ಬೇಧಭಾವ ಮೀರಿ ಹೃದಯ ವೈಶಾಲ್ಯತೆ ಹೊಂದೊಣ
ಮಾನವನಲ್ಲಿ ಎಲ್ಲಿಯವರೆಗೆ ಮಿಥ್ಯಾದೃಷ್ಟಿ ಮತ್ತು ಸ್ವಾರ್ಥಗಳು ಇರುತ್ತವೋ ಅಲ್ಲಿಯವರೆಗೆ ಆತನಲ್ಲಿ ಬೇಧಭಾವವೂ ಇರುತ್ತವೆ. ಆಗ ಆತನು ವ್ಯಕ್ತಿಯಿಂದ ವ್ಯಕ್ತಿಗೆ ಭೇದಭಾವ ಮಾಡುತ್ತಾನೆ, ಪಕ್ಷಪಾತ ಮಾಡುತ್ತಾನೆ. ಆತನಿಗೆ "ಇವರು ನನ್ನವರು" ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಪ್ರಿಯಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡುತ್ತಾನೆ. ಹಾಗೆಯೇ ಮಿಥ್ಯಾದೃಷ್ಟಿಯಿಂದ "ಇವರು ಪರರು" ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಅಪ್ರಿಯ ಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡಲಾರ. ಬದಲಾಗಿ ದ್ವೇಷಿಸುತ್ತಾನೆ, ಹಾಗು ತೊಂದರೆಯನ್ನುಂಟು ಮಾಡಬಹುದು.ಆದ್ದರಿಂದಾಗಿ ದಾನಿಯು ಮೈತ್ರಿಯ ಭಾವ ತಾಳಬೇಕು. ಎಲ್ಲರ ಒಳಿತು ಬಯಸಲಿ. ಆತನಿಂದ ಎಲ್ಲರಿಗೂ ಪ್ರಯೋಜನವಾಗಬೇಕು. ಆತನು ಮಳೆಯಂತೆ ಸರ್ವರಿಗೂ ಲಾಭ ನೀಡಬೇಕು, ಪೃಥ್ವಿಯಂತೆ ಎಲ್ಲರಿಗೂ ಆಧಾರವಾಗಬೇಕು, ನೀರಿನಂತೆ ಸರ್ವರಿಗೂ ಚೈತನ್ಯ ನೀಡಬೇಕು, ಗಾಳಿಯಂತೆ ಸರ್ವರಿಗೂ ಜೀವ ನೀಡಬೇಕು. ಅಗ್ನಿಯಂತೆ ಸರ್ವರಿಗೂ ಪ್ರಯೋಜನಕಾರಿಯಾಗಬೇಕು. ಎಲ್ಲರಿಗೂ ಒಳತನ್ನು ಮಾಡಲಿ.
ಜನಾಂಗೀಯ ಬೇಧವಿರಕೂಡದು.
ಉಚ್ಚ-ನೀಚ ಬೇಧಭಾವವಿರಕೂಡದು.
ವರ್ಣಗಳ ಬೇಧಬಾವವಿರಕೂಡದು.
ಈ ದೇಶ - ಆ ದೇಶವೆಂದು ಬೇಧಭಾವವಿರಕೂಡದು.
ರಾಜ್ಯಗಳ ನಡುವೆ ಬೇಧಭಾವವಿರಕೂಡದು.
ಭಾಷೆಗಳ ಆಧಾರಿತ ಬೇಧಭಾವವಿರಕೂಡದು.
ಧರ್ಮಗಳ ಆಧಾರಿತ ಬೇಧಭಾವವಿರಕೂಡದು.
ಜಾತಿಗಳ ಆಧಾರಿತ ಬೇಧಭಾವವಿರಕೂಡದು.
ಬಡವ-ಶ್ರೀಮಂತ ಎಂಬ ಯಾವುದೇ ಬೇಧಭಾವವಿರಕೂಡದು.
ಪಾಪಿ-ಪುಣ್ಯಶಾಲಿಯೆಂಬ ಬೇಧಭಾವವಿರಕೂಡದು.
ಒಟ್ಟಾರೆ ಯಾವುದೇ ಬೇಧಭಾವವಿರಕೂಡದು.
ಯಾರು ಇನ್ನೂ ಭೇಧಭಾವದಲ್ಲೇ ಇರುವರೋ ಅವರ ಆಧ್ಯಾತ್ಮಿಕತೆ ಅಥವಾ ಪರಮಾರ್ಥ ಇನ್ನೂ ವಿಕಸಿತವಾಗಿಲ್ಲ ಎಂದೇ ಅರ್ಥ.
ಎಲ್ಲರಿಗೂ ಮಂಗಳವಾಗಲಿ.
ಎಲ್ಲರೂ ಸುಖಿಯಾಗಿರಲಿ.
ಎಲ್ಲರೂ ದುಃಖಗಳಿಂದ ಮುಕ್ತರಾಗಲಿ.
ಎಲ್ಲರೂ ಅಭಿವೃದ್ಧಿಯನ್ನು ಹೊಂದಲಿ.
ಎಲ್ಲರೂ ವ್ಯಕ್ತಿತ್ವ ವಿಕಾಸ ಹೊಂದಲಿ.
ಎಲ್ಲರೂ ಪರಿಪೂರ್ಣರಾಗಲಿ.
ಎಲ್ಲರೂ ಎಲ್ಲರ ಒಳಿತನ್ನು ಬಯಸಲಿ.
ಎಲ್ಲರೂ ಎಲ್ಲರ ಒಳಿತನ್ನು ಮಾಡಲಿ.
No comments:
Post a Comment