ಹೆಣ್ಣು ಮಗುವು ಅಶುಭವೇ?
ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಮಹಾರಾಜ ಪಸೇನದಿಯು ಭಗವಾನರಲ್ಲಿಗೆ ಬಂದನು. ಮತ್ತು ವಂದಿಸಿ ಅವರೊಂದಿಗೆ ಮಾತನಾಡುತ್ತ ಕುಳಿತಿರುವಾಗ, ರಾಜಧೂತರು ಅಲ್ಲಿಗೆ ಬಂದು ರಾಜನ ಕಿವಿಯಲ್ಲಿ, ಮಹಾರಾಣಿ ಮಲ್ಲಿಕಾಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ನುಡಿದರು. ಆಗ ಪಸೇನದಿ ಮಹಾರಾಜನು ಅಸಂತುಷ್ಟನಾದನು.
ಆಗ ಭಗವಾನರಿಗೆ ವಿಷಯ ಅರಿವಾಗಿ ಈ ಗಾಥೆ ನುಡಿದರು:
ಓ ಮಹಾರಾಜ, ಹೆಣ್ಣು ಮಗುವು ಗಂಡು ಮಗುವಿಗಿಂತ ಉತ್ತಮಳೆಂದು ರುಜುವಾತು ಮಾಡಬಲ್ಲಳು. ಹೇಗೆಂದರೆ ಆಕೆ ಶೀಲವಂತೆಯಾಗಿ, ಪ್ರಜ್ಞಾವಂತೆಯಾಗಿ ಬೆಳೆದು ಅತ್ತೆ ಮನೆಯಲ್ಲಿ ಗೌರವಯುತವಾಗಿದ್ದು, ನಿಜಪತ್ನಿಯಾಗಿರುತ್ತಾಳೆ. ಮಹತ್ಕಾರ್ಯಗಳನ್ನು ಮಾಡುವಂತಹ ಮಹಾ ಕ್ಷೇತ್ರಗಳನ್ನು ಆಳುವಂತಹ ಸುಪುತ್ರನನ್ನು ಹೆರುತ್ತಾಳೆ. ಅಂತಹ ಮಗನಿಗೆ, ಯೋಗ್ಯ ಪತ್ನಿ ದೊರೆತರೆ ಆಕೆ ದೇಶಕ್ಕೆ ಮಾರ್ಗದಶರ್ಿಯು ಆಗುತ್ತಾಳೆ.
No comments:
Post a Comment