"ವ್ಯಕ್ತಿಯನ್ನು ಅರಿಯುವುದು ಹೇಗೆ?"
"ಭಿಕ್ಷುಗಳೇ, ಒಬ್ಬನು ಜೊತೆಯಲ್ಲಿ ಇದ್ದಾಗ, ಆತನ ಶೀಲವನ್ನು ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಶೀಲವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."
"ಹಾಗೆಯೇ ದೀರ್ಘಕಾಲ ಜೀವಿಸಿದಾಗ ಆತನ ಪಾರದರ್ಶಕತೆ, ನಿಷ್ಠೆ ಅರ್ಥ ಮಾಡಿಕೊಳ್ಳಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಪಾರದರ್ಶಕತೆ, ನಿಷ್ಠೆ ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ".
"ಹಾಗೆಯೇ ವಿಷಮ ಪರಿಸ್ಥಿತಿಗಳು ಇದ್ದಾಗ ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."
"ಹಾಗೆಯೇ ಆತನ ಜೊತೆ ಸಂಭಾಷಣೆ ಮಾಡಿದಾಗ, ಆತನ ಪ್ರಜ್ಞಾಶೀಲತೆ (ಬುದ್ಧಿವಂತಿಕೆ) ಅರಿಯಬಹುದು.
ಇವೆಲ್ಲವೂ ಒಂದೇಬಾರಿಗೆ ತಿಳಿಯುವುದಿಲ್ಲ, ದೀರ್ಘಕಾಲ, ಸಾಮೀಪ್ಯದಿಂದ ಪ್ರಜ್ಞಾವಂತನು ಗಮನಹರಿಸಿದಾಗ ಅರಿವಾಗುತ್ತದೆ ಹೊರತು, ದುರ್ಬಲ ಪ್ರಾಜ್ಞರಿಗೆ ಮತ್ತು ಗಮನಹರಿಸದೆ ಅರಿಯ ಲಾಗುವುದಿಲ್ಲ."
No comments:
Post a Comment