ಅಕ್ಟೋಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ
1. ಆಷಾಡ ಮಾಸದಿಂದ ಆರಂಭವಾದ ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕೆ ಈ ದಿನದಂದೆ ಅನುಮತಿ ನೀಡಿದರು.
ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.
2. ಆಷಾಡ ಮಾಸದಿಂದ ತಮ್ಮ ತಾಯಿ ಮಹಾಮಯಾದೇವಿ ಸಹಿತ ದೇವತೆಗಳಿಗೆ ಬೋಧಿಸುತ್ತಿದ್ದಂತಹ ಅಭಿಧಮ್ಮವು ಇಂದು ಮುಕ್ತಾಯವಾಗಿದ್ದು ಈ ದಿನದಂದೆ ಅವರು ಸಂಕಸ್ಸಪುರದಲ್ಲಿ ದೇವಲೋಕದಿಂದ ಕೆಳಗೆ ಇಳಿದರು. ಅವರು ಬರುವುದನ್ನು ಮೊದಲೇ ಮಹಾ ಮೊಗ್ಗಲಾನರಿಗೆ ತಿಳಿಸಿದ್ದರು. ಹಾಗೂ ಮೊಗ್ಗಲಾನರು ಸಹಿತ ಎಲ್ಲರೂ ಏಳು ದಿನ ಮೊದಲೇ ಕಾಯುತ್ತಿದ್ದರು.
3. ಈ ದಿನದಂದೆ ಮೆತ್ತೇಯ್ಯ ಬೋಧಿಸತ್ವರು ತಮ್ಮ 500 ಹಿಂಬಾಲಕರಿಂದ ಜೊತೆಗೂಡಿ ಸಂಘವನ್ನು ಸೇರಿದರು.
4. ಈ ದಿನದಂದೆ ಸಂಘಮಿತ್ರ ಥೇರಿಯು ಶ್ರೀಲಂಕದಲ್ಲಿ ಬಂದು ಇಳಿದರು. ಇದಾದ 2 ತಿಂಗಳಲ್ಲೇ ಭಿಕ್ಖುಣಿ ಶಾಸನವು ಶ್ರೀಲಂಕದಲ್ಲಿ ಆರಂಭವಾಯಿತು. ಹೀಗೆ ಅವರೆಲ್ಲಾ ಧಮ್ಮ ಪ್ರಚಾರದಲ್ಲಿ ತಲ್ಲಿನರಾದರು.
ಈ ದಿನದಂದು ಎಲ್ಲರೂ ಪಂಚಸೀಲದಲ್ಲಿದ್ದು, ದಾನಗಳನ್ನು ಹೇರಳವಾಗಿ ಮಾಡುವರು.
ಭವತು ಸಬ್ಬ ಮಂಗಳಂ.
No comments:
Post a Comment