Friday, 20 April 2018

ಪಟಚರಿ

ಪಟಚರಿ

ಮೇಲಿನ ಕೆಲವೊಂದು ಘಟನೆಗಳು ಈ ರೀತಿ ಸೂಚಿಸುತ್ತದೆ.  ಹೇಗೆಂದರೆ ಕೆಲವೊಂದು ಬಲಗಳು ಕೇವಲ ಒಬ್ಬರಿಗಾಗಿಯೇ ಅಥವಾ ಬುದ್ಧರಿಗಾಗಿಯೇ ಬೆಳವಣಿಗೆ ಹೊಂದಿದೆ.  ಮತ್ತೆ ಕೆಲವೊಂದು ಘಟನೆಗಳು ಬುದ್ಧರ ಕರುಣೆ ಮತ್ತು ಮೈತ್ರಿಯನ್ನು ಸಮಾನ್ಯವಾಗಿ ಪ್ರಸರಿಸಿವೆ.  ಆದಾಗ್ಯೂ ಶ್ರೇಷ್ಠತರವಾಗಿ ಗೋಚರಿಸುತ್ತದೆ.  ಅವರ ಕರುಣೆ ಮೈತ್ರಿಗಳು ಸದಾ ಹಾಗೆ ಪ್ರತಿಷ್ಠಿತವಾಗಿರುತ್ತದೆ.  ಆದರೆ ಸನ್ನಿವೇಶಕ್ಕೆ ತಕ್ಕಂತೆ ಅದು ದೊಡ್ಡದು ಅಥವಾ ಸಣ್ಣ ಘಟನೆ ಎನಿಸುತ್ತದೆ.  ಅವರ ಭಾಷೆ ಹಾಗು ವರ್ತನೆ ಅಸಾಧಾರಣವಾಗಿ ಶ್ರೇಷ್ಠವಾಗಿತ್ತು.
ಪಟಚರಿಯು ಶ್ರಾವಸ್ಥಿಯಲ್ಲಿ ಒಬ್ಬ ಶ್ರೀಮಂತ ಬಟ್ಟೆ ವ್ಯಾಪಾರಿಯ ಮಗಳಾಗಿದ್ದಳು. ಆಕೆಯು ಯೌವನಕ್ಕೆ ಬಂದಾಗ ತನ್ನ ಕುಟುಂಬದ ಸೇವಕನೊಬ್ಬನಲ್ಲಿ ಅನುರಕ್ತಳಾಗಿ ಪ್ರೇಮಿಯಾದಳು. ಆದರೆ ಆಕೆಯ ತಂದೆ-ತಾಯಿಗಳು ಆಕೆಗಾಗಿ ಸಮಾನ ದಜರ್ೆಯ ಶ್ರೇಷ್ಠ ವರನ ಅನ್ವೇಷಣೆಯಲ್ಲಿದ್ದರು.  ಆಗಲೇ ಪಟಚರಿಯು ತನ್ನ ಪ್ರಿಯಕರನೊಂದಿಗೆ ದೂರ ಓಡಿಹೋದಳು. ಅವರು ಅಲ್ಲಿ ವಿವಾಹವಾಗಿ ಒಂದು ಚಿಕ್ಕ ಹಳ್ಳಿಯಲ್ಲಿ ನೆಲೆಸಿದರು.
ಆಕೆ ಗಭರ್ಿಣಿಯಾಗುವ ಸೂಚನೆಗಳು ಕಂಡುಬಂದಾಗ ಆಕೆ ತನ್ನ ಪತಿಗೆ ತಾನು ತನ್ನ ತಾಯಿಯ ಮನೆಯಲ್ಲಿ ಮಗುವನ್ನು ಹಡೆಯುವ ಬಯಕೆ ಹೇಳಿದಳು. ಆದರೆ ಆಕೆಯ ಪತಿಯು ಇದಕ್ಕೆ ಹೆದರಿ ಏನಾದರೂ ನೆಪಹೇಳಿ ಮುಂದೂಡುತ್ತಿದ್ದನು. ಕೊನೆಗೆ ಆಕೆ ಒಬ್ಬಂಟಿಯಾಗಿದ್ದಾಗ ಆಕೆ ತನ್ನ ನೆರೆಹೊರೆಯವರಿಗೆ ವಿಷಯ ತನ್ನ ಪತಿಗೆ ತಿಳಿಸುವಂತೆ ಹೇಳಿ ಆಕೆ ತನ್ನ ತವರಿಗೆ ಪ್ರಯಾಣ ಬೆಳೆಸಿದಳು. ಪತಿಗೆ ವಿಷಯ ತಿಳಿದಾಗ ಆತನು ಆಕೆಯ ಹಿಂದೆಯೇ ಹೋದನು. ಆದರೆ ಅವರು ಶ್ರಾವಸ್ತಿಯನ್ನು ತಲುಪುವ ಮುಂಚೆಯೆ ಆಕೆ ಒಂದು ಗಂಡು ಮಗುವನ್ನು ಹೆತ್ತಳು. ಆದ್ದರಿಂದ ಅವರು ತಮ್ಮ ಮನೆಗೆ ಹಿಂತಿರುಗಿದರು.
ಮತ್ತೆ ಆಕೆ ಎರಡನೆಯ ಮಗುವಿಗೆ ಗಭರ್ಿಣಿಯಾದಳು. ಆಕೆ ಮತ್ತೆ ತನ್ನ ಪತಿಯಲ್ಲಿ ತನ್ನ ತಂದೆ-ತಾಯಿಗಳ ಬಳಿ ಹೋಗಲು ಒತ್ತಾಯಿಸಿದಳು.
ಆದರೆ ಆತನು ಮತ್ತೆ ನಿರಾಕರಿಸಿದನು. ಕೊನೆಗೆ ಆಕೆ ತಾನೆ ಹೊರಟಳು. ಈತನು ಹಿಂದಿನಂತೆಯೇ ವಿಷಯ ತಿಳಿದು ಹಿಂಬಾಲಿಸಿದನು. ಆದರೆ ದಾರಿಯಲ್ಲಿಯೆ ಆಕೆ ಮಗುವನ್ನು ಹೆತ್ತಳು. ಜನ್ಮ ತಾಳಿದ ಸ್ವಲ್ಪದಲ್ಲಿಯೆ ಬೃಹತ್ ಬಿರುಗಾಳಿಯು ಬಂದಿತು. ಆಗ ಪಟಚರಿಯ ಗಂಡನು ಹುಲ್ಲು ಮತ್ತು ಕಟ್ಟಿಗೆಗಳನ್ನು ಕಡಿಯಲು ಹೋದನು. ಏಕೆಂದರೆ ಆಕೆಯ ಆಶ್ರಯಕ್ಕಾಗಿ ಅದು ಅವಶ್ಯಕವಾಗಿತ್ತು. ಆದರೆ ಆ ಅರಣ್ಯದಲ್ಲಿ ಆತನಿಗೆ ಸರ್ಪವೊಂದು ಕಡಿದು ಆತನು ಮೃತ್ಯವಶವಾದನು.
ದುಭರ್ಾಗ್ಯವತಿ ಪಟಚರಿಯು ರಾತ್ರಿಯನ್ನು ಏಕಾಂಗಿಯಾಗಿ ಕಳೆದಳು. ಆಕೆ ಅತಿ ಒದ್ದೆಯಾಗಿಬಿಟ್ಟಿದ್ದಳು. ತನ್ನ ಇಬ್ಬರು ಪುತ್ರರನ್ನು ಅಪ್ಪಿಕೊಂಡು ನೆಲದಲ್ಲಿ ಮಲಗಿದ್ದಳು. ನಂತರ ಬೆಳಿಗ್ಗೆ ಆಕೆ ತನ್ನ ಪತಿಯ ಶವವನ್ನು ಕಂಡಳು. ಆಕೆ ಶೋಕದಿಂದ ಪೂರ್ಣವಾಗಿ ಕಂಗೆಟ್ಟಳು. ನಂತರ ತನ್ನ ತಂದೆ-ತಾಯಿಯ ಮನೆಗೆ ಹೋಗಲು ನಿಶ್ಚಯಿಸಿದಳು. ನಂತರ ಆಕೆ ನದಿಯ ಪ್ರವಾಹವು ಹರಿಯುತ್ತಿದ್ದ ಕಡೆ ಬಂದಳು. ಅಲ್ಲಿಂದ ಆಕೆ ದಾಟಿ ಹೋಗಬೇಕಾಗಿತ್ತು, ಆದರೆ ಅತಿ ದುರ್ಬಲಳು, ಆಯಾಸಗೊಂಡವಳು ಹಾಗು ದುಃಖದಿಂದ ಕೂಡಿದವಳಾಗಿದ್ದಳು. ಆಕೆ ಒಂದೇಸಾರಿ ಇಬ್ಬರು ಮಕ್ಕಳನ್ನು ಕರೆದೊಯ್ಯಲು ಸಾಧ್ಯವಿರಲಿಲ್ಲ.  ಆದ್ದರಿಂದ ಆಕೆ ತನ್ನ ಹುಟ್ಟಿದ್ದ ಕೂಸನ್ನು ದಡದಲ್ಲಿ ಎಲೆಗಳ ಗುಂಪು ಹಾಕಿ ಅದರ ಮೇಲಿಟ್ಟು ನಂತರ ಹಿರಿಯ ಮಗುವನ್ನು ಆ ಕಡೆಯ ದಡವನ್ನು ಸೇರಿಸಲು ಹೊರಟಳು.  ಮಧ್ಯದ ಹೊಳೆಯಲ್ಲಿ ಆಕೆ ಹಿಂತಿರುಗಿ ನೋಡಿದಳು. ಅದೇ ಸಮಯದಲ್ಲಿ ಒಂದು ಬೃಹತ್ ಗಿಡುಗವು ಆಕೆಯ ನವ ಕೂಸನ್ನು ಹಿಡಿಯಲು ಹಾರಿ ಕೆಳಕ್ಕೆ ಬಂದಿತು. ಆಕೆ ಈ ತೀಷ್ಣ ಆಘಾತದಲ್ಲಿ ತನ್ನ ಮೊದಲ ಮಗುವನ್ನು ಬಿಟ್ಟುಬಿಟ್ಟಳು. ಅತ್ತ ಆ ಕೂಸನ್ನು ಗಿಡಗವು ಎತ್ತಿ ಹಾರಿಹೋದರೆ, ಇತ್ತ ಈ ಮಗುವನ್ನು ಪ್ರವಾಹವು ಸೆಳೆದುಕೊಂಡು ಹೋಯಿತು.
ಈಗ ಜಗತ್ತಿನಲ್ಲಿ ಅತ್ಯಂತ ದುಃಖಿತಳಾದ ಪಟಚರಿಯು ತನ್ನ ತಂದೆ ತಾಯಿಯ ಬಳಿ ಹೋಗಲು ನಿರ್ಧರಿಸುತ್ತಾಳೆ. ಆಕೆ ಶ್ರಾವತ್ತಿಯ ಬಳಿಗೆ ಬರುತ್ತಾಳೆ. ಅಲ್ಲಿ ಆಕೆಗೆ ತನ್ನ ತಂದೆ-ತಾಯಿಯ ಮನೆಗೆ ಬೆಂಕಿಯ ಭಾರಿ ಅಪಘಾತದಲ್ಲಿ ತನ್ನ ತಂದೆ-ತಾಯಿಯೊಂದಿಗೆ ಮನೆಯು ಸುಟ್ಟು ಬೂದಿಯಾಗಿರುವುದು ತಿಳಿಯುತ್ತದೆ.
ಒಂದರ ಮೇಲೊಂದು ದುಃಖದ ಭಾರಿ ಆಘಾತಗಳೊಂದಿಗೆ ಆಕೆ ತತ್ತರಿಸುತ್ತಾಳೆ. ಬಹುಶಃ ಆಕೆಯಷ್ಟು ದುಃಖ ಬೇರಾರಿಗೂ ಸಿಕ್ಕಿರಲಾರದು. ಮೊದಲೇ ದುಃಖದಿಂದ ನಿಯಂತ್ರಣ ತಪ್ಪಿದ್ದ ಆಕೆಗೆ ಈಗಂತೂ ಆಳವಾದ ದುಃಖದಿಂದ ಮನಸ್ಸಿನ ಪೂರ್ಣ ನಿಯಂತ್ರಣ ಕಳೆದುಕೊಂಡಳು. ಆಕೆಗೆ ಬಟ್ಟೆ ಕಳಚಿ ಹೋಗಿರುವುದು ಅರಿವಾಗಲಿಲ್ಲ. ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದಳು. ಜನರು ಸಹಾ ಆಕೆಯನ್ನು ಬಾಗಿಲಿನಿಂದ ತಳ್ಳುತ್ತಿದ್ದರು. ಹೀಗೆಯೇ ಒಂದುದಿನ ಆಕೆ ಜೇತವನಕ್ಕೆ ಬಂದಳು. ಅಲ್ಲಿ ಬುದ್ಧಭಗವಾನರು ಧರ್ಮಪ್ರವಚನ ಮಾಡುತ್ತಿದ್ದರು. ಜನರು ಆಕೆಯನ್ನು ಹತ್ತಿರ ಬರಲು ತಡೆದರು.  ಆದರೆ ಮಹಾ ಕಾರುಣಿಕರು ಆಕೆಯನ್ನು ಹತ್ತಿರ ಕರೆದು ಆಕೆಯೊಂದಿಗೆ ಮಾತನಾಡಿಸಿದರು. ಬುದ್ಧಭಗವಾನರ ಶ್ರೇಷ್ಠತೆ ಹಾಗು ಮಹಾ ಕರುಣೆಯ ಬಲದಿಂದ ಆಕೆಗೆ ಮತ್ತೆ ಮನಸ್ಸು ಸ್ಥೀಮಿತಕ್ಕೆ ಬಂದಿತು.  ಆಕೆ ಕುಳಿತು ಭಗವಾನರ ಬೋಧನೆ ಕೇಳತೊಡಗಿದಳು. ಒಬ್ಬ ಮಾನವ ವಸ್ತ್ರವನ್ನು ಆಕೆಯತ್ತ ಎಸೆದನು. ಆಕೆ ಅದನ್ನು ಹೊದ್ದುಕೊಂಡು ಭಗವಾನರ ಹತ್ತಿರ ಬಂದಳೂ. ಆಕೆ ಕರುಣಾಸ್ವರೂಪಿ ಬುದ್ಧರ ಪಾದಗಳಿಗೆ ಪೂಜಿಸಿದಳು. ಹಾಗು ತನ್ನ ದುಃಖಭರಿತ ಜೀವನಾವಳಿಯನ್ನು ಹೇಳಿದಳು. ಆಕೆಯು ಬುದ್ಧರ ಬಳಿ ಸಹಾಯಕ್ಕಾಗಿ ಕೇಳಿಕೊಂಡಳು. ಬುದ್ಧಭಗವಾನರು ಆ ದುಃಖತಪ್ತಳನ್ನು ಸಂತೈಸಿದರು, ಸಮಾಧಾನಿಸಿದರು.  ಆಕೆಗೆ ಮರಣವು ಪ್ರತಿಯೊಬ್ಬರಿಗೂ ಬರುತ್ತದೆ ಎಂಬುದನ್ನು ಅರಿವುಂಟು ಮಾಡಿಸಿದರು.  ನಂತರ ಆಕೆಗೆ ಬೋಧನೆಯ ಶ್ರೇಷ್ಠ ಸತ್ಯಗಳನ್ನು ಹೇಳಿದರು. ಬುದ್ಧಭಗವಾನರ ಬೋಧನೆಯು ಮುಗಿಯುತ್ತಿದ್ದಂತೆ ಪಟಚರಿಯು ಸೋತಪನ್ನ ಫಲವನ್ನು ಪ್ರಾಪ್ತಿ ಮಾಡಿದಳು. ಅದು ಪರಮಶ್ರೇಷ್ಠ ಜ್ಞಾನ ಸಂತತ್ವದ ಪ್ರಥಮಫಲವಾಗಿತ್ತು.  ಮತ್ತು ಭಿಕ್ಷುಣಿಯಾಗಲು ಅನುಮತಿ ಕೇಳಿದಳು. ಬುದ್ಧಭಗವಾನರು ಒಪ್ಪಿದರು. ಓಹ್ ಆ ದುಃಖಿತಳು ಕೊನೆಗೂ ಶಾಂತಿಯನ್ನು ಪಡೆದಳು.
ಒಂದುದಿನ ಆಕೆ ತನ್ನ ಪಾದವನ್ನು ತೊಳೆಯುತ್ತಿರುವಾಗ ಆಕೆ ಈ ರೀತಿ ಗಮನಿಸಿದಳು. ನೀರು ಹರಿದು ಕೆಲವೊಮ್ಮೆ ಹತ್ತಿರ ಬರುತ್ತದೆ ಮತ್ತು ಕೆಲವೊಮ್ಮೆ ದೂರ ಹೋಗುತ್ತದೆ.
ಆಕೆ ಜ್ಞಾನಯುತವಾಗಿ ಚಿಂತಿಸತೊಡಗಿದಳು. ಹೀಗೆಯೇ ಅಲ್ಲವೆ ಎಲ್ಲಾ ಮಾನವರು ಮರಣವನ್ನು ಅಪ್ಪುವುದು. ಮೊದಲು ಬಾಲ್ಯ, ನಂತರ ಯೌವ್ವನ, ಆನಂತರ ಮುಪ್ಪು ನಂತರ ಮರಣ... ಆಕೆ ಅರಹಂತಳಾದಳು. ಅದೇ ಸಂತತ್ವದ ಪರಮಗುರಿ, ಜ್ಞಾನದ ಅಂತಿಮ ಫಲ ಹಾಗು ದುಃಖದ ಪೂರ್ಣ ನಾಶ ಮಾಡಿಕೊಂಡ ವ್ಯಕ್ತಿತ್ವ, ಮತ್ತು ಪರಮಶಾಂತಿಯ ಪ್ರಾಪ್ತಿ.
ಬುದ್ಧ ಭಗವಾನರ ದಯೆಯಿಂದ ಹೀಗೆ ಆಕೆ ಮುಂದೆ ದೊಡ್ಡ ಬೋಧಕಳಾಗುತ್ತಾಳೆ.  ಎಷ್ಟು ಸ್ತ್ರೀಯರು ತಮ್ಮ ದುಃಖ ನಿವಾರಣೆಗೆ ಆಕೆಯತ್ತ ಬೋಧನೆಗೆ ಹಾಗು ಸಮಾಧಾನಕ್ಕೆ ಹೋಗುತ್ತಾರೆ. ಬುದ್ಧಭಗವಾನರು ಆಕೆಗೆ ಬಗ್ಗೆ ಹೀಗೆ ಘೋಷಿಸುತ್ತಾರೆ ವಿನಯವನ್ನು ಶ್ರೇಷ್ಠವಾಗಿ ಅರಿತಿರುವವರಲ್ಲಿ ಈಕೆಯು ಸಹಾ ಶ್ರೇಷ್ಠಳು

No comments:

Post a Comment