡಾರ ಹಾಕಿದ್ದರು. ಸಂಜೆಯಾದಾಗ ಅವರು ದೃಶ್ಯವನ್ನು ಗಮನಿಸಿದರು. ಏನೆಂದರೆ: ಜನರು ಗುಂಪಾಗಿ ವಿಹಾರಕ್ಕೆ ಪುಷ್ಪಗಳನ್ನು, ಗಂಧವನ್ನು ತೆಗೆದುಕೊಂಡು ಹೋಗುವುದು ಅವರಿಗೆ ಕಾಣಿಸಿತು. ಮಹಾಕಾಲನು ಕುತೂಹಲ ತಡೆಯಲಾರದೆ ಬಂಡಿಗಳನ್ನು ತಮ್ಮನಿಗೆ ಒಪ್ಪಿಸಿ, ತಾನು ವಿಹಾರದಲ್ಲಿ ಕುಳಿತು ಧಮ್ಮಶ್ರವಣ ಮಾಡಲು ಹೋದನು. ಬುದ್ಧ ಭಗವಾನರು ಮಹಾಕಾಲನ ಧಾತುಗಳಿಗೆ ಸರಿಹೊಂದುವಂತೆ ಧಮ್ಮಪ್ರವಚನ ಮಾಡಿದರು. ಅದರ ಪರಿಣಾಮವಾಗಿ ಆತನಿಗೆ ಭಿಕ್ಷುವಾಗುವ ಬಯಕೆ ಉಂಟಾಯಿತು. ಆತನಲ್ಲಿ ವೈರಾಗ್ಯ ಪ್ರಬಲವಾಗಿ ಬುದ್ಧ ಭಗವಾನರಿಗೆ ಅದನ್ನು ಹೇಳಿದನು. ನಂತರ ಹಿಂತಿರುಗಿ ಬಂದು ತಮ್ಮನಿಗೂ ಸಹಾ ಅದನ್ನು ಹೇಳಿದನು. ಆದರೆ ತಮ್ಮನು ಅದನ್ನು ಬಲವಾಗಿ ವಿರೋಧಿಸಲಿಲ್ಲ. ನಂತರ ಮಹಾಕಾಲನು ಭಿಕ್ಷು ಸಂಘಕ್ಕೆ ಸೇರಿದನು ಮತ್ತು ಕೆಲವು ಸಮಯದಲ್ಲೇ ಆತನ ತಮ್ಮನು ಸಹಾ ಹಾಗೇ ಮಾಡಿದನು.
ಮಹಾಕಾಲನು ತನ್ನ ಮನಸ್ಸನ್ನು ಸಮಾದಿಯಲ್ಲೇ ತಲ್ಲೀನಗೊಳಿಸಿದನು. ಮತ್ತು ಮನಸ್ಸಿನ ಭಾವೋದ್ರೇಕಗಳನ್ನು ದೂರೀಕರಿಸಲು ದೃಢ ಶ್ರಮವನ್ನು ಪಟ್ಟನು. ಆದರೆ ಚುಲಕಾಲನು ಪ್ರಯತ್ನಹೀನನಾಗಿ ಆತನ ಇಂದ್ರಿಯಗಳನ್ನು ಸಡಿಲವಾಗಿ ಬಿಟ್ಟನು. ಆತನು ಸಂಜೆಯೇ ಮಲಗಿ ಸೂರ್ಯ ಹುಟ್ಟಿದ ಎಷ್ಟೋ ಕಾಲಕ್ಕೆ ಏಳುತ್ತಿದ್ದನು. ಆತನು ಶೀಲ ಪಾಲಿಸುವಿಕೆಯಲ್ಲಿಯೂ ಸಹಾ ಆಲಸ್ಯ ತೋರಿಸುತ್ತಿದ್ದನು. ಆತನು ಭಿಕ್ಷುವಾಗಿಯೂ ಸಹಾ ಭಿಕ್ಷುವಿನ ರೀತಿ ಜೀವಿಸುತ್ತಿರಲಿಲ್ಲ. ಆತನು ಬೆಳಿಗ್ಗೆ ಎದ್ದಮೇಲೆ ಪ್ರಾಪಂಚಿಕತೆಯನ್ನು ಚಿಂತಿಸುತ್ತಿದ್ದನು. ಆತನು ತನ್ನ ಅಣ್ಣನ ನಿರಂತರ ಕಠಿಣ ಶ್ರಮ ಭಿಕ್ಷು ಜೀವನದಲ್ಲಿ ಪಾಲಿಸುವುದು ಕಂಡರೂ ಸಹಾ ಆತನಂತು ಸೋಮಾರಿಯಾಗಿಯೇ ಇದ್ದನು. ನಂತರದ ಸ್ವಲ್ಪ ಕಾಲದಲ್ಲಿಯೇ ಮಹಾಕಾಲನು ಅರಹಂತನಾದನು. ಆತನು ಶ್ರಮಣ ಜೀವನದ ಮಹತ್ವವನ್ನು ಅರಿತನು. ಯಾವುದನ್ನು ಪ್ರಾಪ್ತಿ ಮಾಡಲು ಭಿಕ್ಷುವಾದನೋ ಅದನ್ನು ಆತನು ಪ್ರಾಪ್ತಿಮಾಡಿದನು. ಬುದ್ಧ ಭಗವಾನರು ಬೋಧನೆ ನೀಡುತ್ತಾ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದರು. ಈ ಬಾರಿ ಸೇತೌವ ಪಟ್ಟಣಕ್ಕೆ ಭಿಕ್ಷುಗಳ ಸಮೇತ ಬಂದಿದ್ದರು. ಅದು ಮಹಾಕಾಲ ಹಾಗು ಚೂಲಕಾಲನ ಊರಾಗಿತ್ತು. ಅವರ ಬಂಧುಗಳಿಗೆ ಇವರಿಬ್ಬರನ್ನು ಗೃಹಸ್ಥರನ್ನಾಗಿ ಮಾಡಬೇಕೆಂದು ಬಯಕೆಯಾಯಿತು. ಅವರು ಬುದ್ಧರನ್ನು ಹಾಗು ಭಿಕ್ಷು ಸಂಘವನ್ನು ಆಹಾರಕ್ಕಾಗಿ ಆಹ್ವಾನಿಸಿದರು. ಪೀಠಗಳನ್ನು ಸಕಾಲಕ್ಕೆ ಸಿದ್ಧಪಸಿಸಿದಾಗ ಮಹಾಕಾಲನು ತನ್ನ ತಮ್ಮನಿಗೆ ಮೊದಲು ಹೋಗೆಂದು ಹೇಳಿದನು. ಆಹಾರ ಬಡಿಸುವ ವೇಳೆ ಈ ರೀತಿ ಪೀಠಗಳನ್ನು ಜೋಡಿಸುವುದು ಸಮಾನ್ಯವಾಗಿತ್ತು. ಹೇಗೆಂದರೆ ಬುದ್ಧ ಭಗವಾನರ ಪೀಠವನ್ನು ಮಧ್ಯದಲ್ಲಿ, ಅವರ ಬಲ ಪಕ್ಕದಲ್ಲಿ ಸಾರಿಪುತ್ತ ಥೇರರು ಮತ್ತು ಎಡಪಕ್ಕದಲ್ಲಿ ಮೊಗ್ಗಲ್ಲಾನ ಥೇರರನ್ನು ಹಾಕುತ್ತಿದ್ದರು. ಚುಲಕಾಲನು ತನ್ನ ಮನೆಗೆ ಹೋದಾಗ ಆತನ ಮನೆಯವರು ಆತನೊಂದಿಗೆ ಅಪಹಾಸ್ಯ ಮಾಡಿದರು. ಆತನು ಎತ್ತರದ ಪೀಠಗಳನ್ನು ಮುಂದೆ ಹಾಕುವಂತೆ ಹೇಳಿದಾಗ ಅವರು ಅದಕ್ಕೆ ವಿರುದ್ಧವಾಗಿ ಹಿಂದೆ ಹಾಕಿದರು. ಮತ್ತು ಆತನಿಗೆ ಕೆಲವು ಪ್ರಶ್ನೆಗಳನ್ನು ಹಾಕಿ ಮೂರ್ಖನೊಂದಿಗೆ ವತರ್ಿಸುವಂತೆ ವತರ್ಿಸಿದರು. ಅವು ಯಾವುವೆಂದರೆ, ಯಾರ ಅಪ್ಪಣೆ ಪಡೆದು ನೀನು ಭಿಕ್ಷುವಾದೆ, ನೀನು ಇಲ್ಲಿಗೆ ಏಕೆ ಬಂದೆ? ನಮಗೆ ಅಪ್ಪಣೆ ಮಾಡಲು ನೀನು ಯಾರು? ಅಲ್ಲಿದ್ದು ನೀನು ಕಲಿತಿರುವುದು ಏನನ್ನು? ನೀನೇ ಏತಕ್ಕೆ ಪೀಠವನ್ನು ಜೋಡಿಸಬಾರದು? ಕೊನೆಗೆ ಆತನಿಗೆ ಕಾಷಾಯ ವಸ್ತ್ರ ಕಿತ್ತುಹಾಕಿ, ಆತನನ್ನು ಗೃಹಸ್ಥನ ಬಿಳಿವಸ್ತ್ರ ತೊಡಿಸಿದರು. ಆತನಿಗೆ ನಾನಾಬಣ್ಣದ ಹೂವುಗಳ ಕಿರೀಟವನ್ನು ತೊಡಿಸಿದರು. ಹಾಗು ಅತನಿಗೆ ಭಿಕ್ಷು ಜೀವನದ ನಿಯಮಗಳು, ಅರ್ಥಗಳು ಆಳವಾಗಿ ಅರಿತಿಲ್ಲದ್ದರಿಂದ ಆತನಿಗೆ ಅವರು ಮಾಡುವ ಅವಮಾನವು ಸಹಾ ಅವಮಾನದ ರೀತಿ ಕಾಣಲಿಲ್ಲ. ಅವರು ಹೇಳಿದಂತೆಯೇ ಆತನು ಬುದ್ಧ ಭಗವಾನರನ್ನು ಸ್ವಾಗತಿಸಿದನು. ಮಾರನೆಯ ದಿನವೂ ಸಹಾ ಚುಲಕಾಲನ ಮನೆಯವರು ತಥಾಗತರಿಗೆ ವಂದಿಸಿ ಆತಿಥ್ಯವನ್ನು ನೀಡಿದರು. ಮತ್ತು ಮತ್ತೊಬ್ಬ ಥೇರರು ಅವರ ಗೃಹಸ್ಥ ಜೀವನದ ಮನೆಗೆ ಹೋಗಿ ಭಿಕ್ಷುಗಳಿಗೆ ಪೀಠಗಳನ್ನು ಏಪರ್ಾಟು ಮಾಡಲು ಹೋದರು. ಅಲ್ಲಿ ಭೋಜನದ ನಂತರ ಧರ್ಮಬೋಧನೆ ಮಾಡಲು ಮಹಾಕಾಲನಿಗೆ ಪ್ರತಿನಿಧಿಸಿದರು ಮತ್ತು ಭಗವಾನರು ಹಾಗು ಉಳಿದ ಭಿಕ್ಷುಗಳು ವಿಹಾರಕ್ಕೆ ಮರಳಿದರು.
ಕೆಲವು ಭಿಕ್ಷುಗಳಿಗೆ ಮಹಾಕಾಲನಿಗೆ ಆಯ್ಕೆ ಮಾಡಿದ್ದು ಇಷ್ಟವಾಗಲಿಲ್ಲ. ಏಕೆಂದರೆ ಹಿಂದಿನದಿನ ಚುಲಕಾಲನಿಗೆ ಆದ ಅವಮಾನ ಅವರಿಗೆ ಮರೆಯಲಾಗಲಿಲ್ಲ. ಭಿಕ್ಷುಗಳೆಲ್ಲರೂ ಸ್ವಲ್ಪದೂರ ಹೋದ ನಂತರ ಸ್ವಲ್ಪ ಕಾಲದ ನಂತರ ಮಹಾಕಾಲ ಅರಹಂತರಿಗೆ ಮಹಾಕಾಲನ ಪತ್ನಿ ಹಾಗು ಉಳಿದ ಬಂಧುಗಳು ಸುತ್ತವರೆದರು. ಚುಲಕಾನಿಗೆ ಪ್ರಶ್ನಿಸಿದ ರೀತಿಯಲ್ಲಿ ಆತನಿಗೂ ಸಹಾ ಪ್ರಶ್ನಿಸತೊಡಗಿದರು. ಅರಹಂತ ಮಹಾಕಾಲನಿಗೆ ಅವರ ಮೂರ್ಖತನ ಅರಿವಾಯಿತು. ಇವರೆಲ್ಲಾ ಬೋಧನೆಗೆ ಅರ್ಹರಲ್ಲ ಎಂದು ಅರಿತು ಮುಂದಾಗುವ ಅಪ್ರಿಯ ಸನ್ನಿವೇಶಕ್ಕೆ ಪ್ರತಿಯಾಗಿ ಅವರು ತಮ್ಮ ಋದ್ದಿಶಕ್ತಿಯಿಂದ (ಪವಾಡಶಕ್ತಿ) ಮನೆಯ ಮೇಲ್ಭಾಗಕ್ಕೆ ಹಾರಾಡಿದರು. ಹಾಗೆಯೇ ಗಾಳಿಯಲ್ಲಿ ಹಾರುತ್ತಾ ಭಗವಾನರು ಇದ್ದಕಡೆ ಬಂದು ಭಗವಾನರು ಇದ್ದಕಡೆ ಬಂದು ಭಗವಾನರಿಗೆ ಭಕ್ತಿಯುತ ಶ್ರದ್ಧಾಂಜಲಿಯನ್ನು ಸುಗತರ ಪಾದದ ಮೇಲೆ ತಲೆಯಿಟ್ಟು ಗೌರವ ಅಪರ್ಿಸಿದರು.
ಆಗ ಭಗವಾನರು ಭಿಕ್ಷುಗಳಿಗೆ ಮಹಾಕಾಲ ಹಾಗು ಚುಲಕಾಲರ ಶೀಲದ ವ್ಯತ್ಯಾಸ ತಿಳಿಸಿದರು. ಚುಲಕಾಲನು ಪ್ರಯತ್ನಹೀನತೆಯಿಂದ ಸೋಮಾರಿತನದಿಂದ ತನ್ನ ಇಂದ್ರಿಯಗಳನ್ನು ಧಮಿಸಲಾರದವನು ಹಾಗು ಅತನಿಗೆ ಹೇಗೆ ನಿಲ್ಲಬೇಕು, ನಡೆಯಬೇಕು, ಕುಳಿತುಕೊಳ್ಳಬೇಕು ಮತ್ತು ಹೇಗೆ ಸರಿಯಾಗಿ ಮಲಗಬೇಕು ಎಂಬುದು ಅರಿಯದಾದನು. ಆತನ ಸೋಮಾರಿತನದ ವ್ಯಕ್ತಿತ್ವದಿಂದ ಆತನು ಗೃಹಸ್ಥನಾಗಿ ಶ್ರೀಮಂತನಾಗಲು ಅನರ್ಹನಾದನು. ತನ್ನ ಹೀನ ವೀರ್ಯದಿಂದ ಆತನ ಭಾವಾವೇಶಗಳನ್ನು ಧಮಿಸಿ ತನ್ನ ಅಣ್ಣನಂತೆ ಅರಹಂತನು ಸಹಾ ಆಗಲಿಲ್ಲ.
ಕೆಲವರು ಸೋಮಾರಿತನಕ್ಕೆ ವಶವಾಗಿ ಆಳವಾದ ದುಃಖಕ್ಕೆ ಈಡಾಗಬೇಕಾಗುತ್ತದೆ. ಪಾಪಿಗಳು ವಿಮುಕ್ತಿಯ ಹಾದಿಯನ್ನು ಕ್ರಮಿಸಲು ವಿಫಲರಾಗುತ್ತಾರೆ.
- ಧಮ್ಮಪದ ಅಟ್ಠಕಥ 

THE EVIL FRIENDS ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ

                     ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ


ಬುದ್ಧ ಭಗವಾನರು ಮಲ್ಲರ ಪ್ರಾಂತ್ಯವಾದ ಅನುಪಿಯದಲ್ಲಿ ಮಾವಿನ ತೋಪಿನಲ್ಲಿ ತಂಗಿದ್ದಾಗ, ಶಾಕ್ಯಕುಲದ ಆರು ರಾಜಕುಮಾರರು ಸಂಘಕ್ಕೆ ಸೇರಲು ಬಂದರು. ಅವರು ಯಾರೆಂದರೆ: ಭದ್ದಿಯ, ಆನಂದ, ಅನುರುದ್ದ, ಭಗು, ಕಿಂಬಿಲ ಮತ್ತು ದೇವದತ್ತ. ಅವರು ಭಗವಾನರಿಂದ ಸಂಘ ಸೇರಿದರು. ದೇವದತ್ತನ ಹೊರತಾಗಿ ಬೇರೆಯವರು ಚಿತ್ತ ಪರಿಶುದ್ಧತೆಗೆ ಒತ್ತುಕೊಟ್ಟು ಸಂತರಾಗುವ ಹಾದಿಯಲ್ಲಿದ್ದರೆ ದೇವದತ್ತನು ಮಂತ್ರಗಳನ್ನು ಆಶ್ರಯಿಸಿ ಪವಾಡಗಳನ್ನು ಸಾಧಿಸಲು ನಿರತನಾಗುತ್ತಿದ್ದನು. ಕೆಲವು ಪವಾಡಗಳನ್ನು ಸಿದ್ಧಿಸಿದನು.
ಅದೇ ವೇಳೆಯಲ್ಲಿ ವಿಹಾರದಲ್ಲಿ ಬುದ್ಧ ಭಗವಾನರಿಗೆ ಹಾಗು ಅವರ ಶಿಷ್ಯರನೇಕರಿಗೆ ನಾನಾರೀತಿಯ ಗೌರವ, ಸತ್ಕಾರ, ಪೂಜೆ ನಡೆಯುತ್ತಿದ್ದನ್ನು ಕಂಡ ದೇವದತ್ತನಿಗೆ ಮತ್ಸರ ಹಾಗು ಚಿಂತೆ ಉತ್ಪತ್ತಿಯಾಯಿತು. ತನ್ನ ಹೆಸರು ಯಾರಿಗೂ ತಿಳಿದಿಲ್ಲವಲ್ಲ, ತನಗೆ ಸತ್ಕಾರವಿಲ್ಲವಲ್ಲ ಎಂದು ಕೊರಗಿದನು. ಆತನಿಗೆ ಉಪಾಯ ಹೊಳೆದು ರಾಜಕುಮಾರ ಅಜಾತಶತ್ರುವನ್ನು ಬಲೆಗೆ ಹಾಕಿಕೊಳ್ಳಲು ನಿರ್ಧರಿಸಿದನು. ಅಜಾತಶತ್ರುವು ರಾಜ ಬಿಂಬಿಸಾರನ ಮಗನಾಗಿದ್ದನು. ಒಮ್ಮೆ ದೇವದತ್ತನು ಸರ್ಪಗಳಿಂದ ಅಲಂಕೃತನಾಗಿ ಶಿಶುವಿನ ರೂಪತಾಳಿ ಗಾಳಿಯಲ್ಲಿ ಹಾರಿ ಅಜಾತಶತ್ರುವಿನ ಮಡಿಲಲ್ಲಿ ಕುಳಿತನು. ಇದರಿಂದ ಅತ್ಯಂತ ಭಯಭೀತನಾದ ಅಜಾತಶತ್ರು ನೀನು ಯಾರು? ಎಂದು ಕೇಳಿದಾಗ ನಾನು ದೇವದತ್ತ ಎಂದು ಉತ್ತರಿಸಿ ಮತ್ತೆ ತನ್ನ ಭಿಕ್ಷು ರೂಪದಲ್ಲಿ ಕಾಣಿಸಿದನು. ಆಗ ಅಜಾತಶತ್ರುವಿಗೆ ದೇವದತ್ತನ ಮೇಲೆ ಅತೀವ ಭಯಭಕ್ತಿ ಉಂಟಾಯಿತು. ಅವನು ದೇವದತ್ತನಿಗೆ ಅನೇಕ ಸತ್ಕಾರ ಮಾಡಿದನು. ಆಗ ದೇವದತ್ತನಿಗೆ ಭಿಕ್ಷುಗಳ ನಾಯಕತ್ವ ವಹಿಸಬೇಕೆಂದು ಇಚ್ಛೆಯಾಯಿತು. ಯಾವಾಗ ಆತನಿಗೆ ಈ ಪಾಪ ಇಚ್ಛೆ ಉಂಟಾಯಿತೋ ಆಗ ಆತನು ಪವಾಡಶಕ್ತಿಯನ್ನು ಕಳೆದುಕೊಂಡನು.
ಒಮ್ಮೆ ಬುದ್ಧ ಭಗವಾನರು ವಿಶಾಲ ಜನರಿಗೆ ಧಮರ್ೊಪದೇಶ ಮಾಡುತ್ತಿದ್ದರು. ಅವರಲ್ಲಿ ರಾಜರು, ರಾಜಕುಮಾರರು ಮತ್ತು ಇತರ ಜನರಿದ್ದರು. ದೇವದತ್ತನು ಬುದ್ಧ ಭಗವಾನರ ಬಳಿಗೆ ಬಂದು ಮೊಣಕಾಲು ಬಾಗಿಸಿ ಕುಳಿತು, ಕೈಜೋಡಿಸಿ ಈ ರೀತಿ ಕೇಳಿಕೊಂಡನು: ಭಗವಾನ್, ತಮಗೆ ಈಗ ವೃದ್ಧಾಪ್ಯ ಬರುತ್ತಿದೆ, ನೀವು ಹೆಚ್ಚು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ನಾನು ಭಿಕ್ಷು ಸಂಘವನ್ನು ನೋಡಿಕೊಳ್ಳುತ್ತೇನೆ. ಆದ್ದರಿಂದ ನೀವು ನನಗೆ ಭಿಕ್ಷುಗಳನ್ನು ವಹಿಸಬೇಕು. ಆದರೆ ಅದಕ್ಕೆ ಸಂಪೂರ್ಣ ಅನರ್ಹನಾಗಿದ್ದ ದೇವದತ್ತನ ಸಲಹೆ ಭಗವಾನರು ನಿರಾಕರಿಸಿದರು. ಇದರಿಂದ ದೇವದತ್ತನು ಅತಿಯಾಗಿ ಕೆರಳಿದನು, ಬಾಧೆಗೊಳಗಾದನು. ನಂತರ ಅಲ್ಲಿಂದ ಹೊರಟುಬಿಟ್ಟನು. ಬುದ್ಧ ಭಗವಾನರು ದೇವದತ್ತನ ಕ್ರಿಯೆಗೆ ತಾವಾಗಲಿ ಅಥವಾ ಸಂಘವಾಗಲಿ ಹೊಣೆಯಲ್ಲ ಎಂದು ತಿಳಿಸಿದರು.
ಇದರಿಂದ ದೇವದತ್ತನಿಗೆ ಬುದ್ಧ ಭಗವಾನರ ಮೇಲೆ ಅತೀವ ಸೇಡು ಭಾವನೆ ತುಂಬಿಕೊಂಡನು. ಆತನು ಅಜಾತಶತ್ರುವಿನ ಬಳಿ ಹೋಗಿ ತನ್ನ ತಂದೆಯಾದ ಬಿಂಬಿಸಾರನನ್ನು ರಾಜ್ಯಕ್ಕಾಗಿ ಕೊಲ್ಲಲು ಪ್ರೇರೇಪಿಸಿ, ತಾನು ಬುದ್ಧರನ್ನು ಕೊಲ್ಲಿಸಲು ನಿರ್ಧರಿಸಿದನು. ದೇವದತ್ತನು ಇದರ ಫಲಿತಾಂಶ ಹೀಗೆ ಹೇಳಿದರು. ಅಜಾತಶತ್ರುವು ತಂದೆಯನ್ನು ಕೊಂದು ತಾನೇ ರಾಜನಾಗುವುದು ಹಾಗು ದೇವದತ್ತನು ಬುದ್ಧರನ್ನು ಕೊಲ್ಲಿಸಿ ತಾನೇ ಭಿಕ್ಷು ಸಂಘದ ನಾಯಕನಾಗುವುದಾಗಿ ಹೇಳಿದನು. ಆ ಮೂರ್ಖ ಅಜಾತಶತ್ರು ಹಾಗೆಯೇ ತಂದೆಯನ್ನು ಕೊಲ್ಲಿಸಿ ರಾಜನಾದನು. ಹಾಗು ದೇವದತ್ತ ಬುದ್ಧರನ್ನು ಕೊಲ್ಲಲು ಕೊಲೆಗಡುಕರ ಗುಂಪನ್ನು ಕಳುಹಿಸಿದನು. ಆ ಕೊಲೆಗಡುಕರು ಪ್ರತ್ಯೇಕವಾಗಿ ಬುದ್ಧರನ್ನು ಕೊಲ್ಲಲು ಬಂದು ಅವರ ಉಪದೇಶ ಕೇಳಿ ಸೋತಪತ್ತಿ ಫಲ (ಶೀಲವಂತರಾಗಿ, ಮುಕ್ತಿಗೆ ಅರ್ಹ ವ್ಯಕ್ತಿಗಳಾಗಿ) ಪಡೆದು ತಮ್ಮ ಮನೆಗಳಿಗೆ ಹೊರಟರು. ಆಗ ದೇವದತ್ತನು ತಾನೇ ಕೊಲ್ಲಲು ನಿರ್ಧರಿಸಿದನು. ಅದರಂತೆಯೇ ಆತನು ಗಿಜ್ಝಕೂಟ ಪರ್ವತದ ಮೇಲೆ ಹತ್ತಿ ಅಲ್ಲಿಂದ ದೊಡ್ಡ ಬಂಡೆಯೊಂದನ್ನು ಭಗವಾನರು ಕುಳಿತಿರುವ ಸ್ಥಳದಲ್ಲಿ ಅವರ ಮೇಲೆ ಬೀಳುವಂತೆ ತಳ್ಳಿದನು. ಆದರೆ ಅದು ಬುದ್ಧ ಬಲದಿಂದ ಪಕ್ಕಕ್ಕೆ ಬಿದ್ದಿತು. ಕೇವಲ ಒಂದು ಚೂರು ಸಿಡಿದು ಅದು ಬುದ್ಧರ ಕಾಲಿಗೆ ಚುಚ್ಚಿತು. ಈ ರೀತಿಯಾಗಿ ಅಸಫಲನಾದ ಮೇಲೆ ದೇವದತ್ತನು ಮತ್ತೊಂದು ಉಪಾಯ ಮಾಡಿದನು. ರಾಜನ ಪ್ರಧಾನ ಆನೆಯನ್ನು (ನಾಲಾಗಿರಿ) ಅತಿಯಾಗಿ ಮದ್ಯಪಾನ ಮಾಡಿಸಿ, ಅದನ್ನು ಹಾಗೆ ಸ್ವೇಚ್ಛೆಯಾಗಿ ಬುದ್ಧರು ಇರುವ ಕಡೆ ಬಿಟ್ಟನು. ಆ ಆನೆಯು ಅತ್ಯಂತ ಭೀಷಣವಾಗಿ ರೌದ್ರಾವತಾರ ತಾಳಿ ನುಗ್ಗಿಬಂದುದನ್ನು ಕಂಡು ಗಾಬರಿಯಾದ ಆನಂದ ಥೇರರಂತು ಬುದ್ಧರ ಮುಂದೆ ರಕ್ಷಣಾಯುತವಾಗಿ ನಿಂತರು. ಆದರೆ ಅರಹಂತರಾದ ಶಾಂತ ಸ್ವರೂಪರಾದ ಭಗವಾನರು ಅಣುಮಾತ್ರವೂ ವಿಚಲಿತರಾಗದೆ ಅಪಾರ ಮೈತ್ರಿಯಿಂದ ಮಗುವನ್ನು ಸ್ಪಶರ್ಿಸುವ ಹಾಗೆ ಆನೆಯ ಸೊಂಡಿಲನ್ನು ಸ್ಪಶರ್ಿಸಿ ಅದನ್ನು ಪರಿಪೂರ್ಣವಾಗಿ ನಿಯಂತ್ರಿಸಿದರು. ನಂತರ ವಿಹಾರಕ್ಕೆ ಹೊರಟರು.
ಇಲ್ಲಿಯತನಕ ಜನರಿಗೆ ದೇವದತ್ತನ ದುಷ್ಕೃತ್ಯಗಳ ಅರಿವು ಇರಲಿಲ್ಲ. ಆದರೆ ಈಗ ಜನರು ಸ್ಪಷ್ಟವಾಗಿ ಅರಿತರು. ದೇವದತ್ತನಿಂದಲೇ ಅಜಾತಶತ್ರುವು ತಂದೆಯನ್ನು ಕೊಂದಿದ್ದು, ತಥಾಗತರನ್ನು ಕೊಲೆಗಡುಕರಿಂದ ಕೊಲ್ಲಲು ಪ್ರಯತ್ನಿಸಿದ್ದು, ದೇವದತ್ತ ಸ್ವತಃ ಬಂಡೆ ದೂಡಿ ಹತ್ಯೆಗೆ ಪ್ರಯತ್ನಿಸಿದ್ದು, ಈಗ ಪಟ್ಟದ ಆನೆ ನಾಲಾಗಿರಿಯನ್ನು ಬಿಟ್ಟು ಭಗವಾನರ ಹತ್ಯೆಗೆ ಪ್ರಯತ್ನಿಸಿದ್ದು ಜನರಿಗೆ ಸ್ಪಷ್ಟವಾಗಿ ಅರಿವಾಯಿತು. ಹಾಗು ಜನರಲ್ಲಿ ಅಪಾರ ಗಾಬರಿ ಉಂಟಾಯಿತು. ಜನರ ತಿಳುವಳಿಕೆಯನ್ನು ಅರಿತ ಅಜಾತಶತ್ರುವು ಮುಂದೆ ದೇವದತ್ತನಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದನು. ನಾಗರಿಕರು ಸಹಾ ಆತನಿಗೆ ಭಿಕ್ಷಾಟನೆಗೆ ಬಂದಾಗ ಆಹಾರ ನೀಡಲು ನಿರಾಕರಿಸಿದರು.
ಆನಂತರ ದೇವದತ್ತನು ಸಂಘಬೇಧ ಮಾಡಲು ನಿರ್ಧರಿಸಿದನು. ಆತನು 500 ಭಿಕ್ಷುಗಳಿಗೆ ಮತಿಗೆಡಿಸಿ ತನ್ನೊಂದಿಗೆ ಗಯಾಸಿಸಗೆ ಕರೆದೊಯ್ಯದನು. ಕೆಲವು ಸಮಯದ ನಂತರ ಆ ಎಲ್ಲರೂ ಮತ್ತೆ ಹಿಂದಿರುಗಿ ಭಗವಾನರಲ್ಲಿ ಕ್ಷಮೆಯಾಚಿಸಿ ಮತ್ತೆ ಸಂಘವನ್ನು ಸೇರಿದರು. ಆದರೆ ಕೋಕಾಲಿಕ ಒಬ್ಬನು ಮಾತ್ರ ಸೇರಲಿಲ್ಲ, ಅವನು ದೇವದತ್ತನ ಮಿತ್ರನಾಗಿದ್ದನು. ಅವನು ದೇವದತ್ತನಿಗೆ ಕೋಪದಿಂದ ಒಮ್ಮೆ ತನ್ನ ಮೊಣಕಾಲಿನಿಂದ ದೇವದತ್ತನ ಎದೆಗೆ ಬಲವಾಗಿ ಹೊಡೆದನು. ಅದರ ಪರಿಣಾಮವಾಗಿ ದೇವದತ್ತನು ಒಂಬತ್ತು ತಿಂಗಳಕಾಲ ಕಾಯಿಲೆ ಬಿದ್ದನು.
ನಂತರ ಆತನಿಗೆ ಆತನ ಕೃತ್ಯಗಳ ಬಗ್ಗೆ ತೀವ್ರ ಪಶ್ಚಾತ್ತಾಪ ಉಂಟಾಯಿತು. ಆತನು ಬುದ್ಧ ಭಗವಾನರನ್ನು ನೋಡಲು ತೀವ್ರವಾಗಿ ಬಯಸಿದನು. ದೇವದತ್ತನು ಹೀಗೆಲ್ಲಾ ಹೇಳಿಕೊಳ್ಳುತ್ತಿದ್ದನು: ಆ ಮಹಾ ಕರುಣಾಮಯಿಗಳು ಎಂದಿಗೂ ಕ್ಷಣಮಾತ್ರಕ್ಕೂ ದ್ವೇಷಿಸಲಿಲ್ಲ, ಆದರೆ ಪರಮನೀಚನಾದ ನಾನೇ ಅವರಿಗೆ ಮಾಡಬಾರದ್ದನ್ನೆಲ್ಲಾ ಮಾಡಿದೆ.
ದೇವದತ್ತನಿಗೆ ಪಲ್ಲಕ್ಕಿಯಲ್ಲಿರಿಸಿಕೊಂಡು ಬುದ್ಧರನ್ನು ಕಾಣಲು ಕರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯದಲ್ಲೇ ಆತನು ಮರಣ ಹೊಂದಿದನು. ಆತನ ಶವದ ಪಲ್ಲಕ್ಕಿ ಕೆಳಗೆ ಇಳಿಸಿದಾಗ ಭೂಮಿಯೇ ತೆರೆದುಕೊಂಡು ಆತನನ್ನು ಅಗ್ನಿಸಮೇತ ಅವೀಚಿ ನರಕಕ್ಕೆ ಕರೆದೊಯ್ಯಿತು.
ರಾಜಕುಮಾರ ಅಜಾತಶತ್ರುವು ನಂತರ ಭಗವಾನರ ಅತಿ ಶ್ರದ್ಧಾಳು ಪರಮ ಭಕ್ತನಾದನು. ಧಮ್ಮಕ್ಕೆ, ಸಂಘಕ್ಕೆ ಮಹಾ ಸಹಾಯಕನಾದನು. ಆದರೂ ಸಹಾ ಕೆಟ್ಟ ಗೆಳೆತನದಿಂದ ತನ್ನ ತಂದೆಯ ಹತ್ಯೆಯ ಪ್ರತಿಫಲವಾಗಿ ಆತನು ಸಹಾ ತನ್ನ ಮಗನಿಂದ ಕೊಲ್ಲಲ್ಪಟ್ಟು, ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿದನು.
- ಧಮ್ಮಪದ ಅಟ್ಠಕಥಾ