5 ವಿಧವಾದ ಸಮ್ಮಾದೃಷ್ಟಿಗಳಿವೆ
1. ಕಮ್ಮಾಸಕತ ಸಮ್ಮಾದಿಟ್ಠಿ: ಕರ್ಮಫಲದ ಜ್ಞಾನ ಅಂದರೆ ಮಾನವನ ಸುಕರ್ಮ ಮತ್ತು ಕುಕರ್ಮಕ್ಕೆ ಫಲವಿದೆ. ಪ್ರತಿಯೊಂದಕ್ಕೂ ಕಾರಣವಿದೆ, ಪರಲೋಕವಿದೆ, ಪ್ರತಿಯೊಂದಕ್ಕೂ ಹಿಂದಿನ ಜನ್ಮವೇ ಕಾರಣವಲ್ಲ, ಸೃಷ್ಟಿಕರ್ತ ಇಲ್ಲ ಎಂಬ ಸಮ್ಮಾದೃಷ್ಟಿ.
2. ಪಚ್ಚವೇಕ್ಖಣ ಸಮ್ಮಾದೃಷ್ಟಿ : ಚಿಂತನೆಯಿಂದ ಉದಯಿಸುವ ಸಮ್ಮಾದೃಷ್ಟಿ. ಇದು ಎರಡು ಭಾಗವಾಗಿ ವಿಂಗಡಿತವಾಗುತ್ತದೆ.
ಅ) ನಾಮರೂಪ ಪರಿಗ್ರಹ ಸಮ್ಮಾದೃಷ್ಟಿ: ಇಲ್ಲಿ ಸತ್ಕಾಯ ದೃಷ್ಟಿಗಳು ದುರ್ಬಲವಾಗಿ ಹೋಗುತ್ತದೆ. ಇದು ದೃಷ್ಟಿ ವಿಶುದ್ಧಿಯಾಗಿದೆ.
ಆ) ಹೇತು ಪಚ್ಛಾಯ ಪರಿಗ್ರಹ ಸಮ್ಮಾದೃಷ್ಟಿ : ಇಲ್ಲಿ ಯಾವುದು ಮೂಲ ಕಾರಣಗಳು, ತತ್ಕ್ಷಣದ ಕಾರಣ ಯಾವುದು, ಸಹಾಯಕ ಅಂಶಗಳು ಯಾವುವು? ಎಂದೆಲ್ಲಾ ಸಮ್ಮಾದೃಷ್ಟಿ ಸಿಗುತ್ತದೆ. ಇದು ಕಂಖಾವಿತರಣ ವಿಶುದ್ಧಿಯಾಗಿದೆ. ಇಲ್ಲಿ ಎಲ್ಲಾಬಗೆಯ ಸಂಶಯಗಳು ನಿವಾರಣೆಯಾಗುತ್ತದೆ.
4. ಲೋಕೋತ್ತರ ಮಾರ್ಗ ಸಮ್ಮಾದೃಷ್ಟಿ: ಇಲ್ಲಿ ಮಾರ್ಗದ ಸಾಕ್ಷತ್ಕಾರದಿಂದ ಸಮ್ಮಾದಿಟ್ಠಿ ಉದಯಿಸುತ್ತದೆ.
5. ಲೋಕೋತ್ತರ ಫಲ ಸಮ್ಮಾದೃಷ್ಟಿ: ಇಲ್ಲಿ ಲೋಕೋತ್ತರ ಫಲ ಸಾಕ್ಷಾತ್ಕಾರದಿಂದ ಸೋತಪನ್ನನಾಗುತ್ತಾನೆ. ಇಲ್ಲಿ ಎಲ್ಲಾ ಮಿಥ್ಯಾದೃಷ್ಟಿಗಳು ನಾಶವಾಗಿರುತ್ತದೆ.
ಐದು ವಿಷಯಗಳಿಂದ ಸಮ್ಮಾದಿಟ್ಠಿಯು ಫಲವಾಗುತ್ತದೆ
ಭಿಕ್ಷುಗಳೇ, ಐದು ವಿಷಯಗಳಿಂದ ಸಮ್ಮಾದಿಟ್ಠಿಯು ಫಲವಾಗಿ ಚಿತ್ತವಿಮುಕ್ತಿಗೆ ಸಹಕಾರಿಯಾಗುತ್ತದೆ, ಲಾಭಕಾರಿಯಾಗುತ್ತದೆ, ಯಾವುವವು ಐದು?ಅವೆಂದರೆ: 1.ಶೀಲ, 2. ಕಲಿಯುವಿಕೆ, 3. ಚಚರ್ೆ, 4. ಪ್ರಶಾಂತತೆ ಮತ್ತು 5. ಚಿಂತನೆ (ಅಂತರ್ದೃಷ್ಟಿ).
ಯಾರಿಗೆ ಧಮ್ಮವನ್ನು ಆಲಿಸಲು ಆಸೆಯಿಲ್ಲವೋ, ಕಿವಿಯಿಂದ ಗಮನ ಹರಿಸುವುದಿಲ್ಲವೋ ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲವೋ, ಅವರು ಧಮ್ಮದಿಂದ ಯಾವ ಲಾಭವನ್ನು ಪಡೆಯದೆ ಹೋಗುತ್ತಾರೆ. ಅರ್ಥವನ್ನು ಕಳೆದುಕೊಳ್ಳುತ್ತಾರೆ.
ಸಮ್ಮಾದೃಷ್ಟಿ ಹೊಂದಿರುವವರ ಲಕ್ಷಣಗಳು
ಸಮ್ಮಾದೃಷ್ಟಿ ಹೊಂದಿರುವವನು:1. ಮಾತೃ ಹಂತಕನಾಗಿರುವುದಿಲ್ಲ,
2. ಪಿತೃಹಂತಕನಾಗಿರುವುದಿಲ್ಲ,
3. ಅರಹಂತರ ಹಂತಕನು ಆಗಿರುವುದಿಲ್ಲ,
4.ತಥಾಗತರಿಗೆ ಗಾಯ ಮಾಡುವುದಿಲ್ಲ,
5. ಸಂಘಬೇಧ ಮಾಡುವುದಿಲ್ಲ,
6. ಇನ್ನೋರ್ವ ಗುರುವಿಗೆ ಶರಣು ಹೋಗುವುದಿಲ್ಲ.
7.ಆತನು ಯಾವುದೇ ಆಗು-ಹೋಗುವಿಕೆಯನ್ನು ನಿತ್ಯವೆಂದು, ಶಾಶ್ವತವೆಂದು ಸ್ವೀಕರಿಸುವುದಿಲ್ಲ,
8.ಯಾವುದೇ ಆಗು-ಹೋಗುವಿಕೆಯನ್ನು ಸುಖವೆಂದು ಸ್ವೀಕರಿಸುವುದಿಲ್ಲ,
9. ಯಾವುದೇ ಆಗುಹೋಗುವಿಕೆಯನ್ನು ಆತ್ಮವೆಂದು ಸ್ವೀಕರಿಸುವುದಿಲ್ಲ.
10. ಯಾವುದೇ ಸಮಾರಂಭಗಳಿಂದ ಪರಿಶುದ್ಧತೆ ಲಭಿಸುವುದು ಎಂದು ತಿಳಿಯುವುದಿಲ್ಲ.
11. ಬುದ್ಧ ಸಂಘದ ಹೊರತು ಬೇರೆ ಸಂಘವನ್ನು ದಾನಕ್ಕೆ ಅರ್ಹವೆಂದು ಭಾವಿಸುವುದಿಲ್ಲ.
12. ಯಾರು ಸಮ್ಮಾದಿಟ್ಠಿಯನ್ನು ಪ್ರಾಪ್ತಿಮಾಡಿರುವರೋ ಅವರು ಸುಖ ಹಾಗು ದುಃಖಗಳು ಸ್ವನಿಮರ್ಿತವೆಂದು ಭಾವಿಸುವುದಿಲ್ಲ.
13. ಹಾಗೆಯೇ ಪರನಿಮರ್ಿತವೆಂದು ಭಾವಿಸುವುದಿಲ್ಲ.
14. ಹಾಗೆಯೇ ಸ್ವ ಮತ್ತು ಪರನಿಮರ್ಿತವೆಂದು ಭಾವಿಸುವುದಿಲ್ಲ.
15. ಹಾಗೆಯೇ ಸ್ವ ಮತ್ತು ಪರ ನಿಮರ್ಿತವಿಲ್ಲದೆ ಆಕಸ್ಮಿಕವೆಂದೂ ಹೇಳುವುದಿಲ್ಲ.
16.ಯಾರು ಸಮ್ಮಾದೃಷ್ಟಿಯನ್ನು ಹೊಂದಿರುವರೋ ಅವರು ಗೌರವವಿಲ್ಲದೆ ಬಾಳುವುದಿಲ್ಲ.
17. ಕೃತಜ್ಞತೆಯಿಲ್ಲದೆ ಬಾಳುವುದಿಲ್ಲ.
18. ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ, ಶಿಕ್ಷಣದಲ್ಲಿ ಅಪಾರವಾಗಿ ಗೌರವನಿಷ್ಠೆ, ಪಾಲನೆ ಹೊಂದಿರುತ್ತಾರೆ.
19. ಪರವಾಗಿಲ್ಲ ಬಿಡು, ಏನೂ ಆಗುವುದಿಲ್ಲ ಎಂಬ ದೃಷ್ಟಿಯಲ್ಲಿ ಬೀಳುವುದಿಲ್ಲ.
20. ಅವರಿಗೆ ಎಂಟನೆಯ ಜನ್ಮವಿರುವುದಿಲ್ಲ.
21. ಮಿಥ್ಯಾದೃಷ್ಟಿಗಳನ್ನು ಹೊಂದಿರುವುದಿಲ್ಲ,
22. ಸಂಶಯಗಳಿಂದ ಕೂಡಿರುವುದಿಲ್ಲ,
23.ವಿಧಿ, ಸಂಸ್ಕಾರ, ಮೌಢ್ಯ ಆಚರಣೆಗಳಲ್ಲಿ ನಂಬಿಕೆ ಹೊಂದಿರುವುದಿಲ್ಲ,
24. ಮಿಥ್ಯಾ ಮಾರ್ಗಕ್ಕೆ ಕರೆದೊಯ್ಯುವ ಭಾವೋದ್ರೇಕ, ದ್ವೇಷ ಮತ್ತು ಮೋಹಗಳನ್ನು ಹೊಂದಿರುವುದಿಲ್ಲ.
ಏಕೆ ಹೀಗೆ?
ಏಕೆಂದರೆ ಯಾರು ಸಮ್ಮಾದಿಟ್ಠಿಯನ್ನು ಹೊಂದಿರುತ್ತಾರೋ ಅವರು ಸುಖ-ದುಃಖಗಳ ಉದಯದ ಸ್ಪಷ್ಟವಾದ ಕಾರಣಗಳನ್ನು ಅರಿತಿರುತ್ತಾರೆ. ಪಟಿಚ್ಚ ಸಮುಪ್ಪಾದವನ್ನು ಸ್ಪಷ್ಟವಾಗಿ ಅರಿತಿರುತ್ತಾರೆ. ಆದ್ದರಿಂದಾಗಿ ಅವರು ಹೀಗೆ ಹೇಳುತ್ತಾರೆ.
No comments:
Post a Comment