Saturday, 21 April 2018

ರಜ್ಜುಮಾಲಾ rajjumala

ರಜ್ಜುಮಾಲಾ

ಬುದ್ಧಭಗವಾನರು ತಮ್ಮ ಅಸಾಧಾರಣವಾದ ಜ್ಞಾನದಿಂದ ಜನರಿಗೆ ಸಹಾಯ ಮಾಡುತ್ತಿದ್ದರು. ಜನರು ತಮ್ಮ ಅಜ್ಞಾನದ ಕಾರ್ಯಗಳಿಂದ ಮತ್ತೆ ಹೆಚ್ಚು ದುಃಖ ಅನುಭವಿಸುವುದನ್ನು ತಡೆಯಲು ಅವರಿಗೆ ಸಮ್ಮದೃಷ್ಟಿ ನೀಡುತ್ತಿದ್ದರು.
ಅಂತಹುದೇ ಈ ಘಟನೆ ರಜ್ಜುಮಾಲಾಳದು. ಆಕೆಯು ಗಯಾ ಸಮೀಪದ ಹಳ್ಳಿಯಲ್ಲಿ ಗುಲಾಮಳಾಗಿದ್ದಳು. ಆಕೆಯ ಒಡತಿಗೆ ರಜ್ಜುಮಾಲಾಳೆಂದರೆ ಅಸಹ್ಯವಾಗುತ್ತಿತ್ತು.  ಅದ್ದರಿಂದ ಆಕೆಯು ಸದಾ ರಜ್ಜುಮಾಲಾಳೊಂದಿಗೆ ಕೆಟ್ಟರೀತಿಯಲ್ಲಿ ವತರ್ಿಸುತ್ತಿದ್ದಳು.  ಕೆಲವೊಮ್ಮೆ ಆಕೆಯ ತಲೆಗೂದಲನ್ನು ಎಳೆದು ಹಾಕಿದ್ದುಂಟು.  ಒಂದುದಿನ ರಜ್ಜುಮಾಲಾಳು ತಲೆ ಬೋಡಿಸಿಕೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದುಂಟು. ಆದರೆ ಆಕೆಯ ಕ್ರೂರಿ ಒಡತಿ ಆಕೆಯ ಕತ್ತಿನ ಸುತ್ತಲು ಹಗ್ಗವನ್ನು ಹಾಕಿ ಎಳೆದಾಡುತ್ತಿದ್ದಳು.
ರಜ್ಜುಮಾಲಾಳಿಗೆ ಜೀವಿಸುವುದೇ ಅಸಾಧ್ಯವಾಯಿತು ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಆದರೆ ಆಕೆಯ ಹಳ್ಳಿಯ ಮಾರ್ಗದಲ್ಲಿ ಬುದ್ಧರು ಆಕೆಗಾಗಿ ಕಾಯುತ್ತಿರುವುದನ್ನು ಕಂಡಳು. ಪ್ರಜ್ಞಾನಾಥ ತಥಾಗತರು ಆದ ಬುದ್ಧರು ಆಕೆಗೆ ಧಮ್ಮವನ್ನು ಬೋಧಿಸಿದರು. ಧಮ್ಮವನ್ನು ಪರಿಶುದ್ಧವಾಗಿ ಹೀರಿಕೊಂಡು ಆಕೆಯು ಸೋತಪನ್ನಳಾದಳು. ಆಕೆ ಲೋಕ ಕರುಣಿಕರ ಹಿಂಬಾಲಕಳಾದಳು.
ಆಕೆ ಹಿಂತಿರುಗಿ ತನ್ನ ಒಡತಿಗೆ ಏನಾಯಿತೆಂದು ಹೇಳಿದಳು. ಆಕೆಯ ಒಡತಿ ಈ ವಿಷಯ ಕೇಳಿ ಬುದ್ಧರನ್ನು ದಶರ್ಿಸಿ ಅವರ ಬೋಧನೆಯನ್ನು ಆಲಿಸಿದಳು. ನಂತರ ಆಕೆಯೂ ಸಹ ಸೋತಪನ್ನಳಾಗಿ ವಿಧ್ಯಾಚರಣ ಸಂಪನ್ನರ ಹಿಂಬಾಲಕಳಾದಳು.
ನಂತರ ಬುದ್ಧಭಗವಾನರು ಅವರಿಗೆ ಹಿಂದಿನ ಜನ್ಮಗಳ ವೃತ್ತಾಂತವನ್ನು ತಿಳಿಸಿದರು. ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಒಡತಿಯಾಗಿದ್ದಳು. ಈಗಿರುವ ಒಡತಿ ಆಗ ಸೇವಕಿಯಾಗಿದ್ದಳು (ಗುಲಾಮಳು). ಆ ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಆ ಗುಲಾಮಳಿಗೆ ಬಹಳ ಹಿಂಸೆ ನೀಡಿದ್ದಳು. ಆ ಸೇವಕಿಯು ಸೇಡಿಗಾಗಿ ಪ್ರತಿಜ್ಞೆ ಮಾಡಿದ್ದಳು. ಫಲವಾಗಿ ಈಗ ಸೇವಕಿಯು ಒಡತಿಯಾಗಿ, ಒಡತಿ ಸೇವಕಿಯಾಗಿರುವಳು. ಕೊನೆಗೆ ಬುದ್ಧಭಗವಾನರು ಕರುಣಾಶಕ್ತಿಯಿಂದ ಅವರಿಬ್ಬರು ಮತ್ತೆ ಪಾಪ ಮಾಡುವುದು ತಪ್ಪಿತು. ದ್ವೇಷಿಸುವುದು ತಪ್ಪಿತು. ಅಷ್ಟೇ ಅಲ್ಲದೆ ಈಗ ಬಾಂಧವ್ಯದಿಂದ ಇರುವುದು ಆಯಿತು.

No comments:

Post a Comment