ಅಳುವಿಗೆ ಆನಂದವೇ ಕಾರಣ
ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಹೀಗೆ ಹೇಳಿದರು:ಭಿಕ್ಷುಗಳೇ, ಯಾರು ಶರೀರದ ಬಗ್ಗೆ ಆನಂದಿಸುವರೋ, ಅವರು ದುಃಖವನ್ನು ಪಡೆಯುತ್ತಾರೆ. ಆತನ ಬಗ್ಗೆ ನಾನು ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿಲ್ಲ. ಹಾಗೆಯೇ ಯಾರು ವೇದನೆಗಳಲ್ಲಿ (ಸುಖಾನುಭವ, ದುಃಖಾನುಭವ, ತಟಸ್ಥಾನುಭವ) ಆನಂದಿಸುವನೋ, ಆತನು ದುಃಖವನ್ನು ಪಡೆಯುತ್ತಾನೆ. ಹಾಗೆಯೇ ಯಾರು ಚಿತ್ತದ ಚಟುವಟಿಕೆಗಳಲ್ಲಿ (ಸಂಖಾರಗಳಲ್ಲಿ)... ವಿಞ್ಞಾನ (ಅರಿವಿನಲ್ಲಿ) ದಲ್ಲಿ ಆನಂದಿಸುವನೋ ಆತನು ದುಃಖವನ್ನು ಪಡೆಯುತ್ತಾನೆ. ನಾನು ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿಲ್ಲ. ಆದರೆ ಯಾರು ಶರೀರದಲ್ಲಿ, ವೇದನೆಗಳಲ್ಲಿ, ಗ್ರಹಿಕೆಗಳಲ್ಲಿ, ಚಿತ್ತದ ಚಟುವಟಿಕೆಗಳಲ್ಲಿ ಮತ್ತು ಅರಿವಿನಲ್ಲಿ ಆನಂದಿಸುವುದಿಲ್ಲವೋ ಆತನು ದುಃಖದಲ್ಲಿ ಆನಂದಿಸುವುದಿಲ್ಲ. ನಾನು ಆತನ ಬಗ್ಗೆ ಖಚಿತವಾಗಿ ಹೇಳುವುದು ಏನೆಂದರೆ ಆತನು ದುಃಖದಿಂದ ಮುಕ್ತನಾಗಿದ್ದಾನೆ.
No comments:
Post a Comment