Monday, 2 December 2019

ಪುಣ್ಯದ ಎಂಟು ಇಳುವರಿಗಳು


 ಪುಣ್ಯದ ಎಂಟು ಇಳುವರಿಗಳು



ಭಿಕ್ಷುಗಳೇ, ಇವು ಪುಣ್ಯದ ಮತ್ತು ಸುಖದ ಎಂಟು ಇಳುವರಿಗಳಾಗಿವೆ. ಸುಖಕ್ಕೆ ಆಹಾರವಾಗಿದೆ, ದಿವ್ಯವಾದುದ್ದು, ಸುಖದ ಪರಿಣಾಮವಾಗಿರುವಂತಹುದು, ಸ್ವರ್ಗಗಾಮಿಯಾಗಿರುವಂತಹುದು, ಸುಖಕಾರಿಯಾಗಿರುವಂತಹುದು, ಪ್ರಿಯವಾದುದು, ಅತ್ಯಮೂಲ್ಯವಾದುದು, ಹಿತಕಾರಿಯಾಗಿರುವುದಾಗಿದೆ, ಯಾವುದವು ಎಂಟು?

1. ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಬುದ್ಧರಲ್ಲಿ ಶರಣುಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ ಮತ್ತು ಒಳಿತಿಗೆ, ಸುಖಕ್ಕೆ ಪ್ರಥಮ ಇಳುವರಿಯಾಗಿದೆ...

2. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಧಮ್ಮಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ದ್ವತೀಯ ಇಳುವರಿಯಾಗಿದೆ...

3. ಮತ್ತೆ ಭಿಕ್ಷುಗಳೇ, ಇಲ್ಲಿ ಆರ್ಯರ ಶಿಷ್ಯನು ಸಂಘಕ್ಕೆ ಶರಣು ಹೋಗುತ್ತಾನೆ. ಭಿಕ್ಷುಗಳೇ, ಇದು ಪುಣ್ಯಕ್ಕೆ, ಒಳಿತಿಗೆ ಮತ್ತು ಸುಖಕ್ಕೆ ತೃತೀಯ ಇಳುವರಿಯಾಗಿದೆ...

 ಭಿಕ್ಷುಗಳೇ, ಐದು ದಾನಗಳಿವೆ. ಅವು ಮಹತ್ತರ ಲಾಭವನ್ನುಂಟು ಮಾಡುತ್ತದೆ. ಸನಾತನ ಕಾಲದಿಂದಲೂ, ಸಂಪ್ರದಾಯದಿಂದಲೂ ಸ್ವೀಕೃತವಾಗಿವೆ. ಗೊಂದಲಾತೀತವಾಗಿದೆ, ಅವು ಯಾರಿಂದಲೂ ತಿರಸ್ಕೃತವಾಗಿಲ್ಲ. ಅವು ಯಾವುದು?

4.ಇಲ್ಲಿ ಭಿಕ್ಷುಗಳೇ, ಆರ್ಯ ಶಿಷ್ಯನು, ಜೀವಹತ್ಯೆಯಿಂದ ವಿರತನಾಗುತ್ತಾನೆ. ಹೀಗೆ ಅಂತಹುದರಿಂದ ದೂರಾಗಿ, ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡಿದ್ದಾನೆ. ದ್ವೇಷರಹಿತತೆ ನೀಡಿದ್ದಾನೆ, ವೈರರಹಿತತೆ ನೀಡಿದ್ದಾನೆ. ಹೀಗೆ ಆತನು ನಿಂದಾತೀತವಾದ ಅಭಯ ದಾನವನ್ನೇ ಮಾಡಿದ್ದಾನೆ. ಮೈತ್ರಿಯಿಂದ, ದಯೆಯಿಂದ, ಕೂಡಿದವನಾಗಿದ್ದಾನೆ. ಇದೇ ಭಿಕ್ಷುಗಳೇ, ಮೊದಲ ದಾನವಾಗಿದೆ. ಇದು ಎಲ್ಲರಿಂದ ಪ್ರಶಂಸಿತವಾಗಿದ್ದು, ಯಾರಿಂದಲೂ ತಿರಸ್ಕೃತವಾಗಿಲ್ಲ, ಗೊಂದಲಾತೀತವಾಗಿದೆ.

5. ಮತ್ತೆ ಭಿಕ್ಷುಗಳೇ, ಇದೇರೀತಿಯಲ್ಲಿ ಆರ್ಯಶಿಷ್ಯನು ಕಳ್ಳತನದಿಂದಾಗಿ ದೂರವಿರುತ್ತಾನೆ. 

6. ಅನೈತಿಕ ಕಾಮುಕತೆಯಿಂದ ದೂರವಿರುತ್ತಾನೆ.
7. ಸುಳ್ಳಿನಿಂದ ದೂರವಿರುತ್ತಾನೆ. 
8.ಎಲ್ಲಾ ಬಗೆಯ ಮಾದಕ ವಸ್ತುಗಳು, ಮದ್ಯಪಾನಗಳಿಂದ ದೂರವಾಗುತ್ತಾನೆ. 

ಹೀಗಿದ್ದೂ ಆತನು ಅಸಂಖ್ಯಾತ ಜೀವಿಗಳಿಗೆ ಅಭಯವನ್ನು ನೀಡುತ್ತಿದ್ದಾನೆ. ದ್ವೇಷರಹಿತತೆಯನ್ನು ನೀಡುತ್ತಿದ್ದಾನೆ, ವೈರರಹಿತತೆಯನ್ನು ನೀಡುತ್ತಿದ್ದಾನೆ. ಹೀಗಿದ್ದೂ ಸೀಮಾತೀತವಾದ ಅಭಯ ದಾನಕ್ಕೆ ಭಾಗಿಯಾಗುತ್ತಾನೆ. ಮೈತ್ರಿಯ ಮತ್ತು ಕರುಣೆಯ ನೆಲೆಸುವಿಕೆಗೆ ಕಾರಣವಾಗುತ್ತಾನೆ. ಭಿಕ್ಷುಗಳೇ, ಇವೇ ಆ ಐದು ಮಹಾದಾನಗಳಾಗಿದ್ದು, ಇದು ಪುರಾತನ ಕಾಲದಿಂದಲೂ ಪ್ರಶಂಸಿತವಾಗಿದ್ದು, ಯಾರಿಂದಲು ತಿರಸ್ಕೃತವಾಗಿಲ್ಲ. ಇವೇ ಭಿಕ್ಷುಗಳೇ, ಪುಣ್ಯಗಳ ಇಳುವರಿಗೆ ಸಹಾಯಕವಾದ ಎಂಟು ಅಂಗಗಳಾಗಿವೆ. ಅದರಿಂದಾಗಿ ಆತನು ಒಳಿತನ್ನು, ಸುಖವನ್ನು, ಸ್ವರ್ಗಗಾಮಿತ್ವವನ್ನು, ಆನಂದವನ್ನು, ಲಾಭವನ್ನು ಪಡೆಯುತ್ತಾನೆ. 

No comments:

Post a Comment