ಅಂತಗಹಿಕಾ
ಮಿಥ್ಯಾದೃಷ್ಟಿಗಳು
ಒಮ್ಮೆ ಪರಿವ್ರಾಜಕ ವಚ್ಛಗೊತ್ತನು ಆಗ ಪ್ರಚಲಿತವಾಗಿದ್ದ ದೃಷ್ಟಿಗಳ
ಬಗೆಗಳನ್ನು ಭಗವಾನರಿಗೆ ತಿಳಿಸಿ ಇವುಗಳಲ್ಲಿ ಯಾವುದಾದರೂ ಭಗವಾನರು ಹೊಂದಿದ್ದಾರೆಯೆ? ಎಂದು ಕೇಳಿದನು.
ಆಗ ಭಗವಾನರು ಅಂತಹ ದೃಷ್ಟಿಗಳು ಹೊಂದಿಲ್ಲವೆಂದರು.
ಅವೆಂದರೆ:
1. ಲೋಕವು ಶಾಶ್ವತ ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
2. ಲೋಕವು ಅಶಾಶ್ವತ ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
3. ಲೋಕವು ಅಂತ್ಯವುಳ್ಳದ್ದು ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
4. ಲೋಕವು ಅನಂತವಾದದ್ದು, ಇದು ಸತ್ಯ,
ಮಿಕ್ಕೆಲ್ಲಾ ಮಿಥ್ಯಾ.
5. ಜೀವ ಮತ್ತು ಶರೀರ ಒಂದೇ, ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
6. ಜೀವ ಮತ್ತು ಶರೀರ ಬೇರೆ ಬೇರೆ, ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
7. ತಥಾಗತರು ಸಾವಿನ ನಂತರ ಇರುತ್ತಾರೆ
8. ತಥಾಗತರು ಸಾವಿನ ನಂತರ ಇರುವುದಿಲ್ಲ.
9. ತಥಾಗತರು ಸಾವಿನ ನಂತರ ಇರುತ್ತಾರೆ ಮತ್ತು ಇಲ್ಲ.
10. ತಥಾಗತರು ಸಾವಿನ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ.
ಆಗ ವಚ್ಚಗೊತ್ತ ಹೀಗೆ ಕೇಳಿದನು: ಪೂಜ್ಯ ಗೋತಮರು ಈ ದೃಷ್ಟಿಗಳಲ್ಲಿ
ಯಾವ ಅಪಾಯಗಳನ್ನು ಕಂಡವರಾಗಿ ಇವನ್ನು ತೊರೆದಿರುವರು?
ಆಗ ಭಗವಾನರು ಅದಕ್ಕೆ ಹೀಗೆ ಉತ್ತರಿಸಿದರು:
ವಚ್ಚಗೊತ್ತ, ಇವೆಲ್ಲವೂ
ಕಲ್ಪನಾತ್ಮಕ ದೃಷ್ಟಿಕೋನಕ್ಕೆ ಹೋಗುತ್ತದೆ. ಸತ್ಯವಲ್ಲ, ಪೂರ್ಣ ಸತ್ಯವಲ್ಲ, ಅಂಟುವಿಕೆಗೆ ಹೋಗುತ್ತದೆ.
ಇವೆಲ್ಲವೂ ಹಾದಿ ತಪ್ಪಿಸುವ ಕಾಡಿನಂತಹವು ಆಗಿದೆ, ತಿರುಚಿಸಲ್ಪಟ್ಟಿವೆ.
ದೃಷ್ಟಿಗಳ ಬಂಧನಗಳಾಗಿವೆ, ದುಃಖವನ್ನು ತರುವಂತಹವು
ಆಗಿವೆ, ವ್ಯಥೆಯನ್ನು ತರುತ್ತದೆ. ಕ್ಷೊಭೆಯನ್ನುಂಟು
ಮಾಡುತ್ತವೆ. ಇವು ವಿಕರ್ಷಣೆಗೆ, ವಿರಾಗಕ್ಕೆ,
ನಿರೋಧಕ್ಕೆ, ಉಪಶಮನಕ್ಕೆ,
ಅಭಿಜ್ಞಾಗೆ, ಸಂಭೋಧಿಗೆ ಮತ್ತು
ನಿಬ್ಬಾಣಕ್ಕೆ ಸ್ವಲ್ಪವೂ ಸಹಕಾರಿಯಾಗಿಲ್ಲ. ಈ ಎಲ್ಲಾ ಅಪಾಯಗಳನ್ನು ಕಂಡು ನಾನು ಈ ದೃಷ್ಟಿಗಳಿಂದ
ಪೂರ್ಣವಾಗಿ ದೂರವಾಗಿದ್ದೇನೆ.
ಆಗ ಬುದ್ಧಿವಂತ ವಚ್ಚ ಅಸಾಧಾರಣ ಪ್ರಶ್ನೆ ಹಾಕುತ್ತಾನೆ: ಪೂಜ್ಯ
ಭಗವಾನರಿಗೆ ಯಾವುದಾದರೂ ದೃಷ್ಟಿಕೋನ (ಸಿದ್ಧಾಂತ/ಕಲ್ಪನಾತ್ಮಕ ಅಭಿಪ್ರಾಯ/ಸಾಕ್ಷಾತ್ಕಾರವಲ್ಲದ
ಕೇವಲ ತಿಳುವಳಿಕೆ) ಇದೆಯೇ?
ಆಗ ಭಗವಾನರು ಈ ರೀತಿ ಉತ್ತರಿಸುತ್ತಾರೆ: ವಚ್ಚ, ದೃಷ್ಟಿಕೋನ ಇದು ತಥಾಗತರಿಗೆ ಸಂಬಂಧಪಡುವುದಿಲ್ಲ. ವಚ್ಚ, ತಥಾಗತರಿಗೆ ಸಾಕ್ಷಾತ್ಕಾರವಾಗಿರುವುದು ಏನೆಂದರೆ ದೇಹದ
ಉದಯಿಸುವಿಕೆ ಮತ್ತು ಅದರ ನಾಶ. ವೇದನೆಗಳ ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ. ಸನ್ಯಾ
(ಗ್ರಹಿಕೆ)ಗಳ ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ ಮತ್ತು ಸಂಖಾರ ಮತ್ತು ವಿಞ್ಞಾನದ
ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ. ಓ ವಚ್ಚ, ಇವುಗಳ ಪ್ರತಿ ಹಂತವನ್ನು ಸ್ಪಷ್ಟವಾಗಿ ಅರಿತಿರುವುದರಿಂದಲೇ
ತಥಾಗತರು ಎಲ್ಲಾ ಬಗೆಯ ದೃಷ್ಟಿಕೋನಗಳನ್ನು, ಅಹಂಕಾರಗಳನ್ನು, ಪ್ರವೃತ್ತಿಗಳನ್ನು ಕ್ಷಯಿಸಿ, ವಿರಾಗ, ನಿರೋಧ, ತ್ಯಾಗ, ವಿಮುಕ್ತಿಯನ್ನು ಹೊಂದಿದ್ದಾರೆ
ಬುದ್ಧರ ವಿಷಾಧ :
ದೇವದಹ ಸುತ್ತದಲ್ಲಿ ಭಗವಾನರು ಸಹಾ ದೇಹದಂಡನೆ ಮಾಡುತ್ತಿರುವ ಪಂಥಿಯರನ್ನು ಕುರಿತು ಈ ರೀತಿ ಹೇಳುತ್ತಾರೆ: ಓ ಭಿಕ್ಷುಗಳೇ, ಜೀವಿಗಳು ಅನುಭವಿಸುತ್ತಿರುವ ಸುಖಕ್ಕೆ ಮತ್ತು ದುಃಖಕ್ಕೆ ಸೃಷ್ಟಿಕರ್ತನ ಸೃಷ್ಟಿಯ ಪರಿಣಾಮವೆಂದು ತಿಳಿಯಬಹುದಾದರೆ, ಆಗ ಖಂಡಿತವಾಗಿಯು ಈ ನಗ್ನ ಸಾಧುಗಳು ಪಾಪದಿಂದ ಕೂಡಿದ ದೇವರಿಂದಲೇ ಸೃಷ್ಟಿಯಾಗಿರಬೇಕು. ಏಕೆಂದರೆ ಅವರು ಅಂತಹ ಭಯಾನಕ ದುಃಖ ಅನುಭವಿಸುತ್ತಿದ್ದಾರೆ.
No comments:
Post a Comment