Wednesday, 27 November 2019

ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)

 ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)

ಶ್ರಾವಸ್ತಿಯಲ್ಲಿ ಆನಂದನೆಂಬ ಜಿಪುಣಾಗ್ರೇಸರನಿದ್ದನು. ಆತನು ಬಹಳ ಶ್ರೀಮಂತನಾದರೂ ದಾನಿಯಾಗಿರಲಿಲ್ಲ. ಆತನ ಮಗನಾದ ಮೂಲಸಿರಿಗೆ ಆತನು ಆಗಾಗ್ಗೆ ಈ ರೀತಿ ಹೇಳುತ್ತಿದ್ದನು. ನಾವು ಶ್ರೀಮಂತರೆಂದು ಯೋಚಿಸಲೇಬಾರದು, ನಾವು ಖಚರ್ು ಮಾಡಬಾರದು, ನಾವು ಸದಾ ಐಶ್ವರ್ಯವನ್ನು ಸಂಗ್ರಹ ಮಾಡುತ್ತಿರಬೇಕು, ಇಲ್ಲದೆ ಹೋದರೆ ನಮ್ಮ ಐಶ್ವರ್ಯವೇ ಕ್ಷಯಿಸಿಹೋಗುತ್ತದೆ. ಈ ಶ್ರೀಮಂತ ಆನಂದನು 5 ಬಿಂದಿಗೆಗಳಷ್ಟು ಚಿನ್ನವನ್ನು ತನ್ನ ಮನೆಯಲ್ಲಿ ಹೂತಿಟ್ಟು ಅದನ್ನು ಯಾರಿಗೂ ತಿಳಿಸದೆ ಸತ್ತುಹೋದನು.
ನಂತರ ಆತನು ಶ್ರಾವಸ್ತಿಯ ಸಮೀಪದ ಹಳ್ಳಿಯಲ್ಲಿ ಭಿಕ್ಷುಕರ ಮನೆಯಲ್ಲಿ ಹುಟ್ಟಿದನು. ಆತನು ತಾಯಿಯ ಗರ್ಭದಲ್ಲಿರುವಾಗ ಭಿಕ್ಷುಕರ ಆದಾಯವೇ ಕ್ಷೀಣಿಸಿತು. ಆಗ ಅವರಿಗೆ ತಮ್ಮಲ್ಲಿ ಯಾರು ದುರಾದೃಷ್ಟವಂತರಿದ್ದಾರೆ ಎನಿಸಿತು. ಅವರು ತಮ್ಮಲ್ಲೇ ವಿಭಾಗಿಸುತ್ತ ಪರೀಕ್ಷಿಸಿದಾಗ ಗಭರ್ಿಣಿ ಸ್ತ್ರೀಯ ದುರಾದೃಷ್ಟವಂತೆ ಎಂದು ಲೆಕ್ಕಾಚಾರ ಹಾಕಿದನು. ಹೀಗಾಗಿ ಆಕೆಯನ್ನು ಹಳ್ಳಿಯಿಂದ ದೂರ ಅಟ್ಟಿದರು. ಕೊನೆಗೆ ಆಕೆ ಕುರೂಪಿ ಅಸಹ್ಯಕರ ಮಗನನ್ನು ಹೆತ್ತಳು. ಆಕೆ ಒಂಟಿಯಾಗಿ ಆಹಾರಕ್ಕಾಗಿ ಭಿಕ್ಷೆಗೆ ಹೋದರೆ ಆಕೆಗೆ ಮೊದಲಿನಷ್ಟೇ ಸಿಗುತ್ತಿತ್ತು. ಒಂದುವೇಳೆ ಆತನನ್ನು ಕರೆದುಕೊಂಡು ಭಿಕ್ಷೆಗೆ ಹೋದರೆ ಆಕೆಗೆ ಏನೂ ಸಿಗುತ್ತಿರಲಿಲ್ಲ. ಹೀಗಾಗಿ ಆ ಹುಡುಗ ಸ್ವಲ್ಪ ದೊಡ್ಡವನಾದ ಮೇಲೆ ಆತನನ್ನು ಒಂಟಿಯಾಗಿಯೇ ಭಿಕ್ಷೆಗೆ ಕಳುಹಿಸುತ್ತಿದ್ದಳು. ಹೀಗಿರಲು ಆತನು ಸುತ್ತಾಡುತ್ತಾ ಒಂದುದಿನ ಶ್ರಾವಸ್ತಿಯ ಹಳೆಯ ಮನೆಗೆ ಬಂದನು. ತನ್ನ ಹಳೆಯ ನೆನಪಿನಿಂದ ಆತನು ಮನೆಯೊಳಗೆ ಪ್ರವೇಶಿಸಿದನು. ಆಗ ಮೂಲಸಿರಿಯ ಮಕ್ಕಳು ಆತನನ್ನು ಕಂಡು ಹೆದರಿ ಸೇವಕರಿಂದ ಆಚೆಗೆ ದಬ್ಬಿಸಿದರು.
ಅದೇವೇಳೆಯಲ್ಲಿ ಭಗವಾನರು ಈ ಘಟನೆ ನೋಡಿದನು. ಅವರು ಮೂಲಸಿರಿಯನ್ನು ಕರೆಯಿಸಿದರು. ನಂತರ ಆತನಿಗೆ ಆ ಭಿಕ್ಷುಕ ಅವರ ಸ್ವತಃ ತಂದೆ ಬೇರಾರು ಅಲ್ಲ ಎಂದು ಹೇಳಿದರು. ಆದರೆ ಆತನು ನಂಬಲಿಲ್ಲ. ನಂತರ ಭಗವಾನರು ಭಿಕ್ಷುಕನಿಗೆ ಕರೆಸಿ ಆತನು ಹಿಂದಿನ ಜನ್ಮದಲ್ಲಿ ಎಲ್ಲೆಲ್ಲಿ ನಿಧಿ ಅಡಗಿಸಿರುವನು ತೋರಿಸು ಎಂದಾಗ ಆತನು ತೋರಿಸಿದ ಕಡೆ ಚಿನ್ನವು ದೊರೆಯಿತು. ಆಗ ಮೂಲಸಿರಿಯು ಭಿಕ್ಷುಕನನ್ನು ತನ್ನ ತಂದೆ ಎಂದು ಒಪ್ಪಿದನು. ನಂತರ ಅವರು ಭಗವಾನರ ಉಪಾಸಕರಾದರು. ಆ ವೇಳೆಯಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು:
"ನನಗೆ ಪುತ್ರರಿರುವರು,
 ನನ್ನಲ್ಲಿ ಧನವು ಇರುವುದು
 ಎಂದು ಮೂರ್ಖರು ಚಿಂತೆಪಡುವರು. 
ತಾನೇ ತನ್ನವಲ್ಲ ಎಂದಮೇಲೆ
 ಎಲ್ಲಿಯ ಪುತ್ರರು, ಎಲ್ಲಿಯ ಧನ."

No comments:

Post a Comment