Saturday, 5 October 2019

ಬುದ್ಧರು ಐದು ರೀತಿಯ ಚಕ್ಷುಧಾರಿಗಳು 5 types of eyes of Lord Buddha

ಬುದ್ಧರು ಐದು ರೀತಿಯ ಚಕ್ಷುಧಾರಿಗಳು :


1. ಭೌತಿಕ ಚಕ್ಷು : ಇದರಿಂದ ದೂರದಲ್ಲಿರುವ ಅತಿ ಚಿಕ್ಕ ಜೀವಿಯನ್ನು ನೋಡಬಹುದಿತ್ತು. 
2. ದಿವ್ಯಚಕ್ಷು : ಸರ್ವಜೀವಿಗಳ, ಸರ್ವ ಲೋಕಗಳ ಜ್ಞಾನ ಸಿಗುತ್ತಿತ್ತು.
3. ಪನ್ಯಾ ಚಕ್ಷು : ವಿಪಶ್ಶನ ಜ್ಞಾನ ಸಿಗುವಂತ ಚಕ್ಷು.
4. ಬುದ್ಧ ಚಕ್ಷು : ವ್ಯಕ್ತಿಗಳ ಸುಪ್ತ ಪ್ರವೃತ್ತಿ, ದೌರ್ಬಲ್ಯ ಮತ್ತು ವಿಶೇಷ ಪ್ರತಿಭೆಗಳನ್ನು ಗುತರ್ಿಸಿ ಅವರನ್ನು ನಿಬ್ಬಾಣಕ್ಕೆ ಕರೆದೊಯ್ಯುವ ವಿಶೇಷ ಜ್ಞಾನ ಚಕ್ಷು.
5. ಸಮಂತ ಚಕ್ಷು : ಸರ್ವಜ್ಞಾತಾ ಜ್ಞಾನ ಚಕ್ಷು.


ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳು 32 great man characteristics of Lord Buddha



ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳು


1. ಸಂದಿಲ್ಲದ ಸಮತಟ್ಟಾದ ಪಾದಗಳು
2. ಪಾದಗಳಲ್ಲಿ ಸಾವಿರ ಅರೆಗಳುಳ್ಳ ನೇಮಿ ನಾಭಿಸಹಿತ ಚಕ್ರ ಚಿಹ್ನೆ
3. ತೆಳ್ಳನೆಯ ಉದ್ದವಾದ ಬೆರಳುಗಳು
4. ಸುಲಭವಾಗಿ ಮಣಿಯುವ(ಮೃದುವಾದ) ಕೈ ಹಾಗು ಕಾಲುಗಳು
5. ಅಂಗೈ(ಬೆರಳು)ಗಳು ಹಾಗೂ ಪಾದಗಳು(ಬೆರಳು)ಬಲೆಯಂತೆ (ಇರುವ ರೇಖೆಗಳು) ಇರುತ್ತವೆ
6. ಅಗಲವಾದ ಚಾಚಿದ ಶಂಕಾಕೃತಿಯ ಹಿಮ್ಮಡಿಗಳು
7. ಕಮಾನಿನಂತಿರುವ ಮೇಲ್ಗಾಲು
8. ಸಾರಂಗ (ನಿಗ್ರೋದ)ದಂತಿರುವ ಕಾಲು(ತೋಡೆ)ಗಳು
9. ನಿಂತಿರುವಾಗ ಹಸ್ತಗಳು ಮೊಳಕಾಲುಗಳ ಕೆಳಗೆ ತಾಕುತ್ತದೆ.
10. ಕೋಶದಿಂದ ಆವೃತವಾದ ಪುರುಷೇಂದ್ರೇಯ
11. ಬಾಹುಗಳನ್ನು ವಿಸ್ತರಿಸದಷ್ಟೇ ಎತ್ತರವಿರುವ ದೇಹಾಕೃತಿ, ಅಥವಾ ದೇಹಾಕೃತಿಯಷ್ಟು ಉದ್ದಾವಾದ ತೋಳುಗಳು
12. ಪ್ರತಿ ಕೂದಲು ಗಾಡನೀಲಿವರ್ಣದ್ದು ಹಾಗೂ ಪ್ರತಿ ರೋಮಕೂಪದಲ್ಲು ಒಂದೇ ಕೂದಲಿರುತ್ತದೆ.
13. ದೇಹದ ಕೂದಲು ಅಕರ್ಷಣೆಯಿಂದ ಹಾಗೂ ಗುಂಗರೂ ಆಗಿರುತ್ತದೆ. ಹಾಗೂ ಮೇಲ್ಮುವಾಗಿ ಹಾಗು ಬಲಗಡೆಗೆ ತಿರುಗಿರುತ್ತದೆ.
14. ಸುವರ್ಣವರ್ಣದ ತ್ವಚೆಯ ಬಣ್ಣ,
15. ಹತ್ತು ಅಡಿ ಉದ್ದದ ಪ್ರಭೆ ಸದಾ ಸುತ್ತಲೂ ಆವೃತವಾಗಿರುವುದು.
16. ಕೋಮಲವಾದ ತ್ವಚೆ, ಚರ್ಮದ ಮೇಲೆ ಧೂಳಿರುವುದಿಲ್ಲ.
17. ಪಾದಗಳು, ಅಂಗೈ, ಭುಜಗಳು, ಹಾಗೂ ಶಿರವೂ ಗುಂಡನೆಯ ಆಕೃತಿಯನ್ನು ಹೊಂದಿದೆ.(ದೇಹದಲ್ಲಿ ಸಪ್ತ ಉಬ್ಬುಗಳಿರುತ್ತದೆ)
18. ಆಲದ ಮರದಂತೆ ಸಮಪ್ರಮಾಣದ ಅಂಗಾಂಗಗಳು
19. ಸಿಂಹಾಕೃತಿಯಂತೆ ಕತ್ತು ಹಾಗೂ ಸೊಂಟವಿರುವ ಶರೀರ
20. ಬ್ರಹ್ಮಲೋಕದವರಂತೆ ನೆಟ್ಟಗಿರುವ ಹಾಗೂ ನೇರವಾದ ಶರೀರ
21. ಪೂರ್ಣವಾದ ದುಂಡಾದ ಭುಜಗಳು, ನಡುವೆ ತಗ್ಗು ಇರುವುದಿಲ್ಲ.
22. ಹುಟ್ಟಿದಾಗಲೇ 40 ಹಲ್ಲುಗಳು
23. ಹಲ್ಲುಗಳು ಬಿಳಿ, ಸಮನಾದುದು, ಮಧ್ಯೆ ರಂದ್ರಗಳಿಲ್ಲದೆ ಕೂಡಿರುತ್ತವೆ.
24. ಕ್ಷತ್ರೀಯರಂತಿರುವ ಎದೆಯ ಆಕಾರ
25. ಸಿಂಹದಂತಹ ದವಡೆ, ಸಮಮಟ್ಟದ ಹಲ್ಲಿನ ಸಾಲು
26. ಶ್ರೇಷ್ಟ ಅಭಿರುಚಿಯನ್ನು ಹೊಂದಿರುತ್ತಾರೆ ಆಹಾರ ಸೇವಿಸಿದಾಗ ನಾಲಿಗೆಗೆ ಅಷ್ಟೇ ಅಲ್ಲದೆ, ಎಲ್ಲಾ ಭಾಗಗಳಿಗೂ ರುಚಿ ಸಿಗುವುದು.
27. ಹಣೆ ಹಾಗೂ ಕಿವಿಗಳನ್ನು ಸುಲಭವಾಗಿ ತಾಗುವಂತಹ ಉದ್ದವಾದ ನಾಲಿಗೆ
28. ಚಕ್ರವಾಕ ಪಕ್ಷಿಯಂತೆ ಅಥವಾ ಕೋಗಿಲೆ(ಕರವಿಕ)ಯಂತಹೆ ಪರಮ ಮಾಧುರ್ಯದ ಬ್ರಹ್ಮಸ್ವರವಿರುತ್ತದೆ..
29. ಗಾಢ ಅಭಿನೀಲಿವರ್ಣದ ಕಣ್ಣುಗಳು
30. ರಾಜವೃಷಭಕ್ಕೆರುವಂತಹ ನಯನಗೂದಲುಗಳು
31. ಭೃಮಧ್ಯೆ ಒಂದು ಉಬ್ಬಿದ್ದು ಅದರಲ್ಲಿ ಊದ್ರ್ವಮುಖಿಯಾಗಿರುವ ಅರಳೆಯಂತಹ ಒಂದು ಬಿಳಿ ಕೂದಲಿರುತ್ತದೆ.
32. ಕಿರೀಟದಂತಿರುವಂತಹ ದುಂಡನೆಯ ಶಿರಸ್ಸಿನ ಆಕಾರ.


Friday, 4 October 2019

ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ kathina civara dana


ಕಠಿನ ಚೀವರ ವಸ್ತ್ರ ದಾನ ಸಮಾರಂಭದ ಪ್ರಮುಖ್ಯತೆ


ಭಿಕ್ಖುಸಂಘದ ಮೂರು ತಿಂಗಳ ವರ್ಷವಾಸವು ಪವಾರಣಾ ದಿನದಂದು ಮುಗಿಯುವುದು. ನಂತರ ಬರುವುದೇ ಕಠಿನ ಚೀವರ ವಸ್ತ್ರದಾನದ ಹಬ್ಬ. ಇದು ಪರಂಪರಾಗತವಾಗಿ ಬಂದಿರುವ ಹಬ್ಬವಾಗಿದೆ. ಮತ್ತು ಈ ಸಂಪ್ರದಾಯವು ಕೇವಲ ಥೇರವಾದಿ ಬೌದ್ಧರಲ್ಲಿ ಮಾತ್ರ ಬರುವುದು. ಇದು ಬೌಧ್ಧರ ವಾಷರ್ಿಕ ಹಬ್ಬವಾಗಿದ್ದು ಆ ದಿನದಂದು ಸಂಘದ ಅವಶ್ಯಕತೆಗಳಾದ ಚೀವರ ವಸ್ತ್ರ, ಪಿಂಡಪಾತ ಮತ್ತಿತರ ದಾನಗಳನ್ನು ಉಪಾಸಕರು ಭಿಕ್ಖು ಸಂಘಕ್ಕೆ ನೀಡುವರು.

ಕಠಿನವೆಂದರೆ ಕಠಿಣ, ಕಷ್ಟಕರ, ಬಿರುಸು ಒರಟು ಇತ್ಯಾದಿ ಆರ್ಥಗಳಿವೆ. ಅದರೆ ಇಲ್ಲಿ ಕಠಿನ ವೆಂದರೆ ವರ್ಷವಾಸದ ಅಂತ್ಯದಲ್ಲಿ ಭಿಕ್ಖುಗಳಿಗೆ ವಾಷರ್ಿಕವಾಗಿ ನೀಡುವ ಚೀವರ(ಭಿಕ್ಖುಗಳು ಧರಿಸುವ ವಸ್ತ್ರ) ವಸ್ತ್ರವಾಗಿದೆ. ಚೀವರವು ಪಾಲಿಯ ಪದವಾಗಿದ್ದು, ಕಠಿಣ ಚೀವರವಾಗಿದೆ. ಈ ಕಠಿನವಸ್ತ್ರವನ್ನು(ಒರಟಾದ ಕಾಷಾಯ ವಸ್ತ್ರ) ಸಂಘಕ್ಕೆ ಉಪಾಸಕರು ನೀಡುವರು.

ಈ ಕಠಿನಚೀವರದ ಐತಿಹಾಸಿಕ ಹಿನ್ನಲೆಯು ನಮಗೆ ವಿನಯ ಪಿಟಕದಲ್ಲಿ ಸಿಗುವುದು. ಆಗ ಭಗವಾನರು ಶ್ರಾವಸ್ತಿಯ ಜೇತವನದ ವಿಹಾರದಲ್ಲಿದ್ದರು. ಆಗ 30 ಭಿಕ್ಖುಗಳ ಗುಂಪೂಂದು ವಷರ್ಾವಾಸದ ನಂತರ ಭೇಟಿಯಾಗುತ್ತಾರೆ. ಆಗ ಭಗವಾನರು ಅವರಿಗೆ ಅವರ ವರ್ಷವಾಸದ ಬಗ್ಗೆ ಕೇಳುತ್ತಾರೆ. ಹಾಗೆಯೇ ಅವರ ಹರಿದ ವಸ್ತ್ರಗಳನ್ನು ನೋಡುತ್ತಾರೆ. ಆ ಕಾಲದಲ್ಲಿ ಭಿಕ್ಖುಗಳು ಪಂಸುಕೂಲವನ್ನು(ಹರಿದ ವಸ್ತ್ರ) ಧರಿಸುತ್ತಿದ್ದರು. ಆ ಹರಿದ ವಸ್ತ್ರವನ್ನು ಅವರು ಸ್ಮಶಾನಗಳಲ್ಲಿ, ಬೀದಿಗಳಲ್ಲಿ, ಕಸದ ರಾಶಿಗಳಲ್ಲಿ ಎತ್ತಿಕೊಂಡು ಅವನ್ನು ಸೂಜಿಯಿಂದ ಹೋಲಿದು ಅವನ್ನು ಧರಿಸುತ್ತಿದ್ದರು. ಇದರಿಂದ ನಿವಾರಿಸಿಕೊಳ್ಳಲು ಭಗವಾನರು ಕಠಿನ ಚೀವರ ದಾನಕ್ಕೆ ಅನುಮತಿ ನೀಡಿದರು.

ಬುದ್ಧ ಭಗವಾನರು ವಿನಯ ಪಿಟಕದ ಮಹಾವಗ್ಗದಲ್ಲಿ ಹೇಳಿದ್ದಾರೆ. ಕಠಿನ ಚೀವರ ದಾನವು ಉನ್ನತ ದಾನವಾಗಿದ್ದು, ಕುಶಲ ಕಮ್ಮಗಳಲ್ಲೆ ಅತ್ಯಂತ ಪುಣ್ಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಳೆಯಲಾಗದ ಪುಣ್ಯಫಲವು ನಮಗೆ ತಿಪಿಟಕದ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಉದಾಹರಣೆಗೆ ಪೂಜ್ಯ ನಾಗಿತ ಥೇರರು ತಮ್ಮ ಹಿಂದಿನ ಜನ್ಮವೂಂದರಲ್ಲಿ ಕಠಿನಚೀವರ ದಾನವನ್ನು ಸಂಘಕ್ಕೆ ನೀಡಿದ್ದರು. ಅದರ ಫಲವಾಗಿ ಅವರು ಸ್ವಗರ್ೀಯ ಲೋಕಗಳಲ್ಲಿ ದೇವತೆಗಳ ಒಡೆಯರಾಗಿದ್ದರು. ಹಾಗೂ ಎಂದಿಗೂ ಅಸುಖಕಾರಿ ವಲಯಗಳಲ್ಲಿ ಹುಟ್ಟಿ ದುಃಖಿಸಲಿಲ್ಲ, ಮತ್ತು ತಮ್ಮ ಕೋನೆಯ ಜನ್ಮದಲ್ಲಿ ನಮ್ಮ ಬುದ್ಧರ ಕಾಲದಲ್ಲಿ ಅರಹಂತರಾದರು.

    ಇಂದು ಕಠಿನ ಚೀವರ ಸಮಾರಂಭವು ಪರಂಪರಾಗತ ಎಲ್ಲಾ ಬೌದ್ಧ ದೇಶಗಳಲ್ಲಿ ಅತಿ ದೊಡ್ಡ ಹಬ್ಬವಾಗಿ ಆಚರಿಸಲಾಗುವುದು. ಆ ಇಡೀ ದಿನವು ಬೌದ್ಧರು ದಾನಾದಿ ಪುಣ್ಯಕಮ್ಮಗಳನ್ನು ಮಾಡುತ್ತ ಆನಂದಿಸುವರು. ಜನರೆಲ್ಲ ವಿಹಾರಕ್ಕೆ ಭೇಟಿ ನೀಡುವರು. ಅಲ್ಲಿ ಸೇರಿ ಪಂಚ ಶೀಲ ಅಥವಾ ಅಷ್ಟಾಂಗ ಶೀಲವನ್ನು ಸಂಕಲ್ಪಿಸಿ, ಧಮ್ಮವನ್ನು ಆಲಿಸುತ್ತಾರೆ. ಅಲ್ಲಿ ಉಪಾಸಕರಲ್ಲಿ ಪ್ರತಿನಿಧಿಯಾಗಿರುವವರು ದಾನಗಳನ್ನು ಘೋಷಿಸುತ್ತಾರೆ ಹಾಗೂ ಸಂಘದ ಅವಶ್ಯಕತೆಗಳನ್ನು ಶ್ರದ್ಧಾಪೂರ್ವಕವಾಗಿ ನೀಡುತ್ತಾರೆ. ನಂತರ ಸಂಘಕ್ಕೆ ವಿಧೇಯತೆಯಿಂದ ಆಹಾರವನ್ನು ಬಡಿಸುತ್ತಾರೆ. ಈ ಸಮಾರಂಭದ ಅಂತ್ಯವು ಪುಣ್ಯಾನುಮೋದನೆಯಿಂದ ಆಗುವುದು ಅಂದರೆ ಜ್ಞಾತಿಗಳಿಗೆ(ಮರಣಹೊಂದಿರುವ ಸಂಬಂದಿಕರಿಗೆ) ಹಾಗೂ ಎಲ್ಲಾ ಜೀವಿಗಳಿಗೆ ತಮ್ಮ ದಾನದ ಫಲದ ಪುಣ್ಯವನ್ನು ಹಂಚುವುದು. ಸಂಜೆ ಜನರು ಬೌದ್ಧರು ಬೌದ್ಧ ಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ.

   ಅದರೆ ಭಿಕ್ಖುಗಳು ವಷರ್ಾವಾಸದ ಇಡೀ ಸಮಯವನ್ನು ಧಮ್ಮ ಅಧ್ಯಾಯನ, ದೀರ್ಘಕಾಲದ್ಲ ಧ್ಯಾನಗಳಲ್ಲಿ ತೊಡಗಿ, ಆಹಾರ, ನಿದ್ದೆ, ಇತ್ಯಾದಿಗಳ ಸುಖಗಳನ್ನೂ ಕಡಿತಗೊಳಿಸಿರುತ್ತಾರೆ.
 ಅದ್ದರಿಂದಲೇ ಕಠಿನ ಸಮಾರಂಭವು ಅತಿ ಹೆಚ್ಚು ಧೃಡನಿಧರ್ಾರ, ಸ್ಥಿರತೆಗೆ, ಶಾಂತತೆಗೆ ಹೆಚ್ಚು ಒತ್ತು ನೀಡುವುದು. ಹಾಗೂ ಪ್ರಾಯೋಜಕರು ,ದಾನಿಗಳು ಅಗಣಿತವಾಗಿ ಅಳೆಯಲಾಗದಷ್ಟು ಪುಣ್ಯವನ್ನು ಪಡೆಯುತ್ತಾರೆ. ಈ ಸಮಾರಂಭವು ಸಮಾನ್ಯ ದಾನಕ್ಕಿಂತಲೂ ವಿಶೇಷವಾದುದು. ಇದು ಅತ್ಯಂತ ಪ್ರಮುಖವಾದ ಮತ್ತು ಅತ್ಯಂತ ಲಾಭದಾಯಕ ಕುಶಲಕಮ್ಮವಾಗಿದೆ. ಇದು ನಮ್ಮೆಲ್ಲರ ಆಂತರ್ಯದಲ್ಲಿ ಹುದುಗಿರುವ ಕುಶಲ ಕಮ್ಮಗಳನ್ನು ವಿಕಾಸಿಸುವ ಅತ್ಯುತ್ತಮ ಅವಕಾಶವಾಗಿದೆ. ಮತ್ತು ಇದರಿಂದಾಗಿ ನಿಬ್ಬಾಣವನ್ನು ಪಡೆಯಲು ಬೇಕಾಗಿರುವ ಉನ್ನತ ಮಂಗಳಕರ ಹಾರೈಕೆಗಳು ಸಿಗುವವು.

Tuesday, 17 September 2019

ಅನಗಾರಿಕ ಧಮ್ಮಪಾಲ anagarika dhammapala in kannada

                      ಅನಗಾರಿಕ ಧಮ್ಮಪಾಲ 

    ಇವರ ಪೂರ್ಣ ಹೆಸರು ಶ್ರಿಮತ್ ಅನಗಾರಿಕ ಧಮ್ಮಪಾಲ. ಅದರೆ ಬಾಲ್ಯದ ಹೆಸರು ಡಾನ್ ಡೆವಿಡ್ ಹೆವತಿತರನೆ. ಇವರು ಹುಟ್ಟಿದ್ದು 17-9-1864 ರಂದು. ಕೊಲೊಂಬೊದಲ್ಲಿ. ಇವರು ಶ್ರೀಲಂಕದಲ್ಲಿ ಹಾಗೂ ಭಾರತದಲ್ಲಿ ಹಲವಾರು ಶತಮಾನಗಳಿಂದಲೇ ಕಣ್ಮರೆಯಾಗಿದ್ದಂತಹ ಬೌದ್ಧದಮ್ಮವನ್ನು ಪುನರುಜ್ಜಿವನಗೋಳಿಸಿದವರು. ಹಾಗೂ ಖ್ಯಾತ ಲೇಖಕರು. ಹಾಗೆಯೇ ಮೊದಲ ವಿಶ್ವಮಟ್ಟದ ಬೌದ್ಧಪ್ರಚಾರಕರು ಸಹಾ. ಭಾರತದಂತೆ ಶ್ರೀಲಂಕವೂ ಸಹಾ ಬ್ರಿಟಿಶರ ದಬ್ಬಾಳಿಕೆಗೆ ಗುರಿಯಾಗಿದ್ದಂತಹ ದೇಶ. ಆಗ ಆ ಸಮಯದಲ್ಲಿ ಇವರು ಸಹಾ ಶ್ರೀಲಂಕದಲ್ಲಿ ಅಹಿಂಸಾತ್ಮಾಕ ಸ್ವತಂತ್ರ ಚಳುವಳಿಯ ರೂವಾರಿಯಾಗಿದ್ದರು. ಅವರೊಬ್ಬರೇ ಏಶಿಯಾ, ಯೂರೋಫ್ ಹಾಗೂ ಉತ್ತರ ಅಮೇರಿಕದಲ್ಲಿ ಅಂದರೆ ತ್ರಿಖಂಡದಲ್ಲಿ ಪ್ರಥಮ ಬಾರಿಗೆ ಬೌದ್ಧದಮ್ಮವನ್ನು ಹಾಗೂ ಅದರ ಉತ್ಕೃಷ್ಟತೆಯನ್ನು ಸಾರಿದಂತಹ ಮಾಹಾನುಭಾವರು ಆಗಿದ್ದಾರೆ.

  ಬುದ ್ಧಧಮ್ಮ ಸಂಜೀವಕ :

 ಹೆಲೆನಾ ಬ್ಲಾವಟ್ಸಕಿ ಹಾಗೂ ಹೆನ್ರಿ ಸ್ಟೀಲ್ ಒಲ್ಕೊಟ್ರವರು ಥಿಯಾಸೊಫಿಕಲ್ ಸೊಸೈಟಿಯ ಸೃಷ್ಟಿಕರ್ತರು ಇವರು ಬೌದಧಮ್ಮ್ಧವನ್ನು ಅಭ್ಯಸಿಸಿ ಅದರ ಮಹತ್ವ ಕಂಡು ಅದರ ಉನ್ನತ ವಾಸಂಗಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಅವರು ಶ್ರೀಲಂಕಕ್ಕೆ  ಬಂದರು. ಅಲ್ಲಿ ಅವರು ಬಹಿರಂಗವಾಗಿಯೇ ತಿರತನಕ್ಕೆ ಶರಣು ಹೊಂದಿದರು. ಹಾಗೂ ಶೀಲಗಳ ದೀಕ್ಷೆ ತೆಗೆದುಕೊಂಡರು. ಇವರಲ್ಲಿ ಹೆನ್ರಿಯವರಂತು ಶ್ರೀಲಂಕದ ಬೌದ್ಧ ವಿಧ್ಯಾಭ್ಯಾಸಕ್ಕೆ ಕಾರಣಕರ್ತರಾದರು.  ಅವರು ಅಲ್ಲಿ 300 ಬೌದ್ಧಶಾಲೆಗಳನ್ನು ತೆರೆದರು. ಆ ಸಮಯದಲ್ಲಿ ಕ್ರೈಸ್ತರಾಗಿದ್ದಂತಹ ಡಾನ್ ಡೆವಿಡ್ರವರು ಬೌದ್ಧರಾಗಿ ಅನಗಾರಿಕ ಧಮ್ಮಾಪಾಲರಾದರು. ಅನಗಾರಿಕ ಎಂದರೆ ಮನೆಯಿಲ್ಲವರು ಅಥವಾ ಪಾರಿವ್ರಜಕ ಅಂದರೆ 8 ಶೀಲಗಳನ್ನು ಪಾಲಿಸುವವನು  ಎಂದರ್ಥ.  ಧಮ್ಮಪಾಲ ಎಂದರೆ ಧಮ್ಮವನ್ನು ರಕ್ಷಿಸುವವರು ಹಾಗೂ ಪಾಲನೆ ಮಾಡುವವರು. ಇವರು ಜೀವನವಿಡಿ ಈ ಅಷ್ಟಾಂಗ ಶೀಲದಾರಣೆ ಮಾಡಿದರು. ಇವರನ್ನು ಸಿಂಹಳಿಯರು ಬೋಧಿಸತ್ವ ಎಂದು ಕರೆಯುತ್ತಾರೆ. ಇವರು ಹನ್ರಿ ಹಾಗೂ ಹೆಲೆನರವರ ಜೋತೆಗೊಡಿ ಇವರು ಮೊದಲು ಶ್ರೀಲಂಕದಲ್ಲಿ ಸಾಮಾಜಿಕ ಹಾಗೂ ಧಾಮರ್ಿಕ ಸುಧಾರಣೆಗಳನ್ನು ಮಾಡಿದರು. ನಂತರ ಪಾಶ್ಚಿಮಾತ್ಯರಲ್ಲು ಬೌದ್ಧ ಕ್ರಾಂತಿಯನ್ನು ಎಬ್ಬಿಸಿ ಅವರಲ್ಲು ಪರಿವರ್ತನೆಯನ್ನುಂಟು ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ಗಿಂತ ಅರ್ಧ ಶತಮಾನದ ಮುಂಚೆಯೇ ಇವರು ಭಾರತದಲ್ಲಿ ಸೌಜನ್ಯಕಾರಕ ರೀತಿಯಲ್ಲಿ ಬುದ್ಧರ ಬೋಧನೆ ಹರಡಿದರು. ಆಗ ಅಸಂಖ್ಯಾತ ತಮಿಳರು ಬೌದ್ಧದಮ್ಮದೆಡೆಗೆ ಮರಳಿ ಬಂದರು.

ವಿಶ್ವ ಬೌದ್ಧ ಪ್ರತಿಪಾದಕ : 

ಧಮ್ಮಪಾಲರು 1893ರಲ್ಲಿ ಚಿಕಾಗೊವಿನ ವಿಶ್ವಧರ್ಮಸಮ್ಮೆಳನಕ್ಕೂ ಹೋಗಿದ್ದರು. ಅಲ್ಲಿ ಅವರು ಥೇರವಾದ ಬೌದ್ಧದಮ್ಮದ ಪ್ರಧಾನ ಪ್ರತಿನಿಧಿಯಾಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿದ್ದರು. ಇಬ್ಬರು ಅಲ್ಲಿ ಅನ್ಯೊನ್ಯವಾಗಿದ್ದರು. ವಿಶ್ವಧರ್ಮ ಸಮ್ಮೇಳನದಲ್ಲಿ ಅವರ ಪ್ರವಚನವೊಂದನ್ನು ನೀಡಿದರು ಅದೆಂದರೇ "ವಿಶ್ವವು ಬುದ್ಧರಿಗೆ ಋಣಿಯಾಗಿದೆ" ಇದು ಅತ್ಯಂತ ಜನಪ್ರಿಯವಾಯಿತು.  ಅಲ್ಲಿಂದ ಅವರು 40 ವರ್ಷಗಳ ಕಾಲ ಜಗತ್ತಿನಾದ್ಯಾಂತ ಧಮ್ಮವನ್ನು ಹರಡಿದರು. ಹಾಗೆಯೇ ಶ್ರೀಲಂಕದಲ್ಲಿ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಿದರು. ಹಾಗೂ ಬಾರತದಲ್ಲಿ ವಿಹಾರಗಳನ್ನು ಕಟ್ಟಿದರು.  ಅದರಲ್ಲಿ ಪ್ರಾಧಾನವಾದುದೆಂದರೆ ಸಾರಾನಾಥದ ಚೈತ್ಯ.
ಅವರು ಅನೇಕ ಪ್ರವಚನಗಳನ್ನು ನೀಡಿದ್ದಾರೆ ಹಾಗೂ ಅನೇಕ ಗೃಂಥಗಳನ್ನು ಬರೆದಿದ್ದಾರೆ.
ವಿಶ್ವವು ಬುದ್ಧರಿಗೆ ಋಣಿಯಾಗಿದೆ,
ಅವೆಂದರೇ ಬೌದ್ಧದರ್ಮದ ಸಾಕಾರಾತ್ಮಕ ಆಶಾವಾದ,
ಬುದ್ಧರ ಸಂದೇಶ,
ಇತ್ಯಾದಿ


      ಬುದ್ಧಗಯಾದ ಪುನರ್ನಿಮರ್ಾತ :

 ಇವರು 1891ರಲ್ಲಿ ಬೋಧ್ಗಯಾಗೆ ಬೇಟಿ ನೀಡುತ್ತಾರೆ. ಆಗ ಅವರಿಗೆ ಅಳುವೇ ಬಂದು ಬಿಟ್ಟಿತು ಏಕೆಂದರೆ ಸಾಮ್ರಾಟ್ ಅಸೋಕನು ಕಟ್ಟಿಸಿದ ಚೈತ್ಯವು ಶಿಥಿಲವಾಗಿತ್ತು. ಅಲ್ಲಿ ಬೌದ್ಧರೆನಿಸಿಕೊಳ್ಳುವವರು ಯಾರು ಇಲ್ಲ. ಅದು ಶೈವರ ಬ್ರಾಹ್ಮಣರ ಆಡಳಿತದಲ್ಲಿತ್ತು. ಬುದ್ಧರ ವಿಗ್ರಹವನ್ನು ಹಿಂದು ವಿಗ್ರಹದಂತೆ ಬದಲಾಯಿಸಿತ್ತು. ಅಲ್ಲಿ ಶೈವರು ಬೌದ್ಧರನ್ನು  ಬರಲು ಬಿಡುತ್ತಿರಲಿಲ್ಲ. ಹೀಗಾಗಿ ಇವರು ಅಲ್ಲಿ ದ್ಯಾನ ಮಾಡಲು ಸಹಾ ಆಗಲಿಲ್ಲ. ಅವರಿಗೆ ಅಪಾರ ದುಃಖವಾಯಿತು. ಅವರು ಅಂದೇ ಈ ರೀತಿಯ ಬೌದ್ಧರ ಪ್ರತಿಯೊಂದನ್ನು ಮರಳಿ ಬೌದ್ಧರಿಗೆ ಮರಳಿಸುವ ಧೃಢ ಸಂಕಲ್ಪ ತಾಳಿದರು. ಪರಿಣಾಮವಾಗಿ ಕೊಲೊಂಬೊದಲ್ಲಿ 1891 ರಲ್ಲಿ ಹಾಗೂ 1892 ರಲ್ಲಿ ಕಲ್ಕತ್ತದಲ್ಲಿ ಮಹಾಬೋಧಿ ಸೊಸೈಟಿಯನ್ನು ಸ್ಥಾಪಿಸಿದರು. ಹಾಗೂ ಬೌದ್ಧರ ಪವಿತ್ರ ಕ್ಷೇತ್ರಗಳಾದ ಲುಂಬಿಣಿ. ಬೋಧ್ಗಯಾ, ಸಾರಾನಾಥ, ಹಾಗೂ ಕುಸಿನಾರದಲ್ಲಿ ಅವನೆಲ್ಲಾ ಮರಳಿ ಬೌದ್ಧರಿಗೆ ನೀಡುವಂತೆ ಅವರು ಕೇಸನ್ನು ಹಾಕಿದರು. ಅದರೆ ಅದು ಯಶಸ್ಸು ಕಂಡಿದ್ದು ಮಾತ್ರ 16 ವರ್ಷಗಳ ನಂತರ 1947 ರಲ್ಲಿಯೇ. ಅದರೆ ಅದರ ವಿಮೋಚನೆ ಹೋರಾಡುತ್ತಲೆ 1933ರಲ್ಲೆ ಪ್ರಾಣ ಬಿಟ್ಟರು . ಅವರು ಅದೇ ವರ್ಷ ಭಿಕ್ಖುಗಳಾಗಿದ್ದರು.
         ಇಂದಿಗೂ ಅವರ ಪ್ರತಿಮೆಯು ಕಲ್ಕತ್ತದ ಕಾಲೇಜು ಸ್ಕೇರ್ನಲ್ಲಿದೆ. ಅವರ ಗೌರವಾರ್ಥಕ್ಕಾಗಿ ಅವರ ಅಂಚೆ ಚೀಟಿಯನ್ನು ಭಾರತವು 2014ರಂದು ಬಿಡುಗಡೆ ಮಾಡಿದೆ.

Wednesday, 14 August 2019

The Significance Of August Month Full Moon Day ಆಗಷ್ಟ್ ತಿಂಗಳ ಹುಣ್ಣಿಮೆಯ ವಿಶೇಷ

ಆಗಷ್ಟ್ ತಿಂಗಳ ಹುಣ್ಣಿಮೆಯ ವಿಶೇಷ

ಇಂದು ಪ್ರಮುಖವಾಗಿ 2 ವಿಶೇಷಗಳು ಘಟಿಸಿವೆ
1. ಪೂಜ್ಯ ಆನಂದರವರು ಅರಹಂತರಾಗಿದ್ದು.
2. ಮೊದಲ ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ) ನಡೆದುದ್ದು.

ಬುದ್ಧನ ಮಹಾಪರಿನಿಬ್ಬಾಣದ ನಂತರ ಬುದ್ಧ ಶಾಸನದ ಥೇರರು ಮತ್ತು ಆಚಾರ್ಯರು ಸೇರಿ ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ)ಯನ್ನು ಆಯೋಜಿಸುವ ಸಂದರ್ಭ ಒದಗಿಬಂತು. ಇದರ ಉದ್ದೇಶವೆಂದರೆ ಬುದ್ಧನು ಉಪದೇಶಿಸಿದ ಧಮ್ಮ ಮತ್ತು ವಿನಯವನ್ನು ನೆನಪಿನಿಂದ ಕಂಠಸ್ಥ ಮಾಡಿ ಹೇಳುವುದು. ಹೀಗೆ ಮಾಡುವುದರಿಂದ ಜ್ಞಾನ, ಸಾಧನೆ ಮತ್ತು ಸಾಕ್ಷಾತ್ಕಾರವೆಂಬ ಮೂರು ಮೂಲಗಳಿಂದ ಪರಿಯತ್ತಿ, ಪಟಿಪತ್ತಿ ಮತ್ತು ಪಟಿವೇಧ ಸಮ್ಮಾಸಂಬುದ್ಧರ ಮಾತುಗಳನ್ನು ಮೂಲ ರೂಪದಲ್ಲೇ ಸಂರಕ್ಷಿಸಿಕೊಂಡು ಬರುವುದು.
ಮೇಲೆ ಹೇಳಿದ ಸಂದರ್ಭ ಯಾವುದೆಂದರೆ ಸುಬದ್ಧ ಎನ್ನುವ ನಾಪಿತ ಕುಲದವನು ಮುಪ್ಪಿನಲ್ಲಿ ಭಿಕ್ಖುವಾದ ಮೇಲೆ ಒಮ್ಮೆ ಭಿಕ್ಖುಗಳ ಗುಂಪಿಗೆ ಅಗೌರವ ತರುವ ರೀತಿಯಲ್ಲಿಯೇ ಹೀಗೆ ಹೇಳುತ್ತಾನೆ: ಇನ್ನು ಸಾಕು, ಸೋದರರೆ, ಶೋಕಿಸುವುದು ಸಾಕು, ಮಹಾಸಮಣ ತೊಲಗಿ ಹೋದ. ಮಹಾಸಮಣ ಇಲ್ಲಿ ಬುದ್ಧರು.
ನಾವು ಅವರಿಂದ ಸೃಷ್ಟಿಸಲ್ಪಟ್ಟ ವಿನಯದಿಂದ (ಶಿಸ್ತಿನ ನಿಯಮಗಳು) ಬಹಳ ತೊಂದರೆಗೊಳಗಾದೆವು. ಇದನ್ನು ಮಾಡಬೇಕು, ಇದನ್ನು ಮಾಡಬಾರದು; ಆದರೆ ಈಗ ನಾವು ಏನು ಮಾಡಬೇಕೆನ್ನಿಸುತ್ತದೊ ಅದನ್ನು ನಾವು ಮಾಡಬಹುದು ಮತ್ತು ಏನು ಮಾಡಬಾರದೆಂದು ನಮಗನಿಸುತ್ತದೋ ಅದನ್ನು ಮಾಡದೇ ಇರಬಹುದು.
ವೃದ್ಧನಾದ ಸುಭದ್ಧನು ಆರಾಮವಾದ ಬದುಕನ್ನು ಮಾಡಬೇಕೆಂದು ಒಬ್ಬ ಕಳ್ಳ ಸಂನ್ಯಾಸಿಯಾದನು. ಸಂಘದಲ್ಲಿ ಸೇರುವುದು ಅವನಿಗೆ ಸುಲಭವಿತ್ತು. ಕಾರಣ ಅಲ್ಲಿ ಜಾತಿ ಅಥವಾ ಯಾವುದೇ ನಿರ್ಬಂಧಗಳಿರಲಿಲ್ಲ. ಸಂಘದಲ್ಲಿ ರಾಜರೂ ಸದಸ್ಯರಾಗಿದ್ದರು ಸುಭದ್ಧನೂ ಇರುವಂತೆ. ಸುಭದ್ಧನ ಈ ಮಾತನ್ನು ಸಂಘದ ಅತ್ಯಂತ ಹಿರಿಯ ನಾಯಕನಾದ ಮಹಾಕಸ್ಸಪನು ಕೇಳಿಸಿಕೊಂಡನು. ಸುಭದ್ಧನ ಈ ರೀತಿಯ ಮನೋ ಧರ್ಮದಿಂದ ಬುದ್ಧ ಶಾಸನಕ್ಕೆ ತೊಂದರೆಯಾಗುತ್ತದೆಂದು ಯೋಚಿಸಿದನು.

ಆ ಸಮಯದಲ್ಲಿ ಅಲ್ಲಿ ಕೇವಲ 499 ಅರಹಂತರಿದ್ದರು. 500ಕ್ಕೆ ಒಬ್ಬರು ಅರಹಂತರು ಬಾಕಿ ಇದ್ದರು. ಆಗ ಮಹಾಕಸ್ಸಪರವರು ಆನಂದರವರನ್ನು ಶೀಘ್ರದಲ್ಲಿಯೇ ಅರಹಂತರಾಗುವಂತೆ ಕೇಳಿಕೊಂಡರು. ಅದರಂತೆಯೇ ಆನಂದರವರು ಅಂದೇ ಅರಹಂತರಾದರು. ಹೀಗೆ ಮಹಾಧಮ್ಮ ಭಂಡಾರಿಕ ಆನಂದರ ಸಹಿತ 500 ಅರಹಂತರ ಉಪಸ್ಥಿತಿಯಲ್ಲಿ ಈ  ಧಮ್ಮ ಸಂಗೀತಿ (ಮೊದಲ ಬೌದ್ಧ ಸಂಗಾಯನ) ನಡೆಯಿತು.

ಆದ್ದರಿಂದಲೇ ಐದು ನೂರು ಮಹಾ ವಿದ್ವಾಂಸರಾದ ಅರ್ಹಂತರನ್ನು ಎಲ್ಲ ಧಮ್ಮ ಆಚಾರ್ಯರನ್ನು ಸೇರಿಸಿ ಸಭೆ ಕರೆದನು. ಈ ಎಲ್ಲಾ ಥೇರರು ಒಂದೆಡೆ ರಾಜಗಹದ ಸತ್ತಪಣ್ಣಿ ಗುಹೆಯಲ್ಲಿ ಮೊಟ್ಟಮೊದಲ ಬೌದ್ಧ ಸಂಗಾಯನದಲ್ಲಿ ಸೇರಿದರು. ಈ ಐತಿಹಾಸಿಕ ಸಭೆಗೆ ರಾಜ ಅಜಾತಸತ್ತುವು ಎಲ್ಲ ವ್ಯವಸ್ಥೆಯನ್ನು ಮಾಡುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದನು. ಈ ಸಂಗಾಯನವು ಈಗ ನಾವು ಯಾವ ತಿಪಿಟಕವನ್ನು ನೋಡುತ್ತಿದ್ದೆವೊ ಅದನ್ನು ಏಳು ತಿಂಗಳಕಾಲ ಪಠಿಸಿತು.
ಇಬ್ಬರು ಮಹಾಪಠಕರು ಪೂಜ್ಯ ಅರ್ಹಂತ ಉಪಾಲಿಯು ವಿನಯದ ಮೇಲೆ ಪಾಂಡಿತ, ಹೊಂದಿದವರು ವಿನಯವನ್ನು ಪಠಿಸಿದರು. ಇನ್ನೊಬ್ಬರು ಪೂಜ್ಯ ಆನಂದರು ಧಮ್ಮಭಂದಗಾರಿಕಾ ಆಗಿದ್ದರು. ಅವರಿಗೆ ಮೂರು ಪಿಟಕಗಳ ಮೇಲೂ ಪಾಂಡಿತ್ಯವಿತ್ತು. ಹೀಗೆ ಥೇರವಾದ ಮಹಾ ಸಂಘದ ದೆಸೆಯಿಂದಾಗಿಯೇ ಬುದ್ಧನ ಉಪದೇಶಗಳು ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದು ಇಲ್ಲಿಯವರೆಗೂ ಇವೆ.
ಮಹಾ ಥೇರರಾದ ಮಹಾಕಸ್ಸಪರು ಈ ಕೆಳಗಿನಂತೆ ವಿಧಾನವನ್ನು ಅನುಸರಿಸಿದರು. ಮೊದಲು ಅವರು ಸಂಘವನ್ನು ಸೇರಿಸಿ ಬುದ್ಧವಚನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರಲು ಮತ್ತು ಮುಂದಿನ ಜನಾಂಗದ ಅನುಕೂಲಕ್ಕಾಗಿ ಪಠಿಸುವವರ ಪರಿಷತ್ತನ್ನು ಅಂದರೆ ಧಮ್ಮ ಸಂಗೀತಿಯನ್ನು ಕೂಡಲೇ ಸೇರಿಸಬೇಕೆಂದರು. ಸಂಘವು ಅದಕ್ಕೆ ಒಪ್ಪಿಗೆ ನೀಡಿತು. ರಾಜಗಹವನ್ನು ಪರಿಷತ್ತಿನ ಸ್ಥಳವನ್ನಾಗಿ ಆರಿಸಿಕೊಂಡು ಪೂಜ್ಯ ಮಹಾ ಕಸ್ಸಪರಿಗೆ ಪಠಿಸುವವರನ್ನು ಆಯ್ಕೆ ಮಾಡಿಕೊಳ್ಳಲು ಅಧಿಕಾರ ನೀಡಿತು. ಅವರು ಐದುನೂರು ವಿದ್ವಾಂಸರಾದ ಅರ್ಹಂತ ಶಿಷ್ಯರನ್ನು ಆಯ್ಕೆ ಮಾಡಿದರು. ಅವರೆಲ್ಲರೂ ಪಟಿಸಂಭಿಧ ಜ್ಞಾನವನ್ನು ಹೊಂದಿ, ಇಡೀ ಬುದ್ಧವಚನವನ್ನು ತಮ್ಮ ದಿವ್ಯ ಶಕ್ತಿಯಿಂದ ನೆನಪಿನಲ್ಲಿಟ್ಟುಕೊಂಡು ಪಠಿಸುವವರಾಗಿದ್ದರು.
ಪೂಜ್ಯ ಮಹಾ ಕಸ್ಸಪರು ಮಗಧ ದೇಶದ ದೊರೆ ಅಜಾತಸತ್ತುವಿಗೆ ಸಂಘದ ತೀಮರ್ಾನವನ್ನು ತಿಳಿಸಿದರು. ಮಗಧದ ಪ್ರಭಾವಶಾಲಿ ರಾಜನಾದ ಅಜಾತಸತ್ತುವು ಬುದ್ಧನ ವಿನಮ್ರ ಅನುಯಾಯಿ. ಈ ಹಿಂದೆ ರಾಜಗಹವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ವಿನಂತಿಸಿದ್ದ. ಆದ್ದರಿಂದ ಸತ್ತಪಣ್ಣಿ ಗುಹೆಯ ಹೊರಗಡೆ ಒಂದು ವಿಶಾಲ ವೇದಿಕೆಯನ್ನು ಎಲ್ಲ ವಾಸ್ತು ಲಕ್ಷಣಗಳೊಂದಿಗೆ ನಿಮರ್ಿಸಿ ಪರಿಷತ್ತಿಗಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿದ. ಹೀಗೆ ಬುದ್ಧನ ಮಹಾ ಪರಿನಿಬ್ಬಾಣದ ಮೂರು ತಿಂಗಳ ತರುವಾಯ ಐದುನೂರು ವಿದ್ವಾಂಸರಾದ ಅರ್ಹಂತ ಥೇರರು, ಜ್ಞಾನೋದಯ ಹೊಂದಿದ ಬುದ್ಧನ ಶಿಷ್ಯರು ರಾಜಗಹದಲ್ಲಿ ಸೇರಿ ಮಹಾ ಗುರುವಿನ ಎಲ್ಲ ಉಪದೇಶಗಳನ್ನು ಏಳು ತಿಂಗಳ ಕಾಲ ಪಠಿಸಿದರು. ಪೂಜ್ಯ ಮಹಾಕಸ್ಸಪರು ಈ ಅಭೂತಪೂರ್ವವಾದ ಮೊದಲು ಮಹಾ ಸಂಗಾಯನದ ಅಧ್ಯಕ್ಷರಾಗಿದ್ದರು.
ಭಗವಾನ್ ಬುದ್ಧರೇ ಪೂಜ್ಯ ಉಪಾಲಿ ಥೇರರನ್ನು ವಿನಯದಲ್ಲಿ ಮಹಾ ಪಂಡಿತನೆಂದು ಗುರುತಿಸಿದ್ದರು.  ಇಂತಹ ಉಪಾಲಿಯು ವಿನಯದ ಪ್ರತಿಯೊಂದು ಭಾಗವನ್ನು ಅದರ ಚಾರಿತ್ರಿಕ ಹಿನ್ನೆಲೆಯನ್ನು ನೀಡುತ್ತಾ ಇಡೀ ವಿನಯಪಿಟಕವನ್ನು ಪಠಿಸಿದರು. ಬುದ್ಧರು ಪೂಜ್ಯ ಆನಂದ ಥೇರರನ್ನು ಧಮ್ಮಭಂಡಾರಿಕಾ ಎಂದು ಕರೆದಿದ್ದರು. ಇಂತಹ ಆನಂದರು ಇಡೀ ಸುತ್ತ ಮತ್ತು ಮಾತಿಕಾ (ಅಭಿಧಮ್ಮ ಪಿಟಕ)ಗಳನ್ನು ಪಠಿಸಿದರು. ಹೀಗೆ ಬುದ್ದೋಪದೇಶಗಳು ಮಹಾ ಗುರುವಿನ ಕಾಲದಲ್ಲೇ ವ್ಯವಸ್ಥೆಗೆ ಒಳಪಟ್ಟು ಅಲ್ಲಿಂದ ಇಲ್ಲಿಯವರೆಗೆ ಅಧಿಕೃತವಾಗಿ ಮೊದಲ ಸಂಗಾಯನದ ಮೊದಲ ಅಗ್ರಗಣ್ಯ ವಿದ್ವಾಂಸ, ಪ್ರಸಿದ್ಧ ಅರ್ಹಂತರಿಂದ ನಮಗೆ ಬಂದಿವೆ.

Friday, 24 May 2019

ಶೀಲವಿಶುದ್ದಿ silavisuddhi

 ಶೀಲವಿಶುದ್ದಿ 



" ಕರ್ಮಗಳಿಂದ, ದರ್ಶನದಿಂದ ಮತ್ತು ಸತ್ಯದಿಂದ ಶೀಲದಿಂದ, ಉದಾತ್ತ ಜೀವನದಿಂದ ಜೀವಿಗಳು ವಿಶುದ್ದಿ ಹೊಂದುತ್ತವೆ ಹೊರತು ಗೋತ್ರಗಳಿಂದಲ್ಲ, ಐಶ್ವರ್ಯದಿಂದಲ್ಲ."

" ಯಾರು ನಿರಂತರ ಶೀಲಾಚಾರಿಯೋ, ಪ್ರಾಜ್ಞನೋ, ಸಮಾಧಿಸಿದ್ಧನೋ ಅಂತಹ ಪರಿಶ್ರಮಿ ಪರಾಕ್ರಮಿ ಮಾತ್ರ ದಾಟಲು ಕಡುಕಷ್ಟವಾಗಿರುವಂತಹ ಪ್ರವಾಹವನ್ನು ದಾಟುತ್ತಾನೆ."

ಶೀಲವಿಶುದ್ದಿಯು ನಿಬ್ಬಾಣ ಸಾಧಿಸುವಿಕೆಯಲ್ಲಿನ ಸಪ್ತವಿಶುದ್ದಿಯಲ್ಲಿ ಪ್ರಥಮ ವಿಶುದ್ದಿಯಾಗಿದೆ. ಹೀಗಾಗಿ ಯಾರು ದುಃಖವನ್ನು ಬಯಸುವುದಿಲ್ಲವೋ ಅವರು ಕಡ್ಡಾಯವಾಗಿ ಶೀಲವನ್ನು ಪಾಲಿಸಬೇಕಾಗಿದೆ. ನಾವಿಂದು ಈ ಜನ್ಮದಲ್ಲಿ ಅನುಭವಿಸುತ್ತಿರುವ ಕೆಲವು ದುಃಖಗಳಿಗೆ ನಮ್ಮ ಹಿಂದಿನ ಜನ್ಮದ ಪಾಪಗಳೇ ಕಾರಣವಾಗಿದೆ.

ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪ ಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ.
ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.

ಭಿಕ್ಷುಗಳಲ್ಲಿ ಶೀಲವು ಈ ರೀತಿ ಲಕ್ಷಣಗಳಿಂದ ಕೂಡಿರುತ್ತದೆ. ಹೇಗೆಂದರೆ ಪರಿಶುದ್ಧತೆ, ಪೂರ್ಣ ಬ್ರಹ್ಮಚರ್ಯೆ, ಇಚ್ಛಾಪೂರ್ವಕ ಬಡತನ, ವಿಧೇಯತೆ, ಸರಳತೆ, ನಿಸ್ವಾರ್ಥಸೇವೆ, ಸ್ವನಿಯಂತ್ರಣ, ಸಹನೆ, ಕರುಣೆ ಮತ್ತು ಅಹಿಂಸೆ.

ಶೀಲ ವಿಶುದ್ದಿಯಲ್ಲಿ 4 ಅಂಗಗಳು ಕೂಡಿರಲೇಬೇಕು. ಅದೆಂದರೆ ಪಾತಿಮೋಕ್ಖ ಶೀಲ, ಇಂದ್ರೀಯ ಸಂಯಮ, ಸಮ್ಮಾಜೀವನ ಮತ್ತು ಅವಶ್ಯಕ ವಸ್ತುಗಳನ್ನು ಚೆನ್ನಾಗಿ ಚಿಂತಿಸಿ ಅಂಟದೆ ಬಳಕೆ ಮಾಡುವುದು.

ಶೀಲದಲ್ಲಿ ಆರ್ಯ ಅಷ್ಟಾಂಗ ಮಾರ್ಗದ 3 ಅಂಗಗಳು ಇರುತ್ತದೆ. ಅವೆಂದರೆ:

1. ಸಮ್ಮಾ ವಾಚಾ (ಸಮ್ಯಕ್ ಸಂಭಾಷಣೆ)
2. ಸಮ್ಮಾ ಕಮ್ಮಂತ (ಸಮ್ಯಕ್ ಕರ್ಮ)
3. ಸಮ್ಮಾ ಅಜೀವೋ (ಸಮ್ಯಕ್ ಜೀವನೋಪಾಯ)

1. ಸಮ್ಮಾ ವಾಚಾ

ಸಮ್ಮಾ ವಾಚಾದಲ್ಲಿ ಸಂಭಾಷಣೆ ಯಾವರೀತಿ ಇರಬೇಕೆಂದು ಭಗವಾನರು ಹೀಗೆ ವಿವರಿಸುತ್ತಾರೆ.
ಸುಳ್ಳಿನಿಂದ ವಿರತನಾಗುವುದು, ಚಾಡಿಯಿಂದ ವಿರತನಾಗುವುದು, ಕಟು ನಿಂದೆಗಳಿಂದ ವಿರತನಾಗುವುದು ಮತ್ತು ಸೋಮಾರಿತನದ ಹರಟೆಗಳಿಂದ ವಿರತನಾಗುವುದು ಇದೇ ಯೋಗ್ಯವಾದ ಸಂಭಾಷಣೆಯಾಗಿದೆ. ಸಾಧಕನು ಸುಳ್ಳನ್ನು ತ್ಯಜಿಸಿ ಆತನು ಸತ್ಯವನ್ನೇ ಹೇಳುತ್ತಾನೆ. ಸತ್ಯವನ್ನೇ ಹಿಡಿಯುತ್ತಾನೆ. ದೃಢವಾಗಿರುತ್ತಾನೆ, ನಂಬಿಕೆಗೆ ಅರ್ಹನಾಗಿರುತ್ತಾನೆ. ಜಗತ್ತಿಗೆ ಮೋಸ ಮಾಡುವುದಿಲ್ಲ. ಚಾಡಿಯಿಂದ ಜನರನ್ನು ಬೇರ್ಪಡಿಸುವುದಿಲ್ಲ. ಬದಲಾಗಿ ಜನರನ್ನು ಐಕ್ಯತೆವುಂಟು ಮಾಡುವ ಮಾತುಗಳನ್ನು ಆಡುತ್ತಾನೆ. ಐಕ್ಯತೆಯಲ್ಲಿ ಆನಂದಿಸಿ ಐಕ್ಯತೆಯನ್ನು ಸೃಷ್ಠಿಸುತ್ತಾನೆ.
ಸಾಧಕನು ಕಟು ಮಾತುಗಳನ್ನು ತ್ಯಜಿಸುತ್ತಾನೆ, ಕಿವಿಗೆ ಇಂಪಾದ ಮಾತುಗಳನ್ನು ಆಡುತ್ತಾನೆ, ಪ್ರೀತಿಯುತ, ಹೃದಯಕ್ಕೆ ಸುಸ್ಪರ್ಶ-ನಾಟುವಂತಹ, ನಮ್ರವಾದ, ಜನರಿಗೆ ಹಿತಕ್ಕಾಗಿಯೇ ಮಧುರ ಮಾತುಗಳನ್ನು ಆಡುತ್ತಾನೆ.
ಸೋಮಾರಿತನದ ಹರಟೆಯನ್ನು ವಜರ್ಿಸುತ್ತಾನೆ. ಕಾಲ ಯೋಗ್ಯವಾದ ಮಾತುಗಳನ್ನು ಆಡುತ್ತಾನೆ, ವಾಸ್ತವವನ್ನು ನುಡಿಯುತ್ತಾನೆ, ಗುರಿಗೆ ಸಂಬಂಧಿಸುವುದನ್ನು ಹೇಳುತ್ತಾನೆ. ಧಮ್ಮವನ್ನು, ವಿನಯವನ್ನು ನುಡಿಯುತ್ತಾನೆ. ಸಂಗ್ರಹ ಯೋಗ್ಯ ಮಾತುಗಳನ್ನು ಆಡುತ್ತಾನೆ. ವಿಚಾರಭರಿತ, ಮೌಲ್ಯಯುತ, ನಿಯಂತ್ರಿತ ಮಾತುಗಳನ್ನು ಆಡುತ್ತಾನೆ. ವ್ಯರ್ಥವಾದ, ಲೋಭಪ್ರೇರಿತ, ದ್ವೇಷಪ್ರೇರಿತ, ಮೋಹಪ್ರೇರಿತ ಮಾತುಗಳನ್ನು ಆಡುವುದಿಲ್ಲ.
ಯಾವುದು ವಾಸ್ತವವೋ, ಸತ್ಯವೋ, ಹಿತವೋ, ಪ್ರಿಯವೋ ಒಪ್ಪುವಂತಹುದೋ, ಕಾಲಯೋಗ್ಯವೋ ಅಂತಹ ಮಾತುಗಳನ್ನು ಆಡುತ್ತಾನೆ.


2. ಸಮ್ಮಾ ಕಮ್ಮಂತ (ಯೋಗ್ಯವಾದ ಕರ್ಮ)

ಇಲ್ಲಿ ಸಾಧಕ ಜೀವಹತ್ಯೆಯಿಂದ ವಿರತನಾಗುವುದು, ಕಳ್ಳತನದಿಂದ ವಿರತನಾಗುವುದು ಮತ್ತು ಅನೀತಿಯುತವಾದ ಕಾಮದಿಂದ ವಿರತನಾಗುತ್ತಾನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚರ್ಯೆ ಪಾಲಿಸುವುದು).
ಇಲ್ಲಿ ಸಾಧಕ ಲೋಕಾನುಕಂಪದಿಂದ, ಜೀವಹತ್ಯೆಯಿಂದ ವಿರತನಾಗುತ್ತಾನೆ. ದಂಡಶಸ್ತ್ರಗಳನ್ನು ತ್ಯಜಿಸುತ್ತಾನೆ. ಹಾಗೆಯೇ ತನಗೆ ನೀಡದುದನ್ನು ತೆಗೆದುಕೊಳ್ಳುವುದಿಲ್ಲ.
ಎಲ್ಲಾರೀತಿಯ ಕಳ್ಳತನ, ಮೋಸ, ವಂಚನೆಯಿಂದ ಮುಕ್ತನಾಗುತ್ತಾನೆ. ಹಾಗೆಯೇ ಪರಸ್ತ್ರೀಯರನ್ನು ಮಾತೆಯರಂತೆ, ಸೋದರಿಯಂತೆ ಮತ್ತು ಮಕ್ಕಳಂತೆ ಕಾಣುತ್ತಾನೆ. ಹಾಗು ಅನೀತಿಯುತ ಸಂಬಂಧಗಳಲ್ಲಿ ತೊಡಗುವುದಿಲ್ಲ. ಹೀಗೆ ಆತನು ಕಾಯದಲ್ಲಿ ಯೋಗ್ಯವಾದ ಕರ್ಮಗಳಿಂದ ಕೂಡಿರುತ್ತಾನೆ.
ಅದಕ್ಕಾಗಿಯೇ ಭಗವಾನರು ಗ್ರಹಸ್ಥರಿಗೆ ಪಂಚಶೀಲಗಳನ್ನು ಬೋಧಿಸುತ್ತಾರೆ. ಅನ್ಯ ಧರ್ಮಗಳಲ್ಲಿ ಪೂಜೆ, ಪ್ರಾರ್ಥನೆಗಳಿಗೆ ಮೊದಲ ಸ್ಥಾನವಾದರೆ ಬೌದ್ಧರಲ್ಲಿ ಪಂಚಶೀಲಕ್ಕೆ ಪ್ರಥಮ ಆದ್ಯತೆಯಿದೆ. ಇದರಿಂದಾಗಿ ವ್ಯಕ್ತಿ ಸಮಾಜ ಮತ್ತು ಎಲ್ಲರ ಹಿತವಿದೆ.
ಪಂಚಶೀಲವೆಂದರೆ : 1) ಜೀವಹತ್ಯೆಯಿಂದ 2) ಕಳ್ಳತನದಿಂದ 3) ವ್ಯಭಿಚಾರದಿಂದ 4) ಸುಳ್ಳಿನಿಂದ ಮತ್ತು 5) ಮಾದಕ ದ್ರವ್ಯಗಳಿಂದ ಇಚ್ಛಾಪೂರ್ವಕವಾಗಿ ವಿರತನಾಗುವುದು. ಇದಕ್ಕೆ ಪ್ರತಿಯಾಗಿ, ಕರುಣೆಯಿಂದ, ಪ್ರಮಾಣಿಕತೆಯಿಂದ, ಬ್ರಹ್ಮಚಯರ್ೆಯಿಂದ, ಸತ್ಯದಿಂದ ಮತ್ತು ಸಂಯಮದಿಂದ ಜೀವಿಸುವುದು ಆಗಿದೆ.


3. ಸಮ್ಮಾ ಜೀವನ (ಯೋಗ್ಯವಾದ ಜೀವನೋಪಾಯ) : 

ಇಲ್ಲಿ ಸಾಧಕನು ಪರರಿಗೆ ಅಹಿತವಾಗುವಂತಹ ಯಾವುದೇ ವೃತ್ತಿಯಲ್ಲಿ ತೊಡಗುವುದಿಲ್ಲ. ಉದಾಹರಣೆಗೆ:          1) ಶಸ್ತ್ರಗಳ  2) ಜೀವಿಗಳ ಮಾರಾಟ  3) ಮಾಂಸದ ಮಾರಾಟ 4) ಮದ್ಯಪಾನದ ಮಾರಾಟ 5) ವಿಷವಸ್ತುಗಳ ಮಾರಾಟ ಇವುಗಳಿಂದ ವಿರತನಾಗುತ್ತಾನೆ.

ನಾವೇಕೆ ಶೀಲವಂತರಾಗಬೇಕು?
1. ಶೀಲದಿಂದ ನಾವು ಮನಸ್ಸನ್ನು ನಿಯಂತ್ರಿಸುವುದು ಕಲಿಯುತ್ತೇವೆ. ಇಲ್ಲಿ ಸೂಕ್ಷ್ಮವಾಗಿ ಮನಸ್ಸನ್ನು ನಿಯಂತ್ರಿಸುವುದಕ್ಕಿಂತ ಮೊದಲು ಸ್ಥೂಲವಾದ ಶರೀರ, ಇಂದ್ರೀಯಗಳ ಮತ್ತು ಮಾತುಗಳನ್ನು ನಿಯಂತ್ರಿಸುತ್ತೇವೆ. ಹೀಗಾಗಿ ಬಹುಪಾಲು ಮನಸ್ಸಿನ ನಿಯಂತ್ರಣ ನಾವು ಶೀಲವಂತರಾದಲ್ಲಿ ಸಾಧಿಸಬಹುದು.

2. ನಾವು ಶೀಲವಂತರಾದಷ್ಟು ಪ್ರಜ್ಞಾವಂತರಾಗಬಹುದು. ಇಲ್ಲಿ ನಾವು ನಮ್ಮನ್ನು ವೀಕ್ಷಿಸುತ್ತಿರುತ್ತೇವೆ. ನಮ್ಮ ಯೋಚನೆಗಳು, ಕ್ರಿಯೆಗಳು, ಮಾತುಗಳು ಸರ್ವವನ್ನು ವೀಕ್ಷಿಸಿ, ನಿಯಂತ್ರಿಸಿ, ಕಾರ್ಯತತ್ಪರರನ್ನಾಗಿ ಮಾಡುತ್ತೇವೆ.

3. ನಾವು ಶೀಲವಂತರಾದಷ್ಟು ನಮಗೆ ಪಶ್ಚಾತ್ತಾಪವಿರುವುದಿಲ್ಲ. ಭವಿಷ್ಯದ ಭಯವಿರುವುದಿಲ್ಲ. ಈ ರೀತಿಯಾಗಿ ಪಶ್ಚಾತ್ತಾಪ, ಭಯ, ಚಿಂತೆಗಳಿಂದ ಮುಕ್ತರಾಗಿ ಶಾಂತತೆಯಿಂದ ಇರಬಲ್ಲೆವು. ಪರಲೋಕವನ್ನು ಧೈರ್ಯವಾಗಿ ಎದುರಿಸಬಲ್ಲೆವು (ಹೋಗಬಲ್ಲೆವು).

4. ನಾವು ಶೀಲವಂತರಾದಷ್ಟು ನಾವು ದಯೆಯಿಂದ ಕೂಡಿರುತ್ತೇವೆ. ಪರರ ನೋವನ್ನು ನಮ್ಮ ನೋವಿನಂತೆ ಸಂವೇದಿಸಬಲ್ಲೆವು. ಪರರ ಹಿತವನ್ನು ನಮ್ಮ ಹಿತದಂತೆ ಕಾಣಬಲ್ಲೆವು. ನಿಜವಾದ ಅರ್ಥದಲ್ಲಿ ಮಾನವರಾಗಿರುತ್ತೇವೆ.

5. ನಾವು ಶೀಲವಂತರಾದಷ್ಟು ನಮ್ಮ ಲೋಭ, ದ್ವೇಷ, ಮೋಹ ಮತ್ತು ಭಯಗಳು ಕ್ಷೀಣಿಸುತ್ತಿರುತ್ತವೆ. ಈ ರೀತಿಯಾಗಿ ಸಾಧನೆಯಂತೆ ಮುಂದಿನ ಜನ್ಮದಲ್ಲಿ ಸುಗತಿ, ಬ್ರಹ್ಮಲೋಕ ಇಲ್ಲವೆ ನಿಬ್ಬಾಣ ಸಿಗುತ್ತದೆ.

6. ಈ ಜನ್ಮದಲ್ಲಿ ಗೌರವ, ಧೈರ್ಯ, ನಿಯಂತ್ರತೆ, ಶಾಂತತೆ, ಸುಖ, ಸೌಲಭ್ಯವೆಲ್ಲವೂ ಸಿಗುತ್ತದೆ.

7. ಸೋತಪನ್ನ ಅಥವಾ ಅರಹತ್ವಕ್ಕೆ ಸ್ಥಿತಿಗೆ ಸಹಾಯ

8. ಸಮಾಧಿ ಪ್ರಾಪ್ತಿಗೆ ಸಹಾಯ ಸಿಗುತ್ತದೆ.

9. ಸುಖ್ಯಾತಿಯು ಸಿಗುತ್ತದೆ. ಇತ್ಯಾದಿ...

ಲೋಕದಲ್ಲಿ ಶೀಲವು ಅನುತ್ತರವಾದುದು

ಶೀಲವು ಕಲ್ಯಾಣವನ್ನುಂಟು ಮಾಡುತ್ತದೆ. ಲೋಕದಲ್ಲಿ ಶೀಲವು ಅನುತ್ತರವಾದುದು.
ಈ ಗಾಥೆಯನ್ನು ಬೋಧಿಸತ್ವರು ಹೇಳಿದ್ದಾರೆ. ಬುದ್ಧರು ಹಿಂದಿನ ಜನ್ಮದಲ್ಲಿ ಬೋಧಿಸತ್ವರಾಗಿದ್ದಾಗ, ವಾರಣಾಸಿಯನ್ನು ಬ್ರಹ್ಮದತ್ತನು ಆಳುತ್ತಿದ್ದನು. ಆತನ ಪುರೋಹಿತರೇ ಬೋಧಿಸತ್ವರು. ಮಹಾ ಶೀಲವಂತರು ಮತ್ತು ಜ್ಞಾನಿಗಳು ಆಗಿದ್ದರು. ರಾಜನು ಬೋಧಿಸತ್ವರಿಗೆ ಅಪಾರ ಗೌರವ ನೀಡುತ್ತಿದ್ದರು.
ಒಂದುದಿನ ಬೋಧಿಸತ್ವರಿಗೆ ವಿಚಿತ್ರ ಚಿಂತನೆ ಉಂಟಾಯಿತು. ಅದೆಂದರೆ ಈ ರಾಜ ನನ್ನಲ್ಲಿ ಏನನ್ನು ಕಂಡು ಗೌರವಿಸುತ್ತಿರಬಹುದು, ನನ್ನ ಉತ್ತಮ ಕುಲಕ್ಕೆ ಅಥವಾ ವಿದ್ಯಾಸಂಪನ್ನತೆಗೆ ಅಥವಾ ಉತ್ತಮ ಚಾರಿತ್ರ್ಯಕ್ಕೆ (ಶೀಲ) ಯಾವುದಕ್ಕಾಗಿ ?
ಕೊನೆಗೆ ಆತ ಪರೀಕ್ಷಿಸಲು ಮುಂದಾದರು. ಒಂದುದಿನ ಚಿನ್ನದ ಅಂಗಡಿಯಿಂದ ಒಂದು ನಾಣ್ಯ ಎತ್ತಿಕೊಂಡು ಬಂದರು. ಇವರ ಬಗ್ಗೆ ಗೌರವ ಇದ್ದುದರಿಂದಾಗಿ ಅಂಗಡಿಯವ ಸುಮ್ಮನಿದ್ದನು. ಎರಡನೆಯ ದಿನದಂದು 2 ನಾಣ್ಯಗಳನ್ನು ಎತ್ತಿಕೊಂಡು ಬಂದರು. ಅಂಗಡಿಯವ ಈಗಲೂ ಸುಮ್ಮನಿದ್ದನು. ಮಾರನೆಯದಿನ ಬೋಧಿಸತ್ವರು ಒಂದು ಹಿಡಿ ಚಿನ್ನದ ನಾಣ್ಯಗಳನ್ನು ಎತ್ತಿಕೊಂಡು ಬರುವಾಗ ಆತನು ಇವರನ್ನು ಹಿಡಿದು ಕಳ್ಳತನದ ಆರೋಪ ಹೊರಿಸಿದನು. ರಾಜನ ಬಳಿ ಕರೆತರಲಾಯಿತು.
ರಾಜ : ಬ್ರಾಹ್ಮಣ ಏಕೆ ಇಂತಹ ಕಾರ್ಯ ಮಾಡಿದೆ?
ಬೋಧಿಸತ್ವ : ರಾಜ ನಾನು ಕಳ್ಳನಲ್ಲ.
ರಾಜ : ಹಾಗಾದರೆ ಚಿನ್ನದ ನಾಣ್ಯಗಳನ್ನು ಅಪಹರಿಸಿದ್ದು ಸುಳ್ಳೇ?
ಬೋಧಿಸತ್ವ : ರಾಜ ನೀವು ನನಗೆ ನೀಡುತ್ತಿರುವ ಗೌರವ ನನ್ನ ಚಾರಿತ್ರ್ಯಕ್ಕೋ ಅಥವಾ ಪಾಂಡಿತ್ಯಕ್ಕೋ ಅಥವಾ ಉತ್ತಮ ಕುಲಕ್ಕೋ ಅಥವಾ ನನ್ನ ಸೌಂದರ್ಯಕ್ಕೋ ಸ್ಪಷ್ಟವಾಗಿ ತಿಳಿಯಬೇಕಿತ್ತು.
ರಾಜ : ಓಹ್ ಬ್ರಾಹ್ಮಣ, ನಿನಗೆ ನೀಡುವ ಗೌರವ ಕೇವಲ ನಿನ್ನ ಶೀಲಕ್ಕಾಗಿಯೇ, ನಂತರ ಪಾಂಡಿತ್ಕ್ಕೆ ಮಿಕ್ಕವು ನಮಗೆ ಲೆಕ್ಕಕ್ಕಿಲ್ಲ.
ಬೋಧಿಸತ್ವ : ನನಗೂ ಈಗ ಸ್ಪಷ್ಟವಾಗಿ ತಿಳಿಯಿತು ರಾಜ. ಲೋಕದಲ್ಲಿ ಶೀಲವೇ ಸವರ್ೊತ್ತಮವಾದುದು, ಪ್ರಧಾನವಾದುದು ಎಂದು ತಿಳುವಳಿಕೆ ಮೂಡಿದೆ.
ರಾಜ : ಹಾಗಾದರೆ ನೀನು ಅಪರಾಧಿಯಲ್ಲ. ಹಿಂದಿನಂತೆಯೆ ಯೋಗ್ಯವಾಗಿ ಕೆಲಸ ಮಾಡಿಕೊಂಡಿರು.
ಬೋಧಿಸತ್ವ : ಇಲ್ಲ ಮಹಾರಾಜ, ನಾನು ಗೃಹಸ್ಥನಾಗಿದ್ದು ಪರಿಶುದ್ಧವಾದ, ಪರಿಪೂರ್ಣವಾದ ಸದಾಚಾರ ಪಾಲಿಸಲಾಗುವುದಿಲ್ಲ. ಆದ್ದರಿಂದ ನಾನು ಪಬ್ಬಜಿತನಾಗಲು ಇಚ್ಛಿಸುತ್ತೇನೆ. ನನಗೆ ಅಪ್ಪಣೆ ನೀಡಿ.
ರಾಜನು ದುಃಖದಿಂದ ಕಳುಹಿಸಿಕೊಟ್ಟನು. ಹಿಮಾಲಯಕ್ಕೆ ಹೋಗಿ ದೀರ್ಘಕಾಲ ಶೀಲ, ಸಮಾಧಿ ಪಾಲನೆ ಮಾಡಿದರು. ಎಂಟು ಸಮಾಪತ್ತಿ ಮತ್ತು ಪಂಚ ಅಭಿಜ್ಞಾ ಪ್ರಾಪ್ತಿಮಾಡಿದರು. ನಂತರ ಬ್ರಹ್ಮಲೋಕ ಗಾಮಿಯಾದರು.


ನಮಗೆ ಶೀಲವಂತರಾಗಲು ಅಡ್ಡಿಗಳೇನು?

1. ನಮಗೆ ಯೋಗ್ಯ ಜ್ಞಾನ ಸಿಗದಿರುವುದೇ ಪ್ರಥಮ ಅಡ್ಡಿಯಾಗಿದೆ. ಯಾವಾಗ ನಾವು ಶೀಲದ ಮಹತ್ವತೆ ಮತ್ತು ಪಾಪದ ಭೀಕರತೆ ತಿಳಿಯುವೆವು ಆಗ ನಮಗೆ ಶೀಲದ ಬಗ್ಗೆ ಸಮ್ಮಾಸಂಕಲ್ಪ ಮೂಡುತ್ತದೆ.

2. ನಮ್ಮಲ್ಲಿರುವ ದ್ವೇಷ, ಗುಣ ಅಡ್ಡಿಯಾಗುತ್ತದೆ. ದ್ವೇಷದಿಂದ ಸೇಡು, ಅಸೂಯೆ, ಹಿಂಸೆ, ಅಸಹನೆ, ಕ್ರೂರತ್ವ ಇವುಗಳಿರುವುದರಿಂದಲೇ ನಾವು ಪಾಲಿಸಲು ಸಾಧ್ಯವಾಗುತ್ತಿಲ್ಲ. ಸಮ್ಮಾದೃಷ್ಟಿ, ಮೆತ್ತಾ ಧ್ಯಾನದಿಂದ ಇವನ್ನು ದಾಟಬಹುದು.

3. ನಮ್ಮಲ್ಲಿರುವ ಲೋಭ ಇದರಿಂದಲೇ ನಾವು ಪ್ರಾಣಿಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮಾದಕ ವಸ್ತುಗಳ ಸೇವನೆ ಎಲ್ಲವನ್ನು ಮಾಡಿಬಿಡುತ್ತೇವೆ. ನಮಗೆ ಲೋಭ ಕಡಿಮೆಯಾದಷ್ಟು ನಾವು ಶೀಲವಂತರಾಗುತ್ತೇವೆ. ಪೂರ್ಣವಾಗಿ ಲೋಭರಹಿತರಾದರೆ ಅರಹಂತ ಅಥವಾ ಅನಾಗಾಮಿಗಳಾಗುತ್ತೇವೆ.

4. ಕೆಲವೊಮ್ಮೆ ಸಾಮಾಜಿಕ ವ್ಯವಸ್ಥೆಯು ಕಾರಣವಾಗುತ್ತದೆ. ಭಯದಿಂದ, ಒತ್ತಡದಿಂದ, ವಿವಶತೆಯಿಂದಲೂ ನಾವು ದುಶ್ಶೀಲರಾಗುತ್ತೇವೆ.

5. ನಮ್ಮಲ್ಲಿ ಪಾಪಭೀತಿ ಮತ್ತು ಪಾಪಲಜ್ಜೆಯ ಕೊರತೆಯಿದೆ. ಇದು ತಪ್ಪು ಮಾಡಬಾರದು, ನನ್ನಂತೆ ಪರರು, ಇದನ್ನು ಮಾಡಿದರೆ ದುಃಖವುಂಟಾಗುತ್ತದೆ, ನಿಂದೆ ಸಿಗುತ್ತದೆ, ಶಿಕ್ಷೆಯಾಗುತ್ತದೆ, ದುರ್ಗತಿ ಸಿಗುತ್ತದೆ, ಮತ್ತೆ ಮಾನವ ಜನ್ಮ ಸಿಗಲಾರದು, ಸುಗತಿಯೇ ಸಿಗಲಾರದು, ಜನ್ಮಗಳಿಂದ ಮುಕ್ತನಾಗಲಾರೆ, ಶ್ರೇಷ್ಠ ಪುರುಷನಾಗಲಾರೆ ಈ ರೀತಿಯ ಚಿಂತನೆ ಮಾಡಿದಾಗ ಪಾಪಲಜ್ಜೆ ಮತ್ತು ಪಾಪಭೀತಿ ಮೂಡಿ ಅತನು ಶೀಲವಂತನಾಗುತ್ತಾನೆ.


ಕಾಡಾಗ್ನಿಯಂತೆ ದಹಿಸು ನೀ ಎಲ್ಲಾ ಬಂಧನಗಳನ್ನು

ಒಮ್ಮೆ ಒಬ್ಬ ಭಿಕ್ಷು ಬುದ್ಧರಿಂದ ಧ್ಯಾನದ ವಿಷಯವನ್ನು ಪಡೆದು ಅರಣ್ಯದಲ್ಲಿ ಧ್ಯಾನ ಮಾಡತೊಡಗಿದನು. ಆತನು ಕಠಿಣವಾಗಿಯೆ ಪರಿಶ್ರಮಿಸಿ ಧ್ಯಾನಿಸಿದನು. ಆದರೂ ಧ್ಯಾನದಲ್ಲಿ ಅತ್ಯಲ್ಪ ಲಾಭವನ್ನು ಗಳಿಸಿದನು. ಪರಿಣಾಮವಾಗಿ ಕುಗ್ಗಿದ ಆತನು ನಿರಾಶನಾದನು. ಆತನು ಬುದ್ಧರಿಂದ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಜೇತವನ ವಿಹಾರಕ್ಕೆ ಬರತೊಡಗಿದನು. ದಾರಿಯಲ್ಲಿ ದೊಡ್ಡ ಕಾಡ್ಗಿಚ್ಚು ಹಬ್ಬಿತ್ತು. ಆತನು ಒಂದು ದೊಡ್ಡ ಬೆಟ್ಟವೇರಿದನು. ಅಲ್ಲಿಂದ ಬೆಂಕಿಯನ್ನು ವೀಕ್ಷಿಸಿದನು. ಆ ಬೆಂಕಿಯು ಸಣ್ಣದನ್ನು, ದೊಡ್ಡದನ್ನು, ಯಾವುದನ್ನೂ ಬಿಡದೆ ದಹಿಸುತ್ತಿತ್ತು. ಇದನ್ನು ಕಂಡ ಆತನು ಚಿಂತನೆಗೆ ಜಾರಿದನು. ಹೇಗೆ ಬೆಂಕಿಯು ಎಲ್ಲವನ್ನು ದಹಿಸುತ್ತಿದೆಯೋ ಹಾಗೆಯೇ ನಾನು ಸಹಾ ನನ್ನ ಪ್ರಜ್ಞಾಶಕ್ತಿಯಿಂದ, ವೀರ್ಯಬಲದಿಂದ ಸಣ್ಣ ಮತ್ತು ದೊಡ್ಡ ಬಂಧನಗಳನ್ನೆಲ್ಲಾ ಸುಟ್ಟು ಹಾಕಿದರೆ ಹೇಗೆ?
ಆ ಕ್ಷಣದಲ್ಲೇ ಆತನ ಉದಾತ್ತ ಯೋಚನೆಯು ಬುದ್ಧರಿಗೆ ಗೊತ್ತಾಯಿತು. ಅವರು ತಕ್ಷಣ ತೇಜೋಸ್ವರೂಪಿಯಾಗಿ ಆತನ ಮುಂದೆ ಪ್ರತ್ಯಕ್ಷರಾದರು ಮತ್ತು ಹೀಗೆ ಹೇಳಿದರು: ನೀನು ನಿಜವಾಗಿಯೂ ಯೋಗ್ಯವಾದ ಹಾದಿಯಲ್ಲೇ ಇದ್ದೀಯೆ. ಅದೇರೀತಿ ಚಿಂತಿಸು, ಮುಂದುವರೆಸು, ಹಾಗೇ ಮಾಡು. ಹೇಗೆ ಬೆಂಕಿಯು ಚಿಕ್ಕ ಮತ್ತು ದೊಡ್ಡದೆನ್ನದೆ ಎಲ್ಲವನ್ನು ಸುಟ್ಟು ಹಾಕುವುದೋ ಹಾಗೆಯೇ ಓ ಭಿಕ್ಷು ನೀನು ಹಾಗೇ ಮಾಡು. ಜಾಗರೂಕತೆಯಲ್ಲಿ ಭಯಪಡುವ ಭಿಕ್ಷುವು ಎಲ್ಲಾ ಬಂಧನಗಳನ್ನು ಸುಟ್ಟುಹಾಕುತ್ತಾನೆ.
ಆ ಭಿಕ್ಷು ಸ್ಫೂತರ್ಿ ಹೊಂದಿ, ಧ್ಯಾನಿಸಿ, ಜ್ಞಾನೋದಯ ಹೊಂದಿ ಅರಹಂತತ್ವ ಪಡೆದನು. ಆ ಬುದ್ಧರು ಹೇಳುವ ಗಾಥೆಯಿದು.

  ಅಪ್ರಮಾದದಲ್ಲಿ (ಜಾಗರೂಕತೆ) ನಿರತನಾಗರುವ ಭಿಕ್ಷುವು ಪ್ರಮಾದದಲ್ಲಿ (ಅಲಕ್ಷ) ಭಯಪಡುತ್ತಾನೆ.
 ಸಂಯೋಜನಗಳು ಅಣುವಷ್ಟೇ ಇರಲಿ, ಸ್ಥೂಲವಾಗಿಯೇ ಇರಲಿ ಅಗ್ನಿಯಂತೆ ದಹಿಸುತ್ತಾನೆ.
(ಧಮ್ಮಪದ 31)

Tuesday, 19 March 2019

ಪಾಲ್ಗುಣ ಪುರ್ಣಮಿಯ ವಿಶೇಷ the significance of march full moon day or phalguna purnima







      ಪಾಲ್ಗುಣ ಪುರ್ಣಮಿಯ ವಿಶೇಷ


1 .ಈ ಶುಭ ದಿನದಂದು ಭಗವಾನರು 20000 ಅರಹತ ಭಿಕ್ಖುಗಳೊಂದಿಗೆ ರಾಜಗೃಹದ ವೇಲುವನ ಆರಾಮದಿಂದ ಕಿಂಬಿಲವತಪುರಗೆ ಹೋರಟರು. ಅಲ್ಲಿ ಅವರು ಸಂಬೋದಿ ಪ್ರಾಪ್ತಿಯ ನಂತರ ಪ್ರಥಮ ಬಾರಿಗೆ ಅಂದರೆ 7 ವರ್ಷದ ನಂತರ ತಂದೆ ಶುದ್ಧೋಧನ ಹಾಗೂ ತಮ್ಮ ಶಾಕ್ಯಕುಲದ ಸಕಲ ಬಂಧು ಬಾಂಧವರನ್ನು ಭೇಟಿಮಾಡಲು ಹೋರಟರು. ಆ ಬಿಕ್ಖುಗಳಲ್ಲಿ ಅಂಗ ಮತ್ತು ಮಗಧದ 10000 ಬಿಕ್ಖುಗಳು ಹಾಗು ಕಪಿಲವಸ್ತುವಿನ 10000 ಬಿಕ್ಖುಗಳಿದ್ದರು. ಅವರಿಗೆಲ್ಲಾ ದಾರಿಯುದ್ದಕ್ಕೂ ಶುದ್ಧೋದನರೇ ಆಹಾರದ ವ್ಯವಸ್ಥೆ ಮಾಡಿದ್ದರು.


2. ಈ ಶುಭ ಸಂದರ್ಭದಲ್ಲಿ ಭಗವಾನರು ಶಾಕ್ಯರ ಅಹಂಕಾರವನ್ನು ದಮಿಸಲು ಯಮಕ ಪತಿಹಾರ ಎಂಬ ಅದ್ವಿತೀಯ ಅತೀಂದ್ರಿಯ ಶಕ್ತಿ ಪ್ರದಶರ್ಿಸಿದರು.


3. ಅದರಿಂದಾಗಿಯೇ ಈ ಶುಭ ಸಂದರ್ಭದಲ್ಲಿಯೇ ತಂದೆ ಶುದ್ಧೋಧನರು ತಮ್ಮ ಪುತ್ರರಾದ ಬುದ್ಧರಿಗೆ ಮೂರನೆಯ ಬಾರಿಗೆ ಪೂಜಿಸಿದರು. ಇದರಿಂದ ಪ್ರೇರಿಪಿತರಾದ ಉಳಿದ ಶಾಕ್ಯ ರಾಜಕುಮಾರರು, ರಾಜಕುಮಾರಿಯರು, ಉಳಿದ ಉತ್ತಮೋತ್ತಮರು ಸಹಾ ಬುದ್ಧರಿಗೆ ಪೂಜಿಸಿದರು, ಆಗ ಭಗವಾನರು ಅವರಿಗೆಲ್ಲಾ ತಮ್ಮ ಹಿಂದಿನ ಜನ್ಮದಲ್ಲಿ ತಾವು ವೆಸ್ಸಂತರರಾಗಿದ್ದಂತಹ ಆ ವೃತ್ತಾಂತಗಳೆಲ್ಲಾ ತಿಳಿಸಿದರು. ಬುದ್ಧವಂಸವನ್ನು ಹಾಗೂ ಧಮ್ಮವನ್ನು ಬೋದಿಸಿದರು. ಆಗ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ನಂತರ ಯಶೋದರೆ ಸಹಿತ ಎಲ್ಲಾ ಬಾಂಧವರನ್ನು ಬೇಟಿಮಾಡಿದರು.


4 . ಈ ಶುಭದಿನದಂದೆ ತಂದೆಯಾದ ಶುದ್ಧೋದನರು ಸೋತಪನ್ನರಾದರು. 

4. ಇದೇ ಶುಭ ದಿನದ 3ನೇಯ ದಿನದಂದು ರಾಜಕುಮಾರ ನಂದ ಹಾಗೂ 7ದಿನದ ನಂತರ ರಾಜಕುಮಾರ ರಾಹುಲರು ಸಹಾ ಬುದ್ಧಶಾಸನವನ್ನು ಪ್ರವೇಶಿಸಿದರು. ನಂತರದ ಕೆಲ ದಿನದ ನಂತರ ಶುದ್ಧೋದನರು ಅನಾಗಾಮಿತ್ವ ಹಾಗೂ ತಾಯಿ ಗೋತಮಿಯು ಸೋತಪನ್ನರಾದರು.


5. ಇದೇ ಶುಭದಿನದಂದು ಇಡಿ ದಕ್ಷಿಣ ಭಾರತದಲ್ಲಿ ಭವ್ಯವಾಗಿ ಹಿಂದಿನ ಬೌದ್ಧಸಂಸ್ಕೃತಿಯನ್ನು ಮರಳಿ ಚಾಲನೆಮಾಡಿದಂತಹ ಪೂಜ್ಯ ಆಚಾರ್ಯ ಬುದ್ಧರಕ್ಖಿತ ಥೇರರು ಜನ್ಮತಾಳಿದಂತಹ ದಿನವಾಗಿದೆ.


6.ಇದೇ ಶುಭದಿನದಂದು ಇಡಿ ಕನರ್ಾಟಕವು ಧಮ್ಮಪದ ಹಬ್ಬದ ಉತ್ಸವವನ್ನು ಆಚರಿಸುತ್ತಿದೆ.