Friday, 22 November 2019

ಬುದ್ಧ ವಂದನ ಹಾಗೂ ಬುದ್ಧಪೂಜೆ BUDDHA VANDANA & BUDDHA PUJE

 ಬುದ್ಧ ವಂದನ ಹಾಗೂ ಬುದ್ಧಪೂಜೆ

ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
ನಮೋ ತಸ್ಸ ಭಗವತೋ, ಅರಹತೋ, ಸಮ್ಮಸಂಬುದ್ಧಸ್ಸ
(ಅರಹಂತರೂ ಹಾಗೂ ಸಮ್ಮಸಂಬುದ್ಧರೂ ಆಗಿರುವ ಭಗವಾನರಿಗೆ ವಂದನೆಗಳು.)
ಇತಿ ಪಿ ಸೊ ಭಗವಾ ಅರಹಂ, ಸಮ್ಮಾಸಂಬುದ್ಧೊ
ವಿಜ್ಜಾಚರಣಸಂಪನ್ನೋ, ಸುಗತೋ, ಲೋಕವಿದೋ, 
ಅನುತ್ತರೊ, ಪುರಿಸದಮ್ಮ ಸಾರಥಿ, ಸತ್ಥಾ ದೇವಮನುಸ್ಸಾನಂ
ಬುದ್ಧೊ ಭಗವಾತಿ
    ಯೇಚ ಬುದ್ಧಾ ಅತೀತಾ ಚ
ಯೇಚ ಬುದ್ಧಾ ಅನಾಗತಾ
ಪಚ್ಚುಪ್ಪನ್ನಾಚಯೇ ಬುದ್ಧಾ
ಅಹಂ ವಂದಾಮಿ ಸಬ್ಬದಾ
ನತ್ಥಿಮೇ ಸರಣಂ ಅಞ್ಞಂ
ಬುದ್ಧೋಮೆ ಸರಣಂ ವರಂ.
ಏತೇನ ಸಚ್ಛವಜ್ಜೇನ,
ಹೋತು ನೊ ಜಯಮಙ್ಗಳಂ
ಉತ್ತಮಙ್ಗೇನ ವನೇಹಂ
ಪಾದಪಂಸು ವರುತ್ತಮಂ
ಬುದ್ಧೇ ಯೋ ಖಲಿತೋ ದೋಸೋ
ಬುದ್ಧೋ ಖಮತು ತಂ ಮಮಂ
ಬುದ್ಧಂ ಯಾವ ನಿಬ್ಬಾಣ ಪರಿಯಂತಂ
ಸರಣಂ ಗಚ್ಛಾಮಿ 
   ಭಗವಾನರು ಇಂತಿರುವವರು : ಅವರು ಅರ್ಹಂತರು, ಸಮ್ಯಕ್ ಸಂಬುದ್ಧರು, ವಿದ್ಯಾಚರಣ ಸಂಪನ್ನರು, ಸುಗತರು, ಲೋಕವಿಧರು, ಅನುತ್ತರರು, ಪುರುಷರನ್ನು(ವ್ಯಕ್ತಿಗಳನ್ನು )ದಮಿಸುವ ಸಾರಥಿಯು, ದೇವತೆಗಳ ಹಾಗೂ ಮಾನವರ ಗುರುವು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.
ಹಿಂದಿನ ಎಲ್ಲಾ ಬುದ್ಧರೆಲ್ಲರಿಗೂ
ಮುಂದಿನ ಎಲ್ಲಾ ಬುದ್ಧರೆಲ್ಲರಿಗೂ ಮತ್ತು
ವರ್ತಮಾನದಲ್ಲಿ ಇರುವ ಬುದ್ಧರಿಗೂ ನಾನು ವಂದಿಸುವೆನು.
ನಾನು ಯಾವಾಗಲೂ ವಿನಯ ಪೂರ್ವಕವಾಗಿ ನಮಸ್ಕರಿಸುತ್ತೇನೆ.
ಬೇರೆಲ್ಲಿಯೂ ನನಗೆ ರಕ್ಷಣೆ ಇಲ್ಲ.
ಬುದ್ಧರು ನನ್ನ ಶ್ರೇಷ್ಠ ರಕ್ಷಕರು
ಈ ಸತ್ಯವಚನದಿಂದ ನನಗೆ ಜಯಮಂಗಳವಾಗಲಿ !
ಅವರ ಪವಿತ್ರ ಪಾದಧೂಳಿಯನ್ನು ನನ್ನ ಶಿರಸ್ಸಿನಿಂದ ಪೂಜಿಸುತ್ತೇನೆ.
ನಾನೇನಾದರೂ ಬುದ್ಧರಲ್ಲಿ ಎಸಗಿದ ತಪ್ಪಿದ್ದರೆ ಬುದ್ಧರು ನನ್ನನ್ನು ಕ್ಷಮಿಸಲಿ. ನಾನು ನಿಬ್ಬಾಣ ಸಾಧಿಸುವವರೆಗೂ ಬುದ್ಧರಲ್ಲಿ ಶರಣು ಹೋಗುತ್ತೇನೆ.
ನಾನು ಬುದ್ಧರ ಚೇತಿಯಗಳೆಲ್ಲವನ್ನು ವಂದಿಸುತ್ತೇನೆ,
ಜಗತ್ತಿನ ಎಲ್ಲಡೆ ಎಲ್ಲೇ ಭಗವಾನರ ಶಾರೀರಿಕ ಧಾತುಗಳಾಗಲಿ,
ಮಹಾ ಬೋಧಿವೃಕ್ಷವಾಗಲಿ, ಭಗವಾನರ ರೂಪಗಳಾಗಲಿ (ವಿಗ್ರಹವಾಗಲಿ ಅಥವಾ ಭಾವ ಚಿತ್ರವಾಗಲಿ)
ಆ ಸಕಲಕ್ಕೂ ವಂದಿಸುವೆನು..
ಈ ತ್ರಿರತನ ವಂದನೆಗಳಿಂದ ಲಭಿಸುವ ಆಪಾರ ಪುಣ್ಯಗಳಿಂದಾಗಿ
ನನ್ನ ತಡೆಗಳೆಲ್ಲವೂ ದೂರಾಗಲಿ
ಮೋಹಾಂಧಕಾರಗಳನ್ನು ದೂರಾಗಿಸುವ ತ್ರಿಲೋಕ ಪ್ರದೀಪಕರಾಗಿರುವ ಪರಿಪೂರ್ಣ ಬುದ್ಧರಿಗೆ ಅಂಧಕಾರವನ್ನು ದೂರಾಗಿಸುವ ದೀಪಗಳಿಂದ ನಾನು ಪೂಜಿಸುವೆನು.
ದಾನಕ್ಕೇ ಪರಮಾರ್ಹರಾಗಿರುವ ಸದ್ಗುಣಸುಗಂಧಿತರಾಗಿರುವ ಭಗವಾನರಿಗೆ ಗಂಧ ಸಂಬಾರಯುಕ್ತಾದಿಗಳಿಂದ ಪೂಜಿಸುವೆನು.
ಮುನೀಂದ್ರರರ ಪದ್ಮಪಾದಗಳಿಗೆ ಸುಂದರ ವರ್ಣಗಂಧಯುಕ್ತವಾದ ಕುಸುಮಗಳಿಂದ ಪೂಜಿಸುವೆನು. ಇದರಿಂದಾಗಿ ಮೋಕ್ಷವು ದೊರೆಯಲಿ. ಹೇಗೆ ಈ ಹೂಗಳು ಬಾಡಿ ಒಣಗಿ ಹೋಗುವವೋ ಹಾಗೇಯೆ ಈ ಶರೀರವೂ ಸಹಾ
ಈ ರೀತಿಯ ಹಾಗೂ ಇತರ ಧಮ್ಮಾಚರಣೆಯಿಂದ ನಾನು ಬುದ್ಧರನ್ನು ಪೂಜಿಸುವೆ.
    ಧಮ್ಮವನ್ನು(ಜ್ಞಾನವನ್ನು ಅಥವಾ ಬೋಧನೆಯನ್ನು) ದಶರ್ಿಸುವುದೇ ಬುದ್ಧರನ್ನು ದಶರ್ಿಸುವಂತೆ ಎಂದು ಸ್ವತಃ ಬುದ್ಧರೇ ಹೇಳಿದ್ದಾರೆ.
   ರೋಗಿಗಳಿಗೆ (ದುಃಖಿತರಿಗೆ) ಸೇವೆ ಮಾಡುವುದೇ ಬುದ್ಧರಿಗೆ ಸೇವೆ ಮಾಡಿದಂತೆ ಎಂದು ಸ್ವತಃ ಬುದ್ಧರೇ ಹೇಳಿದ್ದಾರೆ. ಮತ್ತು ಮಹಾಪರಿನಿಬ್ಬಾನ ಸುತ್ತದಲ್ಲಿ ಭಗವಾನರು ಆನಂದನಿಗೆ ಹೀಗೆ ಹೇಳಿದ್ದಾರೆ ಈ ಕಾಲದಲ್ಲಿ ಶಾಲವೃಕ್ಷ ಜೀವಿಯು ಹೂಗಳಿಂದ ತುಂಬಿಹೋಗಿದೆ. ಆ ಹೂಗಳು ತಥಾಗತನನ್ನು ಪೂಜಿಸಲು ಅವನ ಶರೀರದ ಮೇಲೆ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಮಂದಾರ ಪುಷ್ಪಗಳು ಅಂತರಿಕ್ಷದಿಂದ ಸುರಿಯುತ್ತಿವೆ. ತಥಾಗತನನ್ನು ಪೂಜಿಸುವ ಸಲುವಾಗಿ ಆ ಪುಷ್ಪಗಳು ಅವನ ಶರೀರದ ಮೇಲೆ ಹರಡಿಕೊಂಡು ಅವನ್ನು ಮುಚ್ಚಿಬಿಟ್ಟಿವೆ. ದಿವ್ಯವಾದ ಚಂದನ ಚೂರ್ಣವು ಅಂತರಿಕ್ಷದಿಂದ ಬೀಳುತ್ತಿದೆ. ತಥಾಗತನನ್ನು ಪೂಜಿಸಿ ಆತನ ಶರೀರದ ಮೇಲೆಲ್ಲಾ ಹರಡಿಕೊಂಡು ಅದನ್ನು ಮುಚ್ಚಿಬಿಟ್ಟಿದೆ. ತಥಾಗತನ ಪೂಜೆಗೆ ತಕ್ಕಂತೆ ಅಂತರಿಕ್ಷದಲ್ಲಿ ದಿವ್ಯವಾದ ಸಂಗೀತವೂ ಸಂಗೀತವಾದ್ಯಗಳೂ ಅಂತರಿಕ್ಷದಲ್ಲಿ ಮೊಳಗುತ್ತಿವೆ. ಅದರೆ ತಥಾಗತನನ್ನು ಗೌರವಿಸುವುದೂ, ಮಾನ್ಯ ಮಾಡುವುದೂ ಪೂಜಿಸುವುದೂ ಅವನಿಗೆ ಭಕ್ತಿ ತೋರಿಸುವುದೂ ಹೀಗಲ್ಲ. ಆನಂದ, ಯಾವ ಭಿಕ್ಷು ಭಿಕ್ಷುಣಿಯರೂ ಉಪಾಸಕ ಉಪಾಸಿಕೆಯರೂ ಧಮ್ಮ ಅನುಧಮ್ಮದಂತೆ ನಡೆದು ಸನ್ಮಾರ್ಗದಲ್ಲಿ ನಡೆಯುತ್ತಾ (ಅಸ್) ಧರ್ಮಚಾರಿಗಳಾಗಿದ್ದಾರೋ ಅವರು ಮಾತ್ರ ತಥಾಗತನನ್ನು ಸತ್ಕರಿಸುತ್ತಾರೆ ಗೌರವಿಸುತ್ತಾರೆ. ಆತನಿಗೆ ಮಾನ್ಯ ಮಾಡುತ್ತಾರೆ, ಆತನನ್ನು ಪೂಜಿಸುತ್ತಾರೆ, ಆತನಿಗೆ ಭಕ್ತಿ ತೋರಿಸುತ್ತಾರೆ. ಆತನಿಗೆ ಇದೇ ಪರಮಪೂಜೆ. ಆದುದರಿಂದ, ಆನಂದ, ಧರ್ಮ ಮತ್ತು ಅನುಧರ್ಮಗಳಂತೆ ನಡೆಸು ಸನ್ಮಾರ್ಗದಲ್ಲಿ ನಡೆಯುತ್ತಾ  ಧರ್ಮಚಾರಿಯಾಗಿ ಬಾಳಿ, ಇದನ್ನು ಕಲಿಯತಕ್ಕದ್ದು ಆನಂದ.

No comments:

Post a Comment