Saturday, 21 April 2018

ದೇವದತ್ತ

ದೇವದತ್ತ

ಬುದ್ಧಭಗವಾನರ ಸಹಾನುಭೂತಿ ಕರುಣೆಯು ಮತ್ತು ಮೈತ್ರಿಯು ಸರ್ವರಿಗೂ ಸಮಾನವಾಗಿ ಅಗಾಧವಾಗಿತ್ತು. ಅವರು ಯಾವ ಜೀವಿಗೆ ಮೈತ್ರಿ ಮಾಡಬೇಕು ಎಂದು ಮೌಲ್ಯಮಾಪನ ಮಾಡುತ್ತಿರಲಿಲ್ಲ. ಅವರ ಸಹಾನುಭೂತಿಯು ಪ್ರತಿಯೊಂದು ಜೀವಿಗೂ ಅಷ್ಟೇ ಅಗಾಧವಾಗಿ ಸಮಾನವಾಗಿತ್ತು. ಆದ್ದರಿಂದ ಅವರಲ್ಲಿ ಶತ್ರುಗಳೆಂಬ (ಪರರು) ಭಾವನೆಯೇ ಇರಲಿಲ್ಲ.
ಒಮ್ಮೆ ದೇವದತ್ತನು ಕಾಯಿಲೆ ಬಿದ್ದನು. ತುಂಬಾ ವೈದ್ಯರು ಬಂದು ಉಪಚರಿಸಿದರು, ಆದರೂ ವಾಸಿಯಾಗಲಿಲ್ಲ.  ನಂತರ ದೇವದತ್ತನ ದೊಡ್ಡಪ್ಪನ ಪುತ್ರರಾದ ಭಗವಾನರು ಆತನನ್ನು ನೋಡಲು ಹೋದರು.
ಆಗ ಬುದ್ಧರ ಹಿಂಬಾಲಕರೊಬ್ಬರು ಭಗವಾನರನ್ನು ಪ್ರಶ್ನಿಸಿದನು ಓ ಭಗವಾನ್, ತಾವು ದೇವದತ್ತನಿಗೆ ಸಹಾಯ ಮಾಡಲು ಏಕೆ ಹೋಗುತ್ತಿರುವಿರಿ ? ಆತನು ತಮಗೆ ಬಹಳಷ್ಟು ಸಾರಿ ಹಿಂಸಿಸಲು ಪ್ರಯತ್ನಿಸಿದ್ದಾನೆ. ಆ ಕ್ರೂರಿಯು ತಮ್ಮ ಹತ್ಯಗೈಯಲು ಪ್ರಯತ್ನಿಸಿದ್ದ!
ನಂತರ ಬುದ್ಧಭಗವಾನರು ಉತ್ತರಿಸಿದರು :
ಯಾರೊಂದಿಗೆ ಆಗಲಿ, ಮಿತ್ರತ್ವದಿಂದ ಇರಬೇಕಾದರೆ ಕಾರಣಗಳು ಬೇಕಾಗಿಲ್ಲ (ಅಂದರೆ ಆತನು ಹಿತವಾಗಿಯು ಅಥವಾ ಪ್ರಿಯವಾಗಿಯೆ ವತರ್ಿಸಬೇಕಾಗಿಲ್ಲ) ಮತ್ತು ಪರರಲ್ಲಿ ಶತೃತ್ವದಿಂದ ಇರಬೇಕಾಗಿಲ್ಲ.  ಎಲ್ಲಾ ಜನರು (ಜೀವಿಗಳು) ಸುಖವನ್ನು ಬಯಸುತ್ತದೆ ಮತ್ತು ಯಾರು ಸಹಾ ರೋಗಿಯಾಗಲು ಅಥವಾ ದುಃಖದಿಂದ ಇರಲು ಬಯಸುವುದಿಲ್ಲ, ಆದ್ದರಿಂದ ನಾವು ಪ್ರತಿಯೊಬ್ಬರಲ್ಲಿಯೂ ಮೈತ್ರಿಯಿಂದಿರಬೇಕು (ಶುದ್ಧ ಪ್ರೀತಿ) ಎಂದು ಆ ಮಹಾ ನಿಸ್ವಾಥರ್ಿ ಕರುಣಾ ಸ್ವರೂಪರು ಉತ್ತರಿಸಿದರು.
ನಂತರ ದೇವದತ್ತನ ಹಾಸಿಗೆಯ ಬಳಿ ಬಂದು ಈ ಸತ್ಯವಚನ ನುಡಿದರು : ನನಗೆ ನಿರಂತರ ಹಿಂಸಿಸುತ್ತಿರುವ ದೇವದತ್ತನ ಮೇಲು, ಹಾಗು ನನ್ನ ಏಕೈಕ ಪುತ್ರ ರಾಹುಲನ ಮೇಲು ನನ್ನ ಮೈತ್ರಿ ಸಮಾನವಾಗಿದೆ. ರಾಹುಲಷ್ಟೆ ಮೈತ್ರಿ ದೇವದತ್ತನ ಮೇಲು ಇದೆ. ಈ ನುಡಿಯು ಸತ್ಯಭರಿತವಾಗಿದ್ದರೆ ದೇವದತ್ತನು ರೋಗದಿಂದ ಗುಣಮುಖನಾಗಲಿ! ಎಂದು ಸತ್ಯವಚನಗೈದರು ಆ ತಥಾಗತರು. ಆಶ್ಚರ್ಯ! ಅದೇ ಕ್ಷಣದಲ್ಲಿ ದೇವದತ್ತನ ರೋಗ ಮಾಯವಾಗಿ ಆರೋಗ್ಯವಂತನಾದನು.
ಬುದ್ಧಭಗವಾನರು ತಮ್ಮ ಹಿಂಬಾಲಕರಿಗೆ ಹೇಳಿದರು ನೆನಪಿಡಿ, ನಿಜವಾದ ಬುದ್ಧರು ಪ್ರತಿಯೊಂದು ಜೀವಿಗೂ ಸಮಾನವಾಗಿ ಸಹಾಯ ಮಾಡುತ್ತಾರೆ.

No comments:

Post a Comment