*ಪರಮ ಪೂಜ್ಯ
ಆಚಾರ್ಯ ಬುದ್ಧರಕ್ಖೀತ ಥೇರ
ಬಡಾ ಭಂತೆಜೀ*
ಆಚಾರ್ಯ ಬುದ್ಧರಕ್ಖೀತ ಥೇರರವರು(1922-2013) ಖ್ಯಾತ
ಬೌದ್ಧಭಿಕ್ಖುವು ಹಾಗೂ ಗಮನಾರ್ಹ ಲೇಖಕರು ಆಗಿದ್ದರು. ಅವರು
ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಸಂಸ್ಥಾಪಕರು ಹಾಗೂ ಅದರ
ಸೋದರ ಸಂಸ್ಥೆಗಳ ಸಂಸ್ಥಾಪಕರು ಹೌದು.
ಅವರು ಹುಟ್ಟಿದ್ದು ಮಣಿಪುರದ ಇಂಫಾಲ್ ನಲ್ಲಿ.
1942 ರಿಂದ 1942 ರವರೆಗಿನ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಹಾ ಅವರು ಭಾಗವಹಿಸಿದ್ದರು.
*ಜನ್ಮ*
12ನೇ ಮಾರ್ಚ್ 1922
ಮಣಿಪುರದ ಇಂಫಾಲ್,ಭಾರತ.
*ಮರಣ*
23ನೇ ಸೆಪ್ಟೆಂಬರ್ 2013(೯೧ನೇ
ವಯಸ್ಸಿನಲ್ಲಿ) ಬೆಂಗಳೂರು,.ಭಾರತ.
*ಆಲ್ಮ ಮಾಸ್ಟರ್*
ಕಲ್ಕತ್ತಾದ ಇಂಜಿನೀಯರಿಂಗ್ ಟೆಕ್ನಾಲಜಿ ಇಸ್ಟಿಟ್ಯೂಟ್ನಲ್ಲಿ.
*ಗಮನಾರ್ಹ ಕೃತಿ*
ಧಮ್ಮಪದ(ಆಂಗ್ಲಭಾಷೆಯಲ್ಲಿ)
*ಗಮನಾರ್ಹ ಪುರಸ್ಕಾರಗಳು*
ಆಚಾರ್ಯ,ಡಾಕ್ಟರೇಟ್,
ಅಭಿಧಜ ಅಗ್ಗಮಹಾ ಸಧಮ್ಮಜೋತಿಕಾ
*ವೆಬ್ ಸೈಟ್*
mahabodhi.info/about_us.html
ಅವರು ಕಲ್ಕತ್ತಾದ ವಿಧ್ಯಾಭ್ಯಾಸದ ನಂತರ ಭಾರತೀಯ ರಕ್ಷಣಾ ಸೇವೆಗಳಲ್ಲಿ ಸೇರಿದರು. ಅವರು
ದ್ವಿತೀಯ ಮಹಾಯುದ್ಧದಲ್ಲಿಯೂ ಭಾಗವಹಿಸಿದ್ದರು. ನಂತರ
ಸತ್ಯ ಹಾಗೂ ವಿಮುಕ್ತಿಗಾಗಿ ಆ ಸೇವಾ ವೃತ್ತಿಯನ್ನು ತೊರೆದರು.
ಅವರು 15-8-1947ರಂದೇ ಗೃಹತ್ಯಾಗ ಮಾಡಿ
ಸಂನ್ಯಾಸ ಸ್ವೀಕರಿಸಿದ್ದರು.
ಅವರು
ಈ ಸತ್ಯದ ಅನ್ವೇಷಣೆಯಲ್ಲಿ ಅವರು
ಮಾತೆ ಆನಂದಮಯಿ ಮಾ,
ರಮಣ ಮಹರ್ಷಿ,ರಂತಹ
ದಿಗ್ಗಜರ, ರಾಮಕೃಷ್ಣ ಮಠ ಇತ್ಯಾದಿಗಳ ಮೂಲಕ
ಹಾದು ಹೋದರು. ಅವರು
ಕನ್ಹೆರಿ ಗು಼ಹೆಗಳತ್ತ ಬಂದಾಗ
ಅವರಿಗೆ ಪೂರ್ವ ಜನ್ಮದ
ಸ್ಮರಣೆಯುಂಟಾಗಿ ತಾವು ಹಿಂದಿನ ಜನ್ಮದಲ್ಲಿ ಬೌದ್ಧ ಭಿಕ್ಖುವಾಗಿದ್ಧನ್ನು ನೆನಪಿಸಿಕೊಂಡು ನಂತರ ಬೌದ್ಧ ಭಿಕ್ಖುಗಳಾಗಲು ಧೃಡಸಂಕಲ್ಷ ತಾಳಿದರು.
ಅವರು 1949ರಲ್ಲಿ ಬೌದ್ಧಭಿಕ್ಖುಗಳಾದರು.
12-5-1949 ರ ಬುದ್ಧಪುರ್ಣಮಿಯಂದು ಕುಸಿನಾರದಲ್ಲಿ ಪರಮಪೂಜ್ಯ ಚಂಡಮಣಿ ಥೇರರಿಂದ ಭಿಕ್ಖುದೀಕ್ಷೆ ಸ್ವೀಕರಿಸಿದರು.
ನಂತರ
ಶ್ರೀಲಂಕದಲ್ಲಿ 1948ರಿಂದ 1951ರವರಿಗೆ ಹಾಗೂ ಬರ್ಮದಲ್ಲಿ 1951 ರಿಂದ
1954 ರವರಿಗೆ ಧಮ್ಮ
ಅನ್ವೇಷಣೆ ಹಾಗೂ ಅಧ್ಯಯನ ಮಾಡಿದರು.
ನಂತರ 1952ರಿಂದ 1954 ರವರಿಗೆ ನಡೆದ ಛಟ್ಠಸಂಘಯನ ಬೌದ್ಧ
ಮಹಾ ಸಮ್ಮೇಳನದಲ್ಲಿ ಪಟಿವಿಸೋಧಕ ಅಂದರೆ ಸಂಪಾದಕರಾಗಿ ಕಾರ್ಯವಹಿಸಿದ್ದರು.
ನಂತರ ದೇಶ ವಿದೇಶಗಳಲ್ಲಿ ಧಮ್ಮಬೋಧಕರಾಗಿ ಕಾರ್ಯನಿರ್ವಹಣೆ ಮಾಡಿದರು.
ಅವರಿಗೆ ಶ್ರೀಲಂಕದಲ್ಲಿ 1951ರಲ್ಲಿ
*ಆಚಾರ್ಯ* ಪದವಿ ನೀಡಿದರು
ಹಾಗೂ ಬರ್ಮದೇಶದಲ್ಲಿ ಅವರ
ಧಮ್ಮಸೇವೆ ಗಮನಿಸಿ ಅವರಿಗೆ *ಅಭಿದಜ ಅಗ್ಗಮಹಾ ಸಧಮ್ಮಜೋತಿಕಾ*
ಪದವಿ ನೀಡಲಾಯಿತು.
ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಹಾಗೂ
ಥಾಯ್ಲೆಂಡ್ನ ಸರ್ಕಾರವೇ ಗೌರವ
ಡಾಕ್ಟರೇಟ್ ಪದವಿ ನೀಡಲಾಗಿದೆ.
1952 ರಲ್ಲಿ. ಪರಮಪೂಜ್ಯ ಬೌದ್ಧ ಪುನರ್ಜೀವಕರಾದ ಅನಗಾರಿಕ ಧಮ್ಮಪಾಲರ ಸೋದರಿಯ ಮಗಳಾದ
ಮೂನಸಿಂಗೆಗೆ ಮೈಸೂರಿನ ಮಹಾರಾಜರು ಆಗ ಬೆಂಗಳೂರುನಲ್ಲಿ ಮಹಾಬೋಧಿಯ ಸ್ಥಾಪನೆಗೆ ನೆಲವನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಅದನ್ನು ಬುದ್ಧರಕ್ಖೀತ ಥೇರರಿಗೆ ವಹಿಸಿ
ಅದನ್ನು ಮುಂದುವರಿಸುವಂತೆ ಕೋರಿಕೊಂಡರು.
ಹೀಗೆ 5-6-1956 ರಲ್ಲಿ ಮಹಾಬೋಧಿ ಸೊಸೈಟಿ ಸ್ಥಾಪನೆ ಮಾಡಿದರು.
ನಂತರ ಅವರು 150ಕ್ಕಿಂತ ಹೆಚ್ಚು ಬೌದ್ಧ ಗೃಂಥಗಳನ್ನು ಬರೆದರು.ಬುದ್ಧವಚನ ಪ್ರಕಾಶನವನ್ನು, *Dhamma* magazine , *ಕನ್ನಡ ಧಮ್ಮ*
ಮ್ಯಾಗಜಿನ್ ನ್ನು ಹೋರತಂದರು. ತಿಪಿಟಕದ ಕನ್ನಡದ ಅನುವಾದದ ಗೃಂಥಗಳನ್ನು ಹಾಗೆ ತೆಲುಗಿನ ತಿಪಿಟಕದ ಅನುವಾದದ ಸರಣಿ
ಹೊರತಂದರು.
ಅನೇಕ ಚೈತ್ಯ, ಸ್ತೂಪ,
ವಿಹಾರಗಳನ್ನು ನಿರ್ಮಿಸಿದರು.
ಆಧುನಿಕ ಭಾರತದಲ್ಲಿ ಭಿಕ್ಖುಸಂಘವನ್ನು ಸ್ಥಾಪಿಸಿದರು. ಭಿಕ್ಖುಗಳ ಅಧ್ಯಯನ ಕೇಂದ್ರಗಳನ್ನು ಸ್ದಾಪಿಸಿದರು
ಧ್ಯಾನಕೇಂದ್ರಗಳನ್ನು ಸ್ಥಾಪಿಸಿದರು.
ಆಸ್ಪತ್ರೆಗಳನ್ನು, ಸ್ಕೂಲ್ಗಳನ್ನು, ಹಾಸ್ಟೆಲ್ ಗಳನ್ನು ಮತ್ತು ಕೃತಕ
ಅಂಗಾಂಗಗಳ ಕೇಂದ್ರಗಳನ್ನು ಸ್ಥಾಪಿಸಿದರು.
ಹೀಗೆ ನೂರಾರು ಸೇವಕಾರ್ಯಗಳನ್ನು ಮುಂದುವರೆಸಿದರು.
ನಂತರ ಈಗಿನ ಈ
ಧಮ್ಮಸೂರ್ಯವು 2013ರ ಸೆಪ್ಟೆಂಬರ್ 23ರಂದು
ಅಸ್ತಂಗತವಾಯಿತು.
ಅವರ ಅಂತ್ಯಕ್ರಿಯೆಯನ್ನು ಬುದ್ಧರ ಅಂತ್ಯಕ್ರಿಯೆಯ ರೀತಿ
ಮಾಡಿದರು. ಅಂದು ಅಗಸದಲ್ಲಿ ದಿವ್ಯವಾದ ಫ್ರಭಾವಳಿಯು ಅಧ್ಬುತವಾಗಿ ಏರ್ಪಟ್ಟಿತ್ತು.
No comments:
Post a Comment