Friday 15 August 2014

the enemies of giving


ದಾನಕ್ಕೆ ಶತ್ರುಗಳು


ದಾನಕ್ಕೆ ಶತ್ರುಗಳು ಯಾರು ?
ದಾನಕ್ಕೆ ಶತ್ರುಗಳೇ ?!
ದಾವು ನಮ್ಮ ಮನಸ್ಸಿನಲ್ಲಿರುವ ಒಂದು ಗುಣವಾಗಿದೆ. ಅಂದರೆ ಚೇತಸಿಕಾವಾಗಿದೆ. ಅಲೋಭ ಚೇತಸಿಕಾವನ್ನು ದಾನವಾಗಿಯು ಮತ್ತು ವಿರಾಗ (ವೈರಾಗ್ಯ)ವಾಗಿಯು ವಿಂಗಡಿಸುತ್ತಾರೆ. ಹೇಗೆ ಕಮಲದ ದಳದಲ್ಲಿ ನೀರು ನಿಲ್ಲಲಾರದೋ, ಅಂಟಲಾರದೋ ಅದೇರೀತಿಯಲ್ಲಿ ಇಂದ್ರಿಯ ವಿಷಯಗಳಲ್ಲಿ ಅಂಟದಿರುವಿಕೆಯೇ ಅಲೋಭದ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಇಂದ್ರಿಯ ವಿಷಯದಲ್ಲಿ ಅಂಟದಿರುವಿಕೆ. ಇದು ಅಂಟದೆ ಇರುವುದರಿಂದಾಗಿ ವ್ಯಕ್ತವಾಗುತ್ತದೆ. ಆದರೆ ಅಲೋಭವನ್ನು ನಾವು ಕೇವಲ ಲೋಭ ಅಭಾವ (ರಾಹಿತ್ಯತೆ) ಎಂದಷ್ಟೇ ಅರ್ಥಮಾಡಿಕೊಳ್ಳಬಾರದು. ಅದು ದಾನವಾಗಿಯೂ ಪರಿವತರ್ಿತವಾಗುತ್ತದೆ. ಹಾಗು ವಿರಾಗವಾಗಿಯು ವಿಕಾಸಿಸುತ್ತದೆ. ಆದರೆ ದಾನದ ಲಕ್ಷಣವೇನೆಂದರೆ ತ್ಯಾಗ ಮಾಡುವಿಕೆ. ದಾನದ ಕ್ರಿಯೆಯೇನೆಂದರೆ ಲೋಭವನ್ನು ದೂರೀಕರಿಸುವುದು. ಇದು ವಿರಾಗದಿಂದ (ಅಂಟದೆ ಇರುವುದರಿಂದಾಗಿ) ಸ್ಥಾಪನೆಯಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ವಸ್ತುಗಳ ಇರುವಿಕೆ ಮತ್ತು ಅಂತಹ ಸನ್ನಿವೇಶ. ಆದರೆ ಮೂಲಕಾರಣ ಕರುಣೆಯಾಗಿದೆ. ದಾನ ಅಥವಾ ಅಲೋಭವು ಮೂರು ಕುಶಲ ಮೂಲಗಳಲ್ಲಿ ಒಂದಾಗಿದೆ. ಈ ದಾನಕ್ಕೆ ಶತ್ರುಗಳೆಂದರೆ : ಲೋಭ, ದ್ವೇಷ, ಭಯ, ಮಿಥ್ಯದಿಟ್ಟಿ ಮತ್ತು ಮೋಹವಾಗಿದೆ.
ಲೋಭ: ಲೋಭವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದು ಎಲ್ಲಾ ಸ್ವಾರ್ಥ ಬಯಕೆಗಳ, ತೀವ್ರ ಲಾಲಸೆಗಳ, ಅಂಟುವಿಕೆಗಳ, ಅಹಂಕಾರಗಳ ಮೂಲವಾಗಿದೆ. ಇಂದ್ರಿಯ ವಿಷಯಗಳಲ್ಲಿ ಅಂಟುವಿಕೆಯೇ ಇದರ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಪ್ರಬಲವಾಗಿ ಅಂಟುವಿಕೆಯಾಗಿದೆ. ಅಂಟಿರುವುದನ್ನು ತೊರೆಯದಿರುವಿಕೆಯಿಂದ ಇದು ವ್ಯಕ್ತವಾಗುತ್ತದೆ. ಇವುಗಳ ತತ್ಕ್ಷಣದ ಕಾರಣವೇನೆಂದರೆ ಇಂದ್ರಿಯ ವಿಷಯಗಳ ಸಾಮೀಪ್ಯವಾಗಿದೆ. ಮೂಲಕಾರಣ ಅಜ್ಞಾನವಾಗಿದೆ.
ಲೋಭವು ಮಿಥ್ಯಾದೃಷ್ಟಿಯಿಂದ ಕೂಡಿದಾಗ ಅಹಂಕಾರವು ಜನಿಸುವುದು. ಅಹಂಕಾರದಿಂದಾಗಿ ಮಿಥ್ಯಾ ಸ್ವಪ್ರತಿಷ್ಠೆ ಸ್ಥಾಪಿತವಾಗುತ್ತದೆ. ಆಗ ತನ್ನ ಹೊರತು ಪರರ ಬಗ್ಗೆ ಮನಸ್ಸು ಚಿಂತಿಸಲಾರದು. ಇದರಿಂದಾಗಿ ಸ್ವಾರ್ಥವು ಉಂಟಾಗುತ್ತದೆ. ಮನಸ್ಸು ತನ್ನದು ಎಂಬ ವಿಕಾರದಿಂದ ಉದ್ರೇಕಗೊಳ್ಳುತ್ತದೆ. ಹೀಗಾಗಿ ತಾನು ತನ್ನದನ್ನು ಪರರಲ್ಲಿ ಹಂಚಲು ಮನಸ್ಸು ಸಿದ್ಧವಾಗದು. ಹೀಗಾಗಿ ಹಂಚುವುದರಿಂದ ಮನಸ್ಸು ವಿಮುಖವಾಗುವುದು. ನಂತರ ಕೇವಲ ತನ್ನ ಹಾಗು ತನ್ನದರ (ನನ್ನದು) ಹೊರತಾಗಿ ಪರರ ಬಗ್ಗೆ ಯೋಚಿಸದು.
ಈ ರೀತಿಯಾಗಿ ಅಹಂಕಾರಿಯು ಕೇವಲ ತನ್ನ ಬಗ್ಗೆ ಯೋಚಿಸುತ್ತಾನೆ, ಪರರ ಬಗ್ಗೆಯಲ್ಲ. ಅದೇರೀತಿಯಲ್ಲಿ ಸ್ವಾಥರ್ಿಯು ತನ್ನದರ ಬಗ್ಗೆ ಮಾತ್ರ ಯೋಚಿಸುತ್ತಾನೆ. ಪರರ ಬಗ್ಗೆಯಲ್ಲ, ಅನಿತ್ಯದ ಚಿಂತನೆಯ ಅಭಾವದಿಂದಾಗಿ ಪಂಚಖಂದಗಳಲ್ಲಿ ದೇಹ ಮತ್ತು ಮನಸ್ಸು ಒಂದನ್ನು ಅಥವಾ ಎಲ್ಲವನ್ನೂ ತಾನು (ನಾನು) ಎಂದು ಭಾವಿಸುತ್ತಾನೆ. ಹಾಗೆಯೇ ಪಂಚಖಂದಗಳನ್ನು ತನ್ನದು ಎಂದು ಭಾವಿಸುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯ ಗೋಚರ ಜಗತ್ತಿನ ಸರ್ವವನ್ನು ತನ್ನದು ಎಂದು ಭ್ರಮಿಸುತ್ತಾನೆ. ನನ್ನ ಪತ್ನಿ, ನನ್ನ ಮಕ್ಕಳು, ನನ್ನ ಐಶ್ವರ್ಯ, ನನ್ನ ರಾಜ್ಯ, ನನ್ನ ಭಾಷೆ, ನನ್ನ ಜನಾಂಗ, ನನ್ನ ಧರ್ಮ, ನನ್ನ ದೇಶ, ಇತ್ಯಾದಿ ಎಂದೆಲ್ಲಾ ಭ್ರಮಿಸಿ ಅಂಟುತ್ತಲೇ ಹೋಗುತ್ತಾನೆ. ಈ ರೀತಿಯಲ್ಲಿ ತಾನು ಮತ್ತು ತನ್ನದು ಎಂಬ ಸೀಮಿತ ಬುದ್ಧಿಯಲ್ಲಿ ಸಿಲುಕಿ ಆತನು ಅಲೋಭದ ಬಗ್ಗೆಯಾಗಲಿ, ವಿರಾಗದ ಬಗ್ಗೆಯಾಗಲಿ ಅಥವಾ ದಾನದ ಬಗ್ಗೆಯಾಗಲಿ ಚಿಂತಿಸಲಾರ. ಪರರ ಬಗ್ಗೆ ಕಾಳಜಿ ಹೊಂದಲಾರನು. ಈ ರೀತಿಯಲ್ಲಿ ಅಹಂಕಾರ (ನಾನು) ಮತ್ತು ಸ್ವಾರ್ಥ (ನನ್ನದು) ಇವೆರಡು ಲೋಭದ ಕೂಸುಗಳಾಗಿವೆ. ಹಾಗು ದಾನಕ್ಕೆ ಶತ್ರುಗಳಾಗಿವೆ. ಇವು ಇರುವವರೆಗೂ ಮನಸ್ಸು ತ್ಯಾಗದ ಬಗ್ಗೆ ಯೋಚಿಸಲಾರದು, ಅಂಟದೆ ಹೋಗದು, ವಿರಾಗ ಸ್ಥಾಪನೆಯಾಗದು, ಕರುಣೆಗೆ ಬೆಲೆಯು ಇರದು.
ದ್ವೇಷ : ಅದೇರೀತಿಯಲ್ಲಿ ದ್ವೇಷವೂ ಸಹಾ ದಾನದ ಶತ್ರುವಾಗಿದೆ. ಹೇಗೆಂದರೆ  ದ್ವೇಷವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದರಿಂದಲೇ ಎಲ್ಲಾಬಗೆಯ ಕೋಪ, ಕ್ರೋಧ, ಅಸಹನೆ, ಬೇಸರ, ಅಸಹ್ಯತೆ, ಕ್ರೂರತೆ, ಅಸೂಯೆ, ಸೇಡು ಇತ್ಯಾದಿಗಳು ಜನಿಸುವುವು. ದ್ವೇಷದ ಲಕ್ಷಣವೇನೆಂದರೆ ಕ್ರೂರತೆ, ಇದರ ಕ್ರಿಯೆ ಏನೆಂದರೆ ಆಧಾರವಾಗಿರುವುದನ್ನು ಸಹಾ ಸುಡುತ್ತಾ ಹೋಗುವುದು. ಅಂದರೆ ದೇಹ ಮನಸ್ಸಿನ ಸ್ವಸ್ತಿಯನ್ನೇ ಹಾಳುಮಾಡುವುದು. ಹಿಂಸಿಸುವುದರಿಂದಾಗಿ ಇದು ವ್ಯಕ್ತವಾಗುವುದು. ಇದಕ್ಕೆ ತತ್ಕ್ಷಣದ ಕಾರಣವೇನೆಂದರೆ ಅಸಹನೀಯ ಸನ್ನಿವೇಶ ಅಥವಾ ವ್ಯಕ್ತಿಗಳು. ಮೂಲಕಾರಣ ಅಜ್ಞಾನವಾಗಿದೆ. ಹೀಗಾಗಿ ಯಾವ ಮನಸ್ಸು ಪರರನ್ನು ದ್ವೇಷಿಸುವುದೋ ಅದು ಅವರ ಕಲ್ಯಾಣವನ್ನು ಬಯಸದು. ಅವರಿಗಾಗಿ ತ್ಯಾಗ ಮಾಡಲು ಸಿದ್ಧವಾಗದು. ಹೀಗಾಗಿ ದ್ವೇಷವು ದಾನದ ಶತ್ರುವಾಗಿದೆ.
ಭಯ : ಪರರಿಗೆ ಹಿತಮಾಡುವಾಗ, ಅನ್ಯ ವ್ಯಕ್ತಿಗಳು ಏನೆಂದು ಭಾವಿಸುವರೋ, ಏನೆಂದು ಹೇಳುವರೋ ಅಥವಾ ತನಗೆ ಅಡ್ಡಿ ಎಲ್ಲಿ ಮಾಡಿಬಿಡುವರೋ ಎಂಬ ಭಯದಿಂದ ದಾನಿಯು ಪರರಿಗೆ ದಾನ ಅಥವಾ ಸಹಾಯ ಮಾಡದೆ ಹೋಗುತ್ತಾನೆ. ಅಥವಾ ಪರರಿಗೆ ದಾನ ಮಾಡುವಾಗ ತನ್ನದೆನ್ನುವ ಐಶ್ವರ್ಯ ಎಲ್ಲಿ ಕ್ಷೀಣಿಸಿಹೋಗುವುದೋ ಅಥವಾ ತನ್ನವರು ತನ್ನಿಂದ ಎಲ್ಲಿ ದೂರ ಹೋಗಿಬಿಡುವರೋ ಅಥವಾ ತನ್ನ ದೇಹಕ್ಕೆ ಎಲ್ಲಿ ಅಪಾಯವಾಗಿ ಹೋಗುವುದೋ ಎಂದು ಭೀತಿಪಟ್ಟು ದಾನಿಯು ಪೂರ್ಣವಾಗಿ ವಿಕಸಿತನಾಗದೆ ದಾನ ಅಥವಾ ಸಹಾಯದಿಂದಾಗಿ ಹಿಂಜರಿಯುತ್ತಾನೆ. ಅದಕ್ಕೆ ಕಾರಣ ಸಂಕೋಚ ಮತ್ತು ಭಯವೇ ಆಗಿದೆ.
ಮಿಥ್ಯಾದೃಷ್ಟಿ: ದಾನಕ್ಕೆ ಅತ್ಯಂತ ದೊಡ್ಡ ಶತ್ರುವೆಂದರೆ ಮಿಥ್ಯಾದೃಷ್ಟಿಗಳೇ ಆಗಿದೆ. ಆ ಮಿಥ್ಯಾದೃಷ್ಟಿಗಾವುವು ಎಂದರೆ:
1. ಕರ್ಮಫಲವೇ ಇಲ್ಲ, ಆದ್ದರಿಂದಾಗಿ ದಾನಕ್ಕಾಗಲಿ ಅಥವಾ ಪಾಪಕ್ಕಾಗಲಿ ಫಲವೇ ಇಲ್ಲ ಎನ್ನುವ ಅಕ್ರಿಯಾ ಮಿಥ್ಯಾದೃಷ್ಟಿ.
2. ಸುಖ-ದುಃಖಗಳಿಗಾಗಲಿ ಅಥವಾ ಜೀವಿಗಳ ಹುಟ್ಟುಸಾವುಗಳಿಗಾಗಲಿ ಅಥವಾ ಪರಿಶುದ್ಧತೆ-ಕಲುಶತೆಗಾಗಲಿ ಅಥವಾ ಉನ್ನತಿ ಅವನತಿಗಾಗಲಿ ಕಾರಣಗಳೇ ಇಲ್ಲ ಎನ್ನುವ ಅಹೇತು ಮಿಥ್ಯಾದೃಷ್ಟಿ.
3. ಪಾಪ ಪುಣ್ಯಗಳಿಗೆ ಫಲವೇ ಇಲ್ಲ. ಪರಲೋಕವೂ ಇಲ್ಲ, ಪೂರ್ವಜನ್ಮವಿಲ್ಲ, ಹಾಗೆಯೇ ಪುನರ್ಜನ್ಮವಿಲ್ಲ, ಸಾವೇ ಮಾನವನ ಮೋಕ್ಷ ಎನ್ನುವ ನಾಸ್ತಿಕ ಮಿಥ್ಯಾದೃಷ್ಟಿ.
4. ದೇವರೇ ಎಲ್ಲದಕ್ಕೂ ಕಾರಣ. ಆತನ ಪೂಜೆಯೇ ಪರಿಹಾರ ಮಾರ್ಗ ಎಂಬ ಇಸ್ಸರ ನಿಮರ್ಾಣ ಹೇತು ಮಿಥ್ಯಾದೃಷ್ಟಿ.
5. ಹಿಂದಿನ ಜನ್ಮದಿಂದಲೇ ಸುಖ-ದುಃಖ ಪ್ರಾಪ್ತಿ ಆದ್ದರಿಂದಾಗಿ ಈಗಿನ ದಾನದಿಂದ ಪ್ರಯೋಜನವಿಲ್ಲ ಎಂಬ ಪುಟ್ಟಕಥಾ ಹೇತು ಮಿಥ್ಯಾದೃಷ್ಟಿ.
6. ಆತ್ಮವು ಸ್ವಯಂ ಪರಿಶುದ್ಧ ಹಾಗು ಪರಿಪೂರ್ಣವಾಗಿರುವುದರಿಂದ ದಾನದ ಅಗತ್ಯವಿಲ್ಲ ಎಂಬ ಶಾಶ್ವತ ಮಿಥ್ಯಾದೃಷ್ಟಿ.
7. ಸಾವೇ ಜೀವನದ ಕೊನೆ, ಆದ್ದರಿಂದ ದಾನದಿಂದ ಪ್ರಯೋಜನವಿಲ್ಲ. ಆದ್ದರಿಂದ ಇರುವಷ್ಟು ದಿನ ಸಾಲ ಮಾಡಿಯಾದರೂ ಸುಖವಾಗಿರಬೇಕು ಎಂಬ ಉಚ್ಛೇದ ಮಿಥ್ಯಾದೃಷ್ಟಿ.
ಈ ಎಲ್ಲಾ ಮಿಥ್ಯಾದೃಷ್ಟಿಯಿಂದ ಯಾರೂ ದಾನಿಗಳಾಗುವುದಿಲ್ಲ. ಬದಲಾಗಿ ಸ್ವಾಥರ್ಿಗಳಾಗುತ್ತಾರೆ. ಹಾಗು ಸೇವೆಗೆ ಅಲಕ್ಷಿಸುತ್ತಾರೆ.
ಮೋಹ : ಮೋಹವು ಸಹಾ ಅಕುಶಲ ಮೂಲಗಳಲ್ಲಿ ಒಂದಾಗಿದೆ. ಮೋಹವು ಅವಿದ್ಯೆ ಅಥವಾ ಅಜ್ಞಾನದ ಸಮಾನಾರ್ಥಕ ಪದವಾಗಿದೆ. ಇದರ ಲಕ್ಷಣವೇನೆಂದರೆ ಮನಸ್ಸನ್ನೇ ಅಂಧನನ್ನಾಗಿಸುವುದು ಅಥವಾ ಜ್ಞಾನವನ್ನು ಅರಿಯದಿರುವುದು. ವಿಷಯಗಳ ನೈಜ್ಯತೆಯನ್ನು ಕುಶಾಗ್ರತೆಯ ಬುದ್ಧಿಯಿಂದ ಅರಿಯಲಾರನು. ವಿಮೋಚನೆರಹಿತ ನಾಗಿರುತ್ತಾನೆ. ಇದು ಸಮ್ಯಕ್ ದೃಷ್ಟಿಕೋನದ ಅಭಾವದಿಂದ ವ್ಯಕ್ತವಾಗುತ್ತದೆ ಅಥವಾ ಮಾನಸಿಕ ಅಂಧಕಾರದಿಂದ ವ್ಯಕ್ತವಾಗುತ್ತದೆ. ಈ ಮೋಹವು ಅಯೋಗ್ಯ ಗಮನಿಸುವಿಕೆಯಿಂದಾಗಿ ಆರಂಭವಾಗುತ್ತದೆ. ಹಾಗು ಇದೇ ಎಲ್ಲಾ ಅಕುಶಲ ಮೂಲಗಳ ಮೂಲ ಬೇರಾಗಿದೆ.
8.2 ಮೂರ್ಖರು ದಾನದಲ್ಲಿ ಆನಂದಿಸಲಾರರು
ಒಮ್ಮೆ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ವಿಜೃಂಭಣೆಯಿಂದ ದಾನ ಮಾಡಿದನು. ಆದರೆ ಅದಕ್ಕೆ ಪ್ರತಿದ್ವಂದಿ ಸ್ಪಧರ್ಿ ಎಂಬಂತೆ ರಾಜನ ಅಧೀನದಲ್ಲಿರುವವನೊಬ್ಬ ಅದಕ್ಕಿಂತಲೂ ಚೆನ್ನಾಗಿ ದಾನವನ್ನು ಏರ್ಪಡಿಸಿದನು. ಇದರಿಂದಾಗಿ ರಾಜನಿಗೆ ಪಶ್ಚಾತ್ತಾಪವುಂಟಾಯಿತು. ಆದರೆ ರಾಣಿ ಮಲ್ಲಿಕಾಳು ಇದಕ್ಕಾಗಿ ಉಪಾಯವೊಂದನ್ನು ರಾಜನಿಗೆ ಹೇಳಿದಳು. ಅದರಂತೆಯೇ ರಾಜನು ಈ ಬಾರಿ ಸರಿಸಾಟಿಯಿಲ್ಲದ ದಾನಕ್ಕೆ ಏಪರ್ಾಟು ಮಾಡಿದನು. ಅದಕ್ಕಾಗಿ ಬೃಹತ್ತಾದ ಗುಡಾರವನ್ನು ಹಾಕಿಸಿದನು. ನಂತರ ಅಲ್ಲಿಗೆ ಬರುವ ಭಿಕ್ಷುಗಳಿಗೆ ಗೌರವ ಸೂಚಿಸಲು 500 ಆನೆಗಳು 500 ಶ್ವೇತ ಛತ್ರಿಗಳನ್ನು ಹಿಡಿದಿದ್ದವು. ಗುಡಾರದ ಮಧ್ಯೆ ಹತ್ತು ದೋಣಿಗಳು ಇದ್ದವು. ಅವುಗಳ ತುಂಬಾ ಸುಗಂಧ ದ್ರವ್ಯಗಳನ್ನು ತುಂಬಿಸಲಾಗಿತ್ತು. ಅಲ್ಲಿ ಬಡಿಸಲು ರಾಜಕುಮಾರಿಯರ ಗುಂಪೇ ಬರುತ್ತಿತ್ತು. ಎಲ್ಲಾ ಸಿದ್ಧತೆಗಳಾದ ಮೇಲೆ ಆಹಾರವನ್ನು ಬಡಿಸಲಾಯಿತು. ನಂತರ ರಾಜ ಉಳಿದ ರೀತಿಯಲ್ಲೂ ದಾನ ಮಾಡಿದನು. ಈ ರೀತಿ ರಾಜನು ಒಂದೇ ದಿನದಲ್ಲಿ 14 ದಶಲಕ್ಷ ಖಚರ್ು ಮಾಡಿ ಮಹಾನ್ ದಾನವನ್ನು ಏಪರ್ಾಟು ಮಾಡಿದ್ದನು.
ರಾಜನ ಬಳಿಯಲ್ಲಿ ಆಗ ಇಬ್ಬರು ಮಂತ್ರಿಗಳು ಸಹಾ ಇದ್ದರು. ಅವರೇ ಜನ್ಹ ಮತ್ತು ಕಾಲ. ಜನ್ಹನು ಈ ದಾನದಿಂದ ಅತ್ಯಂತ ಸಂಭ್ರಮಪಟ್ಟನು ಮತ್ತು ಆನಂದವೂ ಪಟ್ಟನು. ಆತನು ರಾಜನಿಗೆ ಇದು ಸರಿಸಾಟಿಯಿಲ್ಲದ ದಾನವಾಗಿದೆ ಮಹಾರಾಜ, ಯೋಗ್ಯ ದಾನವಾಗಿದೆ ಎಂದು ಪ್ರಶಂಸಿಸಿದನು. ಆದರೆ ಮಂತ್ರಿ ಕಾಲನಿಗೆ ಇದರಿಂದ ಸಂತೋಷವಾಗಲಿಲ್ಲ, ಆನಂದವೂ ಆಗಲಿಲ್ಲ. ಆತನು ಹೀಗೆ ಯೋಚಿಸಿದನು: ಈ ರಾಜನು ವ್ಯರ್ಥವಾಗಿ ಹಣವನ್ನು ಪೋಲು ಮಾಡುತ್ತಿದ್ದಾನೆ, ಈ ಭಿಕ್ಷುಗಳಿಗೇನು ತಿನ್ನುತ್ತಾರೆ ನಂತರ ವಿಹಾರಕ್ಕೆ ಹೋಗಿ ಮಲಗಿಬಿಡಬಹುದು.
ಭಗವಾನರು ಆಹಾರ ದಾನದ ನಂತರ ಅನುಮೋದನೆಯನ್ನು ಮಾಡಿ ಕಿರಿದಾದ ಧಮ್ಮೋಪದೇಶವನ್ನು ಮಾಡಿ ಅಲ್ಲಿಂದ ವಿಹಾರಕ್ಕೆ ಮರಳಿದರು.
ರಾಜನಿಗೆ ಆಶ್ಚರ್ಯವಾಯಿತು. ಇಂತಹ ಸರಿಸಾರಿಯಿಲ್ಲದ ದಾನವನ್ನು ಏಪರ್ಾಟು ಮಾಡಿದ್ದರೂ ಸಹಾ ಭಗವಾನರು ಕಿರಿದಾದ ಧಮ್ಮ ಬೋಧನೆಯನ್ನು ಏಕೆ ಮಾಡಿದರು? ನನ್ನಿಂದ ಏನಾದರೂ ಅಪಚಾರವು ಆಗಿಹೋಯಿತೆ? ಎಂದು ಚಿಂತಿಸುತ್ತಾ ಆತನು ವಿಹಾರಕ್ಕೆ ಪ್ರವೇಶಿಸಿ ಭಗವಾನರನ್ನು ಸಂದಶರ್ಿಸಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು:
ಓ ಮಹಾರಾಜ, ಸರಿಸಾಟಿಯಿಲ್ಲದ ದಾನವನ್ನು (ಅಸದಿನದಾನ) ಮಾಡಿದ್ದರೂ ಸಹಾ ಏಕೆ ತುಸು ಮಂಕಾಗಿರುವಿರಿ. ಈ ಮಹತ್ತರ ದಾನಕ್ಕಾಗಿ ನೀವು ಅಪಾರ ಆನಂದಪಡಬೇಕಿತ್ತು. ಈ ಬಗೆಯ ದಾನವು ಪ್ರತಿ ಬುದ್ಧರ ಆಗಮನದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ನಾನು ಕಿರು ಧಮ್ಮೋಪದೇಶ ನೀಡಿದ್ದಕ್ಕೆ ಕಾರಣವಿದೆ ಮಹಾರಾಜ, ನಿನ್ನ ಮಂತ್ರಿಗಳಲ್ಲಿ ಒಬ್ಬನು ದಾನವನ್ನೇ ವ್ಯರ್ಥವಾದುದು ಮತ್ತು ನಷ್ಟಕಾರಿ ಎಂದು ಭಾವಿಸುತ್ತಾನೆ. ಅದರಿಂದ ನನ್ನ ಬೋಧನೆ ಆಲಿಸುತ್ತಿದ್ದಂತೆ ಅವನಲ್ಲಿ ದ್ವೇಷವು ಹೆಚ್ಚಾಗುತ್ತಿತ್ತು. ಆ ದ್ವೇಷವು ಇನ್ನಷ್ಟು ಹೆಚ್ಚಾದರೆ, ಆ ಕುಕಮ್ಮ ಫಲದಂತೆ ಆತನಿಗೆ ಮುಂದೆ ಅಪಾರ ದುಃಖದ ಸ್ಥಿತಿಯು ಸಿಗುತ್ತಿತ್ತು. ಆದ್ದರಿಂದಾಗಿ ನಾನು ಬೋಧನೆಯನ್ನು ಅಲ್ಪವಾಗಿ ಬೋಧಿಸಿದೆನು. ನಂತರ ಹೀಗೆ ಮುಂದುವರೆಸಿದರು: ಓ ಮಹಾರಾಜ! ಮೂರ್ಖರು ದಾನದಲ್ಲಿ ಆನಂದಿಸುವುದಿಲ್ಲ, ಹೀಗಾಗಿ ದುರ್ಗತಿಗೆ ಹೋಗುವರು. ಆದರೆ ಜ್ಞಾನಿಗಳು ದಾನದಲ್ಲೇ ಆನಂದಿಸುವವರಾಗಿ ಸುಗತಿ ತಲುಪುವರು ಎಂದು ಹೇಳಿ ಈ ಗಾಥೆಯನ್ನು ನುಡಿದರು:
ಜಿಪುಣರು ದೇವಲೋಕವನ್ನು ತಲುಪಲಾರರು
ಮೂರ್ಖರು ದಾನವನ್ನು ಪ್ರಶಂಸಿಸಲಾರರು,
ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ ಆನಂದಿತರಾಗಿ
ಪರಲೋಕದಲ್ಲಿ ಸುಖಿಸುವರು. (177)
8.3 ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)
ಶ್ರಾವಸ್ತಿಯಲ್ಲಿ ಆನಂದನೆಂಬ ಜಿಪುಣಾಗ್ರೇಸರನಿದ್ದನು. ಆತನು ಬಹಳ ಶ್ರೀಮಂತನಾದರೂ ದಾನಿಯಾಗಿರಲಿಲ್ಲ. ಆತನ ಮಗನಾದ ಮೂಲಸಿರಿಗೆ ಆತನು ಆಗಾಗ್ಗೆ ಈ ರೀತಿ ಹೇಳುತ್ತಿದ್ದನು. ನಾವು ಶ್ರೀಮಂತರೆಂದು ಯೋಚಿಸಲೇಬಾರದು, ನಾವು ಖಚರ್ು ಮಾಡಬಾರದು, ನಾವು ಸದಾ ಐಶ್ವರ್ಯವನ್ನು ಸಂಗ್ರಹ ಮಾಡುತ್ತಿರಬೇಕು, ಇಲ್ಲದೆ ಹೋದರೆ ನಮ್ಮ ಐಶ್ವರ್ಯವೇ ಕ್ಷಯಿಸಿಹೋಗುತ್ತದೆ. ಈ ಶ್ರೀಮಂತ ಆನಂದನು 5 ಬಿಂದಿಗೆಗಳಷ್ಟು ಚಿನ್ನವನ್ನು ತನ್ನ ಮನೆಯಲ್ಲಿ ಹೂತಿಟ್ಟು ಅದನ್ನು ಯಾರಿಗೂ ತಿಳಿಸದೆ ಸತ್ತುಹೋದನು.
ನಂತರ ಆತನು ಶ್ರಾವಸ್ತಿಯ ಸಮೀಪದ ಹಳ್ಳಿಯಲ್ಲಿ ಭಿಕ್ಷುಕರ ಮನೆಯಲ್ಲಿ ಹುಟ್ಟಿದನು. ಆತನು ತಾಯಿಯ ಗರ್ಭದಲ್ಲಿರುವಾಗ ಭಿಕ್ಷುಕರ ಆದಾಯವೇ ಕ್ಷೀಣಿಸಿತು. ಆಗ ಅವರಿಗೆ ತಮ್ಮಲ್ಲಿ ಯಾರು ದುರಾದೃಷ್ಟವಂತರಿದ್ದಾರೆ ಎನಿಸಿತು. ಅವರು ತಮ್ಮಲ್ಲೇ ವಿಭಾಗಿಸುತ್ತ ಪರೀಕ್ಷಿಸಿದಾಗ ಗಭರ್ಿಣಿ ಸ್ತ್ರೀಯ ದುರಾದೃಷ್ಟವಂತೆ ಎಂದು ಲೆಕ್ಕಾಚಾರ ಹಾಕಿದನು. ಹೀಗಾಗಿ ಆಕೆಯನ್ನು ಹಳ್ಳಿಯಿಂದ ದೂರ ಅಟ್ಟಿದರು. ಕೊನೆಗೆ ಆಕೆ ಕುರೂಪಿ ಅಸಹ್ಯಕರ ಮಗನನ್ನು ಹೆತ್ತಳು. ಆಕೆ ಒಂಟಿಯಾಗಿ ಆಹಾರಕ್ಕಾಗಿ ಭಿಕ್ಷೆಗೆ ಹೋದರೆ ಆಕೆಗೆ ಮೊದಲಿನಷ್ಟೇ ಸಿಗುತ್ತಿತ್ತು. ಒಂದುವೇಳೆ ಆತನನ್ನು ಕರೆದುಕೊಂಡು ಭಿಕ್ಷೆಗೆ ಹೋದರೆ ಆಕೆಗೆ ಏನೂ ಸಿಗುತ್ತಿರಲಿಲ್ಲ. ಹೀಗಾಗಿ ಆ ಹುಡುಗ ಸ್ವಲ್ಪ ದೊಡ್ಡವನಾದ ಮೇಲೆ ಆತನನ್ನು ಒಂಟಿಯಾಗಿಯೇ ಭಿಕ್ಷೆಗೆ ಕಳುಹಿಸುತ್ತಿದ್ದಳು. ಹೀಗಿರಲು ಆತನು ಸುತ್ತಾಡುತ್ತಾ ಒಂದುದಿನ ಶ್ರಾವಸ್ತಿಯ ಹಳೆಯ ಮನೆಗೆ ಬಂದನು. ತನ್ನ ಹಳೆಯ ನೆನಪಿನಿಂದ ಆತನು ಮನೆಯೊಳಗೆ ಪ್ರವೇಶಿಸಿದನು. ಆಗ ಮೂಲಸಿರಿಯ ಮಕ್ಕಳು ಆತನನ್ನು ಕಂಡು ಹೆದರಿ ಸೇವಕರಿಂದ ಆಚೆಗೆ ದಬ್ಬಿಸಿದರು.
ಅದೇವೇಳೆಯಲ್ಲಿ ಭಗವಾನರು ಈ ಘಟನೆ ನೋಡಿದನು. ಅವರು ಮೂಲಸಿರಿಯನ್ನು ಕರೆಯಿಸಿದರು. ನಂತರ ಆತನಿಗೆ ಆ ಭಿಕ್ಷುಕ ಅವರ ಸ್ವತಃ ತಂದೆ ಬೇರಾರು ಅಲ್ಲ ಎಂದು ಹೇಳಿದರು. ಆದರೆ ಆತನು ನಂಬಲಿಲ್ಲ. ನಂತರ ಭಗವಾನರು ಭಿಕ್ಷುಕನಿಗೆ ಕರೆಸಿ ಆತನು ಹಿಂದಿನ ಜನ್ಮದಲ್ಲಿ ಎಲ್ಲೆಲ್ಲಿ ನಿಧಿ ಅಡಗಿಸಿರುವನು ತೋರಿಸು ಎಂದಾಗ ಆತನು ತೋರಿಸಿದ ಕಡೆ ಚಿನ್ನವು ದೊರೆಯಿತು. ಆಗ ಮೂಲಸಿರಿಯು ಭಿಕ್ಷುಕನನ್ನು ತನ್ನ ತಂದೆ ಎಂದು ಒಪ್ಪಿದನು. ನಂತರ ಅವರು ಭಗವಾನರ ಉಪಾಸಕರಾದರು. ಆ ವೇಳೆಯಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು:
ನನಗೆ ಪುತ್ರರಿರುವರು, ನನ್ನಲ್ಲಿ ಧನವು ಇರುವುದು ಎಂದು ಮೂರ್ಖರು ಚಿಂತೆಪಡುವರು. ತಾನೇ ತನ್ನವಲ್ಲ ಎಂದಮೇಲೆ ಎಲ್ಲಿಯ ಪುತ್ರರು, ಎಲ್ಲಿಯ ಧನ.
8.4 ಕೋಸಿಯಾ ಕೃಪಣನ ಕಸಿವಿಸಿ
ರಾಜಗೃಹದ ಸಮೀಪ ಸಕ್ಕಾರವೆಂಬ ಹಳ್ಳಿಯಿತ್ತು. ಅಲ್ಲಿ ಕೋಸಿಯನೆಂಬ ಶ್ರೀಮಂತ ಕೃಪಣನಿದ್ದನು. ಆತನು ಯಾರಿಗೂ ಏನನ್ನೂ ಸ್ವಲ್ಪವೂ ದಾನ ನೀಡುತ್ತಿರಲಿಲ್ಲ. ಒಂದುದಿನ ಆತನಿಗೆ ಒಬ್ಬಟ್ಟಿನಂತಹ ತಿಂಡಿ ತಿನ್ನುವ ಬಯಕೆಯಾಯಿತು. ಆದರೆ ಪರರಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಆತನಲ್ಲಿ ಇಲ್ಲದ ಕಾರಣ ಆತನು ತನ್ನ ಪತ್ನಿಯೊಂದಿಗೆ ಮಹಡಿಯ ಎತ್ತರದ ಅಂತಸ್ತಿನಲ್ಲಿ ಕುಳಿತು ಅಲ್ಲಿ ಯಾರೂ ಕಾಣಲಾರರು ಎಂಬ ನಿರಾಳ ಹೊಂದಿ ಇಬ್ಬರೂ ಒಬ್ಬಟ್ಟು ತಯಾರಿಸಲಾರಂಭಿಸಿದರು.
ಅಂದು ಮುಂಜಾನೆಯೇ ಭಗವಾನರು ತಮ್ಮ ದಿವ್ಯದೃಷ್ಟಿಯಿಂದಾಗಿ ಈ ಇಬ್ಬರು ದಂಪತಿಗಳು ಸೋತಪನ್ನರಾಗುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಅವರು ಋದ್ದಿಶಕ್ತಿ ಪ್ರವೀಣ ಮಹಾ ಮೊಗ್ಗಲಾನರನ್ನು ಕರೆಸಿ ಆ ಶ್ರೀಮಂತ ದಂಪತಿಯನ್ನು ಮಧ್ಯಾಹ್ನದ ಹೊತ್ತಿಗೆ ಕರೆತರಬೇಕೆಂದು ತಿಳಿಸಿದರು. ಇದ್ದಿಬಲಗಳನ್ನು ಹೊಂದಿದ್ದ ಮೊಗ್ಗಲಾನರು ತಕ್ಷಣ ಅಲ್ಲಿಂದ ಮರೆಯಾಗಿ ಕೋಸಿಯನ ಉಪ್ಪರಿಗೆಯ ಕಿಟಕಿ ಬಳಿ ನಿಂತರು.
ಕೋಸಿಯ ಮೊಗ್ಗಲಾನರನ್ನು ನೋಡಿದ. ಅಲ್ಲಿಂದ ಹೊರಹೋಗುವಂತೆ ಕೂಗಾಡಿದ. ಆದರೆ ಮೊಗ್ಗಲಾನರು ಏನನ್ನು ನುಡಿಯದೆ ನಿಶ್ಶಬ್ದದಿಂದಿದ್ದರು. ಕೊನೆಗೆ ಕೋಸಿಯನೆ ಸೋತು ಹೆಂಡತಿಯೊಡನೆ ಹೀಗೆ ಹೇಳಿದನು ಚೂರು ಒಬ್ಬಟ್ಟು ಮಾಡಿ ಆ ಭಿಕ್ಷುವಿಗೆ ನೀಡು ಆಕೆ ಅದರಂತೆ ಮಾಡಿದಳು. ಆದರೆ ಆಶ್ಚರ್ಯ! ಅದು ಇಡೀ ಬಾಣಲಿಯನ್ನೇ ತುಂಬಿಸಿತು. ಕೋಸಿಯನಿಗೆ ಹೆಂಡತಿ ಹೆಚ್ಚು ಹಾಕಿರಬಹುದೆಂದು ಆಕೆಯನ್ನು ಬಯ್ದು ತಾನೇ ಚೂರು ಒಬ್ಬಟ್ಟನ್ನು ಬಾಣಲಿಗೆ ಹಾಕಿದ. ಅದೂ ಸಹ ಇಡೀ ಬಾಣಲಿಯನ್ನು ತುಂಬಿಸಿತು. ಆತ ಎಷ್ಟೇ ಚಿಕ್ಕ ಚೂರು ಬಾಣಲಿಗೆ ಹಾಕಿದರೂ ಅದು ಇಡೀ ಬಾಣಲಿಯಷ್ಟು ದಪ್ಪವಾಗಿ ಉಬ್ಬುತ್ತಿತ್ತು. ಕೊನೆಗೆ ಕೋಸಿಯನು ಹೆಂಡತಿಗೆ ಒಂದು ಒಬ್ಬಟ್ಟನ್ನು ಮೊಗ್ಗಲಾನರಿಗೆ ಕೊಟ್ಟು ಕಳುಹಿಸು ಎಂದನು. ಆಕೆ ಹಾಗೇ ಮಾಡಲು ಹೋದಾಗ ಎಲ್ಲಾ ಒಬ್ಬಟ್ಟುಗಳು ಅಂಟಿಕೊಂಡಿದ್ದವು. ಆಕೆಗೆ ಒಂದನ್ನು ಪ್ರತ್ಯೇಕಿಸಲು ಆಗಲಿಲ್ಲ. ಕೊನೆಗೆ ಕೋಸಿಯನೇ ಬೇರ್ಪಡಿಸಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗದೆ ನಿರಾಶೆಯಾಗಿ ಆತನ ಅಭಿಲಾಶೆ ಮತ್ತು ಹಸಿವು ಕಳೆದುಕೊಂಡನು. ಎಲ್ಲವನ್ನೂ ಈ ಭಿಕ್ಷುವಿಗೆ ನೀಡು ಎಂದನು. ಅದನ್ನು ಸ್ವೀಕರಿಸಿದ ಮೊಗ್ಗಲಾನರು ದಾನದ ಬಗ್ಗೆ ಪ್ರವಚನವೊಂದನ್ನು ನುಡಿದರು. ನಂತರ ಅವರಿಗೆ ಅವರಿಗಾಗಿ ಬುದ್ಧರು ಮತ್ತು ಸಂಘವು ಕಾಯುತ್ತಿದೆ ಎಂದು ಹೇಳಿದರು. ಶ್ರಾವಸ್ತಿಯ ಜೇತವನವು ಅಲ್ಲಿ 45 ಯೋಜನ ದೂರವಿತ್ತು. ಆದರೆ ಮಹಾ ಮೊಗ್ಗಲಾನರವರ ತಮ್ಮ ಅತೀಂದ್ರೀಯ ಶಕ್ತಿಯಿಂದಾಗಿ ಕೋಸಿಯ, ಆತನ ಪತ್ನಿ ಮತ್ತು ಒಬ್ಬಟ್ಟುಗಳ ಬುಟ್ಟಿಯ ಸಮೇತ ಬುದ್ಧರ ಮುಂದೆ ಪ್ರತ್ಯಕ್ಷರಾದರು. ಆ ಒಬ್ಬಟ್ಟುಗಳನ್ನು 500 ಭಿಕ್ಷುಗಳಿಗೆ ದಾನ ನೀಡಿದರು. ಆ ಒಬ್ಬಟ್ಟಿನ ಬುಟ್ಟಿಯು ಸರಿಯಾಗಿ 500 ಭಿಕ್ಷುಗಳಿಗೆ ಸರಿಹೋಯಿತು. ನಂತರ ಭಗವಾನರು ನೀಡಿದ ಉಪದೇಶದಿಂದ ಅವರು ಸೋತಪತ್ತಿಫಲ ಪಡೆದರು.
ಸಂಜೆ ಭಿಕ್ಷುಗಳು ಮಹಾಮೊಗ್ಗಲಾನರ ಪ್ರತಾಪವನ್ನು ಮೆಚ್ಚಿ ಆ ವಿಷಯವನ್ನು ಚಚರ್ಿಸುವಾಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಸಹಾ ಮೊಗ್ಗಲಾನರ ತರಹ ಜೀವಿಸಬೇಕು. ಗ್ರಾಮದವರಿಂದ ಆಹಾರ ಪಡೆಯುವಾಗ ಅವರ ಶ್ರದ್ಧೆಗೆ ಮತ್ತು ಐಶ್ವರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಂಚರಿಸಬೇಕು ಎಂದರು. ಆಗ ಭಗವಾನರು ಈ ಗಾಥೆಯನ್ನು ನುಡಿದರು:
ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ ಚಲಿಸುತ್ತಾರೆ.
8.5 ಅವನತಿಗೆ ಕಾರಣ
ಯಾರು ಶ್ರೀಮಂತರಾಗಿದ್ದರೂ ಸಹಾ ವೃದ್ಧಾವಸ್ಥೆಯಲ್ಲಿರುವ ತಮ್ಮ ತಂದೆ-ತಾಯಿಗಳನ್ನು ಸಲುಹುವುದಿಲ್ಲವೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ.(8)
ಯಾರು ಅಪಾರ ಸಿರಿಯನ್ನು ಹೊಂದಿದ್ದರೂ, ಚಿನ್ನದಿಂದ ಮತ್ತು ಅಪಾರ ಆಹಾರದಿಂದ ತುಂಬಿ ಹೋಗಿದ್ದರೂ ಸಹಾ ಒಂಟಿಯಾಗಿಯೇ ಅವನ್ನೆಲ್ಲಾ ಭೋಗಿಸಲು ಸಿದ್ಧನಾಗಿರುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ. (12)
ಯಾರು ತನ್ನ ಜನ್ಮದ ಕಾರಣದಿಂದಾಗಿ, ಅಥವಾ ಐಶ್ವರ್ಯದ ಕಾರಣದಿಂದಾಗಿ ಅಥವಾ ವಂಶದ ಕಾರಣದಿಂದಾಗಿ ಅಹಂಕಾರಪಡುತ್ತಿರುವನೋ ಮತ್ತು ತನ್ನ ಬಂಧು ಬಾಂಧವರನ್ನು ಕೀಳಾಗಿ ಕಾಣುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ (14) - ಪರಾಭವ ಸುತ 

No comments:

Post a Comment