Friday, 4 October 2019

ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ kathina civara dana


ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ


ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.

ಕಠಿನವೆಂದರೆ ಕಠಿಣ, ಕಷ್ಟಕರ, ಬಿರುಸು ಒರಟು ಇತ್ಯಾದಿ ಆರ್ಥಗಳಿವೆ. ಅದರೆ ಇಲ್ಲಿ ಕಠಿನ ವೆಂದರೆ ವರ್ಷವಾಸದ ಅಂತ್ಯದಲ್ಲಿ ಭಿಕ್ಖುಗಳಿಗೆ ವಾಷರ್ಿಕವಾಗಿ ನೀಡುವ ಚೀವರ(ಭಿಕ್ಖುಗಳು ಧರಿಸುವ ವಸ್ತ್ರ) ವಸ್ತ್ರವಾಗಿದೆ. ಚೀವರವು ಪಾಲಿಯ ಪದವಾಗಿದ್ದು, ಕಠಿಣ ಚೀವರವಾಗಿದೆ. ಈ ಕಠಿನವಸ್ತ್ರವನ್ನು(ಒರಟಾದ ಕಾಷಾಯ ವಸ್ತ್ರ) ಸಂಘಕ್ಕೆ ಉಪಾಸಕರು ನೀಡುವರು.

ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕ್ಕೆ ಅನುಮತಿ ನೀಡಿದರು.

ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ಹುಟ್ಟಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.

    ಇಂದು ಕಠಿನ ಚೀವರ ಸಮಾರಂಭವು ಪರಂಪರಾಗತ ಎಲ್ಲಾ ಬೌದ್ಧ ದೇಶಗಳಲ್ಲಿ ಅತಿ ದೊಡ್ಡ ಹಬ್ಬವಾಗಿ ಆಚರಿಸಲಾಗುವುದು. ಆ ಇಡೀ ದಿನವು ಬೌದ್ಧರು ದಾನಾದಿ ಪುಣ್ಯಕಮ್ಮಗಳನ್ನು ಮಾಡುತ್ತ ಆನಂದಿಸುವರು. ಜನರೆಲ್ಲ ವಿಹಾರಕ್ಕೆ ಭೇಟಿ ನೀಡುವರು. ಅಲ್ಲಿ ಸೇರಿ ಪಂಚ ಶೀಲ ಅಥವಾ ಅಷ್ಟಾಂಗ ಶೀಲವನ್ನು ಸಂಕಲ್ಪಿಸಿ, ಧಮ್ಮವನ್ನು ಆಲಿಸುತ್ತಾರೆ. ಅಲ್ಲಿ ಉಪಾಸಕರಲ್ಲಿ ಪ್ರತಿನಿಧಿಯಾಗಿರುವವರು ದಾನಗಳನ್ನು ಘೋಷಿಸುತ್ತಾರೆ ಹಾಗೂ ಸಂಘದ ಅವಶ್ಯಕತೆಗಳನ್ನು ಶ್ರದ್ಧಾಪೂರ್ವಕವಾಗಿ ನೀಡುತ್ತಾರೆ. ನಂತರ ಸಂಘಕ್ಕೆ ವಿಧೇಯತೆಯಿಂದ ಆಹಾರವನ್ನು ಬಡಿಸುತ್ತಾರೆ. ಈ ಸಮಾರಂಭದ ಅಂತ್ಯವು ಪುಣ್ಯಾನುಮೋದನೆಯಿಂದ ಆಗುವುದು ಅಂದರೆ ಜ್ಞಾತಿಗಳಿಗೆ(ಮರಣಹೊಂದಿರುವ ಸಂಬಂದಿಕರಿಗೆ) ಹಾಗೂ ಎಲ್ಲಾ ಜೀವಿಗಳಿಗೆ ತಮ್ಮ ದಾನದ ಫಲದ ಪುಣ್ಯವನ್ನು ಹಂಚುವುದು. ಸಂಜೆ ಜನರು ಬೌದ್ಧರು ಬೌದ್ಧ ಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ.

   ಅದರೆ ಭಿಕ್ಖುಗಳು ವಷರ್ಾವಾಸದ ಇಡೀ ಸಮಯವನ್ನು ಧಮ್ಮ ಅಧ್ಯಾಯನ, ದೀರ್ಘಕಾಲದ್ಲ ಧ್ಯಾನಗಳಲ್ಲಿ ತೊಡಗಿ, ಆಹಾರ, ನಿದ್ದೆ, ಇತ್ಯಾದಿಗಳ ಸುಖಗಳನ್ನೂ ಕಡಿತಗೊಳಿಸಿರುತ್ತಾರೆ.
 ಅದ್ದರಿಂದಲೇ ಕಠಿನ ಸಮಾರಂಭವು ಅತಿ ಹೆಚ್ಚು ಧೃಡನಿಧರ್ಾರ, ಸ್ಥಿರತೆಗೆ, ಶಾಂತತೆಗೆ ಹೆಚ್ಚು ಒತ್ತು ನೀಡುವುದು. ಹಾಗೂ ಪ್ರಾಯೋಜಕರು ,ದಾನಿಗಳು ಅಗಣಿತವಾಗಿ ಅಳೆಯಲಾಗದಷ್ಟು ಪುಣ್ಯವನ್ನು ಪಡೆಯುತ್ತಾರೆ. ಈ ಸಮಾರಂಭವು ಸಮಾನ್ಯ ದಾನಕ್ಕಿಂತಲೂ ವಿಶೇಷವಾದುದು. ಇದು ಅತ್ಯಂತ ಪ್ರಮುಖವಾದ ಮತ್ತು ಅತ್ಯಂತ ಲಾಭದಾಯಕ ಕುಶಲಕಮ್ಮವಾಗಿದೆ. ಇದು ನಮ್ಮೆಲ್ಲರ ಆಂತರ್ಯದಲ್ಲಿ ಹುದುಗಿರುವ ಕುಶಲ ಕಮ್ಮಗಳನ್ನು ವಿಕಾಸಿಸುವ ಅತ್ಯುತ್ತಮ ಅವಕಾಶವಾಗಿದೆ. ಮತ್ತು ಇದರಿಂದಾಗಿ ನಿಬ್ಬಾಣವನ್ನು ಪಡೆಯಲು ಬೇಕಾಗಿರುವ ಉನ್ನತ ಮಂಗಳಕರ ಹಾರೈಕೆಗಳು ಸಿಗುವವು.

No comments:

Post a Comment