ಮೂರು ಬಗೆಯ
ಮಿಥ್ಯಾ ಸಿದ್ಧಾಂತಗಳು
ಭಿಕ್ಷುಗಳೇ ಮೂರು ಬಗೆಯ ಮಿಥ್ಯಾ ಸಿದ್ಧಾಂತಗಳಿವೆ. ಅವುಗಳನ್ನು
ಪ್ರಾಜ್ಞರು ಗಂಭೀರವಾಗಿ ಪ್ರಶ್ನಿಸಿದಾಗ, ಪರಿಶೀಲಿಸಿದಾಗ
ಮತ್ತು ಚಚರ್ಿಸಿದಾಗ, ಪಟ್ಟು ಹಿಡಿದಾಗ ಅವುಗಳ
ಟೊಳ್ಳು ದೃಢೀಕೃತವಾಯಿತು. ಯಾವುದವು ಮೂರು ?
ಪುಚ್ಚೇಕತ
ಹೇತು : (1) ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಅವರು ಈ ರೀತಿಯ
ದೃಷ್ಟಿಯನ್ನು ಹೊಂದಿರುತ್ತಾರೆ. ಯಾವುದೆಲ್ಲವು ಸುಖ ಅಥವಾ ದುಃಖ ಅಥವಾ ತಟಸ್ಥ ವೇದನೆಗಳನ್ನು
ವ್ಯಕ್ತಿಯೊಬ್ಬನು ಅನುಭವಿಸುತ್ತಾನೋ ಅದೆಲ್ಲವೂ ಆತನ ಹಿಂದಿನ ಕರ್ಮಗಳಿಂದಲೇ ಆಗುತ್ತಿವೆ.
ಇಸ್ಸರ
ನಿಮ್ಮಾನಹೇತು : (2) ಮತ್ತೆ ಕೆಲವು ಸಮಣ
ಬ್ರಾಹ್ಮಣರಿದ್ದಾರೆ ಅವರು ಈ ರೀತಿಯ ಮಿಥ್ಯಾದೃಷ್ಟಿಯನ್ನು ಬೋಧಿಸುತ್ತಾರೆ: ಯಾವುದೆಲ್ಲವು ಸುಖ
ಅಥವಾ ದುಃಖ ಅಥವಾ ತಟಸ್ಥ ವೇದನೆಗಳನ್ನು ವ್ಯಕ್ತಿಯೊಬ್ಬನು ಅನುಭವಿಸುತ್ತಿದ್ದಾನೋ ಅವೆಲ್ಲವೂ
ಈಸ್ಸರ ನಿಮರ್ಾಣ ಹೇತು (ಸೃಷ್ಟಿಕರ್ತನಿಂದ) ಅಗಿದೆ.
ಅಹೇತು : (3) ಮತ್ತೆ ಕೆಲವು ಸಮಣ
ಬ್ರಾಹ್ಮಣರು ಈ ರೀತಿಯ ಮಿಥ್ಯಾದೃಷ್ಟಿಯನ್ನು ಹೊಂದಿದಾರೆ. ಯಾವುದೆಲ್ಲವೂ ಸುಖ ಅಥವಾ ದುಃಖ ಅಥವಾ
ತಟಸ್ಥತೆಯನ್ನು ವ್ಯಕ್ತಿಗಳು ಅನುಭವಿಸುತ್ತಿರುವರೋ ಅವೆಲ್ಲಕ್ಕೆ ಕಾರಣವಿಲ್ಲವಾಗಿದೆ.
(ಅಕಾರಣೀಯ/ಅಹೇತುಕ ದಿಟ್ಟಿ).
ಭಿಕ್ಷುಗಳೇ, ನಾನು ಹಿಂದಿನ
ಜನ್ಮದ ಕರ್ಮಗಳೇ ಕಾರಣ ಎನ್ನುವವರ ಬಳಿಗೆ ಹೋದೆನು ಮತ್ತು ಹೀಗೆ ಹೇಳಿದೆನು: ಇದು ನಿಜವೇ,
ನೀವು ಬೋಧಿಸುವ ಪ್ರಕಾರ ವ್ಯಕ್ತಿಯೊಬ್ಬನ ಎಲ್ಲಾ ಸುಖ ಅಥವಾ
ದುಃಖಗಳಿಗೆ ಹಿಂದಿನ ಜನ್ಮಗಳೇ ಕಾರಣ ಎಂದು ಹೇಳಿರುವಿರಿ ಎಂದು ಕೇಳಿದ್ದೇನೆ. ಇದು ನಿಜವೇ?
ಅವರು ಹೌದು ಎಂದು ಉತ್ತರಿಸಿದರು.
ಆಗ ನಾನು ಅವರಿಗೆ ಹೀಗೆ ಹೇಳಿದೆನು: ಹಾಗಿದ್ದರೆ ಹಿಂದಿನ ಜನ್ಮದ
ಕರ್ಮಫಲದಿಂದಲೇ ಮಾನವನು ಕೊಲೆಗಾರ, ಕಳ್ಳ, ವ್ಯಭಿಚಾರಿ, ಸುಳ್ಳ, ಮದ್ಯವ್ಯಸನಿ, ಚಾಡಿಕೋರ, ಒರಟ, ಕಾಡುಹರಟೆಗಾರ,
ದುರಾಸೆಪೀಡಿತ, ದ್ವೇಷಿ ಮತ್ತು
ಮಿಥ್ಯಾದೃಷ್ಟಿ ಉಳ್ಳವನಾಗುತ್ತಾನೆ. ಹೀಗಾಗಿ ಯಾರು ಕೆಲವು ಕಾರಣಗಳಿಂದಾಗಿ ಹಿಂದಿನ ಜನ್ಮದಲ್ಲಿ
ಹಿಂದೆ ಬಿದ್ದಿದ್ದರೋ ಅವರಿಗೆ ಈಗಲೂ ಕಾರ್ಯ ಮಾಡುವ ಇಚ್ಛೆಯಿರುವುದಿಲ್ಲ. ಅವರು ಕಾರ್ಯಗಳನ್ನು
ಮಾಡುವುದಿಲ್ಲ. ಅವರಿಗೆ ಇದು ಮಾಡಲು ಅಥವಾ ಅದು ವಜರ್ಿಸಲು ಅಗತ್ಯವೇ ಕಾಣಿಸುವುದಿಲ್ಲ. ಹೀಗಾಗಿ
ನಿಮ್ಮ ಸತ್ಯದ ಪ್ರಕಾರ ಏನೂ ಸಾಧಿಸಲು ಅಥವಾ ವಜರ್ಿಸಲು ಪ್ರಯತ್ನಪಡುವ ಹಾಗೇ ಇಲ್ಲ. ಏಕೆಂದರೆ
ಎಲ್ಲವೂ ಹಿಂದಿನ ಕರ್ಮದಂತೆ ನಿಗಧಿತವಾಗುತ್ತದೆ. ಹೀಗಿರುವಾಗ ನಿಮಗೆ ಶ್ರಮಣ ಜೀವನವು
ಅನ್ವಯವಾಗುವುದಿಲ್ಲ. ನೀವೇ ದ್ವಂದ್ವದಲ್ಲಿ, ಅವ್ಯವಸ್ಥಿತ
ಚಿತ್ತದಿಂದ (ಜೀವನದಿಂದ) ಕೂಡಿರುವಿರಿ.
ಮತ್ತು ಭಿಕ್ಷುಗಳೇ, ಯಾರು ಇಂತಹ ಮಿಥ್ಯಾ
ದೃಷ್ಟಿಗಳನ್ನು ಹೊಂದಿದ್ದರೂ ಅವರಿಗೆ ಇದು ನನ್ನ ವಿಚಾರಪೂರಿತವಾದ ಖಂಡನೆಯಾಗಿತ್ತು.
ಮತ್ತೆ ಭಿಕ್ಷುಗಳೇ, ಯಾವ ಸಮಣ
ಬ್ರಾಹ್ಮಣರು ಎಲ್ಲದಕ್ಕೂ ದೇವರೇ ಕಾರಣ ಎಂದು ಪ್ರತಿಪಾದಿಸುತ್ತಿದ್ದರೊ ಅವರ ಬಳಿಗೆ ನಾನು ಹೋದೆನು
ಮತ್ತು ಹೀಗೆ ಕೇಳಿದೆನು: ಇದು ನಿಜವೇ? ನೀವುಗಳು
ಯಾವುದೆಲ್ಲವೂ ಸುಖ-ದುಃಖಗಳನ್ನು ವ್ಯಕ್ತಿಯು ಅನುಭವಿಸುತ್ತಿರುವನೋ ಅದೆಲ್ಲವೂ ದೇವರಿಂದ
(ಸೃಷ್ಟಿಕರ್ತನಿಂದ) ಆಗುತ್ತಿವೆ ಎಂದು ಹೇಳುವಿರಿ ಎಂದು ಕೇಳಿದ್ದೇನೆ. ಇದು ನಿಜವೇ? ಅವರು ಅದಕ್ಕೆ ಹೌದೆಂದರು.
ಆಗ ನಾನು ಅವರಿಗೆ ಹೀಗೆ ಹೇಳಿದೆನು: ನಿಮ್ಮ ಸಿದ್ಧಾಂತದ ಪ್ರಕಾರ ಮಾನವ
ಕೊಲೆಗಾರನಾಗುವುದು, ಕಳ್ಳನಾಗುವುದು, ವ್ಯಭಿಚಾರಿಯಾಗುವುದು, ಸುಳ್ಳುಗಾರನಾಗುವುದು,
ಮದ್ಯವ್ಯಸನಿಯಾಗುವುದು... ಇವೆಲ್ಲಕ್ಕೂ ದೇವರೇ
ಕಾರಣಕರ್ತನಾಗುತ್ತಾನೆ. ಮತ್ತು ಯಾರೆಲ್ಲರೂ ದುಃಖಿತರೋ (ಹಿಂದೆ ಬಿದ್ದಿರುವರೋ) ಅದಕ್ಕೂ ದೇವರೇ
ಕಾರಣಕರ್ತ ನಾಗುತ್ತಾನೆ. ನಿಮ್ಮ ಸಿದ್ಧಾಂತದ ಪ್ರಕಾರ ಇಲ್ಲಿ ಯಾರು ಇಚ್ಛೆಪಡಲಾರರು.
ಪ್ರಯತ್ನವನ್ನು ಪಡಲಾರರು. ಹಾಗೆಯೇ ಅವರಿಗೆ ಪ್ರಯತ್ನದ ಅಗತ್ಯವಾಗಲಿ ಅಥಾ ವಜರ್ಿಸುವ ಅಗತ್ಯವಾಗಲಿ
ಇಲ್ಲವೇ ಇಲ್ಲ. ನಿಮ್ಮ ವಾದದ ಪ್ರಕಾರ ನೀವು ಸಮಣ ಬ್ರಾಹ್ಮಣರಾಗುವುದು ನಿಮಗೆ
ಅನ್ವಯವಾಗುವುದಿಲ್ಲ. ಏಕೆಂದರೆ ನೀವೇ ದ್ವಂದ್ವದಲ್ಲಿ ಸಿಲುಕಿರುವಿರಿ. ದಿಗ್ಭ್ರಮೆಯಲ್ಲಿ
ಸಿಲುಕಿರುವಿರಿ. ಏನು ಮಾಡಬೇಕು, ಏನು ಮಾಡಬಾರದು ಎಂಬ
ದ್ವಂದ್ವದಲ್ಲಿ ಸಿಲುಕಿ ಕಳೆದುಹೋಗಿರುವಿರಿ.
ಮತ್ತೆ ಭಿಕ್ಷುಗಳೇ, ಯಾವ ಸಮಣ
ಬ್ರಾಹ್ಮಣರು, ವ್ಯಕ್ತಿಯೊಬ್ಬನು ಅನುಭವಿಸುವ
ಸುಖ-ದುಃಖ ಎಲ್ಲಕ್ಕೂ ಕಾರಣವೇ ಇಲ್ಲ. ಆಕಸ್ಮಿಕ ಎಂದು ಪ್ರತಿಪಾದಿಸುತ್ತಿದ್ದರೋ ಅವರ ಬಳಿಗೆ
ಹೋದೆನು ಮತ್ತು ಹೀಗೆ ಹೇಳಿದೆನು: ಇದು ನಿಜವೇ, ನೀವು
ವ್ಯಕ್ತಿಯೊಬ್ಬನ ಸುಖ-ದುಃಖ ಎಲ್ಲಕ್ಕೂ ಕಾರಣವೇ ಇಲ್ಲ, ಎಲ್ಲಾ ಆಕಸ್ಮಿಕ ಎಂದು ಹೇಳುತ್ತಿರುವಿರಾ? ಅವರು ಹೌದೆಂದು
ಪ್ರತಿಕ್ರಿಯಿಸಿದರು.
ಆಗ ನಾನು ಅವರಿಗೆ ಹೀಗೆ ಹೇಳಿದೆನು: ನಿಮ್ಮ ವಾದದ ಪ್ರಕಾರ ಯಾರೆಲ್ಲರೂ
ಕೊಲೆ ಮಾಡುವರೋ, ಕಳ್ಳತನ ಮಾಡುವರೋ, ವ್ಯಭಿಚಾರ ಮಾಡುವರೋ, ಸುಳ್ಳು ಹೇಳುವರೋ,
ಮದ್ಯಸೇವಿಸುವರೋ... ಇವೆಲ್ಲಕ್ಕೂ ಕಾರಣವೇ ಇಲ್ಲವಾಗಿದೆ ಮತ್ತು
ಯಾರೆಲ್ಲರೂ ಅವನತಿಗಿಳಿದಿದ್ದಾರೋ, ದುಃಖಿತರೋ ಅದಕ್ಕೂ
ಕಾರಣವೇ ಇಲ್ಲವಾಗಿದೆ. ಹೀಗಿರುವಾಗ ಮಾನವ ಏಕೆ ಇಚ್ಛಿಸಬೇಕು, ಏಕೆ ಕಾರ್ಯ ಮಾಡಬೇಕು. ಮಾನವನು ಪ್ರಯತ್ನಪಡುವ ಹಾಗಿಲ್ಲ, ಹಾಗೆಯೇ ವಜರ್ಿಸುವ ಹಾಗಿಲ್ಲ. ನಿಮಗೂ ಸಹಾ ಸಮಣ ಬ್ರಾಹ್ಮಣರೆಂಬ ಪದ ಅನ್ವಯವಾಗುವುದಿಲ್ಲ.
ಏಕೆಂದರೆ ನೀವು ದ್ವಂದ್ವಕ್ಕೆ ಸಿಲುಕಿ ಅಂತಹ ಮಿಥ್ಯಾದೃಷ್ಟಿ ಹೊಂದಿದಂತಹ ಸಮಣ ಬ್ರಾಹ್ಮಣರಿಗೆ
ಅದು ನನ್ನ ವಿಚಾರಪೂರಿತವಾದ ಖಂಡನೆಯಾಗಿತ್ತು ಮತ್ತು ಇವೇ ಮೂರು ಮಿಥ್ಯಾ ಸಿದ್ಧಾಂತಗಳಾಗಿವೆ
ಮತ್ತು ಪ್ರಾಜ್ಞರಿಂದ ಶಿಸ್ತಿನಿಂದ ಪ್ರಶ್ನಿಸಲ್ಪಟ್ಟಾಗ, ಪರಿಶೀಲನೆಗೊಳಿಸಲ್ಪಟ್ಟಾಗ, ಚಚರ್ಿಸಲ್ಪಟ್ಟಾಗ
ಅವು ಟೊಳ್ಳೆಂದು ಸಾಬೀತಾಗುತ್ತದೆ.
ಆದರೆ ಭಿಕ್ಷುಗಳೇ, ನಾನು ಬೋಧಿಸುವ
ಧಮ್ಮವು ಖಂಡಿಸುವಂತಹುದು ಆಗಿಲ್ಲ, ನಿಂದನೀಯವಲ್ಲ.
ಮಲಿನವಾದುದಲ್ಲ, ಕಳಂಕ ತರುವಂತಹುದಲ್ಲ,
ಪ್ರಾಜ್ಞರಿಂದ ನಿರಾಕರಿಸುವಂತಹುದಲ್ಲ ಮತ್ತು ಯಾವುದದು ಆ ಧಮ್ಮ ?
ದುಃಖ ಆರ್ಯಸತ್ಯ, ದುಃಖದ ಕಾರಣ
ಆರ್ಯಸತ್ಯ, ದುಃಖ ನಿರೋಧ ಆರ್ಯಸತ್ಯ, ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ ಆರ್ಯಸತ್ಯವಾಗಿದೆ.
No comments:
Post a Comment