Wednesday 11 December 2019

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ

ಡಿಸೆಂಬರ್ ತಿಂಗಳ ಹುಣ್ಣಿಮೆಯ ವಿಶೇಷ



  ಇದು ಈ ವರ್ಷದಲ್ಲಿ(2019) 11 &12  ದಿನಾಂಕದಲ್ಲಿ ಬರುತ್ತದೆ ಈ ದಿನದಂದು ಬೇರೆ ದೇಶಗಳ ಬೌದ್ಧರಿಗಿಂತ ಶ್ರೀಲಂಕದ ಬೌದ್ಧರಿಗೆ ಅತ್ಯಂತ ಪ್ರಾಶಸ್ತ್ಯವಾದುದು. ಏಕೆಂದರೆ ಈ ದಿನದಂದು ಸುಮಾರು 2562 ವರ್ಷಗಳ ಹಿಂದೆ ಪವಿತ್ರವಾದ ಜಯಸಿರಿ ಮಹಾಬೋಧಿ ವೃಕ್ಷದ ಗಿಡವನ್ನು ಬೋಧ್ ಗಯಾದಿಂದ ಶ್ರೀಲಂಕದ ಅನುರಾಧಪುರಕ್ಕೆ ತರಲಾಯಿತು. ಆಗ ಅಲ್ಲಿ ದೇವನಾಂಪಿಯ ತಿಸ್ಸರವರು ಆಳ್ವಿಕೆಯನ್ನು ಮಾಡುತ್ತಿದ್ದರು.(ಕಿ.ಪೂ. 250-210)..

ಸಾಮ್ರಾಟ್ ಅಶೋಕರ ಪುತ್ರರಾದ ಮಹಿಂದರವರು(ಮಹೇಂದ್ರ) ಆ ಸಮಯದಲ್ಲಿ ಶ್ರೀಲಂಕಕ್ಕೆ ಬುಧ್ಧಧಮ್ಮವನ್ನು ತಂದರು. ಹಾಗೇಯೆ ಅವರ ತಂಗಿಯಾದ ಸಂಘಮಿತ್ರೆಯು ತನ್ನ 18ನೇ ವಯಸ್ಸಿನಲ್ಲಿಯೇ ಭಿಕ್ಖುಣಿಯಾಗಿದ್ದಳು. ಆಕೆಯು ಬೋಧಿ ವೃಕ್ಷವನ್ನು ಹೊತ್ತುಕೊಂಡು ಶ್ರೀಲಂಕದ ಅನುರಾಧಪುರದಲ್ಲಿ ಬಂದಿಳಿದ ದಿನವು ಇಂದೇ ಆಗಿತ್ತು. ಶ್ರೀಲಂಕದ ಭಿಕ್ಖುಣಿ ಶಾಸನದ ಸ್ಥಾಪನಕರ್ತೆ ಆಕೆಯೇ ಆಗಿದ್ಧಳು.

ಈ ಆಣ್ಣ.ಹಾಗೂ ತಂಗಿಯು ಶ್ರೀಲಂಕ ಬುಧ್ಧಧಮ್ಮಕ್ಕೆ ಸ್ಥಾಪನಾಕರ್ತರೂ ಅಷ್ಟೇ  ಅಲ್ಲದೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಇತ್ಯಾದಿಗಳ ಕ್ರಾಂತಿಗೂ ಅವರೇ ಕಾರಣಕರ್ತರಾಗಿದ್ದಾರೆ. ಅವರಿಗೆ ಸಿಂಹಳಿಯರೂ ಸದಾ ಚಿರಋಣಿ ಎಂದು ಭಾವಿಸುತ್ತಾರೆ.

ಮಹಾನ್ ತೇಜಸ್ವಿಯು ಪರಮ ಸಾಧ್ವಿಯು ಆಗಿದ್ದಂತಹ ಪರಮಪೂಜ್ಯ ಸಂಘಮಿತ್ರೆಗೆ ಪಾಟಲಿಪುತ್ರಕ್ಕೆ ಆಗಮಿಸಿದ್ದಂತಹ ದೇವನಾಂಪಿಯ ತಿಸ್ಸರು ಸಂಘಮಿತ್ರೆಗೆ ಶ್ರೀಲಂಕಕ್ಕೆ ಬರಲು ಆಹ್ವಾನ ನೀಡಿದರು. ಏಕೆಂದರೇ ಮಹಾರಾಣಿಯಾಗಿದ್ದಂತಹ ಅನುಲ ಹಾಗೂ ಆಕೆಯ ಸಖಿಯರು ಭಿಕ್ಖುಣಿಯಾಗಲು ಬಯಸಿದ್ದರು. ಹೀಗಾಗಿ ಸಿಂಹಳ ರಾಜನಾದ ದೇವಾಂಪಿಯ ತಿಸ್ಸರು ಆಕೆಯನ್ನು ಕರೆ ತರಲು ವಿದೇಶಾಂಗ ಮಂತ್ರಿಯಾದ ಅರಿಟ್ಟರವರನ್ನು ಕಳುಹಿಸಿದ್ದನು.

  ಪಾಟಲಿಪುತ್ರದಿಂದ ಸಿಂಹಳಕ್ಕೆ ಸಮುದ್ರ ಯಾನದಲ್ಲಿ ಬರಲು 7 ದಿನಗಳು ಹಿಡಿಯಿತು‌. ಆಕೆಯೊಂದಿಗೆ 11 ಭಿಕ್ಖುಣಿಯರು ಆಕೆಯ ಜೋತೆಗೆ ಇದ್ದರು.ಆಕೆಯು ಶ್ರೀಲಂಕದ ಉತ್ತರದಲ್ಲಿರುವ ಜಂಬುಕೊಳೆ ಬಂದರಿನಲ್ಲಿ ಇಳಿದಳು. ಆಕೆಯು ಅಲ್ಲಿಗೆ ತಂದಂತಹ ಮಹಾ ಉಡೂಗೊರೆ ಎಂದರೇ ಮಹಾಬೋಧಿ ವೃಕ್ಷದ ಸಸಿಯಾಗಿತ್ತು. ಅಲ್ಲಿ ಅವರು ಅದನ್ನು ಜಯಸಿರಿ ಮಹಾಬೋಧಿ ಎಂದು ಕರೆಯುತ್ತಾರೆ. ಅಲ್ಲಿನ ರಾಜನಾದ ತಿಸ್ಸರೂ ಅತಿ ಗೌರವ ಭಕ್ತಿಯಿಂದ ಅದನ್ನು ನೆಟ್ಟರು. ಅಂದಿನಿಂದ ಇಂದಿನವರೆವಿಗೂ ಅದನ್ನು ಜೀವಂತ ಭಗವಾನ್ ಬುಧ್ಧರಿಗೆ ಗೌರವಿಸುವಂತೆ ಗೌರವಿಸುತ್ತಾರೆ ಹಾಗೂ ಪೂಜಿಸುತ್ತಾರೆ.

ನಂತರ ಮೂದಲು ಅಲ್ಲಿ ಮಹಾರಾಣಿ ಅನುಲರವರು ಭಿಕ್ಖುಣಿಯಾಗುತ್ತಾರೆ. ನಂತರ ಸಾವಿರಾರು ಸ್ತ್ರೀಯರು ಸಂಘವನ್ನು ಪ್ರವೇಶಿಸಿದರು.

   ಹೀಗಾಗಿ ಸಿಂಹಳಿಯರಿಗೆ ಈ ಹುಣ್ಣಿಮೆಯು ಪರಮ ಪವಿತ್ರವಾದುದು.ಈ ದಿನದಂದು ಸಿಃಹಳಿಯರು ಪಂಚಶೀಲ, ಅಷ್ಟಾಂಗ ಶೀಲ, ದಾನ, ಧ್ಯಾನ, ತಿರತನ ಪೂಜೆ ಇತ್ಯಾದಿಗಳ ಆಚರಣೆ ಇರುತ್ತದೆ.ಹಾಗೂ ವಿಶೇಷವಾಗಿ ಬೋಧಿವೃಕ್ಷದ ಪೂಜೆಯು ಇರುತ್ತದೆ.

ಹಾಗೇಯೆ ಸಿಂಹಳ ದೇವನಾದ ಸುಮನ ಸಮನರ ಕೋರಿಕೆಯಂತೆ ಬುಧ್ಧಭಗವಾನರು ಶ್ರೀಲಂಕಕ್ಕೆ ಭೇಟಿ ನೀಡಿದ್ದರು ಹಾಗೂ ಅವರ ಪಾದದ ಚಿನ್ಹೆಯನ್ನು ನಾವು ಶ್ರೀಲಂಕದ ಸಿರಿಪಾದ ಪರ್ವತದಲ್ಲಿ ಕಾಣಬಹುದು.

No comments:

Post a Comment