ಸುಭದ್ದ
ಬುದ್ಧಭಗವಾನ ಕರುಣೆಗೆ ಯಾವ ಕಾಲದ ಮಿತಿಯೂ ಇರಲಿಲ್ಲ. ಅವರ ಅಂತಿಮ ಕ್ಷಣಗಳ ಪ್ರಸಂಗವಿದು.ಸುಭದ್ದನೆಂಬ ಪರಿವ್ರಾಜಕ ಸನ್ಯಾಸಿಯು ಕುಸಿನಾರದ ಹತ್ತಿರ ವಾಸವಾಗಿದ್ದನು. ಅವನಿಗೆ ಈ ವಿಷಯ ತಿಳಿಯಿತು. ಏನೆಂದರೆ ಬುದ್ಧಭಗವಾನರು ತಮ್ಮ ಅಂತಿಮ ಅವಸ್ಥೆಯಲ್ಲಿರುವರೆಂದು ತಿಳಿಯಿತು. ಆಗ ಸುಭದ್ದನು ಬುದ್ಧಭಗವಾನರನ್ನು ನೋಡಿ ಅವರನ್ನು ಕೆಲವು ವಿಷಯಗಳ ಬಗ್ಗೆ ಈಗಲೇ ತಿಳಿಯಬೇಕೆಂದು ನಿರ್ಧರಿಸಿದನು. ಆತನಿಗೆ ಬುದ್ಧ ಭಗವಾನರು ಅವನ ಪ್ರಶ್ನೆಗಳಿಗೆ ಉತ್ತರಿಸಿ ಆತನ ಸಂದೇಹಗಳನ್ನು ಪರಿಹರಿಸುವರು ಎಂಬ ನಂಬಿಕೆಯಿತ್ತು.
ಆದ್ದರಿಂದ ಸುಭದ್ದು ಸಾಲುವೃಕ್ಷಗಳ ತೋಪಲ್ಲಿ ಹೊರಟನು. ಅಲ್ಲಿ ಆನಂದರವರಿಗೆ ಹೋಗಿ ತಾನು ಬುದ್ಧರಿಗೆ ಕಾಣುವ ಅವಕಾಶ ನೀಡಬೇಕೆಂದು ಕೇಳಿಕೊಂಡನು. ಆದರೆ ಆನಂದರು ಹೀಗೆ ಉತ್ತರಿಸಿದರು ಸಾಕು ಮಿತ್ರ ಸುಭದ್ದ, ಬುದ್ಧಭಗವಾನರು ತುಂಬ ಬಳಲಿದ್ದಾರೆ, ಅವರಿಗೆ ತೊಂದರೆ ಕೊಡಬೇಡ.
ಅನಂತರ ಎರಡನೆಯಬಾರಿ ಸುಭದ್ದನು ಹಿಂದಿನಂತೆಯೇ ವಿನಂತಿಸಿಕೊಂಡನು. ಆನಂದರು ಸಹ ಹಿಂದಿನಂತೆಯೇ ಉತ್ತರಿಸಿದರು. ಮತ್ತೆ ಮೂರನೆಯ ಸಾರಿ ಸುಭದ್ದನು ಹಿಂದಿನಂತೆಯೇ ಕೋರಿಕೊಂಡನು. ಆನಂದರು ಮತ್ತೆ ಹಾಗೆ ಉತ್ತರಿಸಿದರು.
ಆದರೆ ಭಗವಾನರಿಗೆ ಇವರಿಬ್ಬರ ನಡುವಿನ ಸಂಭಾಷಣೆಯ ಒಂದೆರಡು ಪದಗಳು ಸಿಕ್ಕಿತ್ತು. ಅವರು ಆನಂದರಿಗೆ ಕರೆದರು ಮತ್ತು ಹೇಳಿದರು ಬಾ ಆನಂದ, ಸುಭದ್ದನನ್ನು ನನ್ನಿಂದ ದೂರವಿಸಬೇಡ, ಆತನು ಬಂದು ನನ್ನನ್ನು ಕಾಣುವಂತಾಗಲಿ. ಸುಭದ್ದನು ನನ್ನಿಂದ ಏನು ಬೇಕಾದರೂ ಕೇಳಲಿ, ಅವನು ಜ್ಞಾನಾಪೇಕ್ಷೆಯಿಂದ ಬಂದಿದ್ದಾನೆಯೇ ಹೊರತು ನನಗೆ ತೊಂದರೆ ಕೊಡಲು ಅಲ್ಲ ಮತ್ತು ಅವನ ಪ್ರಶ್ನೆಗಳಿಗೆ ನಾನು ಕೊಡುವ ಉತ್ತರವನ್ನು ಸಹಾ ಅತಿ ಕ್ಷಿಪ್ರವಾಗಿ ಅಥರ್ೈಸಿಕೊಳ್ಳಬಲ್ಲ.
ಹೀಗೆ ಅವಕಾಶ ಸಿಕ್ಕಿದ ಬಳಿಕ ಸುಭದ್ದ ಭಗವಾನರ ಬಳಿಗೆ ಬಂದು ಅವರನ್ನು ಪ್ರಶ್ನಿಸಿ ಉತ್ತರ ಪಡೆದು ಸಂತೃಪ್ತನಾದನು. ನಂತರ ಬುದ್ಧಭಗವಾನರ ಮುಂದೆ ಭಿಕ್ಷುವಾಗಿ ದೀಕ್ಷೆ ಪಡೆದವರಲ್ಲಿ ಕೊನೆಯವನಾದನು. ಹಾಗು ತನ್ನ ಜಾಗೃತಿ ನಿರಂತರ ಪ್ರಯತ್ನಶೀಲತೆಯಿಂದ ಭಗವಾನರ ಜ್ಞಾನದಿಂದ ಆತನು ಅರಹಂತನಾದನು.
No comments:
Post a Comment