ಭಗವಾನರ
ಕಾಲದಲ್ಲಿದ್ದ ಮಿಥ್ಯಾ ದಾರ್ಶನಿಕರು ಮತ್ತು ಅವರ ಮಿಥ್ಯಾ ಸಿದ್ಧಾಂತಗಳು:
1. ಪೂರಣ
ಕಸ್ಸಪನ ಅಕ್ರಿಯಾವಾದ (ಅಕ್ರಿಯ ದಿಟ್ಠಿ)
ಯಾರು ಹಿಂಸಿಸುತ್ತಾನೋ ಅಥವಾ ಪರರಿಂದ ಹಿಂಸಿಸುತ್ತಾನೋ, ಯಾರು ಅಂಗವಿಚ್ಛೇದನ ಮಾಡುತ್ತಾನೋ ಅಥವಾ ಪರರಿಂದ ಮಾಡಿಸುತ್ತಾನೋ,
ಯಾರು ದುಃಖ ನೀಡುತ್ತಾನೋ ಅಥವಾ ಪರರಿಂದ ನೀಡಿಸುತ್ತಾನೋ ಹಾಗೆಯೇ
ಕಳ್ಳತನ, ವ್ಯಭಿಚಾರ, ಸುಳ್ಳು ಇವೆಲ್ಲಾ ಮಾಡುವುದರಿಂದ ಯಾವುದೇ ಪಾಪವಿಲ್ಲ, ಚೂಪಾಗಿರುವ ಚಕ್ರದಿಂದ ಇಡೀ ಜೀವ ಸಂಕುಲವನ್ನೇ ಹತ್ಯೆ ಮಾಡಿ ರಾಶಿ ಹಾಕಿದರೂ ಸಹಾ ಪಾಪವಿಲ್ಲ,
ಪಾಪ ಫಲವಿಲ್ಲ. ಹಾಗೆಯೇ ಎಷ್ಟೇ ದಾನ ಮಾಡಲಿ, ಯಾರಿಗೆ ದಾನ ಮಾಡಲಿ ಅದರಿಂದಾಗಿ ಯಾವುದೇ ಪುಣ್ಯವಿಲ್ಲ, ಯಾವುದೇ ಲಾಭವಿಲ್ಲ. ಅದೇರೀತಿ ಸಂಯಮದಿಂದಾಗಲಿ, ಇಂದ್ರಿಯ ನಿಗ್ರಹದಿಂದಾಗಲಿ ಯಾವುದೇ ಲಾಭವಿಲ್ಲ, ಯಾವುದೇ ಪುಣ್ಯವಿಲ್ಲ.
2. ಮಕ್ಖಲಿ
ಗೋಸಾಲನ ಅಹೇತುವಾದ (ಅಹೇತು ದಿಟ್ಠಿ):
ತಕ್ಷಣದ ಆದಿಗಾಗಲಿ, ಮೂಲ ಆದಿಗಾಗಲಿ
ಕಾರಣವೇ ಇಲ್ಲ (ಹೇತುವಿಲ್ಲ). ಕಾರಣವಿಲ್ಲದೆಯೇ ಜೀವಿಗಳು ನೀತಿಭ್ರಷ್ಟರಾಗುತ್ತಾರೆ. ಹಾಗೆಯೇ
ಸುಶೀಲಕ್ಕೂ ಸಹಾ ಕಾರಣವಿಲ್ಲ. ಕಾರಣವಿಲ್ಲದೆಯೇ ಶುದ್ಧಿ ಮತ್ತು ಅಶುದ್ಧಿಗಳು ನಡೆಯುತ್ತದೆ.
ಯಾವುದೇ ಸ್ಥಿತಿಯಾಗಲಿ, ತನ್ನಿಂದಾಗಲಿ, ಪರರಿಂದಾಗಲಿ ಯಾವುದೇ ಪುರುಷ ಪ್ರಯತ್ನದಿಂದಾಗಲಿ ನಡೆಯುತ್ತಿಲ್ಲ,
ಪುರುಷ ಪ್ರಯತ್ನವೆಂಬುದೇ ಇಲ್ಲ. ಸರ್ವ ಮಾನವರು, ಸರ್ವ ಜೀವಿಗಳು ತಮ್ಮದೇ ಆದ ಯಾವ ಬಲವನ್ನು ಹೊಂದಿಲ್ಲ.
ಕಾರಣವಿಲ್ಲದೆಯೇ, ವಿಧಿಯಾಟದಂತೆ ಎಲ್ಲವೂ
ನಡೆಯುತ್ತಿದೆ. ಹೀಗಾಗಿ ಎಲ್ಲರೂ ಸುಖ-ದುಃಖ ಪಡೆಯುತ್ತಿದ್ದಾರೆ. ಜ್ಞಾನಿಗಳಾಗಲಿ ಅಥವಾ
ಮೂರ್ಖರಾಗಲಿ ಎಲ್ಲರೂ ಇಲ್ಲಿ ವಿಧಿಯಾಟದಂತೆ ನಡೆಯಬೇಕಾಗುತ್ತದೆ.
3. ಅಜಿತ
ಕೇಶಕಂಬಳಿಯ ನಾಸ್ತಿಕ ವಾದ (ನಾಸ್ತಿಕ ದಿಟ್ಠಿ)
ದಾನಕ್ಕೆ ಫಲವಿಲ್ಲ, ಸುಕರ್ಮ ಮತ್ತು
ದುಷ್ಕರ್ಮಗಳಿಗೆ ಫಲವಿಲ್ಲ, ಈ ಲೋಕದಲ್ಲೂ ಫಲವಿಲ್ಲ,
ಪರಲೋಕವಿಲ್ಲ, ಅಲ್ಲೂ ಫಲವಿಲ್ಲ,
ತಂದೆ-ತಾಯಿಯರಿಗೆ ಸೇವೆ ಮಾಡಿದರೂ ಯಾವ ಪುಣ್ಯವೂ ಇಲ್ಲ. ತಾನಾಗಿಯೇ
ಜನ್ಮಿಸುವ ಯಾವ ಜೀವಿಯೂ ಇಲ್ಲ (ದೇವತೆ ಅಥವ ದೆವ್ವ), ಉನ್ನತಮಟ್ಟಕ್ಕೆ ಏರಿರುವ ಎನ್ನುವಂತಹ ಯಾವ ಸಮಣ ಬ್ರಾಹ್ಮಣರು ಇಲ್ಲ ಅಭಿಜ್ಞಾಪ್ರಾಪ್ತಿ
(ಅಲೌಕಿಕ ಬಲಗಳನ್ನು) ಹೊಂದಿರುವವರು ಯಾರೂ ಇಲ್ಲ. ಜ್ಞಾನಪ್ರಾಪ್ತಿ ಪಡೆದಿದ್ದೇವೆ, ಪರಲೋಕ ನೋಡಿದ್ದೇವೆ ಎನ್ನುವಂತಹವರು ಯಾರೂ ಇಲ್ಲ. ಇಲ್ಲಿ ಮಾನವ
ನಾಲ್ಕು ಮಹಾಧಾತುವಿನಿಂದ ರಚಿಸಲ್ಪಟ್ಟಿದ್ದಾನೆ. ಸಾವಿನ ನಂತರ ನಾಲ್ಕು ಧಾತುಗಳು ಬಾಹ್ಯ ನಾಲ್ಕು
ಧಾತುಗಳೊಂದಿಗೆ ವಿಲೀನವಾಗುತ್ತದೆ. ಸಾವಿನ ನಂತರ ಜೀವವಿಲ್ಲ, ಸತ್ತನಂತರ ಮೂರ್ಖರೂ ಮತ್ತು ಜ್ಞಾನಿಗಳೂ ಎಲ್ಲಾ ಒಂದೇ. ದಾನಕ್ಕೆ ಫಲವಿದೆ, ಪರಲೋಕವಿದೆ ಎನ್ನುವುದು ಸುಳ್ಳು.
4. ಪಕುದ
ಕಚ್ಚಾಯನರ ಅಞ್ಞಿನ ಅಞ್ಞಂ ವಾದ :
ಏಳು ವಿಧದ ಕಾಯಗಳಿವೆ, ಅವು ನಿಮರ್ಿತವಲ್ಲ.
ಪರನಿಮರ್ಿತವೂ ಅಲ್ಲ. ಇವುಗಳ ಹೊರತು ನಿಮರ್ಾಣ ಸಾಧ್ಯವಿಲ್ಲ. ಪರ್ವತ ಶಿಖರದಂತೆ ಅಥವಾ
ಶಿಲಾಸ್ತಂಭದಂತೆ ಸ್ಥಿರವಾಗಿದೆ. ಅವು ಅಚಲ, ಬದಲಾಗದಂತಹುದು,
ಅವೆಂದರೆ ಪೃಥ್ವಿಕಾಯ, ಜಲಕಾಯ, ಅಗ್ನಿಕಾಯ, ವಾಯುಕಾಯ, ಸುಖಕಾಯ, ದುಃಖಕಾಯ ಮತ್ತು
ಆತ್ಮಕಾಯ. ಹೀಗಾಗಿ ಇಲ್ಲಿ ಸಾಯಿಸುವವನು ಯಾರೂ ಇಲ್ಲ, ಸಾಯಲ್ಪಡುವವನೂ ಯಾರೂ ಇಲ್ಲ. ಇಲ್ಲಿ ಹೇಳುವವನು ಅಥವಾ ಕೇಳುವವನು ಇಲ್ಲ. ಇಲ್ಲಿ
ಅರಿತಿರುವವನಾಗಲಿ ಅಥವಾ ವಿವರಿಸುವವನಾಗಲಿ ಇಲ್ಲ. ಇಲ್ಲಿ ಯಾರಾದರೂ ಒಬ್ಬನಿಗೆ ಕತ್ತಿ ತಿವಿದರೆ,
ಅದರಿಂದಾಗಿ ಯಾರ ಪ್ರಾಣವೂ ಹೋಗುವುದಿಲ್ಲ. ಕೇವಲ 7 ಕಾಯಗಳ ಮಧ್ಯೆ ಕತ್ತಿ ಹೋಗಿದೆಯಷ್ಟೇ.
5. ನಿಗಂಟನಾತಪುತ್ರನ
ಸಂಯಮವಾದ:
ಇವರು ನಾಲ್ಕು ವಿಧದ ಸಂಯಮ ವಾದವನ್ನು ಬೋಧಿಸುತ್ತಾರೆ. ಜಲದಿಂದ ಸಂಯಮ
ತಾಳುತ್ತಾರೆ ಅಂದರೆ ಸ್ನಾನವೂ ಮಾಡುವುದಿಲ್ಲ, ಪಾಪದಿಂದ ಸಂಯಮ
ತಾಳುತ್ತಾರೆ, ಆತನು ಪಾಪವೆಲ್ಲವನ್ನು
ತೊಳೆದು ಹಾಕುತ್ತಾನೆ, ಪಾಪವು ದೂರವಿರುವಂತೆ
ಜೀವಿಸುತ್ತಾನೆ. ಈ ರೀತಿಯ ನಾಲ್ಕು ಸಂಯಮದಿಂದಾಗಿ ಆತನು 4 ಗಂಟು (ಬಂಧನ) ಗಳಿಂದ ಬಿಡುಗಡೆ ಹೊಂದಿರುವುದರಿಂದಾಗಿ ಆತನಿಗೆ ನಿಗಂಟ ಎನ್ನುತ್ತಾರೆ ಮತ್ತು
ಗಟ್ಟತೋ ಅಂದರೆ ಗುರಿಪ್ರಾಪ್ತಿ ಮಾಡಿದ್ದರಿಂದ, ಯಟ್ಟತೋ ಹೃದಯವನ್ನು
ವಶಮಾಡಿದ್ದರಿಂದ ಮತ್ತು ತಿಟ್ಟತೋ (ಹೃದಯವು ಸ್ಥಿರವಾದ್ದರಿಂದ) ಆತನಿಗೆ ನಿಗಂಟ ಎನ್ನುತ್ತಾರೆ.
ಇವರ ಪ್ರಕಾರ ಶರೀರದ ತಪ್ಪೇ ಮಹತ್ವಕರವಾಗಿತ್ತು, ಕೆಟ್ಟದಾಗಿತ್ತು. ಅದಕ್ಕೆ ಮೂಲವಾದ ಮನಸ್ಸಿನ ಬಗ್ಗೆ ಅಲಕ್ಷಿಸಿದ್ದರು.
ನಿಗಂಟನಾತಪುತ್ತರ ಸಿದ್ಧಾಂತ ಈ ರೀತಿಯಿತ್ತು: ಯಾವುದೆಲ್ಲ ವ್ಯಕ್ತಿಯು (ಸುಖ, ದುಃಖ ಮತ್ತು ಸುಖವೂ ಅಲ್ಲದ ದುಃಖವೂ ಅಲ್ಲದ) ವೇದನೆಗಳನ್ನು ಅನುಭವಿಸುತ್ತಾನೋ,
ಅದೆಲ್ಲವೂ ಹಿಂದಿನ ಕರ್ಮಗಳಿಂದಲೇ ಆಗಿವೆ. ಹಿಂದಿನ ಕರ್ಮಗಳನ್ನು
ತಡೆಯಬೇಕಾದರೆ ಮುಂದೆ ಯಾವ ಕರ್ಮವನ್ನು ಮಾಡಬಾರದು. ಈ ರೀತಿಯಾಗಿ ಕರ್ಮದ ನಾಶವಾಗುತ್ತದೆ. ಕರ್ಮದ
ನಾಶವಾಗಬೇಕಾದರೆ ನೋವುಗಳ ನಾಶವಾಗಬೇಕು. ನೋವುಗಳ ನಾಶಕ್ಕಾಗಿ ವ್ಯಕ್ತಿ ದೇಹದಂಡನೆ ಮಾಡಬೇಕು.
ಉದಾ: ನಿರ್ವಸ್ತ್ರನಾಗುವುದು, ಕೂದಲನ್ನು
ಕೈಯಿಂದಲೇ ಕೀಳುವುದು, ಉಪವಾಸ ಮಾಡುವುದು, ನೋವುಕಾರಕ ತಪಸ್ಸುಗಳನ್ನು ಆಚರಿಸುವುದು ಇತ್ಯಾದಿ.
6. ಸಂಜಯ
ಬೆಲಟ್ಟಿಪುತ್ರನ ವಿಕ್ಷೇಪವಾದ
ಈತನು ಸೋಲುವ ಭೀತಿಯಿಂದ ಹಾವು ಮೀನಿನಂತೆ ಜಾರಿಕೊಳ್ಳುತ್ತಾನೆ.
ಆಶ್ಚರ್ಯವೇನೆಂದರೆ ಪರಮಪೂಜ್ಯ ಸಾರಿಪುತ್ರರು ಬುದ್ಧಶಾಸನ ಸೇರುವುದಕ್ಕೆ ಮುಂಚೆ ಈತನ ಬಳಿಯಲ್ಲಿ
ಶಿಷ್ಯರಾಗಿದ್ದರು. ಈತನ ಸಿದ್ಧಾಂತವು ಹೀಗಿದೆ: ನೀವು ನನಗೆ ಪರಲೋಕವಿದೆ ಎಂದರೆ ನನಗೂ ಹಾಗೇ
ಅನಿಸಿ ಇದೆ ಎನ್ನುತ್ತಾನೆ. ಹಾಗೆಯೇ ಇಲ್ಲವೆಂದೂ ಹೇಳುವುದಿಲ್ಲ ಮತ್ತು ನನಗೆ ಅದು ಹೀಗಿದೆ ಅಥವಾ
ಹಾಗಿದೆ ಎನಿಸುವುದಿಲ್ಲ ಮತ್ತು ನಾನು ನಿರಾಕರಿಸುವುದೂ ಇಲ್ಲ ಮತ್ತು ನಾನು ಪರಲೋಕವಿಲ್ಲ,
ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಹೇಳಲಾರೆ, ಹಾಗೆಯೇ ನಿರಾಕರಿಸಲಾರೆ, ಹಾಗೆಯೇ ನೀವು ನನಗೆ
ಜೀವಿಗಳು ಇದ್ದಕ್ಕಿದ್ದಂತೆ ಹುಟ್ಟಿರಬಹುದೇ ಎಂದು ಕೇಳಿದರೆ ಅಥವಾ ಕರ್ಮ ಫಲವಿದೆ ಎಂದು ಕೇಳಿದರೆ
ಅಥವಾ ಸಾವಿನ ನಂತರ ಸತ್ಯದಶರ್ಿಯು ಇರುವನೇ ಎಂದು ಕೇಳಿದರೆ ನನಗೂ ಹಾಗೇ ಅನಿಸುತ್ತದೆ, ಹಾಗೆಯೇ ಇಲ್ಲ ಎಂದು ಕೇಳಿದರೆ ಹಾಗೆಯೇ ಅನಿಸುತ್ತದೆ, ಎರಡೂ ನಿಜವೇ ಎಂದು ಕೇಳಿದರೆ ಅದು ಸಾಧ್ಯವೆನಿಸುತ್ತದೆ, ಹಾಗೆಯೇ ಎರಡೂ ಸಾಧ್ಯವಿಲ್ಲವೆಂದು ಅನಿಸುತ್ತದೆ. ನಾನು ಯಾವುದನ್ನೂ
ನಿರಾಕರಿಸಲಾರೆ.
7. ಸುದ್ದಿ
ಅವಲಂಬನೆಕಾರರು: ಇವರು ಕೇವಲ ಸುದ್ದಿಗಳನ್ನೇ
ಅವಲಂಬಿಸಿ ಬೋಧಿಸುತ್ತಿದ್ದರು, ಇವರಿಗೆ ಪ್ರತ್ಯೇಕ
ಮತವಿಲ್ಲ. ಎಲ್ಲರ ಮಿಶ್ರಣ ವಾದವನ್ನು ಬೋಧಿಸುತ್ತಿದ್ದರು.
8. ತಾಕರ್ಿಕ
ಮಿಮಾಂಸಕರು: ಕೇವಲ ತರ್ಕ ಮತ್ತು
ಮಿಮಾಂಸೆಯಿಂದ ವಾದಗಳಲ್ಲೇ ತೊಡಗುತ್ತಿದ್ದರು.
9. ಶಾಶ್ವತವಾದಿಗಳು: ಆತ್ಮ ಅಮರ ಮತ್ತು ನಿತ್ಯ ಪರಿಶುದ್ಧ ಎನ್ನುವವರು.
10. ಇಸ್ಸರವಾದಿಗಳು
: ಎಲ್ಲಕ್ಕೂ ದೇವರೇ ಕಾರಣ ಎನ್ನುವವರು.
ಇತ್ಯಾದಿ.
No comments:
Post a Comment