Friday, 31 October 2014

ಜ್ಞಾನಿಗಳ ಮತ್ತು ಮೂರ್ಖರ ಮೂರು ಲಕ್ಷಣಗಳೇನು?

   ಜ್ಞಾನಿಗಳ ಮತ್ತು ಮೂರ್ಖರ ಮೂರು ಲಕ್ಷಣಗಳೇನು? 
ನೀವು ಹೀಗೆ ಶಿಕ್ಷಣ ಪಡೆಯಿರಿ: ನಾವು ಮೂರ್ಖರಲ್ಲಿ ತಿಳಿಯಲ್ಪಡುವ ಮೂರು ವಿಷಯಗಳಿಂದ ಪಾರಾಗುವೆವು, ಜ್ಞಾನಿಗಳಲ್ಲಿ ಕಂಡುಬರುವ ಮೂರು ವಿಷಯಗಳನ್ನು ವೃದ್ಧಿಸುವೆವು.

                ಭಿಕ್ಷುಗಳೇ, ಮೂರ್ಖರು ತಮ್ಮ ಕಾರ್ಯಗಳಿಂದಲೇ ತಿಳಿಯಲ್ಪಡುವರು ಮತ್ತು ಜ್ಞಾನಿಗಳು ಸರಿಯಾದ ವೇಳೆಯಲ್ಲಿ ಪ್ರಕಾಶಿಸುವರು. ಭಿಕ್ಷುಗಳೇ, ಮೂರ್ಖರು ಮೂರು ವಿಷಯಗಳಿಂದ ತಿಳಿಯಲ್ಪಡುವರು, ಯಾವುವು ಆ ಮೂರು? ಶಾರೀರಿಕ ವರ್ತನೆಗಳಿಂದಾಗಿ, ಮಾತಿನ ವರ್ತನೆಗಳಿಂದಾಗಿ ಮತ್ತು ಮನಸ್ಸಿನ ವರ್ತನೆಗಳಿಂದಾಗಿ ಮೂರ್ಖರು ತಿಳಿಯಲ್ಪಡುವರು. ಭಿಕ್ಷುಗಳೇ, ಜ್ಞಾನಿಗಳು ಸಹಾ ಮೂರು ರೀತಿಯಲ್ಲಿ ತಿಳಿಯಲ್ಪಡುವರು, ಯಾವುದದು ಮೂರು? ಶಾರೀರಿಕ ವರ್ತನೆಗಳಿಂದಾಗಿ, ಮಾತಿನ ವರ್ತನೆಗಳಿಂದಾಗಿ ಮತ್ತು ಮನಸ್ಸಿನ ವರ್ತನೆಗಳಿಂದಾಗಿ ಜ್ಞಾನಿಗಳು ತಿಳಿಯಲ್ಪಡುವರು. ಆದ್ದರಿಂದ ಭಿಕ್ಷುಗಳೇ, ನೀವು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಿ: ನಾವು ಮೂರ್ಖರಂತೆ ಕಾಣಿಸಿಕೊಳ್ಳುವುದನ್ನು ತಡೆಯುವೆವು ಮತ್ತು ಜ್ಞಾನಿಗಳಂತೆ ಆಗುವ ರೀತಿಯಲ್ಲಿ ವೃದ್ಧಿಗೊಳಿಸಿಕೊಳ್ಳುವೆವು.
                ಭಿಕ್ಷುಗಳೇ, ಮೂರ್ಖರ ಮೂರು ಲಕ್ಷಣಗಳೇನು? ಭಿಕ್ಷುಗಳೇ, ಇಲ್ಲಿ ಮೂರ್ಖನು ತಪ್ಪಾಗಿ ಚಿಂತನೆ ಮಾಡುವನು, ತಪ್ಪಾಗಿ ಮಾತನಾಡುವನು ಮತ್ತು ತಪ್ಪಾಗಿ ಕಾರ್ಯ ಮಾಡುವನು. ಒಂದುವೇಳೆ ಮೂರ್ಖನು ತಪ್ಪಾಗಿ ಚಿಂತನೆ ಮಾಡದಿದ್ದರೆ, ಮಾತನಾಡದಿದ್ದರೆ ಮತ್ತು ಕ್ರಿಯೆ ಮಾಡದಿದ್ದರೆ ಆತನು ಮೂರ್ಖನೆಂದು ಜ್ಞಾನಿಗೆ ಹೇಗೆ ತಿಳಿಯಲ್ಪಡುತ್ತಿತ್ತು. ಜ್ಞಾನಿಗೆ ಆತನು ಮೂರ್ಖನು ಎಂದು ಗೊತ್ತು.
                ಭಿಕ್ಷುಗಳೇ, ಜ್ಞಾನಿಗಳ ಮೂರು ಲಕ್ಷಣಗಳೇನು? ಇಲ್ಲಿ ಭಿಕ್ಷುಗಳೇ ಜ್ಞಾನಿಯು ಸರಿಯಾಗಿ ಚಿಂತಿಸುವನು, ಸರಿಯಾಗಿ ಮಾತನಾಡುವನು ಮತ್ತು ಸರಿಯಾಗಿ ವತರ್ಿಸುವನು. ಒಂದುವೇಳೆ ಜ್ಞಾನಿಯು ಸರಿಯಾಗಿ ಚಿಂತನೆ ಮಾಡದಿದ್ದರೆ, ಮಾತನಾಡದಿದ್ದರೆ ಮತ್ತು ಕ್ರಿಯೆ ಮಾಡದಿದ್ದರೆ, ಜ್ಞಾನಿಗೆ ಈತನು ಜ್ಞಾನಿಯೆಂದು ಹೇಗೆ ಗೊತ್ತಾಗುತ್ತಿತ್ತು? ಆತನು ಸರಿಯಾಗಿ ಚಿಂತನೆ, ಸರಿಯಾದ ಸಂಭಾಷಣೆ ಮತ್ತು ಸರಿಯಾದ ವರ್ತನೆ ಮಾಡುವುದರಿಂದಲೇ ಜ್ಞಾನಿಗೆ ಈತನು ಸಹಾ ಜ್ಞಾನಿಯೆಂದು ಗೊತ್ತಾಗುತ್ತದೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದರೆ ಆತನು ಮೂರ್ಖನು ಎಂದು ತಿಳಿಯಲ್ಪಡುತ್ತದೆ, ಯಾವುದದು ಮೂರು? ತಪ್ಪನ್ನು ತಪ್ಪೆಂದು ತಿಳಿಯದಿರುವಿಕೆ, ತಪ್ಪೆಂದು ತಿಳಿದ ಮೇಲೂ ಧಮ್ಮದ ಪ್ರಕಾರ ಕ್ಷಮೆ ಯಾಚಿಸದಿರುವಿಕೆ, ಬೇರೆಯವರು ಕ್ಷಮೆ ಯಾಚಿಸಿದ ಮೇಲೂ ಧಮ್ಮದ ಪ್ರಕಾರ ಕ್ಷಮೆ ನೀಡದಿರುವಿಕೆ. ಭಿಕ್ಷುಗಳೇ ಈ ಮೂರು ವಿಷಯಗಳಿಂದ ಮೂರ್ಖನೆಂದು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ ಆತನು ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ, ಯಾವುದವು ಮೂರು? ತಪ್ಪನ್ನು ತಪ್ಪೆಂದು ತಿಳಿಯುವಿಕೆ, ತಪ್ಪೆಂದು ತಿಳಿದಾಗ, ತನ್ನ ತಪ್ಪಿಗೆ ಕ್ಷಮೆ ಯಾಚಿಸುವಿಕೆ ಮತ್ತು ಪರರು ಅವರ ತಪ್ಪಿಗೆ ಕ್ಷಮೆ ಯಾಚಿಸಿದಾಗ, ಅವರನ್ನು ಕ್ಷಮಿಸುವಿಕೆ, ಈ ಮೂರು ವಿಷಯಗಳಿಂದ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ ಮೂರ್ಖನೆಂದು ತಿಳಿಯಲ್ಪಡುತ್ತಾನೆ, ಯಾವುದದು ಮೂರು? ಆತನು ಜ್ಞಾನೋಚಿತವಾಗಿ ಚಿಂತನೆ ಮಾಡದೆ ಪ್ರಶ್ನೆಯನ್ನು ವಿಕಸಿತ ಮಾಡುತ್ತಾನೆ. ಜ್ಞಾನೋಚಿತವಾಗಿ ಚಿಂತನೆ ಮಾಡದೆ ಪ್ರಶ್ನೆಗೆ ವಿವರಿಸಲು ತೊಡಗುತ್ತಾನೆ, ಬೇರೊಬ್ಬನು ಪ್ರಶ್ನೆಗೆ ಜ್ಞಾನೋಚಿತವಾಗಿ ಚಿಂತನೆ ಮಾಡಿ, ಉತ್ತಮ ಪದ ಹಾಗು ಅಕ್ಷರಗಳಿಂದ ಸುಂದರವಾಗಿ ವಿವರಿಸಿದಾಗ ಅದನ್ನು ಒಪ್ಪುವುದಿಲ್ಲ. ಭಿಕ್ಷುಗಳೇ, ಹೀಗೆ ಈ ಮೂರು ವಿಷಯಗಳಿಂದ ಮೂರ್ಖನು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ, ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ. ಯಾವುವವು? ಜ್ಞಾನೋಚಿತವಾಗಿ ಚಿಂತನೆ ಮಾಡಿ ಪ್ರಶ್ನೆಯನ್ನು ವಿಕಸಿತ ಮಾಡುತ್ತಾನೆ. ಜ್ಞಾನೋಚಿತವಾಗಿ ಚಿಂತನೆ ಮಾಡಿ ಪ್ರಶ್ನೆಗೆ ವಿವರಿಸುತ್ತಾನೆ. ಬೇರೊಬ್ಬನು ಪ್ರಶ್ನೆಗೆ ಜ್ಞಾನೋಚಿತವಾಗಿ ಚಿಂತನೆ ಮಾಡಿ, ಉತ್ತಮ ಪದ ಹಾಗು ಅಕ್ಷರಗಳಿಂದ ಸುಂದರವಾಗಿ ವಿವರಿಸಿದಾಗ ಆತನು ಅದನ್ನು ಒಪ್ಪುತ್ತಾನೆ. ಭಿಕ್ಷುಗಳೇ, ಜ್ಞಾನಿಯು ಹೀಗೆ ಮೂರು ಲಕ್ಷಣಗಳಿಂದ ಕೂಡಿರುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖನು ತಿಳಿಯಲ್ಪಡುತ್ತಾನೆ. ಯಾವುವವು? ಶಾರೀರಿಕ ಪಾಪಗಳಿಂದ, ಮಾತಿನ ಪಾಪಗಳಿಂದ ಮತ್ತು ಮಾನಸಿಕ ಪಾಪಗಳಿಂದಾಗಿ ಹೇಗೆ ಈ ಮೂರರಿಂದಾಗಿ ಮೂರ್ಖನೆಂದು ತಿಳಿಯಲ್ಪಡುತ್ತಾನೆ.
                ಹಾಗೆಯೇ ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಯು ತಿಳಿಯಲ್ಪಡುತ್ತಾನೆ. ಯಾವುವವು? ಶಾರೀರಿಕ ಪುಣ್ಯಕರ್ಮಗಳಿಂದಾಗಿ, ಮಾತಿನ ಪುಣ್ಯ ಕರ್ಮಗಳಿಂದಾಗಿ ಮತ್ತು ಮನಸ್ಸಿನ ಪುಣ್ಯಕರ್ಮಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ.
                ಆದ್ದರಿಂದಾಗಿ ಭಿಕ್ಷುಗಳೇ, ನಿಮ್ಮನ್ನು ನೀವು ಹೇಗೆ ಸುಶಿಕ್ಷಿತಗೊಳಿಸಿಕೊಳ್ಳಿ: ನಾವು ಮೂರ್ಖರೆಂದು ತಿಳಿಯಲ್ಪಡುವ ವಿಷಯಗಳನ್ನು ತಡೆಯುವೆವು, ಜ್ಞಾನಿಗಳೆಂದು ತಿಳಿಯಲ್ಪಡುವ ವಿಷಯಗಳನ್ನು ವಿಕಸಿಸುವೆವು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖರೆಂದು ತಿಳಿಯಲ್ಪಡುವರು, ಯಾವುದವು ಮೂರು? ನಿಂದನೀಯ ಶಾರೀರಿಕ ಕರ್ಮಗಳಿಂದಾಗಿ, ನಿಂದನೀಯ ಮಾತಿನ ಕರ್ಮಗಳಿಂದಾಗಿ ಮತ್ತು ನಿಂದನೀಯ ಮಾನಸಿಕ ಕರ್ಮಗಳಿಂದಾಗಿ ಮೂರ್ಖರೆಂದು ತಿಳಿಯಲ್ಪಡುವರು.
                ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಗಳೆಂದು ತಿಳಿಯಲ್ಪಡುವರು, ಯಾವುದವು ಮೂರು? ನಿಂದನೀಯವಲ್ಲದ (ಪ್ರಶಂಸಾರ್ಹ) ಶಾರೀರಿಕ ಕರ್ಮಗಳಿಂದಾಗಿ, ನಿಂದನೀಯವಲ್ಲದ ಮಾತಿನ ಕರ್ಮಗಳಿಂದಾಗಿ ಮತ್ತು ನಿಂದನೀಯವಲ್ಲದ ಮಾನಸಿಕ ಕರ್ಮಗಳಿಂದಾಗಿ ಜ್ಞಾನಿಗಳೆಂದು ತಿಳಿಯಲ್ಪಡುವರು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖನೆಂದು ತಿಳಿಯಲ್ಪಡುತ್ತಾನೆ. ಯಾವುವವು ಮೂರು? ತೊಂದರೆಯ ಶಾರೀರಿಕ ಕರ್ಮಗಳಿಂದಾಗಿ, ತೊಂದರೆಯ ಮಾತಿನ ಕರ್ಮಗಳಿಂದಾಗಿ ಮತ್ತು ತೊಂದರೆ ಮನಸ್ಸಿನ ಕರ್ಮಗಳಿಂದಾಗಿ ಮೂರ್ಖನೆಂದು ತಿಳಿಯಲ್ಪಡುವನು.
                ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ ಯಾವುವವು ಮೂರು? ತೊಂದರೆಯಲ್ಲದ ಶಾರೀರಿಕ ಕರ್ಮಗಳಿಂದಾಗಿ, ತೊಂದರೆಯಲ್ಲದ ಮಾತಿನ ಕರ್ಮಗಳಿಂದಾಗಿ ಮತ್ತು ತೊಂದರೆಯಲ್ಲದ ಮನಸ್ಸಿನ ಕರ್ಮಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುವನು.
                ಭಿಕ್ಷುಗಳೇ, ಆದ್ದರಿಂದಾಗಿ ನೀವು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು: ಮೂರ್ಖರೆಂದು ತಿಳಿಯಲ್ಪಡುವಂತಹ ಮೂರು ವಿಷಯಗಳನ್ನು ನಾವು ತಡೆಯುವೆವು ಮತ್ತು ಜ್ಞಾನಿಗಳೆಂದು ತಿಳಿಯಲ್ಪಡುವಂತಹ ಮೂರು ವಿಷಯಗಳನ್ನು ನಾವು ವಿಕಸಿತಗೊಳಿಸುವೆವು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿರುವ ಮೂರ್ಖನು ತನ್ನನ್ನೇ ನಾಶಗೊಳಿಸಿಕೊಂಡು, ನಿಂದೆಗೆ ಒಳಪಡುತ್ತಾನೆ, ಜ್ಞಾನಿಗಳಿಂದ ನಿಂದೆಗೆ ಒಳಪಟ್ಟು ಅಪಾರ ಪಾಪಗಳಿಕೆ ಮಾಡಿಕೊಳ್ಳುತ್ತಾನೆ, ಯಾವುದವು ಮೂರು? ಶಾರೀರಿಕ ದುರ್ವರ್ತನೆ, ಮಾತಿನ ದುರ್ವತನೆ ಮತ್ತು ಮನಸ್ಸಿನ ದುರ್ವರ್ತನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿರುವ ಜ್ಞಾನಿಯು ತನ್ನನ್ನು ನಾಶಗೊಳಿಸುವುದಿಲ್ಲ ಮತ್ತು ನಿಂದೆಗೂ ಒಳಪಡುವುದಿಲ್ಲ. ಜ್ಞಾನಿಗಳಿಂದ ನಿಂದೆಗೆ ಈಡಾಗದೆ ಅಪಾರ ಪುಣ್ಯ ಗಳಿಸುತ್ತಾನೆ, ಯಾವುವವು ಮೂರು? ಶಾರೀರಿಕ ಸುವರ್ತನೆ, ಮಾತಿನ ಸುವರ್ತನೆ ಮತ್ತು ಮನಸ್ಸಿನ ಸುವರ್ತನೆ.
                ಭಿಕ್ಷುಗಳೇ, ಮೂರು ದೂಷ್ಯವನ್ನು ದೂರೀಕರಿಸಿ ಅಂತಹ ದೋಷಾತೀತ ಮಾರ್ಗದಶರ್ಿತದಲ್ಲೇ ಸಾಗಿದರೆ, ಒಬ್ಬನು ಸುಗತಿ ಸೇರುವನು, ಯಾವುದವು ದೂರೀಕರಿಸಿದ ಮೂರು? ಶೀಲವಂತನಾಗುವುದು ಹಾಗು ಪಾಪರಹಿತನಾಗಿರುವುದು, ಅಸೂಯಾ ರಹಿತನಾಗಿರುವುದು ಹಾಗು ಅಸೂಯಾ ಕಲೆಗಳಿಂದ ರಹಿತನಾಗಿರುವುದು ಮತ್ತು ನಿಸ್ವಾಥರ್ಿಯಾಗಿರುವುದು ಹಾಗು ಸ್ವಾರ್ಥದ ಕಲೆಗಳಿಂದ ಮುಕ್ತನಾಗಿರುವುದು, ಮೂರು ದೂಷ್ಯಗಳಿಂದ ತೊರೆದವನಾಗಿ, ಆ ರೀತಿಯಲ್ಲೇ ಮಾರ್ಗದಶರ್ಿತನಾಗಿ ಒಬ್ಬನು ಸುಗತಿ ಸೇರುತ್ತಾನೆ

No comments:

Post a Comment