Sunday, 8 November 2015

types of wrong views ಮಿಥ್ಯಾದೃಷ್ಟಿಗಳ ವಿಧಗಳು


.  ಮಿಥ್ಯಾದೃಷ್ಟಿಗಳ ವಿಧಗಳು

ಮಿಥ್ಯಾದೃಷ್ಟಿಗಳ ಐದು ಬಗೆಗಳು

                ಮಿಥ್ಯಾದೃಷ್ಟಿ ಅಥವಾ ಮಿಥ್ಯಾ ನಂಬಿಕೆಯು 52 ಚೇತಸಿಕಾಗಳಲ್ಲಿ ಒಂದಾಗಿದೆ. ಅದು ಪುನಃ ಐದು ವಿಧವಾಗಿ ಕೂಡಿದೆ.
1.            ಸಕ್ಕಾಯ ದೃಷ್ಟಿ : ಇದು ಉಳಿದ ನಾಲ್ಕು ದೃಷ್ಟಿಗಳಿಗೆ ಆಧಾರವಾಗಿದೆ. ಇದನ್ನು ಆತ್ಮದೃಷ್ಟಿ ಎಂದೂ ಕರೆಯುತ್ತಾರೆ.
2.            ಅಂತಗ್ರಾಹದೃಷ್ಟಿ (ಅತಿರೇಕದ ದೃಷ್ಟಿಗಳು): ಶಾಶ್ವತವಾದ ಮತ್ತು ಉಚ್ಚೇದವಾದ (ವಿನಾಶವಾದ)
3.            ಮಿಥ್ಯಾದೃಷಿ : ಶೀಲರಹಿತನನ್ನಾಗಿಸುವ ದೃಷ್ಟಿಕೋನಗಳು.
4.            ಪಾರಾಮರ್ಶ ದೃಷ್ಟಿ : ತಾತ್ವಿಕ ಮಿಥ್ಯಾದೃಷ್ಟಿಕೋನಗಳು
5.            ಶೀಲವ್ರತ ಪಾರಾಮರ್ಶ ದೃಷ್ಟಿಕೋನಗಳು : ವ್ರತಾಚರಣೆಗಳಿಗೆ, ಮೂಢನಂಬಿಕೆಗಳಿಗೆ ಅಂಟಿರುವುದು



ಮಿಥ್ಯಾದೃಷ್ಟಿಯ ಪರ್ಯಾಯ ವಗರ್ಿಕರಣ
                ಮಿಥ್ಯಾದೃಷ್ಟಿಯು ಮೂಲವಾಗಿ ಎರಡು ರೀತಿ ವಗರ್ಿಕೃತವಾಗುತ್ತದೆ:
.               ಕರ್ಮಕ್ಕೆ ಅಥವಾ ಶೀಲಕ್ಕೆ ಸಂಬಂಧಪಟ್ಟ ಮಿಥ್ಯಾದೃಷ್ಟಿ
.               ಸತ್ಕಾಯ ದಿಟ್ಠಿ (ಆತ್ಮಕ್ಕೆ ಸಂಬಂಧಪಟ್ಟ ದೃಷ್ಟಿ)
.               ಕರ್ಮಕ್ಕೆ ಸಂಬಂಧಪಟ್ಟ ಅಥವಾ ಶೀಲಕ್ಕೆ ಸಂಬಂಧಪಟ್ಟ ಮಿಥ್ಯಾದೃಷ್ಟಿಯು ಮತ್ತೆ 5 ವಿಧದಲ್ಲಿ ವಗರ್ಿಕೃತವಾಗುತ್ತದೆ.
1.            ಅಹೇತು ಮಿಥ್ಯಾದೃಷ್ಟಿ : ಇದರ ಪ್ರಕಾರ ಜೀವಗಳ ಉದಯಕ್ಕಾಗಲಿ, ಪರಿಶುದ್ಧತೆಗಾಗಲಿ, ಸುಖ-ದುಃಖಕ್ಕಾಗಲಿ, ಉನ್ನತಿ-ಅವನತಿಗಾಗಲಿ ಕಾರಣವೇ ಇಲ್ಲ. ಎಲ್ಲಾ ವಿಧಿಯಾಟ.
2.            ಅಕ್ರಿಯ ಮಿಥ್ಯಾದೃಷ್ಟಿ : ಇದರ ಪ್ರಕಾರ ಯಾವುದೇ ಸುಕರ್ಮಕ್ಕೆ (ದಾನ) ಅಥವಾ ಯಾವುದೇ ದುಷ್ಕರ್ಮಕ್ಕೆ (ಪಾಪ) ಫಲವೇ ಇಲ್ಲ.
3.            ನಾಸ್ತಿಕ ಮಿಥ್ಯಾದೃಷ್ಟಿ : ಇದು ಸಹಾ ಪಾಪ-ಪುಣ್ಯಕ್ಕೆ ಫಲವಿಲ್ಲ, ಜೊತೆಗೆ ಪರಲೋಕವೂ ಇಲ್ಲ, ಪುನರ್ಜನ್ಮ-ಪೂರ್ವ ಜನ್ಮವೂ ಇಲ್ಲ. ಸತ್ತನಂತರ ಮಾನವ ನಾಶವಾಗುತ್ತಾನೆ.
4.            ಇಸ್ಸರ ನಿಮರ್ಾಣ ಹೇತು: ಎಲ್ಲದಕ್ಕೂ ದೇವರೇ ಕಾರಣ ಎಂಬ ಮಿಥ್ಯಾದೃಷ್ಟಿ.
5.            ಪುಬ್ಬೇಕತಾ ಹೇತು: ಹಿಂದಿನ ಜನ್ಮವೇ ಕಾರಣ ಎಂಬ ಮಿಥ್ಯಾದೃಷ್ಟಿ.
                ಈ ಮಿಥ್ಯಾದೃಷ್ಟಿಗಳು ಕರ್ಮ ನಿಯಮಗಳು ಸ್ಪಷ್ಟವಾಗಿ ಅರಿತಾಗ ಪೂರ್ವ ಜನ್ಮವು ಇತ್ತು. ಕರ್ಮ ನಿಯಮದಿಂದಾಗಿ ಮುಕ್ತನಾಗದಿದ್ದರೆ ಪುನರ್ಜನ್ಮವು ಇರುತ್ತದೆ. ಪ್ರತಿಯೊಂದಕ್ಕೂ ಕಾರಣವಿದ್ದೇಯಿದೆ. ತಾನಾಗಿಯೇ ಕಲುಶಿತನಾಗುತ್ತಾನೆ, ಹಾಗೆಯೇ ಪರಿಶುದ್ಧನು ಆಗುತ್ತಾನೆ. ಸುಖ-ದುಃಖಗಳಿಗೆ, ಉನ್ನತಿ ಅವನತಿಗೆ ಎಲ್ಲಕ್ಕೂ ಕಾರಣವಿದೆ, ಪರಲೋಕವೂ ಇದೆ. ದಾನಕ್ಕೆ (ಸುಕರ್ಮಕ್ಕೆ) ಫಲವಿದೆ. ಹಾಗೆಯೇ ಶೀಲಕ್ಕೂ ಫಲವಿದೆ, ಪಾಪಕ್ಕೂ ಫಲವಿದೆ ಎಂದು ಅರಿತು ಆತನು ದಾನಿಯಾಗಿ, ಶೀಲವಂತನಾಗಿ, ಸಂಯಮಿಯಾಗಿ, ಧ್ಯಾನಿಯಾಗಿ, ಜ್ಞಾನಿಯಾಗುತ್ತಾನೆ. ಹೀಗೆ ಇವು ಕಮ್ಮಸ್ಸಕತ ಸಮ್ಮಾದೃಷ್ಟಿಯಿಂದ ಈ ಮೂರು ಮಿಥ್ಯಾದೃಷ್ಟಿಗಳನ್ನು ತೊಡೆದು ಹಾಕುತ್ತಾನೆ

No comments:

Post a Comment