Saturday, 21 April 2018

ಒಬ್ಬ ಒರಟು ಮನುಷ್ಯ A rude person and Buddha

ಒಬ್ಬ ಒರಟು ಮನುಷ್ಯ


ಬುದ್ಧಭಗವಾನರು (ತಮ್ಮ) ಕರುಣೆಯನ್ನು ಹೇಗೆ ಸಂವೃದ್ಧಿಗೊಳಿಸಿದ್ದಾ ರೆಂದು ಹೇಳುತ್ತಿದ್ದರು.
ಒಂದುದಿನ ತಥಾಗತರು ಹಳ್ಳಿಯಲ್ಲಿ ನಡೆಯುತ್ತಿದ್ದರು. ಆಗ ಒಬ್ಬ ಕ್ರೋಧದಿಂದ ಕೂಡಿದ ಒರಟು ಮನುಷ್ಯನು ಬಂದು ನಿಂದಿಸತೊಡಗಿದನು. ನೀವು ಪರರಿಗೆ ಬೋಧಿಸುವುದು ಸರಿಯಿಲ್ಲ ಎಂದು ಅರಚಿದನು. ನೀವು ಪ್ರತಿಯೊಬ್ಬರ ಹಾಗೆ ದಡ್ಡರು, ನೀವು ತೋರಿಕೆಯವರಲ್ಲದೆ ಬೇರೆ ಅಲ್ಲ ಎಂದು ಕಿರುಚುತ್ತಿದ್ದನು.
ಆದರೆ ಸಹನಾಮೂತರ್ಿ ಕರುಣಾಸಂಪನ್ನರು ಲವಲೇಶವು ವಿಚಲಿತರಾಗಲಿಲ್ಲ. ಬದಲಾಗಿ ಆ ಯುವಕನಿಗೆ ಈ ರೀತಿ ಪ್ರಶ್ನಿಸಿದರು ನನಗೆ ಉತ್ತರಿಸು, ನೀನು ಯಾರಾದರೂ ಒಬ್ಬರಿಗೆ ಒಂದು ಕೊಡುಗೆಯನ್ನು ಉಡುಗೊರೆಯನ್ನು ನೀಡುವೆ ಮತ್ತು ಆ ಮನುಷ್ಯ (ವ್ಯಕ್ತಿ) ಅದನ್ನು ನಿರಾಕರಿಸುವನು. ಈಗ ಆ ಉಡುಗೊರೆ ಯಾರಿಗೆ ಸೇರುತ್ತದೆ?
ಆ ಒರಟು ಮನುಷ್ಯನಿಗೆ ಈ ಪ್ರಶ್ನೆಯಿಂದ ಆಶ್ಚರ್ಯವಾಯಿತು ಮತ್ತು ಆತ ಉತ್ತರಿಸಿದನು ಅದು ನನಗೆಯೇ ಸೇರುತ್ತದೆ ಏಕೆಂದರೆ ನಾನೇ ಅಲ್ಲವೆ ಆ ಕೊಡುಗೆ ತಂದದ್ದು.
ಈಗ ಪ್ರಜ್ಞಾಪ್ರದೀಪ ಭಗವಾನರು ಮುಗುಳ್ನಗೆ ಬೀರಿ ಹೇಳಿದರು ಅದು ಸರಿಯೆ ಮತ್ತು ಅದೇರೀತಿ ನಿನ್ನ ಕೋಪಕ್ಕೂ ಸಹಾ, ಈಗ ನೀನು ನನ್ನ ಮೆಲೆ ಕೋಪಿಸಿಕೊಳ್ಳುತ್ತಿ, ಮತ್ತು ನಾನು ಅದರಿಂದ ಉದ್ರೇಕರಹಿತಗೊಂಡಿದ್ದೇನೆ. ಆಗ ಆ ಕೋಪ ನಿನ್ನ ಮೇಲೆಯೇ ಬೀಳುತ್ತದೆ. ಆಗ ನೀನು ಮಾತ್ರ ಒಬ್ಬ ದುಃಖಿತನಾಗಿರುತ್ತೀಯೆ ನಾನಲ್ಲ. ನೀನು ನಿನ್ನಿಂದಲೆ ಹಿಂಸೆ ಮಾಡಿಕೊಳ್ಳುತ್ತಿದ್ದೀಯೆ.
ನೀನು ನಿನ್ನನ್ನು ಹಿಂಸಿಸಿಕೊಳ್ಳುವುದು ಬೇಡ ಎಂದು ನಿನ್ನ ಕೋಪವನ್ನು ವಜರ್ಿಸು ಮತ್ತು ಬದಲಾಗಿ ಮೈತ್ರಿಯುಳ್ಳವನಾಗಿರು.
ನೀನು ಪರರಿಗೆ ದ್ವೇಷಿಸಿದರೆ ನೀನೆ ದುಃಖಿತನಾಗುವೆ. ಆದರೆ ಪರರಿಗೆ ಪ್ರೀತಿಸಿದರೆ (ಮೈತ್ರಿಯು ತುಂಬಿದರೆ) ಪ್ರತಿಯೊಬ್ಬರು ಸುಖವಾಗಿರುತ್ತಾರೆ.
ಆ ಯುವಕನು ಪೂರ್ಣವಾಗಿ ಈ ಜ್ಞಾನವಂತ ವಾಣಿಯನ್ನು ಕೇಳಿದನು ತಾವು ಹೇಳಿದ್ದು ಸರಿಯಾಗಿದೆ ಭಗವಾನ್ ಎಂದು ಕ್ಷಮೆ ಯಾಚಿಸಿ, ನಂತರ ದಯವಿಟ್ಟು ನನಗೆ ಆ ಮೈತ್ರಿಯ ಮಾರ್ಗವನ್ನು ತಿಳಿಸಿ ನಾನು ನಿಮ್ಮ ಹಿಂಬಾಲಕನಾಗಬೇಕೆಂದು ಇರುವೆ.
ಆಗ ತಥಾಗತರು ದಯೆಭರಿತ ಸ್ವರದಿಂದ ಹೇಳಿದರು ಖಂಡಿತವಾಗಿ ನಾನು ಜ್ಞಾನಪೇಕ್ಷೆಗಳಿಗೆ ನೈಜವಾಗಿ ಸತ್ಯವನ್ನು ಅರಸುತ್ತಿರುವವರಿಗೆ ಎಲ್ಲರಿಗೂ ಬೋಧಿಸುವೆ, ನನ್ನೊಡನೆ ಬಾ.

No comments:

Post a Comment