Tuesday, 17 September 2019

ಅನಗಾರಿಕ ಧಮ್ಮಪಾಲ anagarika dhammapala in kannada

                      ಅನಗಾರಿಕ ಧಮ್ಮಪಾಲ 

    ಇವರ ಪೂರ್ಣ ಹೆಸರು ಶ್ರಿಮತ್ ಅನಗಾರಿಕ ಧಮ್ಮಪಾಲ. ಅದರೆ ಬಾಲ್ಯದ ಹೆಸರು ಡಾನ್ ಡೆವಿಡ್ ಹೆವತಿತರನೆ. ಇವರು ಹುಟ್ಟಿದ್ದು 17-9-1864 ರಂದು. ಕೊಲೊಂಬೊದಲ್ಲಿ. ಇವರು ಶ್ರೀಲಂಕದಲ್ಲಿ ಹಾಗೂ ಭಾರತದಲ್ಲಿ ಹಲವಾರು ಶತಮಾನಗಳಿಂದಲೇ ಕಣ್ಮರೆಯಾಗಿದ್ದಂತಹ ಬೌದ್ಧದಮ್ಮವನ್ನು ಪುನರುಜ್ಜಿವನಗೋಳಿಸಿದವರು. ಹಾಗೂ ಖ್ಯಾತ ಲೇಖಕರು. ಹಾಗೆಯೇ ಮೊದಲ ವಿಶ್ವಮಟ್ಟದ ಬೌದ್ಧಪ್ರಚಾರಕರು ಸಹಾ. ಭಾರತದಂತೆ ಶ್ರೀಲಂಕವೂ ಸಹಾ ಬ್ರಿಟಿಶರ ದಬ್ಬಾಳಿಕೆಗೆ ಗುರಿಯಾಗಿದ್ದಂತಹ ದೇಶ. ಆಗ ಆ ಸಮಯದಲ್ಲಿ ಇವರು ಸಹಾ ಶ್ರೀಲಂಕದಲ್ಲಿ ಅಹಿಂಸಾತ್ಮಾಕ ಸ್ವತಂತ್ರ ಚಳುವಳಿಯ ರೂವಾರಿಯಾಗಿದ್ದರು. ಅವರೊಬ್ಬರೇ ಏಶಿಯಾ, ಯೂರೋಫ್ ಹಾಗೂ ಉತ್ತರ ಅಮೇರಿಕದಲ್ಲಿ ಅಂದರೆ ತ್ರಿಖಂಡದಲ್ಲಿ ಪ್ರಥಮ ಬಾರಿಗೆ ಬೌದ್ಧದಮ್ಮವನ್ನು ಹಾಗೂ ಅದರ ಉತ್ಕೃಷ್ಟತೆಯನ್ನು ಸಾರಿದಂತಹ ಮಾಹಾನುಭಾವರು ಆಗಿದ್ದಾರೆ.

  ಬುದ ್ಧಧಮ್ಮ ಸಂಜೀವಕ :

 ಹೆಲೆನಾ ಬ್ಲಾವಟ್ಸಕಿ ಹಾಗೂ ಹೆನ್ರಿ ಸ್ಟೀಲ್ ಒಲ್ಕೊಟ್ರವರು ಥಿಯಾಸೊಫಿಕಲ್ ಸೊಸೈಟಿಯ ಸೃಷ್ಟಿಕರ್ತರು ಇವರು ಬೌದಧಮ್ಮ್ಧವನ್ನು ಅಭ್ಯಸಿಸಿ ಅದರ ಮಹತ್ವ ಕಂಡು ಅದರ ಉನ್ನತ ವಾಸಂಗಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಅವರು ಶ್ರೀಲಂಕಕ್ಕೆ  ಬಂದರು. ಅಲ್ಲಿ ಅವರು ಬಹಿರಂಗವಾಗಿಯೇ ತಿರತನಕ್ಕೆ ಶರಣು ಹೊಂದಿದರು. ಹಾಗೂ ಶೀಲಗಳ ದೀಕ್ಷೆ ತೆಗೆದುಕೊಂಡರು. ಇವರಲ್ಲಿ ಹೆನ್ರಿಯವರಂತು ಶ್ರೀಲಂಕದ ಬೌದ್ಧ ವಿಧ್ಯಾಭ್ಯಾಸಕ್ಕೆ ಕಾರಣಕರ್ತರಾದರು.  ಅವರು ಅಲ್ಲಿ 300 ಬೌದ್ಧಶಾಲೆಗಳನ್ನು ತೆರೆದರು. ಆ ಸಮಯದಲ್ಲಿ ಕ್ರೈಸ್ತರಾಗಿದ್ದಂತಹ ಡಾನ್ ಡೆವಿಡ್ರವರು ಬೌದ್ಧರಾಗಿ ಅನಗಾರಿಕ ಧಮ್ಮಾಪಾಲರಾದರು. ಅನಗಾರಿಕ ಎಂದರೆ ಮನೆಯಿಲ್ಲವರು ಅಥವಾ ಪಾರಿವ್ರಜಕ ಅಂದರೆ 8 ಶೀಲಗಳನ್ನು ಪಾಲಿಸುವವನು  ಎಂದರ್ಥ.  ಧಮ್ಮಪಾಲ ಎಂದರೆ ಧಮ್ಮವನ್ನು ರಕ್ಷಿಸುವವರು ಹಾಗೂ ಪಾಲನೆ ಮಾಡುವವರು. ಇವರು ಜೀವನವಿಡಿ ಈ ಅಷ್ಟಾಂಗ ಶೀಲದಾರಣೆ ಮಾಡಿದರು. ಇವರನ್ನು ಸಿಂಹಳಿಯರು ಬೋಧಿಸತ್ವ ಎಂದು ಕರೆಯುತ್ತಾರೆ. ಇವರು ಹನ್ರಿ ಹಾಗೂ ಹೆಲೆನರವರ ಜೋತೆಗೊಡಿ ಇವರು ಮೊದಲು ಶ್ರೀಲಂಕದಲ್ಲಿ ಸಾಮಾಜಿಕ ಹಾಗೂ ಧಾಮರ್ಿಕ ಸುಧಾರಣೆಗಳನ್ನು ಮಾಡಿದರು. ನಂತರ ಪಾಶ್ಚಿಮಾತ್ಯರಲ್ಲು ಬೌದ್ಧ ಕ್ರಾಂತಿಯನ್ನು ಎಬ್ಬಿಸಿ ಅವರಲ್ಲು ಪರಿವರ್ತನೆಯನ್ನುಂಟು ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ಗಿಂತ ಅರ್ಧ ಶತಮಾನದ ಮುಂಚೆಯೇ ಇವರು ಭಾರತದಲ್ಲಿ ಸೌಜನ್ಯಕಾರಕ ರೀತಿಯಲ್ಲಿ ಬುದ್ಧರ ಬೋಧನೆ ಹರಡಿದರು. ಆಗ ಅಸಂಖ್ಯಾತ ತಮಿಳರು ಬೌದ್ಧದಮ್ಮದೆಡೆಗೆ ಮರಳಿ ಬಂದರು.

ವಿಶ್ವ ಬೌದ್ಧ ಪ್ರತಿಪಾದಕ : 

ಧಮ್ಮಪಾಲರು 1893ರಲ್ಲಿ ಚಿಕಾಗೊವಿನ ವಿಶ್ವಧರ್ಮಸಮ್ಮೆಳನಕ್ಕೂ ಹೋಗಿದ್ದರು. ಅಲ್ಲಿ ಅವರು ಥೇರವಾದ ಬೌದ್ಧದಮ್ಮದ ಪ್ರಧಾನ ಪ್ರತಿನಿಧಿಯಾಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿದ್ದರು. ಇಬ್ಬರು ಅಲ್ಲಿ ಅನ್ಯೊನ್ಯವಾಗಿದ್ದರು. ವಿಶ್ವಧರ್ಮ ಸಮ್ಮೇಳನದಲ್ಲಿ ಅವರ ಪ್ರವಚನವೊಂದನ್ನು ನೀಡಿದರು ಅದೆಂದರೇ "ವಿಶ್ವವು ಬುದ್ಧರಿಗೆ ಋಣಿಯಾಗಿದೆ" ಇದು ಅತ್ಯಂತ ಜನಪ್ರಿಯವಾಯಿತು.  ಅಲ್ಲಿಂದ ಅವರು 40 ವರ್ಷಗಳ ಕಾಲ ಜಗತ್ತಿನಾದ್ಯಾಂತ ಧಮ್ಮವನ್ನು ಹರಡಿದರು. ಹಾಗೆಯೇ ಶ್ರೀಲಂಕದಲ್ಲಿ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಿದರು. ಹಾಗೂ ಬಾರತದಲ್ಲಿ ವಿಹಾರಗಳನ್ನು ಕಟ್ಟಿದರು.  ಅದರಲ್ಲಿ ಪ್ರಾಧಾನವಾದುದೆಂದರೆ ಸಾರಾನಾಥದ ಚೈತ್ಯ.
ಅವರು ಅನೇಕ ಪ್ರವಚನಗಳನ್ನು ನೀಡಿದ್ದಾರೆ ಹಾಗೂ ಅನೇಕ ಗೃಂಥಗಳನ್ನು ಬರೆದಿದ್ದಾರೆ.
ವಿಶ್ವವು ಬುದ್ಧರಿಗೆ ಋಣಿಯಾಗಿದೆ,
ಅವೆಂದರೇ ಬೌದ್ಧದರ್ಮದ ಸಾಕಾರಾತ್ಮಕ ಆಶಾವಾದ,
ಬುದ್ಧರ ಸಂದೇಶ,
ಇತ್ಯಾದಿ


      ಬುದ್ಧಗಯಾದ ಪುನರ್ನಿಮರ್ಾತ :

 ಇವರು 1891ರಲ್ಲಿ ಬೋಧ್ಗಯಾಗೆ ಬೇಟಿ ನೀಡುತ್ತಾರೆ. ಆಗ ಅವರಿಗೆ ಅಳುವೇ ಬಂದು ಬಿಟ್ಟಿತು ಏಕೆಂದರೆ ಸಾಮ್ರಾಟ್ ಅಸೋಕನು ಕಟ್ಟಿಸಿದ ಚೈತ್ಯವು ಶಿಥಿಲವಾಗಿತ್ತು. ಅಲ್ಲಿ ಬೌದ್ಧರೆನಿಸಿಕೊಳ್ಳುವವರು ಯಾರು ಇಲ್ಲ. ಅದು ಶೈವರ ಬ್ರಾಹ್ಮಣರ ಆಡಳಿತದಲ್ಲಿತ್ತು. ಬುದ್ಧರ ವಿಗ್ರಹವನ್ನು ಹಿಂದು ವಿಗ್ರಹದಂತೆ ಬದಲಾಯಿಸಿತ್ತು. ಅಲ್ಲಿ ಶೈವರು ಬೌದ್ಧರನ್ನು  ಬರಲು ಬಿಡುತ್ತಿರಲಿಲ್ಲ. ಹೀಗಾಗಿ ಇವರು ಅಲ್ಲಿ ದ್ಯಾನ ಮಾಡಲು ಸಹಾ ಆಗಲಿಲ್ಲ. ಅವರಿಗೆ ಅಪಾರ ದುಃಖವಾಯಿತು. ಅವರು ಅಂದೇ ಈ ರೀತಿಯ ಬೌದ್ಧರ ಪ್ರತಿಯೊಂದನ್ನು ಮರಳಿ ಬೌದ್ಧರಿಗೆ ಮರಳಿಸುವ ಧೃಢ ಸಂಕಲ್ಪ ತಾಳಿದರು. ಪರಿಣಾಮವಾಗಿ ಕೊಲೊಂಬೊದಲ್ಲಿ 1891 ರಲ್ಲಿ ಹಾಗೂ 1892 ರಲ್ಲಿ ಕಲ್ಕತ್ತದಲ್ಲಿ ಮಹಾಬೋಧಿ ಸೊಸೈಟಿಯನ್ನು ಸ್ಥಾಪಿಸಿದರು. ಹಾಗೂ ಬೌದ್ಧರ ಪವಿತ್ರ ಕ್ಷೇತ್ರಗಳಾದ ಲುಂಬಿಣಿ. ಬೋಧ್ಗಯಾ, ಸಾರಾನಾಥ, ಹಾಗೂ ಕುಸಿನಾರದಲ್ಲಿ ಅವನೆಲ್ಲಾ ಮರಳಿ ಬೌದ್ಧರಿಗೆ ನೀಡುವಂತೆ ಅವರು ಕೇಸನ್ನು ಹಾಕಿದರು. ಅದರೆ ಅದು ಯಶಸ್ಸು ಕಂಡಿದ್ದು ಮಾತ್ರ 16 ವರ್ಷಗಳ ನಂತರ 1947 ರಲ್ಲಿಯೇ. ಅದರೆ ಅದರ ವಿಮೋಚನೆ ಹೋರಾಡುತ್ತಲೆ 1933ರಲ್ಲೆ ಪ್ರಾಣ ಬಿಟ್ಟರು . ಅವರು ಅದೇ ವರ್ಷ ಭಿಕ್ಖುಗಳಾಗಿದ್ದರು.
         ಇಂದಿಗೂ ಅವರ ಪ್ರತಿಮೆಯು ಕಲ್ಕತ್ತದ ಕಾಲೇಜು ಸ್ಕೇರ್ನಲ್ಲಿದೆ. ಅವರ ಗೌರವಾರ್ಥಕ್ಕಾಗಿ ಅವರ ಅಂಚೆ ಚೀಟಿಯನ್ನು ಭಾರತವು 2014ರಂದು ಬಿಡುಗಡೆ ಮಾಡಿದೆ.

No comments:

Post a Comment