ಚಿಂತನಾತೀತವಾದುದು ಯಾವುದು?
ಭಿಕ್ಷುಗಳೇ ಇವು ನಾಲ್ಕು ಚಿಂತನೆಗೆ ಅತೀತವಾಗಿವೆ, ತರ್ಕಕ್ಕೆ ಅತೀತವಾಗಿವೆ, ಚಿಂತಿಸಲು ಆಗುವುದಿಲ್ಲ. ಹಾಗೇನಾದರೂ ಒಬ್ಬನು ಪ್ರಯತ್ನಿಸಿದರೆ ಆತನ ಮನಸ್ಸು ಚದುರಿ ಹೋಗುವುದು, ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು, ಯಾವುವವು ನಾಲ್ಕು?
1. ಭಿಕ್ಷುಗಳೇ ಬುದ್ಧರ ಕ್ಷೇತ್ರವು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಅದನ್ನು ಚಿಂತಿಸಲು ಆಗುವುದಿಲ್ಲ. ಹಾಗೆಯೇ
2. ಸಮಾಧಿಯ ಕ್ಷೇತ್ರಗಳು ಚಿಂತನೆಗೆ ಸಿಗದು. ಅದು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಹಾಗೆಯೇ
3. ಕರ್ಮಫಲಗಳ ಕ್ಷೇತ್ರವು ಚಿಂತನಾತೀತವಾಗಿದೆ. ತಕರ್ಾತೀತವಾಗಿದೆ. ಅದು ಚಿಂತನೆಗೆ ಸಿಗದು ಮತ್ತು
4. ಲೋಕಗಳ ಚಿಂತನೆ ಅಂದರೆ ಸೃಷ್ಟಿರಹಸ್ಯ, ಅದು ಚಿಂತನೆಗೆ ಸಿಗದು, ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಇವೇ ಭಿಕ್ಷುಗಳೇ, ಆ ನಾಲ್ಕು. ಇವುಗಳನ್ನು ಅರಿಯಲು ಕೇವಲ ಚಿಂತನೆಗೆ ಅಥವಾ ತರ್ಕಕ್ಕೆ ಮೊರೆ ಹೋದರೆ ಆತನ ಮನಸ್ಸು ಚದುರಿಹೋಗುವುದು. ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು.
No comments:
Post a Comment