Saturday, 21 April 2018

ಬುದ್ಧಭಗವಾನರು ಮತ್ತು ಪ್ರಾಣಿಗಳು

ಪ್ರಾಣಿಗಳು


ಬುದ್ಧಭಗವಾನರ ಮೈತ್ರಿ ಹಾಗು ಕರುಣೆಯು ಸಾರ್ವತ್ರೀಕವಾಗಿತ್ತು.  ಸರ್ವ ಜೀವಿಗಳಿಗೂ ಹಬ್ಬಿತ್ತು (ಪ್ರಸರಿಸಿತ್ತು). ಅವರ ಮಹಾ ಹೃದಯ ಕೇವಲ ಒಂದು ಪಂಗಡಕ್ಕೆ, ಒಂದು ದೇಶಕ್ಕೆ ಅಥವಾ ಒಂದು ಬಗೆಯ ವರ್ಗಕ್ಕೆ ಸಂಕುಚಿತವಾಗಿರಲಿಲ್ಲ.  ಅದು ಆಕಾಶದ ಹಾಗೆ ಅಸೀಮವಾಗಿ ಸರ್ವಜೀವಿಗಳಿಗೂ ಸಮಾನವಾಗಿ, ಅಗಾಧವಾಗಿ ಹರಡಿತ್ತು.  ಜೀವನದ  ಶುದ್ಧತೆಯನ್ನು ಪಂಚಶೀಲದಲ್ಲಿ ವ್ಯಕ್ತಪಡಿಸಿದ್ದಾರೆ.  ಪಂಚಶೀಲದಲ್ಲಿ ಮೊದಲನೆಯದೆ. ಅಹಿಂಸೆ (ಅಹತ್ಯೆ) ಅದರ ಹಿಂದೆಯೆ ಸರ್ವ ಧಾಮರ್ಿಕತೆಯು ಹಿಂಬಾಲಿಸುತ್ತದೆ ನಾನು ಸ್ವಯಿಚ್ಛೆಯಿಂದ ಜೀವಹತ್ಯೆ ಮಾಡುವುದನ್ನು ತ್ಯಜಿಸುವ (ಶಿಸ್ತನ್ನು) ನಿಯಮವನ್ನು ಪಾಲಿಸುತ್ತಾನೆ.
ಮುಂದೆ ಬರುವ ಘಟನೆಗಳು ಬುದ್ಧರ ಕರುಣೆಯು ಆ ಮನುಷ್ಯರ ಬಗೆಗೆ ಹೇಗಿತ್ತು ಎಂಬುದನ್ನು ತಿಳಿಸುತ್ತದೆ.

1. ಪ್ರಾಣಿ ಬಲಿ-

ಹಿಂದೆ ಭಾರತದಲ್ಲಿ ಜನರು ಯಜ್ಞಕ್ಕಾಗಿ (ದೇವರಿಗಾಗಿ) ಪ್ರಾಣಿಗಳನ್ನು ಕೊಂದು ಬಲಿ ಕೊಡುವುದು ಸಾಮಾನ್ಯವಾಗಿತ್ತು. ಹೀಗೆ ಮಾಡಿದರೆ ದೇವತೆಗಳು ಸಂತುಷ್ಟರಾಗುತ್ತಾರೆ ಎಂದು ಭಾವಿಸಲಾಗುತ್ತಿತ್ತು.  ಆಗ ಆದರೆ ದೇವರು ಅವರ ಪ್ರಾರ್ಥನೆಗಳಾದ ಐಶ್ವರ್ಯ ಅಥವಾ ಹೊಲಬೆಳೆಗಳಿಗೆ ಮಳೆ, ನೆರವೇರಿಸುವನು ಎಂದು ಭಾವಿಸಲಾಗುತ್ತಿತ್ತು.
ಬುದ್ಧಭಗವಾನರು ಎಲ್ಲೇ ಹೋಗಲಿ ಈ ವಿಷಯ ಬಂದಾಗ (ಕಾಲಸೂಚಕವಾಗಿ) ಪ್ರಾಣಿಬಲಿಯು ಕೆಟ್ಟದೆಂದು, ಇದು ಪಾಪಕೃತ್ಯವೆಂದು ಹೇಳುತ್ತಿದ್ದರು. ಕೆಲವು ವ್ಯಕ್ತಿಗಳು ಇದನ್ನು ಕೇಳಿ ಕುಪಿತರಾದರು. ಹಾಗು ಭಗವಾನರ ಹತ್ತಿರ ತಮ್ಮ ಕೋಪವನ್ನು ಮಾತಿನ ಮೂಲಕ ಹೀಗೆ ಹೇಳಿದರು. ನಮ್ಮ ಪವಿತ್ರ ಗ್ರಂಥಗಳು ದೇವರುಗಳಿಗಾಗಿ ಬಲಿ ಕೊಡುವುದು ಉಚಿತವೆಂದು ಹೇಳುತ್ತದೆ. ಇದಕ್ಕೆ ವಿರುದ್ಧವಾಗಿ ಹೇಳಲು ನಿಮಗೆಷ್ಟು ಧೈರ್ಯ? ಎಂದು ಅಬ್ಬರಿಸಿದರು.
ಬುದ್ಧಭಗವಾನರು ತಮ್ಮ ಪ್ರಜ್ಞಾಪ್ರದೀಪವನ್ನು ಹೀಗೆ ಪ್ರಕಾಶಿಸಿದರು: ನೀವು ನಿಮ್ಮ ಸುಖಕ್ಕಾಗಿ ಪರರನ್ನು ದುಃಖಿತರನ್ನಾಗಿ ಮಾಡುವುದು ಸರಿಯಲ್ಲ.  ಅದಕ್ಕಾಗಿ ನೀವು ಬಲಿ ಅಪರ್ಿಸಿದರೆ ನೀವು ಸ್ವಾಥರ್ಿಗಳಾಗುವಿರಿ (ಕ್ರೂರಿಗಳಾಗುವಿರಿ). ನಾನು ಬೋಧಿಸುವಂತೆ ಸ್ವಾಥರ್ಿ ವ್ಯಕ್ತಿಗೆ ದುಃಖದ ವಿನಃ ಜೀವನದಲ್ಲಿ ಬೇರೇನೂ ದೊರೆಯದು.
ಯಾವ ದೇವರಾದರೂ ತಾನು ಸಹಾಯ ಮಾಡುವುದಕ್ಕೆ ಮುಂಚೆ ಪ್ರಾಣಿಯೊಂದರ ರಕ್ತವನ್ನು ಬಯಸಿದರೆ ಅವನು ಕರುಣೆಯಿಲ್ಲದ ದೇವರಷ್ಟೆ.  ಆತನು ಪೂಜೆಗೆ (ಯಾರಿಂದಲೂ) ಅರ್ಹನಲ್ಲ.  ಆದರೆ ಬದಲಾಗಿ ನೀವು ಪ್ರತಿಯೊಂದು ಜೀವಿಯ ಬಗ್ಗೆ ಕರುಣೆಯಿಂದ ವತರ್ಿಸಿದರೆ ದೇವತೆಗಳೇ ನಿಮಗೆ ಪೂಜಿಸುತ್ತಾರೆ.
ಕೆಲವು ವ್ಯಕ್ತಿಗಳಿಗೆ ಇದರ ಸತ್ಯತೆ ಅರಿವಾಗಿ ತಮ್ಮ ಕೊಲ್ಲುವ (ಬಲಿಯ) ಸಂಪ್ರದಾಯವನ್ನು ತ್ಯಜಿಸಿದರು. ಈ ರೀತಿಯಾಗಿ ದುಃಖದ ಭಾರಿ ವ್ಯವಹಾರವೊಂದು ಕೊನೆಯಾಯಿತು.

2. ಪ್ರಾಣಿ ಬಲಿ-

ಒಂದು ಸಮಯದಲ್ಲಿ ಮಹಾ ಯಜ್ಞವೊಂದು ಕೋಸಾಧಿಪತಿ ರಾಜ ಪಸೇನದಿಯ ಸಮ್ಮುಖದಲ್ಲಿ ಸಿದ್ಧವಾಯಿತು. ಐದುನೂರು ಎತ್ತುಗಳು, ಐದುನೂರು ವೃಷಭಗಳು ಮತ್ತು ಇತರ ಪಡ್ಡೆಗಳು, ಕುರಿಗಳು ಮತ್ತು ಮೇಕೆಗಳು. ಅವುಗಳನ್ನು ಬಲಿಕೊಡುವ ಕಂಬದ ಬಳಿ ಕರೆದೊಯ್ಯ ಲಾರಂಭಿಸಿದರು ಮತ್ತು ಯಾರೂ ಗುಲಾಮರಾಗಿದ್ದರೊ ಮತ್ತು ಸೇವಕರು ಹೊಡೆತಗಳನ್ನು ನೀಡುತ್ತಾ ಶೋಕದಿಂದ ತುಂಬಿರುವ ಆ ಬಲಿಪಶುಗಳನ್ನು ಗಮನಿಸದೆ ತಮ್ಮ ಸಿದ್ಧತೆಗಳನ್ನು ಮುಂದುವರಿಸಿದರು.
ಬಹು ಭಿಕ್ಷುಗಳು ಬೆಳಿಗ್ಗೆ ಧ್ಯಾನ ಮುಂತಾದ ಕ್ರಿಯೆಗಳ ನಂತರ ವಸ್ತ್ರಗಳನ್ನು ಸಿದ್ಧಪಡಿಸಿ ಶ್ರಾವಸ್ತಿಯಲ್ಲಿ ಭಿಕ್ಷಾಟನೆಗೆ ಹೊರಟರು.  ನಂತರ ಶ್ರಾವಸ್ತಿಯಿಂದ ಹಿಂದಿರುಗುವಾಗ ಅವರುಗಳು ಭಗವಾನರಲ್ಲಿ ಒಂದು ಯಜ್ಞಗಳ ಸಿದ್ಧತೆಯ ಬಗ್ಗೆ ತಿಳಿಸಿದರು.
ಆಗ ತಥಾಗತರು ಈ ವಿಷಯದ ಮೂಲವನ್ನು ಅರಿತು ಈ ಗಾಥೆಗಳನ್ನು ನುಡಿದರು :
ಯಜ್ಞಗಳಿಂದ ಕುದುರೆಗಳು, ಮನುಷ್ಯರು ಸೇರುತ್ತಾರೆ, ಹಂದಿಗಳ ಬಿಸಾಟ ಸ್ಥಳವು ಏಪರ್ಾಡಾಗುತ್ತದೆ (ಏನೂ) ಜಯ ಸಾಧಿಸದ (ಹಾಗೆ) ಪಾನಿಯಗಳು ಸಿದ್ಧವಾಗುತ್ತದೆ. ಇಲ್ಲಿ ಅಗುಳಿಗಳು ತೆರೆದು ಹಾಕಲ್ಪಟ್ಟಿದೆ. (ಇಂದ್ರೀಯಗಳು ಸಡಿಲವಾಗಿವೆ). ಹಾಗು ಬಾರಿ ಸಂಭ್ರಮದ ಆಚರಣೆಗಳು ಸಿದ್ಧವಾಗಿದ್ದರೂ ಇಂತಹ ಆಚರಣೆಗಳ ಮೌಢ್ಯದಿಂದ ಯಾವ ಫಲ (ಸುಖ)ವು ಸಿಗಲಾರದು.
ಎಲ್ಲಿ ಮೇಕೆ ಮುಂತಾದವುಗಳನ್ನು ತಳ್ಳುತ್ತಿರುವವರೂ ಮತ್ತು ಕುರಿ-ಕರುಗಳನ್ನು ಸಿಗಿದು ಹಾಕುತ್ತಿರುವವರು, ಇಂತಹವನ್ನು ಶ್ರೇಷ್ಠ ಆರ್ಯರು ಮಾಡಿಸುವುದಿಲ್ಲ (ಮಾಡುವುದು ಇಲ್ಲ) ಏಕೆಂದರೆ ಅವರು ಪೂರ್ಣ ಹಾದಿಯಲ್ಲಿಹರು.
ಯಾವ ಆಚರಣೆಯಲ್ಲಿ ಗದ್ದಲವಿಲ್ಲವೊ, ಸಂಭ್ರಮದ ಗಲಿಬಿಲಿ ಯಿಲ್ಲವೋ ಅಲ್ಲಿ (ಸುಖಭೋಗದ ಬಯಕೆಗಳನ್ನು) ತ್ಯಜಿಸಿ (ಶಾಂತಿಗೆ ತಮ್ಮನ್ನು) ಅಪರ್ಿಸುವರೋ ಅಲ್ಲಿ ಅಮರವಾದ ಆಸ್ತಿ ದೊರೆಯುತ್ತದೆ. ಅಲ್ಲಿ ಮೇಕೆಗಳಾಗಲಿ, ಕರು, ಕುರಿಗಳೇ ಆಗಲಿ ಯಾವ ಜೀವಿಗಳೇ ಆಗಲಿ ಸಂಹರಿಸುವುದಿಲ್ಲವೋ ಅಂತಹ ಯಜ್ಞವನ್ನು ಪೂರ್ಣ ಹಾದಿಯಲ್ಲಿನ ಶ್ರೇಷ್ಠ ಆರ್ಯರು ಮಾಡಿಸುತ್ತಾರೆ.
ಇಂತಹ ಆಚರಣೆಗಳೆ ಶ್ರೇಷ್ಠ ಫಲವನ್ನು ನೀಡುವುದು. ಇವುಗಳಲ್ಲಿ ಮಗ್ನನಾಗಿರುವವನಿಗೆ ಧನ್ಯತೆಯು ದೊರಕುತ್ತದೆಯೇ ಹೊರತು ನಿಂದೆಯಲ್ಲ. ಇಂತಹ ಸುಕಾರ್ಯಗಳು ನಡೆಯುತ್ತಿದ್ದರೆ ದೇವತೆಗಳೂ ಸಂತುಷ್ಟರಾಗುವರು.

3. ಹಾವಿನ ಕಚ್ಚುವಿಕೆ 

ಒಮ್ಮೆ ಬುದ್ಧರು ಆಹಾರಕ್ಕಾಗಿ ಶ್ರಾವಸ್ತಿಯೆಡೆಗೆ ಹೊರಟರು. ಆಗ ಮಾರ್ಗವನ್ನು ದಾಟುತ್ತಿರುವಾಗ ಕೆಲವು ಯುವಕರು ಹಾವೊಂದನ್ನು ದೊಣ್ಣೆಗಳಿಂದ ಹೊಡೆಯುತ್ತಿದ್ದರು. ಆ ಯುವಕರಿಗೆ ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದಾಗ ಆ ಯುವಕರು ಈ ಹಾವು ಯಾರಿಗಾದರೂ ಕಚ್ಚುವುದೆಂಬ ಭಯದಿಂದ ಹೀಗೆ ಬಡಿಯುವೆವೆ ಎಂದು ಉತ್ತರಿಸಿದರು.
ಆಗ ಲೋಕಕಾರುಣಿಕ ಭಗವಾನರು ಹೀಗೆ ಬುದ್ಧಿವಾದ ನೀಡಿದರು: ನೀವು ಹಿಂಸೆಗೆ ಒಳಗಾಗಲು ಇಚ್ಛಿಸದಿದ್ದರೆ, ನೀವು ಸಹಾ ಪರರಿಗೆ ಹಿಂಸಿಸಬೇಡಿ, ನೀವು ಪರರಿಗೆ ಹಿಂಸಿಸಿದರೆ, ನೀವು ಭವಿಷ್ಯದಲ್ಲಿ ಸುಖವನ್ನು ಗಳಿಸಲಾರಿರಿ.
ಹಿಂಸೆಯ ಅಪಾಯವನ್ನು ಭಗವಾನರ ಮೂಲಕ ಅರಿತ, ಆ ಯುವಕರು ಇದನ್ನು ಗಂಭೀರವಾಗಿ ಅಥರ್ೈಸಿಕೊಂಡು ಸೋತಪನ್ನರಾದರು.

4. ಜಿಂಕೆಯನ್ನು ಸ್ವತಂತ್ರಗೊಳಿಸುವಿಕೆ 

ಒಂದುದಿನ ಬುದ್ಧಭಗವಾನರು ಕಾಡಿನಲ್ಲಿ ಸಂಚರಿಸುತ್ತಿರುವಾಗ ಒಂದು ಜಿಂಕೆಯು ಬಲೆಯಲ್ಲಿ ಸಿಕ್ಕಿಕೊಂಡು ಬಿಡುಗಡೆ ಪಡೆಯಲು ಒದ್ದಾಡುವುದನ್ನು ಗಮನಿಸಿದರು. ಕರುಣಾ ಸ್ವರೂಪರು ಆ ಜಿಂಕೆಗೆ ಬಲೆಯಿಂದ ಬಿಡಿಸಿ ಬಂಧನಮುಕ್ತ ಮಾಡಿದರು. ಆ ಜಿಂಕೆಯು ಅಲ್ಲಿಂದ ಸ್ವತಂತ್ರವಾಗಿ ಓಡಿಹೋಯಿತು. ನಂತರ ಭಗವಾನರು ಮರದ ಬಳಿಯಲ್ಲಿ ವಿಶ್ರಾಮಕ್ಕಾಗಿ ಕುಳಿತರು. ಆಗ ಬೇಟೆಗಾರನು ಬರುತ್ತಿದ್ದನು. ಅವನಿಗೆ ಜಿಂಕೆಯು ಸ್ವತಂತ್ರಗೊಂಡು ಓಡುತ್ತಿದ್ದಾಗ ಅದನ್ನು ಯಾರೋ ಬಿಡಿಸಿರಬೇಕೆಂದು ಅರಿವಾಯಿತು.
ಆಗ ಆತನು ಯಾರ ಕೆಲಸವಿದು ಎಂದು ಸುತ್ತಲೂ ಗಮನಿಸಿದಾಗ ಮರದ ಕೆಳಗೆ ಕುಳಿತಿರುವ ಕಾಷಾಯವಸ್ತ್ರಧಾರಿ ಮಹಾತೇಜಸ್ವಿ ಸಮಣರು ಕುಳಿತಿರುವುದು ಕಂಡಿತು. ಬೇಟೆಗಾರನು ಇದು ಇವರದೇ ಕಾರ್ಯ ಎಂದು ನಿಶ್ಚಯಿಸಿದನು.
ಇಂಥಹ ಪರಿಶುದ್ಧರು ಅಪಾರವಾಗಿಹೋಗುತ್ತಿದ್ದಾರೆ ಎಂದು ಕೋಪದಿಂದ ಹೇಳಿಕೊಂಡು ಇವರು ತಮ್ಮ ಧಾಮರ್ಿಕ ಮಾರ್ಗಗಳಿಂದ, ಪ್ರಮಾಣಿಕರ ವ್ಯವಹಾರಗಳನ್ನು ಹಾಳುಮಾಡುತ್ತಾರೆ. ಅಂತಹದಕ್ಕೆ ಕಾಯುತ್ತಿರುತ್ತಾರೆ ಎಂದು ಕ್ರೋಧದಿಂದ ತನ್ನ ಧನುಷ್ಯನ್ನು ಎತ್ತಿಕೊಂಡು ಬಾಣವನ್ನು ಭಗವಾನರೆಡೆಗೆ ಗುರಿಯಿಟ್ಟನು. ಆದರೆ ಶಾಂತಸ್ವರೂಪ ಬುದ್ಧರು ಹಾಗೆಯೆ ಸ್ಥಿರವಾಗಿ ಕುಳಿತಿದ್ದರು. ನಾನು ಈ ಭಿಕ್ಷುಗಳಲ್ಲಿ ಒಬ್ಬನನ್ನು ಕಡಿಮೆ ಮಾಡುತ್ತೇನೆ ಎಂದು ಬೇಟೆಗಾರನು ಗುರಿಯಿಟ್ಟನು. ಆದರೆ ಆತನ ಕೈ ಅದುರಿ ಗುರಿತಪ್ಪಿ ಬಾಣವು ಬೇರೆಡೆ ಹೋಯಿತು. ಆತನ ಜೀವಮಾನದಲ್ಲಿ ಆತನು ಗುರಿತಪ್ಪಿದ ಬಾಣವನ್ನು ಬಿಟ್ಟಿರಲಿಲ್ಲ. ಆಗ ಮತ್ತಷ್ಟು ಉಗ್ರನಾಗಿ ಮತ್ತೆ ಗುರಿಯಿಟ್ಟು ಬಾಣ ಬಿಟ್ಟನು. ಅದು ಭಗವಾನರ ಪಕ್ಕಕ್ಕೆ ಹೋಯಿತೆ ವಿನಃ ಗುರಿ ತಲುಪಲಿಲ್ಲ. ನಂತರ ಮತ್ತೊಂದುಬಾರಿ ಪ್ರಯತ್ನಿಸಿ ವಿಫಲನಾದನು. ಆತನಿಗೆ ಆಶ್ಚರ್ಯವಾಯಿತು. ಆತನು ಶ್ರೇಷ್ಠ ಗುರಿಕಾರನಾಗಿಯು ಈ ವ್ಯಕ್ತಿಯ ಕಡೆ ಪ್ರಯತ್ನಿಸಿ ವಿಫಲನಾಗಿದ್ದಾನೆ. ಈಗ ಆತನಲ್ಲಿ ಭೀತಿಯು ಹುಟ್ಟಿ ಭಯಗೊಂಡನು, ಅಧೈರ್ಯಗೊಂಡು ಬಿಲ್ಲು ಬಾಣಗಳನ್ನು ಕೈಯಿಂದ ಬಿಟ್ಟುಬಿಟ್ಟನು. ನಂತರ ವಿನಮ್ರನಾಗಿ ಬುದ್ಧಭಗವಾನರ ಬಳಿ ಹೋಗಿ ಅವರು ಯಾರೆಂದು ಕೇಳಿಕೊಂಡರು.
ಆಗ ವಿಜ್ಞಾಚರಣ ಸಂಪನ್ನರು ಆತನಿಗೆ ಹೇಳಿ, ಮತ್ತೆ ಗಂಭೀರ ಮಧುರತೆಯಿಂದ ಹಿಂಸೆಹತ್ಯೆಯ ದುಷ್ಪರಿಣಾಮಗಳನ್ನು ಹೇಳಿದರು. ಜೀವವನ್ನು ಸುಲಭವಾಗಿ ತೆಗೆಯಬಹುದು, ಆದರೆ ಪ್ರಾಣವನ್ನು ನೀಡಲು ಅಸಾಧ್ಯವೆಂದು ತಿಳಿಸಿ, ಅದರಿಂದ ಉಂಟಾಗುವ ಪಾಪ ಫಲಗಳನ್ನು ಹೇಳಿದರು. ಆ ಬೇಟೆಗಾರನು ಭಗವಾನರನ್ನು ಹಾಗು ಅವರ ಸತ್ವಭರಿತ ವಾಣಿಯನ್ನು ಆಲಿಸಿದನು. ಜೀವಹತ್ಯೆಯನ್ನಾಗಲಿ, ಹಿಂಸೆಯನ್ನಾಗಲಿ ಮಾಡಲಾರೆ ಎಂದು ಸತ್ಯವಚನಗೈದನು.

No comments:

Post a Comment