ಬ್ರಹ್ಮವಿಹಾರ(ಮೆತ್ತಾ, ಕರುಣಾ, ಮುದಿತಾ ಮತ್ತು ಉಪೇಖ್ಖಾ)
ಪ್ರೀತಿಯೆಂಬ ಅಭಿಪ್ರಾಯ ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಕೇಂದ್ರಿಕ ಅಂಶವಾಗಿದೆ. ಆದರೂ ಅದರ ಅರ್ಥ ಒಂದು ಧರ್ಮದಲ್ಲಿ ಇರುವಂತೆ ಮತ್ತೊಂದು ಧರ್ಮದಲ್ಲಿ ಮತ್ತು ವಿಶೇಷವಾಗಿ ಪ್ರಾಪಂಚಿಕ ಪ್ರೀತಿಗಿಂತ ಭಿನ್ನವಾಗಿದೆ. ಬೌದ್ಧ ಧರ್ಮದಲ್ಲಿ ಇದರ ಅಭಿಪ್ರಾಯ ನಾಲ್ಕು ಉದಾತ್ತ ಸ್ಥಿತಿಗಳಲ್ಲಿ ಒಂದು ಎಂದಾಗಿದೆ. ಅದನ್ನು ಮೆತ್ತಾ (ಮೈತ್ರಿ), ಕರುಣಾ, ಮುದಿತ ಹಾಗೂ ಉಪೇಕ್ಖಾ ಎನ್ನುತ್ತಾರೆ. ಬೇರೆಯವರು ಇದರ ಅರ್ಥವನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಆದರೆ ಬೇರೆಯವರ ಬದಲು ನಾನು ಪಾಳಿಯ ಅನುವಾದಕ್ಕೆ ವಾಲುತ್ತೇನೆ. ಬೌದ್ಧರ ಪ್ರೀತಿಯ ಬಗೆಗಿನ ಅರ್ಥವನ್ನು ಶ್ರದ್ಧಾಪೂರ್ವಕವಾಗಿ ವಿಷದಪಡಿಸುತ್ತೇನೆ.
ಮೆತ್ತಾ (ಮೈತ್ರಿ) ಎಂಬ ಪದವು ಮಿತ್ರ ಎಂಬ ಪದದ ಅಮೂರ್ತ ನಾಮಪದವಾಗಿದೆ. ಆದರು ಇದನ್ನು ಕೇವಲ ಮಿತ್ರತ್ವ ಎನ್ನದೆ ಅದಕ್ಕಿಂತ ವಿಶಾಲವಾಗಿದೆ. ತಾಯಿಯೊಬ್ಬಳು ತನ್ನ ಏಕ ಮಾತ್ರ ಮಗುವನ್ನು ತನ್ನ ಪ್ರಾಣಕ್ಕಿಂತಲೂ ಪ್ರೀತಿಸುವಂತಹದ್ದಾಗಿದೆ (ಮೆತ್ತಾ ಸುತ್ತದ ಪ್ರಕಾರ)
ತಾಯಿ ತನ್ನ ಮಗುವನ್ನು ರಕ್ಷಿಸುವ ಅದಕ್ಕಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಗಾಢವಾದ ಶ್ರೇಷ್ಠಭಾವದ ಪ್ರೀತಿಯನ್ನು ಎಲ್ಲ ಜೀವಿಗಳ ಬಗೆಗೂ (ಒಬ್ಬನು) ವಿಶಾಲಾನಂತವಾಗಿ ಪ್ರೀತಿಯ ಅಭಿವೃದ್ಧಿಯಲ್ಲಿರಲಿ. (2)
ಉದಾತ್ತ ಜೀವನವನ್ನು ನಡೆಸುವ ಶ್ರೇಷ್ಠ ಜೀವಿಗಳು ಮೆತ್ತಾದಲ್ಲಿ ಕರುಣೆಯಲ್ಲಿ, ಮುದಿತಾ ಮತ್ತು ಉಪೇಕ್ಷಾದಲ್ಲಿ ನೆಲೆಸುತ್ತಾರೆ. ಆದ್ದರಿಂದ ಇದನ್ನು ಜೀವನದ ಶ್ರೇಷ್ಠ ಹಾದಿಗಳೆಂದು ಅಥವಾ ಬ್ರಹ್ಮ (ಶ್ರೇಷ್ಠ) ವಿಹಾರ (ನೆಲಸುವಂತಹುದು) ಎನ್ನುತ್ತಾರೆ. ಮೈತ್ರಿಯು ಸರ್ವಜೀವಿಗಳಿಗೆ ವಿಶಾಲವಾಗಿ ಅಸೀಮವಾಗಿ ಅನಂತವಾಗಿ ಪ್ರಸರಿಸಬೇಕು. ಕರುಣೆಯು ದುಃಖದಲ್ಲಿರುವ ನೋವು ಶೋಕದಿಂದ ಕೂಡಿರುವ ಎಲ್ಲಾ ಜೀವಿಗಳ ಬಗ್ಗೆ. ಮುದಿತವು ಸುಖ ಮತ್ತು ಉನ್ನತ ಸ್ಥಾನವನ್ನು ಹೊಂದಿರುವ ಅಥವಾ ಹೊಂದುತ್ತಿರುವವರ ಬಗ್ಗೆ. ಆನಂದಿಸುವ ಅಸೀಮ ಮನೋಭಾವವು ಮತ್ತು ಉಪೇಕ್ಷಾವು ಜೀವನದ ಅಸಮಾನ ಸ್ಥಿತಿಗಳಲ್ಲಿ ಪರಮಶಾಂತತೆಯನ್ನು ಹೊಂದಿರುವಂತಹ ಶ್ರೇಷ್ಠ ಮನೋಸ್ಥಿತಿಯಾಗಿದೆ. (3)
ಯಾವ ಒಬ್ಬ ವ್ಯಕ್ತಿಯು ಈ ಶ್ರೇಷ್ಠ ಸುಗುಣಗಳನ್ನು ಅಭಿವೃದ್ಧಿಗೊಳಿಸು ತ್ತಾನೋ ಆತನು ಹೀಗೆ ಕರೆಯಲ್ಪಡುತ್ತಾನೆ ಆಂತರಿಕ ಸ್ನಾನದಿಂದ ಪರಿಶುದ್ಧಿಯನ್ನು ಹೊಂದಿರುವವನು ಆತನು ಪರಜೀವಿಗಳ ಬಗ್ಗೆ ಅವರ ಸುಖ ಕ್ಷೇಮದ ಆಕಾಂಕ್ಷೆಯು (ಮೆತ್ತಾ), ಹಾಗು ಪರರ ದುಃಖ ವಿಮುಕ್ತಿಯ (ಕರುಣೆ) ಭಾವನೆಯುಳ್ಳ ಜಲದಿಂದ ಪರಿಶುದ್ಧಿಯಾಗುತ್ತಾನೆ. (4)
ಒಮ್ಮೆ ಬುದ್ಧಭಗವಾನರ ಅಗ್ರ ಆಪ್ತ ಶಿಷ್ಯರಾದ ಆನಂದರು ಹೀಗೆ ಹೇಳುತ್ತಾರೆ ಭಗವಾನರ ಅರ್ಧದಷ್ಟು ಬೋಧನೆಯು ಮೈತ್ರಿಯಲ್ಲಿ ಅಡಕವಾಗಿದೆ ಎಂದು. ಆಗ ಬುದ್ಧಭಗವಾನರು ತಿದ್ದುತ್ತಾರೆ : ಆನಂದ ಅರ್ಧದಷ್ಟು ಅಲ್ಲ, ಸಂಪೂರ್ಣ ಬೋಧಿಯು ಮೈತ್ರಿಯಲ್ಲಿ ಅಡಕವಾಗಿದೆ ಎಂದು ಹೇಳುತ್ತಾರೆ.
ಮೈತ್ರಿಯು ಬುದ್ಧ ಭಗವಾನರ ಮಧ್ಯಮ ಮಾರ್ಗದ ಸಾರವತ್ತಾದ ಭಾಗವಾಗಿದೆ. ಇದು ಅಕುಶಲದ ಮೂಲವನ್ನು ಹುಡುಕಿ ಅದನ್ನು ನಿಶ್ಶೇಶವಾಗಿ ನಾಶ ಮಾಡುತ್ತದೆ. ಅಕುಶಲದ ಮೂಲವಾದ ಲೋಭ, ದ್ವೇಷ ಮತ್ತು ಮೋಹವನ್ನು ನಾಶ ಮಾಡುತ್ತದೆ. ಮೈತ್ರಿಯು ಶೀಲ, ಸಮಾಧಿ ಮತ್ತು ಪ್ರಜ್ಞಾ (ಹೇಗಿದೆಯೋ ಹಾಗೆ ಸತ್ಯವನ್ನು ಅರಿಯುವಿಕೆ)ಗಳ ಅಭಿವೃದ್ಧಿಯಲ್ಲಿ ಅದ್ಭುತವಾದ ಪಾತ್ರ ವಹಿಸುತ್ತದೆ. ಹಾಗು ಅಂತಿಮ ಗುರಿಯಾದ ನಿಬ್ಬಾಣವನ್ನು ತಲುಪಿಸಲು ಸಹಾಯ ಮಾಡುತ್ತದೆ.
ಬುದ್ಧ ಭಗವಾನರು ಮೈತ್ರಿಯ (ಪರಹಿತ ಹಾಗು ಪರಸುಖ ಕಾಮನಾ) ಹಾಗು ಪ್ರೇಮದ (ವ್ಯಕ್ತಿಯಲ್ಲಿ ಆನಂದಿಸುವುದು) ವ್ಯತ್ಯಾಸವನ್ನು ತಿಳಿಸುತ್ತಾರೆ. ಮೈತ್ರಿಯು ಯಾವ ಒಬ್ಬ ವ್ಯಕ್ತಿಯಲ್ಲಿ ಕೇಂದ್ರಿಕೃತವಾಗದೆ ಸರ್ವಜೀವಿಗಳ ಹಿತಸುಖಕ್ಕಾಗಿ ನಿಸ್ವಾರ್ಥದಿಂದ ಕೂಡಿರುವ ಒಂದು ಶ್ರೇಷ್ಠ ಮನಸ್ಥಿತಿಯಾಗಿದೆ. ಆದರೆ ಪ್ರೇಮದಲ್ಲಿ ವ್ಯಕ್ತಿಗಳಲ್ಲಿ ಕೇಂದ್ರಿಕೃತವಾಗುವ ಮತ್ತು ಸ್ವಾರ್ಥದಿಂದ ಕೂಡಿರುವ ಪ್ರೀತಿ (ಆನಂದ) ಆಗಿದೆ. ಕೇವಲ ವಾತ್ಸಲ್ಯವಷ್ಟೆ ಅಲ್ಲ, ಸಂಸರ್ಗ ಹಾಗು ಸ್ನೇಹವು ಸಹಾ ಅಂಟಿಕೊಳ್ಳುವಿಕೆಯಿಂದ ಕೂಡಿರುತ್ತದೆ. ಬೌದ್ಧರ ಪ್ರಸಿದ್ಧವಾದ ಧಮ್ಮಪದದಲ್ಲಿ ಬುದ್ಧ ಭಗವಾನರು ಹೀಗೆ ಹೇಳಿದ್ದಾರೆ.
ಪ್ರೇಮದಿಂದ ದುಃಖ ಉದ್ಭವವಾಗುತ್ತದೆ. ಪ್ರೇಮದಿಂದ ಭಯವು ಉತ್ಪನ್ನವಾಗುತ್ತದೆ. ಯಾರೂ ಪ್ರೇಮದಿಂದ ಪೂರ್ಣವಾಗಿ ಮುಕ್ತರೋ ಅವರಿಗೆ ಶೋಕವು ಇಲ್ಲ, ಭಯವು ಇಲ್ಲ (5)
ಬುದ್ಧಭಗವಾನರು ತಮ್ಮ ಭಿಕ್ಷುಗಳಿಗೆ ಹೀಗೆ ಬೋಧಿಸಿದ್ದಾರೆ ಭಿಕ್ಷುಗಳೇ, ಬಹುಜನಗಳ ಹಿತಕ್ಕಾಗಿ, ಬಹುಜನಗಳ ಸುಖಕ್ಕಾಗಿ, ಲೋಕಾನುಕಂಪೆಯಿಂದ ದೇವತೆಗಳ ಹಾಗು ಮಾನವರ ಸುಖಕ್ಕಾಗಿ ಹೋಗಿ, ಸಂಚರಿಸಿ. (6)
ಮೈತ್ರಿಯ ಪ್ರಧಾನ ಲಕ್ಷಣಗಳಲ್ಲಿ ಯಾರೊಬ್ಬರಿಗೆ ಅಂಟದೆ ಇರುವುದು ಒಂದಾಗಿದೆ. ಇದು ನಿಸ್ವಾರ್ಥ ಮಿತ್ರತ್ವವಾಗಿದೆ (ಅಂದರೆ ಪ್ರೇಮರಹಿತ ವಾತ್ಸಲ್ಯರಹಿತ) ಮೈತ್ರಿಯು ಸ್ವಾರ್ಥದಿಂದ ಪೂರ್ಣವಾಗಿ ಪರಿಶುದ್ಧವಾಗಿದೆ.
ಬುದ್ಧ ಭಗವಾನರ ಅಪಾರ ಅನಂತ ಮೈತ್ರಿಯು ಕೇವಲ ಮಾನವರಿಗಾಗಿಯೇ ಸೀಮಿತವಾಗಿಲ್ಲ. ಅದು ಎಲ್ಲಾ ಜೀವಿಗಳಿಗೆ ಸಮವಾಗಿ ಪ್ರಸರಿಸುತ್ತದೆ. ಬೌದ್ಧರ ಮೈತ್ರಿ ಸುತ್ತದಲ್ಲಿ ಹೀಗಿದೆ :
ಎಲ್ಲಾ ಜೀವಿಗಳು ಸುಖವಾಗಿರಲಿ ಹಾಗು ಕ್ಷೇಮವಾಗಿರಲಿ.
ಎಲ್ಲಾ ಜೀವಿಗಳು ಸುಖವಾದ ಹಾಗು ಆರೋಗ್ಯ (ಶಾಂತತೆ)ವಾದ ಮನವನ್ನು ಹೊಂದಲಿ. ಎಲ್ಲಾ ಜೀವಿಗಳು ಅವು ಹೇಗೆ ಇರಲಿ, ಬಲಹೀನವಾಗಿಯೆ ಇರಲಿ, ಬಲಿಷ್ಠವಾಗಿಯೆ ಇರಲಿ, ಉದ್ದವಾಗಿಯೆ ಇರಲಿ, ಮಧ್ಯಮವಾಗಿಯೆ ಇರಲಿ ಅಥವಾ ಗಿಡ್ಡದಾಗಿಯೆ ಇರಲಿ, ಚಿಕ್ಕದಾಗಿಯೆ ಇರಲಿ ಅಥವಾ ಅಗಲವಾಗಿಯೆ ಇರಲಿ, ಅವು ಸುಖವಾಗಿರಲಿ.
ಕಣ್ಣಿಗೆ ಗೋಚರವಾಗಿಯೆ ಇರಲಿ ಅಥವಾ ಅದೃಷ್ಯವಾಗಿಯೆ ಇರಲಿ, ಅವು ಸುಖವಾಗಿರಲಿ. ಯಾವ ಜೀವಿಗಳು ಹತ್ತಿರದಲ್ಲಿದೆಯೋ ಅಥವಾ ದೂರದಲ್ಲಿದೆಯೋ, ಯಾವುದು ಜನ್ಮ ತಾಳಿದೆಯೋ ಮತ್ತು ಯಾವುದು ಮುಂದೆ ಜನ್ಮತಾಳುವ ಸ್ಥಿತಿಯಲ್ಲಿವೆಯೋ. ಅವೆಲ್ಲಾ ಜೀವಿಗಳೂ ಸುಖಿಯಾಗಿ ಉದಾತ್ತ ಶಾಂತವಾದ ಆರೋಗ್ಯ ಮನದಿಂದ ತುಂಬಿರಲಿ. (7)
ಬುದ್ಧಭಗವಾನರು ಸರ್ವಜೀವಿಗಳ ದುಃಖ ವಿಮುಕ್ತಿಗೆ ತಮ್ಮ ಸಿಂಹಾಸನ, ಕುಟುಂಬ ಹಾಗು ಸರ್ವಸುಖ ಭೋಗಗಳನ್ನು ತ್ಯಾಗ ಮಾಡಿದರು ಮತ್ತು ದುಃಖವಿಮುಕ್ತಿಯ ಮಾರ್ಗ ಕಂಡುಹಿಡಿಯಲು ಅಪಾರ ಪರಿಶ್ರಮಪಟ್ಟರು. ಅವರು ಸಮ್ಮ ಸಂಬೋಧಿಯನ್ನು ಪ್ರಾಪ್ತಿ ಮಾಡಲು ಅಸಂಖ್ಯಾತ ಅಗಣಿತ ಜನ್ಮಗಳಲ್ಲಿ ಮಹಾ ಸಂಘರ್ಷ ಮಾಡಿದ್ದಾರೆ.
ಬೌದ್ಧ ಗ್ರಂಥಗಳಲ್ಲಿ ಹೀಗಿದೆ :
ಯಾರಿಗೆ ಅಂಗಾಂಗಗಳು ಪ್ರಿಯವೋ ಅವರು ಲೌಕಿಕ ಸಂಪತ್ತುಗಳನ್ನು ದಾನ ಮಾಡಲಿ, ಯಾರಿಗೆ ಪ್ರಾಣವು ಪ್ರಿಯವೋ ಅವರು ಅಂಗಗಳನ್ನು ದಾನ ಮಾಡಲಿ, ಆದರೆ ಐಶ್ವರ್ಯ, ದೇಹಾಂಗಗಳು, ಪ್ರಾಣ ಹಾಗು ಸರ್ವಸ್ವವನ್ನು ಸಮರ್ಪಣೆ ಮಾಡುವುದೇ ಶ್ರೇಷ್ಠವಾದದ್ದು ಹಾಗು ಏಕೈಕ ಸ್ಮರಣಿಯ ವಾದದ್ದು. (8)
ಬೋಧಿಸತ್ವದ ಜೀವನ ಚರಿತ್ರೆಗಳಾದ ಜಾತಕದಲ್ಲಿ ಇವನ್ನೆಲ್ಲಾ ವಿವರಿಸಿದ್ದಾರೆ. ಉದಾಹರಣೆಗೆ
ಕ್ಷಾಂತಿವಾದಿ ಎಂಬ ತಪಸ್ವಿಯಿದ್ದನು. ಅವನು ಬನಾರಸ್ನಲ್ಲಿ ಒಮ್ಮೆ ಭೇಟಿ ಕೊಟ್ಟು ಅಲ್ಲೇ ಉದ್ಯಾನವನದಲ್ಲಿ ತಂಗಿದ್ದನು. ಬನಾರಸ್ನ ಕ್ರೂರಿ ದುಶ್ಶೀಲ ರಾಜನು ಶೀಲಕ್ಕೆ, ಧಾಮರ್ಿಕ ಜೀವನಕ್ಕೆ ಮೌಲ್ಯ ಕೊಡದವ ನಾಗಿದ್ದನು. ಅವನು ಕ್ಷಾಂತಿವಾದಿಯನ್ನು ಹೀಗೆ ಕೇಳಿದನು ಓ ತಾಪಸಿಯೆ, ನೀನು ಎಂತಹ ಧರ್ಮವನ್ನು ಬೋಧಿಸುವೆ?
ನಾನು ಮೈತ್ರಿಯುತ ಸಹನೆಯನ್ನು (ಕ್ಷಾಂತಿ) ಅದರ ಮೌಲ್ಯವನ್ನು ಬೋಧಿಸುವೆ ಎಂದು ತಪಸ್ವಿಯು ಹೇಳಿದನು. ಆಗ ಆ ರಾಜನು ಸಹನೆಯನ್ನು ಪಾಲಿಸಲು ಅಸಾಧ್ಯವೆಂದು ಸಾಧಿಸಲು ಹೋದನು. ಆತನು ಮುಳ್ಳಿನ ಚಾಟೆಯಿಂದ ಹೊಡೆಸಿದನು. ಆದರೆ ಮುನಿಯು ಮುನಿಯಲಿಲ್ಲ, ನಂತರ ಮುನಿಯ ಕೈ ಹಾಗು ಕಾಲನ್ನು ಕತ್ತರಿಸಿದನು, ಹಾಗಾದರೂ ಸಹಾ ಆ ಸಹನಾಮೂತರ್ಿ ತಪಸ್ವಿಯು ಲವಲೇಶವೂ ಕುಪಿತನಾಗಲಿಲ್ಲ.
ಮತ್ತೊಂದು ಕಥೆಯಲ್ಲಿ ಹೀಗಿದೆ :
ಬುದ್ಧಭಗವಾನರು ಹಿಂದಿನ ಜನ್ಮದಲ್ಲಿ ಬೋಧಿಸತ್ವರಾಗಿದ್ದಾಗ ಪ್ರತಾಪನೆಂಬ ಕ್ರೂರಿ ರಾಜನ ಮಗನಾಗಿ ಹುಟ್ಟಿದರು. ಆ ಮಗುವು ಅದ್ಭುತವಾಗಿತ್ತು. ಒಂದುದಿನ ರಾಜನು ಅಂತಃಪುರದಲ್ಲಿ ಬರುವಾಗ ರಾಣಿಯು ಮಗುವಿನಲ್ಲಿ ಆಟವಾಡುತ್ತಿದ್ದಳು. ಆಗ ಆಕೆಯು ರಾಜನನ್ನು ಗಮನಿಸದ ಕಾರಣ ಮೇಲಕ್ಕೆ ಏಳಲಿಲ್ಲ. ಅಷ್ಟಕ್ಕೇ ಆ ರಾಜನಿಗೆ ಅತ್ಯುಗ್ರ ಕ್ರೋಧವುಂಟಾಯಿತು. ಆ ಮಹಾ ಕ್ರೂರಿ ಕ್ರೋಧದಿಂದ ಸೇವಕರಿಗೆ ಆ ಮಗುವಿನ ಕೈಕಾಲು ಹಾಗು ತಲೆಯನ್ನು ಕತ್ತರಿಸಲು ಆಜ್ಞೆ ಮಾಡಿದರು. ಆದರೆ ಆ ಕೂಸು ಮಗು ಕೋಪಗೊಳ್ಳಲಿಲ್ಲ, ಕುಗ್ಗಲಿಲ್ಲ. ಭಯ ಶೋಕದಿಂದಲೂ ಕೂಡಿರಲಿಲ್ಲ. ಅದು ತಂದೆಯ ಮೇಲೆ ಕಟುಕನ ಮೇಲೆ ಹಾಗು ರೋಧಿಸುತ್ತಿರುವ ತಾಯಿಯ ಮೇಲೆ ಮತ್ತ ಸ್ವತಃ ತನ್ನ ಮೇಲೆ ಸಮಾನವಾದ ಮೈತ್ರಿ ಭಾವನೆಯನ್ನು ಹೊಂದಿತ್ತು. ಅದು ಸರ್ವರ ಸುಖವನ್ನು ಬಯಸುತ್ತಿತ್ತು. (10)
ಸಂಯುಕ್ತ ನಿಕಾಯದಲ್ಲಿ ಬುದ್ಧಭಗವಾನರು ಹೀಗೆ ಹೇಳಿದ್ದಾರೆ ಧ್ಯಾನಿಯು ಎಂದೂ ಬೋಧಿಸತ್ವರ ಹಿಂದಿನ ಶೀಲ ಮೈತ್ರಿಯ ಬಗ್ಗೆ ಧ್ಯಾನಿಸುವನೋ ಆಗ ಆತನ ಕೋಪವು ತಗ್ಗಿಹೋಗುತ್ತದೆ. ಆಗಲೂ ಆತನ ಮನವು ಪರರ ಮೇಲೆ ಕುದಿಯುತ್ತಿದ್ದರೆ ಆತನು ಬುದ್ಧಭಗವಾನರ ಈ ಅನುಶಾಸನವನ್ನು ಧ್ಯಾನಿಸಲಿ ಭಿಕ್ಷುಗಳೇ, ಜೀವಿಗಳನ್ನು ಹುಡುಕುವುದು ಸುಲಭವಲ್ಲ. ಏಕೆಂದರೆ ಅವರು ಹಿಂದಿನ ಜನ್ಮದಲ್ಲಿ ನಿಮ್ಮ ತಾಯಿ, ತಂದೆ, ನಿಮ್ಮ ಸೋದರ, ನಿಮ್ಮ ಸೋದರಿ ಅಥವಾ ನಿಮ್ಮ ಮಗ ಅಥವಾ ಮಗಳು ಆಗಿರಬಹುದು. (11)
ಮತ್ತಷ್ಟು ವಿವರವಾಗಿ ಪ್ರಿಯದಸ್ಸ ಥೇರರವರು ಬುದ್ಧರ ಸನಾತನ ಮಾರ್ಗದಲ್ಲಿ (ಃಣಜಜಚಿ ಂಟಿಛಿಜಟಿಣ ಠಿಚಿಣ) ಹೀಗೆ ಬರೆದಿದ್ದಾರೆ ಮೈತ್ರಿಯು ಕ್ರಿಯಾತ್ಮಕ ಶಕ್ತಿ, ಪ್ರತಿಯೊಂದು ಕ್ರಿಯೆಯು ಮೈತ್ರಿಯ ಸಹಿತವಾಗಿದ್ದರೆ ಅದು ಕಲ್ಮಶರಹಿತ ಮನದಿಂದ ಮಾಡಿರುತ್ತಾರೆ. ಅವರು ಪರರಿಗೆ ಸಕಾಲಿಕ ಸಹಾಯ ಮಾಡುತ್ತಾರೆ, ಪರರನ್ನು ಸ್ಫೂತರ್ಿಗೊಳಿಸುತ್ತಾನೆ. ಬೇರೆಯವರ ಮಾರ್ಗಗಳನ್ನು ಸುಲಭಗೊಳಿಸುತ್ತಾನೆ. ದುಃಖಗಳನ್ನು ನಿವಾರಣೆಗೊಳಿಸುವ ಹಾಗು ಪರಮ ಸುಖವನ್ನು ಪ್ರಾಪ್ತಿ ಮಾಡುವಂತಹದ್ದಾಗಿದೆ.
ಮೈತ್ರಿಯು ಅಭಿವೃದ್ಧಿಗೊಳಿಸುವ ಮಾರ್ಗ ಹೇಗೆಂದರೆ ದ್ವೇಷದಿಂದ ಆಗುವ ಅನರ್ಥ ಅಪಾಯ ಅರಿಯುವುದು. ಹಾಗು ಅದ್ವೇಷದ ಅರ್ಥ ಪ್ರಯೋಜನವನ್ನು ಹಾಗೆಯೇ ಯತಾರ್ಥವಾಗಿ ಅರಿತು ಯಾರಿಗೂ ಅಸಹ್ಯ ಪಡದೆ ಇರುವುದು. ಅಸಹ್ಯ ಪಡುವುದು ದ್ವೇಷಿಸುವುದು ಮೂರ್ಖರ ಮಾರ್ಗವಾಗಿದೆ. ಅದು ನೀಚವೇದನೆ, ಅದು ಮತ್ತಷ್ಟು ಕತ್ತಲೆ ಪ್ರಸರಿಸುತ್ತದೆ. ದ್ವೇಷವು ಸಮ್ಯಕ್ ದೃಷ್ಟಿ (ಅರಿವು)ಗೆ ಅಡ್ಡಿಯಾಗಿದೆ. ದ್ವೇಷವು ಬಂಧನ ಗೊಳಿಸುತ್ತದೆ, ಮೈತ್ರಿಯು ಬಿಡುಗಡೆಗೊಳಿಸುತ್ತದೆ. ದ್ವೇಷವು ಶತೃತ್ವ ಬೆಳೆಸುತ್ತದೆ, ಮೈತ್ರಿಯು ಯೋಗ್ಯ ಆಯ್ಕೆ ಮಾಡುತ್ತದೆ. ದ್ವೇಷವು ಪಶ್ಚಾತ್ತಾಪ ಉಂಟು ಮಾಡುತ್ತದೆ. ಮೈತ್ರಿಯು ಶಾಂತಿ ಕೊಡುತ್ತದೆ. ದ್ವೇಷವು ಉದ್ರೇಕಿಸುತ್ತದೆ, ಮೈತ್ರಿಯು ಪ್ರಶಾಂತಗೊಳಿಸುತ್ತದೆ, ಅಚಲಗೊಳಿಸುತ್ತದೆ, ಸ್ತಬ್ದಗೊಳಿಸುತ್ತದೆ. ದ್ವೇಷವು ಬೇರ್ಪಡಿಸುತ್ತದೆ, ಮೈತ್ರಿಯು ಒಂದುಗೂಡಿಸುತ್ತದೆ. ದ್ವೇಷವು ಒರಟಾಗಿಸುತ್ತದೆ, ಮೈತ್ರಿಯು ಮೃದುಗೊಳಿಸುತ್ತದೆ. ದ್ವೇಷವು ಕಷ್ಟ ಕೊಡುತ್ತದೆ. ಮೈತ್ರಿಯು ಕಾಪಾಡುತ್ತದೆ ಮತ್ತು ಹೀಗೆಯೇ ದ್ವೇಷದ ದುಷ್ಪರಿಣಾಮಗಳನ್ನು ಅರಿತು ಮೈತ್ರಿಯ ಮಹಾ ಉಪಕಾರ ಅರಿತು ಒಬ್ಬನು ಮೈತ್ರಿಯನ್ನು ಅಭಿವೃದ್ಧಿಗೊಳಿಸಲಿ. (12)
ಮೈತ್ರಿ ಮತ್ತು ಕರುಣೆಯು ಬೌದ್ಧ ಧರ್ಮದಲ್ಲಿ ಆಳವಾಗಿ ಸ್ಥಾಪಿಸಲ್ಪಟ್ಟಿದೆ. ಕರುಣೆಗೂ ಮೈತ್ರಿಗೂ ಬಹಳ ಸಾಮಿಪ್ಯವಿದೆ. ಕರುಣೆಯು ಕೇವಲ ಅವಶ್ಯಕ ವಸ್ತುಗಳನ್ನು ಕೊಡುವಷ್ಟು ಮಾತ್ರವಲ್ಲ, ಅದೊಂದು ಪರಿಶುದ್ಧ ಕ್ರಿಯೆಯ ಭಾವ, ನಿಸ್ವಾರ್ಥ, ನಿರಹಂಕಾರಿಯಿಂದ ಕೂಡಿರುವಂತಹುದು ಹಾಗು ಮೌಢ್ಯರಹಿತವಾದುದು. ಉದಾಹರಣೆಗೆ ಒಮ್ಮೆ ಬುದ್ಧ ಭಗವಾನರು ಒಬ್ಬ ರೋಗಿಯನ್ನು ಮೈತ್ರಿ ಹಾಗು ಕರುಣೆಯಿಂದ ಸೇವೆ ಮಾಡುತ್ತಾರೆ.
ಇದೊಂದು ಪರಮ ಸುಂದರ ಮಾರ್ಗ ಧಮ್ಮಪದದಲ್ಲಿ ಅದರ ಬಗ್ಗೆ ಹೃದಯಸ್ಪಶರ್ಿ ಘಟನೆಯಾಗಿದೆ.
ಓರ್ವ ಯುವಕನು ಶ್ರಾವಸ್ಥೆಯ ವಾಸಿಯವನಾಗಿದ್ದನು. ಆತನು ಬುದ್ಧರ ಬೋಧನೆ ಕೇಳಿ ಶ್ರದ್ಧೆಯುಂಟಾಗಿ ಸಂಘ ಸೇರಿದನು. ಆತನಿಗೆ ಎಲ್ಲರೂ ತಿಸ್ಸನೆಂದು ಕರೆಯುತ್ತಿದ್ದರು. ಕೆಲಕಾಲದ ನಂತರ ಆತನು ರೋಗಿಯಾದನು. ಮೊದಲು ಸಣ್ಣ ಗುಳ್ಳೆಗಳು ಇಡೀ ದೇಹದಲ್ಲಿ ತುಂಬಿಹೋದವು, ಕ್ರಮೇಣ ಅವು ದೊಡ್ಡದಾಗುತ್ತಾ ಒಡೆದುಹೋಯಿತು. ಒಡೆದುಹೋದ ಹುಣ್ಣುಗಳಿಂದ ಅವನ ಶರೀರ ತುಂಬಿತು. ಆತನ ಸಹ ಭಿಕ್ಷುಗಳು ಆತನನ್ನು ನೋಡಿಕೊಳ್ಳಲು ಅಸಹ್ಯಪಟ್ಟುಕೊಂಡರು. ಹಾಗು ಆತನನ್ನು ತ್ಯಜಿಸಿದರು. ಭಗವಾನರಿಗೆ ಇದು ತಿಳಿಯಿತು, ಅವರು ನೀರನ್ನು ತೆಗೆದುಕೊಂಡು ಕಾಯಿಸಿದರು. ನಂತರ ತಥಾಗತರು ತಿಸ್ಸನ ಬಳಿಗೆ ಬಂದರು. ಹಾಗೂ ತಿಸ್ಸನ ಹಾಸಿಗೆಯನ್ನು ಹಿಡಿದುಕೊಂಡರು. ಭಿಕ್ಷುಗಳಿಗೆ ಭಗವಾನರ ಉದ್ದೇಶ ಅರಿವಾಯಿತು. ಅವರು ಆ ರೋಗಿಯನ್ನು ಹಾಸಿಗೆ ಸಮೇತ ಒಲೆಯ ಬಳಿ ತಂದರು. ಆಗ ಭಗವಾನರು ತಿಸ್ಸನ ಉಡುಪುಗಳನ್ನು ಒಗೆದು ಒಣಗಿಸುವಂತೆ ಭಿಕ್ಷುಗಳಲ್ಲಿ ಪರಿವರ್ತನೆ ಮಾಡಿದರು. ನಂತರ ಸ್ವತಃ ಭಗವಾನ್ ಬುದ್ಧರೇ ಶ್ರೇಷ್ಠ ರೀತಿಯಲ್ಲಿ ತಿಸ್ಸನ ಹುಣ್ಣಿನ ದೇಹವನ್ನು ತೊಳೆದು ಶುದ್ಧಿಗೊಳಿಸಿದರು. ಆಗ ತಿಸ್ಸ ಪುನಃ ಚೈತನ್ಯ ಚಿಲುಮೆಯಂತಾದನು. ಆತನು ಹಾಸಿಗೆಯಲ್ಲಿ ಶಾಂತತೆಯಿಂದ ಏಕಾಗ್ರಚಿತ್ತವನ್ನು ಹೊಂದಿದನು. ಭಗವಾನರು ಆ ಸಾರ್ಥಕ ಕಾಲ ಅರಿತು ಧಮ್ಮವನ್ನು ಬೋಧಿಸಿದರು. ಆ ಅಮರತ್ವದ ಧಾರೆಯನ್ನು ಪೂರ್ಣಮನದಿಂದ ಅರಿತನು. ಹಾಗು ಬೋಧನೆಯ ಅಂತ್ಯದಲ್ಲಿ ಸಂತತ್ವದ ಪರಮಗುರಿಯಾದ ಅರ್ಹಂತತ್ವವನ್ನು ಪ್ರಾಪ್ತಿಮಾಡಿ ನಿಬ್ಬಾಣವನ್ನು ಪಡೆದನು. ಅನಂತರ ಅಲ್ಪಕಾಲದಲ್ಲಿಯೆ ಯೋಗ್ಯರೀತಿಯ ಆಚರಣೆಗಳಿಂದ ಆತನ ಅಂತಿನ ಪೂಜೆ ಮಾಡಿ ಸ್ತೂಪವನ್ನು ಕಟ್ಟಿದರು.
ಕರುಣೆ ಹಾಗು ಇತರ ದಿವ್ಯಸ್ಥಿತಿಗಳು ಸಮಾನವಾಗಿ ಎಲ್ಲಾ ಬೌದ್ಧ ಧರ್ಮದ ಶಾಖೆಗಳಲ್ಲಿ ಪ್ರಧಾನ ಅಂಶಗಳಾಗಿವೆ. ಮುಂದಿನ ಗಾಥೆಗಳು (ಚಜಟಿ ಟಿ ಣಜ ಂಡಿಣ ಠಜಿ ಜಟಠಿಟಿರ) ಡಿ. ಬ್ರಾಂಡನ್ರವರ ಜೆನ್ ಇನ್ ದಿ ಆಟರ್್ ಆಫ್ ಹೆಲ್ಪಿಂಗ್ ಮತ್ತು ಬೇರೆ ಶಾಖೆಗಳಲ್ಲಿನ ಪ್ರಧಾನ ವಾಕ್ಯಗಳಾಗಿವೆ.
(ಪ್ರಾಪಂಚಿಕ) ಸಾಧಿಸುವುದಕ್ಕೆ ಕರುಣೆ ಏನೂ ಮಾಡುವುದಿಲ್ಲ. ಕರುಣೆಯು ಅತ್ಯಂತ ಸುಂದರವಾದುದು ಹಾಗು ಮಹಾ ಉದಾರತೆ ಯುಳ್ಳದ್ದು. ಯಾವಾಗ ಒಬ್ಬನು ಪರಿಶುದ್ಧ ಕರುಣೆಯನ್ನು ಅಭಿವೃದ್ಧಿ ಮಾಡುವನೋ, ಆಗ ಆತನಿಗೆ ದಾನಕ್ಕೆ ಪಾತ್ರರೂ ತಾನೋ ಅಥವಾ ಪರರೋ ಎಂಬುದು ಅಗೋಚರವಾಗುತ್ತದೆ. ಏಕೆಂದರೆ ಮೈತ್ರಿಯು ಸರ್ವರಿಗೂ ಮೀಸಲಾಗಿರುವುದು ಅದು ಪಕ್ಷಾತೀತ, ತಾನು ತನ್ನದರ ರಹಿತ ಹಾಗು ಪರರಿಗೆ ಎಂಬುವರ ಅತೀತ. ಅದು ಸರ್ವರಿಗೂ ಅದು ಆನಂದಿಂದ ತುಂಬಿರುತ್ತದೆ. ಸ್ವಯಂಪ್ರೇರಿತ ಪ್ರತ್ಯಕ್ಷ ಆನಂದ, ನಂಬಿಕೆಯ ದೃಷ್ಟಿಯಲ್ಲಿ ನಿತ್ಯನಿರಂತರ ಆನಂದ. ಆನಂದದ ಅರಿವಿನಲ್ಲಿ ಪರಮ ಮಹತ್ವದ ಐಶ್ವರ್ಯ ಗಣಿ...
ಅತ್ಯಂತ ಶ್ರೇಷ್ಠ ಹಂತದಲ್ಲಿ ಕರುಣೆಯು ಸಂಕುಚಿತವಾಗುವುದಿಲ್ಲ. ಅದು ಕೆಲವರಿಗೆ ಅಥವಾ ಏಕವ್ಯಕ್ತಿಯ ದುಃಖವಿಮುಕ್ತಿಗೆ ನಿಲ್ಲುವುದಿಲ್ಲ. ಅದು ವಿಶಾಲವಾಗಿ ಸರ್ವಜೀವಿಗಳ ದುಃಖ ವಿಮುಕ್ತಿಗೆ ಸಮಾವೇಶ ಗೊಳ್ಳುತ್ತದೆ (ಪ್ರಯತ್ನಿಸುತ್ತದೆ) ಅದು ಸಮ್ಮ ಸಂಬೋಧಿಯ ನಕ್ಷೆಯನ್ನು ಹರಡುತ್ತದೆ.
ಅದು ಬುದ್ಧರ ಮಾರ್ಗವಾಗಿದೆ, ನನಗೆ ಸುತ್ತಲಿನ ಸರ್ವಜೀವಿಗಳ ಬಗ್ಗೆ ಕಾಳಜಿ(ಕನಿಕರ)ಯಿದೆ.
... ಕರುಣೆಯು ತನ್ನಲ್ಲಿನ ಪೂರ್ಣ ಸಂಯೋಗದ ಪರಿಪೂರ್ಣ ಪ್ರತಿಫಲಿತವಾಗಿದೆ. (14)
ಮೂರನೆಯ ಶ್ರೇಷ್ಠ ದಿವ್ಯಸ್ಥಿತಿಯು ಮುದಿತಾ ಅಥವಾ ಪರ ಉನ್ನತಿಯ ಆನಂದ. ಇದು ಪರರ ಸುಖ ಹಾಗು ಶೀಲಗಳಲ್ಲಿ ಪೂರ್ಣವಾಗಿ ಆನಂದಿಸುವ ಭಾವ, ಮುದಿತಾವು ಪರರ ಉನ್ನತಿಯಲ್ಲಿ ನೋಡಿ (ಕೇಳಿ, ಯೋಚಿಸಿ) ಆನಂದಿಸುತ್ತದೆ. ಪರರ ಸುಖವನ್ನು ಸ್ವಾಗತಿಸುತ್ತದೆ.
ನಾಲ್ಕನೆಯ ಮಹಾದಿವ್ಯ ಸ್ಥಿತಿಯು ಸಮಚಿತ್ತತೆ (ಪ್ರಶಾಂತತೆ) (ಉಪೇಕ್ಷಾ). ನಾವು ಇದನ್ನು ಸಾಧಿಸಿದಾಗ ಎಲ್ಲಾ ಜೀವಿಗಳನ್ನು ಸಮಾನವಾಗಿ ಭಾವಿಸುತ್ತೇವೆ. ಇದನ್ನು ಮಾಡಬೇಕಾದಾಗ ಒಬ್ಬನು ತನ್ನ ಬಾಂಧವ್ಯವನ್ನು ತನ್ನ ನೆಂಟರಲ್ಲಿ ಮಿತ್ರರಲ್ಲಿ ಹಾಗು ಶತ್ರುಗಳನ್ನು ಇರುವ ಸನ್ನಿವೇಶವು ಪೂರ್ವ ಜನ್ಮದಿಂದಾದ ಫಲ ಎಂದು ಅರಿಯುತ್ತಾನೆ. ಆದ್ದರಿಂದ ಬಂಧುಗಳಾಗಲಿ ಹಾಗು ಮಿತ್ರರಲ್ಲಾಗಲಿ ಅಂಟದೆ ಪರರನ್ನು ಪಕ್ಷಪಾತದಿಂದ ನೋಡುವುದಿಲ್ಲ.
ಪೂಜ್ಯ ಬಾಲನ್ಗೊಲ್ಡ್ ಆನಂದ ಮೈತ್ರೆಯ ಇಂದಿನ ಶತಮಾನದ ಬೌದ್ಧ ವಿದ್ವಾಂಸರು. ಅವರು ತಮ್ಮ ಬ್ರಹ್ಮ ವಿಹಾರದ ಅಭ್ಯುದಯದಲ್ಲಿ ಹೀಗೆ ಹೇಳಿದ್ದಾರೆ.
ಈ ವ್ಯಕ್ತಿ ನನ್ನ ಹಿಂದಿನ ಜನ್ಮದಲ್ಲಿ ನನ್ನ ತಾಯಿಯಾಗಿರಬಹುದು, ನನ್ನನ್ನು ಹತ್ತು ತಿಂಗಳು ಹೊತ್ತಿದ್ದಾಳೆ. ನಾನು ಮಗುವಾಗಿದ್ದಾಗ ಆಕೆ ನನ್ನ ಮಲಮೂತ್ರ ಇತ್ಯಾದಿ ಕಶ್ಮಲಗಳನ್ನು ಅಸಹ್ಯವಿಲ್ಲದೆ ತೆಗೆದಿದ್ದಾಳೆ. ಆಕೆ ತನ್ನ ಮಡಿಲಲ್ಲಿ ನನ್ನನ್ನು ಆಡಿಸಿದ್ದಾಳೆ, ಸಲಹಿದ್ದಾಳೆ, ತನ್ನ ಬಾಹುಗಳಿಂದ ಎತ್ತಿದ್ದಾಳೆ, ಆಕೆ ನನ್ನನ್ನು ಆಳವಾದ ಪ್ರೀತಿಯಿಂದ ಪೋಷಿಸಿದ್ದಾಳೆ.
ಈ ವ್ಯಕ್ತಿ ನನ್ನ ಹಿಂದಿನ ಜನ್ಮಗಳಲ್ಲಿ ತಂದೆಯಾಗಿದ್ದಿರಬಹುದು. ಆತನು ನನಗಾಗಿ ಜೀವನವೆಲ್ಲಾ ಕಷ್ಟ ಶ್ರಮಗಳನ್ನು ಎತ್ತಿದ್ದಾನೆ. ಹೇಗೆಂದರೆ ವ್ಯಾಪಾರಿಯಾಗಿ, ರೈತನಾಗಿ ಅಥವಾ ಇನ್ನಿತರ ಯಾವುದೇ ಉದ್ಯೋಗ ಹಿಡಿದು ಅಪಾರ ಶ್ರಮವನ್ನು ನನಗಾಗಿ ಮಾಡಿದ್ದಾನೆ ಮತ್ತು ಹಿಂದೆ ಈತನು ನನಗೆ ಸೋದರನಾಗಿಯೋ, ಸೋದರಿಯಾಗಿಯೋ, ಮಗನಾಗಿಯೋ ಅಥವಾ ಮಗಳಾಗಿಯೋ ನನಗೆ ಪ್ರೀತಿಯ ಆಸರೆ ನೀಡಿದ್ದಾರೆ. ಆದ್ದರಿಂದ ಆತನ ಮೇಲೆ ನಾನು ಕೋಪಗೊಳ್ಳುವುದು ಅನ್ಯಾಯ. ಸತ್ಯಕ್ಕೆ ವಿರುದ್ಧವಾದದ್ದು. ಏಕೆಂದರೆ ಕೇವಲ ಈ ಜನ್ಮದಲ್ಲಿ ಮಾತ್ರ ನನ್ನ ವಿರುದ್ಧ ಅಪ್ರಿಯ ಕಾರ್ಯ ಮಾಡಿದ್ದಾನೆ. (15)
ದಿವ್ಯಸ್ಥಿತಿಗಳಲ್ಲಿ ಒಂದಾದ ಮೈತ್ರಿಯನ್ನು ಸಹಾ ಪ್ರತಿನಿತ್ಯದ ಜೀವನದಲ್ಲಿ ಅನುಭವಿಸಬೇಕಾಗಿರುವುದಾಗಿದೆ. ಮೈತ್ರಿಯ ಭಾವವು ಹೀಗಿರುತ್ತದೆ : ತಂದೆ-ತಾಯಿಗಳಿಗೆ ಆಗತಾನೆ ಹುಟ್ಟಿದ ಮಗುವಿನಲ್ಲಿ ಇದ್ದಂತೆ, ಅದರ ಉತ್ತಮ ಆರೋಗ್ಯ ಬಯಸುವಂತೆ. ಯೋಗ್ಯ ಮಿತ್ರರು ಪಡೆಯುವಂತೆ, ಅತಿ ಪ್ರಜ್ಞಾವಂತ ಹಾಗು ಪರಿಶ್ರಮಗಳಲ್ಲಿ ವಿಜಯಿಯಾಗುವಂತೆ ಬಯಸುವುದು ಆಗಿದೆ. ಥೇಟ್ ಅದೇರೀತಿಯಲ್ಲಿ ಸರ್ವಜೀವಿಗಳ ಬಗ್ಗೆ ಮೈತ್ರಿಭಾವವು ಇರಬೇಕು. ತಂದೆ-ತಾಯಿಗಳು ಮಗುವು ಕಾಯಿಲೆ ಬಿದ್ದಾಗ ಸ್ವಾಭಾವಿಕವಾಗಿ ಕರುಣೆಯಿಂದ ಚಲಿಸುತ್ತಾರೆ. ಮಗುವು ರೋಗದಿಂದ, ದುಃಖದಿಂದ ಮುಕ್ತವಾಗಲಿ ಎಂದು ನೈಜವಾಗಿ ಪ್ರಬಲವಾಗಿ ಆಕಾಂಕ್ಷಿಸುತ್ತಾರೆ, ಸರಿಯಾಗಿ ಇದೇರೀತಿ ಸರ್ವಜೀವಿಗಳಲ್ಲಿ ಅವರ ದುಃಖ ವಿಮುಕ್ತಿಯನ್ನು ಬಯಸಬೇಕು. ಹೇಗೆ ತಂದೆ-ತಾಯಿಗಳು ಮಕ್ಕಳ ಅಭಿವೃದ್ಧಿ, ಉನ್ನತಿಯಲ್ಲಿ ಹಾಗು ಸುಖಗಳಲ್ಲಿ ಆನಂದಿಸುವರೋ ಅದೇರೀತಿಯಲ್ಲಿ ಸರ್ವಜೀವಿಗಳ ಸುಖಗಳನ್ನು ಅವರ ಉನ್ನತಿಯನ್ನು ನೋಡಿ ನಾವು ಆನಂದಿಸಬೇಕು. ಮುಂದೆ ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಸ್ವತಂತ್ರವಾಗಿ ತಮ್ಮ ಜವಾಬ್ದಾರಿಗಳೊಂದಿಗೆ ನೆಲಸತೊಡಗಿದಾಗ ತಂದೆ-ತಾಯಿಗಳಿಗೆ ಮೈತ್ರಿ ಕರುಣೆಗಳು ಮುದಿತಾವು ಇದ್ದರೂ ಆ ವೇದನೆಗಳು ಉಪೇಕ್ಷಾ (ಶಾಂತತೆ)ಯಲ್ಲಿ ಸಂಯೋಗಗೊಳ್ಳುತ್ತದೆ. ಪೋಷಕರು ಮಕ್ಕಳ ಸ್ವಾವಲಂಬನೆ ಹಾಗು ಜವಾಬ್ದಾರಿಗಳೊಂದಿಗೆ ಜೀವಿಸತೊಡಗಿದಾಗ ಅವರನ್ನು ಪ್ರೇಮಯುತವಾಗಿ ಅಂಟಬಾರದು.
ಬುದ್ಧ ಘೋಷರವರು ತಮ್ಮ ಅಂಗುತ್ತರ ನಿಖಾಯದ ವ್ಯಾಖ್ಯಾನದಲ್ಲಿ ಬ್ರಹ್ಮವಿಹಾರದ ಕ್ರಿಯಾತ್ಮಕತೆಯನ್ನು ತಂದೆ-ತಾಯಿಗಳು ಹಾಗು ಮಕ್ಕಳ ಉದಾಹರಣೆಯೊಂದಿಗೆ ಬೆಳೆಸಿ ನೀಡಿದ್ದಾರೆ. ಅದರಲ್ಲಿ
ಮಗುವು ಗರ್ಭದಲ್ಲಿದ್ದಾಗ ತಂದೆ-ತಾಯಿಗಳು ಈ ರೀತಿ ಚಿಂತಿಸುತ್ತಾರೆ, ನಾವು ನಮ್ಮ ಮಗುವನ್ನು ಸವರ್ಾಂಗ ಪೂರ್ಣನಾಗಿ ಹಾಗು ಆರೋಗ್ಯ ದಿಂದಿರುವುದನ್ನು ಎಂದು ನೋಡುತ್ತೇವೆ? ನಂತರ ಎಳೆಗೂಸು ಮಡಿಲಲ್ಲಿದ್ದು ಹೇನು ಅಥವಾ ಇತರ ಕ್ರಿಮಿಯಿಂದ ಬಾಧೆಗೊಳಪಟ್ಟ ಅತ್ತರೆ ಅಥವಾ ಮಲಗಿದರೆ ಅಥವಾ ರಾತ್ರಿಯಲ್ಲಿ ನಿದ್ರೆಯಲ್ಲಿ ಅತ್ತರೆ ತಂದೆ-ತಾಯಿಗಳು ಶಬ್ದವನ್ನು ಕೇಳಿ ಕರುಣೆಯನ್ನು ತೋರುತ್ತಾರೆ. ಆನಂತರ ಆ ಮಗುವು ಆಟವಾಡುತ್ತಿರುವಾಗ, ವಿಶ್ರಾಂತಿಯಲ್ಲಿರುವಾಗ, ಇತರ ವಿಷಯಗಳಲ್ಲಿ ಅಭಿವೃದ್ಧಿಗೊಳ್ಳುತ್ತಿರುವಾಗ ತಂದೆ-ತಾಯಿಯರ ಹೃದಯ ಎಷ್ಟು ಮೃದುವಾಗುತ್ತದೆ, ಅಂದರೆ ಅತ್ಯಂತ ಶುದ್ಧವಾದ ಬೆಣ್ಣೆಯನ್ನು ನೂರು ಹತ್ತಿಯ ನಯವಾದ ಉಂಡೆಗಳು ನೆನಸಿದಂತೆ ಆಗುತ್ತದೆ. ತಾಯಿಯ ಮನವು ತೃಪ್ತವಾಗುತ್ತದೆ ಹಾಗು ಆನಂದಿತವಾಗುತ್ತದೆ. ಆಗ ಅವರಲ್ಲಿ ಮುದಿತಾವು ಪ್ರತಿಷ್ಠಿತವಾಗಿರುತ್ತದೆ. ನಂತರ ಮಗುವು ಸ್ವಂತ ಉದ್ಯೋಗದಲ್ಲಿ ತೊಡಗಿ ಸ್ವಂತ ಮನೆಯಲ್ಲಿ ವಿವಾಹವಾಗಿ ವಾಸಿಸುತ್ತಿರುವಾಗ ತಂದೆ-ತಾಯಿಗಳು ಸಮಚಿತ್ತತೆಯಲ್ಲಿ ಯೋಚಿಸುತ್ತಾರೆ. ಓಹೋ ನಮ್ಮ ಮಕ್ಕಳು ಈಗ ತಮ್ಮ ಹಾದಿಯಲ್ಲಿ ಜೀವಿಸುತ್ತಿರುವರು ಎಂದು ಭಾವಿಸಿ ಶಾಂತತೆಯಲ್ಲಿ ಇರುತ್ತಾರೆ.
ಬುದ್ಧ ಭಗವಾನರ ಆರ್ಯ ಅಷ್ಟಾಂಗ ಮಾರ್ಗವನ್ನು 3 ಭಾಗಗಳಾಗಿ ವಿಂಗಡಿಸಬಹುದು. ಶೀಲ, ಸಮಾಧಿ ಮತ್ತು ಪ್ರಜ್ಞಾ. ಈ ಮೂರು ಮೆಟ್ಟಿಲಿನ ಮಾರ್ಗದಲ್ಲಿ ಶೀಲವಂತು ಮೈತ್ರಿಯ ತಳಹದಿ ಮೇಲೆಯೇ ನಿಂತಿದೆ. ಹಾಗು ಸಮಾಧಿ ಪ್ರಜ್ಞಾಗಳಲ್ಲಿ ಪ್ರವೇಶ ಮಾಡಿದೆ. ಶೀಲದಲ್ಲಿ ಮೈತ್ರಿಯು ಹೀಗೆ ಕಾಣುತ್ತದೆ. ಉದಾ: ಸಮ್ಯಕ್ ವಾಚಾ ಸಮ್ಯಕ್ ಕರ್ಮ ಮತ್ತು ಸಮ್ಯಕ್ ಜೀವನ. ಈ ಭಾಗಗಳ ಗುರಿಯು ಸಮಾಜದ (ಪರರ) ಹಿತವನ್ನು ಸಂಯೋಗಿಸುವುದು (ಪಾಲಿಸುವುದು). ಒಂದು ಸುತ್ತವು ನೆರೆಹೊರೆಯವರಲ್ಲಿ ಗೌರವಯುತವಾಗಿ ಹೇಗಿರಬೇಕೆಂದು ಹೀಗೆ ವಿವರಿಸಲಾಗಿದೆ.
ಅವರು ಪರಸ್ಪರ ಅತಿಥ್ಯ ಹಾಗು ದಾನ ಮನೋಭಾವದಿಂದ ಕೂಡಿರಬೇಕು. ಅವರು ಪ್ರಿಯವಾಗಿ ಸಿಹಿಯಾಗಿ ಹಾಗು ಜ್ಞಾನ ಉಚಿತವಾದ (ಒಪ್ಪುವಂತಹ) ಮಾತುಗಳನ್ನು ಆಡಬೇಕು. ಪರಸ್ಪರ ಕ್ಷೇಮಕ್ಕಾಗಿ ದುಡಿಯಬೇಕು. ಪರಸ್ಪರ ಉಚ್ಚ ನೀಚ ಭಾವನೆರಹಿತವಾಗಿ ಇರಬೇಕು. ಪರಸ್ಪರ ಜಗಳವಾಡಬಾರದು. ಪರಸ್ಪರರು ಕಷ್ಟಗಳಲ್ಲಿ ಸಹಾಯ ಮಾಡಬೇಕು. ಹಾಗು ದುಃಖ ಸನ್ನಿವೇಶಗಳಲ್ಲಿ ಯಾರಿಗೂ ಪರಿತ್ಯಜಿಸಬಾರದು.
ಬೌದ್ಧರಲ್ಲಿ ಸಹಜವಾಗಿ ಸ್ವಮೈತ್ರಿಯು ನಿಣರ್ಾಯಕವಾದ ಪ್ರಥಮ ಮೆಟ್ಟಿಲು ಆಗಿದೆ. ಇದು ತನ್ನನ್ನು (ಮನಸ್ಸನ್ನು) ಪರಿಶುದ್ಧಿಗೊಳಿಸಿ ಪರಿಶುಭ್ರ ಗೊಳಿಸುತ್ತದೆ. ಹಾಗು ಪರರಿಗೆ ಮೈತ್ರಿ ಮಾಡಲು ಸಹಾಯಕವಾಗುತ್ತದೆ. ಹಾಗಲ್ಲದೆ ಆ ಪ್ರೀತಿಯು ರಾಗವಾಗಲು ಸಂಭವವಿದೆ. ಹಾಗಿದ್ದಾಗ್ಯೂ ಇದು ವ್ಯವಹಾರ ಸತ್ಯವಾಗಿದೆ. ಇದು ಸಾಮಾನ್ಯರಿಗೆ ಅರ್ಥವಾಗುವಂತಹ ಸಮಾಥ್ರ್ಯದಲ್ಲಿದೆ. ಪರಮಾರ್ಥದಲ್ಲಿ ಬೌದ್ಧರು ಹೀಗೆ ಹೇಳುತ್ತಾರೆ. ನಾನು ಎನ್ನುವ ಅಸ್ತಿತ್ವವೇ ಇಲ್ಲ, ಅದು ಕೇವಲ ಐದು ರಾಶಿಗಳ ಸಮೂಹವಾಗಿದೆ. (ದೇಹ ಹಾಗು ಚಿತ್ತದ ರಾಶಿ). ಅದೇ ಅಸ್ತಿತ್ವವನ್ನು ಅರಿಯುವ ರೀತಿಯಾಗಿದೆ. ಆದರೆ ವ್ಯವಹಾರ ಸತ್ಯದಲ್ಲಿ ಇದು ನೆರೆಹೊರೆಯವರನ್ನು ಪ್ರೀತಿಸುವುದು ಆಗಿದೆ. ಆದರೆ ವಿಶಾಲ ಅರ್ಥದಲ್ಲಿ ಪ್ರೀತಿಸುವುದಾಗಿದೆ. ಹೇಗೆಂದರೆ ಕೇವಲ ಮಾನವರಿಗೆ ಸೀಮಿತವಾಗದೆ ಸರ್ವಜೀವಿಗಳಿಗೆ ಪ್ರಸರಿಸುವುದಾಗಿದೆ. ಬೌದ್ಧರಲ್ಲಿ ದೇವರ (ಸೃಷ್ಟೀಕರ್ತ) ದೃಷ್ಟಿ (ಮೂಢನಂಬಿಕೆ) ಇಲ್ಲ. ಅಂದರೆ ದೇವರ ಇರುವಿಕೆಯಾಗಲಿ ಅಥವಾ ಆತನ ಕಾರ್ಯಗಳ ಮೇಲೆ ನಂಬಿಕೆ ಇಲ್ಲ. ಆದರೆ ಧರ್ಮ (ಜ್ಞಾನ)ವಿದೆ. ಏಕೆಂದರೆ ಧಮ್ಮವೆಂದರೆ ಸತ್ಯ. ಸಾಪೇಕ್ಷತೆಯ ನಿಯಮಗಳು. ಅದು ವ್ಯಕ್ತಿತ್ವ ಶೂನ್ಯವುಳ್ಳದ್ದು (ಅನತ್ತ) ಹಾಗು ಮೈತ್ರಿಯು ಏಕವಾದುದರಲ್ಲಿ ಕೇಂದ್ರೀಕೃತವಲ್ಲ. ಅದು ಸರ್ವರಿಗೂ ಮೈತ್ರಿ ಪ್ರಸರಣ ಮತ್ತು ಬೌದ್ಧರಲ್ಲಿ ಭಕ್ತಿಯಂತಹ ಸಂಕುಚಿತತೆಯಿಲ್ಲ. (ಏಕವಾದುದರಲ್ಲಿ ಕೇಂದ್ರೀಕೃತವಲ್ಲ)
ಬೌದ್ಧರ ಬ್ರಹ್ಮವಿಹಾರವು ವಿಚಾರ ಹಾಗೂ ಆಚಾರ ವಿಷಯದಲ್ಲಿ ಪ್ರಶ್ನಾತ್ಮಕವಾಗಿದೆ. ಮೊದಲು ಬ್ರಹ್ಮ ವಿಹಾರದ (ಮೆತ್ತಾ, ಕರುಣೆ, ಮುದಿತಾ ಹಾಗೂ ಉಪೇಕ್ಷಾ) ಮಹೋನ್ನತೆಯನ್ನು ಅರಿಯಬೇಕು. ನಂತರ ಪರಿಪೂರ್ಣಗೊಳಿಸಬೇಕು. ಮೈತ್ರಿಯನ್ನು ಸಾಧನೆ ಮಾಡುತ್ತಾ ಚೆನ್ನಾಗಿ ಅರಿಯಬಹುದು. ಬ್ರಹ್ಮವಿಹಾರವನ್ನು ಸಾಧನೆ ಮಾಡುತ್ತಾ ಅದನ್ನು ದಾನ, ಶೀಲ ಸುವಾಚ ಹಾಗು ಶ್ರೇಷ್ಠಯುತ ಸುಜೀವನವನ್ನಾಗಿ ಸುಸಂವೃದ್ಧಿ ಗೊಳಿಸಬೇಕು. ಇದರ ಧ್ಯಾನ ಪದ್ಧತಿಯು ಬೇರೆ ಧ್ಯಾನ ಪದ್ಧತಿಯಂತೆ ಸಾಮ್ಯತೆಯಿದೆ. ಅದರಲ್ಲಿ ಎಚ್ಚರಿಕೆಯಿಂದ, ಉತ್ಸಾಹದಿಂದ ಪೂರ್ಣವಾಗಿ ಏಕಾಗ್ರಗೊಳಿಸಬೇಕು. ಮೈತ್ರಿಯಲ್ಲಿ ಈ ಕ್ರಿಯಾತ್ಮಕತೆಯು ತನ್ನ ಸುತ್ತಲಿರುವ ಜೀವಿಗಳ ಬಗ್ಗೆ ಚಿತ್ತವನ್ನು ಪ್ರಿಯವಾಗಿ ಹಾಗು ಹಿತಕರ ಭಾವನೆಯನ್ನು ಪ್ರದಶರ್ಿಸಬೇಕು. ಎಂದೂ ಒಬ್ಬನು ಇದನ್ನು ಅಭಿವೃದ್ಧಿಗೊಳಿಸಿ ಸ್ಥಿರನಾಗಿರುತ್ತಾನೆಯೋ ಆಗ ಆತನು ಶಾಂತಚಿತ್ತನಾಗಿ ಹಾಗು ಆನಂದಮಯನಾಗಿರುತ್ತಾನೆ. ಹಾಗು ಆತನು ಬುದ್ಧರ ಬೋಧಿಯನ್ನು ಚೆನ್ನಾಗಿ ಅರಿಯಬಲ್ಲ ಮತ್ತು ವಿಮುಕ್ತಿಯ ಹಾದಿಯಲ್ಲಿ ಕ್ರಮಿಸಿ ದುಃಖದಿಂದ ಪಾರಾಗಿ ನಿಬ್ಬಾಣ ಸಾಧಿಸಬಲ್ಲ.
ಪ್ರತಿಯೊಂದು ಬ್ರಹ್ಮವಿಹಾರವು ಕೆಲವು ಕಶ್ಮಲವನ್ನು ನಾಶಗೊಳಿಸಿ ಆತನು ಮಾರ್ಗದಲ್ಲಿ ಅಭಿವೃದ್ಧಿಯಾಗುವಂತೆ ಮಾಡುತ್ತದೆ.
ಮೈತ್ರಿಯು ಕೋಪ ಮತ್ತು ದ್ವೇಷವನ್ನು ನಾಶಗೊಳಿಸುತ್ತದೆ. ಕರುಣೆಯು ಕ್ರೂರತನವನ್ನು ಹಾಗು ಸ್ವಾರ್ಥವನ್ನು ನಾಶಗೊಳಿಸುತ್ತದೆ. ಮುದಿತಾ (ಆನಂದ)ವು ಮತ್ಸರವನ್ನು ನಾಶಗೊಳಿಸುತ್ತದೆ. ಸಮಚಿತ್ತತೆಯು (ಉಪೇಕ್ಖಾ) ಲೋಭವನ್ನು ಮೋಹವನ್ನು ನಾಶಗೊಳಿಸುತ್ತದೆ.
ಹೀಗೆಯೇ ಮುಂದುವರೆದು ಆತನು ಪರರಿಗೆ ಶ್ರೇಷ್ಠ ರೀತಿಯಲ್ಲಿ ಸಹಾಯ ಮಾಡುವುದನ್ನು ಸಾಧಿಸುತ್ತಾನೆ. ಅದನ್ನು ಸ್ವಯಂಭೂವಾಗಿ ಮಾಡುತ್ತಾನೆ.
ಬುದ್ಧ ಭಗವಾನರ ಬೋಧಿ (ಬೋಧನೆ) ತನ್ನ ಪರಿಪೂರ್ಣತೆಯನ್ನು ಹಾಗು ಪರಹಿತವನ್ನು ಸಾಧಿಸುವುದೇ ಆಗಿದೆ. ಜಗತ್ತಿನ ದುಃಖವನ್ನು ಬ್ರಹ್ಮವಿಹಾರದ ಸಹಾಯದಿಂದಲೂ ಲೋಕದ ದುಃಖ ವಿಮುಕ್ತಿಗೆ ಸಹಾಯ ಮಾಡಿ ತಾನು ಬೆಳೆಯುವುದಾಗಿದೆ.
ಸರ್ವರಿಗೂ ದುಃಖವಿಮುಕ್ತಿ ಹಾಗು ಪರಮಸುಖ (ನಿಬ್ಬಾಣ) ಪ್ರಾಪ್ತಿಯ ಈ ಮಾರ್ಗವನ್ನು ನಾವು ಬ್ರಹ್ಮವಿಹಾರದ ಪ್ರೀತಿ (ಮೆತ್ತಾ) ಎನ್ನುವೆವು.
No comments:
Post a Comment