ಸೋಪಕ
ಬುದ್ಧಭಗವಾನರ ಜ್ಞಾನವು ಅವರಿಗೆ ಅನಂತ ಅಪಾರ ಕರುಣೆ ಮತ್ತು ಅಸೀಮ ಮೈತ್ರಿಯುತರನ್ನಾಗಿ ಮಾಡಿತ್ತು. ಅದು ಅವರಲ್ಲಿ ತುಂಬಿ ತುಳುಕಾಡುತ್ತಿತ್ತು. ಅವರ ಕರುಣೆಯು ಅಪಾಯದಲ್ಲಿರುವ ಯಾರಿಗೂ ಸಹಾಯ ಮಾಡುತ್ತಿತ್ತು.ಒಮ್ಮೆ ಸೋಪಕನೆಂಬ ಬಾಲಕನಿದ್ದನು. ಆತನಿಗೆ ಕೇವಲ 7 ವರ್ಷ ಮಾತ್ರವಾಗಿತ್ತು. ಆಗಲೆ ಆತನ ತಂದೆಯು ತೀರಿಹೋದನು. ಆತನ ತಾಯಿಯು ಮತ್ತೊಬ್ಬನೊಡನೆ ವಿವಾಹವಾದಳು. ಆ ಮನುಷ್ಯನು ದಯಾರಹಿತನು ಹಾಗು ಅತಿ ಕ್ರೂರಿಯಾಗಿದ್ದನು. ಆ ಮಲತಂದೆಯು ಸದಾ ಸೋಪಕನನ್ನು ಹಿಡಿದು ಹೊಡೆಯುತ್ತಿದ್ದನು. ಕೆಲವು ಕಾಲದ ನಂತರ ಒಬ್ಬ ತಮ್ಮನು ಜನಿಸಿದನು. ಒಂದು ಸಂಜೆ ಆ ಚಿಕ್ಕ ಬಾಲಕನು ತನ್ನ ತೊಟ್ಟಿಲಿನಲ್ಲಿ ಅಳುತ್ತಿದ್ದನು. ಮಲತಂದೆಯು ಸೋಪಕನ ಮೇಲೆ ಸಂಶಯಿಸಿ ಸೋಪಕನ ಕಿವಿಹಿಡಿದು ಒಂದು ಬಲವಾದ ಹೊಡೆತ ನೀಡಿದನು. ಸೋಪಕನು ಅತ್ತನು. ಸೋಪಕನ ಧ್ವನಿ ಕೇಳಿ ಆ ಚಿಕ್ಕ ಬಾಲಕನೂ ಅತ್ತನು. ಸೋಪಕನು ಇದರಿಂದ ಭಯಪಟ್ಟನು. ಏಕೆಂದರೆ ಮಲತಂದೆ ಮತ್ತೆ ಹೊಡೆಯುವ ಸಾಧ್ಯತೆ ಇತ್ತು. ಸೋಪಕನ ತಾಯಿಯು ಸಹಾ ಆಗ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಮಲತಂದೆಯ ಕ್ರೂರತಕ್ಕೆ ಆಗ ಅಡ್ಡಿಯೇ ಇರಲಿಲ್ಲ. ಸೋಪಕನ ಗೋಳಾಟಕ್ಕೆ ಆತನ ತಂದೆಯು ಅವನಿಗೆ ಹಗ್ಗಕಟ್ಟಿ ನೇತುಹಾಕಲು ಹಗ್ಗ ತಂದನು. ಆಗ ಭೀತಿಗೊಂಡ ಆ ಮುಗ್ಧ ಮಗುವು ತನ್ನ ಪುಟ್ಟ ಕಾಲುಗಳು ಎಲ್ಲಿಯವರೆಗೆ ಓಡಬಹುದೋ ಅಷ್ಟು ದೂರ ಓಡಿತು. ಕೊನೆಗೆ ಆತನು ಕಾಡಿನ ಸ್ಮಶಾನವನ್ನು ತಲುಪಿದ್ದನು. ಅಲ್ಲಿ ಅನೇಕ ಶವಗಳು ದುವರ್ಾಸನೆಯಿಂದ ಕೂಡಿದ್ದು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಆದರೆ ಮಲತಂದೆ ಅಲ್ಲಿಯೂ ಬಿಡಲಿಲ್ಲ. ಸೋಪಕನನ್ನು ಹಿಡಿದುಕೊಂಡು ಒಂದು ಶವಕ್ಕೆ ಈತನನ್ನು ಸೇರಿಸಿ ಕಟ್ಟಿಹಾಕಿದನು. ಸೋಪಕನು ಅತ್ಯಂತ ದೈನ್ಯಭಾವದಿಂದ ಗೋಳಾಡಿ ಬೇಡಿಕೊಂಡನು. ತನ್ನನ್ನು ಬಿಡಿಸಬೇಕೆಂದು ಬೇಡಿದನು. ಆದರೆ ಆ ಕ್ರೂರಿ ಕಿವುಡನಂತೆ ಮನೆಗೆ ಹಿಂದಿರುಗಿದನು.
ರಾತ್ರಿ ಕತ್ತಲು ಆದಂತೆಯೇ ಸೋಪಕನ ಭಯವು ಇಮ್ಮಡಿಯಾಯಿತು. ಆತನಿಗೆ ತೋಳಗಳ, ನರಿಗಳ, ಹುಲಿ-ಚಿರತೆಗಳ ಇನ್ನಿತರ ಪ್ರಾಣಿಗಳ ಕೂಗುಗಳು ಕೇಳಿಸತೊಡಗಿತು. ಆತನ ಭಯದಿಂದ ಕೂಡಿದ ಗೋಳಾಟ ಕೂಗಾಟ ಹೆಚ್ಚಾಯಿತು.
ಇಲ್ಲಿ ತಾಯಿಯು ಮನೆಗೆ ಹಿಂದಿರುಗಿದಳು. ಆಕೆಗೆ ತನ್ನ ಮೊದಲ ಪುತ್ರನ ವಿಷಯವು ಅರ್ಥವಾಗಲಿಲ್ಲ. ಆಕೆಯ ಗಂಡನು ಸಹಾ ಏನೂ ಹೇಳಲಿಲ್ಲ. ಆದ್ದರಿಂದ ಆಕೆಯು ಸೋಪಕನನ್ನು ಹುಡುಕಲು ಹೊರಟಳು. ಆಕೆಗೆ ಆತನನ್ನು ಹುಡುಕಲು ಸಾಧ್ಯವಾಗಲಿಲ್ಲ. ಆಗ ಆಕೆಯ ದುಃಖವು ಹೆಚ್ಚಾಯಿತು. ಆಕೆ ಅತ್ತಳು, ಆಕೆ ಶೋಕತಪ್ತಳಾಗಿ ಶ್ರಾವಸ್ಥಿಯಲ್ಲಿ ಪ್ರತಿಯೊಬ್ಬರಿಗೂ ತನ್ನ ಮಗನ ಬಗ್ಗೆ ಕೇಳುತ್ತಾ ಓಡುತ್ತಿದ್ದಳು. ಆದರೆ ಆಕೆಗೆ ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಆಕೆಗೆ ಓರ್ವ ಮುದುಕನು ಸಹಾಯ ಮಾಡುವಂತಹ ಏಕೈಕ ವ್ಯಕ್ತಿಯ ಬಗ್ಗೆ ತಿಳಿಸಿದನು, ಅವರೇ ಬುದ್ಧ ಭಗವಾನರು. ಬುದ್ಧಭಗವಾನರು ಆ ಸಮಯದಲ್ಲಿ ಜೇತವನದ ವಿಹಾರದಲ್ಲಿದ್ದರು. ಆ ಮುದುಕನು ಆಕೆಗೆ ಈ ರೀತಿ ತಿಳಿಸಿದನು. ಏನೆಂದರೆ ಬುದ್ಧರಿಗೆ ಭೂತಕಾಲದ, ಭವಿಷ್ಯತ್ತಿನ ಬಗೆಗೆ ಹಾಗು ವರ್ತಮಾನದ ಬಗ್ಗೆ ತಿಳಿದಿದೆ. ಅಲ್ಲಿ ಭೇಟಿಮಾಡು ಎಂದು ತಿಳಿಸಿದ್ದನು. ಆ ಬಡಪಾಯಿ ದುಃಖತಪ್ತ ತಾಯಿಯ ವಿಹಾರಕ್ಕೆ ಹೋಗಿ ಬುದ್ಧಭಗವಾನರ ಬಳಿಗೆ ಬಂದು ತನ್ನ ದುಃಖ ಸಂಗತಿ ತಿಳಿಸಿದಳು. ಬುದ್ಧಭಗವಾನರು ಆಕೆಗೆ ಮನೆಗೆ ಹೋಗಲು ಹಾಗು ಬೆಳಿಗ್ಗೆ ಬಂದು ಕಾಣಲೆಂದು ಹೇಳಿ ಸಮಾಧಾನಿಸಿ ಕಳುಹಿಸಿದರು.
ಮಧ್ಯರಾತ್ರಿಯಲ್ಲಿ ಮೈತ್ರಿಯ ಬಲದಿಂದ ಬುದ್ಧಭಗವಾನರು ಸೋಪಕನನ್ನು ಸ್ಮಶಾನದಲ್ಲಿ ಕಂಡರು. ಹಾಗು ಅಲ್ಲಿಗೆ ಹೋದರು. ಸೋಪಕನಿಗೆ ದಯಪ್ರಕಾಶ ಬುದ್ಧಭಗವಾನರು ಹತ್ತಿರ ಬರುತ್ತಿರುವುದು ಕಂಡನು. ಬುದ್ಧಭಗವಾನರು ಹೀಗೆ ತಮ್ಮ ಮೃದು ಸಹಾನುಭೂತಿಯ ಸ್ವರದಲ್ಲಿ ಹೇಳಿದರು ಮಗು ಸೋಪಕ ಹೆದರಬೇಡ, ನಾನು ನಿನ್ನನ್ನು ಕಾಪಾಡುತ್ತೇನೆ, ನಾನು ಬುದ್ಧ ನಿನ್ನ ಪೂಜ್ಯ ತಂದೆ.
ಬುದ್ಧಭಗವಾನರು ಕೊಳೆತು ವಾಸನೆ ಬೀರುತ್ತಿರುವ ಆ ಶವದ ಬಳಿಗೆ ಬಾಗಿದರು. ಸೋಪಕನನ್ನು ಆತನ ತಂದೆ ಕರುಳುನಿಂದ ಕಟ್ಟಿಹಾಕಿದ್ದರು. ಮಾಂಸವು ಮತ್ತು ಇತರ ಶರೀರದ ಗ್ರಂಥಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಭಗವಾನರು ಒಂದೊಂದು ಬಂಧನದಿಂದ ಬಿಡಿಸಿದರು. ಮೃದುವಾದ ವಾಣಿಯಿಂದ ಆ ಬಾಲಕನನ್ನು ಸಂತೈಸಿದರು.
ಮಗು ನಾನು ನಿನ್ನನ್ನು ಹುಡುಕಿಕೊಂಡು ಬಂದೆ, ನಿನಗೆ ಸಹಾಯ ಮಾಡಲು ಬಂದಿದ್ದೇನೆ. ನಾನು ನಿನಗೆ ಬೇಗನೆ ಸ್ವತಂತ್ರಗೊಳಿಸುತ್ತೇನೆ.
ನಂತರ ಬುದ್ಧಭಗವಾನರು ಸೋಪಕನನ್ನು ಹೊಳೆಯ ಬಳಿ ಕರೆದೊಯ್ದರು. ಅಲ್ಲಿ ಅತನಿಗೆ ಶುದ್ಧವಾದ ಜಲದಲ್ಲಿ ಸ್ನಾನ ಮಾಡಿಸಿದರು. ನಂತರ ಆತನಿಗೆ ವಿಹಾರದಲ್ಲಿ ಕರೆದುಕೊಂಡು ಹೋದರು. ಅಲ್ಲಿ ಆತನಿಗೆ ತಿನ್ನಲು ಆಹಾರ ಮತ್ತು ಉಡಲು ವಸ್ತ್ರಗಳನ್ನು ನೀಡಿದರು ಹಾಗು ಸಮಾಧಾನಗೊಳಿಸಿದರು.
ಆ ಬಾಲಕನು ಎಷ್ಟು ಬಳಲಿದ್ದನೆಂದರೆ ಆತನು ಗಾಢವಾದ ನಿದ್ದೆಯಲ್ಲಿ ಮುಳುಗಿದನು. ಬುದ್ಧಭಗವಾನರು ಆನಂದರವರನ್ನು ಕರೆದು ಆನಂದ, ನಾನು ಈ ಬಾಲಕನನ್ನು ರಕ್ಷಿಸಿದ್ದೇನೆ. ಈತನು ಸ್ಮಶಾನದಲ್ಲಿ ಶವಕ್ಕೆ ಕಟ್ಟಿಹಾಕಲ್ಪಟ್ಟಿದ್ದನು. ನಾನು ಈತನನ್ನು ಶುಚಿಗೊಳಿಸಿ ಇಲ್ಲಿ ಕರೆತಂದಿದ್ದೇನೆ. ನೋಡು ಆನಂದ, ಈತ ಎಂತಹ ಗಾಢ ನಿದ್ದೆಯಲ್ಲಿ ಮುಳುಗಿದ್ದಾನೆ. ಅತ್ಯಂತ ಪರಮಸುಖವನ್ನು ಮಾನವ ಗಳಿಸಬೇಕೆಂದು ಇದ್ದರೆ ಆತನು ಅನಾಥವಾಗಿರುವ ದೀನರನ್ನು ರಕ್ಷಿಸಿ ಸಹಾಯ ಮಾಡಿ ಅವರನ್ನು ಸುಖಗೊಳಿಸಬೇಕು. ಈಗ ಈತನನ್ನು ನಿನ್ನ ಕೋಣೆಗೆ ತೆಗೆದುಕೊಂಡು ಹೋಗು. ಆತನಿಗೆ ಯೋಗ್ಯ ಸ್ಥಳದಲ್ಲಿ ಹಾಸಿಗೆ ಹಾಕು.
ಮಾರನೆಯ ದಿನ ಬೆಳಿಗ್ಗೆ ಸೋಪಕನ ತಾಯಿಯು ಮತ್ತೆ ವಿಹಾರಕ್ಕೆ ಬಂದಳು. ಬುದ್ಧಭಗವಾನರು ಆಕೆಗೆ ಕರುಣೆಯಿಂದ ಇಂತೆಂದರು ಚಿಂತಿಸಬೇಡ ಸೋದರಿ, ನಿನ್ನ ಪುತ್ರನು ಕ್ಷೇಮವಾಗಿದ್ದಾನೆ, ಇಗೋ ಇಲ್ಲಿದ್ದಾನೆ.
ಆ ಮಾತೆಯು ತನ್ನ ಪುತ್ರನ ದರ್ಶನದಿಂದ ಆನಂದದಿಂದ ತುಂಬಿದಳು. ಆಕೆ ಭಗವಾನರಲ್ಲಿ ತನ್ನ ಪುತ್ರನು ವಿಹಾರದಲ್ಲಿಯೇ ಇರಿಸಿಕೊಳ್ಳಲು ಕೋರಿಕೊಂಡಳು. ಹಾಗು ತನ್ನ ಪುತ್ರ ಸಂಘಕ್ಕೆ ಸೇರಲು ಅನುಮತಿ ನೀಡಿದಳು.
No comments:
Post a Comment