ಬಡರೈತ
ಮಹಾದುಗ್ಗಟನಿಗಿಂತಲೂ ಸರಳವಾಗಿ ಕರುಣೆ ಪ್ರಸರಿಸುವ ಪ್ರಸಂಗವು ಹಸಿದ ಬಡರೈತನದು ಆಗಿದೆ. ಆ ರೈತನಿಗೆ ಪ್ರಾಥಮಿಕ ಅವಶ್ಯಕತೆ ಈಡೇರಿಸಿದ ಸ್ವಾಭಾವಿಕ ಕರುಣಾ ಘಟನೆಯಿದು.ಒಂದುದಿನ ಬುದ್ಧಭಗವಾನರು ಮತ್ತು ಭಿಕ್ಷುಗಳು ಅಳವಿಯೆಂಬ ಹಳ್ಳಿಯಲ್ಲಿ ಅತಿಥಿಗಳಾಗಿದ್ದರು. ಅಲ್ಲಿ ಭಗವಾನರು ಉಪದೇಶ ಕೊಡುವವರಿದ್ದರು. ಆ ಹಳ್ಳಿಯ ಬ್ರಾಹ್ಮಣನೊಬ್ಬನು ಬುದ್ಧಭಗವಾನರ ಉಪದೇಶ ಕೇಳುವ ನಿಧರ್ಾರ ಮಾಡಿದನು. ಆದರೆ ಆ ದಿನ ಏನಾಯಿತೆಂದರೆ ಆತನ ಒಂದು ಎತ್ತು ಕಳೆದುಹೋಯಿತು. ಆತನ ಎತ್ತಿನ ಕಾರಣದಿಂದ ಆತನು ಭಗವಾನರ ಉಪದೇಶ ಕೇಳುವ ಆಸೆಯು ಬೇರೆಯಾಯಿತು. ಆತನು ಮುಂಜಾನೆಯೇ ಎದ್ದು ಕಳೆದು ಹೋಗಿರುವ ಎತ್ತನ್ನು ಹುಡುಕಲು ಹೊರಟನು. ಅನಂತರ ಉಪದೇಶ ಕೇಳುವ ನಿಧರ್ಾರ ಮಾಡಿದನು. ಮಧ್ಯಾಹ್ನದ ನಂತರ ಆತನು ಆ ಎತ್ತನ್ನು ಹುಡುಕಿ ಅದನ್ನು ಹಳ್ಳಿಗೆ ಕರೆತರತೊಡಗಿದನು. ಆ ಬ್ರಾಹ್ಮಣನು ಅತಿ ಹಸಿದಿದ್ದನು ಹಾಗು ಅತಿ ಆಯಾಸಗೊಂಡಿದ್ದನು. ಏಕೆಂದರೆ ಸುಡುಬಿಸಿಲಿನಲ್ಲಿ ಆತನು ಹುಡುಕಾಡಿದ್ದನು. ಆದರೆ ಆತನು ಬುದ್ಧಭಗವಾನರ ಉಪದೇಶ ಕಳೆದುಕೊಳ್ಳಲು ಇಚ್ಛಿಸಲಿಲ್ಲ. ಆದ್ದರಿಂದ ಆತನು ಬುದ್ಧಭಗವಾನರು ಇದ್ದ ಕಡೆ ವಿಶ್ರಾಮವಿಲ್ಲದೆ, ಆಹಾರವಿಲ್ಲದೆ ಓಡಿಬಂದನು.
ಬುದ್ಧಭಗವಾನರು ಮತ್ತು ಭಿಕ್ಷುಗಳು ಆಗತಾನೇ ಅಳವಿ ಹಳ್ಳಿಗೆ ಬಂದರು. ಅಲ್ಲಿಯ ಜನರಿಂದ ಭೋಜನವಾಯಿತು. ಭಗವಾನರು ಅಲ್ಲಿ ಧಮ್ಮ ಬೋಧನೆಯನ್ನು ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಆ ರೈತನು ಬಂದನು. ಆತನ ಆಯಾಸ ದಣಿವನ್ನು ತಥಾಗತರು ನೋಡಿ ಆತನಿಗೆ ಆಹಾರವನ್ನು ಹಾಗು ಕುಳಿತುಕೊಳ್ಳಲು ಸ್ಥಳವನ್ನು ಕೊಡಿಸಿದರು. ಆತನು ಆಹಾರವನ್ನು ತಿಂದು ಮುಗಿಸುವವರೆಗೆ ಸುಮ್ಮನಿದ್ದರು, ನಂತರ ಬೋಧನೆಯನ್ನು ಪ್ರಾರಂಭಿಸಿದರು.
ಅಲ್ಲಿಯ ಜನರಿಗೆ ಹಾಗು ಭಿಕ್ಷುಗಳಿಗೆ ಇದು ಸರಿಬರಲಿಲ್ಲ, ಹಾಗು ಆಶ್ಚರ್ಯವಾಯಿತು. ಏಕೆಂದರೆ ಆತನು ಬುದ್ಧರ ಹಿಂಬಾಲಕನೂ ಅಲ್ಲ, ಅದು ಅಲ್ಲದೆ ಆತನಿಗೆ ಆಹಾರ ಕೊಟ್ಟದ್ದು ಅಲ್ಲದೆ, ಆತನಿಗಾಗಿ ಕಾಯ್ದಿದ್ದಾರೆ ಇವರ ಮನಸ್ಸುಗಳು ಬುದ್ಧಭಗವಾನರಿಗೆ ಅರಿವಾಗಿ ಹೀಗೆ ಉತ್ತರಿಸಿದರು.
ನಾನು ಏನಾದರೂ ಈ ಮನುಷ್ಯನಿಗೆ ಹಸಿದಿದ್ದಾಗ ಬೋಧಿಸಿದ್ದರೆ ಹಸಿವಿನ ನೋವಿನಲ್ಲಿ ಆತನು ಧರ್ಮವನ್ನು ಅರಿಯುತ್ತಿರಲಿಲ್ಲ. ಹಾಗು ಅರಿವಿನ ಕೊರತೆಯಿಂದ ಅನುಸರಿಸುತ್ತಿರಲಿಲ್ಲ. ಹಸಿವಿನಂತಹ ರೋಗ (ನೋವು) ಇನ್ನೊಂದಿಲ್ಲ ಎಂದರು.
No comments:
Post a Comment