Friday, 20 April 2018

ಅಂಗುಲಿಮಾಲಾ (ಕರುಣಾಶಕ್ತಿಯ ಕಥಾನಕ)

ಅಂಗುಲಿಮಾಲಾ (ಕರುಣಾಶಕ್ತಿಯ ಕಥಾನಕ)

ಪಸನೇದಿ ರಾಜನ ಆಸ್ಥಾನದಲ್ಲಿದ್ದ ಪುರೋಹಿತನಿಗೆ ಮಗನು ಜನಿಸಿದನು. ಆತನಿಗೆ ಅಹಿಂಸಕನೆಂದು ಹೆಸರಿಡಲಾಯಿತು. ಆತನಿಗೆ ತಕ್ಷಶಿಲೆಗೆ ವಿದ್ಯಾಭ್ಯಾಸಕ್ಕೆ ಕಳುಹಿಸಲಾಯಿತು. ಅಹಿಂಸಕನು ತನ್ನ ಗುರುವಿಗೆ ಅತ್ಯಂತ ವಿಧೇಯನಾಗಿ ಹಾಗು ಅತ್ಯಂತ ಚಾಣಕ್ಷಮತಿಯಾಗಿದ್ದನು. ಆದ್ದರಿಂದ ಆತನು ತನ್ನ ಗುರುವಿಗೆ ಹಾಗು ಗುರುಪತ್ನಿಗೆ ಪ್ರಿಯನಾಗಿದ್ದನು. ಇದು ಬೇರೆ ವಿದ್ಯಾಥರ್ಿಗಳಿಗೆ ಮತ್ಸರವನ್ನು ಉಂಟುಮಾಡಿತು. ಆದ್ದರಿಂದ ಅವರು ಗುರುವಿನ ಹತ್ತಿರ ಹೋಗಿ ಅಹಿಂಸಕನ ವಿರುದ್ಧ ಆತನು ಗುರುಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಚಾಡಿ ಹೇಳಿದನು. ಮೊದಲು ಗುರುವು ಇದನ್ನು ನಂಬಲಿಲ್ಲ. ಆದರೆ ನಿರಂತರ ಈ ಬಗೆಯ ಚಾಡಿ ಕೇಳಿ ಇದು ನಿಜವೆನಿಸಿತು. ಆತನು ಅಹಿಂಸಕನ ಮೇಲೆ ಸೇಡು ತೀರಿಸುವುದಾಗಿ ಪ್ರತಿಜ್ಞೆ ಮಾಡಿಕೊಂಡನು. ಅಹಿಂಸಕನಿಗೆ ಕೊಲ್ಲುವುದು ಆತನಿಗೆ ಅಪಾಯವೆನಿಸಿತು.  ಆದರೆ ಆತನ ಕ್ರೋಧವು ಮುಗ್ಧ ಯುವಕ ಅಹಿಂಸಕನಿಗೆ ಸಾವಿರ ಜನರನ್ನು ಕೊಂದು ಅವರ ಬಲಗೈ ಹೆಬ್ಬರಳುಗಳನ್ನು ಗುರುದಕ್ಷಿಣೆಯಾಗಿ ನೀಡಬೇಕೆಂದು ಆಜ್ಞೆ ಮಾಡಿದನು. ಆದರೆ ಆ ಯುವಕ ಅಂಥದನ್ನು ಯೋಚಿಸಿಯು ಸಹಾ ಇರಲಿಲ್ಲ.  ಆದ್ದರಿಂದ ಆತನನ್ನು ಗುರುಕುಲದಿಂದ ಹೊರಹಾಕಿದರು. ನಂತರ ಅಹಿಂಸಕನು ತನ್ನ ಮನೆ ಕಡೆಗೆ ಹೊರಟನು.
ಯಾವಾಗ ಅಹಿಂಸಕನ ತಂದೆಯು ಈ ಎಲ್ಲಾ ಮೇಲು ವಿಷಯಗಳನ್ನು ತಿಳಿದನೋ ಆತನು ಅಹಿಂಸಕನ ಯಾವ ಮಾತನ್ನು ಕೇಳಲಿಲ್ಲ.  ಅದೇ ದಿನ ಮಳೆಯು ಧಾರಾಕಾರವಾಗಿ ಸುರಿಯುತ್ತಿತ್ತು.  ಆತನು ಅಹಿಂಸಕನಿಗೆ ಆ ಕ್ಷಣವೆ ಮನೆಯನ್ನು ಬಿಡುವಂತೆ ಆಜ್ಞೆ ಮಾಡಿದನು.  ಅಹಿಂಸಕನು ತನ್ನ ತಾಯಿಯ ಹತ್ತಿರ ಹೋಗಿ ಆಕೆಯ ಸಹಾಯವನ್ನು ಅಪೇಕ್ಷಿಸಿದನು.  ಆದರೆ ಆಕೆಯು ತನ್ನ ಪತಿಯ ಆಜ್ಞೆಯನ್ನು ಮೀರುವ ಹಾಗಿರಲಿಲ್ಲ.  ನಂತರ ಅಹಿಂಸಕನು ತನ್ನ ಭಾವಿ ಮಾವನ ಮನೆಗೆ ಹೋದನು. (ಹಿಂದಿನ ಕಾಲದಲ್ಲಿ ಚಿಕ್ಕಂದಿನಲ್ಲಿ ನಿಶ್ಚಿತಾರ್ಥ ಮಾಡಿ ಹಿರಿಯರಾದ ಮೇಲೆ ಮದುವೆ ಮಾಡುತ್ತಿದ್ದರು). ಆದರೆ ಆ ಕುಟುಂಬವು ಈತನು ವಿದ್ಯಾಭ್ಯಾಸದಿಂದ ಹೊರಹಾಕಲ್ಪಟ್ಟಿದ್ದನ್ನು ಅರಿತು ಅವರು ಸಹಾ ಆತನನ್ನು ಹೊರಹಾಕಿದರು.
ಆ ನಾಚಿಕೆ, ಕೋಪ, ಭಯ ಹಾಗು ನಿರಾಶೆ, ಶೋಕಗಳು ಆತನ ಮನಸ್ಸಿನ ನಿಯಂತ್ರಣವನ್ನು ತಪ್ಪಿಸಿದವು.  ಅವನ ದುಃಖತಪ್ತ ಮನವು ಗುರುವಿನ ದಕ್ಷಿಣೆಯನ್ನು ಪೂರ್ಣ ಮಾಡಲು ನಿರ್ಧರಿಸಿತು.  ಆತನು ಸಾವಿರ ಜನರನ್ನು ಕೊಂದು ಹೆಬ್ಬೆರಳನ್ನು ಸಂಗ್ರಹಿಸಲು ನಿರ್ಧರಿಸಿದನು. ಅವನು ಕೊಲ್ಲುವುದನ್ನು ಪ್ರಾರಂಭಿಸಿದನು. ಆತನು ಕೊಂದಂತೆಯೇ ಅವರ ಹೆಬ್ಬೆರಳುಗಳನ್ನು ಒಂದು ಮರಕ್ಕೆ ನೇತುಹಾಕುತ್ತಿದ್ದನು. ಆದರೆ ಅವು ಕಾಗೆ ಹದ್ದುಗಳಿಂದ ನಾಶವಾಗುತ್ತಿತ್ತು. ಆದ್ದರಿಂದ ಆತನು ಆ ಹೆಬ್ಬೆರಳುಗಳ ಹಾರವನ್ನು ಧರಿಸಿ ಅವುಗಳ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಲು ಆರಂಭಿಸಿದನು.
ಇದಾದ ನಂತರ ಆತನು ಅಂಗುಲಿಮಾಲಾ (ಹೆಬ್ಬರಳುಗಳ ಹಾರವುಳ್ಳವನು) ಎಂದು ಕುಖ್ಯಾತಿ ಪಡೆದನು. ಹಾಗು ಆ ರಾಜ್ಯದ ಭಾಗದಲ್ಲಿ ಆತನು ಅತಿ ಭಯಂಕರನಾದನು. ರಾಜನು ಈತನ ಎಲ್ಲಾ ಕಾರ್ಯಗಳನ್ನು ಕೇಳಿ ಆತನನ್ನ ಹಿಡಿದು ಹಾಕಬೇಕೆಂದು ನಿರ್ಧರಿಸಿನು. ಈ ವಿಷಯ ಅಂಗುಲಿಮಾಲಾನ ತಾಯಿ ಮಂತನಿಗೆ ತಿಳಿಯಿತು. ಆಕೆಯ ವಾತ್ಸಲ್ಯ ಆಕೆಗೆ ತನ್ನ ಮಗನನ್ನು ಉಳಿಸಬೇಕೆಂದು ಆಕೆ ಅರಣ್ಯಕ್ಕೆ ಬಂದಳು.  ಆ ಸಮಯದಲ್ಲಿ ಅಂಗುಲಿಮಾಲಾನ ಕತ್ತಿನಲ್ಲಿ 999 ಬೆರಳುಗಳು ಇದ್ದವು. ಒಂದೇ ಒಂದು ಹೆಬ್ಬೆರಳು ಆತನಲ್ಲಿ ಕಡಿಮೆ ಇತ್ತು.
ಬುದ್ಧ ಭಗವಾನರಿಗೆ ಈ ತಾಯಿಯು ತನ್ನ ಮಗನಿಗೆ ಪರಿವರ್ತನೆ ಗೊಳಿಸಿ ರಕ್ಷಿಸಿರೆಂದು ಹೊರಟಿರುವುದು ದಿವ್ಯದೃಷ್ಟಿಯ ಮೂಲಕ ತಿಳಿಯಿತು.  ಆದರೆ ಅಂಗುಲಿಮಾಲಾನಿಗೆ ಒಂದು ಬೆರಳಿನ ಕಾತುರ ಎಷ್ಟು ಇತ್ತು ಎಂದರೆ ಆತನು ತನ್ನ ತಾಯಿಯು ಅರಣ್ಯ ಮಾರ್ಗದಲ್ಲಿ ಬಂದರೂ ಸಹಾ ಆತನು ಆಕೆಯನ್ನು ಕೊಲ್ಲಲು ಸಿದ್ಧನಾಗಿದ್ದನು. ಹಾಗೇನಾದರೂ ಆದರೆ ಅಂಗುಲಿಮಾಲಾನು ತನ್ನ ಹೀನವಾದ ಕರ್ಮದಿಂದ ಅಪಾರ ಕಾಲದವರೆಗೆ ದುಃಖದ ಸ್ಥಿತಿ ಅನುಭವಿಸಬೇಕಾಗಿತ್ತು.  ಆದ್ದರಿಂದ ಬುದ್ಧ ಭಗವಾನರು ಸಕಾಲದಲ್ಲಿ ಅಪಾರ ಕರುಣೆಯಿಂದ ಕಾಡಿಗೆ ಹೊರಟರು.
ಅಂಗುಲಿಮಾಲಾನು ಸಹಾ ಎಷ್ಟೋ ಹಗಲು ರಾತ್ರಿಗಳನ್ನು ನಿದ್ದೆಗಳಿಲ್ಲದೆ ಕಳೆದಿದ್ದನು.  ಆತನು ಅತ್ಯಂತ ದಣಿದಿದ್ದನು, ಹಾಗು ತೀರ ನಿತ್ರಾಣನಾಗಿದ್ದನು.  ಆದರೂ ಆ ಸಮಯದಲ್ಲಿ ಆತನ ಸಾವಿರ ಬೆರಳಿಗಾಗಿ ಕೊನೆಯ ವ್ಯಕ್ತಿಯನ್ನು ಕೊಲ್ಲಲು ಅತಿ ಹಾತೊರೆಯುತ್ತಿದ್ದನು.
ಅವನು ಅರಣ್ಯದಲ್ಲಿ ಕಾಣುವ ಪ್ರಥಮ ವ್ಯಕ್ತಿಯನ್ನು ಕೊಲ್ಲಲು ನಿರ್ಧರಿಸಿದನು. ಆತನು ಒಂದು ಪರ್ವತದ ಎತ್ತರದಲ್ಲಿ ನಿಂತು ದಾರಿಯಲ್ಲಿ ಬರುತ್ತಿರುವ ಒಂದು ಸ್ರೀಯನ್ನು ಕಂಡನು. ಆತನು ತನ್ನ ಸಾವಿರದ ಬೆರಳನ್ನು ಪೂರ್ಣಗೊಳಿಸಲು ಆಕೆಯನ್ನು ಕೊಲ್ಲಲು ನಿರ್ಧರಿಸಿದನು.  ಆದರೆ ಆಕೆ ಹತ್ತಿರವಾದಂತೆ ನೋಡಿದಾಗ ಆಕೆ ಸಾಕ್ಷಾತ್ ತಾಯಿಯೇ ಆಗಿದ್ದಳು. ಅದೇ ಸಮಯದಲ್ಲಿ ಬುದ್ಧಭಗವಾನರು ಬರುತ್ತಿರುವುದು ಕಂಡನು. ಆಗ ಅಂಗುಲಿಮಾಲಾನು ತನ್ನ ತಾಯಿಯ ಬದಲು ಈ ಶ್ರಮಣರನ್ನು ಕೊಲ್ಲಲು ನಿರ್ಧರಿಸಿದನು. ಆತನು ತಥಾಗತರ ಬಳಿಗೆ ತನ್ನ ಖಡ್ಗವನ್ನು ಮೇಲೆತ್ತಿ ಬಂದನು. ಅಂದರೆ ಬುದ್ಧ ಭಗವಾನರು ತಮ್ಮ ಸಹಜ ಅನುಪಮ ಗಂಭೀರ ಮೈತ್ರಿಯ ನಡಿಗೆಯಲ್ಲಿ ಮುಂದೆ ಹೋಗುತ್ತಿದ್ದರು.  ಆದರೆ ಅಂಗುಲಿಮಾಲಾನಿಗೆ ಬುದ್ಧರನ್ನು ಹಿಡಿಯಲು ಸಾಧ್ಯವಾಗಲಿಲ್ಲ.  ಕೊನೆಗೆ ಆತನು ಓ ಬಿಕ್ಷು, ನಿಲ್ಲು ನಿಲ್ಲು ಎಂದು ಅರಚಿದನು. 
ಆಗ ಸಮ್ಮಸಂಬುದ್ಧರು ಹೀಗೆ ಉತ್ತರಿಸಿದರು ನಾನು ನಿಂತೆ ಇದ್ದೇನೆ ಅಂಗುಲಿಮಾಲಾ, ಆದರೆ ನೀನೇ ನಿಂತಿಲ್ಲ.
ಅಂಗುಲಿಮಾಲಾನಿಗೆ ಈ ಪದಗಲು ಅರ್ಥವಾಗಲಿಲ್ಲ.  ಆತನು ಬುದ್ಧರಿಗೆ ಕೇಳಿದನು ಓ ಭಿಕ್ಷು! ಏಕೆ ಹೀಗೆ ನೀನು ಹೇಳವೆ, ನೀನು ನಿಂತಿರುವೆ ನಾನು ನಿಂತಿಲ್ಲವೆಂದು.
ಬುದ್ಧಭಗವಾನರು ಉತ್ತರಿಸಿದರು ನಾನು ನಿಂತಿದ್ದೇನೆ, ಹೇಗೆಂದರೆ ನಾನು ಜೀವಿಗಳ ಹತ್ಯೆಯನ್ನು ಮಾಡುವುದನ್ನು ಎಂದೋ ತ್ಯಜಿಸಿದ್ದೇನೆ, ನಾನು ಜೀವಿಗಳ ಹಿಂಸೆಯನ್ನು ಬಿಟ್ಟಿಬಿಟ್ಟಿದ್ದೇನೆ ಹಾಗು ನಾನು ಮೈತ್ರಿ, ಕ್ಷಮೆ, ಸಹನೆ ಮತ್ತು ಜ್ಞಾನದಲ್ಲಿ ಪ್ರತಿಷ್ಠಿತವಾಗಿದ್ದೇನೆ.  ಆದರೆ ನೀನು ಕೊಲ್ಲುವುದನ್ನು ತ್ಯಜಿಸಿಲ್ಲ ಅಥವಾ ಪರಪೀಡನೆ ಬಿಟ್ಟಿಲ್ಲ ಮತ್ತು ನೀನು ಮೈತ್ರಿ ಸಹನೆ ಹಾಗು ಕ್ಷಮೆಯಲ್ಲಿ ಸ್ಥಾಪಿತನಾಗಿಲ್ಲ, ಆದ್ದರಿಂದ ನೀನು ಇನ್ನೂ ನಿಂತಿಲ್ಲ.
ಈ ಶಬ್ದಗಳು, ಈ ಪದಗಳು ಅಂಗುಲಿಮಾಲಾನಲ್ಲಿ ಸತ್ಯದ ಅರಿವನ್ನು ಉಂಟುಮಾಡಿತು. ಆತನಿಗೆ ಈ ಮಾತುಗಳು ಜ್ಞಾನಿಯ ಅಮೃತವಾಣಿ ಎನಿಸಿತು.  ಈ ಶ್ರಮಣನು ಅತ್ಯಂತ ಜ್ಞಾನಿ ಹಾಗು ಅತ್ಯಂತ ಧೈರ್ಯಶಾಲಿ, ಖಂಡಿತವಾಗಿ ಈತನೇ ನಾಯಕರೆಂದೂ ಹಾಗು ಇವರೇ ಬುದ್ಧಭಗವಾನ ರೆಂದು ಆತನಿಗೆ ಅರಿವಾಯಿತು. ಭಗವಾನರು ತನಗೆ ಬೆಳಕನ್ನುಂಟು ಮಾಡಲು ಸ್ವತಃ ಬಂದಿದ್ದಾರೆ ಎಂದೆನಿಸಿತು. ಹಾಗು ಆತನು ಜ್ಞಾನದ ಪರಿವರ್ತನೆಯ ಭಾವದಲ್ಲಿ ತನ್ನ ಆಯುಧಗಳನ್ನು ಎಸೆದನು ಮತ್ತು ಬುದ್ಧಭಗವಾನರಲ್ಲಿ ತನ್ನನ್ನು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಭಗವಾನರು ಭಿಕ್ಷುವನ್ನಾಗಿ ಮಾಡಿದರು.
ರಾಜ ಪಸನೇದಿ ಹಾಗು ಆತನ ಸೈನ್ಯವು ಅಂಗುಲಿಮಾಲಾನನ್ನು ಹಿಡಿಯಲು ಬಂದಿದ್ದರು. ಅವರು ಹಾದಿಯಲ್ಲಿ ಬುದ್ಧರನ್ನು ಕಾಣಲು ಬಂದಿರುವಾಗ ಬುದ್ಧ ವಿಹಾರದಲ್ಲಿ ಅಂಗುಲಿಮಾಲಾನನ್ನು ಕಂಡರು, ಅದೂ ಭಿಕ್ಷುವಿನ ರೂಪದಲ್ಲಿ. ಅವರಿಗೂ ಅಂಗೂಲಿಮಾಲಾನು ತನ್ನ ನೀಚತ್ವದ ಮಾರ್ಗವನ್ನು ವಜರ್ಿಸಿ ಸಂತತ್ವದ ಹಾದಿಯಲ್ಲಿರುವುದು ಅರಿವಾಯಿತು.  ರಾಜನು ಅಂಗುಲಿಮಾಲಾನನ್ನು ಏಕಾಂತವಾಗಿ, ಸ್ವತಂತ್ರವಾಗಿ ಬಿಡಲು ಒಪ್ಪಿದರು.  ಅಂಗುಲಿಮಾಲಾನು ವಿಹಾರದಲ್ಲಿ ಇರುವಾಗ ಆಳವಾದ ಧ್ಯಾನದಲ್ಲಿ ನಿರಂತರ ಪರಿಶ್ರಮ ಪಡುತ್ತಿದ್ದನು.
ಆದರೂ ಸಹಾ ಆತನಿಗೆ ಮನಶ್ಶಾಂತಿಯು ದೊರೆಯುತ್ತಿರಲಿಲ್ಲ.  ಏಕೆಂದರೆ ಆತನ ಏಕಾಂತತೆಯ ಧ್ಯಾನದಲ್ಲಿಯೂ ಸಹಾ ಆತನಿಗೆ ಹಿಂದಿನ ನೆನಪುಗಳು ಪಶ್ಚಾತ್ತಾಪವನ್ನುಂಟು ಮಾಡುತ್ತಿತ್ತು.  ಹಾಗು ಈತನಿಂದ ದುಭರ್ಾಗ್ಯಕ್ಕೀಡಾದವರ ಅಳಕು ಕೂಗುಗಳು ಆತನಿಗೆ ದುಃಖವನ್ನುಂಟು ಮಾಡುತ್ತಿತ್ತು.  ಆತನ ಕೆಟ್ಟಪಾಪದ ಕರ್ಮವು ಫಲ ಕೊಡಲು ಆರಂಭಿಸಿತು.  ಆತನು ಭಿಕ್ಷಾಟನೆಗೆ ಬೀದಿಯಲ್ಲಿ ಹೋಗುತ್ತಿದ್ದರೆ ಮೊಂಡಜನರ ಕಲ್ಲಿಗೆ, ಕೋಲುಗಳಿಗೆ ಆತನ ದೇಹವು ಸಿಕ್ಕಬೇಕಾಯಿತು. ಒಮ್ಮೆಯಂತು ತಲೆಗೆ ಏಟು ಬಿದ್ದು ಮುರಿದ ತಲೆಯೊಂದಿಗೆ ಜೇತವನದ ವಿಹಾರಕ್ಕೆ ರಕ್ತ ಸುರಿಸುತ್ತಾ, ಆಳವಾದ ಗಾಯಗಳೊಂದಿಗೆ ಬುದ್ಧಭಗವಾನರ ಬಳಿಗೆ ಬಂದನು. ಆಗ ಬುದ್ಧರು ಇಂತೆಂದರು : ಮಗು ಅಂಗುಲಿಮಾಲಾ, ನೀನು ಕೆಟ್ಟ ಕೃತ್ಯಗಳಿಂದ ಪಾರಾಗಿದ್ದೀಯೆ. ಸಹನೆ, ಕ್ಷಮೆಯುಳ್ಳವನಾಗಿರು. ಇದು ನೀನು ಮಾಡಿದ ಈ ಜನ್ಮದ ಪಾಪದ ಫಲವಾಗಿದೆ.  ಆದರೆ ನೀನು ಈ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಗಳ ಫಲ ನಿನಗೆ ದೊರೆಯದಂತೆ ನೀನಾಗಿದ್ದೀಯೆ.
ಒಂದು ದಿನ ಶ್ರಾವಸ್ಥಿಗೆ ಅಂಗುಲಿಮಾಲಾನು ಬೆಳಿಗ್ಗೆ ಭಿಕ್ಷಾಟನೆಗೆ ಹೋಗುತ್ತಿರುವಾಗ ಆತನಿಗೆ ಯಾರೋ ನೋವಿನಿಂದ ರೋಧಿಸುತ್ತಿರುವುದು ಕಂಡುಬಂತು. ಹತ್ತಿರ ಬಂದು ವೀಕ್ಷಿಸಿದಾಗ ಒಬ್ಬ ಗಭರ್ಿಣಿ ಹೆಣ್ಣು ತನ್ನ ಮಗುವನ್ನು ಹಡೆಯಲು ಆಗದೆ ಆಳವಾದ ನೋವುಗಳನ್ನು ಅಪಾರ ಕಷ್ಟವನ್ನು ಅನುಭವಿಸುತ್ತಿದ್ದಳು.  ಅಂಗುಲಿಮಾಲಾನಿಗೆ ಸರ್ವಜೀವಿಗಳೂ ದುಃಖದಲ್ಲಿರುತ್ತಾರೆ ಎಂದು ಜ್ಞಾನೋದಯವಾಯಿತು.  ಅವನು ಕರುಣೆಯಿಂದ ಅಲಂಕೃತನಾಗಿ ಈ ವಿಷಯವನ್ನು ಬುದ್ಧಭಗವಾನರಲ್ಲಿ ತಿಳಿಸಿದನು. ಭಗವಾನರು ಸತ್ಯಕ್ರಿಯೆಯ ಕೆಲವು ವಾಕ್ಯಗಳನ್ನು ತಿಳಿಸಿ ಅದನ್ನು ದುಃಖಿತ ಸ್ತ್ರೀಯ ಬಳಿ ಹೇಳೆಂದರು. (ಅದು ಮುಂದೆ ಈಗಲೂ ಅಂಗುಲಿಮಾಲಾ ಪರಿತ್ತಾ (ರಕ್ಷಣಾಸೂತ್ರ) ಎಂದು ಪ್ರಸಿದ್ಧಿಯಾಗಿದೆ). ಅಂಗುಲಿಮಾಲಾನು ಆ ಹೆಣ್ಣಿನ ಸಮೀಪದಲ್ಲಿ ಕುಳಿತರು. ಇಬ್ಬರಿಗೂ ನಡುವೆ ಒಂದು ಪರದೆಯಿತ್ತು.
ಅಂಗುಲಿಮಾಲಾನು ಆ ಸತ್ಯಕ್ರಿಯೆಯ ಆ ಶ್ರೇಷ್ಠ ನುಡಿಯನ್ನು ಕರುಣೆಯಿಂದ ಹೀಗೆ ನುಡಿದನು :
ಸೋದರಿ, ಎಂದಿನಿಂದ ನಾನು ಅರಹಂತನಾದೆನೋ, ಅಂದಿನಿಂದ ನಾನು ಪ್ರಜ್ಞಾಪೂರ್ವಕವಾಗಿ ಒಂದು ಜೀವಿಯನ್ನು ಸಹಾ ನಾಶಗೊಳಿಸಿಲ್ಲ.  ಈ ಸತ್ಯವಚನದಿಂದ ನೀನು ಸುಖ ಕ್ಷೇಮವಾಗಿರು ಮತ್ತು ಹುಟ್ಟುವ ನಿನ್ನ ಮಗುವು ಸಹಾ ಸುಖ ಕ್ಷೇಮವಾಗಿರಲಿ ತಕ್ಷಣ ಅದೇ ಸಮಯದಲ್ಲಿ ಆ ಗಭರ್ಿಣಿ ಸ್ತ್ರೀಯು ತನ್ನ ಮಗುವನ್ನು ಸುಖಪೂರ್ವಕವಾಗಿ ಹಡೆದಳು. ತಾಯಿ ಹಾಗು ಮಗುವು ಸುಖವಾಗಿ ಹಾಗು ಆರೋಗ್ಯದಿಂದ ಇದ್ದವು.  ಇಂದಿಗೂ ಸಹಾ ಈ ಪರಿತ್ತಾವನ್ನು ಕೆಲವು ಸನ್ನಿವೇಷಗಳಿಗೆ ಬಳಸುತ್ತಾರೆ.
ಅಂಗುಲಿಮಾಲಾನು ಏಕಾಂತಪ್ರಿಯನಾಗಿದ್ದನು. ಹಾಗು ಶ್ರಮ ಜೀವನದಲ್ಲಿ ಆನಂದಿಸುತ್ತಿದ್ದನು.  ಕಾಲಾನಂತರ ಆತನು ಶಾಂತಿಯುತವಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿದನು. ಆತನು ಜೀವನದಲ್ಲಿ ಅರ್ಹಂತ ನಾಗಿದ್ದನು.
ಕೆಲವು ಭಿಕ್ಷುಗಳು ಬುದ್ಧಭಗವಾನರ ಬಳಿಗೆ ಬಂದು ಅಂಗುಲಿಮಾಲಾ ಜನ್ಮವು ಮುಂದೆ ಎಲ್ಲಿ ಆಗಿರಬಹುದು ಎಂದು ಕೇಳಿದರು.  ಭಗವಾನರು ಅವರಿಗೆ ಈ ರೀತಿ ಉತ್ತರಿಸಿದರು : ನನ್ನ ಪುತ್ರ ಅಂಗುಲಿಮಾಲಾನು ಪರಿನಿಬ್ಬಾಣ ಪ್ರಾಪ್ತಿ ಮಾಡಿದ್ದಾನೆ.
ಅವರಿಗೆ ಇದನ್ನು ನಂಬಲು ಕಷ್ಟವಾಯಿತು. ಅವರು ಮತ್ತೆ ಕೇಳಿದರು ಭಗವಾನ್ ಇದು ಸಾಧ್ಯವೇ!? ನೂರಾರುಗಟ್ಟಲೆ ಹತ್ಯೆಗಳನ್ನು ಮಾಡಿದವನು ಪರಿನಿಬ್ಬಾಣ ಪ್ರಾಪ್ತಿಮಾಡಲು ಸಾಧ್ಯವೇ?
ಬುದ್ಧಭಗವಾನರು ಉತ್ತರಿಸಿದರು : ಭಿಕ್ಷುಗಳೇ, ಅಂಗುಲಿಮಾಲಾನು ಅನೇಕ ಅನೇಕ ಪಾಪ ಕೃತ್ಯಗಳನ್ನು ಮಾಡಿದನು, ಏಕೆಂದರೆ ಆತನಿಗೆ ಕುಶಲ ಮಿತ್ರರು ಇರಲಿಲ್ಲ. ಆದರೆ ನಂತರ ಆತನು ಕಲ್ಯಾಣ ಮಿತ್ರರನ್ನು ಶೋಧಿಸಿದ ಮತ್ತು ಅವರ ಸಹಾಯ ಹಾಗು ಶ್ರೇಷ್ಠ ಬೋಧನೆಯಿಂದ ಆತನು ಅತ್ಯಂತ ಜಾಗೃತನು, ಪರಿಶ್ರಮಿಯು, ಧಮ್ಮಪಾಲನೆಯುಳ್ಳವನು, ಧ್ಯಾನನಿರತನು ಮತ್ತು ದೃಢಶಾಲಿಯೂ ಆದನು. ಹೀಗೆ ಆತನು ಪಾಪ ಕರ್ಮಗಳನ್ನು ಪುಣ್ಯಕರ್ಮದಿಂದ ಜಯಿಸಿದನು ಮತ್ತು ಆತನ ಚಿತ್ತವು ಕಶ್ಮಲದಿಂದ ಪೂರ್ಣವಾಗಿ ಶುದ್ಧಿಯಾಯಿತು, ಮುಕ್ತಿಪಡೆಯಿತು.
ಬುದ್ಧಭಗವಾನರು ಅಂಗುಲಿಮಾಲಾನ ಬಗ್ಗೆ ಈ ಗಾಥೆ ಹೇಳಿದರು.
ಯಾರ ಪಾಪಕರ್ಮಗಳು ಕುಶಲ ಕರ್ಮದಿಂದ ದೂರವಾಗಿದೆಯೋ, ಆತನು ಈ ಜಗತ್ತಿನಲ್ಲಿ ಮೋಡದಿಂದ ಮುಕ್ತನಾದ ಪೂರ್ಣಚಂದ್ರನಂತೆ ಪ್ರಕಾಶಿಸುತ್ತಾನೆ.
ಮೈತ್ರಿ ಹಾಗು ಕರುಣೆಯ ಶಕ್ತಿಯು ಯಾವುದೇ ಕೆಟ್ಟದಕ್ಕಿಂತ ಬಲಯುತವಾಗಿದೆ ಮತ್ತು ಇವು ಜಾಗೃತಿಗೆ ಪೂರ್ಣಸ್ಥಿತಿಯಾಗಿದೆ. (17)

No comments:

Post a Comment