ಬುದ್ಧಪುರ್ಣಮಿಯ ಆ ದಿನದ 63 ವೈಶಿಷ್ಟತೆಗಳು
ಬುದ್ಧ ಭಗವಾನರ ಜನ್ಮದ ದಿನ ಏನೇನೂ ಅಧ್ಭುತಗಳು ಸಂಭವಿಸಿದವು !?
ಅಂದು ಒಟ್ಟು 32 ಅಧ್ಭುತಗಳು ಸಂಭವಿಸಿದವು. ಬೋದಿಸತ್ತರ ಜನ್ಮ , ಅಸಿತ ಮುನಿಯ ಭವಿಷ್ಯವಾಣಿ ಹಾಗೂ ನಾಮಕರಣ ಒಟ್ಟು 35 ಘಟನೆಗಳು ನಡೆದವು
ಅಂದಿನ ವಾತವರಣವು ಅತ್ಯಂತ ಆಹ್ಲಾದಕರವಾಗಿ ತಂಪಾಗಿತ್ತು, ಪಕ್ಷಿಗಳೆಲ್ಲಾ ಇಂಪಾಗಿ ಹಾಡತೊಡಗಿದವು, .ಲಘು ಭೂಕಂಪವು ಆಯಿತು, ಎಲ್ಲೇಡೆ ಸ್ವಗರ್ೀಯ ಹೊಂಬೆಳಕು, ಸ್ವಗರ್ೀಯ ಸಂಗೀತವು ಕೇಳಿಸಿತ್ತಿತ್ತು, ಸ್ವಗರ್ೀಯ ಸುಗಂಧಗಳು ಎಲ್ಲರನ್ನು ಮತ್ತೇರಿಸುವಂತಿತ್ತು,, ಅಲ್ಲಿ ದಶಸಹಸ್ರ ದೇವ ದೇವತೆಗಳ ಸಮೂಹವು ನೇರೆದಿತ್ತು,, ಅಂದು ಯಾರಿಗೂ ಹಸಿವಾಗಲಿಲ್ಲ, ಯಾರಿಗೂ ಬಾಯರಿಕೆಯಾಗಲಿಲ್ಲ, ಬಳಲಿಕೆಯೂ ಆಗಲಿಲ್ಲ, ಅಂದು ಅವೇಳೆಯಲ್ಲಿಯೂ ಹೂಗಳು ಹಾಗೂ ಹಣ್ಣುಗಳು ಗಿಡಗಳಲ್ಲಿ, ವೃಕ್ಷಗಳಲ್ಲಿ ಅವಿರ್ಭವಿಸಿದವು, ಅಂದು ರೋಗಿಗಳ ರೋಗಗಳು ವಾಸಿಯಾಯಿತು, ಕುರುಡರಿಗೆ ದೃಷ್ಟಿಯುಂಟಾಯಿತು, ಕಿವುಡರಿಗೆ ದ್ವನಿಯು ಕೇಳಿಸಿತು, ಮೂಕರಿಗೆ ಮಾತು ಬಂದಿತು, ಅಂಗವಿಕಲಿರಿಗೆ ಚೈತನ್ಯ ಬಂದಿತು, ಅಂದು ಸ್ವರ್ಣ ಹಾಗೂ ವಿವಿಧ ಬಗೆಯ ರತ್ನಗಳು ಸ್ವಯಂ ಪ್ರಕಾಶಮಾನವಾಗಿ ಹೊಳೆಯಲಾರಂಬಿಸಿದವು, ಅಂದು ಎಲ್ಲಾ ಜೀವಿಗಳಲ್ಲಿ ಹಾಗೂ ಮಾನವರಲ್ಲಿ ಮೆತ್ತಾ ಭಾವನವು ಸ್ವಯಂ ಆಗಿ ಹೊರಹೊಮ್ಮಿತು, ಅಂದು ನರಕಗಳಲ್ಲಿ ನರಕಾಗ್ನಿಯು ನಂದಿಹೋಯಿತು, ಸದಾ ಕತ್ತಲಿನಿಂದ ಕೂಡಿರುತ್ತಿದ್ದ ಲೋಕೋಂಧಕಾರ ನರಕಗಳಲ್ಲಿಯು ಸಹಾ ಅಂದು ದಿವ್ಯ ಬೆಳಕು ಪ್ರಕಾಶಿಸಿತು, ಮುಚ್ಚಿದ ಬಾಗಿಲುಗಳು ತೆರೆಯಲ್ಪಟ್ಟವು, ಪಾಪಿಗಳಲ್ಲಿಯು ಪುಣ್ಯಚಾರಣೆಯ ಬಯಕೆಗಳು ಉಂಟಾಯಿತು, ದಾರಿತಪ್ಪಿದ್ದಂತಹ ಹಡಗುಗಳು ಸರಿಯಾದ ಗುರಿ ತಲುಪಿದವು, ಅಂದು ಸಮುದ್ರಗಳು ಸಹಾ ತಾತ್ಕಲಿಕವಾಗಿ ಸಿಹಿಯಾದವು,
ಬೋಧಿಸತ್ವರ ಜನ್ಮವು ಪ್ರಕೃತಿಯ ಮಧ್ಯೆ ಸಾಲ ವೃಕ್ಷದ ಕೆಳಗೆ ಆಯಿತು, ಮಹಾಮಾತೆ ಮಹಾಮಾಯೆಯವರು ನಿಂತೆ ಸಾಲ ವೃಕ್ಷವನ್ನು ಹಿಡಿಯಲು ಹೋದಾಗ ವೃಕ್ಷದ ಕೊಂಬೆಯೇ ಕೈಗೆ ತಾಗಿತು, ಅದೇ ವೇಳೆಯಲ್ಲಿ ಯಾವುದೇ ಪ್ರಸವ ವೇದನೆಯಿಲ್ಲದೆ ಜನ್ಮ ನೀಡಿದರು, ನಿಂತುಕೊಂಡೆ ಜನ್ಮ ನೀಡಿದರು, ಅವರ ಜನ್ಮವೂ ದೇಹದ ಪಾಶ್ರ್ವದಿಂದ ಆಯಿತು, ಬೋಧಿಸತ್ವರನ್ನು ಭೂಮಿಗೆ ಬೀಳದಂತೆ ಮೂದಲು ಬ್ರಹ್ಮರೂ ಹಿಡಿದರು, ನಂತರ ಚತುಮರ್ಾರಾಜಿಕ ದೇವತೆಗಳು ಹಿಡಿದವು, ನಂತರ ಮಹಾಮಾಯೆಯ ಸಖೀಯರು ಹಿಡಿದರು, ಆ ಮಗುವು ಅವರಿಂದಲೂ ಜಾರಿ ಭೂಮಿಯ ಮೇಲೆ ನಿಧಾನವಾಗಿ ಭೂಮಿಯ ಮೇಲೆ ಸ್ಥಿರವಾಗಿ ನಿಂತಿತು. ಆ ಸಮಯದಲ್ಲಿ ಮೇಲಿನ ಎಲ್ಲಾ ಅಧ್ಭುತಗಳು ಸಂಭವಿಸಿದವು. ನಂತರ ಆ ಬೋಧಿಸತ್ವ ಏಳು ಹೆಜ್ಜೆ ಉತ್ತರ ದಿಕ್ಕಿನೆಡೆಗೆ ನಡೆಯಿತು, ಅದು ಹೆಜ್ಜೆ ಇಟ್ಟ ಸ್ಥಳಗಳಲ್ಲಿ ಪದ್ಮಗಳು ಉದಯಿಸಿದವು, ನಂತರ ಆ ಪರಮಶ್ರೇಷ್ಡ ಮಗುವು ಹೀಗೆ ನುಡಿಯಿತು :
"ಅಗ್ಗೊ ಹಂ ಅಸ್ಮಿ ಲೊಕಸ್ಸಾ
ಜೆಟ್ಟ್ಗೊ ಹಂ ಅಸ್ಮಿ ಲೊಕಸ್ಸಾ
ಸೆಟ್ಟೊ ಹಂ ಅಸ್ಮಿ ಲೊಕಸ್ಸಾ
ಅಯಂ ಅಂತಿಮ ಜಾತಿ
ನತ್ಥಿ ದಾನಿ ಪುನಭ್ಭವೊ"
ಅಗ್ರನು ನಾನು ಲೋಕಗಳಿಗೆಲ್ಲಾ
ಜೇಷ್ಡನು ನಾನು ಲೋಕಗಳಿಗೆಲ್ಲಾ
ಶ್ರೇಷ್ಡನು ನಾನು ಲೋಕಗಳಿಗೆಲ್ಲಾ
ಇದೇ ನನ್ನ ಅಂತಿಮ ಜನ್ಮವು
ನನಗೆ ಮುಂದೆ ಪುನರ್ಜನ್ಮವಿಲ್ಲ.
ಬೋದಿಸತ್ವರು 3 ಜನ್ಮಗಳಲ್ಲಿ ಮಾತ್ರ ಶಿಶುವಾಗಿರುವಾಗಲೇ ಮಾತನಾಡಿದ್ದಾರೆ. ಅವೇಂದರೆ ಮಹಾಔಷಧಕುಮಾರನಾಗಿದ್ದಾಗ, ವೆಸ್ಸಂತರನಾಗಿದ್ದಾಗ ಹಾಗೂ ಕೋನೆಯ ಜನ್ಮವಾದ ಸಿಧ್ಧಾರ್ಥ ಗೋತಮರಾಗಿದ್ದಾಗ. ಅವರು ಮಹಾಔಷಧಕುಮಾರನಾಗಿದ್ದಾಗ ಜನ್ಮದಿಂದಲೇ ಕೈಯಲ್ಲಿ ಹಿಡಿದು ಬಂದಿದ್ದ ಮೂಲಿಕೆ ಬಗ್ಗೆ ಹೀಗೆ ಮಾತನಾಡಿದ್ದರು : ಅಮ್ಮ, ಇದು ಔಷಧಿ ಎಂದು ತಾಯಿಯು ತನ್ನ ಕೈಯಲಿನ ಮೂಲಿಕೆ ಏನೆಂದು ಕೇಳಿದಾಗ ಉತ್ತರಿಸಿದ್ದರು. ಅವರು ವೆಸ್ಸಂತರ ಬೋಧಿಸತ್ತನಾಗಿ ಹುಟ್ಟಿದ್ದಾಗ ತಮ್ಮ ತಾಯಿಗೆ ಹೀಗೆ ಪ್ರಶ್ನೀಸಿದ್ದರು ಅಮ್ಮ ನನ್ನ ಸ್ವರ್ಣಅರಮನೆಯಲ್ಲಿ ದಾನ ನೀಡಲೂ ಏನೆಲ್ಲಾ ಇವೆ. ಎಂದು ಪ್ರಶ್ನಿಸಿದಾಗ ಆ ಮಹಾ ಮಾತೆಯು ಕಂದನೇ ನೀನೂ ಸ್ವರ್ಣಅರಮನೆಯ ಐಶ್ವರ್ಯದಲ್ಲಿ ಹುಟ್ಟಿರುವೆ. ಎಂದು ಉತ್ತರಿಸಿದರು.
ಬೋಧಿಸತ್ವರು ಹುಟ್ಟಿದ ಸಮಯದಲ್ಲೇ ಯಾರ್ಯಾರು ಹುಟ್ಟಿದ್ದರು ?
1.ಯಸೋಧರೆ
2.ಪೂಜ್ಯ ಆನಂದ
3. ಸಾರಥಿಯಾಗಿದ್ದ ಛನ್ನ
4.ಬಾಲ್ಯ ಮಿತ್ರ ಕಾಲೂದಾಯಿ
5. ಕುದರೆ ಕಂಥಕ
6. ಬೋಧಿವೃಕ್ಷ
7.ನಾಲ್ಕು ಬೃಹತ್ ಕೊಪ್ಪರಿಗೆ ಸ್ವರ್ಣರಾಶಿ
ಬೋಧಿಸತ್ವರು 32 ಮಹಾಪುರುಷ ಲಕ್ಷಣಗಳನ್ನು 80 ಅಸಿತಿ ಅನುವ್ಯಂಜನ (ಉಪ ಮಹಾಪುರುಷ ಲಕ್ಷಣಗಳು) ಒಟ್ಟಾರೆ ಶತ ಪುಣ್ಯಲಕ್ಷಣಗಳನ್ನು ಹೊಂದಿದ್ದರು.
ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳುಳ್ಳ ಶರೀರ
1. ಸಂದಿಲ್ಲದ ಸಮತಟ್ಟಾದ ಪಾದಗಳು
2. ಪಾದಗಳಲ್ಲಿ ಸಾವಿರ ಅರೆಗಳುಳ್ಳ ನೇಮಿ ನಾಭಿಸಹಿತ ಚಕ್ರ ಚಿಹ್ನೆ
3. ತೆಳ್ಳನೆಯ ಉದ್ದವಾದ ಬೆರಳುಗಳು
4. ಸುಲಭವಾಗಿ ಮಣಿಯುವ(ಮೃದುವಾದ) ಕೈ ಹಾಗು ಕಾಲುಗಳು
5. ಅಂಗೈ(ಬೆರಳು)ಗಳು ಹಾಗೂ ಪಾದಗಳು(ಬೆರಳು)ಬಲೆಯಂತೆ (ಇರುವ ರೇಖೆಗಳು) ಇರುತ್ತವೆ
6. ಅಗಲವಾದ ಚಾಚಿದ ಶಂಕಾಕೃತಿಯ ಹಿಮ್ಮಡಿಗಳು
7. ಕಮಾನಿನಂತಿರುವ ಮೇಲ್ಕಾಲು
8. ಸಾರಂಗ (ನಿಗ್ರೋದ)ದಂತಿರುವ ಕಾಲು(ತೋಡೆ)ಗಳು
9. ನಿಂತಿರುವಾಗ ಹಸ್ತಗಳು ಮೊಳಕಾಲುಗಳ ಕೆಳಗೆ ತಾಕುತ್ತದೆ
10. ಕೋಶದಿಂದ ಆವೃತವಾದ ಪುರುಷೇಂದ್ರೇಯ
11. ಬಾಹುಗಳನ್ನು ವಿಸ್ತರಿಸದಷ್ಟೇ ಎತ್ತರವಿರುವ ದೇಹಾಕೃತಿ, ಅಥವಾ ದೇಹಾಕೃತಿಯಷ್ಟು ಉದ್ದಾವಾದ ತೋಳುಗಳು
12. ಪ್ರತಿ ಕೂದಲು ಗಾಡನೀಲಿವರ್ಣದ್ದು ಹಾಗೂ ಪ್ರತಿ ರೋಮಕೂಪದಲ್ಲು ಒಂದೇ ಕೂದಲಿರುತ್ತದೆ.
13. ದೇಹದ ಕೂದಲು ಅಕರ್ಷಣೆಯಿಂದ ಹಾಗೂ ಗುಂಗರೂ ಆಗಿರುತ್ತದೆ. ಹಾಗೂ ಮೇಲ್ಮುವಾಗಿ ಹಾಗು ಬಲಗಡೆಗೆ ತಿರುಗಿರುತ್ತದೆ.
14. ಸುವರ್ಣವರ್ಣದ ತ್ವಚೆಯ ಬಣ್ಣ,
15. ಹತ್ತು ಅಡಿ ಉದ್ದದ ಪ್ರಭೆ ಸದಾ ಸುತ್ತಲೂ ಆವೃತವಾಗಿರುವುದು.
16. ಕೋಮಲವಾದ ತ್ವಚೆ, ಚರ್ಮದ ಮೇಲೆ ಧೂಳಿರುವುದಿಲ್ಲ.
17. ಪಾದಗಳು, ಅಂಗೈ, ಭುಜಗಳು, ಹಾಗೂ ಶಿರವೂ ಗುಂಡನೆಯ ಆಕೃತಿಯನ್ನು ಹೊಂದಿದೆ.(ದೇಹದಲ್ಲಿ ಸಪ್ತ ಉಬ್ಬುಗಳಿರುತ್ತದೆ)
18. ಆಲದ ಮರದಂತೆ ಸಮಪ್ರಮಾಣದ ಅಂಗಾಂಗಗಳು
19. ಸಿಂಹಾಕೃತಿಯಂತೆ ಕತ್ತು ಹಾಗೂ ಸೊಂಟವಿರುವ ಶರೀರ
20. ಬ್ರಹ್ಮಲೋಕದವರಂತೆ ನೆಟ್ಟಗಿರುವ ಹಾಗೂ ನೇರವಾದ ಶರೀರ
21. ಪೂರ್ಣವಾದ ದುಂಡಾದ ಭುಜಗಳು, ನಡುವೆ ತಗ್ಗು ಇರುವುದಿಲ್ಲ.
22. ಹುಟ್ಟಿದಾಗಲೇ 40 ಹಲ್ಲುಗಳು
23. ಹಲ್ಲುಗಳು ಬಿಳಿ, ಸಮನಾದುದು, ಮಧ್ಯೆ ರಂದ್ರಗಳಿಲ್ಲದೆ ಕೂಡಿರುತ್ತವೆ.
24. ಕ್ಷತ್ರೀಯರಂತಿರುವ ಎದೆಯ ಆಕಾರ
25. ಸಿಂಹದಂತಹ ದವಡೆ, ಸಮಮಟ್ಟದ ಹಲ್ಲಿನ ಸಾಲು
26. ಶ್ರೇಷ್ಟ ಅಭಿರುಚಿಯನ್ನು ಹೊಂದಿರುತ್ತಾರೆ ಆಹಾರ ಸೇವಿಸಿದಾಗ ನಾಲಿಗೆಗೆ ಅಷ್ಟೇ ಅಲ್ಲದೆ, ಎಲ್ಲಾ ಭಾಗಗಳಿಗೂ ರುಚಿ ಸಿಗುವುದು.
27. ಹಣೆ ಹಾಗೂ ಕಿವಿಗಳನ್ನು ಸುಲಭವಾಗಿ ತಾಗುವಂತಹ ಉದ್ದವಾದ ನಾಲಿಗೆ
28. ಚಕ್ರವಾಕ ಪಕ್ಷಿಯಂತೆ ಅಥವಾ ಕೋಗಿಲೆ(ಕರವಿಕ)ಯಂತಹೆ ಪರಮ ಮಾಧುರ್ಯದ ಬ್ರಹ್ಮಸ್ವರವಿರುತ್ತದೆ..
29. ಗಾಢ ಅಭಿನೀಲಿವರ್ಣದ ಕಣ್ಣುಗಳು
30. ರಾಜವೃಷಭಕ್ಕೆರುವಂತಹ ನಯನಗೂದಲುಗಳು
31. ಭೃಮಧ್ಯೆ ಒಂದು ಉಬ್ಬಿದ್ದು ಅದರಲ್ಲಿ ಊದ್ರ್ವಮುಖಿಯಾಗಿರುವ ಅರಳೆಯಂತಹ ಒಂದು ಬಿಳಿ ಕೂದಲಿರುತ್ತದೆ.
32. ಕಿರೀಟದಂತಿರುವಂತಹ ದುಂಡನೆಯ ಶಿರಸ್ಸಿನ ಆಕಾರ.
ಕಾಲದೇವಿಲರ ಅರಮನೆ ಬೇಟಿ
ಮಹಾಸತ್ವ ಬೋಧಿಸತ್ವರನ್ನು ಕಾಣಲು ಮಹಾಋಷಿಯಾದ ಕಾಲದೇವಿಲ ಅಥವಾ ಅಸಿತ ಋಷಿಯು ಸಹಾ ಆ ದಿನದಂದೆ ಅರಮನೆಗೆ ಬೇಟಿ ನೀಡಿದ್ದರು. ಹಾಗೂ ಶತ ಪುಣ್ಯಲಕ್ಷಣಗಳನ್ನು ನೋಡಿ ಹಾಗೂ ದಿವ್ಯದೃಷ್ಠಿಯಿಂದ ವೀಕ್ಷಿಸಿ , ಮೋದಲು ಹಷರ್ಿಸಿ ನಂತರ ಅತ್ತರು, ಇದಕ್ಕೆ ಕಾರಣ ಕೇಳೀದಾಗ ಈ ಬಾಲಕನು ಮುಂದೆ ಸಂಯಕ್ ಸಮ್ಮಸಂಬುದ್ಧರು ಆಗುವರು ಎಂದು ಭವಿಷ್ಯವಾಣಿ ನುಡಿದರು. .ಹಾಗೂ ಅದನ್ನು ಆಲಿಸಲು ತಾನೂ ಇರುವುದಿಲ್ಲ ಎಂದು ವ್ಯಥೆಪಟ್ಟರು.
ಅದೇದಿನದಂದು ಅವರ ಹೆಸರು ಸಿದ್ಧಾರ್ಥನೆಂದು ನಾಮಕರಣ ಮಾಡಲಾಯಿತು.
ಇವಿಷ್ಟು ಘಟನೆಗಳು ಬುದ್ದಭಗವಾನರ ಜನನದ ಆ ದಿನದಂದು ನಡೆಯಿತು.
ಸಮ್ಮಸಂಬೋಧಿಪ್ರಾಪ್ತಿಯ ಆ ದಿನದಂದು ಏನೆಲ್ಲಾ ನಡೆಯಿತು !?
.ಅಂದು ಒಟ್ಟು 11 ಘಟನೆಗಳು ನಡೆದವು. ಅವೆಂದರೆ
1. ಮುಂಜಾನೆ 5 ಸ್ವಪ್ನಗಳು ಕಂಡಿದ್ದು
2. ಸುಜಾತಳಿಂದ ಘನ ಪಾಯಸ ಸ್ವೀಕಾರ ಹಾಗೂ ಸೇವನೆ
3. ಆ ಸುವರ್ಣಪಾತ್ರೆಯನ್ನು ಸತ್ಯಕ್ರಿಯೆ ಮಾಡಿ ಹೊಳೆಯ ಮೇಲ್ಮುಖವಾಗಿ ಕಳುಹಿಸಿದ್ದು
4. ಸೋತ್ಥಿಯನಿಂದ ಹುಲ್ಲು ಸ್ವೀಕಾರ ಹಾಗೂ ಅಪರಿಜಿತ ವಜ್ರಸನದಪೀಠದ ಸಿದ್ಧತೆ
5. ಮಹಾ ಧೃಢಸಂಕಲ್ಪ
6. ಮಾರ ಪರಾಜಯ
7. ಪುಬ್ಬೆನಿವಾಸಾನುಸ್ಸತಿ ಅಭಿಜ್ಞಾ
8. ದಿವ್ಯಚಕ್ಕು ಅಭಿಜ್ಞಾ
9. ಅಸವಕ್ಖಯ ಜ್ಞಾನ
10. ಸಂಯಕ್ ಸಂಬುದ್ಧತ್ವದ ಪ್ರಾಪ್ತಿ
11. ಉದಾನ ನುಡಿದಿದ್ದು.
ಆಗ ನುಡಿದಿದ್ದಂಹ ಉದಾನ ಏನೆಂದರೆ
ಅನೇಕ ಜನ್ಮಗಳನ್ನು ಈ ಸಂಸಾರದಲ್ಲಿ ಪಡೆದಿದ್ದೇನೆ.
ಅನ್ವೇಷಿಸಿದೆ ಆಪಾರ, ಆದರೆ ಪಡೆಯಲಿಲ್ಲ ಗೃಹ ನಿಮರ್ಾತನನು;
ಪುನಃ ಪುನಃ ಜನ್ಮವೆತ್ತುವುದು ನಿಜಕ್ಕೂ ದುಃಖಕರ. (153)
ಓ ಗೃಹ ನಿಮರ್ಾತನೇ ! ನಿನ್ನನ್ನು ನೋಡಿಯಾಯಿತು,
ಹೀಗಾಗಿಯೇ ಮತ್ತೆ ನೀನು ಮನೆ ಕಟ್ಟಲಾರೆ, ನಿನ್ನೆಲ್ಲಾ ತೋಲೆ ನಿಲುವುಗಳೆಲ್ಲಾ ಚೂರಾಗಿದೆ.
ಗೃಹದ ಆಧಾರ ಕಂಬವು ಮುರಿದಿದೆ,
ಸ್ಥಿತಿಗೆ ಅತೀತವಾಗಿದೆ (ಸಂಖಾರತೀತವಾಗಿದೆ) ಚಿತ್ತವು, ತನ್ಹಾ ಕ್ಷಯವನ್ನು ಸಾಧಿಸಿದ್ದಾಗಿದೆ. (154)
ಮಹಾಪರಿನಿಬ್ಬಾಣದ ಆ ದಿನದಂದು ಎನೆಲ್ಲಾ ನಡೆಯಿತು !?
ಅಂದು ಒಟ್ಟು 17 ಘಟನೆಗಳು ನಡೆದವು. ಅವೆಂದರೆ
1.ವೈಶಾಲಿಯನ್ನು ಕೋನೆಯ ಬಾರಿ ನೋಡಿದ್ದು
2. ಆರ್ಯ ಸತ್ಯಗಳನ್ನು ಅರಿಯದೆ ಸಂಸಾರ ಸುತ್ತಾಟ ಎಂಬ ಬೋದನೆ ನೀಡಿದ್ದು
3. ಬೋದನೆಗಳನ್ನು 4 ರೀತಿ ಪ್ರಮಾಣ ತಾಳೆ ನೋಡುವ ಬಗೆ ತಿಳಿಸಿದ್ದು
4. ಕಮ್ಮಾರ ಪುತ್ತ ಚುಂದನ ಬಳಿ ಕೋನೆಯ ಆಹಾರ ಸೇವನೆ
5. ದೇಹಕ್ಕೇ ಆಪಾರ ನೋವು ಅನುಭವ
6. ಕುಸಿನಾರಕ್ಕೆ ಆಗಮನ
7. ಕೆಂಪು ಬಗ್ಗಡ ನೀರನ್ನು ತಿಳಿಯಾಗಿಸಿ ಸೇವಿಸಿದ್ದು
8. ಮಲ್ಲಪುತ್ತ ಪುಕ್ಕಸನಿಗೆ ಶಬ್ಧತೀತ ಅಭಂಗ ಸಮಾಧಿಯ ಬಗ್ಗೆ ತಿಳಿಸಿದ್ದು
9. ಪುಕ್ಕಸನು ಚಿನ್ನದ ಶಾಲು ಹೊದೆಸಿದ್ದು
10. ಶಾಲ ವೃಕ್ಷದ ವರ್ಣನೆ
11. ನಾಲ್ಕು ಶ್ರದ್ಧಾಸ್ಥಳಗಳ ಬಗ್ಗೆ ಅರಿವು ಮೂಡಿಸಿದ್ದು
12. ಸ್ತೂಪಕ್ಕೆ ಅರ್ಹ ವ್ಯಕ್ತಿಗಳ ಬಗ್ಗೆ ತಿಳಿಸಿದ್ದು
13. ಆನಂದರ ಪ್ರಶಂಸೆ ಮಾಡಿದ್ದು
14. ಮಹಾಸುದಸ್ಸನ ಸುತ್ತ ವಿವರಿಸಿದ್ದು
15. ಸುಭದ್ಧ ಪರಿಬ್ಬಾಜ್ಜಕನಿಗೆ ಆರ್ಯರು ಇಲ್ಲಿ ಮಾತ್ರವೇ ಎಂಬ ಬೋದನೆ ನೀಡಿದರು
16. ಕೋನೆಯ ವಚನಗಳನ್ನು ನುಡಿದಿದ್ದು
"ಭಿಕ್ಖುಗಳೇ ಒತ್ತಿ ನುಡಿಯುತ್ತಿದ್ದೇನೆ, ಎಲ್ಲಾ ಸಂಖಾರಗಳು ಶಿಥಿಲವಾಗಿ ನಾಷಗೊಳ್ಳುವವು ಅಪ್ರಮತ್ತತೆಯಿಂದ ಅರಹತ್ವವನ್ನು ಸಂಪಾದಿಸಿಕೋಳ್ಳಿರಿ."
17. ಮಹಾಪರಿನಿಬ್ಬಾಣ ಪ್ರಾಪ್ತಿ ಮಾಡಿದರು.
No comments:
Post a Comment