Thursday, 31 October 2019

"ವ್ಯಕ್ತಿಯನ್ನು ಅರಿಯುವುದು ಹೇಗೆ?" how to know the person in kannada

"ವ್ಯಕ್ತಿಯನ್ನು ಅರಿಯುವುದು ಹೇಗೆ?"



"ಭಿಕ್ಷುಗಳೇ, ಈ ನಾಲ್ಕು ಸ್ಥಿತಿಗಳಿಂದಾಗಿ ಪರರ ನಾಲ್ಕನ್ನು ಅರಿಯಬಹುದು?"
"ಭಿಕ್ಷುಗಳೇ, ಒಬ್ಬನು ಜೊತೆಯಲ್ಲಿ ಇದ್ದಾಗ, ಆತನ ಶೀಲವನ್ನು ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಶೀಲವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."

"ಹಾಗೆಯೇ ದೀರ್ಘಕಾಲ ಜೀವಿಸಿದಾಗ ಆತನ ಪಾರದರ್ಶಕತೆ, ನಿಷ್ಠೆ ಅರ್ಥ ಮಾಡಿಕೊಳ್ಳಬಹುದು.  ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಪಾರದರ್ಶಕತೆ, ನಿಷ್ಠೆ ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ".

"ಹಾಗೆಯೇ ವಿಷಮ ಪರಿಸ್ಥಿತಿಗಳು ಇದ್ದಾಗ ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ಅರಿಯಬಹುದು. ಆಗಾಗ್ಗೆ ಭೇಟಿ ಮಾಡುವುದರಿಂದಲ್ಲ, ದೀರ್ಘಕಾಲ ಜೊತೆಯಲ್ಲಿ ಇದ್ದಾಗ, ಸಮೀಪದಿಂದ ಗಮನಹರಿಸುವುದರಿಂದ ಪ್ರಾಜ್ಞರು ಆತನ ಧೈರ್ಯವನ್ನು (ಸಮಚಿತ್ತತೆಯನ್ನು) ವನ್ನು ಅರಿಯಬಹುದು, ಇದು ಗಮನಹರಿಸದಿದ್ದಾಗ, ಅಥವಾ ದುರ್ಬಲ ಪ್ರಾಜ್ಞರಿಗೆ ಸಾಧ್ಯವಾಗುವುದಿಲ್ಲ."

  "ಹಾಗೆಯೇ ಆತನ ಜೊತೆ ಸಂಭಾಷಣೆ ಮಾಡಿದಾಗ, ಆತನ ಪ್ರಜ್ಞಾಶೀಲತೆ (ಬುದ್ಧಿವಂತಿಕೆ) ಅರಿಯಬಹುದು.
ಇವೆಲ್ಲವೂ ಒಂದೇಬಾರಿಗೆ ತಿಳಿಯುವುದಿಲ್ಲ, ದೀರ್ಘಕಾಲ, ಸಾಮೀಪ್ಯದಿಂದ ಪ್ರಜ್ಞಾವಂತನು ಗಮನಹರಿಸಿದಾಗ ಅರಿವಾಗುತ್ತದೆ ಹೊರತು, ದುರ್ಬಲ ಪ್ರಾಜ್ಞರಿಗೆ ಮತ್ತು ಗಮನಹರಿಸದೆ ಅರಿಯ ಲಾಗುವುದಿಲ್ಲ."

Tuesday, 22 October 2019

4 ಉಪಾದಾನಗಳು (ಅಂಟುವಿಕೆಗಳು) 4 attachments

4 ಉಪಾದಾನಗಳು (ಅಂಟುವಿಕೆಗಳು)


ಭಿಕ್ಷುಗಳೇ ನಾಲ್ಕು ರೀತಿಯ ಉಪಾದಾನಗಳಿವೆ (ಅಂಟುವಿಕೆಗಳಿವೆ) ಅವು ಯಾವುವು?
 (1) ಇಂದ್ರೀಯ ಸುಖಗಳಿಗೆ ಅಂಟುವಿಕೆ
 (2) ಮಿಥ್ಯಾದೃಷ್ಟಿಗೆ ಅಂಟುವಿಕೆ
(3) ವಿಧಿಸಂಸ್ಕಾರ, ಮೂಢಾಚರಣೆಗೆ ಅಂಟುವಿಕೆ
 (4) ಆತ್ಮ ಸಿದ್ಧಾಂತಕ್ಕೆ ಅಂಟುವಿಕೆ.

ಕೆಲವು ಮಿಥ್ಯಾ ದಾರ್ಶನಿಕರು, ತಾವು ಎಲ್ಲಾ ಅಂಟುವಿಕೆಯನ್ನು ಅರಿತಿದ್ದೇವೆ, ಎಲ್ಲವನ್ನೂ ತ್ಯಜಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ಪೂರ್ಣ ಸತ್ಯಗಳನ್ನು ಅರಿತಿರುವುದಿಲ್ಲ ಮತ್ತು ಹಾಗೆಯೇ ತ್ಯಜಿಸಿರುವುದು ಇಲ್ಲ.

ಅಜ್ಞಾನಿ ಯಾರು? who is ignorant ?

ಅಜ್ಞಾನಿ ಯಾರು?


ಒಬ್ಬನು ಬಂದು ಭಗವಾನರಿಗೆ ಹೀಗೆ ಪ್ರಶ್ನಿಸುತ್ತಾನೆ: ಭಗವಾನ್ ಅಜ್ಞಾನವೆಂದರೇನು ಮತ್ತು ಎಲ್ಲಿಯವರೆಗೆ ಒಬ್ಬನು ಅಜ್ಞಾನಿ ಎನಿಸಿಕೊಳ್ಳುತ್ತಾನೆ?
ಗೃಹಪತಿಯೇ, ಇಲ್ಲಿ ಯಾರು ದೇಹವನ್ನು ಅರಿಯುವುದಿಲ್ಲವೋ ಅದರ ಉದಯವನ್ನು ಅರಿಯುವುದಿಲ್ಲವೋ, ಅದರ ನಿರೋಧವನ್ನು ಅರಿಯುವುದಿಲ್ಲವೋ, ಅದರ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ವೇದನೆಗಳನ್ನು ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ ಅವುಗಳ ನಿರೋಧವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ಸಞ್ಞಗಳನ್ನು (ಗ್ರಹಿಕೆ) ಅರಿಯುವುದಿಲ್ಲವೋ, ಸಂಖಾರಗಳನ್ನು (ಚಿತ್ತದ ಚಟುವಟಿಕೆ) ಅರಿಯುವುದಿಲ್ಲವೋ, ವಿಞ್ಞಾನವನ್ನು (ಅರಿವನ್ನು) ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧವನ್ನು ಅರಿಯುವುದಿಲ್ಲವೋ ನಿರೋಧಕ್ಕೆ ಒಯ್ಯುವ ಮಾರ್ಗವನ್ನು ಅರಿಯುವುದಿಲ್ಲವೋ ಇಲ್ಲಿಯವರೆಗೆ ಆತನು ಅಜ್ಞಾನಿಯಾಗಿರುತ್ತಾನೆ.
(ಅಂದರೆ ಒಟ್ಟಾರೆ ದೇಹ, ಮನಸ್ಸಿನ ವಿಶ್ಲೇಷಣೆ, ಕ್ರಿಯೆ, ಉದಯ ನಿರೋಧ ಮತ್ತು ನಿರೋಧ ಮಾರ್ಗ ಅರಿಯದವರು ಅಜ್ಞಾನಿ ಎನಿಸಿಕೊಳ್ಳುತ್ತಾರೆ ಅಥವಾ ಆರ್ಯಸತ್ಯಗಳನ್ನು ಅರಿಯದವರು ಅಜ್ಞಾನಿಗಳು ಎನಿಸಿಕೊಳ್ಳುತ್ತಾರೆ.) 

ಸಾಕ್ಷಾತ್ಕರಿಸಲೇ ಬೇಕಾದ ನಾಲ್ಕು

ಸಾಕ್ಷಾತ್ಕರಿಸಲೇ ಬೇಕಾದ ನಾಲ್ಕು


ಭಿಕ್ಷುಗಳೇ, ಈ ನಾಲ್ಕನ್ನು ಸಾಕ್ಷಾತ್ಕರಿಸಲೇ ಬೇಕಾಗಿದೆ, ಯಾವುವವು ನಾಲ್ಕು?
(ಚಿತ್ತ) ಕಾಯದಿಂದ ಸಾಕ್ಷಾತ್ಕರಿಸುವಂತಹುದು;
     ಸ್ಮೃತಿಯಿಂದ ಸಾಕ್ಷಾತ್ಕರಿಸು ವಂತಹುದು;
     ದಿವ್ಯದೃಷ್ಟಿಯಿಂದ ಸಾಕ್ಷಾತ್ಕರಿಸುವಂತಹುದು ;
    ಮತ್ತು ಪ್ರಜ್ಞಾದಿಂದ ಸಾಕ್ಷಾತ್ಕರಿಸುವಂತಹುದು.

ಕಾಯದಿಂದ ಸಾಕ್ಷಾತ್ಕರಿಸುವಂತಹುದು ಯಾವುದು ಭಿಕ್ಷುಗಳೇ?
ಅಷ್ಟ ವಿಮೋಕ್ಖಗಳು (ಬಿಡುಗಡೆ) ಸಾಕ್ಷಾತ್ಕರಿಸಬಹುದು.

ಸ್ಮೃತಿಯಿಂದ ಸಾಕ್ಷಾತ್ಕರಿಸುವಂತಹುದು, ಯಾವುದು ಭಿಕ್ಷುಗಳೇ?
ಪೂರ್ವ ಜನ್ಮಗಳನ್ನು ಸಾಕ್ಷಾತ್ಕರಿಸಬಹುದು.

ದಿವ್ಯದೃಷ್ಟಿಯಿಂದ ಸಾಕ್ಷಾತ್ಕರಿಸುವಂತಹುದು ಯಾವುವು ಭಿಕ್ಷುಗಳೇ?
ಮರಣ, ಪುನರ್ಜನ್ಮ ಮತ್ತು ಕರ್ಮ ನಿಯಮಗಳನ್ನು ಸಾಕ್ಷಾತ್ಕರಿಸಬಹುದು.

ಪ್ರಜ್ಞಾದಿಂದ ಸಾಕ್ಷಾತ್ಕರಿಸುವಂತಹುದು ಯಾವುದು ಭಿಕ್ಷುಗಳೇ?
ಅಸವ ಕ್ಷಯವನ್ನು ಸಾಕ್ಷಾತ್ಕರಿಸಬಹುದು.

ಚಿಂತನಾತೀತವಾದುದು ಯಾವುದು? which are the things beyond thinking ?

ಚಿಂತನಾತೀತವಾದುದು ಯಾವುದು?


ಭಿಕ್ಷುಗಳೇ ಇವು ನಾಲ್ಕು ಚಿಂತನೆಗೆ ಅತೀತವಾಗಿವೆ, ತರ್ಕಕ್ಕೆ ಅತೀತವಾಗಿವೆ, ಚಿಂತಿಸಲು ಆಗುವುದಿಲ್ಲ. ಹಾಗೇನಾದರೂ ಒಬ್ಬನು ಪ್ರಯತ್ನಿಸಿದರೆ ಆತನ ಮನಸ್ಸು ಚದುರಿ ಹೋಗುವುದು, ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು, ಯಾವುವವು ನಾಲ್ಕು?
1. ಭಿಕ್ಷುಗಳೇ ಬುದ್ಧರ ಕ್ಷೇತ್ರವು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಅದನ್ನು ಚಿಂತಿಸಲು ಆಗುವುದಿಲ್ಲ. ಹಾಗೆಯೇ
2.  ಸಮಾಧಿಯ ಕ್ಷೇತ್ರಗಳು ಚಿಂತನೆಗೆ ಸಿಗದು. ಅದು ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಹಾಗೆಯೇ
3. ಕರ್ಮಫಲಗಳ ಕ್ಷೇತ್ರವು ಚಿಂತನಾತೀತವಾಗಿದೆ. ತಕರ್ಾತೀತವಾಗಿದೆ. ಅದು ಚಿಂತನೆಗೆ ಸಿಗದು ಮತ್ತು
4.  ಲೋಕಗಳ ಚಿಂತನೆ ಅಂದರೆ ಸೃಷ್ಟಿರಹಸ್ಯ, ಅದು ಚಿಂತನೆಗೆ ಸಿಗದು, ಚಿಂತನಾತೀತವಾಗಿದೆ, ತಕರ್ಾತೀತವಾಗಿದೆ. ಇವೇ ಭಿಕ್ಷುಗಳೇ, ಆ ನಾಲ್ಕು. ಇವುಗಳನ್ನು ಅರಿಯಲು ಕೇವಲ ಚಿಂತನೆಗೆ ಅಥವಾ ತರ್ಕಕ್ಕೆ ಮೊರೆ ಹೋದರೆ ಆತನ ಮನಸ್ಸು ಚದುರಿಹೋಗುವುದು. ಕ್ಷೊಭೆಗೆ ಒಳಗಾಗುವುದು, ನಿರಾಶನಾಗುವನು.

Saturday, 12 October 2019

ಅಕ್ಟೋಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ

ಅಕ್ಟೋಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ

1. ಆಷಾಡ ಮಾಸದಿಂದ ಆರಂಭವಾದ ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.
     
       ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕೆ ಈ ದಿನದಂದೆ ಅನುಮತಿ ನೀಡಿದರು.

ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.


2. ಆಷಾಡ ಮಾಸದಿಂದ ತಮ್ಮ ತಾಯಿ ಮಹಾಮಯಾದೇವಿ ಸಹಿತ ದೇವತೆಗಳಿಗೆ ಬೋಧಿಸುತ್ತಿದ್ದಂತಹ ಅಭಿಧಮ್ಮವು ಇಂದು ಮುಕ್ತಾಯವಾಗಿದ್ದು ಈ ದಿನದಂದೆ ಅವರು ಸಂಕಸ್ಸಪುರದಲ್ಲಿ ದೇವಲೋಕದಿಂದ ಕೆಳಗೆ ಇಳಿದರು. ಅವರು ಬರುವುದನ್ನು ಮೊದಲೇ ಮಹಾ ಮೊಗ್ಗಲಾನರಿಗೆ ತಿಳಿಸಿದ್ದರು. ಹಾಗೂ ಮೊಗ್ಗಲಾನರು ಸಹಿತ ಎಲ್ಲರೂ ಏಳು ದಿನ ಮೊದಲೇ ಕಾಯುತ್ತಿದ್ದರು.

3. ಈ ದಿನದಂದೆ ಮೆತ್ತೇಯ್ಯ ಬೋಧಿಸತ್ವರು ತಮ್ಮ 500 ಹಿಂಬಾಲಕರಿಂದ ಜೊತೆಗೂಡಿ ಸಂಘವನ್ನು ಸೇರಿದರು.

4. ಈ ದಿನದಂದೆ ಸಂಘಮಿತ್ರ ಥೇರಿಯು ಶ್ರೀಲಂಕದಲ್ಲಿ ಬಂದು ಇಳಿದರು. ಇದಾದ 2 ತಿಂಗಳಲ್ಲೇ ಭಿಕ್ಖುಣಿ ಶಾಸನವು ಶ್ರೀಲಂಕದಲ್ಲಿ ಆರಂಭವಾಯಿತು. ಹೀಗೆ ಅವರೆಲ್ಲಾ ಧಮ್ಮ ಪ್ರಚಾರದಲ್ಲಿ ತಲ್ಲಿನರಾದರು.


ಈ ದಿನದಂದು ಎಲ್ಲರೂ ಪಂಚಸೀಲದಲ್ಲಿದ್ದು, ದಾನಗಳನ್ನು ಹೇರಳವಾಗಿ ಮಾಡುವರು.

ಭವತು ಸಬ್ಬ ಮಂಗಳಂ.

Saturday, 5 October 2019

ಬುದ್ಧರು ಅಸಾಮಾನ್ಯ ಜ್ಞಾನವುಳ್ಳವರಾಗಿದ್ದರು

ಬುದ್ಧರು ಅಸಾಮಾನ್ಯ ಜ್ಞಾನವುಳ್ಳವರಾಗಿದ್ದರು


1. ಇಂದ್ರೀಯ ಪರೂಪರಿಯತ್ತಿ ಜ್ಞಾನ : 

ವ್ಯಕ್ತಿಯ ಯಾವ ವಿಶೇಷ, ಸಾಮಥ್ರ್ಯ (ಪ್ರತಿಭೆ) ಬಲಿಷ್ಠವಾಗಿದೆ ಅಥವಾ ದುರ್ಬಲವಾಗಿದೆ ಎಂದು ಅರಿಯುತ್ತಿದ್ದರು. ಉದಾಹರಣೆಗೆ (ಪಂಚೇಂದ್ರಿಯ : ಶ್ರದ್ಧಾ, ವೀರ್ಯ, ಸ್ಮೃತಿ, ಸಮಾಧಿ ಮತ್ತು ಪ್ರಜ್ಞಾ).

2. ಅಸಯ ಅನುಶಯ ಜ್ಞಾನ : 

ವ್ಯಕ್ತಿಯ ಗುಪ್ತ ಪ್ರವೃತ್ತಿ ಅರಿತು ಆತನಗೆ ಸಹಾಯ ಮಾಡುವ ಜ್ಞಾನ.

3. ಬುದ್ಧ ಚಕ್ಷು : 

ವ್ಯಕ್ತಿಗತವಾಗಿ ಸರ್ವ ಜೀವಿಗಳಿಗೆ ಹಿತಕಾರಿ ಉಂಟುಮಾಡುವ ಜ್ಞಾನ.

4. ಅನಾವರಣ ಜ್ಞಾನ : 

ಅಡೆತಡೆಗಳಿಲ್ಲದ ಜ್ಞಾನ.

5. ಸಬ್ಬಾನ್ನುತಾ ಜ್ಞಾನ : 

ಸಂಖಾರಗಳ ಬಗ್ಗೆ, ವಿಕಾರಗಳ ಬಗ್ಗೆ, ನಿಬ್ಬಾಣದ ಬಗ್ಗೆ, ತ್ರಿಲಕ್ಷಣಗಳ ಬಗ್ಗೆ, ಲಕ್ಷಣಗಳ ಬಗ್ಗೆ ಮತ್ತು ಪ್ರಗ್ಮಪ್ತಿ (ವ್ಯವಹಾರ ಸತ್ಯ)ಗಳ ಬಗ್ಗೆ ಸರ್ವಜ್ಞತಾ ಜ್ಞಾನ.

6. ಯಮಕ ಪತಿಯರಾಯ ಜ್ಞಾನ : 

ಏಕಕಾಲದಲ್ಲಿ ಎರಡೆರಡು ಪವಾಡ ಮಾಡುವ ಸಿದ್ಧಿಗಳು.

7. ಮಹಾ ಕರುಣಾ ಜ್ಞಾನ: 

ಸರ್ವಜೀವಿಗಳ ದುಃಖ ವಿಮುಕ್ತಿಯ ಜ್ಞಾನ

ಬುದ್ಧರು ಐದು ರೀತಿಯ ಚಕ್ಷುಧಾರಿಗಳು 5 types of eyes of Lord Buddha

ಬುದ್ಧರು ಐದು ರೀತಿಯ ಚಕ್ಷುಧಾರಿಗಳು :


1. ಭೌತಿಕ ಚಕ್ಷು : ಇದರಿಂದ ದೂರದಲ್ಲಿರುವ ಅತಿ ಚಿಕ್ಕ ಜೀವಿಯನ್ನು ನೋಡಬಹುದಿತ್ತು. 
2. ದಿವ್ಯಚಕ್ಷು : ಸರ್ವಜೀವಿಗಳ, ಸರ್ವ ಲೋಕಗಳ ಜ್ಞಾನ ಸಿಗುತ್ತಿತ್ತು.
3. ಪನ್ಯಾ ಚಕ್ಷು : ವಿಪಶ್ಶನ ಜ್ಞಾನ ಸಿಗುವಂತ ಚಕ್ಷು.
4. ಬುದ್ಧ ಚಕ್ಷು : ವ್ಯಕ್ತಿಗಳ ಸುಪ್ತ ಪ್ರವೃತ್ತಿ, ದೌರ್ಬಲ್ಯ ಮತ್ತು ವಿಶೇಷ ಪ್ರತಿಭೆಗಳನ್ನು ಗುತರ್ಿಸಿ ಅವರನ್ನು ನಿಬ್ಬಾಣಕ್ಕೆ ಕರೆದೊಯ್ಯುವ ವಿಶೇಷ ಜ್ಞಾನ ಚಕ್ಷು.
5. ಸಮಂತ ಚಕ್ಷು : ಸರ್ವಜ್ಞಾತಾ ಜ್ಞಾನ ಚಕ್ಷು.


ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳು 32 great man characteristics of Lord Buddha



ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳು


1. ಸಂದಿಲ್ಲದ ಸಮತಟ್ಟಾದ ಪಾದಗಳು
2. ಪಾದಗಳಲ್ಲಿ ಸಾವಿರ ಅರೆಗಳುಳ್ಳ ನೇಮಿ ನಾಭಿಸಹಿತ ಚಕ್ರ ಚಿಹ್ನೆ
3. ತೆಳ್ಳನೆಯ ಉದ್ದವಾದ ಬೆರಳುಗಳು
4. ಸುಲಭವಾಗಿ ಮಣಿಯುವ(ಮೃದುವಾದ) ಕೈ ಹಾಗು ಕಾಲುಗಳು
5. ಅಂಗೈ(ಬೆರಳು)ಗಳು ಹಾಗೂ ಪಾದಗಳು(ಬೆರಳು)ಬಲೆಯಂತೆ (ಇರುವ ರೇಖೆಗಳು) ಇರುತ್ತವೆ
6. ಅಗಲವಾದ ಚಾಚಿದ ಶಂಕಾಕೃತಿಯ ಹಿಮ್ಮಡಿಗಳು
7. ಕಮಾನಿನಂತಿರುವ ಮೇಲ್ಗಾಲು
8. ಸಾರಂಗ (ನಿಗ್ರೋದ)ದಂತಿರುವ ಕಾಲು(ತೋಡೆ)ಗಳು
9. ನಿಂತಿರುವಾಗ ಹಸ್ತಗಳು ಮೊಳಕಾಲುಗಳ ಕೆಳಗೆ ತಾಕುತ್ತದೆ.
10. ಕೋಶದಿಂದ ಆವೃತವಾದ ಪುರುಷೇಂದ್ರೇಯ
11. ಬಾಹುಗಳನ್ನು ವಿಸ್ತರಿಸದಷ್ಟೇ ಎತ್ತರವಿರುವ ದೇಹಾಕೃತಿ, ಅಥವಾ ದೇಹಾಕೃತಿಯಷ್ಟು ಉದ್ದಾವಾದ ತೋಳುಗಳು
12. ಪ್ರತಿ ಕೂದಲು ಗಾಡನೀಲಿವರ್ಣದ್ದು ಹಾಗೂ ಪ್ರತಿ ರೋಮಕೂಪದಲ್ಲು ಒಂದೇ ಕೂದಲಿರುತ್ತದೆ.
13. ದೇಹದ ಕೂದಲು ಅಕರ್ಷಣೆಯಿಂದ ಹಾಗೂ ಗುಂಗರೂ ಆಗಿರುತ್ತದೆ. ಹಾಗೂ ಮೇಲ್ಮುವಾಗಿ ಹಾಗು ಬಲಗಡೆಗೆ ತಿರುಗಿರುತ್ತದೆ.
14. ಸುವರ್ಣವರ್ಣದ ತ್ವಚೆಯ ಬಣ್ಣ,
15. ಹತ್ತು ಅಡಿ ಉದ್ದದ ಪ್ರಭೆ ಸದಾ ಸುತ್ತಲೂ ಆವೃತವಾಗಿರುವುದು.
16. ಕೋಮಲವಾದ ತ್ವಚೆ, ಚರ್ಮದ ಮೇಲೆ ಧೂಳಿರುವುದಿಲ್ಲ.
17. ಪಾದಗಳು, ಅಂಗೈ, ಭುಜಗಳು, ಹಾಗೂ ಶಿರವೂ ಗುಂಡನೆಯ ಆಕೃತಿಯನ್ನು ಹೊಂದಿದೆ.(ದೇಹದಲ್ಲಿ ಸಪ್ತ ಉಬ್ಬುಗಳಿರುತ್ತದೆ)
18. ಆಲದ ಮರದಂತೆ ಸಮಪ್ರಮಾಣದ ಅಂಗಾಂಗಗಳು
19. ಸಿಂಹಾಕೃತಿಯಂತೆ ಕತ್ತು ಹಾಗೂ ಸೊಂಟವಿರುವ ಶರೀರ
20. ಬ್ರಹ್ಮಲೋಕದವರಂತೆ ನೆಟ್ಟಗಿರುವ ಹಾಗೂ ನೇರವಾದ ಶರೀರ
21. ಪೂರ್ಣವಾದ ದುಂಡಾದ ಭುಜಗಳು, ನಡುವೆ ತಗ್ಗು ಇರುವುದಿಲ್ಲ.
22. ಹುಟ್ಟಿದಾಗಲೇ 40 ಹಲ್ಲುಗಳು
23. ಹಲ್ಲುಗಳು ಬಿಳಿ, ಸಮನಾದುದು, ಮಧ್ಯೆ ರಂದ್ರಗಳಿಲ್ಲದೆ ಕೂಡಿರುತ್ತವೆ.
24. ಕ್ಷತ್ರೀಯರಂತಿರುವ ಎದೆಯ ಆಕಾರ
25. ಸಿಂಹದಂತಹ ದವಡೆ, ಸಮಮಟ್ಟದ ಹಲ್ಲಿನ ಸಾಲು
26. ಶ್ರೇಷ್ಟ ಅಭಿರುಚಿಯನ್ನು ಹೊಂದಿರುತ್ತಾರೆ ಆಹಾರ ಸೇವಿಸಿದಾಗ ನಾಲಿಗೆಗೆ ಅಷ್ಟೇ ಅಲ್ಲದೆ, ಎಲ್ಲಾ ಭಾಗಗಳಿಗೂ ರುಚಿ ಸಿಗುವುದು.
27. ಹಣೆ ಹಾಗೂ ಕಿವಿಗಳನ್ನು ಸುಲಭವಾಗಿ ತಾಗುವಂತಹ ಉದ್ದವಾದ ನಾಲಿಗೆ
28. ಚಕ್ರವಾಕ ಪಕ್ಷಿಯಂತೆ ಅಥವಾ ಕೋಗಿಲೆ(ಕರವಿಕ)ಯಂತಹೆ ಪರಮ ಮಾಧುರ್ಯದ ಬ್ರಹ್ಮಸ್ವರವಿರುತ್ತದೆ..
29. ಗಾಢ ಅಭಿನೀಲಿವರ್ಣದ ಕಣ್ಣುಗಳು
30. ರಾಜವೃಷಭಕ್ಕೆರುವಂತಹ ನಯನಗೂದಲುಗಳು
31. ಭೃಮಧ್ಯೆ ಒಂದು ಉಬ್ಬಿದ್ದು ಅದರಲ್ಲಿ ಊದ್ರ್ವಮುಖಿಯಾಗಿರುವ ಅರಳೆಯಂತಹ ಒಂದು ಬಿಳಿ ಕೂದಲಿರುತ್ತದೆ.
32. ಕಿರೀಟದಂತಿರುವಂತಹ ದುಂಡನೆಯ ಶಿರಸ್ಸಿನ ಆಕಾರ.


Friday, 4 October 2019

ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ kathina civara dana


ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ


ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.

ಕಠಿನವೆಂದರೆ ಕಠಿಣ, ಕಷ್ಟಕರ, ಬಿರುಸು ಒರಟು ಇತ್ಯಾದಿ ಆರ್ಥಗಳಿವೆ. ಅದರೆ ಇಲ್ಲಿ ಕಠಿನ ವೆಂದರೆ ವರ್ಷವಾಸದ ಅಂತ್ಯದಲ್ಲಿ ಭಿಕ್ಖುಗಳಿಗೆ ವಾಷರ್ಿಕವಾಗಿ ನೀಡುವ ಚೀವರ(ಭಿಕ್ಖುಗಳು ಧರಿಸುವ ವಸ್ತ್ರ) ವಸ್ತ್ರವಾಗಿದೆ. ಚೀವರವು ಪಾಲಿಯ ಪದವಾಗಿದ್ದು, ಕಠಿಣ ಚೀವರವಾಗಿದೆ. ಈ ಕಠಿನವಸ್ತ್ರವನ್ನು(ಒರಟಾದ ಕಾಷಾಯ ವಸ್ತ್ರ) ಸಂಘಕ್ಕೆ ಉಪಾಸಕರು ನೀಡುವರು.

ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕ್ಕೆ ಅನುಮತಿ ನೀಡಿದರು.

ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ಹುಟ್ಟಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.

    ಇಂದು ಕಠಿನ ಚೀವರ ಸಮಾರಂಭವು ಪರಂಪರಾಗತ ಎಲ್ಲಾ ಬೌದ್ಧ ದೇಶಗಳಲ್ಲಿ ಅತಿ ದೊಡ್ಡ ಹಬ್ಬವಾಗಿ ಆಚರಿಸಲಾಗುವುದು. ಆ ಇಡೀ ದಿನವು ಬೌದ್ಧರು ದಾನಾದಿ ಪುಣ್ಯಕಮ್ಮಗಳನ್ನು ಮಾಡುತ್ತ ಆನಂದಿಸುವರು. ಜನರೆಲ್ಲ ವಿಹಾರಕ್ಕೆ ಭೇಟಿ ನೀಡುವರು. ಅಲ್ಲಿ ಸೇರಿ ಪಂಚ ಶೀಲ ಅಥವಾ ಅಷ್ಟಾಂಗ ಶೀಲವನ್ನು ಸಂಕಲ್ಪಿಸಿ, ಧಮ್ಮವನ್ನು ಆಲಿಸುತ್ತಾರೆ. ಅಲ್ಲಿ ಉಪಾಸಕರಲ್ಲಿ ಪ್ರತಿನಿಧಿಯಾಗಿರುವವರು ದಾನಗಳನ್ನು ಘೋಷಿಸುತ್ತಾರೆ ಹಾಗೂ ಸಂಘದ ಅವಶ್ಯಕತೆಗಳನ್ನು ಶ್ರದ್ಧಾಪೂರ್ವಕವಾಗಿ ನೀಡುತ್ತಾರೆ. ನಂತರ ಸಂಘಕ್ಕೆ ವಿಧೇಯತೆಯಿಂದ ಆಹಾರವನ್ನು ಬಡಿಸುತ್ತಾರೆ. ಈ ಸಮಾರಂಭದ ಅಂತ್ಯವು ಪುಣ್ಯಾನುಮೋದನೆಯಿಂದ ಆಗುವುದು ಅಂದರೆ ಜ್ಞಾತಿಗಳಿಗೆ(ಮರಣಹೊಂದಿರುವ ಸಂಬಂದಿಕರಿಗೆ) ಹಾಗೂ ಎಲ್ಲಾ ಜೀವಿಗಳಿಗೆ ತಮ್ಮ ದಾನದ ಫಲದ ಪುಣ್ಯವನ್ನು ಹಂಚುವುದು. ಸಂಜೆ ಜನರು ಬೌದ್ಧರು ಬೌದ್ಧ ಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ.

   ಅದರೆ ಭಿಕ್ಖುಗಳು ವಷರ್ಾವಾಸದ ಇಡೀ ಸಮಯವನ್ನು ಧಮ್ಮ ಅಧ್ಯಾಯನ, ದೀರ್ಘಕಾಲದ್ಲ ಧ್ಯಾನಗಳಲ್ಲಿ ತೊಡಗಿ, ಆಹಾರ, ನಿದ್ದೆ, ಇತ್ಯಾದಿಗಳ ಸುಖಗಳನ್ನೂ ಕಡಿತಗೊಳಿಸಿರುತ್ತಾರೆ.
 ಅದ್ದರಿಂದಲೇ ಕಠಿನ ಸಮಾರಂಭವು ಅತಿ ಹೆಚ್ಚು ಧೃಡನಿಧರ್ಾರ, ಸ್ಥಿರತೆಗೆ, ಶಾಂತತೆಗೆ ಹೆಚ್ಚು ಒತ್ತು ನೀಡುವುದು. ಹಾಗೂ ಪ್ರಾಯೋಜಕರು ,ದಾನಿಗಳು ಅಗಣಿತವಾಗಿ ಅಳೆಯಲಾಗದಷ್ಟು ಪುಣ್ಯವನ್ನು ಪಡೆಯುತ್ತಾರೆ. ಈ ಸಮಾರಂಭವು ಸಮಾನ್ಯ ದಾನಕ್ಕಿಂತಲೂ ವಿಶೇಷವಾದುದು. ಇದು ಅತ್ಯಂತ ಪ್ರಮುಖವಾದ ಮತ್ತು ಅತ್ಯಂತ ಲಾಭದಾಯಕ ಕುಶಲಕಮ್ಮವಾಗಿದೆ. ಇದು ನಮ್ಮೆಲ್ಲರ ಆಂತರ್ಯದಲ್ಲಿ ಹುದುಗಿರುವ ಕುಶಲ ಕಮ್ಮಗಳನ್ನು ವಿಕಾಸಿಸುವ ಅತ್ಯುತ್ತಮ ಅವಕಾಶವಾಗಿದೆ. ಮತ್ತು ಇದರಿಂದಾಗಿ ನಿಬ್ಬಾಣವನ್ನು ಪಡೆಯಲು ಬೇಕಾಗಿರುವ ಉನ್ನತ ಮಂಗಳಕರ ಹಾರೈಕೆಗಳು ಸಿಗುವವು.